ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ ವಠಾರದಲ್ಲಿ ನಿರ್ಮಾಣಗೊಳ್ಳಲಿರುವ ‘ಸಮುದಾಯ ಭವನ’ಕ್ಕೆ ಬೈಂದೂರು ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪಊಜಾರಿ ಅವರು ಶಿಲನ್ಯಾಸಗೈದರು. ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ರಾಜು ಪೂಜಾರಿ, ಕ್ರೈಸ್ತ ಮುಖಂಡ ಮಾರ್ಟಿನ್ ಎವರೆಸ್ಟ್ ಡಯಾಸ್, ಪಂಚಾಯತ್ ಸದಸ್ಯ ಮಾಣಿಕ್ಯ ಹೋಬಳಿದಾರ್, ಗುತ್ತಿಗೆದಾರ ರವೀಂದ್ರ, ಫಾದರ್ ಮೈಕಲ್ ಡಯಾಸ್, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಇನಾಸ್ ಲೋಬೋ, ಕಾರ್ಯದರ್ಶಿ ಅನಿತಾ ನಜ್ರತ್ ಉಪಸ್ಥಿತರಿದ್ದರು. ಧರ್ಮಗುರು ರೆ.ಫಾ. ರೋನಾಲ್ಡ್ ಮಿರಾಂದ್ ಅವರು ಸ್ವಾಗತಿಸಿ, ಮಾಜಿ ಉಪಾಧ್ಯಕ್ಷ ರಾಬರ್ಟ್ ರೆಬೆಲ್ಲೋ ವಂದಿಸಿರು. ಹೆನ್ರಿ ಲೋಬೋ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ರಾಮ ಪೈ ಮಠ ಶ್ರೀ ವೆಂಕಟರಮಣ ದೇವಸ್ಥಾನ ಸಮೀಪದ ನಿವಾಸಿ ಗ್ರಾಮ ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಅವರ ತೋಟದಲ್ಲಿ ಸುಮಾರು ೮ ಬ್ರಹ್ಮಕಮಲ ರಾತ್ರಿ ಅರಳಿ ಸುವಾಸನೆ ಬೀರುತ್ತಿದೆ. ಮಳೆಗಾಲದ ಸಮಯದಲ್ಲಿ ಅರಳುವ ಈ ಸುಂದರವಾರ ಬ್ರಹ್ಮಕಮಲ ಸುತ್ತಮುತ್ತಲಿನ ಜನರನ್ನು ಆಕರ್ಷಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡ್ತರೆ ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ಮಯ್ಯಾಡಿ ಸೊಸೈಟಿ, ಶಾಲೆ ಸಮೀಪ, ಮೂರು ಕೈ ಹಾಗೂ ತಗ್ಗರ್ಸೆ ಮಯ್ಯಾಡಿ ಸೇತುವೆ ಸಮೀಪ ಸೇರಿದಂತೆ ಮುಂತಾದೆಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆಯೇ ನೀರು ನಿಂತು ಆಸುಪಾಸಿನ ಮನೆಯವರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲಕ್ಕೂ ಮುಂಚೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ರಾಜ್ಯ ಹೆದ್ದಾರಿ ಇದ್ದದ್ದು ಈಗ ರಾಷ್ಟ್ರೀಯ ಹೆದ್ದಾರಿಯಾಗಿದೆ) ಚರಂಡಿ ದುರಸ್ತಿಗೊಳಿಸಬೇಕಿತ್ತು. ಆದರೆ ಗುತ್ತಿಗೆದಾರರು ಈವರೆಗೂ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ್ಯ ತಳೆದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಮಯ್ಯಾಡಿ ಸೊಸೈಟಿ ಬಳಿ ಚರಂಡಿಯ ಮೂಲಕ ಸಹಜವಾಗಿ ನೀರು ಹರಿದು ಹೋಗುವ ಮಾರ್ಗದಲ್ಲಿ ಮಣ್ಣು ತುಂಬಿರುವುದರಿಂದ ರಸ್ತೆ ಮೇಲೆಯೇ ನೀರು ನಿಲ್ಲುವುದಲ್ಲದೇ ಮಳೆ ಹೆಚ್ಚಾದಂತೆ ಮನೆಯೊಳಕ್ಕೆ ನೀರು ನುಗ್ಗುವ ಸ್ಥಿತಿ ಬಂದೊದಗಿದೆ. ಬೈಂದೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡ ಈ ಬಗ್ಗೆ ಮೌನವಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಆಳ್ವಾಸ್ ಪ್ರಗತಿ ೨೦೧೭ ಬೃಹತ್ ಉದ್ಯೋಗ ಮೇಳದಲ್ಲಿ ೧೬ ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದು, ೧೨೫ ಕಂಪೆನಿಗಳಲ್ಲಿ ೧೦೫೮ ನೇರ ಉದ್ಯೋಗ ನೇಮಕಾತಿ, ೨೯೧೮ ಮಂದಿ ಉದ್ಯೋಗದ ಅರ್ಹತೆಯನ್ನು ಪಡೆದಿದ್ದಾರೆ. ೮೩ಕಂಪೆನಿಗಳು ಶೀಘ್ರದಲ್ಲಿ ಉದ್ಯೋಗ ಆಯ್ಕೆಯಾದವರ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ. ಪ್ರತಿಷ್ಠಿತ ಅಮೆಜಾನ್ ೭೨, ಗುಜರಾತ್ ಮೂಲದ ಎಬ್ಝ್‌ಲೂಟ್ ಸರ್ವೇಯರ್‌ಗೆ ೨೦, ಯುಎಇ ಎಕ್ಸಚೆಂಜ್‌ಗೆ ೫, ಎನ್‌ಎಂಸಿಗೆ ೧೧ ಸಹಿತ ವಿವಿಧ ಕಂಪೆನಿಗಳು ಉದ್ಯೋಗವಕಾಶ ಕಲ್ಪಿಸಿದೆ. ಯುಎಇ ಎಕ್ಸಚೆಂಚ್ ವಾರ್ಷಿಕ ೭.೩ ಲಕ್ಷ ರೂ., ಎನ್‌ಎಂಸಿ ರೂ.೬ ಲಕ್ಷ, ಡೆಕಾತ್ಲಾನ್ ಸ್ಪೋಟ್ಸ್ ೩ ಲಕ್ಷ, ಅಮೆಜಾನ್ ೨.೩ ಲಕ್ಷ ರೂ. ಅಭ್ಯರ್ಥಿಗಳಿಗೆ ಆಫರ್ ಮಾಡಿದೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಅಳ್ವ ಪ್ರಗತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ೪೦೦ ಅಧಿಕ ಉಪನ್ಯಾಸಕರು ಸಿಬ್ಬಂದಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ದೇವಲ್ಕುಂದ ಗ್ರಾಮದ ಪ್ರತಿಷ್ಠಿತ ಕೂಕನಾಡು ಮನೆ ಅವಿಭಕ್ತ ಕುಟುಂಬವು ಒಟ್ಟಿಗೆ ಐದು ತಲೆಮಾರುಗಳನ್ನು ಕಂಡಿದೆ. ಡಾ. ಪೂಜಾ ಆದರ್ಶ ಶೇನವ ಅವರ ಎರಡು ತಿಂಗಳ ಮಗು ಅದ್ರಿಜ ಆದರ್ಶ ಶೇನವ ಕೂಕನಾಡು ಮನೆ ವಂಶಬಳ್ಳಿಯ ಕುಡಿಯಾದರೇ, ಎಂಬತ್ತಾರು ವರ್ಷ ಪ್ರಾಯದ ಪುಟ್ಟಮ್ಮ ಶೆಡ್ತಿ ಕುಟುಂಬದ ಹಿರಿತಲೆ. ಕುಂದಾಪ್ರ ಡಾಟ್ ಕಾಂ. ಪುಟ್ಟಮ ಶೆಡ್ತಿ ಅವರ ಮಗಳು ಜಲಜಾಕ್ಷಿ ಶೆಡ್ತಿ (70), ಮೊಮ್ಮೊಗಳು ವಿಜಯಲಕ್ಷ್ಮಿ ಶೆಡ್ತಿ(50), ಮರಿ ಮೊಮ್ಮೊಗಳು ಡಾ. ಪೂಜಾ ಆದರ್ಶ(28) ಹಾಗೂ ಪೂಜಾ ಆದರ್ಶ ಅವರ ಮಗು ಅದ್ರಿಜ ಆದರ್ಶ(2 ತಿಂಗಳು) ಅವರನ್ನು ಅಪರೂಪವೆನಿಸಿರುವ ಅವಿಭಕ್ತ ಕುಟುಂಬದಲ್ಲಿ ಕಾಣುವುದೇ ಸಂಭ್ರಮ. ಚಿತ್ರಕೃಪೆ: ಅಮಿತ್ ತೆಕ್ಕಟ್ಟೆ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಎರಡು ದಿನ ನಡೆಯುವ ಆಳ್ವಾಸ್ ಪ್ರಗತಿ 2017, ೯ನೇ ವರ್ಷದ ಬೃಹತ್ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು. ರಾಜ್ಯ ಕ್ರೀಡಾ ಹಾಗೂ ಯುವಜನ ಸೇವಾ ಖಾತೆಯ ಸಚಿವ ಪ್ರಮೋದ್ ಮದ್ವರಾಜ್ ಉದ್ಯೋಗ ಮೇಳವನ್ನು ಉದ್ಘಾಟಿಸಿ, ಶೈಕ್ಷಣಿಕ ಗುಣಮಟ್ಟದಲ್ಲಿ ಉಡುಪಿ, ದ.