Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ, ಸಂಗೀತಗಾರ ಗಂಗೊಳ್ಳಿ ಪ್ರಕಾಶ್ ಶೆಣೈಯವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಖ್ಯಾತ ಗಿಂಡಿ ನರ್ತನ ಕಲಾವಿದ ಗುಡ್ಡೆಯಂಗಡಿ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಲ್ಲೂರು ನಾರಾಯಣ ವಿಕಲ ಚೇತನ ಮಕ್ಕಳ ಶಾಲೆ ರೂವಾರಿ ತಲ್ಲೂರು ಸುರೇಶ್ ರವರು ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ ಕೊಗ್ಗ ಕಾಮತ್ ವಂದಿಸಿದರು. ಅನಂತರ ಪ್ರಕಾಶ್ ಶೆಣೈ ಗಂಗೊಳ್ಳಿ ಹಾಗೂ ಬಳಗದವರಿಂದ ಗಾನಸುಧಾ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ತಲ್ಲೂರು ವಿಠ್ಠಲ ಭಜನಾ ಮಂಡಳಿ ಸದಸ್ಯರಾದ ಮಮತಾ ಪ್ರಭು, ದೇವಕಿ ಪ್ರಭು, ರಜನಿ ಪ್ರಭು ಇನ್ನಿತರರಿಂದ ಭಜನಾ ಸಂಗೀತ ನಡೆಯಿತು. ಅಕಾಡೆಮಿ ಬಳಗದ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜು ಆರಂಭದ ದಿನಗಳಲ್ಲೇ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸಿರುವುದು ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ನೀಡುವ ಜೊತೆಗೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿಯೂ ಅತ್ಯುತ್ತಮ ಸಾಧನೆ ಮಾಡುವಂತೆ ಪ್ರೇರಣೆ ದೊರೆಯುತ್ತದೆ ಇಂತಹ ಕಾರ್ಯಕ್ರಮ ಸಂಘಟಿಸಿದ ಹಳೆ ವಿದ್ಯಾರ್ಥಿ ಸಂಘ ಅಭಿನಂದನಾರ್ಹ ಎಂದು ಮಣಿಪಾಲ ಆಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೇಳಿದರು. ಅವರು ಕುಂದಾಪುರ ಭಂಡಾರ್ಕಾಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಅತ್ಯುತ್ತಮ ಅಂಕ ಪಡೆದು ಕಾಲೇಜಿಗೆ ಸೇರ್ಪಡೆಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೀರ್ತಿ ಎಸ್., ಧನ್ಯಶ್ರೀ ಎಚ್.ಆರ್., ಶಣ್ಮುಖ ಕೆ.ಎಸ್., ರಕ್ಷಿತ್, ಪಲ್ಲವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಭಂಡಾರ್‌ಕಾರ‍್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಪೂರ್ವಾಧ್ಯಕ್ಷ ರಾಜೀವ ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೋ. ಅರುಣಾಚಲ ಮಯ್ಯ, ಕಾರ್ಯದರ್ಶಿ ರಂಜಿತ್‌ಕುಮಾರ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇಶ ಸಮಾಜಕ್ಕಾಗಿ ದುಡಿಯುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಐಪಿಸಿ ಸೆಕ್ಷನ್ ೩೦೭ರ ಅಡಿ ಸುಳ್ಳು ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿರುವ ಸಚಿವ ಬಿ.ರಮಾನಾಥ ರೈ ಅವರ ಕ್ರಮ ಖಂಡನೀಯ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರು ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟ ಖಂಡಿಸಿ ಜರಗಿದ ಸಾರ್ವಜನಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಚಿವ ರಮಾನಾಥ ರೈ ಅವರು ಸಚಿವರು ಸದನದಲ್ಲಿ ನಿದ್ದೆ ಮಾಡುವುದನ್ನು ಬಿಟ್ಟು ಕಾನೂನು ಅರಿತುಕೊಳ್ಳಲು ಮುಂದಾಗಲಿ. ಹಿಂದು ಸಮಾಜದ ಮೇಲೆ ನಿರಂತರವಾಗಿ ನಡೆಸುತ್ತಿರುವ ಕುತಂತ್ರವನ್ನು ನಿಲ್ಲಿಸಬೇಕು. ಸಚಿವರ ಕುಮ್ಮಕ್ಕಿನಿಂದ ಡಾ.ಪ್ರಭಾಕರ ಭಟ್ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲು…

Read More

ಕುಂದಾಪ್ರ ಡಾಟ್ ಕಾಂಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ವತಿಯಿಂದ ಕುಂದಾಪುರದ ಸೈಂಟ್ ಮೇರಿಸ್ ಪ. ಪೂ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಸೋನು ಸಿಜೆ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ, ಉದ್ಯಮಿಗಳಾದ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್‌ನ ದಾಮೋದರ ಪೈ, ಪ್ರವೀಣ್ ಕುಮಾರ್ ಟಿ, ಎಚ್.ಎಸ್. ಹತ್ವಾರ್, ರಾಘವೇಂದ್ರ ಚರಣ ನಾವಡ, ಪ್ರಶಾಂತ ಹವಾಲ್ದಾರ್, ಜಾಯ್ ಕರ್ವೇಲ್ಲೊ, ಅನಿಲ್ ಡಿಸೋಜಾ, ಮಂಜುಳ ನಾಯರ್ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ೨೦೧೭-೧೮ನೇ ಸಾಲಿನ ಪ್ರಥಮ ಗ್ರಾಮಸಭೆ ನಡೆಯಿತು. ಸರಕಾರದ ಆದೇಶದಂತೆ ವರ್ಷಕ್ಕೆ ಎರಡು ಗ್ರಾಮಸಭೆಗಳಾಬೇಕು. ಆದರೆ ಬೈಂದೂರು ಗ್ರಾಪಂ ಮಾತ್ರ ಕಳೆದ ಮೂರು ವರ್ಷದಿಂದ ವರ್ಷಕ್ಕೊಂದು ಗ್ರಾಮಸಭೆ ಮಾಡಿ ಕೈತೊಳೆದುಕೊಳ್ಳುತ್ತಿದೆ ಎಂದು ಗ್ರಾಪಂ ಸದಸ್ಯರಾದ ವೆಂಕಟ ಪೂಜಾರಿ ಮತ್ತು ರಾಘವೇಂದ್ರ ಆರೋಪಿಸಿದರು. ಅದಕ್ಕೆ ಉತ್ತರಿಸಿದ ಪಿಡಿಒ ರೇಣುಕಾ ಹೆಗ್ಡೆ, ಕಳೆದ ಅಕ್ಟೋಬರ್‌ನಲ್ಲಿ ವಿಶೇಷ ಗ್ರಾಮಸಭೆ ನಡೆಸಿದ್ದನ್ನು ನೆನಪಿಸಿ ಪರಿಸ್ಥಿತಿ ತಿಳಿಗೊಳಿಸಿದರು ಸಭೆಯಲ್ಲಿ ನೋಡೆಲ್ ಅಧಿಕಾರಿ ಹಾಗೂ ಗ್ರಾಮಮಟ್ಟದ ಕೆಲವು ಅಧಿಕಾರಿಗಳ ಗೈರು ಹಾಜರಿ ಗ್ರಾಮಸ್ಥರನ್ನು ಕೆರಳಿಸಿತು. ಪ್ರತಿಯೊಂದು ಗ್ರಾಮಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಗ್ರಾಮಸಭೆಯಲ್ಲಿ ಕೈಗೊಂಡ ಯಾವುದೇ ನಿರ್ಣಯಗಳಿಗೆ ಬೆಲೆ ಇಲ್ಲ. ಗ್ರಾಮಸಭೆಯ ನಿರ್ಣಯಗಳ ಅನುಷ್ಠಾನ ಕೂಡ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ಗ್ರಾಮಸಭೆಯಲ್ಲಿ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು, ಗ್ರಾಮಸಭೆಯ ಉದ್ದೇಶ ಸಫಲವಾಗುತ್ತಿಲ್ಲ. ಹೀಗಾಗಿ ಇಂದಿನ ಗ್ರಾಮಸಭೆಯನ್ನು ರದ್ದುಪಡಿಸಿ ಗ್ರಾಮಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಮತ್ತೊಮ್ಮೆ ಗ್ರಾಮಸಭೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕಿದ್ದರೆ ಪೂರ್ವ ತಯಾರಿ ಅಗತ್ಯ. ಸಮಯದ ಸದ್ಬಳಕೆ, ಪೂರ್ಣ ಪ್ರಮಾಣದ ಓದಿನಲ್ಲಿ ತೊಡಗಿಕೊಳ್ಳುವ ಮನೋಭಾವ ನಮ್ಮಲ್ಲಿದ್ದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಅರಿಸಿ ಬರುತ್ತವೆ. ಉಪನ್ಯಾಸಕರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬಗೆಗೆ ಮುತುವರ್ಜಿ ವಹಿಸುವಂತೆಯೇ ಪೋಷಕರು ಮನೆಯಲ್ಲಿ ತಮ್ಮ ಮಕ್ಕಳು ಓದಿನ ಬಗೆಗೆ ಗಮನ ಹರಿಸುವುದು ಅತೀ ಅಗತ್ಯ ಎಂದು ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಗುರುವಾರ ಇಲ್ಲಿನ ರೋಟರಿ ಭವನದಲ್ಲಿ ಜರುಗಿದ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡುತ್ತಾ ಸರಕಾರಿ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿ ಜಿಲ್ಲೆಯಲ್ಲಿಯೇ ಮಾದರಿ ಫಲಿತಾಂಶವನ್ನು ದಾಖಲಿಸಿದ್ದಾರೆ. ಇದರಲ್ಲಿ ಇಲ್ಲಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಶ್ರಮ ದೊಡ್ಡದಿದೆ. ಸರಕಾರಿ ಕಾಲೇಜೊಂದರ ಈ ಸಾಧನೆ ಶ್ಲಾಘನೀಯವಾದದ್ದು ಎಂದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವರೆಗಿನ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಒತ್ತಡಗಳು ಎದುರಾಗುತ್ತವೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಸನಾತನ ಧರ್ಮದ ಸಂಪ್ರದಾಯದ ಪ್ರಕಾರ ಎಲ್ಲಾ ವಿದ್ಯೆಗಳು ಓಂಕಾರ ಸ್ವರೂಪಿಯಾದ ಪರಬ್ರಹ್ಮನಿಂದಲೇ ಬಂದವುಗಳು. ಯೋಗಶಾಸ್ತ್ರವು ಇದಕ್ಕೆ ಹೊರತಾಗಿಲ್ಲ. ಈ ಯೋಗವನ್ನು ಸೂತ್ರಗಳ ಮೂಲಕ ಸರಳೀಕರಿಸಿ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಉದ್ಧಾರವಾಗುವಂತೆ ರಚಿಸಿದ್ದು ಮಹರ್ಷಿ ಪತಂಜಲಿಯವರು. ಅಲ್ಲದೇ ಪತಂಜಲಿ ಯೋಗ ಸೂತ್ರವೇ ಅತ್ಯಂತ ಪ್ರಾಚೀನವಾಗಿದ್ದು, ಪ್ರಾಯೋಗಿಕವಾಗಿದ್ದು ಅಧಿಕೃತವಾಗಿದೆ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಪತಂಜಲಿ ಯೋಗ ಪೀಠ ಹರಿದ್ವಾರ ಇದರ ತತ್ವಾಧಾರಿತ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ನ್ಯಾಸ್ ಉಡುಪಿ ಜಿಲ್ಲೆ ಮತ್ತು ಪತಂಜಲಿ ಯೋಗ ತರಬೇತಿ ಕೇಂದ್ರ, ಶಿಶುಮಂದಿರ ಬೈಂದೂರು ಇವರ ಆಶ್ರಯದಲ್ಲಿ ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ಬುಧವಾರ ನಡೆದ ವಿಶ್ವ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ತಶುದ್ಧಿಯಿಂದ ಯೋಗ, ವ್ಯಾಯಾಮ, ಪ್ರಾಣಾಯಾಮದಿಂದ ದೇಹದಂಡನೆ ಮಾಡುವುದರ ಮೂಲಕ ಆರೋಗ್ಯವನ್ನು ಸಮತೋಲನವಾಗಿಡಲು ಸಾಧ್ಯ. ಪ್ರಾಚೀನ ಜ್ಞಾನ ಅನುಕರಿಸುತ್ತಾ ಹೋದಂತೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನಗರದ ಅಜ್ಜರಕಾಡುವಿನಲ್ಲಿ ಹಿ & ಷಿ ಯುನಿಸೆಕ್ಸ್ ಸೆಲೂನ್ ಜೂ. 25ರಿಂದ ಶುಬಾರಂಭಗೊಳ್ಳಲಿದೆ. ಅಜ್ಜರಕಾಡು ಆಸ್ಪತ್ರೆ ಎದುರಿನ ಕಾರ್ತಿಕ್ ಕಿಶೋರ್ ಬಿಲ್ಡಿಂಗ್‌ನಲ್ಲಿ ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಸೆಲೂನ್ ಕಾರ್ಯಾರಂಭ ಮಾಡಲಿದ್ದು ನಿಮ್ಮಿಷ್ಟದ ದರದಲ್ಲಿ, ಉತ್ಕೃಷ್ಟ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಹೇರ್ ಕಟ್, ಬ್ಲೋ ಡ್ರೈ, ಥ್ರೆಡ್ಡಿಂಗ್, ವ್ಯಾಕ್ಸಿಂಗ್, ಬ್ರೈಡಲ್ ಮೇಕಪ್, ಮ್ಯನಿಕ್ಯೂರ್, ಫೇಸಿಯಲ್, ಹೇರ್ ಸ್ಮೂಥ್ನಿಂಗ್, ಪೆಡಿಕ್ಯೂರ್, ಹೇರ್ ಸ್ಪಾ, ಹೇರ್ ಕಲರಿಂಗ್, ಹೇರ್ ಸ್ಟೈಟಲಿಂಗ್, ಹೆಡ್ ಮಸಾಜ್ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿದೆ. ಶುಭಾರಂಭದ ದಿನದಿಂದ ಐದು ದಿನಗಳ ಕಾಲ ವಿಶೇಷ ಕೊಡುಗೆಯಾಗಿ ಎಲ್ಲಾ ಸೇವೆಗಳ ದರದಲ್ಲಿಯೂ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಿಕರಾದ ಅಕ್ಷಯ್ ಶೆಟ್ಟಿ ಹಾಗೂ ರೋಷನ್ ಶೆಟ್ಟಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ ಹಿ & ಷಿ ಯುನಿಸೆಕ್ಸ್ ಸೆಲೂನ್ #12-3-19(4) ಕಾರ್ತಿಕ್ ಕಿಶೋರ್ ಬಿಲ್ಡಿಂಗ್ ಅಜ್ಜರಕಾಡು ಆಸ್ಪತ್ರೆ ಎದುರು ಉಡುಪಿ – 576101 9900438438 