ಐಶ್ವರ್ಯ ಕೋಣನ | ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕರಕುಶಲ ವಸ್ತು ಪ್ರದರ್ಶನದಲ್ಲಿ ಖ್ಯಾತನಾಮರ ಚಿತ್ರಗಳು ತೆಂಗಿನ ಕಾಯಿಯಲ್ಲಿ ಮೂಡಿದ್ದವು. ಅಬ್ದಲ್ ಕಲಾಂ, ಬುದ್ಧ, ಬಸವಣ್ಣ, ಶಿವಾಜಿಯ ಕೆತ್ತನೆಗಳು, ಪರಮೇಶ್ವರ ಸ್ವರೂಪ ವಿನ್ಯಾಸಗಳು ವಿಶೇಷವೆನ್ನಿಸಿದವು. ಅಲ್ಲದೇ ಜೋಕರ್, ಎತ್ತಿನ ಗಾಡಿ ಮತ್ತು ಪ್ರಾಣಿಗಳ ವಿನ್ಯಾಸಗಳು ತೆಂಗಿನ ಕಾಯಿ ಕೆತ್ತನೆಯಲ್ಲಿ ಕಾಣಿಸಿಕೊಂಡವು. ತೆಂಗಿನಕಾಯಿಯ ವಿನೂತನ ವಿನ್ಯಾಸಗಳಲ್ಲಿ, ಶಿವ, ಗಣೇಶ, ಹಾಗೂ ಇನ್ನಿತರ ತೆಂಗಿನಕಾಯಿಯ ಮೂರ್ತಿಗಳು ಗಮನಸೆಳೆದವು, ಧಾರವಾಡದ ಜಗದೀಶ್ ಅವರು ತೆಂಗಿನ ಕಾಯಿಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ರೂಪಿಸುವುದರ ಮೂಲಕ ಹಲವರ ಗಮನ ಸೆಳೆದಿದ್ದಾರೆ. ತಾವು ಹಿರಿಯರಿಂದ ಕಲಿತ ಕೌಶಲ್ಯವನ್ನು ಹೊಸ ಪೀಳಿಗೆಗೂ ದಾಟಿಸಬೇಕು ಎಂಬ ಆಶಯದೊಂದಿಗೆ ತೆಂಗಿನ ಕಾಯಿಯ ಚಿತ್ರಗಳನ್ನು ಕೆತ್ತಿ ಮಾರಾಟ ಮಾಡುತ್ತಿದ್ದಾರೆ. ತೆಂಗಿನಕಾಯಿಯಲ್ಲಿ ಮೂಡಿರುವ ಈ ವಿಶೇಷ ವಿನ್ಯಾಸ ನೋಡಲು ಸಾವಿರಾರು ಜನ ಬರುತಿದ್ದಾರೆ. ತೆಂಗಿನಕಾಯಿಯಂದರೆ ಅಡುಗೆಗೆ ಅಥವಾ ಎಳನೀರಿಗೆ ಅಷ್ಟೇ ಎಂದು ತಿಳಿದಿದ್ದವರು ಇಲ್ಲಿಗೆ ಭೇಟಿ ನೀಡಿದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರತಿನಿತ್ಯ ಸಾವಿರಾರು ವಿಧ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇಲ್ಲಿ ಸುಭದ್ರತೆಯನ್ನು ಕಾಯ್ದುಕೊಳ್ಳಲು ಅಗ್ನಿ ಶಾಮಕ ದಳದ ಸೇವಕರು ಸಕಲ ಸಿದ್ದತೆಗಳೊಂದಿಗೆ ಕಾರ್ಯನಿರತರಾಗಿದ್ದರು. ಜಾಂಬೂರಿಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರತಿ ಕ್ಷಣದ ಕಾರ್ಯಚರಣೆಗೆ ಸ್ಪಂದಿಸಲು 8 ಫೈರ್ ಎಂಜಿನ್, 9 ಅಗ್ನಿ ಬೈಕ್ಗಳು ಹಾಗೂ ಎರಡು ಕ್ಯು.ಆರ್.ವಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮಂಗಳೂರಿನ ಮುಖ್ಯ ಅಗ್ನಿ ಶಾಮಕ ಅಧಿಕಾರಿ ಜಿ.ತಿಪ್ಪೆಸಾಮಿ ಮಾರ್ಗದರ್ಶನದಲ್ಲಿ ಮಂಗಳೂರು, ಉಡುಪಿ ಮತ್ತು ಮೈಸೂರು ವಿಭಾಗದ ಏಳು ಡಿ.ಎಫ್.ಒ ಅಧಿಕಾರಿಗಳು ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟೂ ೯೮ ಅಗ್ನಿ ಸೇವಕ ಸಿಬ್ಬಂದಿಗಳು ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧರಾಗಿದ್ದರು. ತುರ್ತು ಪರಿಸ್ಥತಿಯಲ್ಲಿ ಮಾಹಿತಿ ದೊರಕಲು ಒಂದು ಮುಖ್ಯ ಕಂಟ್ರೋಲ್ ರೂಂ ಮತ್ತು ಎಂಟು ಫೈರ್ ಎಂಜಿನ್ ಜೊತೆಗೆ ಎಂಟು ಅಗ್ನಿ ಬೈಕ್ಗಳು ವಿದ್ಯಾಗಿರಿಯ ಎಂಟು ಪ್ರಮುಖ ಸ್ಥಳಗಳಲ್ಲಿ ಸಿದ್ಧಪಡಿಸಲಾಗಿದೆ. ಕಿರಿದಾದ ಸ್ಥಳದಲ್ಲಿಯೂ ಸರಾಗವಾಗಿ ಸಂಚರಿಸುವ ಕ್ಯು.ಆರ್.ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ ಅಂತರಿಕ್ಷರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ. ‘ವಿಕ್ರಮ್ ಸಾರಾಬಾಯಿ’ ರನ್ನು ಪಡೆದ ಹೆಮ್ಮೆಯ ದೇಶ. ಅವರ ಪರಿಕಲ್ಪನೆಯಂತೆ ಭಾರತದಲ್ಲಿ ರಾಕೆಟ್ ತಂತ್ರಜ್ಞಾನ ಅಭಿವೃದ್ದಿ ಪಥದತ್ತ ಸಾಗಿದ್ದನ್ನು ನಾವು ಕಂಡಿದ್ದೇವೆ ಪ್ರಪಂಚದಾದ್ಯಂತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಿಸಲು ನವೀನ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಇಂದು ಸ್ವದೇಶಿ ವಸ್ತುಗಳ ಬಳಕೆಯ ಮೂಲಕ ರಾಕೆಟ್ ಗಳನ್ನು ತಯಾರಿಸುತ್ತಿದೆ. ಅಂತಹದ್ದೇ ಪ್ರಯತ್ನವನ್ನು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಮಾಡಿ ತೋರಿಸಿದ್ದಾರೆ. ಅರೇಏನಿದು ಆವಿಷ್ಕಾರ ಅಂತೀರಾ ಇಲ್ಲಿದೆ ನೋಡಿ. ಇದು ‘ಅಗ್ನಿಹೋತ್ರಿ’ ಏರೋಸ್ಪೇಸ್ ಮಾದರಿ. ಆಡ್ಯಾರು ಸಹ್ಯಾದ್ರಿ ಕಾಲೇಜಿನ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿ ಮಹಾಭಲೇಶ್ವರ ಭಟ್ ಅಭಿವೃದ್ದಿಪಡಿಸಿದ್ದಾರೆ. ಇಂದು ದಿನಕ್ಕೊಂದರಂತೆ ರಾಕೆಟ್ಗಳನ್ನು ಉಡಾಯಿಸಲಾಗುತ್ತಿದೆ. ರಾಕೆಟ್ಗಳನ್ನು ತಯಾರಿಸಲು ತಗುಲುವ ವೆಚ್ಚ ಹೆಚ್ಚಾಗುತ್ತಿದೆ. ರಾಕೆಟ್ ಲಾಂಚರ್ಗಳನ್ನು ನಿರ್ಮಾಣ ಮಾಡಲು ವಿಮಾನಕ್ಕೆ ತಗುಲುವ ವೆಚ್ಚವೇ ಅಧಿಕ. ಈ ಅಧಿಕ ವೆಚ್ಚವನ್ನು ತಗ್ಗಿಸುವ ಉದ್ದೇಶವನ್ನಿಟ್ಟುಕೊಂಡು ನಿರ್ಮಿಸಿಲಾದ ವಿಶೇಷ ಮಾದರಿ ಇದಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಜಾಂಬೂರಿ ಕೇವಲ ಜನಜಾತ್ರೆಯಾಗದೇ ಸ್ಕೌಟ್ಸ್ ಗೈಡ್ಸ್ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ವೇದಿಕೆಯನ್ನಾಗಿ ನಿರ್ಮಿಸಲಾಗಿತ್ತು. ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿರಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಭಾಗವಹಿಸುವಂತೆ ಮಾಡಲಾಗಿದೆ. ಪರಿಣಾಮವಾಗಿ ಏಳು ದಿನಗಳ ಉತ್ಸವದಲ್ಲಿ ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಕೌಟ್ಸ್ ಗೈಡ್ಸ್ ಮಹತ್ವ ಅರಿಯುವ ಜೊತೆಗೆ, ಸಾಂಸ್ಕೃತಿಕ ಸೊಬಗನ್ನು ಸವಿಯುವಂತಾಯಿತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಅವರು ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಸವಾಲೇ ಆದರೂ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿರುವ ಒಂದಿಷ್ಟು ಮೂಲಭೂತ ಸೌಕರ್ಯದ ಕಾರಣದಿಂದ ಆಯೋಜನೆ ಸುಲಭಸಾಧ್ಯವಾಯಿತು. 60,000 ಕ್ಕೂ ಅಧಿಕ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, 13,000 ದಷ್ಟು ಅಧಿಕಾರಿಗಳು, ಸ್ವಯಂ ಸೇವಕರು ಜಾಂಬೂರಿಯಲ್ಲಿ ಭಾಗವಹಿಸಿದ್ದರು. ಅಲ್ಲದೇ ಪ್ರತ್ಯೇಕವಾಗಿ ಸಾವಿರಾರು ಸಾರ್ವಜನಿಕರು ಜಾಂಬೂರಿಯ ಸವಿಯನ್ನು ಸವಿದಿದ್ದಾರೆ. ಶನಿವಾರ – ಭಾನುವಾರ ಎರಡೂ ದಿನ 1 ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಭೇಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಮ್ಮ ನಡುವೆ ಹಲವಾರು ಎಲೆ ಮರೆ ಕಾಯಿಯಂತೆ ಸಾಧಕರಿದ್ದು ಅವರ ಸಾಧನೆಯ ಹೆಜ್ಜೆ ಅನಾವರಣವಾಗುವ ಕೆಲಸವಾಗಿ ಅವರು ಮುಖ್ಯ ವಾಹಿನಿಗೆ ಬರುವಂತಾಗಬೇಕು. ದತ್ತಿ ಪುರಸ್ಕಾರದ ಮೂಲಕ ಸಾಧಕರನ್ನು ಸಮಾಜದ ಗುರುತಿಸುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಯಕ್ಷ ನಿರ್ದೇಶಕ, ಶಿಕ್ಷಕ ಕೊಕೂರು ಸೀತರಾಮ ಶೆಟ್ಟಿ ಅವರು ಹೇಳಿದರು. ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ನಡೆದ ಕಾರಂತರ ಇಪ್ಪತ್ತೈದನೇ ಪುಣ್ಯ ಸ್ಮರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ -ಸಾಹಿತ್ಯಿಕ ರಸಗವಳ ಅನೂಹ್ಯ-2022 (ನಾವೀನ್ಯದ ಗೌಜಿ) ಎರಡನೇ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದಿ.ಉಪೇಂದ್ರ ಐತಾಳ್ ಸ್ಮಾರಕ ‘ಕೃಷಿ ಪರಿಶ್ರಮ ಪುರಸ್ಕಾರಕ್ಕೆ ಸದಾಶಿವ ಐತಾಳ್, ದಿ.ರಾಘವೇಂದ್ರ ಉರಾಳ ಸ್ಮಾರಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ೧೬ನೇ ಹಂತದ ಸ್ವಚ್ಛ ಕಡಲತೀರ ಹಸಿರು ಕೋಡಿ ಅಭಿಯಾನ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು. ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ಜಾಗೃತಿ ಫಲಕ ಹಾಗೂ ಜಾಗೃತಿ ಘೋಷದೊಂದಿಗೆ ಕೋಡಿ ನಾಗರಿಕ ವೃಂದದವರಿಗೆ ಕಡಲತೀರ ಮತ್ತು ಪರಿಸರ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾಗೃತಿ ಅಭಿಯಾನವು ಊರಿನ ವಿವಿಧೆಡೆಯಲ್ಲಿಸಂಚರಿಸುವುದರೊಂದಿಗೆ, ಸುಂದರ ತಾಣ ಸೀ ವಾಕ್ ನಲ್ಲಿ ಅಂತ್ಯಗೊಂಡಿತು. ತದನಂತರದಲ್ಲಿ ಕೋಡಿ ಕಡಲತೀರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ- ಶಿಕ್ಷಕೇತರರು, ವಿದ್ಯಾರ್ಥಿಗಳು , ಆಡಳಿತ ಮಂಡಳಿಯ ಸದಸ್ಯರು , ರಕ್ಷಕ – ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಊರಿನ ಗಣ್ಯರು ಹಾಗೂ ಪರಿಸರ ಪ್ರಿಯರು ಈ ೧೬ ನೇ ಅಭಿಯಾನದಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡರು. ಈ…
ಕ್ರೀಷ್ಮಾ ಆರ್ನೋಜಿ | ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶೋಕಿರಣ ಕಟ್ಟಡದಲ್ಲಿ ಆಯೋಜಿತವಾಗಿರವ ಕಲಾಮೇಳದಲ್ಲಿ ಭಾರತದ ವಿವಿಧ ರಾಜ್ಯಗಳ ಬುಡಕಟ್ಟು ಜನಾಂಗಗಳ ಅದ್ಭುತ ಲೋಕವೇ ಅನಾವರಣಗೊಂಡಿದೆ. ಇಲ್ಲಿ ಬುಡಕಟ್ಟು ಸಮುದಾಯಗಳ ಬದುಕಿನ ವಿವಿಧ ಸ್ವರೂಪ ಸೆರೆಹಿಡಿದಿರುವ ಫೋಟೋಗಳು ಹಲವರನ್ನು ಸೆಳೆಯುತ್ತಿವೆ. ಒಂದೊಂದು ಪೋಟೋ ಬುಡಕಟ್ಟು ಜನಾಂಗದ ಜೀವನಶೈಲಿಯ ವಿಶೇಷತೆಯನ್ನು ಪರಿಚಯಿಸುತ್ತದೆ. ಈ ಪೋಟೋಗಳನ್ನು ಕ್ಲಿಕ್ಕಿಸಿದವರು ಛಾಯಾಚಿತ್ರಗಾರರಾದ ಅಂದೆಕಾರ್ ಸತೀಶ್ ಲಾಲ್. ತೆಲಂಗಾಣ ರಾಜ್ಯದ ಹೈದರಾಬಾದ್ನರಾದ ಇವರು ಕಳೆದ ೨೦ ವರ್ಷಗಳಿಂದ ಬುಡಕಟ್ಟು