ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ನಾಗನಾಯ್ಕರ ಮನೆ ನಿವಾಸಿ ವಿಜಯ್ ಮೊಗವೀರ (26) ಅವರು ಕಿಡ್ನಿ ವೈಫಲ್ಯ, ನ್ಯೂಮೋನಿಯಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮಾನವೀಯ ನೆರವಿನ ಅಗತ್ಯವಿದೆ. ಅಸ್ವಸ್ಥಗೊಂಡಿರುವ ವಿಜಯ್ ಅವರನ್ನು ಜೂ.23ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ನೀಡಬೇಕಾಗಿದ್ದು ವೈದ್ಯಕೀಯ ವೆಚ್ಚ ಸುಮಾರು 3ಲಕ್ಷ ರೂ. ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಕುಟುಂಬದವರಿಗೆ ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದ್ದು ಸಹೃದಯಿಗಳ ಉದಾರ ನೆರವನ್ನು ಅವರು ಕೋರಿದ್ದಾರೆ. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ವಿಜಯ್ s/o ಸೀನ ಮೊಗವೀರ ನಾಗನಾಯ್ಕರ ಮನೆ, ಮೋವಾಡಿ, ತ್ರಾಸಿ ಗ್ರಾಮ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಬ್ಯಾಂಕ್: ಕರ್ಣಾಟಕ ಬ್ಯಾಂಕ್ ಅಕೌಂಟ್ ನಂ: 7552500100756101 ಐಎಪ್ಎಸ್ಸಿ: KARB0000755 ಮಾಹಿತಿಗೆ ಸಂಪರ್ಕ: +91 9731040168
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ತಾಲೂಕು ವ್ಯಾಪ್ತಿಯ ಗಂಗೊಳ್ಳಿ, ಮರವಂತೆ, ಶಿರೂರು ಮುಂತಾದೆಡೆ ಕಡಲ ತೀರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕಡಲ್ಕೊರೆತ ಉಗ್ರ ಸ್ವರೂಪ ತಾಳಿದ್ದು, ತೀರ ಪ್ರದೇಶದ ಜನರು ಆತಂಕದಲ್ಲಿ ದಿನದೂಡುವಂತಾಗಿದೆ. ಶಿರೂರು ಕರಾವಳಿ, ಮರವಂತೆ ಹಾಗೂ ಗಂಗೊಳ್ಳಿಯ ಲೈಟ್ಹೌಸ್, ಸಾಂತಯ್ಯನಕೇರಿ ಸಮೀಪದ ಬ್ಯಾಲಿಕೊಡೇರಿ ಮನೆ ವಠಾರ, ಖಾರ್ವಿಕೇರಿ ಪರಿಸರ ಮತ್ತು ಬಂದರು ಬೇಲಿಕೇರಿ ಪ್ರದೇಶದಲ್ಲಿ ಕಡಲ್ಕೊರೆತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೆಂಗಿನ ಮರ ಸೇರಿದಂತೆ ಬೃಹತ್ ಗಾತ್ರದ ಮರಗಳು ಕಡಲ ಒಡಲು ಸೇರಿದ್ದು ಇನ್ನೂ ಅನೇಕ ಮರಗಳು ಉರುಳಿ ಬೀಳುವ ಸಾಧ್ಯತೆಗಳಿವೆ. ಕಡಲ್ಕೊರೆತ ಇದೇ ಸ್ವರೂಪದಲ್ಲಿ ಮುಂದುವರಿದರೆ ಅನೇಕ ವಾಸ್ತವ್ಯದ ಮನೆಗಳಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ದಡದ ಮೇಲೆ ನಿಲ್ಲಿಸುವ ಮೀನುಗಾರಿಕಾ ದೋಣಿಗಳೂ ಕೂಡ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿದ್ದು, ಮೀನುಗಾರರು ದೋಣಿಗಳ ಸಂರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಖಾರ್ವಿಕೇರಿ ಪ್ರದೇಶದಲ್ಲಿ ಕಳೆದ ಸಾಲಿನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ತಡೆಗೋಡೆಗೆ ಸಮುದ್ರದ ರಕ್ಕಸ ಗಾತ್ರದ ಅಲೆಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ 2017-18ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಐತಾಳ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮೊಹಮ್ಮದ್ ಅಶ್ಫಕ್, ಉಪಾಧ್ಯಕ್ಷರಾಗಿ ಸತೀಶ್ ಕೊತ್ವಾಲ್, ವೆಂಕಟೇಶ್ ಪ್ರಭು, ಜತೆ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಶ್ರೀನಿವಾಸ ಶೇಟ್, ನಿಕಟಪೂರ್ವಾಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ, ನಿರ್ದೇಶಕರಾಗಿ ಪ್ರವೀಣ್ಕುಮಾರ್ ಟಿ.(ಕ್ಲಬ್), ಕೆ.ಸಿ.ಶೆಟ್ಟಿ(ಕಮ್ಯೂನಿಟಿ ಸರ್ವಿಸ್), ಕೆ. ಆರ್. ನಾಯ್ಕ್(ಇಂಟರ್ನ್ಯಾಶನಲ್), ರಾಘವೇಂದ್ರ ಚರಣ ನಾವಡ(ಯೂತ್), ಕೆ.ಸುಭಾಶ್ಚಂದ್ರ ಶೆಟ್ಟಿ(ಟಿಆರ್ಎಫ್), ರಾಜೀವ ಶೆಟ್ಟಿ(ಪೋಲಿಯೋ ಪ್ಲಸ್), ಎಸ್. ಶಶಿಧರ ಶೆಟ್ಟಿ(ಲಿಟ್ರಸಿ), ಡಾ. ರಾಜಾರಾಮ್ ಶೆಟ್ಟಿ(ವಿನ್ಸ್), ಸಂತೋಷ್ ಕುಮಾರ್(ಸಾರ್ಜೆಂಟ್), ಪರಮೇಶ್ವರ ಹೆಗ್ಡೆ(ಬುಲೆಟಿನ್ ಎಡಿಟರ್) ಆಯ್ಕೆಯಾದರು. ಜು.07 ಪದಪ್ರದಾನ : ರೋಟರಿ ಕ್ಲಬ್ ಕುಂದಾಪುರ ಪದಪ್ರದಾನ ಸಮಾರಂಭ ಜುಲೈ 07ರಂದು ಸಂಜೆ 7.15ಗಂಟೆಗೆ ಕುಂದಾಪುರದ ಬಸ್ರೂರು ರಸ್ತೆಯ ಈಸ್ಟ್ ವೆಸ್ಟ್ ಕಂಟ್ರಿ ಕ್ಲಬ್ನಲ್ಲಿ ನಡೆಯಲಿದೆ. ರೋಟರಿ ಜಿಲ್ಲಾ ಪೂರ್ವಾ ಗವರ್ನರ್ ಕೃಷ್ಣ ಶೆಟ್ಟಿ ಪದಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ. ಕಾಂಚನ್, ಜೋನಲ್ ಲೆಫ್ಟಿನೆಂಟ್ ಮನೋಜ್ ನಾಯರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 100ಕಿಲೋವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕವನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ ನಾರಾಯಣ ಶೆಟ್ಟಿ, ಅಧೀಕ್ಷಕಿ ಶೋಭಾ, ಮಂಗಳೂರು ವಿದ್ಯುಚ್ಛಕ್ತಿ ನಿಗಮ ಕುಂದಾಪುರದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅಶೋಕ್ ಪೂಜಾರಿ, ಟಾಟಾ ಸೋಲಾರ್ ಚಾನೆಲ್ ಪಾಲುದಾರರಾದ ವಿಜಯಚಂದ್ರ ರಾವ್, ಉಮೇಶ್ ರಾವ್, ಸೂರ್ಯನಾರಾಯಣ ರಾವ್ ಹಾಗೂ ಸಚಿನ್ ಶಿರೂರು ಉಪಸ್ಥಿತರಿದ್ದರು. ಸೌರಶಕ್ತಿ ಉತ್ಪಾದನಾ ಘಟಕದವು ದಿನವೊಂದಕ್ಕೆ ಸರಾಸರಿ 400ರಿಂದ 450ಯುನಿಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಕಾಲೇಜಿನಗೆ ಅಗತ್ಯವಿರುವ ವಿದ್ಯುತ್ತನ್ನು ಪೂರ್ಣಪ್ರಮಾಣದಲ್ಲಿ ಪೂರೈಸುತ್ತದೆ. ಇದರಿಂದಾಗಿ ಕಾಲೇಜು ವಿದ್ಯುತ್ ಸ್ವಾವಲಂಬಿಯಾಗಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಹೋಲಿ ರೋಜರಿ ಶಾಲೆಯ ೨೦೧೭-೧೮ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಶುಕ್ರವಾರ ಶಾಲೆಯ ಸಭಾಭವನದಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಜಾದೂಗಾರ ಓಂಗಣೇಶ ಉಪ್ಪುಂದ ಅವರು ವಿದ್ಯಾರ್ಥಿ ಸಂಸತ್ತಿನ ಮಹತ್ವದ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಮಾಣವಚನ ಬೋಧಿಸಿದರು. ಕುಂದಾಪುರ ವಲಯದ ಧರ್ಮಗುರು ರೆ.ಫಾ.ಅನಿಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋಯ್ಸಲಿನ್ ಎ.ಸಿ. ಶುಭಾಶಂಸನೆಗೈದರು. ಸಹಶಿಕ್ಷಕಿಯರಾದ ರೇಣುಕಾ ಐತಾಳ್ ಮತ್ತು ನೀತಾ ಡಿ’ಸೋಜ ಕಾರ್ಯಕ್ರಮವನ್ನು ಸಂಘಟಿಸಿದ್ದರು. ವಿದ್ಯಾರ್ಥಿ ಮುಖಂಡ ಶೋನ್ ಪಾವ್ಲ ಸ್ವಾಗತಿಸಿದರು. ವಿದ್ಯಾರ್ಥಿನಿ ರಿಶಿಕಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ಉಪಮುಖಂಡ ಸುಪ್ರೀತಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ರಾಧಿಕಾ ಪೈ ಅವರನ್ನು ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ವತಿಯಿಂದ ಲ್ಯಾಪ್ಟಾಪ್ ಕೊಡುಗೆಯಾಗಿ ನೀಡಿ ಗೌರವಿಸಲಾಯಿತು. ಗುರುವಾರ ರಾಧಿಕಾ ಪೈ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ ಹೆಗ್ಡೆ ಕೋಟತ್ತು ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಅವರು ರಾಧಿಕಾ ಪೈ ಅವರಿಗೆ ಲ್ಯಾಪ್ಟಾಪ್ನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಪ್ರಮುಖರಾದ ರಾಜಾರಾಮ ಪಡಿಯಾರ್ ಉಪ್ಪುಂದ, ಪ್ರಶಾಂತ ನಾಯಕ್ ಕೋಟ, ಕೆ.