Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಮಹಿಳಾ ಮಂಡಳದ ವತಿಯಿಂದ ಸ್ವರ್ಣಮುಖಿ ರಂಗ ಮಂದಿರದಲ್ಲಿ ಮಕ್ಕಳಿಗೆ ಮುದ್ದು ರಾಧಾಕೃಷ್ಣ ಸ್ಪರ್ಧೆ ನಡೆಸಲಾಯಿತು. ತೀರ್ಪುಗಾರರಾಗಿ ಕೊಲ್ಲೂರು ಪ್ರಾಥಮಿಕ ಶಾಲಾ ಶಿಕ್ಷಕರಾದ ಕೃಷ್ಣ ಜಿ ಹಾಗೂ ಮಹಿಳಾ ಮಂಡಳದ ಮಾಜಿ ಅಧ್ಯಕ್ಷರಾದ ಲಲಿತಾಹಂದೆ ಯವರು ಹಾಗೂ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗ್ರೀಷ್ಮಾ ಗಿರಿಧರ ಬಿಢೆ ಹಾಗೂ ಕೊಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ಆಚಾರಿ ಮತ್ತು ಮಹಿಳಾ ಮಂಡಳದ ಅಧ್ಯಕ್ಷೆಯಾದ ಶ್ರೀಮತಿ ಪ್ರಸನ್ನ ಶರ್ಮಾ ಹಾಗೂ ಉಪಾಧ್ಯಕ್ಷರಾದ ಲತಾ ಹಾಗೂ ಕಾರ್ಯದರ್ಶಿ ಸುಶೀಲಾ ಹೆಬ್ಬಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಕೊಲ್ಲೂರು ಜೀಪು ಚಾಲಕ ಹಾಗೂ ರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರ ವತಿಯಿಂದ ಮತ್ತು ವಿಧಾತ್ರಿ ವಸತಿಗೃಹದ ಮಾಲಿಕರು ಬಹುಮಾನ ವಿತರಣೆಯ ಪ್ರಾಯೋಜಕರಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಲೇಖನ. ಕರಾವಳಿ ಭಾಗದಲ್ಲಿ ಮುಖ್ಯವಾಗಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಮುತ್ತೈದೆಯರಿಗೆ ವರ್ಷದ ಉಳಿದ ಎಲ್ಲ ಮಾಸಗಳಿಗಿಂತ ಶ್ರಾವಣಮಾಸ ಪ್ರಮುಖವಾದದ್ದು. ಅದಕ್ಕೆ ಕಾರಣ ಅವರು ಶ್ರಾವಣಮಾಸ ಪೂರ್ತಿ ಶುಕ್ರವಾರ ಹಾಗೂ ಭಾನುವಾರ ಮಾಡುವ ಚೂಡಿ ಪೂಜೆ. ಮುತ್ತೈದೆಯರು ಚೂಡಿ ಪೂಜೆ ಮಾಡುವುದು ತುಳಸಿ ಗಿಡಕ್ಕೆ. ತುಳಸಿಯ ತೌರುಮನೆ ಗಂಗಾನದಿ ಎನ್ನುವ ನಂಬಿಕೆಯೂ ಇದೆ. ಇದು ಕರಾವಳಿ ಭಾಗದಲ್ಲಿ ಆಚರಿಸಲ್ಪಡುವ ವಿಶಿಷ್ಟವಾದ ಸಂಪ್ರದಾಯಗಳಲ್ಲೊಂದು. ಮನೆಯ ಮುಂದೆ ತುಳಸಿಕಟ್ಟೆ ಕಟ್ಟಿ, ಅದರಲ್ಲಿ ಹುಲುಸಾಗಿ ಬೆಳೆದ ತುಳಸಿಗಿಡ ನೆಟ್ಟು ಪ್ರತಿದಿವಸ ಅದರ ದರ್ಶನ ಮಾಡುತ್ತಿದ್ದರೆ ಸರ್ವದೋಷಗಳ ನಿವಾರಣೆಯಾಗುವುದಂತೆ. ಯಾವುದೇ ರೀತಿಯ ಅನಿಷ್ಟ, ಕೆಟ್ಟ ದೃಷ್ಟಿ ಇದ್ದರೂ ಪರಿಹಾರವಾಗುವುದೆನ್ನುವ ನಂಬಿಕೆ ಶ್ರದ್ಧಾವಂತರಿಗಿದೆ. ಇದರಿಂದ ಅನೇಕ ಆರೋಗ್ಯದ ಲಾಭಗಳೂ ಉಂಟು. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದೊಳಗಿನ ಕಲ್ಮಶವೆಲ್ಲವೂ ವಿಸರ್ಜನೆಯಾಗಿ ಶರೀರ ಸ್ವಚ್ಛವಾಗುವುದು. ತುಳಸಿಯಿಂದ ಮನೆಯ ಸುತ್ತಲಿನ ವಾತಾವರಣದಲ್ಲಿ ಪರಿಶುದ್ಧ ಪ್ರಾಣವಾಯು ಆಮ್ಲಜನಕ ವಿಪುಲವಾಗಿ ದೊರಕುತ್ತದೆ. ಅಲ್ಲದೆ ತುಳಸಿ ಕ್ರಿಮಿನಾಶಕವೂ ಹೌದು! ಚರ್ಮರೋಗ, ವಾತ, ಗಂಟಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮೀನುಗಾರಿಕೆ ಮುಗಿಸಿ ದಡಕ್ಕೆ ಬರುತ್ತಿದ್ದ ಮೀನುಗಾರನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ಗಂಗೊಳ್ಳಿಯ ಖಾರ್ವಿಕೇರಿ ಎಂಬಲ್ಲಿ ನಡೆದಿದೆ. ಗಂಗೊಳ್ಳಿ ಖಾರ್ವಿಕೇರಿ ನಿವಾಸಿ ಜಿ.