A…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗಂಗೊಳ್ಳಿ ಸ್ಥಾನೀಯ ಸಮಿತಿ ವತಿಯಿಂದ ಯೋಗ ತರಬೇತಿ ಕಾರ್ಯಕ್ರಮ ಬುಧವಾರ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯೋಗ ತರಬೇತುದಾರ ರಾಜು ಕೋಟೇಶ್ವರ ಅವರು ಯೋಗ ತರಬೇತಿ ನೀಡಿದರು. ಬಳಿಕ ಮಾತನಾಡಿದ ಅವರು ಮನೋದೈಹಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಅಸ್ತಮಾಗಳಂತಥವುಗಳಿಂದ ಸಂಪೂರ್ಣವಾಗಿ ಹೊರಬರಲು ಯೋಗ ರಾಮಬಾಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ, ಔದ್ಯೋಗಿಕವಾಗಿ ಔನ್ನತ್ಯ ಸಾಧಿಸಲು ಹಾಗೂ ಉತ್ತಮ ಸಂಪಾದನೆಗೂ ಅತೀ ಸಹಾಯಕವಾಗಿದೆ. ಸ್ಪರ್ಧಾತ್ಮಕ ಒತ್ತಡ ಯುಗದಲ್ಲಿ ಮನಸ್ಸಿನ ಒತ್ತಡವನ್ನು ದೂರ ಮಾಡಲು ಯೋಗಾಭ್ಯಾಸ ಸಹಾಯಕವಾಗಲಿದೆ ಎಂದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಹಸಂಚಾಲಕ ವಾಸುದೇವ ದೇವಾಡಿಗ, ಬಿಜೆಪಿ ಗಂಗೊಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ, ಕಾರ್ಯದರ್ಶಿ ಬಿ.ಗಣೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರಳು ಸಮಸ್ಯೆಯಿಂದಾಗಿ ಇಡೀ ಜಿಲ್ಲೆಯ ಅಭಿವೃದ್ಧಿಯೇ ಸರ್ವನಾಶವಾಗಿದೆ. ಹಸಿರು ಪೀಠಕ್ಕೆ ಮನವರಿಕೆ ಮಾಡಿಕೊಡದಿರುವುದರಿಂದ ಮರಳು ಸಮಸ್ಯೆಗೆ ರಾಜ್ಯ ಸರಕಾರವೇ ಕಾರಣವಾಗಿದ್ದು ಕಾರ್ಮಿಕ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು. ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಬೈಂದೂರು ವತ್ತಿನೆಣಿ ಗುಡ್ಡ ಕುಸಿತದ ಸಮಸ್ಯೆಗೆ ಸರಕಾರದ ನಿರ್ಲಕ್ಷವಾಗಿದ್ದು ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರಕಾರ ೧೦೦ ಮೀ.ಕೇಳಿದ್ದು ರಾಜ್ಯ ಸರಕಾರ ೬೦ ಮಿ.ಕೊಟ್ಟಿರುವುದು ಅಲ್ಲದೆ ಅರಣ್ಯ ಇಲಾಖೆಗಳ ತಗಾದೆ ಮಾಡಿದ್ದಾರೆ ಇದು ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಗಮನಿಸಬೇಕು ಎಂದ ಅವರು ಕೇಂದ್ರ ಸರಕಾರದ ಅನುದಾನದಿಂದ ಮಂಜುರಾದ ತಾರಾಪತಿ, ಸೌಡ ಸೇತುವೆ ಅನುದಾನವನ್ನು ರಾಜ್ಯ ಸರಕಾರದೆಂದು ಸ್ಥಳೀಯ ಶಾಸಕರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗವಾಡಿದರು. ದೇಶದ ಪ್ರಥಮ ಪ್ರಜೆಯೇ ಶ್ರೀಕೃಷ್ಣ ದೇವಸ್ಥಾನಕ್ಕೆ ಬಂದಾಗ ರಾಜ್ಯ ಮುಖ್ಯಮಂತ್ರಿಗಳು ಹಿಂದು…

Read More