Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷ ದೇಶಕ್ಕೆ ಉತ್ತಮ ಆಡಳಿತ ನೀಡಿದೆ. ಗರಿಷ್ಠ ಸಾಧ್ಯ ಅಭಿವೃದ್ಧಿ ನಡೆಸಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದರೆ ಇಲ್ಲಿಯೂ ಅಂತಹ ಸಾಧನೆ ಸಾಧ್ಯವಾಗುತ್ತದೆ. ಆದುದರಿಂದ ಇಲ್ಲಿನ ಜನರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಅದರ 150 ಸ್ಥಾನಗಳ ಗೆಲುವಿನ ಗುರಿ ತಲಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ರಾಜ್ಯ ಸಚಿವ ಮನೋಜ್ ಸಿಂಹ ಹೇಳಿದರು. ಬೈಂದೂರು ಬಿಜೆಪಿ ವಲಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳ್ಲಿ ವಿಫಲವಾಗಿದೆ. ಇಲ್ಲಿನ ಕಾನೂನು ಸ್ಥಿತಿ ಹದಗೆಟ್ಟಿದೆ. ಉತ್ತಮ ಅಧಿಕಾರಿಗಳು ಹೊರಾಜ್ಯಗಳಿಗೆ ಹೋಗುತ್ತಿದ್ದಾರೆ ಇಲ್ಲವೆ ರಾಜಿನಾಮೆ ನೀಡುತ್ತಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಭಿವೃದ್ಧಿಗಾಗಿ ಕೇಂದ್ರ ನೀಡಿದ ಅನುದಾನ ದುರ್ಬಳಕೆಯಾಗುತ್ತಿದೆ. ಸ್ಮಾರ್ಟ್‌ಸಿಟಿಯ ಕಾಮಗಾರಿಗಳು ಕುಂಟುತ್ತ ಸಾಗಿವೆ. ಇದರ ನಡುವೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮರಳಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ. ಆದರೆ ಅದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವರು ಎನ್ನುವುದು ಒಂದು ನಂಬಿಕೆಯಾಗಿದ್ದು, ಧರ್ಮ ಜೀವನದ ಒಂದು ಭಾಗವಾಗಿದೆ. ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಜನರಲ್ಲಿ ಆಡಂಬರ ರಹಿತ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕು ಎಂದು ಹಿರಿಯ ಧಾರ್ಮಿಕ ಧುರೀಣ ಬಿ. ಸಿ. ರಾವ್ ಶಿವಪುರ ಹೇಳಿದರು. ಕೆರ್ಗಾಲು ಗ್ರಾಪಂ ವ್ಯಾಪ್ತಿಯ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನಲ್ಲಿ ಕ್ಷೇತ್ರದ ನಾಗದೇವರ ಪುನರ್‌ಪ್ರತಿಷ್ಟಾ, ಆಶ್ಲೇಷಾ ಬಲಿ ಹಾಗೂ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಧರ್ಮದ ಮುಖಗಳು ಬೇರೆಬೇರೆಯಾಗಿದ್ದು, ಸಮಜದಲ್ಲಿ ಇದನ್ನು ವಿಭಿನ್ನ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಎಲ್ಲವೂ ಹೊಂದಿರುವ ನಾವಿಂದು ಇಲ್ಲದೆಡೆಗೆ ಸಾಗುತ್ತಿದ್ದೇವೆ. ಜೀವನದಲ್ಲಿ ಗೊತ್ತುಗುರಿ ಹಾಕಿಕೊಳ್ಳದೇ ನಾವು ಸೋತಿದ್ದೇವೆ. ಧರ್ಮದಿಂದ ಬದಲಾಗಿದ್ದೇವೆ. ನಮ್ಮ ಮೂಲ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ಇದು ನಮ್ಮ ಹಿಂದೂ ಸಮಾಜದ ದೊಡ್ಡ ದುರಂತವಾಗಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವಗಳ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರು ಕಾಂಗ್ರೆಸ್ ಪಕ್ಷದ ಮುಖಂಡ, ಉಪ್ಪುಂದದ ಉದ್ಯಮಿ ಜಿ. ಗೋಕುಲ ಶೆಟ್ಟಿ ಉಪ್ಪುಂದ ಅವರ ಮನೆಗೆ ಆದಾಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ. ಗೋಕುಲ ಶೆಟ್ಟಿಯವರನ್ನು ಮನೆಯಲ್ಲಿರಿಸಿಕೊಂಡು ಅವರ ಆಪ್ತರನ್ನು ಕೂಡ ಮನೆಗೆ ಕರೆಸಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡನನ್ನು ಕೇಂದ್ರಿಕರಿಸಿಕೊಂಡು ನಡೆಯುತ್ತಿರುವ ಈ ದಾಳಿಯ ಬಗ್ಗೆ ಅನುಮಾನ ಮೂಡತೊಡಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿ ಪ್ರೇರಿತ ದಾಳಿ: ಕೆ. ಗೋಪಾಲ ಪೂಜಾರಿ ದಾಳಿಯ ಬಗ್ಗೆ ಬೈಂದೂರು ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಪ್ರತಿಕ್ರಿಯಿಸಿ ಕೇಂದ್ರ ಸರಕಾರದ ಆದಾಯ ತೆರಿಗೆ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರ ಮನೆಯ ಮೇಲೆ ದಾಳಿ ನಡೆಸುತ್ತಿದೆ. ಇದು ಅದರ ಮುಂದುವರಿದ ಭಾಗ. ಬಂದೂರು ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಸೋಲುವುದು ಖಚಿತವಾಗಿದೆ. ಸೋಲಿನ ಭೀತಿಯಿಂದ ಹತಾಶರಾದ ಮುಖಂಡರು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಕ್ಷೇತ್ರದ ಮತದಾರರು ಪ್ರಗತಿಗೆ ಮನ್ನಣೆ ನೀಡುತ್ತಾರೆಯೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ರೊಜರಿ ಮಾತಾ ಇಗರ್ಜಿಯ ಆವರಣದೊಳಗೆ, ಲೂರ್ದ ಮಾತೆಯ ನೂತನ ಗ್ರೊಟ್ಟೊವನ್ನು (ಗುಹೆ) ಉದ್ಘಾಟನೆ ಮತ್ತು ಆಶಿರ್ವಚನ ಕಾರ್ಯಕ್ರಮ ಮೇರಿ ಮಾತೆಗೆ ಸಮರ್ಪಿಸಲ್ಪಟ್ಟ ಮೇ ತಿಂಗಳ ಮೊದಲನೇ ದಿನ ನಡೆಯಿತು. ಉಡುಪಿ ಧರ್ಮಕ್ಷೇತ್ರದ ಛಾನ್ಸಲರ್, ಉಡುಪಿ ವಲಯ ಹಾಗೂ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ. ವಾಲೇರಿಯನ್ ಮೆಂಡೊನ್ಸಾ, ದೀಪ ಬೆಳಗಿಸಿ ಗ್ರೋಟ್ಟೊವನ್ನು ಉದ್ಘಾಟಿಸಿದರು. ಈ ಮೊದಲು ಇದ್ದ ಗ್ರೋಟ್ಟೊವನ್ನು ಸ್ಥಳಾಂತರ ಮಾಡಿ ತಾತ್ಕಾಲಿಕವಾದ ಗ್ರೋಟ್ಟೊವನ್ನು ನಿರ್ಮಿಸಲಾಗಿತ್ತು, ಅದನ್ನು ಕೆಡವಿ ಅದೇ ಜಾಗದಲ್ಲಿ ನೂತನವಾದ ಸ್ಥಿರವಾದ ಗ್ರೋಟ್ಟೊವನ್ನು ನಿರ್ಮಿಸಲಾಗಿದೆ. ಚರ್ಚಿನ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾ, ಸಹಾಯ ಧರ್ಮಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಧರ್ಮಗುರು ವಂ.ಪ್ಯಾಟ್ರಿಕ್ ಪಾಯ್ಸ್ ಸಹ ಭಾಗಿತ್ವದಲ್ಲಿ ಪವಿತ್ರ ಬಲಿದಾನ ನಡೆಯಿತು. ನೂತನ ಗ್ರೋಟ್ಟೊ ಮುಂದೆ ಭಕ್ತರೊಡಗೂಡಿ, ಮೇರಿ ಮಾತೆ ಕಳಿಸಿಕೊಟ್ಟ ಜಪಸರ ಪ್ರಾರ್ಥನೆಯನ್ನು ನಡೆಸಲಾಯಿತು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಬ್ರಹ್ಮಕಲಶ ಹಾಗೂ ರಥೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಬುಧವಾರ ಪೂರ್ವಾಹ್ನ ಫಲನ್ಯಾಸ,ಸಾಮೂಹಿಕ ದೇವತಾ ಪ್ರಾರ್ಥನೆ ,ಪುಣ್ಯಾಹ ನಾಂದಿ,ಋತ್ವಗ್‌ವರ್ಣಿ,ಮಧುಪರ್ಕ,ಗಣಹೋಮ ನವಗ್ರಹ ಹೋಮ ಚತುರ್ವೇದ ಪಾರಾಯಣ ಹಾಗೂ ಸಂಜೆ ಆಂಜನೇಯ ದೇವರಲ್ಲಿ ಪುಣ್ಯಾಹ ಸ್ಥಾನಶುದ್ಧಿ ಪ್ರಸಾದ ಶುದ್ಧಿ ರಾಕ್ಷೋಘ್ನ ಹೋಮ ವಾಸ್ತುಹೋಮ ಇನ್ನಿತರ ಹೋಮಾಧಿ ಕಾರ್ಯಕ್ರಮಗಳು ತಂತ್ರಿಗಳಾದ ವೇಧಮೂರ್ತಿ ಕೃಷ್ಣ ಸೋಮಯಾಜಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿತು.ಸಂಜೆ ನಡೆದ ಕೂಟಮಹಾಜಗತ್ತು ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ದೀಪ ಬೆಳಗಿಸಿ ಚಾಲನೆ ನೀಡಿದರು.ದೇವಳದ ಉಪಾಧ್ಯಕ್ಷ ಬಿ.ರಘುನಾಥ ಸೋಮಯಾಜಿ ,ಕಾರ್ಯದರ್ಶಿ ಜಿ.ಮಂಜುನಾಥ ಮಯ್ಯ,ಕೋಶಾಧಿಕಾರಿ ಪ್ರಸನ್ನ ತುಂಗ,ಸದಸ್ಯರಾದ ವೈ ಸದಾರಾಮ ಹೇರ್ಳೆ ,ವೇ.ಮೂ,ಜಿ.ಚಂದ್ರಶೇಖರ ಉಪಾಧ್ಯ,ಎಂ.ಕೆ ಅಶೋಕ ಕುಮಾರ್ ಹೊಳ್ಳ,ಬಿಜೂರು ಬಲರಾಮ ಮಯ್ಯ,ಪಿ.ಸುಬ್ರಹ್ಮಣ್ಯ ಹೇರ್ಳೆ ಮತ್ತಿತತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಿಂದೆ ಕುಂಭ ನೆಂಬ ರಕ್ಕಸನಿದ್ದರೆ.. ಕಲಿಯುಗದಲ್ಲಿ ಸಹಸ್ರಾರು ಕುಂಭಾಸುರರು ಇದ್ದಾರೆ. ಭೀಮ ಕುಂಭ ನೆಂಬ ರಕ್ಕಸನ ವಧಿಸಿದರೆ, ಇಂದು ತಾಯಿ ಕಲಿಯುಗದ ಕುಂಭಾಸುರರ ಮರ್ಧಿಸಲು ಪವಿತ್ರ ಭೀಮ ಕ್ಷೇತ್ರ ಕುಂಭಾಶಿಯಲ್ಲಿ ದೇವಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಮಂದಿರದಲ್ಲಿ ಪ್ರತಿಷ್ಠಾಪಿತಳಾಗಿದ್ದಾಳೆ. ಪ್ರಜೆಗಳಿಗೆ ಮಾರಕ ಕುಂಭನನ್ನು ಕತ್ತಿಯಿಂದ ವಧಿಸಿದ್ದಕ್ಕಾಗಿ ಕುಂಭ ರಕ್ಕಸ, ಅಶಿ ಎಂದರೆ ಕತ್ತಿ. ಭೀಮ ಕುಂಭನ ವಧಿಸಿದ ಹಿನ್ನೆಲೆಯೇ ಕುಂಭಾಸಿ ಹೆಸರು. ..