ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಮಾನವತೆ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ ಕುವೆಂಪು ಅವರ ಜನ್ಮ ದಿನೋತ್ಸವದ ನೆನಪಿಗಾಗಿ ಪ್ರತಿವರ್ಷ ರಂಗಕಹಳೆ ರಿ. ಮಕ್ಕಳ ರಂಗಶಾಲೆ ಆಯೋಜಿಸುತ್ತಿರುವ ’ಕುವೆಂಪು ನಾಟಕೋತ್ಸವ’ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಆಯೋಜನೆಗೊಂಡಿದ್ದು ಡಿ. 25ರ ಮಂಗಳವಾರದಿಂದ ಡಿ.29ರ ಶನಿವಾರದ ತನಕ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಡಾ. ಹೆಚ್. ಶಾಂತಾರಾಮ್ ಬಯಲು ರಂಗ ಮಂಟಪದಲ್ಲಿ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುತ್ತಿರುವ 18ನೇ ಕುವೆಂಪು ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6 ರಿಂದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿದೆ. ಈ ನಡುವೆ ಕುವೆಂಪು ಜನ್ಮದಿನೋತ್ಸವ, ವಿಚಾರ ಸಂಕಿರಣ, ಸಾಧಕರಿಗೆ ಗೌರವಾರ್ಪಣೆ, ಚಲನಚಿತ್ರ ಪ್ರದರ್ಶನ, ಕುವೆಂಪು ಗೀತ ಗಾಯನ ನಡೆಯಲಿದೆ. ನಾಟಕ , ಚಲನಚಿತ್ರ ಪ್ರದರ್ಶನ: ಡಿ.25ರಂದು ಸಿ. ಲಕ್ಷ್ಮಣ ನಿರ್ದೇಶನದ ರಂಗಕಹಳೆ ತಂಡದ ಪ್ರಸ್ತುತಿಯ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ, ಬಳಿಕ ಓಹಿಲೇಶ್ ಎಲ್. ನಿರ್ದೇಶನದ ಬೆಂಗಳೂರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡರೆ ದೇಹವು ರೋಗಮುಕ್ತವಾಗಿರುತ್ತೆ. ಮಧ್ಯಪಾನ, ಧೂಮಪಾನದಿಂದ ದೂರವಿದ್ದು, ಪ್ರೀತಿ ಹಂಚುವುದೇ ಆರೋಗ್ಯದ ಗುಟ್ಟು ಎಂದು ಪದ್ಮಶ್ರೀ ಡಾ. ಬಿ. ಎಂ. ಹೆಗ್ಡೆ ಹೇಳಿದರು. ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೪ನೇ ಹುಟ್ಟು ಹಬ್ಬದ ಆಚರಣೆ ಮತ್ತು ದತ್ತಿನಿಧಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯರ ದೊಡ್ಡ ಆಸ್ತಿಯೆಂದರೆ ಪ್ರೀತಿ ಮಾಡುವ ಮಕ್ಕಳು. ಬದುಕಿನಲ್ಲಿ ಆಸ್ತಿ ಮಾಡುವ ಬದಲು ಅವರು ಪ್ರೀತಿಯಿಂದ ನೋಡಿಕೊಳ್ಳುವಂತೆ ಮಾಡಿ. ಆರೋಗ್ಯದಿಂದ ಇರುವುದೆಂದರೆ ಖಾಯಿಲೆಯಿಂದ ದೂರವಿರುವುದಲ್ಲ ಬದಲಿಗೆ ಕೆಲಸ ಮಾಡಲು ಹುಮ್ಮಸ್ಸನ್ನು ತುಂಬಿಕೊಳ್ಳುವ ಸ್ಥಿತಿಯದು. ದಿನದಲ್ಲಿ ಮನಸ್ಫೂರ್ತಿಯಿಂದ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಿಂದ ಸುಖ, ನೆಮ್ಮದಿಯೂ ದೊರೆಯುತ್ತದೆ ಎಂದವರು ಸಲಹೆಯಿತ್ತ ಅವರು ಅಪ್ಪಣ್ಣ ಹೆಗ್ಡೆ ಅವರ ಆಯೋಗ್ಯದ ಗುಟ್ಟು ಅವರ ಮದಸ್ಮಿತ ಮುಖದಲ್ಲಿದೆ ಎಂದರು. ಕೋಣಿ ರಮಾನಂದ ಕಾರಂತರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ’ಭಾರತ ಸ್ವಾತಂತ್ರ್ಯ ಗಳಿಸಿ ಪ್ರಜಾತಂತ್ರ ವ್ಯವಸ್ಥೆಗೆ ಹೊರಳಿಕೊಂಡಾಗ ಜನರಿಂದ ಆದ ಜನರಿಗಾಗಿ ಇರುವ ಜನರ ಸರ್ಕಾರ ಬಂತೆಂದು ಹಿಗ್ಗಿದೆವು. ಆದರೇ ನಾವೀಗ ಇಲ್ಲಿ ಕೆಲವರಿಂದ ಆದ ಕೆಲವರಿಗಾಗಿ ಇರುವ ಕೆಲವರ ಸರ್ಕಾರವನ್ನು ಕಾಣುತ್ತಿದ್ದೇವೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆ ಇದನ್ನು ಬದಲಿಸಬೇಕು’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು. ನಾಗೂರಿನ ಕುಸುಮ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಅವರು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗ್ಡೆ ಅವರಿಗೆ ಈ ಸಾಲಿನ ’ಕುಸುಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ದಿಕ್ಸೂಚಿ ಭಾಷಣ ಮಾಡಿದರು. ಲೋಕಾಯುಕ್ತನಾದ ಬಳಿಕ ನನಗೆ ದೇಶದ ವಾಸ್ತವ ಸ್ಥಿತಿಯ ಅರಿವಾಯಿತು. ಜನರು ಭ್ರಷ್ಟರನ್ನು, ಅಯೋಗ್ಯರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸುವ ಬದಲಿಗೆ ಪುರಸ್ಕರಿಸುವುದನ್ನು ಕಂಡು ಆಘಾತಗೊಂಡೆ. ಇದರ ಫಲವಾಗಿ ದೇಶ ಅಭಿವೃದ್ಧಿಯಾಗುವುದರ ಬದಲಿಗೆ ಆಡಳಿತಗಾರರಿಂದ ನಡೆಯುತ್ತ ಬಂದ ಹಗರಣಗಳ ಮೊತ್ತ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಈ ಪರಿಯ ಸೋರಿಕೆಯಿಂದ ನಿಜವಾದ ಅಭಿವೃದ್ಧಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ರೀತಿಯ ಕಲೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ ಬರುತ್ತದೆ ಎಂದು ಬೆಂಗಳೂರಿನ ಹಿರಿಯ ಶಿಲ್ಪಕರ್ಮಿ ಸೂರಾಲು ವೆಂಕಟರಮಣ ಭಟ್ ತಿಳಿಸಿದರು ಆಳ್ವಾಸ್ ವಿರಾಸತ್ ೨೦೧೮ರ ಅಂಗವಾಗಿ ನಡೆಯುತ್ತಿರುವ ‘ಆಳ್ವಾಸ್ ಶಿಲ್ಪ ವಿರಾಸತ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಶಿಲ್ಪಕಲೆಯು ಅಗತ್ಯವಾಗಿದೆ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಕಡಿಮೆಯಾಗುವುದಿ. ದೇವರು ದೇವಸ್ಥಾನಗಳಲ್ಲದೆ ಇನ್ನೂ ವಿಭಿನ್ನ ಶೈಲಿಯ ಶಿಲ್ಪಕಲೆಗಳಿವೆ. ಇದೆಲ್ಲವನ್ನೂ ಜನರಿಗೆ ಪರಿಚಯಿಸುವ ಪ್ರಯತ್ನವಾಗಬೇಕಿದೆ. ಶಿಲ್ಪಕಲೆ ಸಮರ್ಪಣಾ ಮನೋಭಾವ ಹಾಗೂ ನಿರಂತರ ಪರಿಶ್ರಮವನ್ನು ಬೇಡುವ ಕ್ಷೇತ್ರ. ಒಂದು ಶಿಲ್ಪವನ್ನು ಆರಂಭಿಸುವ ಮೊದಲು ಶಿಲ್ಪಿಯಲ್ಲೇ ದೃಢವಾದ ಆತ್ಮವಿಶ್ವಾಸ ಜೊತೆಗೆ ಸತತ ಪರಿಶ್ರಮವಿರಬೇಕು ಆಗ ಮಾತ್ರ ಶಿಲ್ಪಕ್ಕೆ ಒಂದು ಒಳ್ಳೆಯ ರೂಪ, ಬೆಲೆ ಬರಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಡಾ ಗ್ರಾಮದ ಪಡುಕೋಣೆ ಗ್ರೇಗರಿ ಹೈಸ್ಕೂಲು ಮೈದಾನದಲ್ಲಿ ಆಯೋಜಿಸಲಾದ ಮೂರು ದಿನಗಳ ನಾಡ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಸಂಜೆ ಅದ್ದೂರಿ ಶೋಭಾಯಾತ್ರೆ, ಬಳಿಕ ಉದ್ಘಾಟನಾ ಸಮಾರಂಭ ಜರುಗಿತು. ಖ್ಯಾತ ನಿರೂಪಕಿ ಅನುಶ್ರೀ, ವಿವಿಧ ಕಿರುತೆರೆ ಕಲಾವಿದರು ಹಾಗೂ ನೃತ್ಯತಂಡಗಳು ನೆರದಿದ್ದ ಸಹಸ್ರಾರು ಮಂದಿಯನ್ನು ರಂಜಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಂಕೇಶ್ವರ ರಸ್ತೆಯಲ್ಲಿರುವ ರೈಲ್ವೆ ಎಲ್ಸಿ ಗೇಟನ್ನು ಮುಚ್ಚಿ ಅಂಡರ್ ಬ್ರಿಡ್ಜ್ ನಿರ್ಮಿಸಲು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ ಗುಪ್ತಾ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಬೈಂದೂರಿಗೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ತಿಳಿಸಿದ್ದಾರೆ. ರೈಲ್ವೆ ಅಂಡರ್ ಪಾಸ್ಗೆ ಸುಮಾರು ಒಂದು ಕೋಟಿ ರೂ. ಅಂದಾಜು ವೆಚ್ಚದ ತಗಲಲಿದ್ದು ಭಾಗಶಃ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ ಎಂದು ರಾಪ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಶಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕೊಂಕಣ ರೈಲ್ವೆ ಇಂಜಿನೀಯರ್ ವೆಂಕಟೇಶ್ ಇದ್ದರು.
ಕುಂದಾಪ್ರ ಡಾಟ್ ಕಾಂ’ ವರದಿ ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ವಿಭಿನ್ನ ಸಂಯೋಜನೆಯೊಂದಿಗೆ ವಿಶಿಷ್ಟ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ. ಕ್ರೀಡೆ, ಸಿನೆಮಾ ಮುಂತಾದ ಕ್ಷೇತ್ರದಲ್ಲಿ ವಿಶ್ವಖ್ಯಾತಿ ಗಳಿಸಿರುವ ನಾಡ ಗ್ರಾಮದ ಪಡುಕೋಣೆಯಲ್ಲಿ ಅದ್ದೂರಿ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ. ನಾಡಾ ಗ್ರಾಮದ ಹೊಯ್ಸಳ ಕಲ್ಚರಲ್ ಟ್ರಸ್ಟ್ ರಿ. ಸಾರಥ್ಯದಲ್ಲಿ ನಾಡಹಬ್ಬ ೨೦೧೮ ಅದ್ದೂರಿ ಕ್ರೀಡಾ ಜಾತ್ರೆ, ಗಾನ ನೃತ್ಯ ಜಾತ್ರೆ ಹಾಗೂ ಯಕ್ಷ ಜಾತ್ರೆ ಕಾರ್ಯಕ್ರಮ ಡಿಸೆಂಬರ್ 22, 23, 24 ರಂದು ಪಡುಕೋಣೆ ಗ್ರೆಗರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿದ್ದು ಭರದ ಸಿದ್ಧತೆ ನಡೆದಿದೆ. ಡಿ. 