Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸ್ತುತ ಮಾಧ್ಯಮಗಳ ಗುಣಮಟ್ಟದಲ್ಲಿ ಇಳಿಮುಖವಾಗುತ್ತಿದ್ದು ಹಿರಿಯರ ಮಾರ್ಗದಲ್ಲಿ ಅವರ ಆದರ್ಶದೊಂದಿಗೆ ಕಿರಿಯ ಪತ್ರಕರ್ತರು ಮುನ್ನಡೆದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಭಿಪ್ರಾಯ ಪಟ್ಟರು. ಅವರು ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಘಟಕ ಪತ್ರಿಕಾ ದಿನದ ಗೌರವವನ್ನು ಮುನ್ನಾ ದಿನವಾದ ಶುಕ್ರವಾರ ಕಡಿಯಾಳಿಯ ಸ್ವಗೃಹದಲ್ಲಿ ಪ್ರದಾನಿಸಿ ಮಾತನಾಡಿದರು. ಸುಶೀಲಾ ದಾಮೋದರ್ ಐತಾಳ ಸಹಿತ ದಂಪತಿಯನ್ನು ಗೌರವಿಸಲಾಯಿತು. ಸರಳ ಮತ್ತು ನೇರ ಜೀವನ ನಡೆಸಿದ ದಾಮೋದರ ಐತಾಳರು ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಬಳಕೆದಾರ ವೇದಿಕೆಯ ಮೂಲಕ ಅವರ ಸೇವೆ ಅಮೂಲ್ಯವಾದುದು ಎಂದು ಅವರು ಅಭಿನಂದಿಸಿದರು. ಗ್ರಾಮೀಣ ಪತ್ರಕರ್ತರಿಗೆ ಕನಿಷ್ಟ ಗೌರವಧನ ಪಾವತಿಯಾಗಬೇಕು, ತುಳುವಿನಲ್ಲಿ ಉಪಗ್ರಹ ವಾಹಿನಿ, ತುಳು ದೈನಿಕ ಆರಂಭವಾಗ ಬೇಕು. ಪ್ರಾದೇಶಿಕ ಮತ್ತು ವೃತ್ತಿ ಪರ ಅಸಮತೋಲನ ತಪ್ಪ ಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಶೇಖರ ಅಜೆಕಾರು ಹೇಳಿದರು. ಐತಾಳರಂತಹ ಅಪೂರ್ವ ವ್ಯಕ್ತಿಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರಲ್ಲಿ ಹಾಗೂ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆದಿದೆ. ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದ ರೈತರನ್ನು ಪುನ: ಕೃಷಿ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ಯೋಜನೆ ಯಶಸ್ವಿಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯ ಪಾತ್ರ ಬಹುಮುಖ್ಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ತ್ರಾಸಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಅಂಬಾ ಕಾಂಪ್ಲೆಕ್ಸ್‌ನಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ಇದರ ಕುಂದಾಪುರ ತಾಲೂಕಿನ ಬೈಂದೂರು ವಿಭಾಗದ ನೂತನ ಯೋಜನಾ ಕಛೇರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರದ ಸಹಭಾಗಿತ್ವದೊಂದಿಗೆ ಸರಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಉತ್ತಮ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಗ್ರಾಮದ ಅಭ್ಯುದಯದ ಜೊತೆಗೆ ದುರ್ಬಲ ವರ್ಗದವರ ಸಬಲೀಕರಣದ ಉದ್ದೇಶ ಹೊಂದಿರುವ ಡಾ.ಡಿ.ವೀರೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಡಿಮೆಯಾಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಗುರುತರವಾದ ಉದ್ದೇಶವನ್ನು ಹೊಂದಿದ್ದೇನೆ. ಹೊರತು ಅಧಿಕಾರಿಗಳಲ್ಲಿ ಭಯ ಹುಟ್ಟಿಸುವುದು ಹಾಗೂ ಅನಗತ್ಯ ಪ್ರಚಾರಗಿಟ್ಟಿಸುವುದು ನಮ್ಮ ಧ್ಯೇಯವಲ್ಲ ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಕುಂದಾಪುರ ನ್ಯಾಯಾಲಯ ಸಂಕೀರ್ಣದಲ್ಲಿ ಬಾರ್ ಅಸೋಸಿಯೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಎಲ್ಲ ಬಾರ್ ಅಸೋಸಿಯೇಶನ್‌ಗಳಿಗೆ ಬೇಟಿ ನೀಡಿ ನ್ಯಾಯವಾದಿಗಳನ್ನು ಹಾಗೂ ಸಾರ್ವಜನಿಕರನ್ನು ಬೇಟಿ ಮಾಡಬೇಕು ಎನ್ನುವ ಉದ್ದೇಶ ಇದ್ದರೂ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಥಮ ಪ್ರಾಶಸ್ರ್ಯ ನೀಡುವ ಉದ್ದೇಶವಿದೆ. ಸಾಕಷ್ಟು ಪೂರ್ವ ಸಿದ್ದತೆಯಿಂದ ನ್ಯಾಯದಾನದ ವಿಷಯದಲ್ಲಿ ತೊಡಗಿಸಿಕೊಳ್ಳುವ ನ್ಯಾಯವಾದಿಗೆ ಯಶಸ್ಸು ಖಂಡಿತ ಇದೆ. ಜನಪರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರಗಳ ಸರಕಾರಗಳ ಯೋಜನೆಗಳು ಸಮಾಜದ ಸಾಮಾನ್ಯ ಜನರಿಗೂ ದೊರಕಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ ಎಂದರು. ಈ ಸಂದರ್ಭ ರಾಜ್ಯ ಲೋಕಾಯುಕ್ತ ನ್ಯಾಯಮೂತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ೨೦೧೭-೧೮ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನವರಿಂದ ಬಂದ, ಎಲ್ಲರೂ ಒಂದಾಗಿ ಬಾಳೋಣ ಎಂಬ ಕಲ್ಪನೆಗಳು ಶಾಲೆಯಲ್ಲಿ ಮಾತ್ರ ಸಾಧ್ಯ. ಕಿವಿಯಿಂದ ಕೇಳಿದ ಪಾಠ ಮನಸ್ಸಿನೊಳಗೆ ಹೋಗದಿದ್ದರೆ ಏನೂ ಪ್ರಯೋಜನವಾಗದು. ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ ವ್ಯವಸ್ಥೆಯಿದೆ. ಪ್ರತಿಯೊಂದನ್ನು ಶೃದ್ಧೆಯಿಂದ ಕಲಿತು ವಿಷಯಗಳನ್ನು ಸ್ವೀಕರಿಸಿ ಪುನಃ ಜಗತ್ತಿಗೆ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ತನ್ನ ಅಧಿಕಾರದ ಅವಧಿಯಲ್ಲಿ ದೇವಳದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತೇನೆ ಎಂದರು. ಕಾಲೇಜಿನ ಪ್ರಾಂಶುಪಾಲ ಅರುಣಪ್ರಕಾಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಜಯಂತ್ ಮತ್ತು ವೀರೇಂದ್ರ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ…

Read More

ಡಿವಿಜಿ ಪುಸ್ತಕದಲ್ಲೊಂದು ಇಣುಕು ನೋಟ ಎಎಸ್‌ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ ಪತ್ರಿಕೋದ್ಯಮ ಬಹಳಷ್ಟು ದೂರ ಸಾಗಿ ಬಂದಿದೆ. ಶತಮಾನಗಳ ಇತಿಹಾಸ ಹೊಂದಿದ ಈ ಉದ್ಯಮ ಶತಮಾನಗಳ ನಂತರವೂ ಭೀತಿಯಿಂದ ಮುಕ್ತವಾಗಿಲ್ಲದಿರುವುದು ಒಂದು ದುರಂತ. ಇಂದಿಗೂ ಪತ್ರಿಕೆಗಳಿಗೆ ಮುಕ್ತವಾಗಿ ಬರೆಯಲು ಭೀತಿ ಇದೆ. ಸರಕಾರದ ಭೀತಿ, ಶಾಸಕಾಂಗದ ಭೀತಿ, ನ್ಯಾಯಾಂಗದ ಭೀತಿ. ಸರಕಾರಕ್ಕೆ ವಿರೋಧವಾಗಿ ಬರೆದರೆ ಗೊತ್ತೇ ಇದೆಯಲ್ಲ, ತಮಿಳುನಾಡಿನಲ್ಲಿ ಜಯಲಲಿತಾ ಆಡಳಿತ ಕಾಲದಲ್ಲಿ ಆದದ್ದು. ಪತ್ರಿಕೆಯ ಬಂಡಲುಗಳಿಗೆ ಬೆಂಕಿ, ಪತ್ರಿಕಾಲಯಗಳಿಗೆ ಪೋಲೀಸ್ ದಾಳಿ, ಮುದ್ರಣಾಲಯಗಳಿಗೆ ವಿದ್ಯುತ್ ಕಡಿತ! ಶಾಸಕಾಂಗದಲ್ಲಿ ನಡೆದದ್ದನ್ನು ನಡೆದಂತೆ ಬರೆದರೂ, ಹಕ್ಕುಚ್ಯುತಿಯ ಭಯ, ಛೀಮಾರಿಯ ಅಪಾಯ, ಬಂಧನದ ಭೀತಿ. ಇನ್ನು ನ್ಯಾಯಾಂಗದ ಕುರಿತಂತೂ ಬರೆಯಲು ಎಂಟೆದೆ ಬೇಕು. ನ್ಯಾಯಾಂಗ ನಿಂದನೆಯಡಿ ತತ್ತರಿಸಬೇಕು. ಒಟ್ಟಿನಲ್ಲಿ 21ನೇ ಶತಮಾನ ಬಂದರೂ ಪತ್ರಿಕೆಗಳು ನಿರ್ಭೀತಿಯಿಂದ, ಸ್ವತಂತ್ರವಾಗಿ ಬರೆಯುವಂತಿಲ್ಲ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ಮರುಭೂಮಿಯಲ್ಲಿನ ಮರೀಚಿಕೆಯಂತಾಗಿಬಿಟ್ಟದೆ. ಯಾರು ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದರೋ, ಅದೇ ರಾಜಕಾರಣಿಗಳ ದಂಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಸಂಯೋಜಕ ವೃತ್ತದಲ್ಲಿ 2016-17ರ ಅಂತ್ಯದಲ್ಲಿ ಮತ್ತು 2017-18ನೇ ಸಾಲಿನ ಆರಂಭದಲ್ಲಿ ನಿವೃತ್ತರಾದ ಐವರು ಮುಖ್ಯ ಶಿಕ್ಷಕರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತಿ ಹೊಂದಿದ ಸ.ಹಿ.ಪ್ರಾ.ಶಾಲೆ ಕೋಣಿಯ ರಘುವೀರ ಕೆ., ಸ.ಹಿ.ಪ್ರಾ.ಶಾಲೆ ಟಿ.ಟಿ.ರಸ್ತೆಯ ಶಂಕರ ಶೇರೇಗಾರ್, ಹಿಂದೂ ಮಾದರಿ ಹಿ.ಪ್ರಾ.ಶಾಲೆ ಬಸ್ರೂರಿನ ಇಂದಿರಾ ಆರ್.ಶೆಟ್ಟಿ, ಸ.ಹಿ.ಪ್ರಾ.ಶಾಲೆ ಬಳ್ಕೂರು-ಉತ್ತರದ ರೋಸಾ ಇವ್ಲಿನ್ ಮೊಂತೆರೋ, ಆರ್.ಸಿ.ಅನುದಾನಿತ ಹಿ.ಪ್ರಾ.ಶಾಲೆ ಬಸ್ರೂರಿನ ಲೀನಾ ಡಿ’ಸೊಜಾ ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆದೂರು ಸೀತಾರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಶಿಕ್ಷಣ ಸಂಯೋಜಕಿ ಶ್ರೀಮತಿ ದೇವಕುಮಾರಿ, ಮುಖ್ಯ ಶಿಕ್ಷಕಿ ಶ್ರಿಮತಿ ಸುಮನಾ ಅವರು ನಿವೃತ್ತರನ್ನು ಸನ್ಮಾನಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಮಾದರಿ ಹಿ.ಪ್ರಾ. ಶಾಲೆ ವಡೇರಹೋಬಳಿಯ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ವಂದಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೇಸಿಸ್ ನ ವಲಯ ೧೫ರ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಯುವ ಜೇಸಿ ಸದಸ್ಯರಿಗೆ ಟೆಕ್ ಆಫ್ ೨೦೧೭ ತರಬೇತಿ ಕಾರ್ಯಗಾರವನ್ನು ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಪರ್ಕಳ ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಬೆಳ್ಮಣ್ಣು ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಸಾಸ್ತಾನ ವೈರ್ಬೆಂಟ್ ಜ್ಯೂನಿಯರ್ ಜೇಸಿವಿಂಗ್ ಸಂಯುಕ್ತ ಆಶ್ರಯದಲ್ಲಿ ಯುವ ಜೇಸಿ ಸದಸ್ಯರಿಗೆ ಒಂದು ದಿನದ ಪರಿಣಾಮಕಾರಿಯಾಗಿ ಭಾಷಣ ಕಲೆ ಬಗ್ಗೆ ತರಬೇತಿ ಕಾರ್ಯಗಾರವು ರಂದು ಕುಂದಾಪುರ ಬಿ.ಆರ್.ರಾವ್ ಹಿಂದು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಲಯ ೧೫ರ ತರಬೇತಿ ವಿಭಾಗದ ಸಂಯೋಜಕ ಜೇಸಿ ವಿಷ್ಣು ಕೆ.ಬಿ, ಪೂರ್ವ ವಲಯಾಧಿಕಾರಿ ಜೇಸಿ ಶಕೀರ್ ಎಮ್.ಹಾವಂಜೆ, ಜೇಸಿಐ ಕುಂದಾಪುರ ಅಧ್ಯಕ್ಷೆ ಜೇಸಿ ಅsಕ್ಷತಾ ಗಿರೀಶ ಐತಾಳ ಜೇಸಿಐ ಪರ್ಕಳ ಅಧ್ಯಕ್ಷೆ ಜೇಸಿ ಆಶ.ಬಿ.. ತರಬೇತುದಾರರಾಗಿ ಜೇಸಿ ರಾಘವೇಂದ್ರ ಪ್ರಭು ಹಾಗೂ ಜೇಸಿ ಸುಬ್ರಹ್ಮಣ್ಯ ಜಿ ಜೇಸಿಐ ಸಾಸ್ತಾನ ವೈರ್ಬೆಂಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇಶದಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನವನ್ನು ಘೋಷಣೆ ಮಾಡಿದ ಸಂದರ್ಭ ಜೈಲುವಾಸ ಅನುಭವಿಸಿದ್ದ ಹುತಾತ್ಮರಿಗೆ ಗಂಗೊಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಗಂಗೊಳ್ಳಿಯ ಎಂ.ಪ್ರಭಾಕರ ಪೈ ಅವರ ನಿವಾಸಕ್ಕೆ ತೆರಳಿದ ಬಿಜೆಪಿ ಕಾರ್ಯಕರ್ತರು ಎಂ.ಪ್ರಭಾಕರ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿನಮನ ಅರ್ಪಿಸಿದರು. ಎಂ. ಪ್ರಭಾಕರ ನಾಗೇಂದ್ರ ಪೈ ಅವರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭ ಬಂಧನಕ್ಕೊಳಗಾದ ರಾಮ ದೇವಾಡಿಗ, ಎಂ.ಪ್ರಭಾಕರ ಪೈ, ಡಾ.ಎಸ್.ವಿ.ಪೈ, ದೇವದಾಸ ಗಾಣಿಗ, ಎಸ್.ವಿ.ಪೈ ಪಾಂಡು, ಎಂ.