ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮದ ರಸ್ತೆ ಹಾಗೂ ವಾರ್ಡ್‌ನ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿರುವ ಬಗ್ಗೆ ಆಕ್ರೋಶಗೊಂಡ ಮತದಾರರು ಲೋಕಸಭಾ ಉಪ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬಿಜೂರು ಗ್ರಾಮ ಪಂಚಾಯತ್‌ನ ೪ನೇ ವಾರ್ಡ್‌ನ ಗ್ರಾಮಸ್ಥರು ರವಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ರಾ.66ರಿಂದ ಬಿಜೂರು ಕಳಿಸಾಲ್ ಮೂಲಕ ೪ನೇ ವಾರ್ಡ್‌ನ ಶೆಟ್ರಕೇರಿಗೆ ಹೋಗುವ ರಸ್ತೆಯನ್ನು ೨೦ವರ್ಷಗಳಿಂದ ಡಾಮರು ಹಾಕಲಿಲ್ಲ, ಹಿಂದೆ ಹಾಕಿರುವ ಜಲ್ಲಿಕಲ್ಲುಗಳು ಕಿತ್ತುಹೋಗಿದ್ದು ಸಂಚರಿಸಲು ಜನರಿಗೆ ತೊಂದರೆ ಆಗುತ್ತಿದ್ದರು ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ರಸ್ತೆಗೆ ಬಿದಿ ದೀಪ ಅಳವಡಿಗೆ, ಸೂಕ್ತ ಚರಂಡಿ ವ್ಯವಸ್ಥೆ, ಹೈಗುಳಿ ಬನದ ಹತ್ತಿರ ಅಂಗನವಾಡಿ ಕೇಂದ್ರ ಬಳಿ ಶಿಥಿಲಗೊಂಡಿರುವ ನೀರಿನ ಟ್ಯಾಕ್ ತೆರವುಗೊಳಿಸದೇ ಹಾಗೆಯೇ ಉಳಿದಿದೆ. ಉಚಿತವಾಗಿ ಸಿಗುವ ಅಕ್ಕಿ ತರಲು ಸುಮಾರು ೨೦೦ ರೂ.ಖರ್ಚ ಮಾಡಬೇಕಿದ್ದು, ಇದಕ್ಕೆ ಪರಿಹಾರ ಸೇರಿದಂತೆ ವಾರ್ಡ್‌ನ ಅಭಿವೃದ್ಧಿಗೆ ಇದುವರೆಗೂ ಜನಪ್ರತಿನಿಧಿಗಳಿಂದ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಯಶಸ್ಸು ಎನ್ನುವುದು ನಾವು ಏನನ್ನು ಹೊಂದಿರುತ್ತೇವೆ ಎನ್ನುವುದನ್ನು ಅವಲಂಬಿಸಿರುವುದಿಲ್ಲ ಬದಲಾಗಿ ನಾವು ಹೇಗೆ ಬದುಕುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ನಾವು ಜೀವನದಲ್ಲಿ ಏನನ್ನಾದರು ಪಡೆಯುವ ಪ್ರಯತ್ನದಲ್ಲಿ ಜೀವಿಸುವುದನ್ನು ಮರೆಯಬಾರದು’ ಎಂದು ಅಂತರಾಷ್ಟ್ರೀಯ ಖ್ಯಾತಿಯ ಜೀವನಕೌಶಲ್ಯ ಗುರು ಗೌರ್ ಗೋಪಾಲ್ ದಾಸ್ ಹೇಳಿದರು. ಆಳ್ವಾಸ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ‍್ಸ್ ಕ್ಲಬ್-ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯಶಸ್ಸಿನ ರಹಸ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಯಶಸ್ಸಿನ ವ್ಯಾಖ್ಯಾನವು ಯಾವಾಗಲೂ ಬದಲಾಗುತ್ತಾ ಇರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಯಶಸ್ಸಿನ ವ್ಯಾಖ್ಯಾನವು ವಿಭಿನ್ನವಾಗಿರುತ್ತದೆ. ನಮ್ಮ ಪ್ರತಿಭೆ, ಸಾಮರ್ಥ್ಯ, ಕೌಶಲ್ಯ, ವ್ಯಕ್ತಿತ್ವವು ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದಿಲ್ಲ ಬದಲಾಗಿ ನಮ್ಮ ಮನೋಭಾವ, ಯೋಚನಾ ಲಹರಿಗಳು ನಮ್ಮನ್ನು ಯಶಸ್ಸಿನೆಡೆಗೆ ಮುನ್ನಡೆಸುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಇತರರ ಜೀವನದ ಬಗ್ಗೆ ಕುತೂಹಲಿಗಳಾಗಿರುವುದಿಲ್ಲ, ಬದಲಾಗಿ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಂಬುಲೆನ್ಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟದ ಮಣೂರಿನಲ್ಲಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಉತ್ತರಕನ್ನಡ ಮೂಲದವರು ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಮೂಲದ ಉಲ್ಲಾಸ್ ತಳೇಕರ್ ಅವರಿಗೆ ಅನಾರೋಗ್ಯವಿದ್ದ ಕಾರಣ, ಉಲ್ಲಾಸ್ ಜೊತೆ ಕುಟುಂಬಸ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಕೋಟ ಮಣೂರು ಸಮೀಪ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಅನ್ನು ಹಾರಿ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದೆ. ಆ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಆಂಬ್ಯುಲೆನ್ಸ್‌ಗೆ ಢಿಕ್ಕಿಯಾಗಿ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಾಧನಾ ಉಲ್ಲಾಸ್ ತಳೇಕರ್ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಮೂರು ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಕೋಟ ಪೊಲೀಸರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನನ್ನ ಮುಖವನ್ನೇ ನೊಡಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಹಗುರವಾಗಿ ಮಾತನಾಡಿದ್ದಾರಂತೆ. ಮುಖವನ್ನೇ ನೋಡದವರನ್ನು ಎರಡು ಮೂರು ಭಾರಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ರಾ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ಧರಾಮಯ್ಯರ ಜೊತೆ ಏಕವಚನದಲ್ಲಿ ಮಾತನಾಡುವಷ್ಟು ನನಗೆ ಅವರ ಜೊತೆ ಸಲಿಗೆ ಇಲ್ಲ. ಸಲಿಗೆ ಇದ್ದವರಲ್ಲಿ ಅವರು ಮಾತನಾಡಲಿ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇದು ಶೋಭೆಯಲ್ಲ. ಹಲವಾರು ಬಾರಿ ನಾನು ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ರು ನಾನು ಸೇರುವುದಿಲ್ಲ ಅಂತ ನೇರವಾಗಿ ಹೇಳಿದ್ದೆ. ನಾನು ಯಾರು ಅಂತ ಗೊತ್ತಿಲ್ಲದೆ ಅವರು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾದ್ರಾ? ನನ್ನ ವ್ಯಕ್ತಿತ್ವ ಗೊತ್ತಿಲ್ಲದೆ ಏನೂಂತ ಪಕ್ಷಕ್ಕೆ ಸೇರಿಸಲು ಮುಂದಾಗಿದ್ದರು ಸೊರಕೆ, ಪ್ರಮೋದ್ ಮಧ್ವರಾಜ್ , ಅಭಯಚಂದ್ರ ಜೈನ್ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದರು. ನಾನು ಯಾರು ಅಂತ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡಿದ್ರಾ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ನಾನು ರಾಜಕೀಯವಾಗಿಯೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು, ರಾಷ್ಟ್ರೀಯತೆ, ಭದ್ರತೆ, ಹಾಗೂ ಆಡಳಿತಾತ್ಮಕ ವಿಚಾರದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಇಟ್ಟುಕೊಂಡು ಈ ಭಾರಿಯ ಉಪಚುನಾವಣೆಯನ್ನು ಎದುರಿಸುತ್ತೇವೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶುಕ್ರವಾರ ಬೈಂದೂರಿನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಟ್ಟಿ, ಬಂದರು, ರಸ್ತೆ ಸೇರಿದಂತೆ ಲೋಕಸಭಾ ಸದಸ್ಯರ ಮೂಲಕ ಹತ್ತಾರು ಅಭಿವೃದ್ಧಿ ಕೆಲಸಗಳಾಗಿವೆ. ಈ ಭಾರಿಯೂ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರನ್ನು ಜನರು ಬೆಂಬಲಿಸಲಿದ್ದು ಗೆಲುವು ನಿಶ್ಚಿತ ಎಂದರು. ಕಾಂಗ್ರೆಸ್ ಪಕ್ಷಕ್ಕೆ ತನ್ನ ಚಿಹ್ನೆಯನ್ನೇ ಅಡವಿಡುವ ದುಸ್ಥಿತಿ ಬಂದಿರುವುದು ವಿಷಾದನೀಯ. ಈ ಬೆಳವಣಿಗೆ ಕೈ ಚಿಹ್ನೆಗೆ ಮತ ಹಾಕುವ ಜನಸಾಮಾನ್ಯರಿಗೆ ಆತಂಕ ತಂದೊಡ್ಡಿದೆ. ಜೆಡಿಎಸ್ ಜತೆಗೆ ಬಿಜೆಪಿಯೂ ೨೦-೨೦ ಮ್ಯಾಚ್ ಆಡಿತ್ತು. ಆದರೆ ಕೊನೆಗೆ ಜೆಡಿಎಸ್ ಏನು ಮಾಡಿತು ಎಂಬುದು ರಾಜ್ಯದ ಜನತೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರ್ಜುನ್ ಸರ್ಜಾ ಅವರೊಂದಿಗೆ ಸಿನೆಮಾ ಮಾಡಿ ೨೨ ವರ್ಷವಾಯಿತು. ಅವರನ್ನು ಅಂದಿನಿಂದ ನೋಡಿಕೊಂಡೆ ಬಂದಿದ್ದೇನೆ. ಅವರ ನಡವಳಿಕೆಯ ಬಗ್ಗೆ, ಅವರ ಕುಟುಂಬದ ಬಗ್ಗೆಯೂ ವೈಯಕ್ತಿಕವಾಗಿ ಪರಿಚಯವಿದೆ. ಅವರ ಮಡದಿ ಹಾಗೂ ಮಗಳನ್ನೂ ಏಕವಚನದಲ್ಲಿ ಮಾತನಾಡಿಸಿದ್ದು ಕಂಡಿಲ್ಲ. ಅವರ ಹೆಸರು ಮೀಟೂ ಅಭಿಯಾನದಲ್ಲಿ ತಳುಕುಹಾಕಿಕೊಂಡಿರುವುದು ಬೇಸರವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿರುವ, ಚಿತ್ರನಟಿ ತಾರಾ ಹೇಳಿದರು. ಬೈಂದೂರಿನಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಶೋಷಣೆಗೊಳಗಾದರೆ ಕಾನೂನು ಹಾಗೂ ಹೊರಗಡೆ ಮಾಡನಾಡುವ ಸ್ವಾತಂತ್ರ್ಯವಿದೆ. ವೀಟೂ ಅಭಿಯಾನ ಮಾತನಾಡಲು ಅವಕಾಶ ದೊರೆತಿದೆ ಎಂದರೆ ಒಳ್ಳೆಯದು ಅದರ ಬಗ್ಗೆ ಅಭ್ಯಂತರವಿಲ್ಲ. ಆದರೆ ನಿಜವಾದ ಸಂತ್ರಸ್ಥರಿಗೆ ಅನ್ಯಾಯವಾಗಬಾರದು. ಮೀಟೂ ಅಭಿಯಾನ ದಿಕ್ಕುತಪ್ಪಬಾರದು ಎಂದರು. ಅರ್ಜುನ್ ಸರ್ಜಾ ಅವರ ವ್ಯಕ್ತಿತ್ವವನ್ನು ಹಾಳುಗೆಡವಲು ಮೀಟೂ ಅಭಿಯಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಎಂದವರು ಆರೋಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ಲೋಕಸಭಾ ಚುನಾವಣಾ ಸಂದರ್ಭ ತಮ್ಮ ಬಣ್ಣದ ಮತುಗಳಿಂದ ಜನರನ್ನು ಮೋಡಿ ಮಾಡಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದು, ಅವರು ಮನ್ ಕಿ ಬಾತ್ ಬದಲು ಕಾಮ್ ಕಿ ಬಾತ್ ಬಗ್ಗೆ ಪ್ರತಿಕ್ರೀಯಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಾಗೂರು ಮೈದಾನದಲ್ಲಿ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಅವರು ಹೇಳುವ ಅಚ್ಛೇದಿನ್ ಬಂದಿಲ್ಲ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ದಿನಬಳಕೆಯ ಸಾಮಗ್ರಿ ಬೆಲೆ ಗಗನಕ್ಕೇರಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ರಫೆಲ್ ಹಗರಣ ಅವರನ್ನು ಸುತ್ತಿಕೊಂಡಿದೆ. ದೇಶ ಆರ್ಥಿಕ ಪರಿಸ್ಥತಿ ತೀರ ಹದಗೆಟ್ಟಿದೆ. ಬಿಜೆಪಿ ಸರ್ಕಾರದಡಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಆತಂಕದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀಟೂ ಮೂಲಕ ಹೆಣ್ಣಿಗೆ ತನ್ನ ಮೇಲಾಗಿರಬಹುದಾದ ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿದೆ. ಅವಳಿಗೆ ಅದರಿಂದ ಬಲ ಬಂದಿದೆ. ಆದರೆ ಮೀಟೂಗೆ ಕಾನೂನಿನ ಬೆಂಬಲ ಸಿಗುವ ವರೆಗೆ ನಿರೀಕ್ಷಿತ ಪರಿಹಾರ ಸಿಗದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು. ಬೈಂದೂರು ಕ್ಷೇತ್ರದ ನಾಗೂರಿನಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ನನಗೆ ತಿಳಿದಿರುವಂತೆ ಅರ್ಜುನ ಸರ್ಜಾ ಒಬ್ಬ ಸಜ್ಜನ ನಟ. ಮಹಿಳೆಯರ ಕೆಲಸದ ಸ್ಥಳದಲ್ಲಿ ಅವರ ವಿರುದ್ಧ ನಡೆಯುವ ಕಿರುಕುಳ, ದೌರ್ಜನ್ಯ ಸಂದರ್ಭಗಳಲ್ಲಿ ಪರಿಹಾರ ಕಂಡುಕೊಳ್ಳಲು ಆಂತರಿಕ ಸಮಿತಿಗಳು ಇರಬೇಕು ಎಂದು ವಿಶಾಕಾ ಪ್ರಕರಣದಲ್ಲಿ ನ್ಯಾಯಾಂಗ ನೀಡಿದ ತೀರ್ಪಿನಂತೆ ಚಲನಚಿತ್ರ ಕ್ಷೇತ್ರದಲ್ಲೂ ಅವು ಇರಬೇಕು. ಅದನ್ನು ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಿಳಿಸುತ್ತೇನೆ ಎಂದರು. ಇಂತಹ ಅನುಭವ ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮದು ಸುವರ್ಣಯುಗ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನ ನಡುವಿನ ಸಂಘರ್ಷ ಹಿಂಸೆಗೆ ತಿರುಗಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ, ಗುಂಪು ಕಟ್ಟಿಕೊಂಡು ಬಂದು ಕುಕ್ಕೆಯ ಸ್ಥಳೀಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಆಪಾದಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಮಠ ಮತ್ತು ದೇವಸ್ಥಾನದ ಸಂಘರ್ಷ ಮೊನ್ನೆ ನವರಾತ್ರಿಯ ಮಧ್ಯೆ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹಾಗೆಯೇ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು. ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಹಿತ್ಯವೆಂಬುದು ಕೇವಲ ಮನೋರಂಜನೆಗಷ್ಟೇ ಸೀಮಿತವಾಗದೇ, ಶತಮಾನಗಳಿಂದ ತುಳಿತಕ್ಕೊಳಗಾದ ಜನಸಾಮಾನ್ಯರ ಧ್ವನಿಯಾಗಬೇಕು. ಜಾತಿ, ಮತ ಪಂಥಗಳ ಕುರಿತು ರಚಿತವಾದ ಅರಿವಿನ ಸಾಹಿತ್ಯ ಜನಸಾಮಾನ್ಯರ ತಿದ್ದಿ ನಡೆಯಲು ಪ್ರೇರಣೆಯಾಗಬೇಕು. ಕಾವ್ಯ ವ್ಯಕ್ತಿಗತವಾಗಿರದೇ ಸಾಮಾಜಿಕವಾಗಬೇಕು. ಮನಸ್ಸಿನ ನೆಮ್ಮದಿಗಾಗಿ ಕಾವ್ಯ ರಚಿಸದೇ ಮನಷ್ಯನ ಬದುಕನ್ನು ಅರಳಿಸುವ ಕೆಲಸಕ್ಕದು ಪ್ರೇರಣೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ. ಜೆ. ದೇಶಪಾಂಡೆ ಹೇಳಿದರು. ಅವರು ಭಾನುವಾರ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾ ಭವನದಲ್ಲಿ ಶ್ರೀಮತಿ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ ನಾಯ್ಕನಕಟ್ಟೆ, ಕುಂದ ಅಧ್ಯಯನ ಕೇಂದ್ರ ರಿ. ಉಪ್ಪುಂದ, ಸುವಿಚಾರ ಬಳಗ ರಿ. ಉಪ್ಪುಂದ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಾಹಿತಿ ಕೆ. ಪುಂಡಲೀಕ ನಾಯಕ್ ಅವರ ಕಿರುಗಜ್ಜೆ ಕವನ ಸಂಕಲನ ಅನಾವರಣ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಪುಂಡಲೀಕ ನಾಯಕರು ತಮ್ಮ…