ರಾಮನಾಥ ನಾಯಕ್, ಎನ್.ಅಶ್ವಿನ್ ನಾಯಕ್, ಎಂ.ಜಿ.ರಾಘವೇಂದ್ರ ಭಂಡಾರ್ಕಾರ್, ಸ್ಥಳೀಯರಾದ ಕೆ.ಶಾಂತಾರಾಮ ನಾಯಕ್, ಎಂ.ಜಿ.ಸುರೇಶ ಭಂಡಾರ್ಕಾರ್, ಎಂ.ಮಾಧವ ಪೈ, ಮಾಯಾ ಎಂ.ಪೈ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ನಿತ್ಯನಿಧಿ(ಪಿಗ್ಮಿ) ಸಂಗ್ರಹಕಾರರ ಸಂಘದ ಪದಾಧಿಕಾರಿಗಳ ಆಯ್ಕೆ ಭಾನುವಾರ ಕುಂದಾಪುರದ ಸೈಂಟ್ ಮೇರಿಸ್ ಶಾಲೆಯಲ್ಲಿ ಜರುಗಿತು ನೂತನ ಅಧ್ಯಕ್ಷರಾಗಿ ಜಿ.ಆರ್. ಗೋಪಾಲ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಅಂತೋನಿ ಡಿ. ಅಲ್ಮೇಡಾ, ಉಪಾಧ್ಯಕ್ಷರಾಗಿ ಜಿ.ಕುಮಾರಸ್ವಾಮಿ, ಆನಂದ ಮಡಿವಾಳ, ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ ಹಂಗಳೂರು, ಜೊತೆ ಕಾರ್ಯದರ್ಶಿ ಚಂದ್ರ ಕೆ. ಕೋಶಾಧಿಕಾರಿ ಸುಬ್ರಹ್ಮಣ್ಯ ಕಾರಂತ, ಜೊತೆ ಕೋಶಾಧಿಕಾರಿ ದತ್ತಾನಂದ, ಸಂಘಟನಾ ಕಾರ್ಯದಶಿ ಗಣೇಶ ಸೇರೆಗಾರ್, ಗೌರವ ಸಲಹೆಗಾರರಾಗಿ ನಜೀರ್ ಅಹ್ಮದ್, ಶಂಕರ ಬಿಲ್ಲವ, ಗೋಪಾಲ ಜಿ.ವಿಷ್ಣು ಆಯ್ಕೆಯಾಗಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾಗ ಕಳಪೆ ಕಾಮಗಾರಿ ವಿರುದ್ಧ, ಸಂಸ್ಕರಣಾ ಕೇಂದ್ರವನ್ನ ಜನನಿಬಿಡ ಪ್ರದೇಶದಿಂದ ದೂರದ ಸ್ಥಳಕ್ಕೆ ಸ್ಥಳಾಂತರಿಸಲು ಒತ್ತಾಯಿಸಿ, ರಸ್ತೆಗಳ ದುರಸ್ತಿ ಹಾಗೂ ಪುರಸಭೆಗೆ ಖಾಯಂ ಇಂಜಿನಿಯರ್ ನೇಮಕಕ್ಕೆ ಆಗ್ರಹಿಸಿ ಕುಂದಾಪುರ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಮತ್ತು ಸಿಪಿಐ(ಎಂ) ಕುಂದಾಪುರ ವಲಯ ಸಮಿತಿಗಳ ಜಂಟಿ ಸಹಯೋಗದ ನೇತೃತ್ವದಲ್ಲಿ ಕುಂದಾಪುರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ಕುಂದಾಪುರ ಪುರಸಭೆ ಕಛೇರಿ ಎದುರು ಸಾಮೂಹಿಕ ಧರಣಿ ಸತ್ಯಾಗ್ರಹ ಹೋರಾಟ ಜರಗಿತು. ಕುಂದಾಪುರ ಜನತೆ ಬಹುಕಾಲದಿಂದ ಸುವ್ಯವಸ್ಥಿತವಾದ ಒಳಚರಂಡಿ ಯೋಜನೆ ಆಗಬೇಕೆಂದು ಬಯಸುತ್ತಿದ್ದು, ಅದರಂತೆ ರೂಪಾಯಿ ೪೮ ಕೋಟಿ ಯೋಜನೆ ಜ್ಯಾರಿ ಮಾಡುವುದಾಗಿ ಸರಕಾರ ಪ್ರಕಟಿಸಿದಾಗ ಕುಂದಾಪುರ ಪುರಸಭಾ ವ್ಯಾಪ್ತಿಯ ಸಮಸ್ತ ನಾಗರಿಕರು ಸ್ವಾಗತಿಸಿದರು. ಈ ಯೋಜನೆಯಿಂದ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಕೃಷಿಕರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಲಾಗಿದ್ದರೂ ಈಗ ಬಿಡುಗಡೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೈತರ ಸಾಲಮನ್ನ ವಿಚಾರವಾಗಿ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕರಾವಳಿಯ ಸಚಿವರು, ಸಂಸದರು ಹಾಗೂ ಶಾಸಕರ ನಿಯೋಗ ಭೇಟಿಮಾಡಿ ಮನವಿ ಸಲ್ಲಿಸಿತು. ಕಾಂಗ್ರೆಸ್ ಸರಕಾರ ರೈತರ ಸಾಲಮನ್ನಾ ಘೋಷಿಸಿರುವ ಬಗ್ಗೆ ಸರಕಾರವನ್ನು ಅಭಿನಂದಿಸಿದ ನಿಯೋಗ, ಈ ಪ್ರಯೋಜನ ಇನ್ನೂ ಹೆಚ್ಷಿನ ರೈತರಿಗೆ ಲಭಿಸಬೇಕು. 2015-16ನೇ ಸಾಲಿನಲ್ಲಿ ಸಾಲ ಪಡೆದು ಅವಧಿ ಮುಗಿದ ಸಾಲವನ್ನು ಕ್ಲಪ್ತ ಸಮಯಕ್ಕೆ ಪಾವತಿಸಿ ಪುನಃ ಸಾಲ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ರೈತರ ಸಾಲವನ್ನೂ ಕೂಡ ಮುಖ್ಯಮಂತ್ರಿಗಳು ಪರಿಶೀಲಿಸಿ ಮನ್ನಾ ಮಾಡಬೇಕೆಂದು ಈ ಸಮಯದಲ್ಲಿ ಒತ್ತಾಯಿಸಲಯಿತು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಸಚಿವ ರಮನಾಥ ರೈ, ಸಚಿವ ಪ್ರಮೋದ್ ಮಧ್ವರಾಜ್, ಕೆಎಸ್ಆರ್ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ನಿಯೋಗದಲ್ಲಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಅವರೊಂದಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಬಳಿಕ ಕೊಲ್ಲೂರಿಗೆ ತೆರಳಿ ದೇವಿಯ ದರ್ಶನ ಪಡೆದು ನವಚಂಡಿಕಾ ಯಾಗ ನೆರವೇರಿಸಿದರು. ಮಧ್ಯಾಹ್ನದ ಭೋಜನವನ್ನು ಅವರು ದೇವಳದಲ್ಲಿಯೇ ಸವಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಜೊತೆಗಿದ್ದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡು ಧರ್ಮ ಹಾಗೂ ಸೆಲ್ಯೂಲರ್ ಮುಖವಾಡ ಧರಿಸಿಕೊಂಡು ಯುವ ಜನರ ದಿಕ್ಕು ತಪ್ಪಿಸುತ್ತಿದೆ. ಗೋರಕ್ಷಣೆ ಮುಂತಾದ ವಿಚಾರಗಳಿಗೆ ಕರಾವಳಿಯ ಯುವಕರನ್ನು ಎತ್ತಿಕಟ್ಟಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಆದರೆ ಪ್ರಜ್ಞಾವಂತೆ ಜಿಲ್ಲೆಯ ಯುವಕರು ಈ ಬಗ್ಗೆ ಯೋಚಿಸಬೇಕಿದೆ ಎಂದ ಅವರು ಲೋಕಕಲ್ಯಾಣಾರ್ಥವಾಗಿ ನವಚಂಡಿಕಾ ಯಾಗ…