ಕಮಲಾಕ್ಷ ಪೈ ಮೊದಲಾದವರ ಸೇವೆಯನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಜನಸಂಘದ ಕಾಲದಲ್ಲಿ ಹಗಲಿರುಳು ಸಂಘಟನೆಗಾಗಿ, ಹಿಂದು ಸಮಾಜದ ಅಭಿವೃದ್ಧಿಗೆ ದುಡಿದ ಇಂತಹ ಮಹಾನುಭಾವರು ನಮಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕಡಲ್ಕೊರೆತಕ್ಕೆ ತುತ್ತಾಗಿರುವ ಗಂಗೊಳ್ಳಿ ಗ್ರಾಮದ ಬ್ಯಾಲಿಕೊಡೇರಿ ಪ್ರದೇಶಕ್ಕೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಲ್ಕೊರೆತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ಅವರು ಮುಂಜಾಗ್ರತಾ ಕ್ರಮವಾಗಿ ಕಡಲ್ಕೊರೆತ ತಡೆಯಲು ಕೂಡಲೇ ತಾತ್ಕಾಲಿಕ ತಡೆಗೋಡೆ ಕಾಮಗಾರಿಯನ್ನು ನಡೆಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗಂಗೊಳ್ಳಿ ಗ್ರಾಮದ ಬ್ಯಾಲಿಕೊಡೇರಿ, ಖಾರ್ವಿಕೇರಿ ಹಾಗೂ ಬಂದರು ಬೇಲಿಕೇರಿ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಸುಮಾಎಉ ೧೨ ಮನೆಗಳು ಅಪಾಯದಂಚಿನಲ್ಲಿದೆ. ಅನೇಕ ಮರಗಳು ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದೆ. ಆದ್ದರಿಂದ ಕಡಲ್ಕೊರೆತವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಡಲ್ಕೊರತದ ಹಾನಿಯ ಬಗ್ಗೆ ಹಾಗೂ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡುವುದಾಗಿ ಅವರು ಹೇಳಿದರು. ಗಂಗೊಳ್ಳಿ ಗ್ರಾಮದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನ 2016-17 ನೆ ಸಾಲಿನ ’ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿಯನ್ನು ಕುಂದಾಪುರ ತಾಲೂಕಿನ ಬಿಜೂರಿನ ಗೋವಿಂದ ಬಾಬು ಪೂಜಾರಿಯವರಿಗೆ ನೀಡಲಾಗಿದೆ. ಅವರನ್ನು ಪ್ರಶಸ್ತಿಯ ’ಆಹಾರ ಮತ್ತು ಅತಿಥಿ ಸತ್ಕಾರ’ ವಿಭಾಗದಲ್ಲಿ ಗುರುತಿಸಲಾಗಿದ್ದು, ಹೊಸದೆಹಲಿ ಲೋಧಿ ರಸ್ತೆಯಲ್ಲಿರುವ ಗುಲ್ಮೋಹರ್ ಹೆಬಿಟೆಟ್ ವರ್ಡ್, ಇಂಡಿಯಾ ಹೆಬಿಟೆಟ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಪಾಲ ಡಾ. ಭೀಷ್ಮ ನಾರಾಯಣ್ ಸಿಂಗ್ ಪ್ರಶಸ್ತಿ ಪ್ರದಾನಿಸಿದರು. ಈ ಸಂದರ್ಭ ಸಿಕ್ಕಿಂನ ಮಾಜಿ ರಾಜ್ಯಪಾಲ ಬಿ. ಪಿ. ಸಿಂಗ್, ಕಾಂಗ್ರೆಸ್‌ನ ಮಾಜಿ ಸಂಸದ ಹರಿಕೇಶ್ ಬಹಾದೂರ್, ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ವೇದಪ್ರಕಾಶ್, ಸುಪ್ರಿಂಕೋರ್ಟ್ ನ್ಯಾಯವಾದಿ ಚಂದ್ರ ರಾಮನ್, ಉದ್ಯಮಿ ಮೇಘಾ ವರ್ಮ ಉಪಸ್ಥಿತರಿದ್ದರು. ಫೌಂಡೇಶನ್ನಿನ ಉನಿಯಾಲ್ ಕಾರ್ಯಕ್ರಮ ಸಂಯೋಜಿಸಿದ್ದರು. ಗೋವಿಂದ ಬಾಬು ಪೂಜಾರಿ 2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದರು. ಇದನ್ನು 2015ರಲ್ಲಿ ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟ್ಯಾಲಿಟಿ ಪೈವೆಟ್…

Read More