ಕುಂದಾಪ್ರ ಡಾಟ್ ಕಾಂ ಸುದ್ದಿ. ಬಹ್ಮಾವರ: ರಾಜಕಾರಣದಲ್ಲಿರುವವರು ದಿನ ನಿತ್ಯ ಹಣ ನೀಡುತ್ತಾರೆ ಎಂದರೆ ಆ ಹಣದ ಮೂಲ ಯಾವುದು ಎನ್ನುವ ಪ್ರಶ್ನೆ ಮಾಡುವ ಮನೋಭಾವವನ್ನು ಜನತೆ ಮಾಡದಿದ್ದರೆ ಆಗ ಉತ್ತಮ ಜನಪ್ರತಿನಿಧಿಯ ಆಯ್ಕೆ ಸಾಧ್ಯವಿಲ್ಲ. ನೇರ ನಿಷ್ಠುರವಾಗಿ ಬರೆಯುವ ಪತ್ರಕರ್ತರು ಇದ್ದರು ಕೂಡ ಇಂದು ಜನಪರ ಸುದ್ದಿ ಕಳುಹಿಸಿದರು ಕೂಡ ಡೆಸ್ಕ್‌ನಲ್ಲಿ ಬದಲಾವಣೆಯಾಗಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಪತ್ರಕರ್ತರ ಜೊತೆಗೆ ಜನತೆಯು ಕೂಡ ಬದಲಾವಣೆ ಬಯಸಿದ್ದಲ್ಲಿ ಮಾತ್ರ ವ್ಯವಸ್ಥೆ ಸರಿಯಾಗಲಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಬ್ರಹ್ಮಾವರ ಬಂಟರ ಭವನದಲ್ಲಿ ಬ್ರಹ್ಮಾವರ ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಲಾದ ಪತ್ರಿಕೋದ್ಯಮ ರಾಜಕೀಯ ಕಾನೂನು ವಿಷಯಾಧಾರಿತ ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪತ್ರಕರ್ತ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಬ್ರಹ್ಮಾವರ ಪ್ರೆಸ್ ಕ್ಲಬ್ ಸದಸ್ಯರು ರಾಜ್ಯ ಕಂಡ ಅಪ್ರತಿಮ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ಪುರಾಣ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದದಲ್ಲಿ ಕರ್ಕಾಟಕ ಅಮಾವಾಸ್ಯೆಯ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೆರವೇರಿತು. ವಿವಿಧ ಭಾಗಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನಸುಕಿನಲ್ಲಿಯೇ ದೇಗುಲಕ್ಕೆ ಬಂದು ಸಮುದ್ರ ಹಾಗೂ ಸೌರ್ಪಣಿಕಾ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿದರು. ಭೂಮಾತೆಯನ್ನು ದುಷ್ಟ ರಕ್ಕಸರಿಂದ ರಕ್ಷಿಸಿದ ಶ್ರೀ ವರಾಹ ಸ್ವಾಮಿಯು ಲೋಕಕ್ಕೆ ಕಲ್ಯಾಣ ವನ್ನು ಉಂಟುಮಾಡಿ ಸಕಲ ಜೀವರಾಶಿಗಳನ್ನು ಕಾಯುವವನು. ಆದರಿಂದ ಸಂಪ್ರದಾಯದಂತೆ ವಿವಾಹಿತ ನವಜೋಡಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದ್ದರು. ಶ್ರೀ ದೇವರು ಪ್ರಕೃತಿ ವಿಕೋಪದಿಂದ ಹಾಗೂ ಕಷ್ಟಕಾರ್ಪಣಗಳಿಂದ ರಕ್ಷಿಸಿ ಪೊರೆಯುವ ಮಹಿಮಾ ನ್ವಿತನೂ, ಅಭಯದಾತನೂ ಆಗಿ ಭಕ್ತ ಕೋಟಿ ಜನರನ್ನು ಕಾಯುತ್ತಿರುವ ದೇವರಲ್ಲಿ ಕರಾವಳಿಯ ಭಾಗದ ಮೀನುಗಾರರು ಮೀನುಗಾರಿಕೆಯಲ್ಲಿ ಸಮೃದ್ಧಿಯನ್ನು ಕರುಣಿಸು ಎಂದು ಪ್ರಾರ್ಥನೆಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ಕಾಟಕ ಅಮಾವಾಸ್ಯೆ ಪ್ರಯುಕ್ತ ಪ್ರಕೃತಿಯ ಭವ್ಯ ಸೊಬಗು ಹೊದ್ದು ಕಂಗೋಳಿಸುವ ಪಡುವರಿಯ ಸೋಮೇಶ್ವರನ ಸನ್ನಿಧಿಯಲ್ಲಿ ಸಮುದ್ರ ಸ್ನಾನ ಹಾಗೂ ವಾರ್ಷಿಕ ಜಾತ್ರೆ ಮಹೋತ್ಸವವು ಸಂಭ್ರಮ-ಸಡಗರದಿಂದ ನಡೆಯಿತು. ನಸುಕಿನಿಂದಲೇ ಆಸುಪಾಸಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮರವಂತೆಗೆ ಆಗಮಿಸಿ ಇಲ್ಲಿನ ಸೋಮೇಶ್ವರದ ಸಮುದ್ರದಲ್ಲಿ ಮಿಂದ ಭಕ್ತರು ದೇವಳದ ಎದುರಿನ ಕೆರೆಯಲ್ಲಿ ಸ್ನಾನಗೈದು ಪುನೀತರಾದರು. ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಪ್ರದಾಯದಂತೆ ನವವಧುವರರು, ಕೃಷಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶ್ರೀವರಾಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ವರ್ಷದ ಹರಕೆಯನ್ನು ಒಪ್ಪಿಸಿದರು. ಭಕ್ತರು ಶ್ರೀ ದೇವರ ದರ್ಶನ, ಪೂಜೆ-ಪುನಸ್ಕಾರದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿತ್ತು. ಶ್ರೀದೇವರ ದರ್ಶನ ಪಡೆಯುವುದಕ್ಕಾಗಿ ಭಕ್ತಾದಿಗಳು ದೇವಸ್ಥಾನದಿಂದ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ೨೦೧೭-೧೮ನೇ ಸಾಲಿನ ಎನ್‌ಎಸ್‌ಎಸ್ ಘಟಕವನ್ನು ಪುತ್ತಿಗೆಪದವಿನಲ್ಲಿರುವ ಆಳ್ವಾಸ್ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಉದ್ಘಾಟಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಎನ್‌ಎಸ್‌ಎಸ್ ಘಟಕವನ್ನು ಉದ್ಘಾಟಿಸಿ, ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳಲ್ಲಿರುವ ಅಮೂಲ್ಯ ಅಸ್ತ್ರ. ಸಮಾಜಮುಖಿಯಾಗಿ ಅದನ್ನು ಬಳಸಿದಾಗ, ಅದು ಸದುಪಯೋಗವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯಿಂದ ಸಮಾಜಮುಖಿ ಚಿಂತನೆ ಬೆಳೆಯುತ್ತದೆ. ವಿದ್ಯಾರ್ಥಿಗಳು ಸಮನಸ್ಸು ಹಾಗೂ ಶಿಸ್ತಿನ ಜೀವನ ನಡೆಸಿದರೆ, ಅವರನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿ ರೂಪಿಸುತ್ತದೆ ಎಂದುಅಭಿಪ್ರಾಯಪಟ್ಟರು. ಗುರುವಾರ ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವಾಸ್ ಪಿಯು ಕಾಲೇಜಿನಲ್ಲಿ ೧೨,೭೭೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಎನ್‌ಎಸ್‌ಎಸ್ ಘಟಕಕ್ಕೆ ಆಯ್ಕೆಯಾಗಿರುವ ೨೦೦ ಮಂದಿ ವಿದ್ಯಾರ್ಥಿಗಳು ಅದೃಷ್ಟವಂತರು. ಸೇವಾಮನೋಭಾವನೆ, ರಾಷ್ಟ್ರೀಯತೆಯನ್ನು ಎನ್‌ಎಸ್‌ಎಸ್ ಬೆಳೆಸುತ್ತದೆ ಎಂದರು. ಆಳ್ವಾಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಮೇಲ್ಛಾವಣಿ ಕುಸಿದಿದ್ದು ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪೋಷಕರು ಅಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ ಬಗ್ಗೆ ದೂರಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಸುಕುಮಾರ ಶೆಟ್ಟಿ ಅವರು ಶಾಲೆಯ ದುರಸ್ತಿಯ ಬಗ್ಗೆ ಕಳೆದ ಆರು ವರ್ಷದಿಂದ ಬೇಡಿಕೆಯಿಟ್ಟಿದ್ದರೂ ಯಾರೋಬ್ಬರೂ ಈ ಬಗ್ಗೆ ಗಮನ ಹರಿಸಿಲ್ಲ. ಶಿಥಿಲಗೊಂಡ ಕಟ್ಟಡದಲ್ಲಿಯೇ ಈವರೆಗೆ ಮಕ್ಕಳನ್ನು ಕುಳ್ಳಿರಿಸಿದ್ದು ಇಲಾಖೆಯ ಬೇಜವಬ್ದಾರಿಯನ್ನೂ ತೋರ್ಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಡಿಡಿಪಿಐ ಪೋಷಕರನ್ನು ಹೆಸರಿಸಿ ಇಲಾಖೆಯ ನಡೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರು ಈ ಹಿಂದೆಯೇ ಎಚ್ಚೆತ್ತುಕೊಂಡಿದ್ದರೆ ಇಂದು ಶಾಲೆಯ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಮೇಲ್ಛಾವಣಿ ಕುಸಿದು ತರಗತಿ ನಿಂತಿರುವ ಘಟನೆ ಈ ಭಾಗದಲ್ಲಿ ನಡೆದಿರಲಿಲ್ಲ. ಆಡಳಿತದ ಬೇಜವಾಬ್ದಾರಿಯೇ ಇದೆಲ್ಲದಕ್ಕೂ ಕಾರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ತರಗತಿಯಿಲ್ಲದೇ ಸ್ಥಿತಿ ನಿರ್ಮಾಣವಾಗಿದ್ದು ಇಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿ ಪೋಷಕರೊಂದಿಗೆ ಮಾತನಾಡಿದ ಅವರು ಶಾಲೆಯ ನವೀಕೃತ ಕಟ್ಟಡವನ್ನು ನಿರ್ಮಿಸಲು ಇಲಾಖೆಯಿಂದ 13 ಲಕ್ಷ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಮಂಜೂರು ಮಾಡಲಾಗುವುದು. ಹೊಸ ಕಟ್ಟಡ ನಿರ್ಮಾಣವಾಗುವ ತನಕ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಅಲ್ಲಿಯೇ ತರಗತಿ ನಡೆಸಲು ಸೂಚಿಸಲಾಗಿದ್ದು ನಾಲ್ಕೈದು ದಿನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣಗೊಳ್ಳಲಿದೆ ಎಂದರು. ಶಿಥಿಲಗೊಂಡಿರುವ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಡಿಡಿಪಿಐ ಅವರಿಗೆ ಸೂಚಿಸಿರುವ ಶಾಸಕರು, ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಕ್ರಮಕೈಗೊಳ್ಳುವಂತೆಯೂ ಸೂಚಿಸಿದರು. ತಾತ್ಕಾಲಿಕ ಶೆಡ್ ನಿರ್ಮಾಣಗೊಳ್ಳುವ ತನಕ ವಿದ್ಯಾರ್ಥಿಗಳ ತರಗತಿಗೆ ಅಡಚಣೆಯಾಗಲಿದ್ದು, ಶೆಡ್ ನಿರ್ಮಾಣಗೊಂಡ ಬಳಿಕ ವಿಶೇಷ ತರಗತಿಗಳನ್ನು ತೆಗೆದುಕೊಂಡು ಸರಿದೂಗಿಸುವಂತೆ ಮುಖ್ಯೋಪಧ್ಯಾಯರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ಪ್ರತಿಯೋರ್ವರಿಗೂ ತಲುಪುವಂತೆ ಮಾಡಬೇಕಿದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಲ್ಲಿ ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ತಾಲೂಕು ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಬಹುದಾಗಿದೆ. ಕಾನೂನಿನ ಇತಿಮಿತಿಯಲ್ಲಿ ಶೀಘ್ರ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರೀತಿಯಿಂದ ಅವರ ಮನಸ್ಸನ್ನು ಗೆಲ್ಲಿ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ನಾಗೂರು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ನಡೆದ ಕಿರಿಮಂಜೇಶ್ವರ, ಕಂಬದಕೋಣೆ, ಹೇರೂರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಜೋಡಣೆ ಸಮಸ್ಯೆಯಿಂದ ಹಲವು ಕುಟುಂಬಗಳಿಗೆ ಅನ್ಯಾಯವಾಗಿದ್ದು, ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಹಾರ ಮತ್ತು ನಾಗರೀಕ ಖಾತೆಯ ಸಚಿವ ಯು.ಟಿ ಖಾದರ್ ಅವರಿಗೆ ಮನವಿ ಮಾಡಲಾಗಿದೆ ಎಂದರು. ಬಸವ ವಸತಿ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಗೆ 1864 ಮನೆ ಮಂಜೂರಾಗಿದ್ದು ಮತ್ಸ್ಯಾಶ್ರಯ ಯೋಜನೆಯಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ರೋಟೆರಿಯನ್‌ಗಳ ಕುಟುಂಬ ಮತ್ತು ವೃತ್ತಿಯ ನಡುವೆ ಉತ್ತಮ ಪ್ರಗತಿಯಿದ್ದರೇ ಇದ್ದರೆ ರೋಟರಿಯೂ ಸರಿಯಾದ ದಾರಿಯಲ್ಲಿ ನಡೆಯುತ್ತದೆ. ಕುಟುಂಬವೂ ರೋಟರಿಯಲ್ಲಿ ಭಾಗಿಯಾದಾಗ ಯೋಜಿತ ಕಾರ್ಯದಲ್ಲಿ ಪೂರ್ಣಪ್ರಮಾಣದ ರೋಟರಿಯ ಸೇವಾ ಕಾರ್ಯ ಯಶಸ್ಸು ಕಾಣಲು ಸಾಧ್ಯವಿದೆ. ಇಂದು ಆತ್ಮವಿಶ್ವಾಸ ಕುಗ್ಗದೆ ಸಮುದಾಯ ಬೆಳೆಯುವಂತೆ ಮಾಡುವ ಕಾರ್ಯ ಸಂಸ್ಥೆಗಳ ಮೂಲಕ ಆಗಬೇಕಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಹೆಚ್. ಎಲ್. ರವಿ ಹೇಳಿದರು. ಅವರು ಬೈಂದೂರು ರೋಟರಿ ಭವನದಲ್ಲಿ ಜರುಗಿದ ರೋಟರಿ ಕ್ಲಬ್ ಬೈಂದೂರು ಪದಪ್ರದಾನ ಸಮಾರಂಭದಲ್ಲಿ ನೂತನ ಅದ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡಿರುವ ೪ ಜನರಿಂದ ಆರಂಭಗೊಂಡ ಮಾಡಿದ ರೋಟರಿ ಇಂದು ವಿಶ್ವದಾದ್ಯಂತ ೧೨ ಲಕ್ಷ ರೊಟೇರಿಯನ್‌ಗಳನ್ನು ಹೊಂದಿದೆ. ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ರೋಟರಿ ಫೌಂಡೇಶನ್ ಹೇಳುತ್ತದೆ. ಶಿಕಾಗೋನಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಸುವುದರಿಂದ ಆರಂಭಗೊಂಡ ರೋಟರಿ ಸೇವೆ, ಅಂಗವಿಕಲತೆ ಹಾಗೂ ಪೊಲೀಯೋ ರೋಗದ…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಸಂಪೂರ್ಣ ಶಿಥಿಲಗೊಂಡ ಹಳೆಯ ಅಪಾಯಕಾರಿ ಶಾಲಾ ಕಟ್ಟಡದಲ್ಲಿಯೇ ಆಟ ಪಾಠ. ಮಳೆಗಾಲದಲ್ಲಿ ನೀರಿನ ಪಸೆ ಏಳುವ ಕೋಣೆಯೊಳಕ್ಕೆ ಕುಳಿತುಕೊಂಡ ಮಕ್ಕಳಿಗೆ ಶೀತ ಜ್ವರ ತಪ್ಪಿದ್ದಲ್ಲ. ನಿಂತುಕೊಂಡೆ ಮಧ್ಯಾಹ್ನದ ಊಟ ಸೇವಿಸಬೇಕಾದ ದುಸ್ಥಿತಿ. ಪಕ್ಕದ ದೇವಸ್ಥಾನವೊಂದೇ ತಾತ್ಕಾಲಿಕ ಆಸರೆ. ಇಷ್ಟನ್ನೂ ಸಹಿಸಿಕೊಂಡು ಮಕ್ಕಳನ್ನು ಧೈರ್ಯಮಾಡಿ ಶಾಲೆಗೆ ಕಳುಹಿಸಿದ್ದ ಪೋಷಕರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಶಾಲೆಯ ಮೇಲ್ಛಾವಣಿ ಮತ್ತಷ್ಟು ಶಿಥಿಲಗೊಂಡು ಹೆಂಚುಗಳು ಗಾಳಿ ಮಳೆಗೆ ಉದುರಿ ಬೀಳುತ್ತಿದ್ದು ಮಕ್ಕಳ ಜೀವಕ್ಕೆ ಹೊಣೆಯಾರು ಎಂದು ಆತಂಕಗೊಂಡಿದ್ದಾರೆ. ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ಉಡಾಫೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದು ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕರುಣಾಜನಕ ಸ್ಥಿತಿ. ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಕಟ್ಟಡಕ್ಕಾಗಿ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿರಂತರವಾಗಿ ಮನವಿ ಮಾಡುತ್ತಾ, ಹೋರಾಟ ನಡೆಸುತ್ತಲೇ ಬಂದಿದ್ದರೂ ಆಶ್ವಾಸನೆಗಳು ಈವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಒಂದನೇ ತರಗತಿಯಿಂದ ರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಕೋಟ ಪಡುಕೆರೆ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ನೇತೃತ್ವದಲ್ಲಿ ಕಾಲೇಜು ವೇಳಾಪಟ್ಟಿ ಬದಲಾಯಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬದಲಾದ ಸರಕಾರಿ ಕಾಲೇಜುಗಳ ವೇಳಾಪಟ್ಟಿಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ ಎಂಟು ಗಂಟೆಯಿಂದಲೇ ತರಗತಿ ಆರಂಭಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ಕೂಡಲೇ ಈ ಮೊದಲಿನಂತೆಯೇ ತರಗತಿಗಳನ್ನು ಆರಂಭಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು. ಪ್ರತಿಭಟನಾ ಮೆರವಣಿಗೆಯು ಪಡುಕರೆಯಿಂದ ಸಾಗಿ ನಾಡ ಕಛೇರಿ ಅಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
