ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನಮ್ಮ ಕೊಲ್ಲೂರು ಸ್ವಚ್ಚ ಕೊಲ್ಲೂರು ಅಭಿಯಾನದಡಿಯಲ್ಲಿ ಪ್ರತಿ ತಿಂಗಳು ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಪ್ರಸಿದ್ಧ ಯಾತ್ರಾಸ್ಥಳವೆನಿಸಿಕೊಂಡಿರುವ ಕೊಲ್ಲೂರು ಪರಿಸರ ಸ್ವಚ್ಚತೆ ಮಾಡುತ್ತಿದ್ದು, ಸ್ವಚ್ಚತೆಯ ಅರಿವು ಅಭಿಯಾನ ನಿರಂತವಾಗಿ ಮುಂದುವರಿಯಲಿದೆ ಎಂದು ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಹೇಳಿದರು. ಅವರು ಗ್ರಾಮ ಪಂಚಾಯತ್ ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು, ವನ್ಯಜೀವಿ ವಲಯ ಕೊಲ್ಲೂರು, ಮಹಿಳಾ ಮಂಡಲ, ನವಶಕ್ತಿ ಮಹಿಳಾ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಜೀಪು ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರ ಮಾಲಕರ ಸಂಘ, ಆರಕ್ಷಕ ಠಾಣೆ ಕೊಲ್ಲೂರು, ಸುಪರ್ಣ ಟ್ರಸ್ಟ್, ನವೋದಯ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಸಮಸ್ತ ನಾಗರಿಕರು ಹಾಗೂ ಸಹಯೋಗದೊಂದಿಗೆ ಮಾಸ್ತಿಕಟ್ಟೆಯಿಂದ ಸ್ನಾನಘಟ್ಟ ಹಾಗೂ ಕೊಲ್ಲೂರು ದೇವಳದ ತನಕ ಆಯೋಜಿಸಲಾಗಿದ್ದ ಕೊಲ್ಲೂರಿನಲ್ಲಿ ಸ್ವಚ್ಛಾತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಚ್ಛ ಕೊಲ್ಲೂರು ಅಭಿಯಾನದ ಮೂಲಕ ದೇವಳದ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪಂಚಾಯತ್ ಮೂಲಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾಪುವಿನಲ್ಲಿ ನಡೆದ ಮೆರುಗು ವಲಯ ವ್ಯವಹಾರ ಸಮಾವೇಶದಲ್ಲಿ ಜೇಸಿಐ ವಲಯ ೧೫ರ ‘ಎ’ ಪ್ರಾಂತ್ಯದ ಪ್ರತಿಷ್ಠಿತ ಉದ್ಯಮರತ್ನ ಪ್ರಶಸ್ತಿಯನ್ನು ಉಪ್ಪುಂದ ನ್ಯೂ ವಿನಾಯಕ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಜೆಎಫ್ಪಿ ಯು. ಪ್ರಕಾಶ ಭಟ್ ಇವರಿಗೆ ಪ್ರದಾನಿಸಿ ಪುರಸ್ಕರಿಸಲಾಯಿತು. ಉಪ್ಪುಂದ ಪ್ರಕಾಶ್ ಭಟ್ ಇವರ ಉದ್ಯಮ ಕ್ಷೇತ್ರದಲ್ಲಿನ ಸಾಧನೆ ಮತ್ತು ಬೆಳವಣಿಗೆಯನ್ನು ಗುರುತಿಸಿ ಜೇಸಿಐ ವಲಯ ೧೫ರ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇಸಿಐ ಆಂದೋಲನಕ್ಕೆ ಭಟ್ಟರ ಸಹಭಾಗಿತ್ವ ಮತ್ತು ನೀಡುತ್ತಿರುವ ಸಹಕಾರವನ್ನು ವಲಯಾಧ್ಯಕ್ಷ ಸಂತೋಷ್ ಜಿ. ಶ್ಲಾಘಿಸಿದರು. ಈ ಸಂದರ್ಭ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ. ಸುಕುಮಾರ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ರಾಷ್ಟ್ರೀಯ ತರಬೇತುದಾರ ಡಾ. ಅರವಿಂದ ಕೇದಿಗೆ, ರಾಷ್ಟ್ರೀಯ ಜೇಸಿರೇಟ್ ಸಂಯೋಜಕಿ ರೂಪಾ ಇಂದ್ರಾಳಿ, ವಲಯಾಧಿಕಾರಿ ನರಸಿಂಹ ಹಳಗೇರಿ, ಜೇಸಿಐ ಶಿರೂರು ಘಟಕದ ಅಧ್ಯಕ್ಷ ಅರುಣ್ಕುಮಾರ್, ಉಪ್ಪುಂದ ಘಟಕದ ಅಧ್ಯಕ್ಷ ಮಂಜುನಾಥ ದೇವಾಡಿಗ ಹಗೂ ಇತರ ಪದಾಧಿಕಾರಿಗಳು ಇದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿ ಭಾಗದ ಧೀಮಂತ ಕಲೆ ಯಕ್ಷಗಾನದಲ್ಲಿ ನೂರಾರು ಕಲಾವಿದರು ತೊಡಗಿಸಿಕೊಂಡು ಕಲಾ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ ಅವರ ವೃದ್ದಾಪ್ಯದ ದಿನಗಳಲ್ಲಿ ಅವರಿಗೆ ಮಾಶಾಸನ ನೀಡಲು ಇಲಾಖೆ ವಿಳಂಬ ನೀತಿ ಅನುಸರಿಸುತ್ತಿರುವುದು ಗಮನಕ್ಕೆ ಬಂದಿದೆ. ಕಲಾವಿದರನ್ನು ಸತಾಯಿಸದೇ ಕೂಡಲೇ ಅವರಿಗೆ ಮಾಶಾಸನ ದೊರೆಯುವಂತೆ ನಿರ್ದೇಶಕರು ಕ್ರಮಕೈಗೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. ಉಡುಪಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕ ಕಾರ್ಯಕ್ರಮಗಳ್ನು ಉದ್ಘಾಟಿಸಿ ಮಾತನಾಡಿ ಬೈಂದೂರಿನಲ್ಲಿ ಹಲವಾರು ಕಲಾವಿದರು ಹಾಗೂ ಕಲಾ ಸಂಸ್ಥೆಗಳಿದ್ದು ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುವುದು ಸಂತಸದ ಸಂಗತಿ ಎಂದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟ್ವಾಡಿ, ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ದೇವಾಡಿಗ, ಯಡ್ತರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸಂಜೀವ ನಾಯ್ಕ್, ಸರಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋಟಿ ಚೆನ್ನಯ್ಯರ ಕೊನೆಯ ಗರಡಿ ನಾಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಬಿಲ್ಲವ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಗರಡಿಯ ಜೀಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡು ಸುಂದರ ದೈವಸ್ಥಾನ ನಿರ್ಮಾಣದಲ್ಲಿ ಶ್ರಮಿಸುತ್ತಿರುವುದು ಗಮನದಲ್ಲಿದ್ದು, ನಮ್ಮ ಕಡೆಯಿಂದಾದ ಸಹಕಾರ ನೀಡುವುದಾಗಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ, ಸಿನೆಮಾ ನಟ ರಾಜಶೇಖರ ಕೋಟ್ಯಾನ್ ಹೇಳಿದರು. ಅವರು ಇಲ್ಲಿನ ಜೀಣೋದ್ಧಾರ ಹಂತದಲ್ಲಿರುವ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ ಗರಡಿಯ ಕಾಮಗಾರಿ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಳಿಕ ಮಾತನಾಡಿದರು. ಗಜ್ಜೆಗಿರಿ ಶ್ರೀ ಕೋಟಿ ಚೆನ್ನಯ್ಯ ಗರಡಿಯ ಕೋಶಾಧಿಕಾರಿ ದೀಪಕ್, ಉಜ್ಗಲ್ಬೇಟ್ಟು ಗರಡಿಯ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ತಾಲೂಕು ಪಂಚಾಯತ್ ಸದಸ್ಯ ದಿನೇಶ್, ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ವೆಂಕಟ ಪೂಜಾರಿ, ಗರಡಿಯ ಅರ್ಚಕ ಕುಟುಂಬದ ಪ್ರಮುಖರಾದ ಮಂಜುನಾಥ ಪೂಜಾರಿ ಮೇಲ್ಹಿತ್ಲು, ಸಮಿತಿಯ ಕಾರ್ಯದರ್ಶಿ ಸಮಿತಿಯ ಶಿವರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಚಾಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು ವಿವಿ ಮಟ್ಟದ ಪ್ರಧಾನ ಕಾರ್ಯದರ್ಶಿಯಾಗಿ ಕುಂದಾಪುರ ಭಂಡಾರ್ಕಾಕಾರ್ಸ್ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಸುಕೇಶ್ ಪೂಜಾರಿ ಯಡ್ತರೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯದರ್ಶಿಯಾಗಿ ಬೈಂದೂರು ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ಪುನೀತ್ ಪೂಜಾರಿ ತಗ್ಗರ್ಸೆ ಆಯ್ಕೆಗೊಂಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾ ಅಧಿಕಾರಕ್ಕೆ ಬಂದ ಬಳಿಕ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಆಗಂತುಕರು ಮಾರಕಾಯುಧ ಹಿಡಿದು ಜನರಲ್ಲಿ ಭಯಸೃಷ್ಟಿಸಿ ಗೋವುಗಳ ಕಳವು ಮಾಡುತ್ತಿದ್ದರೂ ದೂರು ದಾಖಲಿಸುವ ಬದಲು ಪೊಲೀಸರು ಹಸು ಕಳೆದುಕೊಂಡವರನ್ನೇ ಪ್ರಶ್ನಿಸುವ ಸ್ಥಿತಿ ಬಂದಿದೆ. ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದವರು ಗೊಕಳ್ಳರಿಂದ ಬೀದಿಗೆ ಬಂದರೂ ಅವರಿಗೆ ಪರಿಹಾರ ಇರಲಿ ಕಾನೂನು ರಕ್ಷಣೆ ಕೂಡಾ ಇಲ್ಲದಂತಾಗಿದೆ ಎಂದು ಬಿಜೆಪಿ ಮಾಧ್ಯಮ ಸಹಾಯಕ ವಕ್ತಾರೆ ಸುಲೋಚನಾ ಭಟ್ ಆರೋಪಿಸಿದರು. ಅವರು ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನ ಸಭಾ ಕ್ಷೇತ್ರ ಗೋಸಂರಕ್ಷಣಾ ಪ್ರಕೋಷ್ಠದ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ನಡೆದ ಗೋಹತ್ಯೆ ಹಾಗೂ ಗೊಳ್ಳತನ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿ ಗೋಹತ್ಯಗೆ ಮುಂದೆ ನಿಂತು ಪೋಷಿಸುತ್ತಿರುವುದರಿಂದ ನಿರ್ಭ್ಯಯವಾಗಿ ಗೋಕಳವು ನಡೆಯುತ್ತಿದ್ದು, ಕರಾವಳಿಯಲ್ಲಂತೂ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ನೀಡಿದರೆ ನಿರ್ಧಾಕ್ಷಿಣ್ಯವಾಗಿ ಕೊಲ್ಲಲಾಗುತ್ತಿದೆ. ಈ ಕೊಲೆಯ ಹಿಂದೆ ಟಾರ್ಗೆಟ್ ಗ್ರೂಫ್ ಇದ್ದು, ಇವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಅ9: ಇಲ್ಲಿಗೆ ಸಮೀಪದ ಅರೆಹೊಳೆಯ ನಿರ್ಜನ ಅರಣ್ಯ ಪ್ರದೇಶದಲ್ಲಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತರನ್ನು ಹೇರೂರು ಗ್ರಾಮದ ರಾಗಿಹಕ್ಲು ಸಿದ್ದನಮನೆ ನಿವಾಸಿ ನಾರಾಯಣ ನಾಯ್ಕ (65) ಗುರುತಿಸಲಾಗಿದೆ. ಮೃತ ನಾರಾಯಣ ನಾಯ್ಕ ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದು ಶನಿವಾರ ಬೆಳಗ್ಗೆ ಮನೆಯಿಂದ ಹೊರಟವರು ಮಧ್ಯಾಹ್ನ 12ಗಂಟೆಯ ಸುಮಾರಿಗೆ ಅರೆಹೊಳೆ ಆಶೀರ್ವಾದ ಬಾರ್ನಲ್ಲಿ ಮದ್ಯ ಸೇವಿಸಿದ್ದರು ಎಂದು ಬಾರ್ ಮಾಲಕರು ತಿಳಿಸಿದ್ದು ಆ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಭಾನುವಾರ ಬೆಳಗ್ಗೆ ಬಾರ್ ಹಿಂಭಾಗದಲ್ಲಿರುವ ಮಹಾದೇವ ಮಂಜ ಅವರಿಗೆ ಸೇರಿದ ನಿರ್ಜನ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ವರ್ಷದ ಹಿಂದೆ ಅವರ ಪುತ್ರನೊಬ್ಬ ಆಕಸ್ಮಿಕವಾಗಿ ಮೃತಪಟ್ಟಿದ್ದು, ಆ ಬಳಿಕ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಹೆಚ್ಚು ಹೆಚ್ಚು ಮದ್ಯ ಸೇವಿಸುತ್ತಿದ್ದರು ಎಂದು ಅವರ ಇನ್ನೊರ್ವ ಪುತ್ರ ರಾಜು ನಾಯ್ಕ ತಿಳಿಸಿದ್ದಾರೆ. ವಿಪರೀತ ಮದ್ಯ ಸೇವನೆ ಚಟಹೊಂದಿರುವ ನಾರಾಯಣ ನಾಯ್ಕ್ ಹೃದಯಾಘಾತದಿಂದ ಅಥವಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೂರು ವಜ್ರದುಂಬಿ ಗೆಳೆಯರ ಬಳಗದ ನೇತೃತ್ವದಲ್ಲಿ ಹೆಗ್ಡೆ ಮತ್ತು ಹೆಗ್ಡೆ ಮೆಡಿಕಲ್ ಕಂಪನಿಯ ಸಹಭಾಗಿತ್ವದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಚರ್ಮರೋಗ ತಜ್ಞರ ತಂಡದವರಿಂದ ಮೂರನೇ ವರ್ಷದ ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು. ಖ್ಯಾತ ಚರ್ಮರೋಗ ತಜ್ಞ ಡಾ. ಸತೀಶ್ ಪೈ ಶಿಬಿರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ನುಡಿನಮನ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿತ್ತು. ಜಿಪಂ ಸದಸ್ಯೆ ಗೌರಿ ದೇವಾಡಿಗ, ಡಾ. ಸುಧೀರ್ ನಾಯಕ್, ಡಾ. ಅನುರಾಧಾ ಜಿಂದಾಲ್, ಮೆಡಿಕಲ್ ಕಂಪೆನಿಯ ರಿಜನಲ್ ಮ್ಯಾನೇಜರ್ ದಿನೇಶ್ ಕುಮಾರ್, ಉದ್ಯಮಿ ಬಿ. ಜಿ. ಲಕ್ಷ್ಮೀಕಾಂತ್ ಬೆಸ್ಕೂರ್, ಬಳಗದ ಗೌರವ ಸಲಹೆಗಾರ ಸುಬ್ರಹ್ಮಣ್ಯ ಜಿ. ಉಪ್ಪುಂದ, ಉಪಾಧ್ಯಕ್ಷ ಮಂಜುನಾಥ ಜಡ್ಡಿನಮನೆ, ಸಂತೋಷ್ ಒಡೆಯರ್, ಸುರೇಂದ್ರ ಖಾರ್ವಿ, ರಾಘವೇಂದ್ರ ಬಿಜೂರು, ಸತೀಶ್, ಸುರೇಶ್ ಬೆಸ್ಕೂರ್ ಇದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬೆಳೆಯಬೇಕಾದರೆ ಅವನಿಗೆ ಎಳವೆಯಲ್ಲಿಯೇ ಕ್ರೀಡೆಗೆ ಸರಿಯಾಗಿ ಪ್ರೋತ್ಸಾಹದ ಅಗತ್ಯವಿದೆ. ಅಂತಹ ನಿರಂತರ ಪ್ರೋತ್ಸಾಹವನ್ನು ವಿದ್ಯಾರ್ಥಿಗಳಿಗೆ ನಮ್ಮ ಕುಂದಾಪುರ ಎಜುಕೇಶನ್ ಸೊಸೈಟಿ ಕಲ್ಪಿಸುತ್ತಿದೆ ಎಂದು ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಗಾಂಧಿ ಮೈದಾನದಲ್ಲಿ ಉ.ಜಿ.ಪಂ.ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ವಲಯ, ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಎಚ್.ಎಂ.ಎಂ ಅಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಕುಂದಾಪುರ ಇವರ ಆಶ್ರಯದಲ್ಲಿ ಸಂಪನ್ನಗೊಂಡ ವಲಯ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಕಿಶೋರ್ ಕುಮಾರ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ `ಆ್ಯಟ್ರೀಬ್ಯುಟ್ಸ್ ಆಫ್ ಆ್ಯಂಕರ್” ಎಂಬ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್ನಲ್ಲಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿನಿ, ಪ್ರಸ್ತುತ ನ್ಯೂಸ್ 18 ಕನ್ನಡ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿರುವ ಶಮೀರಾ ಬೆಳವಾಯಿ ಭಾಗವಹಿಸಿದರು. ವಿದ್ಯೂನ್ಮಾನ ಮಾದ್ಯಮಗಳಲ್ಲಿ ನಿರೂಪಕರಾಗಲೂ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಬೆಳಕು ಚೆಲ್ಲಿದರು. ನಿರೂಪಕರಾಗಲೂ ಅಂದ-ಚಂದ ಎಂದೂ ಪ್ರಮುಖ ಮಾನದಂಡವಲ್ಲ. ವಿಷಯ ಜ್ಞಾನ, ಪ್ರಸ್ತುತ ವಿದ್ಯಮಾನಗಳ ತಿಳುವಳಿಕೆ, ನಿರಂತರ ಓದು ಪಾತ್ರವಹಿಸುವ ಪ್ರಮುಖ ಕೌಶಲಗಳು ಎಂದರು. ನಿರೂಪಕರಾಗಲೂ ಬೇಕಾದ `ಸಿ’ ಸೂತ್ರವನ್ನು ತಿಳಿಸಿದ ಅವರು, ಕಾನ್ಫಿಡೆನ್ಸ್, ಕ್ಲಾರಿಟಿ, ಕಾನ್ಸಟ್ರೇಶನ್, ಕ್ಯೂರಿಯಾಸಿಟಿ, ಕಾಮನ್ಸೆನ್ಸ್ ಗುಣಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು. ನಿರೂಪಣೆಯ ಜೊತೆಯಲ್ಲಿ ಹಿನ್ನಲೆಧ್ವನಿಗೆ ಸಂಬಂದಿಸಿದಂತೆ ವಿವಿಧ ಪ್ರಕಾರಗಳ ಸ್ಟೋರಿಗಳಿಗೆ ಬೇಕಾಗುವ ಧ್ವನಿಏರಿಳಿತದ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು. ಹಾರ್ಡ್ ನ್ಯೂಸ್, ಸೋಪ್ಟ್ ನ್ಯೂಸ್, ಕ್ರೈಂ, ಸ್ಪೋಟ್ಸ್, ಸ್ಪಶೆಲ್ ಸ್ಟೋರಿಗಳ ಧ್ವನಿ ಏರಿಳಿತದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ…