ನಾಗರಾಜ ಖಾರ್ವಿ (೪೫) ಮೃತಪಟ್ಟ ಮೀನುಗಾರ. ಅವರು ಭಾನುವಾರ ಮಧ್ಯಾಹ್ನ ದೋಣಿಯಲ್ಲಿ ಮೀನುಗಾರಿಕೆ ಮುಗಿಸಿಕೊಂಡು ವಾಪಾಸು ಬರುತ್ತಾ ಸಮುದ್ರದ ದಡದಲ್ಲಿ ದೋಣಿಯಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಗಂಗೊಳ್ಳಿ ಕೊಂಕಣಿ ಖಾರ್ವಿ ಮಾರ್ಕೇಟಿಂಗ್ ಸಮಿತಿ, ಗಂಗೊಳ್ಳಿ ಕೊಂಕಣಿ ಖಾರ್ವಿ ಸಮಾಜದ ನಿರ್ದೇಶಕರಾಗಿ, ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಸದಸ್ಯರಾಗಿ, ಖಾರ್ವಿಕೇರಿ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರ ಸಂಘದ ಕೋಶಾಧಿಕಾರಿಯಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2016-17ನೇ ಸಾಲಿನಲ್ಲಿ ಒಟ್ಟು 41 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ 44.34 ಲಕ್ಷ ರೂ. ಲಾಭಗಳಿಸಿದೆ. ಹಿಂದಿನ ಆರ್ಥಿಕ ವರ್ಷಗಳಿಗಿಂತ ಸಂಸ್ಥೆಯು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಭಾನುವಾರ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2016-17ನೇ ಸಾಲಿನಲ್ಲಿ ರೂ. 9.19 ಕೋಟಿ ಠೇವಣಿ ಹೊಂದಿದ್ದು 9.53 ಕೋಟಿ ಸಾಲ ನೀಡಿ ಪ್ರಸ್ತುತ ವರ್ಷದಲ್ಲಿ 41 ಕೋಟಿಯಷ್ಟು ವಹಿವಾಟು ನಡೆಸಿದೆ. ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ ಎಂದರು. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಮುನ್ನಡೆಯುತ್ತಿದ್ದರೇ, ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ನಿರೀಕ್ಷೆಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮನುಷ್ಯನ ಜೀವನದಲ್ಲಿ ಸಂಗೀತ ಅವಶ್ಯವಾಗಿದೆ. ಮನಸ್ಸಿಗೆ ಉಲ್ಲಾಸ ನೀಡುವ ಮನಸ್ಸನ್ನು ಪುಳಕಿತಗೊಳಿಸಿ ಜೀವನವನ್ನು ಉತ್ತಮಗೊಳಿಸುವ ಶಕ್ತಿ ಸಂಗೀತಕ್ಕಿದೆ. ಹೀಗಾಗಿ ಸಂಗೀತವನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಹೇಳಿದರು. ಗಂಗೊಳ್ಳಿ ಸಮುದಾಯ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿಶೇಷ ಘಟಕ ಯೋಜನೆಯಡಿ ಪ್ರಾಯೋಜಿತ ಆಕಾಶವಾಣಿ ಕಲಾವಿದ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಮತ್ತು ಬಳಗದವರ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತರ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಹಳಷ್ಟು ಶ್ರಮ ಪಡಬೇಕಿದೆ. ಆದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಪುಲ ಅವಕಾಶಗಳಿದ್ದು, ಈ ಅವಕಾಶಗಳನ್ನು ಬಳಸಿಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಅವರನ್ನು ಕೇಂದ್ರ ರೈಲ್ವೆ ಮಂತ್ರಾಲಯವು ರಾಪ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಶಕ ಸಮಿತಿ ಸದಸ್ಯರನ್ನಾಗಿ ಮುಂದಿನ ಎರಡು ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಕರಾವಳಿ ಭಾಗದವರಿಗೆ ಈ ಅವಕಾಶ ದೊರೆತಿರುವುದು ರಾಷ್ಟ್ರಮಟ್ಟದ ಪ್ರಾತಿನಿಧ್ಯ ಸಿಕ್ಕಿದಂತಾಗಿದೆ. ಮಾಜಿ ಮುಖ್ಯಮಂತ್ರಿ, ಸಂಸದ ಬಿ. ಎಸ್. ಯಡಿಯೂರಪ್ಪ ವೆಂಕಟೇಶ ಕಿಣಿಯವರ ಆಯ್ಕೆ ಕುರಿತಂತೆ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಶಿಫಾರಸು ಮಾಡಿದ್ದರು. ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಲ್ಲಿ ಕಿಣಿ ಅವರ ಶ್ರಮ ಅಪಾರವಾದದ್ದು. ರೈಲ್ವೆ ಯಾತ್ರಿ ಸಂಘದ ಮೂಲಕ ಹಲವು ವರ್ಷಗಳಿಂದ ನಿರಂತರವಾಗಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುತ್ತಾ, ಬೇಡಿಕೆಯಿಡುತ್ತಾ ಕಾರ್ಯಸಾಧಿಸುವಲ್ಲಿ ಶ್ರಮಿಸಿದ್ದಾರೆ. ತಮ್ಮ ಉದ್ಯಮದೊಂದಿಗೆ ಬೈಂದೂರಿನ ಅಭಿವೃದ್ಧಿ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಕೆಲವೇ ಕೆಲವರ ಪೈಕಿ ವೆಂಕಟೇಶ ಕಿಣಿ ಅವರೂ ಓರ್ವರೆನಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಪೊಲೀಸ್ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ನೊಂದವರ ಪರಿಹಾರದ ಬಗ್ಗೆ ಮಾಹಿತಿ ಶಿಬಿರವನ್ನು ತಾಲೂಕು ಪಂಚಾಯತ್ ಸಭಾಂಗಣ ಕುಂದಾಪುರದಲ್ಲಿ ಜರುಗಿತು. ಕುಂದಾಪುರದ ಹೆಚ್ಚುವರಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಪ್ರವೀಣ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ನೊಂದವರಿಗೆ ಪರಿಹಾರ ನೀಡಲು ಕಾನೂನು ಇದ್ದು ಸಿ.ಆರ್.ಪಿ.೩೫೭ಎ ಪ್ರಕಾರ ಅಪರಾಧ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯ ಆದೇಶ ನೀಡುತ್ತದೆ, ಸಾವು, ನೋವು, ದೊಂಬಿ ಮುಂತಾದ ಪ್ರಕರಣಗಳಲ್ಲಿ ನೊಂದವರು ಪರಿಹಾರ ಪಡೆಯಬಹುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತಹ ತೀರ್ಪು ಹೊರಬಿದ್ದ ಬಳಿಕ ನೊಂದವರು ಪರಿಹಾರ ಪಡೆಯಲು ಅರ್ಹರು, ಆದ್ದರಿಂದ ನೊಂದವರು ಈ ಕಾಯಿದೆಯ ಪ್ರಯೋಜನ ಪಡೆಯಬೇಕು ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರಾವಣ ಶುಕ್ರವಾರದ ಅಂಗವಾಗಿ ತಾಲೂಕಿನ ಹಲವೆಡೆ ವರಮಹಾಲಕ್ಷ್ಮೀ ವೃತ ಸಂಭ್ರಮದಿಂದ ಜರುಗಿತು. ಕುಂದಾಪುರ, ಗಂಗೊಳ್ಳಿ, ಬಗ್ವಾಡಿ, ಉಪ್ಪುಂದ, ಬೈಂದೂರು, ಸಿದ್ಧಾಪುರ ಮುಂತಾದೆಡೆ ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ, ವೃತಾಚರಣೆಗಳು ಜರುಗಿದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಅಗಸ್ಟ್ 8ರಂದು ನಡೆಯಲಿರುವ ರಾಜ್ಯಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗರು ಗುಜರಾತ್ ಕಾಂಗ್ರೆಸ್‌ನ ಶಾಸಕರುಗಳಿಗೆ ಕೋಟ್ಯಾಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ಮತ್ತು ಅವರಿಂದ ರಾಜೀನಾಮೆ ಕೊಡಿಸುತ್ತಿದ್ದಾರೆ. ಆ ಕಾರಣಕ್ಕೆ ಇಂದನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗುಜರಾತ್‌ನ 44 ಶಾಸಕರಿಗೆ ಕರ್ನಾಟಕದಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ಇದರಿಂದ ಹತಾಶರಾದ ಬಿಜೆಪಿ ಹೈಕಮಾಂಡ್ ರಾಜಕೀಯ ದುರುದ್ದೇಶದಿಂದ ಡಿಕೆಶಿಯವರ ಮನೆ ಮೇಲೆ ಐಟಿ ದಾಳಿ ಮಾಡಿಸುವ ಮೂಲಕ ಅತೀ ನೀಚ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ. ಜೈಲಿಗೆ ಹೋಗಿ ಬಂದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂದೇ ಕುಖ್ಯಾತರಾಗಿರುವ ಯಡಿಯೂರಪ್ಪನವರ ನೇತೃತ್ವದ ಈ ಬಿಜೆಪಿ ಪಕ್ಷದವರು ಈ ಐಟಿ ದಾಳಿಯು ಭ್ರಷ್ಟಾಚಾರದ ವಿರುದ್ಧದ ಸಮರ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ. ಅವರು ಇಂದು ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಂದಾಪುರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿಗೆ ಮೃತರಾದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಅವರ ಸಾವು ಅನುಮಾನಾಸ್ಪದವಾಗಿದ್ದು ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ನಾವುಂದ ರಿಚರ್ಡ್ ಅಲ್ಮೇಡ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾವ್ಯ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದ್ದು, ವಿದ್ಯಾರ್ಥಿ ಸಮೂಹ ಆತಂಕಗೊಳ್ಳುವಂತಾಗಿದೆ. ಪ್ರಕರಣದ ಕುರಿತಾಗಿ ಪೊಲೀಸರು ಸೂಕ್ತ ತನಿಕೆ ಕೈಗೊಂಡು ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು. ಕಾಲೇಜಿನಿಂದ ನಾವುಂದ ಗ್ರಾಮ ಪಂಚಾಯತ್ ತನಕ ಪ್ರತಿಭಟನಾ ರ‍್ಯಾಲಿಯಲ್ಲಿ ತೆರಳಿದ ವಿದ್ಯಾರ್ಥಿಗಳು ನಾವುಂದ ಪಂಚಾಯತ್ ಪಿಡಿಒ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಅಕ್ಷಯ್, ಯಾಸಿನ್, ಸುಭಾಷ್, ವಿಜಯ್, ಅಶ್ವಿನಿ, ಪ್ರವೀಣ್ ಖಾರ್ವಿ, ಯಜ್ಞೇಶ್, ಕಿರಣ್ ಆಚಾರ್ಯ, ರಂಜಿತ್, ಸುಷ್ಮಾ, ನಿಧಿ ನಾಯಕ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Read More