ಹೀಗೆ ಮಹಾಭಾರತದ ಭೀಮ ಹಾಗೂ ಕುಲಿಯುಗದ ಕುಂಭನಂತಾ ರಕ್ಕಸಿರಿಗೆ ತಳಕು ಹಾಕಿದವರು ಉಡುಪಿ ಅದಮಾರು ಮಠ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ. ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸಮರ್ಪಣೆ ನಿಮಿತ್ತ ಗಂಗೊಳ್ಳಿ ಹೊಸ್ಮನೆ ದಿ.ಶ್ರೀಮತಿ ಗೌರಮ್ಮ ಮತ್ತು ದಿ.ಮಂಜುನಾಥ ಶೇರೆಗಾರ್ ವೇದಿಕೆಯಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಮಾತನಾಡುತ್ತಿದ್ದರು. ಪ್ರಸಕ್ತ ನಾಯಕರೆನಿಸಿ ಕೊಂಡವರು ತನಗಾಗಿ ಯಜ್ಞಯಾಗಾಧಿಗಳ ಮಾಡುತ್ತಾ, ಸಮಾಜಕ್ಕೆ ಎನ್ನುವಾಗ ಮೂಢನಂಬಿಕೆ ಎನ್ನುವ ಕುಂಭುನಂತ ರಕ್ಕಸರ ವಧಿಸಲು ಭೀನಮನಂತವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: 2017-18 ನೇ ಸಾಲಿನ ರಾಷ್ಟ್ರ ಮಟ್ಟದ ಜೆಇಇ ಮೈನ್ ಪ್ರವೇಶ ಪರೀಕ್ಷೆಯಲ್ಲಿ ಕೋಟೇಶ್ವರದ ಗುರುಕುಲ ಪದವಿ ಪೂರ್ವ ಕಾಲೇಜಿನ 5 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಜೆಇಇ ಆಡ್ವಾನ್ಸ್ ಬರೆಯಲು ಅರ್ಹತೆ ಗಳಿಸಿ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ವೃಂದದವರು ಅಭಿನಂದಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಿಂದ ಹಣ ಸಂದಾಯವಾಗುತ್ತಿರುವುದನ್ನು ತಡೆಹಿಡಿಯಲು ಕೊಲ್ಲೂರಿನ ಮಾಜಿ ಧರ್ಮದರ್ಶಿ ಬಿ.ಎಂ ಸುಕುಮಾರ ಶೆಟ್ಟಿ ಅವರು ತಿಳಿಸಿದ್ದರಿಂದ ಸರಕಾರದ ಗಮನಕ್ಕೆ ತಂದು ತಡೆಹಿಡಿಯಲಾಗಿತ್ತು ಎಂದು ಸಚಿವ ರಮಾನಾಥ ರೈ ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಅವರು ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣಾ ಗಿಮಿಕ್ ಮಾಡಿದ್ದಾರೆಂದು ಬೈಂದೂರು ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಅವರು ಹೆಮ್ಮಾಡಿಯ ಬಿಜೆಪಿ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಮಾನಾಥ ರೈ ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೊಲ್ಲೂರು ದೇವಳದ ಟ್ರಸ್ಟಿಯಾದ ಬಳಿಕ ವಿದ್ಯಾರ್ಥಿಗಳಿಗಾಗಿ ದೇವಳದ ಶಾಲೆ ಆರಂಭಿಸಿದ್ದೇನೆ. ಸರಕಾರದಿಂದ ಬಿಸಿಯೂಟ ನೀಡುವ ಮೊದಲೇ ಕೊಲ್ಲೂರು ದೇವಳದಿಂದ ಸ್ಥಳೀಯ ಎಲ್ಲಾ ಶಾಲೆಗಳಿಗೂ ಬಿಸಿಯೂಟ ನೀಡುವ ವ್ಯವಸ್ಥೆ ಮಾಡಿದ್ದೇನೆ. ದೂರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ರೋಜರಿ ಮಾತಾ ಇಗರ್ಜಿಯಲ್ಲಿ ಕಥೊಲಿಕ್ ಸಭಾ ಘಟಕ ದಿನಾಚರಣೆ ಪ್ರಯುಕ್ತ ಖಾದ್ಯ ತಿಂಡಿಗಳ ಹಬ್ಬ (ಫುಡ್ ಫೆಸ್ತ್) ಸಹಾಯಕ ಧರ್ಮಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ ನೇತೃತ್ವದಲ್ಲಿ ಪವಿತ್ರ ಬಲಿದಾನ ಅರ್ಪಿಸಿದರು. ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾ ಶುಭಾಷಯ ಕೋರಿದರು. ನಂತರ ಫುಡ್ ಪೆಸ್ಟ್‌ನಲ್ಲಿ ಕಥೊಲಿಕ್ ಸಭಾ ಸದಸ್ಯರೆ ಸಿದ್ದ ಪದಿಸಿದ ವಿವಿಧ ರೀತಿಯ ಮಾಂಸಹಾರಿ ಖಾದ್ಯಗಳು, ಜೊತೆಗೆಇಡ್ಲಿ, ಶಾವಿಗೆ ಖಾದ್ಯ ತಿಂಡಿಗಳ ಪ್ರದರ್ಶನಕ್ಕೆ ಇಡಲಾಯಿತು. ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್, ನಿಕಟ ಪೂರ್ವ ಅಧ್ಯಕ್ಷ ಜೇಕಬ್ ಡಿಸೋಜಾ, ನಿಯೋಜಿತ ಅಧ್ಯಕ್ಷ ವಾಲ್ಟರ್ ಡಿಸೋಜಾ, ಉಪಾಧ್ಯಕ್ಷ ಬರ್ನಾಡ್ ಜೆ. ಡಿಕೋಸ್ತಾ, ಸಹ ಕಾರ್ಯದರ್ಶಿ ನಿರ್ಮಲಾ ಡಿಸೋಜಾ, ಸಹಾಯಕ ಖಚಾಂಚಿ ವಿಲ್ಸನ್ ಡಿಆಲ್ಮೇಡಾ, ಆಮ್ಚೊ ಸಂದೇಶ್ ಪ್ರತಿನಿಧಿ ವಿನ್ಸೆಂಟ್ ಡಿಸೋಜಾ, ರಾಜಕೀಯ ಸಂಚಾಲಕ ಜೋನ್ಸನ್ ಡಿಆಲ್ಮೇಡಾ, ಸರ್ಕಾರಿ ಸವಲತ್ತು ಸಂಚಾಲಕ ವಿನೋದ್ ಕ್ರಾಸ್ಟೊ, ಲೆಕ್ಕ ಪರಿಸೋಧಕ ವಿಲ್ಸನ್ ಒಲಿವೇರಾ, ಕಾರ್ಯಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಮುಖ್ಯೋಪಾಧ್ಯಾಯರಾಗಿ ರವಿದಾಸ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ಎನ್.ಕೆ.ಬಿಲ್ಲವ ರವರು ನೂತನ ಮುಖ್ಯೋಪಾಧ್ಯಾಯರನ್ನು ಸ್ವಾಗತಿಸಿಕೊಂಡು ಮಾತನಾಡಿ ಸಂಸ್ಥೆಯನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಮುಖ್ಯೋಪಾಧ್ಯಾಯರು ಸಮರ್ಥರಿದ್ದಾರೆ ಎಂದರು. ಸಂಸ್ಥೆಯ ನಿರ್ದೇಶಕರಾದ ಕೆ.ಪುಂಡಲೀಕ ನಾಯಕ್ , ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಉದಯ ಪೂಜಾರಿ, ರಾಜೀವ ಶೆಟ್ಟಿ, ಸತೀಶ ಪೂಜಾರಿ ಹಾಗೂ ಸಂಚಾಲಕರಾದ ಶಂಕರ ಪೂಜಾರಿ ಉಪಸ್ಥಿತರಿದ್ದರು. ಸಂಯೋಜಕಿ ಗೀತಾದೇವಿ ಅಡಿಗ ಅವರು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.

Read More