Author: ನ್ಯೂಸ್ ಬ್ಯೂರೋ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಮನೆಯ ತುಂಬೆಲ್ಲಾ ಪಟ ಪಟನೆ ಮಾತನಾಡುತ್ತಾ, ಓದಿನೊಂದಿಗೆ ಕೃಷಿ, ಹೈನುಗಾರಿಕೆಯಲ್ಲಿ ಅತ್ಯುತ್ಸಾಹದಿಂದ ತೊಡಗಿಕೊಂಡು ಕುಟುಂಬಕ್ಕೆ ಒತ್ತಾಸೆಯಾಗಿ ನಿಂತಿದ್ದ ಆ ಯುವತಿಯರೀರ್ವರೂ ಸಾವಿನಲ್ಲೂ ತನ್ನ ತಾಯಿಗೆ ಜೊತೆಯಾಗಿ ನಡೆದಿದ್ದಾರೆ. ಆ ಯುವತಿಯರೇ ಉಳುಮೆ ಮಾಡುತ್ತಿದ್ದ ಟಿಲ್ಲರ್, ದಿನವೂ ಹಾಲು ಕರೆಯುತ್ತಿದ್ದ ಆಕಳು ಮಾತ್ರ ಅವರು ಬಾರದ ಲೋಕಕ್ಕೆ ತೆರಳಿದ್ದಾರೆಂಬ ಅರಿವಿಲ್ಲದೇ ಮನೆಯ ಎದುರು ಕಾದು ಕುಳಿತಿವೆ. ಬೇಳೂರು ಗ್ರಾಮ ಪಂಚಾಯತ್ ದೇಲಟ್ಟು ನರಸಿಂಹ ಶೆಟ್ಟಿ ಅವರ ಕುಟುಂಬದಲ್ಲೀಗ ಅಕ್ಷರಶಃ ಸ್ಮಶಾನಮೌನ ಆವರಿಸಿಕೊಂಡಿದೆ. ಮಂಗಳವಾರ ಸಂಜೆಯ ತನಕವೂ ಮನೆಯಲ್ಲಿದ್ದ ಭಾರತಿ ಶೆಟ್ಟಿ ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಹಾಗೂ ಪ್ರಜ್ಞಾ, ತಾವು ಪ್ರೀತಿಯಿಂದ ಮಾಡುತ್ತಿದ್ದ ಕಾಯಕದೊಂದಿಗೆ ವಿಧಿಯ ಕ್ರೂರಲೀಲೆಗೆ ಬಲಿಯಾದಂತಾಗಿದೆ. ಗದ್ದೆಗೆ ಬಿತ್ತನೆ ಮಾಡಲೆಂದು ಕೃಷಿ ಹೊಂಡದಲ್ಲಿ ನೆನೆ ಹಾಕಿದ್ದ ಬೀಜವನ್ನು ಮೇಲೆತ್ತಲು ತಾಯಿಯೊಂದಿಗೆ ತೆರಳಿದ್ದ ಮಕ್ಕಳು 5 ಚೀಲಗಳನ್ನು ಮೇಲೆತ್ತಿ ಕೊನೆಯ ಚೀಲವನ್ನು ಎಳೆದು ತರುವಾಗ ಅವಘಡ ಸಂಭವಿಸಿತ್ತು. ಮೂವರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆರೆಯಲ್ಲಿ ನೆನೆಹಾಕಿದ್ದ ಭತ್ತದ ಚೀಲಗಳನ್ನು ಮೇಲೆತ್ತುವ ವೇಳೆ ಆಯತಪ್ಪಿ ಬಿದ್ದ ತಾಯಿ ಹಾಗೂ ಅವರ ರಕ್ಷಣೆಗೆ ಧಾಮಿಸಿದ ಇಬ್ಬರು ಮಕ್ಕಳು ನೀರಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಟ್ಟು ಎಂಬಲ್ಲಿ ನಡೆದಿದೆ. ದೇಲಟ್ಟು ದೇವಸ್ಥಾನ ಸಮೀಪದ ನರಸಿಂಹ ಶೆಟ್ಟಿ ಎಂಬುವವರ ಪುತ್ರಿ ಭಾರತಿ (45) ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಶೆಟ್ಟಿ(21) ಹಾಗೂ ಪ್ರಜ್ಞಾ ಶೆಟ್ಟಿ (19) ಮೃತ ದುರ್ದೈವಿಗಳು. ಕೃಷಿಕರಾದ ಭಾರತಿ ಅವರ ಕುಟುಂಬ ಮಳೆಗಾಲ ಸನ್ನಿಹಿತವಾದ ಬೆನ್ನಲ್ಲೇ ಬಿತ್ತನೆ ಮಾಡುವ ಉದ್ದೇಶದಿಂದ ಬೀಜದ ಭತ್ತವನ್ನು ಮೊಳಕೆ ಬರಿಸುವ ಸಲುವಾಗಿ ಮನೆಯ ಸಮೀಪದ ಕೆರೆಯಲ್ಲಿ ನೆನೆಹಾಕಿದ್ದರು. ಸಂಜೆ ವೇಳೆಗೆ ಮಳೆಯಾಗಿದ್ದರಿಂದ ಬೀಜಗಳು ಹಾಳಗಬಹುದು ಎಂಬ ಕಾರಣಕ್ಕೆ ಕೆರೆಯಲ್ಲಿ ಹಾಕಲಾಗಿದ್ದ ಚೀಲಗಳನ್ನು ಮೇಲೆತ್ತಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕಾಲು ಜಾರಿ ಬಿದ್ದ ತಾಯಿ ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ್ದ ಮಕ್ಕಳಿಬ್ಬರೂ ಕೆರೆಯಲ್ಲಿ ಬಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲೂ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುವುದರ ಮೂಲಕ ಶೈಕ್ಷಣಿಕವಾಗಿ ಯಶಸ್ಸನ್ನು ಗಳಿಸಿದೆ. ಕೇಂದ್ರಿಯ ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ ಹದಿನಾಲ್ಕನೆಯ ಬಾರಿಗೆ ಶೇ. ೧೦೦ ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲ್ಲೂಕಿನ ರಾಜ್ಯ, ಸಿಬಿಎಸ್ಸಿ ಮತ್ತು ಐಸಿಎಸ್ಸಿ ಈ ಮೂರು ಪಠ್ಯಕ್ರಮಗಳ ಶಾಲೆಗಳ ಪೈಕಿ ಇಂತಹ ಸಾಧನೆಗೆ ಕೇವಲ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಭಾಜನವಾಗಿದೆ. ಪ್ರಸ್ತುತ ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ಮೂಲ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣದಲ್ಲಿ ತನ್ನದೇ ಆದ ಅದ್ವಿತೀಯ ಛಾಪನ್ನು ಮೂಡಿಸಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ರಾಜ್ಯದ ಅಗ್ರಪಂಕ್ತಿಯ ವಿದ್ಯಾಲಯವಾಗಿ ಬೆಳೆದು ಬಂದಿದೆ. ರಾಜ್ಯದ ಹಾಗೂ ಹೊರರಾಜ್ಯದ ಸುಮಾರು ೧೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯು ಸತತವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿ, ಮೂಲತಃ ಕೋಲಾರದ ನಂದಿನಿ ಕೆ.ಆರ್ ಯುಪಿಎಸ್‌ಸಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ. 2006ರಲ್ಲಿ ಕೋಲಾರದ ಚಿಣ್ಮಯಿ ಹೈಸ್ಕೂಲಿನಲ್ಲಿ ಶೇ.೯೬.೮೦ ಅಂಕಗಳಿಸಿ, ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್‌ಗೆ ಸೇರಿದ ಈಕೆ 2008ರಲ್ಲಿ ಶೇ.94.83ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ ಎಂ.ಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಒಂದು ಲಕ್ಷ ಬಹುಮಾನ ಘೋಷಣೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿ ನಂದಿನಿ ಯುಪಿಎಸ್‌ಸಿ ಮೊದಲ ರ‍್ಯಾಂಕ್ ಪಡೆದಿರುವುದು ಸಂತಸ ತಂದುಕೊಟ್ಟಿದೆ. ಈಕೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ 1ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಆಗಸ್ಟ್ ೧೫ರಂದು ಆಳ್ವಾಸ್ ಸಂಸ್ಥೆಯಿಂದ ನಡೆಯುವ ಸ್ವಾತಂತ್ರೋತ್ಸವದಲ್ಲಿ ನಂದಿಯವರನ್ನು ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಘೋಷಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಟ್ಲದಲ್ಲಿ ನಡೆದ ಜೇಸಿ ವಲಯ ೧೫ರ ಮಧ್ಯಂತರ ವಲಯ ಸಮ್ಮೇಳನದಲ್ಲಿ ಜೇಸಿಐ ಕುಂದಾಪುರದ ಅಧ್ಯಕ್ಷ ಶ್ರೀಧರ ಸುವರ್ಣ ಅವರು ಔಟ್‌ಸ್ಟ್ಯಾಂಡಿಂಗ್ ಲೋಮ್ ಪ್ರೆಸಿಡೆಂಟ್ ರನ್ನರ್ ಅವಾರ್ಡ್‌ನ್ನು ಪಡೆದುಕೊಂಡಿದ್ದಾರೆ. ಜೇಸಿಐ ಕುಂದಾಪುರ ಸಿಟಿ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ವಲಯದಲ್ಲಿ ಅತ್ಯುತ್ತಮ ಕ್ಲಬ್‌ಗಳಲ್ಲಿ ಒಂದು ಎಂಬ ಹೆಗ್ಗೆಳಿಕೆಗೆ ಪಾತ್ರವಾದ ಹಿನ್ನಲೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷರಾದ ನಿತಿನ್ ಅವಭೃತ್, ಗಿರೀಶ್ ಹೆಬ್ಬಾರ್, ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ವಿ ಪಾಟೀಲ್ ಅವರನ್ನು ಕುಂದಾಪುರ ಬಾರ್ ಅಸೋಷಿಯೇಶನ್ ರಿ. ಕುಂದಾಪುರ ಇದರ ವತಿಯಿಂದ ಬೀಳ್ಕೊಡಲಾಯಿತು. ಕುಂದಾಪುರದ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅವರು ಇದೀಗ ಬೆಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುತ್ತಾರೆ. ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ನನ್ನ ಅವಧಿಯಲ್ಲಿ ಬಹಳಷ್ಟು ಕಸ್ಟಡಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿದ ಸಮಾಧಾನ ಇದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರಾದವರು ಸಾಕಷ್ಟು ಪರಿಶೀಲಿಸಿ ನ್ಯಾಯಾದಾನ ಮಾಡೋ ಅವಶ್ಯಕತೆ ಬಹಳಷ್ಟು ಇದೆ ಎಂದರಲ್ಲದೆ, ಕುಂದಾಪುರ ವಕೀಲರ ಸಹಕಾರವನ್ನು ಸ್ಮರಿಸಿದರು. ಕುಂದಾಪುರ ಬಾರ್ ಅಸೋಷಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ ನಾನು ಕಂಡ ಮೇಧಾವಿ ಜಡ್ಜ್‌ಗಳಲ್ಲಿ ಪಾಟೀಲ್ ಕೂಡಾ ಒಬ್ಬರು. ಮಾನವೀಯತೆಯ ಜೊತೆಗೆ ಪ್ರಕರಣಗಳನ್ನು ಸುಲಭವಾಗಿ ಪರಿಶೀಲಿಸಿ ನ್ಯಾಯದಾನ ಮಾಡುವ ಶಕ್ತಿ ಪಾಟೀಲ್‌ರಿಗೆ ಇದೆ. ಎಲ್ಲರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಗಂಗೊಳ್ಳಿ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಕಾರ್ಯಕರ್ತರು ಗಂಗೊಳ್ಳಿಯ ದುರ್ಗಾಕೇರಿಯ ಹಿಂದು ರುದ್ರಭೂಮಿಯನ್ನು ಸ್ವಚ್ಛತೆ ಮಾಡಿ ವೀರ ಸಾವರ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಖಾರ್ವಿ ದಾಮನಮನೆ ಮತ್ತು ನಿತ್ಯಾನಂದ ಖಾರ್ವಿ ಮ್ಯಾಂಗನೀಸ್ ರೋಡ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಎಲ್ಲಾ ಕಾರ್ಯಕರ್ತರು ಭಾರತ ಮಾತೆಯ ಮತ್ತು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಾಮೂಹಿಕವಾಗಿ ದೀಪ ಬೆಳಗಿ ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ದುರ್ಗಾಕೇರಿಯ ಹಿಂದು ರುದ್ರಭೂಮಿಯನ್ನು ಸ್ವಚ್ಛಗೊಳಿಸಿ ಸಾವರ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ನವೀನ್ ದೊಡ್ಡಹಿತ್ಲು, ರಾಘವವೇಂದ್ರ ಖಾರ್ವಿ, ರವಿ ಖಾರ್ವಿ, ರಂಜಿತ್ ಖಾರ್ವಿ, ವೆಂಕಟೇಶ ಬೇಲಿಕೇರಿ, ಮಂಜುನಾಥ ಖಾರ್ವಿ, ದಿಲೀಪ ಪೂಜಾರಿ, ಅನುಪ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಇಲ್ಲಿನ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಹೊಸೂರಿನ ಮುಲ್ಲಿಬಾರು ಶಾಲೆಯಲ್ಲಿ ಶಾಲೆ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲೆಗೆ ತಳಿರು ತೋರಣಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕ ನೀಡಿ ಪಾಯಸದೂಟದೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯವನ್ನು ಹೊಂದಿರುವ ಸರಕಾರಿ ಶಾಲೆಗೆ ಬರುವಂತೆ ಶಿಕ್ಷಕ ವೃಂದ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಪೂಜಾರಿ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಗಿರೀಶ್ ಪಿ. ಮೇಸ್ತ ಶಿಕ್ಷಕರಾದ ರಾಮನಾಥ ಮೇಸ್ತ, ಸುಧಾಕರ ಪಿ. ಬೈಂದೂರು, ಹಾಲೇಶಪ್ಪ ಡಿ. ಆರ್., ವಿನಾಯಕ ಪಟಗಾರ್ ಹಾಗೂ ರವೀಂದ್ರ ಮತ್ತು ಊರ ಮಹನೀಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಬೀಟ್ ಪೊಲೀಸ್ ಜೊತೆ ದಲಿತ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು, ಏನಾದರೂ ಸಮಸ್ಯೆ ಇದ್ದರೆ ಬೀಟ್ ಪೊಲೀಸರ ಗಮನಕ್ಕೆ ತನ್ನಿ ಠಾಣೆಗೆ ಹೋಗುವ ಸಂದರ್ಭ ಬಂದರೆ ಬೀಟ್ ಪೊಲೀಸರ ಜೊತೆ ಹೋದರೆ ಅವರು ನಿಮ್ಮ ಸಮಸ್ಯೆ ಪರಿಹಾರ ನೀಡಲು ಸಹಕಾರ ಮಾಡುತ್ತಾರೆ ಎಂದು ಕುಂದಾಪುರ ಡಿಎಸ್ಪಿ ಪ್ರವೀಣ್ ಹೆಚ್. ನಾಯ್ಕ್ ಹೇಳಿದರು. ಅವರು ಕುಂದಾಪುರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದಲ್ಲಿ ಅಕ್ರಮ ಸಾರಾಯಿ ದಂದೆ ನಡೆಯುತ್ತಿದ್ದು, ಅಬಕಾರಿ ಇಲಾಖೆ ಗಮನಕ್ಕೆ ತಂದರೆ ಅವರು ಅಕ್ರಮ ಮದ ಮಾರಾಟ ಮಾಡುವವವರಿಗೆ ಮಾಹಿತಿ ನೀಡಿ, ದಾಳಿ ನಡೆಸುವುದರಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ನಾರಾಯಣ ಕಿರಿಮಂಜೇಶ್ವರ ಆರೋಪಿಸಿದ್ದು, ಉತ್ತರಿಸಿದ ಡಿಎಸಿ,ಅಬಕಾರಿ ಇಲಾಖೆ ಗಮನಕ್ಕೆ ತಂದು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ತಲ್ಲೂರು ಗ್ರಾಮ ಉಪ್ಪಿನಕುದ್ರು ದಲಿತ ಕುಟುಂಬ ಕಳೆದ ೨೦ ವರ್ಷದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ, ಆಸ್ಪತ್ರೆಯ ಬೆಳವಣಿಗೆಯಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದ್ದ ಔಷಧ ವಿತರಕಿ (ಫಾರ್ಮಾಸಿಸ್ಟ್) ಕೆ. ಗೀತಾ ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಡಿಗ ಹೇಳಿದರು. ಅರೆಹೊಳೆ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆ ನಾವುಂದದಲ್ಲಿ ೩೨ ವರ್ಷಗಳ ಕಾಲ ಔಷಧ ವಿತರಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಗೀತಾ ಅವರಿಗೆ ಇಲಾಖೆಯ ವತಿಯಿಂದ ಎರ್ಪಡಿಸಲಾದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ಈ ಆಸ್ಪತ್ರೆಯಿಂದ ಅನೇಕರಿಗೆ ಅನುಕೂಲವಾಗಿದೆ. ಗ್ರಾಪಂದಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದ್ದು, ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ವೈದ್ಯರು, ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು. ನಿವೃತ್ತರಾಗುತ್ತಿರುವ ಕೆ. ಗೀತಾ ಅವರು ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಸರಕಾರಿ ಅಧಿಕಾರಿಗಳಿಗೆ ಎಲ್ಲಿ ಕಠಿಣವಾಗಿರಬೇಕು, ಮೃದುವಾಗಿರಬೇಕು ಎಂದು ತಿಳಿದಿರಬೇಕು. ಸರಕಾರ…

Read More