ಕ ಜಿಲ್ಲೆ ಅಗ್ರಪಂಕ್ತಿಯಲ್ಲಿದ್ದು, ಅಗಾಧವಾದ ಮಾನವ ಸಂಪನ್ಮೂಲವನ್ನು ಸೃಷ್ಠಿಸುವ ಕೇಂದ್ರವಾಗಿಯೂ ಬೆಳೆದಿದೆ. ವಿವಿಧ ಕಂಪೆನಿಗಳು ಮಾನವಸಂಪನ್ಮೂಲಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಗುಣಮಟ್ಟ ಸಹಿತ ಉತ್ತಮ ಸಾಮರ್ಥ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಗಮನಹರಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಜನರ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು ೬ ಕೋಟಿ ಗೂ ಅಧಿಕ ಅನುದಾನವನ್ನು ವಿನಿಯೋಗಿಸುತ್ತಿದೆ. ಯುವಕರು ಉದ್ಯೋಗಾಂಕ್ಷಿಗಳಾಗುವುದು ಮಾತ್ರವಲ್ಲ. ಹೊಸ ಉದ್ದಿಮೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವ ಕೆಲಸಕ್ಕೂ ಮುಂದಾಗಬೇಕು. ಸ್ವಸಾಮರ್ಥ್ಯದ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ, ಸಂಗೀತಗಾರ ಗಂಗೊಳ್ಳಿ ಪ್ರಕಾಶ್ ಶೆಣೈಯವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಖ್ಯಾತ ಗಿಂಡಿ ನರ್ತನ ಕಲಾವಿದ ಗುಡ್ಡೆಯಂಗಡಿ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಲ್ಲೂರು ನಾರಾಯಣ ವಿಕಲ ಚೇತನ ಮಕ್ಕಳ ಶಾಲೆ ರೂವಾರಿ ತಲ್ಲೂರು ಸುರೇಶ್ ರವರು ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ ಕೊಗ್ಗ ಕಾಮತ್ ವಂದಿಸಿದರು. ಅನಂತರ ಪ್ರಕಾಶ್ ಶೆಣೈ ಗಂಗೊಳ್ಳಿ ಹಾಗೂ ಬಳಗದವರಿಂದ ಗಾನಸುಧಾ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ತಲ್ಲೂರು ವಿಠ್ಠಲ ಭಜನಾ ಮಂಡಳಿ ಸದಸ್ಯರಾದ ಮಮತಾ ಪ್ರಭು, ದೇವಕಿ ಪ್ರಭು, ರಜನಿ ಪ್ರಭು ಇನ್ನಿತರರಿಂದ ಭಜನಾ ಸಂಗೀತ ನಡೆಯಿತು. ಅಕಾಡೆಮಿ ಬಳಗದ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜು ಆರಂಭದ ದಿನಗಳಲ್ಲೇ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸಿರುವುದು ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ನೀಡುವ ಜೊತೆಗೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿಯೂ ಅತ್ಯುತ್ತಮ ಸಾಧನೆ ಮಾಡುವಂತೆ ಪ್ರೇರಣೆ ದೊರೆಯುತ್ತದೆ ಇಂತಹ ಕಾರ್ಯಕ್ರಮ ಸಂಘಟಿಸಿದ ಹಳೆ ವಿದ್ಯಾರ್ಥಿ ಸಂಘ ಅಭಿನಂದನಾರ್ಹ ಎಂದು ಮಣಿಪಾಲ ಆಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೇಳಿದರು. ಅವರು ಕುಂದಾಪುರ ಭಂಡಾರ್ಕಾಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಅತ್ಯುತ್ತಮ ಅಂಕ ಪಡೆದು ಕಾಲೇಜಿಗೆ ಸೇರ್ಪಡೆಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೀರ್ತಿ ಎಸ್., ಧನ್ಯಶ್ರೀ ಎಚ್.