22ರ ಬೆಳಿಗ್ಗೆ 9 ಗಂಟೆಗೆ ಹಿರಿಯ, ಕಿರಿಯ ವಿಭಾಗದಲ್ಲಿ ಪ್ರತ್ಯೇಕ ಮ್ಯಾರಾಥಾನ್ ಓಟ ನಡೆಯಲಿದೆ. ಅಂದು ಸಂಜೆ ಸಮಾಜದ ಗಣ್ಯ ವ್ಯಕ್ತಿಗಳಿಂದ ನಾಡ ದೇವತೆಯ ಅದ್ದೂರಿಯ ಪುರಮೆರವಣಿಗೆ ಉದ್ಘಾಟನೆಗೊಳ್ಳಲಿದೆ. ಸಂಜೆ 7ರಿಂದ ನಾಡ ಹಬ್ಬದ ಉದ್ಘಾಟನೆ ನಡೆಯಲಿದ್ದು ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಆಡಳಿತ ನಿರ್ದೇಶಕ ಅಶೋಕ ಎಸ್. ಶೆಟ್ಟಿ ಸಮೃದ್ಧಿ ಬೆಳ್ಳಾಡಿ ಕಾರ್ಯಕ್ರಮವನ್ನು…
ಕುಂದಾಪ್ರ ಡಾಟ್ ಕಾಂ’ ಸುದ್ದಿ ನ್ಯೂಯಾರ್ಕ್: ಒನ್ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಇತ್ತೀಚೆಗೆ ನಡೆದ ಗ್ಲೋಬಲ್ ಕೆ50 ಸಮಾವೇಶದಲ್ಲಿ ವಿಶ್ವದ ಅಗ್ರ 50 ನವೋದ್ಯಮದ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಬೆಂಗಳೂರು ಮೂಲದ ಹ್ಯಾಪಿ ಇಎಂಐ ಸ್ಟಾರ್ಟಪ್ ಹಣಕಾಸು ವಿಭಾಗದಲ್ಲಿ 30ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಸುಹಾಸ್ ಗೋಪಿನಾಥ್ ಹ್ಯಾಪಿ ಇಎಂಐ ಸ್ಟಾರ್ಟಪ್ನ ಸಂಸ್ಥಾಪಕರಾಗಿದ್ದಾರೆ. ಹೊಸ ತಂತ್ರಜ್ಞಾನಗಳ ಮೂಲಕ ಸದಾ ನವೀನ ಪ್ರಯೋಗಗಳಿಗೆ ಮುಂದಾಗುವ ಯುವ ಉದ್ಯಮಿ ಹಾಗೂ ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದಾರೆ. ಎಲ್ಲರಿಗೂ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರಕಿಸಿಕೊಡುವುದು ಈ ಬಾರಿಯ ಕೈರೋಸ್ ಜಾಗತಿಕ ಸಮಾವೇಶದ ಧ್ಯೇಯವಾಗಿತ್ತು. ಹ್ಯಾಪಿಇಎಂಐ ನವೋದ್ಯಮ ಈ ಧ್ಯೇಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಒಂದು ನಿಮಿಷದಲ್ಲಿ ಸಾಲ ಸೌಲಭ್ಯ ಸಿಗಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಹ್ಯಾಪಿ ಇಎಂಐಗೆ ಅಗ್ರ 50 ನವೋದ್ಯಮದಲ್ಲಿ ಸ್ಥಾನ ನೀಡಿ ಗೌರವಿಸಲಾಯಿತು. ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಎಂಬ ವಿಭಾಗಗಳಲ್ಲಿ ಹೊಸದಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಏಳಿಗೆಗಾಗಿ ತೊಡಗಿಸಿಕೊಂಡ ಉತ್ಕೃಷ್ಟ ವ್ಯಕ್ತಿಗಳನ್ನು ಸನ್ಮಾನಿಸಿದರೆ ಅವರನ್ನು ಹುರಿದುಂಬಿಸಿದಂತಾಗುವುದಲ್ಲದೇ ಮತ್ತಷ್ಟು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಎಲ್ಲಾ ಆಯಾಮಗಳಲ್ಲಿಯೂ ತೊಡಗಿಸಿಕೊಂಡ ಅಸಾಧಾರಣ ವ್ಯಕ್ತಿಯಾಗಿದ್ದು, ಶ್ರೇಷ್ಠ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬೆಳೆದಿದ್ದಾರೆ. ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವ ಅವರು ಭಗವಂತ ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ಎನ್. ವಿನಯ್ ಹೆಗ್ಡೆ ಹೇಳಿದರು. ಅವರು ಡಿ.15ರಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಕುಂದಾಪುರ ಎಜುಕೇಶನ್ ಸೊಸೈರಿ ರಿ. ಹಾಗೂ ಅಭಿಮಾನಿ ಬಳಗದವರಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಮಣಿಪಾಲ ವಿವಿ ಸಹ ಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್ ಮಾತನಾಡಿ ಸುಕುಮಾರ ಶೆಟ್ಟರು ಬಹುಮುಖ ಪ್ರತಿಭೆ ವ್ಯಕ್ತಿ. ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಯಶಸ್ವಿಯಾದವರು. ತಮ್ಮ ಶಿಕ್ಷಣ…
ಕೆರೆಮನೆ ಶಿವಾನಂದ ಹೆಗಡೆ ‘ಕುಸುಮಾಶ್ರೀ’ ಪ್ರಶಸ್ತಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಆಯೋಜಿಸುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕುಸುಮಾಂಜಲಿಯ ಐದನೇ ಆವೃತ್ತಿ ‘ಕುಸುಮಾಂಜಲಿ-2018’ ಡಿಸೆಂಬರ್ 22 ಹಾಗೂ 23 ರಂದು ಎರಡು ದಿನಗಳ ಕಾಲ ನಾಗೂರಿನಲ್ಲಿ ಬೆಳಗ್ಗೆ 10 ರಿಂದ ರಾತ್ರಿ 10:30 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷ ಸಾಂಸ್ಕೃತಿಕ ನೃತ್ಯ ವೈಭವ, ದಿಕ್ಸೂಚಿ ಭಾಷಣ, ‘ಕುಸುಮಾಶ್ರೀ’ ಪ್ರಶಸ್ತಿ ಪ್ರಧಾನ, ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಸಂತೋಷ ಹೆಗ್ಡೆ ಆಗಮಿಸಲಿದ್ದಾರೆ. ಈ ವರ್ಷ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಾಶ್ರೀ’ ಪ್ರಶಸ್ತಿಯನ್ನು ಕೆರೆಮನೆ ಶಿವಾನಂದ ಹೆಗಡೆಯವರಿಗೆ ಯಕ್ಷಗಾನ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು. ಪ್ರಸಿದ್ದ ಕುಚಿಪುಡಿ ಪ್ರವೀಣೆ ಹಾಗೂ ನೃತ್ಯ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿ ಹಾಗೂ ತಂಡ ಬೆಂಗಳೂರು, ಇವರಿಂದ ವಿಶೇಷ ನೃತ್ಯ…
