ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ವತಿಯಿಂದ ತ್ರಾಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಂಕಣಿ ಖಾರ್ವಿ ಸಭಾ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ೧೦ ಲಕ್ಷ ರೂ.ಗಳ ಚೆಕ್ನ್ನು ಹಸ್ತಾಂತರಿಸಲಾಯಿತು. ಶುಕ್ರವಾರ ತ್ರಾಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು ೮ ಕೋಟಿ ರೂ. ವೆಚ್ಚದ ಕೊಂಕಣಿ ಖಾರ್ವಿ ಸಭಾ ಭವನವನ್ನು ವೀಕ್ಷಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಕಛೇರಿಯ ನಿರ್ದೇಶಕ ಮಹಾವೀರ ಆಜ್ರಿ ಅವರು ಬಳಿಕ ನಡೆದ ಸರಳ ಸಮಾರಂಭದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಅಧ್ಯಕ್ಷ ಕೆ.ಬಿ.ಖಾರ್ವಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೧೦ ಲಕ್ಷ ರೂ.ಗಳ ಚೆಕ್ನ್ನು ಹಸ್ತಾಂತರಿಸಿದರು. ಇದೇ ಸಂದರ್ಭ ನಿರ್ದೇಶಕ ಮಹಾವೀರ ಆಜ್ರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ ಸತತ ನಾಲ್ಕು ವರ್ಷಗಳಿಂದ ನಾಗೂರು ಕಲಾಪ್ರಿಯ ಬಳಗ ಪರಿಸರದ ಕಲಾಸಕ್ತರ ಮನಮುಟ್ಟುವಲ್ಲಿ ಯಶಸ್ಸು ಕಂಡಿರುವುದು ಕಲಾಕೃಷಿಯ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದು ಕಿರಿಮಂಜೇಶ್ವರ-ನಾಗೂರು ಅಗಸ್ತೇಶ್ವರ ಆಟೋರಿಕ್ಷಾ, ಟ್ಯಾಕ್ಷಿ ಚಾಲಕ, ಮಾಲಕ ಸಂಘದ ಅಧ್ಯಕ್ಷ ಪ್ರವೀಣ್ಚಂದ್ರ ಶೆಟ್ಟಿ ಹೇಳಿದರು. ನಾಗೂರು ಒಡೆಯರಮಠ ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ನಡೆದ ಬಡಗುತಿಟ್ಟಿನ ಸಾಂಪ್ರದಾಯಿಕಾ ಯಕ್ಷಗಾನ ’ಯಕ್ಷಾಮೃತ-೪’ರ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ಗಣೇಶ ಹೆಬ್ಬಾರ್ ಇವರನ್ನು ಸನ್ಮಾನಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ನಾವೆಲ್ಲರೂ ನೆಮ್ಮದಿಯ ಜೀವನ ಕಳೆದುಕೊಳ್ಳುತ್ತಿದ್ದೇವೆ. ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿಯಾಗಿದ್ದು, ಆ ನಿಟ್ಟಿನಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ನಗರಿ ಎಂದು ಹೆಸರುಗಳಿಸಿದ ಕಿರಿಮಂಜೇಶ್ವರ-ನಾಗೂರು ಪ್ರದೇಶದ ಜನತೆಗೆ ಕಲಾಪ್ರಿಯ ಬಳಗವು ಪ್ರತೀವರ್ಷ ತನ್ನ ವಿಭಿನ್ನ ಶೈಲಿಯ ಕಾರ್ಯಕ್ರಮಗಳಿಂದ ಮನರಂಜನೆ ವಾತಾವರಣವನ್ನು ನಿರ್ಮಾಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಜಡ್ಕಲ್: ಗ್ರಾಪಂ ವ್ಯಾಪ್ತಿಯ ಸೆಳ್ಕೋಡು ಸಹಿಪ್ರಾ ಶಾಲೆಯಲ್ಲಿ ಭಾನುವಾರ ಹಳೆವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ಕೆ. ಗೋಪಾಲ ಪೂಜಾರಿ ಹಳೆವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು. ಶಾಲೆಯ ಹಳೆವಿದ್ಯಾರ್ಥಿ ಉದ್ಯಮಿ ಸದಾಶಿವ ನಾಯ್ಕ್ ಲಾಂಛನ ಬಿಡುಗಡೆಗೊಳಿಸಿದರು. ಈ ಸಂದರ್ಭ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸಂಘದ ವತಿಯಿಂದ ಶಾಲೆಗೆ ಕಂಪ್ಯೂಟರ್ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಮಹಾಬಲ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ಎಕ್ಷಿಸ್ ಬ್ಯಾಂಕಿನ ಸಹಾಯಕ ಪ್ರಬಂಧಕ ಲಿಜೋ ಮ್ಯಾಥ್ಯೂ, ಸುವರ್ಣ ವಿದ್ಯಾನಿಧಿ ಅಧ್ಯಕ್ಷ ಸುರೇಂದ್ರ ನಾಯ್ಕ್ ನೇತ್ರಾಡಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ್, ಉಪಾಧ್ಯಕ್ಷ ರಘುರಾಮ ಪೂಜಾರಿ, ಬಿಆರ್ಪಿ ನಾಗರಾಜ ಪುತ್ರನ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಭಾಸ್ಕರ್ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಮೇರಿ ಜೋಸೆಫ್ ವಂದಿಸಿದರು. ಸತೀಶ್ ದೇವಾಡಿಗ ನಿರೂಪಿಸಿದರು. ಶಿಕ್ಷಕಿಯರಾದ ಶೈಲಜಾ, ಸುನಿತಾ, ಜಾನಕಿ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರ ಗಾನಕ್ಕೆ ವಿದ್ವಾನ್ ಶ್ರೀಪತಿ ಉಪಾಧ್ಯಾಯ ಕುಂಬಾಶಿಯವರು ಆಖ್ಯಾನ ನೀಡುವುದರ ಮೂಲಕ ಹರಿಭಕ್ತಿಸಾರದ ಶ್ರೀ ನರಸಿಂಹಾವತಾರದ ಮಹಾತ್ಮೆಯನ್ನು ನೂರಾರು ಮಂದಿ ಭಕ್ತರಿಗೆ ಉಣಬಡಿಸಿದರು. ಇವರಿಗೆ ಹಿಮ್ಮೇಳದಲ್ಲಿ ಶ್ರೀ ಮಾಧವ ಆಚಾರ್ಯ ಉಡುಪಿಯವರು ತಬಲಾ ಹಾಗೂ ಶ್ರೀ ವಿನಾಯಕ ಪ್ರಭು ಉಪ್ಪುಂದ ಹಾರ್ಮೋನಿಯಮ್ ನುಡಿಸಿ ಸಹಕರಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕರಾದ ಬಿ. ರಾಮಕೃಷ್ಣ ಶೇರೆಗಾರ ಮತ್ತು ಶಾರದಾ ದಂಪತಿಗಳು ರಾಮಕ್ಷತ್ರಿಯ ಸಮಾಜ ಬೈಂದೂರಿನ ಅಧ್ಯಕ್ಷರಾದ ಬಿ. ಗೋಪಾಲ ನಾಯಕರೊಂದಿಗೆ ಕಲಾವಿದರಿಗೆ ಶಾಲು ಹೊದಿಸಿ ಅಭಿನಂದಿಸಿದರು. ವಿ. ಎಚ್ ನಾಯಕ್ ಸ್ವಾಗತಿಸಿ, ಆನಂದ ಮದ್ದೋಡಿ ಧನ್ಯವಾದಗೈದರು. ಕೇಶವ ನಾಯಕ್ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ), ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಹಾಗೂ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯು ನಾಗರಾಜ್ ಭಟ್, ಮಲ್ಪೆ ಇವರ ಪ್ರಾಯೋಜಕತ್ವದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗಡಿನಾಡ ತಿರುಗಾಟ ಶಾಲೆಯೆಡೆಗೆ ಗೊಂಬೆ ನಡಿಗೆ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಗೊಂಬೆಯಾಟ ಟ್ರಸ್ಟ್ ಅಸ್ತಿತ್ವ ಕಂಡು 22 ವರ್ಷಗಳ ಸವಿನೆನಪಲ್ಲಿ ಸೆಪ್ಟೆಂಬರ್ 1ರಿಂದ 15ರವರೆಗೆ ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು ತಾಲೂಕಿನ ಒಟ್ಟು 22 ಶಾಲೆಗಳಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಲಿದೆ. ಕರಾವಳಿ ತೀರದ 350 ವರ್ಷಗಳ 6 ನೇ ತಲಾಂತರದ ವಿಶಿಷ್ಟ, ವಿಶೇಷ ಕಲಾ ಪರಂಪರೆಯ ಉಳಿವಿಗಾಗಿ ಹಗಲಿರುಳೆನ್ನದೆ ಹೋರಾಟ ಮಾಡುತ್ತಾ ಬಂದಿರುವ ಸಂಸ್ಥೆಯು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡದಲ್ಲಿ ಕಳೆದ ೩ ವರ್ಷಗಳಿಂದ ನಿರಂತರ ತಿಂಗಳ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಂಡು ಬರುತ್ತಿದೆ. ಸರಕಾರದ ಯಾವುದೇ ಧನ ಸಹಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯುವಶಕ್ತಿ ಮನಸ್ಸು ಮಾಡಿದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಛಲ ಯುವಕರಲ್ಲಿದೆ. ಆದರೆ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ, ನಿರ್ದಿಷ್ಟ ಗುರಿಯಡೆಗೆ ಅವರ ಮನಸ್ಸುನ್ನು ಕೇಂದ್ರೀಕರಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯಬೇಕಿದೆ. ಹಾಗಿದ್ದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹೇಳಿದರು. ಅವರು ಬೈಂದೂರು ಎಸ್ಆರ್ಆರ್ ಕಲಾಮಂದಿರದಲ್ಲಿ ಜರುಗಿದ ನೆಹರು ಯುವ ಕೇಂದ್ರ ಉಡುಪಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕಳವಾಡಿ ಮಾರಿಕಾಂಬ ಯುತ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜರುಗಿದ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದಲ್ಲಿ ಭ್ರಷ್ಟಾಚಾರವಿದೆ ಎಂದು ಯುವಕರು ದೂರವೇ ಉಳಿಯುತ್ತಾರೆ. ಆದರೆ ನಾವೇ ದೂರ ಉಳಿದರೆ ರಾಜಕೀಯವನ್ನು ಸರಿದಾರಿಯಲ್ಲಿ ಕೊಂಡ್ಯೊಯ್ಯವವರ್ಯಾರು. ಬದಲಾವಣೆಗೆ ಯುವಕರೇ ಮುನ್ನುಡಿ ಬರೆಯದೇ ಏನು ಸಾಧ್ಯವಿಲ್ಲ. ಚುನಾವಣೆ ಬಂದಾಗ ಹಣದ ಆಮಿಷಕ್ಕೆ ಬಲಿಯಾಗದೆ ಸಮರ್ಥರನ್ನು ಆರಿಸುವ ಬದ್ಧತೆಯನ್ನು ಪ್ರತಿಯೊಬ್ಬರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರು-ಕೊಡೇರಿ ರಸ್ತೆಯ ಅಂಚಿನಲ್ಲಿರುವ ಕಟ್ಟಡಕ್ಕೆ ಹೆದ್ದಾರಿ ಬದಿಯಲ್ಲಿದ್ದ ಬಾರ್ ಸ್ಥಳಾಂತರಗೊಂಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಸಾರ್ವಜನಿಕರ ಪ್ರತಿಭಟನೆ ಮುಂದುವರಿಯಿತು. ನೂರಾರು ಪುರುಷರು ಹಾಗೂ ಮಹಿಳೆಯರು ಸೇರಿ ಕಟ್ಟಡದ ಎದುರು ಬಾರ್ಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಧಿಕ್ಕಾರ್ ಕೂಗುತ್ತಾ ಪ್ರತಿಭಟನೆ ಮಾಡಿದರು. ಬುಧವಾರ ಸ್ಥಳೀಯ ಗ್ರಾಪಂ ಅನುಮತಿ ನೀಡಿಲ್ಲ ಎಂಬ ಪತ್ರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಬಾರ್ಗೆ ತಮ್ಮ ವಿರೋಧದ ಬಗ್ಗೆ ಸಕಾರಣವನ್ನು ವಿವರಿಸಿದ್ದರು. ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅಬಕಾರಿ ಅಧಿಕಾರಿಗಳನ್ನು ಹಾಗೂ ಪೋಲಿಸರನ್ನು ಸಂಪರ್ಕಿಸಿ ಜನರ ವಿರೋಧದ ಕಾರಣಗಳ ಸತ್ಯಾಸತ್ಯತೆ ಪರಿಶೀಲಿಸುವ ತನಕ ಬಾರ್ ಮುಚ್ಚಬೇಕೆಂದು ನಿರ್ದೇಶಿಸಿದ್ದು, ಅದರಂತೆ ಬಾರ್ ಕಟ್ಟಡಕ್ಕೆ ಬೀಗ ಜಡಿಯಲಾಯಿತು. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆದುಕೊಂಡ ಜನರು ಗುರುವಾರ ಬೆಳಿಗ್ಗೆ ಬಾರ್ ಮುಂದೆ ಮತ್ತೆ ಜಮಾಯಿಸಿದರು. ನಾಗೂರು ಪೇಟೆಯಲ್ಲಿಯೂ ಕೂಡಾ ವ್ಯಾಪರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿ ನೀಡಿದ್ದ ಭರವಸೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಶಿರೂರು, ಗೋಳಿಹೊಳೆ, ನಾವುಂದ ಗಂಗೊಳ್ಳಿ ಮುಂತಾದ ಭಾಗಗಳಲ್ಲಿ ಅಕ್ರಮ ಗೋಸಾಟ, ಗೋಕಳ್ಳತನ ಹಾಗೂ ಮನೆಗಳನ್ನೇ ಕಸಾಯಿಖಾನೆಗಳನ್ನಾಗಿಸಿಕೊಂಡು ಗೋ ಮಾಂಸ ದಂದೆಯನ್ನು ನಿರಾಳವಾಗಿ ನಡೆಸುತ್ತಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡ ಆಗ್ರಹಿಸಿದೆ. ಕೊಟ್ಟಿಗೆಯಲ್ಲಿದ್ದ ಹಾಗೂ ಮೇಯಲು ಬಿಟ್ಟ ದನಗಳನ್ನು ಕದ್ದು, ಕತ್ತರಿಸಿ ಗೋಮಾಂಸ ಭಕ್ಷಕರಿಗೆ ಹಂಚುವ ಜಾಲ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದೆ. ಇತ್ತಿಚಿಗೆ ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಐದು ದನವನ್ನು ಕದ್ದೊಯ್ದು ಒಂದು ಕರುವನ್ನೂ ಕೊಂದು ಹೋಗಿದ್ದಾರೆ. ದಿನದಿಂದ ದಿನಕ್ಕೆ ಗೋಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಇಂತಹ ಹೀನ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಶೀಘ್ರವೇ ತನಿಖೆ ಕೈಗೊಂಡು ಗೋಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ತಾಲೂಕಿನಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿಂದೂತ್ವ ಹಾಗೂ ಹಿಂದೂತ್ವವಾದಿಗಳನ್ನು ನಿರಂತರವಾಗಿ ದಮನಿಸುವ ಕಾರ್ಯ ರಾಜಕೀಯ ಶಕ್ತಿ ಹಾಗೂ ಬುದ್ಧಿಜೀವಿಗಳಿಂದಾಗುತ್ತಿದೆ. ಹಿಂದೂ ಸಮಾಜದ ಅಸ್ಮಿತೆಯನ್ನು ಅಲುಗಾಡಿಸುವ ಆಂತರಿಕ ದಾಳಿ ಹಾಗೂ ದೇಶದ ಸುಸ್ಥಿರ ಪ್ರಗತಿಗೆ ತೊಡಕನ್ನುಂಟುಮಾಡುವ ಬಾಹ್ಯ ದಾಳಿಗಳು ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಎಲ್ಲಾ ಬಗೆಯ ದಾಳಿಯನ್ನೂ ಸಮರ್ಥವಾಗಿ ಎದುರಿಸಲು ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕರ್ನಾಟಕ ಪ್ರಾಂತದ ಸಹಪ್ರಾಂತ ಸಂಪರ್ಕ ಪ್ರಮುಖ್ ಪ್ರಕಾಶ್ ಪಿ. ಎಸ್ ಹೇಳಿದರು. ಅವರು ಯಡ್ತರೆ ಜೆಎನ್ಆರ್ ಕಲಾಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ಜರುಗಿದ ಬೈಂದೂರು ತಾಲೂಕಿನ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಧರ್ಮ ಜಾಗರಣೆ, ಸಾಮರಸ್ಯ, ಗ್ರಾಮ ವಿಕಾಸ, ಕುಟುಂಬ ಪ್ರಭೋದನೆಯಂತಹ ಅಂಶಗಳನ್ನು ಪ್ರತಿ ಗ್ರಾಮದಲ್ಲಿಯೂ ಹಿಂದೂಪರ ಕಾರ್ಯಕರ್ತರು ಅಳವಡಿಸಿಕೊಂಡು ಹಿಂದೂ ಧರ್ಮಿಯರನ್ನು ಸಂಘಟಿಸಿವುದಲ್ಲದೇ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ನೆರೆಯ ವೈರಿ ರಾಷ್ಟ್ರ ಚೀನಾ ದೇಶದ ಮೇಲೆ ನೇರವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ದೇವಳದ ಆಡಳಿತ ಧರ್ಮದರ್ಶಿ ಹೆಚ್.ರಾಮಚಂದ್ರ ಭಟ್ ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರದಾನ ಅರ್ಚಕ ಬಾಲಚಂದ್ರ ಭಟ್, ಬಿಜೆಪಿ ಮುಖಂಡ ಸುಕುಮಾರ್ ಶೆಟ್ಟಿ, ಉದ್ಯಮಿ ಅಶೋಕ ರೈ ಮಂಗಳೂರು, ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಹಟ್ಟಿಯಂಗಡಿ ಗ್ರಾ. ಪಂ. ಅಧ್ಯಕ್ಷ ರಾಜೀವ ಶೆಟ್ಟಿ, ಕರುಣಾ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