ಸಂಬಂಧಿತ ಬದುಕಿನ ವಿವರಗಳನ್ನು ಫೋಟೋಗಳ ಮೂಲಕ ದಾಖಲಿಸುತ್ತಿದ್ದಾರೆ. ಹೀಗೆ ದಾಖಲಿಸಿದ ಫೋಟೋಗಳೇ ಜಾಂಬೂರಿ ಕಲಾಮೇಳದ ವಿಶೇಷ ಆಕರ್ಷಣೆಯಾಗಿವೆ. ಬುಡಕಟ್ಟು ಪೋಟೋಗ್ರಪಿ ಪ್ರದರ್ಶನದಲ್ಲಿ ತೆಲಂಗಾಣದ ಗೊಂಡಾ, ಕೋಯಾ, ಒಡಿಶಾದ ಭೂಮಿಯಾ, ಲಂಜಿಯಾ ಸಾರೋ, ಡೋಂಗ್ರಿಯಾ, ಬೊಂಡಾ ಬುಡಕಟ್ಟು, ಮಧ್ಯಪ್ರದೇಶದ ಬೈಗಾ, ನಾಗಾಲಾಂಡ್ನ ಕೊನ್ಯಾಕ್, ಆಂಧ್ರಪ್ರದೇಶದ ವಾಲ್ಮೀಕಿ ಬುಡಕಟ್ಟು, ಅರುಣಾಚಲ ಪ್ರದೇಶದ ಅಪತಾನಿ, ಗುಜರಾತ್ನ ರಾಬರಿ, ಕುತ್ತಿಯಾ ಕೊಂಡ್, ರಾಜಸ್ಥಾನದ ಜತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಾಂಬೂರಿಯ ಹಲವಾರು ಮೇಳಗಳಲ್ಲಿ ತಿಂಡಿ ತಿನಿಸು, ಕರಕುಶಲ ವಸ್ತುಗಳು, ವರ್ಣಮಯ ಕಿವಿಯೋಲೆಗಳ ಅಂಗಡಿ, ಹೀಗೆ ಹತ್ತಾರು ಬಗೆಯ ಮಳಿಗೆಗಳಿವೆ. ಈ ಎಲ್ಲಾ ಅಂಗಡಿ ಮುಂಗಟ್ಟುಗಳ ನಡುವೆ ಆಕರ್ಷಿಣೀಯವಾಗಿ ಕಂಡದ್ದು, ಬ್ಯಾಟರಿ ರೋಬೋಟ್ ಯಂತ್ರ. ಘಮಘಮಿಸುವ ಗೋಬಿ, ರುಚಿಕರ ಚುರುಮುರಿ ಬಿಟ್ಟು ನೆರೆದಿರುವ ಅನೇಕರು ಬಹಳ ಕುತೂಹಲದಿಂದ ಆ ಯಂತ್ರದ ಬಳಿ ಹೋಗುತ್ತಿದ್ದರು. ಹೋದವರೆಲ್ಲರೂ ಒಂದು ಹೆಡ್ಫೋನ್ಸ್ ಹಾಕಿಕೊಂಡು ಏನೋ ಕೇಳುತ್ತಿದ್ದರು. ಕೇಳುಗರ ಮುಖದಲ್ಲಿ ಆಶ್ಚರ್ಯ, ನಗು ಎಲ್ಲ ಭಾವನೆಗಳ ಅನಾವರಣವಾಗುತ್ತಿತ್ತು. ಈ ಕೌತುಕಮಯ ಜನರು ಸೇರಿದ್ದ ಜಾಗವನ್ನು ಹತ್ತಿರ ಹೋಗಿ ನೋಡಿದಾಗ ಅದು ಭವಿಷ್ಯ ನುಡಿಯುವ ರೋಬೋಟ್! ಕೇವಲ ೨೦ ರೂಪಾಯಿ ಕೊಟ್ಟು ಹೆಡ್ಫೋನ್ ಕಿವಿಗೆ ಹಾಕಿದರೆ ಸಾಕು ಅದು ಭವಿಷ್ಯ ಹೇಳುತ್ತದೆ. ಕೇಳುವ ಮುಂಚಿತವಾಗಿ ಯಾವುದೇ ಮಾಹಿತಿ ನೀಡದಿದ್ದರೂ ದೇಹದ ತಾಪಮಾನದ ಆಧಾರದ ಮೇಲೆ ಭವಿಷ್ಯ ಹೇಳುವ ಈ ರೋಬೋರ್ಟ್ ನಿಜಕ್ಕೂ ವಿಶೇಷ. ಮೂಲತಃ ಬೆಂಗಳೂರಿನ ಬರಗೂರಿನವರಾದ ಜನಾರ್ಧನ್ ಸುಮಾರು ಇಪ್ಪತ್ತು ವರ್ಷಗಳಿಂದ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ರ್ಟೀಯ ಸಾಂಸ್ಕೃತಿಕ ಜಾಂಬೂರಿಯ ಕಲಾಮೇಳದ ವಿಶೇಷ ನಾರಿನ ಅಂಗಡಿಯೊಂದು ಜನರ ಆಕರ್ಷಣೆಯ ಕೇಂದ್ರವಾಗಿದೆ. ಪ್ಲಾಸ್ಟಿಕ್ನಿಂದ ಉಂಟಾಗುವ ಅಪಾಯವನ್ನು ಅರಿತ ಅದೆಷ್ಟೋ ಜನರು ದಿನಬಳಕೆಗಾಗಿ ಪ್ಲಾಸ್ಟಿಕ್ಗೆ ಪರ್ಯಾಯವನ್ನು ಹುಡುಕಿಕೊಂಡಿದ್ದಾರೆ. ಪರಿಸರ ಪೂರಕ ಮತ್ತು ಆರೋಗ್ಯಕರವಾದ ವಸ್ತುಗಳನ್ನು ಬಳಸುವುದರಿಂದ ಆಗುವಂತಹ ಉಪಯೋಗಗಳನ್ನು ಸ್ವತಃ ಅರಿತ ತುಮಕೂರಿನ ಶಿವಣ್ಣ ಅವರು ತುಪ್ಪದ ಹೀರೇಕಾಯಿ ನಾರಿನ ಉತ್ಪಾದನೆಯ ಅಂಗಡಿಯೊಂದನ್ನು ಪ್ರಾರಂಭಿಸಿದ್ದಾರೆ. ಈ ಮಳಿಗೆಯಲ್ಲಿ ನಾರಿನ ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಅತಿಯಾದ ಪರಿಸರ ಮಾಲಿನ್ಯದಿಂದಾಗಿ ಇತ್ತೀಚೆಗೆ ಚರ್ಮ ರೋಗಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಚರ್ಮ ರೋಗದಿಂದ ರಕ್ಷಣೆ ಪಡೆಯಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವ ಸದುದ್ದೇಶದಿಂದ ತುಪ್ಪದ ಹೀರೇಕಾಯಿಂದ ತಯಾರಾದ ಮೈ ಉಜ್ಜುವ ನಾರು, ಮತ್ತು ಬೆನ್ನು ಉಜ್ಜುವ ಬ್ರಶ್ ಸಿದ್ಧಪಡಿಸಿದ್ದಾರೆ. ಇವರ ಮಳಿಗೆಯ ಪ್ರತಿಯೊಂದು ಉತ್ಪನ್ನಗಳು ನೈಸರ್ಗಿಕವಾಗಿಯೇ ಸಿದ್ಧವಾಗಿವೆ ಎಂಬುದು ಬಹಳ ವಿಶೇಷ. ಇದಲ್ಲದೇ ಮೊಳಕಾಲು ನೋವು ಮತ್ತು ಕೀಲು ನೋವಿನ ನಿವಾರಣೆಗೆ…
ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಬಾಹ್ಯಾಕಾಶ ಕ್ಷೇತ್ರವೆಂಬುವುದು ಹಲವು ಕೌತುಕ ಮತ್ತು ರೋಚಕ ಸಂಗತಿಗಳ ತಾಣ. ಗ್ರಾಮೀಣರೂ ಸೇರಿದಂತೆ ಹಲವು ಮಕ್ಕಳಿಗೆ ಸರಿಯಾದ ಮಾಹಿತಿಯ ಕೊರತೆಯಿಂದ ಈ ಕ್ಷೇತ್ರದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಮತ್ತು ಸೌರ ಮಂಡಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಿಂದ ಸಂಚಾರಿ ಬಸ್ ಮತ್ತು ಮೇಳದ ಒಳಗೆ ರಾಕೆಟ್ ಉಡಾವಣಾ ವಾಹನ ಮತ್ತು ವಿವಿಧ ಕೃತಕ ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ನುಡಿಸಿರಿ ವೇದಿಕೆಯ ಪಕ್ಕದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸಂಚಾರಿ ಬಸ್ನಲ್ಲಿ ಜಿ.ಎಸ್.ಎಲ್.ವಿ, ಪಿ.ಎಸ್.ಎಲ್.ವಿ., ಎ.ಎಸ್.ಎಲ್.ವಿ, ಎಸ್.ಎಲ್.ವಿ-೩, ಆರ.ಎಲ್.ವಿ. ಟಿ.ಡಿ ರಾಕೆಟ್ ಉಡಾವಣಾ ವಾಹನಗಳ ಮಾದರಿ, ಭಾರತದ ಮೊದಲ ಕೃತಕ ಉಪಗ್ರಹವಾದ ಆರ್ಯಭಟ, ರೋಹಿಣಿ, ಭಾಸ್ಕರ, ಇನ್ಸಾಟ್ ಮತ್ತು ಆಸ್ಟ್ರೋಸಾಟ್ ಮೊದಲಾದ ಕೃತಕ ಉಪಗ್ರಹಗಳ ಮಾದರಿ, ಚಂದ್ರಯಾನ…