ಆರ್., ಶಣ್ಮುಖ ಕೆ.ಎಸ್., ರಕ್ಷಿತ್, ಪಲ್ಲವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಭಂಡಾರ್‌ಕಾರ‍್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಪೂರ್ವಾಧ್ಯಕ್ಷ ರಾಜೀವ ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೋ. ಅರುಣಾಚಲ ಮಯ್ಯ, ಕಾರ್ಯದರ್ಶಿ ರಂಜಿತ್‌ಕುಮಾರ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇಶ ಸಮಾಜಕ್ಕಾಗಿ ದುಡಿಯುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಐಪಿಸಿ ಸೆಕ್ಷನ್ ೩೦೭ರ ಅಡಿ ಸುಳ್ಳು ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿರುವ ಸಚಿವ ಬಿ.ರಮಾನಾಥ ರೈ ಅವರ ಕ್ರಮ ಖಂಡನೀಯ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರು ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟ ಖಂಡಿಸಿ ಜರಗಿದ ಸಾರ್ವಜನಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಚಿವ ರಮಾನಾಥ ರೈ ಅವರು ಸಚಿವರು ಸದನದಲ್ಲಿ ನಿದ್ದೆ ಮಾಡುವುದನ್ನು ಬಿಟ್ಟು ಕಾನೂನು ಅರಿತುಕೊಳ್ಳಲು ಮುಂದಾಗಲಿ. ಹಿಂದು ಸಮಾಜದ ಮೇಲೆ ನಿರಂತರವಾಗಿ ನಡೆಸುತ್ತಿರುವ ಕುತಂತ್ರವನ್ನು ನಿಲ್ಲಿಸಬೇಕು. ಸಚಿವರ ಕುಮ್ಮಕ್ಕಿನಿಂದ ಡಾ.ಪ್ರಭಾಕರ ಭಟ್ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲು…
ಕುಂದಾಪ್ರ ಡಾಟ್ ಕಾಂಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ವತಿಯಿಂದ ಕುಂದಾಪುರದ ಸೈಂಟ್ ಮೇರಿಸ್ ಪ. ಪೂ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಸೋನು ಸಿಜೆ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ, ಉದ್ಯಮಿಗಳಾದ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್‌ನ ದಾಮೋದರ ಪೈ, ಪ್ರವೀಣ್ ಕುಮಾರ್ ಟಿ, ಎಚ್.ಎಸ್. ಹತ್ವಾರ್, ರಾಘವೇಂದ್ರ ಚರಣ ನಾವಡ, ಪ್ರಶಾಂತ ಹವಾಲ್ದಾರ್, ಜಾಯ್ ಕರ್ವೇಲ್ಲೊ, ಅನಿಲ್ ಡಿಸೋಜಾ, ಮಂಜುಳ ನಾಯರ್ ಇನ್ನಿತರರು ಉಪಸ್ಥಿತರಿದ್ದರು.
