ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೆರಮನೆಯ ಯುವಕ-ಯುವತಿ ನಡುವೆ ಹುಟ್ಟಿದ ಪ್ರೀತಿಗೆ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಆಸರೆಯಾಗಿದ್ದು, ಸಾಂತ್ವಾನ ಕೇಂದ್ರದಲ್ಲಿ ವಿವಾಹ ಆಗುವ ಮೂಲಕ ದಾಂಪತ್ಯ ನವ ಜೀವನಕ್ಕೆ ಕಾಲಿಟ್ಟರು. ತಾಲೂಕಿನ ತ್ರಾಸಿ ಗ್ರಾಮದ ನಿವಾಸಿ ಮಣಿಕಂಠ ಎಂಬವರ ಪುತ್ರ ರಾಘವೇಂದ್ರ ಪೂಜಾರಿ (೨೯) ಹಾಗೂ ನೆರೆಮನೆ ನಿವಾಸಿ ಲಕ್ಷ್ಮಣ್ ಎಂಬವರ ಪುತ್ರಿ ವಸಂತಿ ಖಾರ್ವಿ (೨೪) ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಜೋಡಿ. ರಾಘವೇಂದ್ರ ಮೀನುಗಾರಿಕಾ ವೃತ್ತಿ ಮಾಡಿಕೊಂಡಿದ್ದು, ವಸಂತಿ ಕುಂದಾಪುರ ಪುಸ್ತಕ ಮಳಿಗೆಯಲ್ಲಿ ಕೆಲಸದಲ್ಲಿದ್ದರು. ಇಬ್ಬರೂ ಕಳೆದ ೨೦ ವರ್ಷದಿಂದ ಒಡನಾಡಿಗಳಾಗಿದ್ದು, ಎರಡು ವರ್ಷದಿಂದ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ಆರು ತಿಂಗಳ ಹಿಂದೆ ಇಬ್ಬರೂ ಮದುವೆ ನಿರ್ಧಾರಕ್ಕೆ ಬಂದಿದ್ದರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಎರಡೂ ಮನೆಯವರು ಮದುವೆ ವಿರೋಧಿಸಿದ್ದರು. ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಮದುವೆ ಮಾಡಿಸುವಂತೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಾಂತ್ವಾನ ಕೇಂದ್ರ ಅಧ್ಯಕ್ಷೆ ಇಬ್ಬರಿಗೂ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸಾರ್ವಜನಿಕ ಆಭಾರಿ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಗಳ ಸಹಕಾರದೊಂದಿಗೆ ನೂತನ ನಿರ್ಮಾಣದ ಓಲಗ ಮಂಟಪವನ್ನು ಧಾರ್ಮಿಕ ವಿಧಿಗಳ ಮೂಲಕ ಶ್ರೀದೇವರಿಗೆ ಅರ್ಪಿಸಲಾಯಿತು. ಈ ಪ್ರಯುಕ್ತ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇವಳದ ತಂತ್ರಿ ಕೆ. ಮಂಜುನಾಥ ಅಡಿಗ ಆಶೀರ್ವಚನ ನೀಡಿ, ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆಯೇ ಬಲ ನೀಡುತ್ತದೆ. ದೇವರ ಮೇಲೆ ನಿರಂತರವಾಗಿ ಭಕ್ತಿಯನ್ನಿಟ್ಟು ನಿತ್ಯ ನಿರಂತರ ಭಜನೆ ಆರಾಧನೆ ಮಾಡುವುದರಿಂದ ನಮ್ಮ ಜೀವನ ಪಾವನಗೊಳ್ಳಲು ಸಹಕಾರಿಯಾಗುತ್ತದೆ ನಮ್ಮ ಗುರು-ಹಿರಿಯರಿಂದ ಪರಂಪರಾನುಗತವಾಗಿ ಬಂದಿರುವ ಸಂಸ್ಕಾರವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ದೇವಾಲಯಗಳಲ್ಲಿ ಸಂಸ್ಕೃತಿ, ಸಮಾನತೆ, ಸಾಮರಸ್ಯ, ಸಭ್ಯತೆ ಉಳಿಯಬೇಕಾದರೆ ಧಾರ್ಮಿಕ ಆಚರಣೆಯಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದರು. ಮಾನವ ಶರೀರವೇ ಒಂದು ದೇಗುಲವಿದ್ದಂತೆ. ಆದರೆ ನಮ್ಮ ಕಾಲಿನಿಂದ ಶಿರದವರೆಗಿನ ನಿದ್ರಾವಸ್ಥೆಯಲ್ಲಿರುವ ಕುಂಡಲಿಶಕ್ತಿಗಳನ್ನು ಜಾಗೃತಗೊಳಿಸಲು ದೇವಸ್ಥಾನಕ್ಕೆ ಹೋಗಲೇಬೇಕು. ಅಲ್ಲದೇ ಯಾರಲ್ಲಿಯೂ ಹೇಳಿಕೊಳ್ಳಲಾಗದ ಕೆಲವು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತಿಹಾಸ ಪ್ರಸಿದ್ದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಒಂಬತ್ತು ದಿನಗಳ ಕಾಲ ನಡೆಯುವ ಶರನ್ನವರಾತ್ರಿ ಆಚರಣೆ ವಿದ್ಯುಕ್ತವಾಗಿ ಆರಂಭಗೊಂಡಿತು. ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ದೀಪ ಪ್ರಜ್ವಲಿಸಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸೇವಾ ಸಮಿತಿಯ ಸದಸ್ಯರಾದ ಬಿ. ಮಾಧವ ರಾವ್, ಶಿವರಾಮ ಪೂಜಾರಿ, ಶಂಕರ ಮೊಗವೀರ, ರವೀಂದ್ರ ಶ್ಯಾನುಭಾಗ್, ನಾರಾಯಣಪ್ಪ ದೇವಾಡಿಗ, ಶ್ರೀನಿವಾಸ್ ಕುಮಾರ್, ಅಣ್ಣಪ್ಪ ಪಾತ್ರಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೆ ಧಾರ್ಮಿಕ ವಿಧಿ ವಿಧಾನಗಳು, ಭಜನೆ ಇತ್ಯಾದಿ ನಡೆಯಲಿದೆ. ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ, ಚಂಡಿಕಾ ಹೋಮ, ದುರ್ಗಾಹೋಮ, ಅನ್ನಸಂತರ್ಪಣೆ, ರಂಗಪೂಜೆ, ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಒಂದು ದಿನದ ವಿಶೇಷ ಶಿಬಿರವು ನಾಯ್ಕನಕಟ್ಟೆ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಕಾರ್ಯದರ್ಶಿ ಮತ್ತು ರೋಟರಿ ಮಾಜಿ ಅಧ್ಯಕ್ಷ ಗೋವಿಂದ ಎಂ. ಇವರು ಕಾರ್ಯಕ್ರಮ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶ್ರಮದಾನದ ಮಹತ್ವ ಹಾಗೂ ಸೇವಾ ಮನೋಭಾವದ ಬಗ್ಗೆ ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು ೧೦೦ ಕ್ಕೂ ಮೀರಿ ಸ್ವಯಂಸೇವಕರು ಶ್ರಮದಾನದ ಮೂಲಕ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ ಮೇಳಿ ನೇತೃತ್ವದಲ್ಲಿ ಶಿಬಿರವನ್ನು ಆಯೋಜಿಸಿದ್ದು, ಯೋಜನಾಧಿಕಾರಿಗಳಾದ ರವಿಚಂದ್ರ ಮತ್ತು ನಾಗೇಶ್ ಸಂಯೋಜಿಸಿದರು. ವಾಣಿಜ್ಯ ಉಪನ್ಯಾಸಕ ಮಣಿಕಂಠ, ಕನ್ನಡ ಉಪನ್ಯಾಸಕ ಸತೀಶ್ ಎಂ. ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಲತಾ ಪೂಜಾರಿ ಉಪಸ್ಥತರಿದ್ದರು. ರಾಘವೇಂದ್ರ, ವಾಸು ಪೂಜಾರಿ, ಭಾಸ್ಕರ್ ಪೂಜಾರಿ, ಸಂತೋಷ ಹಾಗೂ ರಾಘವೇಂದ್ರ ಕಾರಂತ್ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೊಗೇರಿ ಗೋಪಾಲಕೃಷ್ಣ ಅಡಿಗರು ಬಹು ಅರ್ಥಗಳುಳ್ಳ ಕವಿತೆಗಳನ್ನು ರಚಿಸಿದ ಶ್ರೇಷ್ಠ ಕವಿ. ಓದುಗರ ಗ್ರಹಿಕೆಯ ಸಾಮರ್ಥ್ಯದ ಆಧಾರದ ಮೇಲೆ ಅವರ ಕವಿತೆಗಳು ವಿವಿಧ ತೆರನಾದ ಅರ್ಥವನ್ನು ನೀಡುತ್ತಿದ್ದವು ಎಂದು ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಹೇಳಿದರು. ಅವರು ಉಪ್ಪುಂದದ ಸುವಿಚಾರ ಬಳಗ ಮತ್ತು ಕುಂದ ಅಧ್ಯಯನ ಕೇಂದ್ರ ಸಿರಿಮೊಗೇರಿ ಸಮಷ್ಟಿ ವೇದಿಕೆಯ ಸಹಕಾರದೊಂದಿಗೆ ಗುರುವಾರ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದಿ ಸಪ್ತಾಹದ ಎರಡನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಡಿಗರು ತಮ್ಮ ಅನುಭವಕ್ಕೆ ನಿಲುಕದ್ದನ್ನು ಇರಬಹುದು ಎನ್ನುತ್ತಿದ್ದರೇ ಹೊರತು ಒಂದು ಪರಿಧಿಗೆ ಸೀಮಿತಗೊಳಿಸಿ ಎಲ್ಲವನ್ನೂ ಒಪ್ಪಿಕೊಂಡವರಲ್ಲ. ಆ ಕಾರಣಕ್ಕೆ ಅಡಿಗರು ಗತಿಸಿದ ಬಳಿಕವೂ ಅವರ ವಿಚಾರಧಾರೆ, ಕಥೆ ಕವಿತೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ ಎಂದರು. ಶಾಲೆಯ ಮುಖ್ಯೋಪಧ್ಯಾಯ ಮಂಜು ಕಾಳಾವರ ಮಾತನಾಡಿ ಅಡಿಗರನ್ನು ಓದಿ ಹಾಡಿದಷ್ಟೂ ಸುಸಂಸ್ಕೃತ ಸಮಾಜವನ್ನು ಕಟ್ಟುವ ನಾಗರಿಕ ಪ್ರಜ್ಞೆ ಬೆಳೆಯುತ್ತದೆ. ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪರಂಪರೆಯಿಂದ ಬಂದದ್ದೆಲ್ಲ ಶ್ರೇಷ್ಠ ಎನ್ನುವುದನ್ನು ಒಪ್ಪದೇ, ಒಳಿತು ಕೆಡುಕುಗಳನ್ನು ವಿಮರ್ಷಿಸಿ ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಳಿಸಿದ ಬಳಿಕವಷ್ಟೇ ಒಪ್ಪುತ್ತಿದ್ದ ವ್ಯಕ್ತಿತ್ವ ಕವಿ ಗೋಪಾಲಕೃಷ್ಣ ಅಡಿಗರದ್ದಾಗಿತ್ತು. ಕಾಲದ ವಾಸ್ತವಗಳನ್ನು ಅವರ ಕಾವ್ಯದ ಮೂಲಕವೂ ಕಟುಮಾತಿನಲ್ಲಿ ವಿಮರ್ಶಿಸಿದ್ದರು. ಹೇಳಬೇಕಿರುವುದನ್ನು ತೀಕ್ಷವಾಗಿ ಹೇಳುವ ಧೈರ್ಯ ಅವರಲ್ಲಿತ್ತು ಎಂದು ವಿಶ್ರಾಂತ ಪ್ರಾಂಶುಪಾಲ ವಿಮರ್ಶಕ, ಮುರಳೀಧರ ಉಪಾಧ್ಯ ಹಿರಿಯಡಕ ಹೇಳಿದರು. ಅವರು ಉಪ್ಪುಂದದ ಸುವಿಚಾರ ಬಳಗ ಮತ್ತು ಕುಂದ ಅಧ್ಯಯನ ಕೇಂದ್ರ ಸಿರಿಮೊಗೇರಿ ಸಮಷ್ಟಿ ವೇದಿಕೆಯ ಸಹಕಾರದೊಂದಿಗೆ ಗುರುವಾರ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದಿ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಯು. ಚಂದ್ರಶೇಖರ ಹೊಳ್ಳರು ಬರೆದ ‘ಅಡಿಗರ ವಿಶಿಷ್ಟತೆ-ಒಂದು ಅಧ್ಯಯನ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇತಿಹಾಸದ ವೈಭವೀಕರಣವನ್ನು ಗೇಲಿ ಮಾಡಿದ ಅಡಿಗರು ಪರಂಪರೆ ಮತ್ತು ಆಧುನಿಕತೆಯ ಸಂಘರ್ಷದ ಸಂಕೀರ್ಣ ಚಿತ್ರಗಳನ್ನು ತಮ್ಮ ಕಾವ್ಯದಲ್ಲಿ ನೀಡಿದರು. ‘ಚಲನವೇ ಬದುಕು-ನಿಶ್ಚಲವೇ ಮರಣ’ ಎನ್ನುವುದು ಅಡಿಗರ ಕಾಣ್ಕೆ ಎಂದು ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ ಆಶ್ರಯದಲ್ಲಿ ನಾವುಂದದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಬಾಲಕಿಯರ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಪೂಜಾರಿ ಪ್ರಶಸ್ತಿ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.21-30ರ ತನಕ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ.ದೇವಳವು ಸಂಪೂರ್ಣ ಹೊಸ ವಿನ್ಯಾಸಗಳಿಂದ ಕೂಡಿದ ಪುಷ್ಪಾಲಂಕಾರ ಹಾಗೂ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಸೆ.29ರ ಮಹಾನವಮಿಯಂದು ಬೆಳಿಗ್ಗೆ ಚಂಡಿಕಾಯಾಗ, ರಾತ್ರಿ 8:45ಕ್ಕೆ ರಥೋತ್ಸವ ನಡೆಯಲಿದೆ. ಸೆ.30ರ ವಿಜಯದಶಮಿಯಂದು ಬೆಳಿಗ್ಗೆ 4ರಿಂದ ವಿದ್ಯಾರಂಭ, ಅಪರಾಹ್ನ ನವಾನ್ನಪ್ರಾಶನ ಸಂಜೆ ೫.೩೦ಕ್ಕೆ ಶ್ರೀ ಮೂಕಾಂಬಿಕೆಯ ವಿಜಯೋತ್ಸವ ಜರುಗಲಿದೆ. ಪ್ರತಿದಿನ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಂದಾಪುರ ಹಾಗೂ ಬೈಂದೂರಿನಿಂದ ಕೊಲ್ಲೂರಿಗೆ ಬರುವ ಭಕ್ತರಿಗಾಗಿ ವಿಶೇಷ ಸರಕಾರಿ ಬಸ್ಸುಗಳ ಸೌಲಭ್ಯ, ದೇವಳದ ಸೌಪರ್ಣಿಕಾ ಮತ್ತು ಕಾಶೀ ಸ್ನಾನ ಘಟ್ಟದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಗಳ ನಿಯೋಜನೆ, ಸಭಾಭವನದಲ್ಲಿ ಹೆಚ್ಚುವರಿ ಊಟದ ವ್ಯವಸ್ಥೆ ಜೊತೆಗೆ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಸಿಸಿ ಕ್ಯಾಮೆರಾ ಮೇಲೆ ಹದ್ದಿನ ಕಣ್ಗಾವಲು ಇಂತಹ ಹಲವಾರು ವಿಚಾರಗಳ ಬಗ್ಗೆ ಈಗಾಗಲೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅಪರೂಪದ ಕವಿ ಗೋಪಾಲಕೃಷ್ಣ ಅಡಿಗರು, ನವೋದಯದ ಅಲೆಯಲ್ಲಿ ತೇಲುತ್ತಿದ್ದ ಅಂದಿನ ಸಾಹಿತ್ಯ ಲೋಕದಲ್ಲಿ ನವ್ಯವೆಂಬ ಮಿಂಚನ್ನು ಹರಿಸಿದವರು. ರಮ್ಯ ಸಾಹಿತ್ಯದಿಂದ ವಾಸ್ತವದ ತಳಹದಿಯಲ್ಲಿ ಕೃತಿ ರಚಿಸುವ ಮನೋಭೂಮಿಕೆಯೆಡೆಗೆ ಸಾಹಿತಿಗಳನ್ನು ಸೆಳದದ್ದು ಅವರ ಹೆಚ್ಚುಗಾರಿಕೆಯೇ ಸರಿ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಇವರ ಸಹಯೋಗದಲ್ಲಿ ನಡೆದ ಅಡಿಗರ ಜನ್ಮಶತಾಬ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹುಟ್ಟಿ, ಶಿಕ್ಷಣ ಪಡೆದು ಇಂಗ್ಲೀಷ್ ಉಪನ್ಯಾಸಕರಾದರೂ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಅಡಿಗರು ಇಂದಿಗೂ ಪ್ರಸ್ತುತ. ಅವರ ತತ್ವ, ಸಿದ್ಧಾಂತಗಳು ಅನುಕರಣೀಯವಾದುವುಗಳು. ಪ್ರಭುತ್ವಕ್ಕೆ ಸೆಡ್ಡು ಹೊಡೆದು ನಿಂತು, ವ್ಯವಸ್ಥೆಯ ನ್ಯೂನ್ಯತೆಗಳನ್ನು ಎತ್ತಿ ತೋರಿಸುವಂತಹ ಧೈರ್ಯ ಅವರಿಗಿತ್ತು. ಅಡಿಗರ ಒಂದೊಂದು ಕವನವು ಕ್ರಾಂತಿಗೀತೆಯಂತಿವೆ ಎಂದರು. ಉಪ್ಪುಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯನ್ನು ಮಾದರಿಯಾಗಿ ಮಾಡಲು ತೀರ್ಮಾನಿಸಿದ್ದು ಅದರ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆ.೩೧ರಂದು ವಂಡ್ಸೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ವಂಡ್ಸೆ ಪೇಟೆ ಜನವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ವಚ್ಚತೆಯ ಮಹತ್ವ, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ(ಎಸ್.ಎಲ್.ಆರ್.ಎಂ) ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯರಾದ ಗುಂಡು ಪೂಜಾರಿ, ಉದಯ ಕೆ.ನಾಯ್ಕ, ಸಿಂಗಾರಿ, ಎಸ್.ಎಲ್.ಆರ್.ಎಂ ತರಬೇತಿ ಪಡೆದ ಮೇಲ್ವಿಚಾರಕ ಮಹಮ್ಮದ್ ರಫೀಕ್ ಸಾಹೇಬ್, ಗೋವರ್ಧನ ಜೋಗಿ, ಅಂಬಿಕಾ, ಅನುಸೂಯ, ಸುಧಾಕರ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಂಕರ ಆಚಾರ್ಯ, ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಸೇವಾ ಪ್ರತಿನಿಧಿ ಲಾಲಿ ಸೋಜನ್, ಒಕ್ಕೂಟದ ಅಧ್ಯಕ್ಷೆ ಸಂಜೀವಿ, ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಪದಾಧಿಕಾರಿ ಜ್ಯೋತಿ…
