Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪ್ರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಮೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರು ನಾದೋಪಾಸಕ ವಿದ್ವಾನ್ ವಾಗೀಶ್ ಭಟ್ ಹಾಗೂ ಖ್ಯಾತ ತಬಲಾ ವಾದಕರಾದ ರಮೇಶ್ ಶ್ಯಾನುಭಾಗ್ ಅವರನ್ನು ಸನ್ಮಾನಿಸಿದರು. ಸಭೆಯಲ್ಲಿ ಅತಿಥಿಗಳಾಗಿ ಪಿ. ಜಯವಂತ ಪೈ, ಪದ್ಮನಾಭ ಪ್ರಭು ಇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತ ಸಂಗೀತ ಕಲಾವಿದೆ ಶ್ರೀಮತಿ ಆಶಾ ಪಿ. ನಾಯಕ್ ರವರನ್ನು ಗೌರವಿಸಲಾಯಿತು. ವಿದ್ವಾನ್ ವಾಗೀಶ್ ಭಟ್ ರವರಿಂದ ಭಜನೆ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದ್ದರು. ಉದಯ ಭಂಡಾರ್‌ಕಾರ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ ಇಲ್ಲಿನ ಪ್ರೌಢಶಾಲೆಯ ವಿದ್ಯಾರ್ಥಿನಿ ಚಿನ್ಮಯಿ 622 ಅಂಕ ಪಡೆದಿದ್ದಾರೆ. ಕನ್ನಡದಲ್ಲಿ 125, ಇಂಗ್ಲಿಷ್ 100, ಹಿಂದಿ 99, ವಿಜ್ಞಾನ 99, ಸಮಾಜ ವಿಜ್ಞಾನ 99, ಗಣಿತ 100 ಅಂಕ ಪಡೆದಿದ್ದಾರೆ. ಇವರು ಹಟ್ಟಿಯಂಗಡಿ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಗಣೇಶ ಎಸ್. ಮತ್ತು ಶ್ರೀಮತಿ ಜಿ ಹೆಗ್ಡೆ ಇವರ ಪುತ್ರಿ. ಗ್ರಾಮೀಣ ಪ್ರದೇಶದ ವಂಡ್ಸೆ ಸಮೀಪದ ಕಳಿ ನಿವಾಸಿ ಆಗಿರುವ ಚಿನ್ಮಯಿ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಕಾಶೀಮಠ ಸಂಸ್ಥಾನದ ಪ್ರಾಚೀನ ಶಾಖಾ ಮಠದಲ್ಲಿ ಶ್ರೀ ಹರಿಗುರು ಅನುಗ್ರಹದೊಂದಿಗೆ ಗೌಡ ಸಾರಸ್ವತ ಸಮಾಜದ ಹತ್ತು ಮಕ್ಕಳಿಗೆ ಬ್ರಹ್ಮೋಪದೇಶವು ಅವರ ತಂದೆ ತಾಯಿ, ಕುಟುಂಬದ ಬಂಧು ಬಳಗದವರು ಸಂಭ್ರಮ ಉಲ್ಲಾಸದೊಂದಿಗೆ ಬಸ್ರೂರು ಶ್ರೀ ಕಾಶೀಮಠದಲ್ಲಿ ನಡೆಯಿತು. ಚೌಲ, ಉದ್ದಿನ ಮಹೂರ್ತ, ಮಾತೃಭೋಜನ, ವಫನ, ಯಜ್ಞೋಪವೀತಧಾರಣ, ಬ್ರಹ್ಮೋಪದೇಶ, ಶ್ರೀ ವೆಂಕಟರಮಣ ದೇವರಿಗೆ ಹಾಗೂ ಉಭಯ ಬೃಂದಾವನದಲ್ಲಿ ಮಹಾಪೂಜೆ – ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಬ್ರಹ್ಮೋಪದೇಶದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥರು ಅನುಗ್ರಹರಾಯಸಪತ್ರದಲ್ಲಿ ಈ ಕಾರ್ಯಕ್ರಮದಿಂದ ನೂತನ ಉಪನೀತ ವಟುಗಳು ವಿಧ್ಯಾ ವಿನಯ ಸಂಪನ್ನರಾಗಿ ಬಾಳಲಿ ಎಂದು ಹರಸಿದ್ದರು. ಜ್ಞಾನದ ಹತ್ತಿರ ಕರೆದುಕೊಂಡು ಹೋಗುವ ಈ ಕಾರ್ಯವು ನಮ್ಮ ಸಮಾಜದ ವಟುಗಳಿಗೆ ಅಮೃತತ್ವವನ್ನು, ವಿನಯತೆಯನ್ನು ನೀಡುತ್ತದೆ. ಇದೊಂದು ಸಮಾಜ ಸೇವೆಯ ಸಾರ್ಥಕ ಕಾರ್ಯ ಎಂದು ಸೇವಾದಾರರಾದ ಗೋವಿಂದ್ರಾಯ ಆಚಾರ್ಯ ಉಲ್ಲೇಖಿಸಿದರು. ಶ್ರೀ ದೇವ ಸನ್ನಿಧಿ ಹಾಗೂ ಶ್ರೀ ಕೇಶವೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ನವೀಕೃತ ಕಟ್ಟಡದ ಆಶೀರ್ವಚನ ಮತ್ತು ಉದ್ಘಾಟನೆಯ ಪೂರ್ವಭಾವಿಯಾಗಿ ಭ್ರಾತೃತ್ವದ ಭಾನುವಾರದ ಆಚರಣೆಯು ಜರುಗಿತು. ಭ್ರಾತೃತ್ವದ ಭಾನುವಾರದ ಪ್ರಯುಕ್ತ ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದಿಂದ ಗಂಗೊಳ್ಳಿ ಚರ್ಚಿಗೆ ವಾಹನಗಳ ಮೂಲಕ ಕೊಸೆಸಾಂವ್ ಅಮ್ಮನವರ ಪ್ರತಿಮೆಯ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮುನ್ನ ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದಲ್ಲಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಅವರು ಕೊಸೆಸಾಂವ್ ಅಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಸುಮಾರು 50 ಕ್ಕೂ ಅಧಿಕ ವಿವಿಧ ವಾಹನಗಳ ಮೂಲಕ ಮೆರವಣಿಗೆಯ ಕನ್ನಡಕುದ್ರು ಪುಣ್ಯಕ್ಷೇತ್ರದಿಂದ ಹೊರಟು, ಮುವತ್ತಮುಡಿ ಕ್ರಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿಯಿಂದ ಗಂಗೊಳ್ಳಿ ಚರ್ಚಿಗೆ ಸಾಗಿ ಬಂತು. ಸತತ ಒಂದು ವರ್ಷ ಕೊಸೆಸಾಂವ್ ಅಮ್ಮನವರ ಪ್ರತಿಮೆಯು ಚರ್ಚಿನ ಎಲ್ಲಾ ಕುಟುಂಬಗಳಿಗೆ ಸಾಗಿ ಪ್ರಾರ್ಥನೆ ನಡೆಸಿದ ಪುನಃ ಭಾನುವಾರ ಚರ್ಚಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಶೇಕಡಾ 93.52 ರ ಫಲಿತಾಂಶ ಪಡೆದಿದ್ದು 142 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 251ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದ ಪ್ರಜ್ಞಾ ಎನ್. 590 ಅಂಕ ಗಳಿಸಿದ್ದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು ವಾಣಿಜ್ಯ ವಿಭಾಗದಲ್ಲಿ ನಮನ ಯು.ಸಿ. 586 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನಿಯಾಗಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಪ್ಪುಂದ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ 625 ಅಂಕಗಳಲ್ಲಿ 622 ಅಂಕಗಳನ್ನು ಪಡೆದು ಸಾಧನೆ ಮರೆದಿದ್ದಾಳೆ. ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿಯಲ್ಲಿ 99, ಗಣಿತ 100, ಸಮಾಜ ವಿಜ್ಷಾನ 99, ವಿಜ್ಞಾನ 99 ಅಂಕಗಳನ್ನು ಪಡೆದಿದ್ದಾರೆ. ಈಕೆ ಯಾವುದೇ ಕೋಚಿಂಗ್ ಹಾಗೂ ಟ್ಯೂಷನ್ ಪಡೆದಿಲ್ಲ ಬದಲಾಗಿ ಪ್ರತಿದಿನ ೪ರಿಂದ ೫ ಗಂಟೆ ಓದುವ ಹವ್ಯಾಸ ರೂಢಿಸಿಕೊಂಡಿದ್ದಾಳೆ. ಸೆಂಟ್ರಿಂಗ್ ಕೆಲಸಗಾರ ತ್ರಾಸಿ ರಮೇಶ ಆಚಾರ್ಯ ಹಾಗೂ ಸಂಗೀತಾ ಆಚಾರ್ಯ ದಂಪತಿಯ ಪುತ್ರಿಯಾದ ಈಕೆ, ಉಪ್ಪುಂದದಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ನೆಲೆಸಿದ್ದಾಳೆ. ಶಿಕ್ಷಕರ ಹಾಗೂ ಪಾಲಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದ ಆಕೆ ಮುಂದೆ ಐಎಎಸ್ ಮಾಡುವ ಕನಸು ಹೊಂದಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿಯೇ ನಂಬರ್ 1 ಕನ್ನಡ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸತತ 8ನೇ ಬಾರಿಗೆ 100% ಫಲಿತಾಂಶ ಬಂದಿದೆ. ಈ ಬಾರಿ 132 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ಲಕ್ಷ್ಮೀ ಈಶ್ವರ ನಾಗಠಾಣೆ 621 ಅಂಕ ಪಡೆಯುವ ಮೂಲಕ ಗರಿಷ್ಠ ಅಂಕಗಳ ಸಾಧನೆ ಮಾಡಿದ್ದಾಳೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ. 625 ಅಂಕಗಳಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಒಟ್ಟು 35 ಮಂದಿ ವಿದ್ಯಾರ್ಥಿಗಳು ಪಡೆದಿರುವುದು ಸಂಸ್ಥೆಯ ಇನ್ನೊಂದು ಹೆಗ್ಗಳಿಕೆ. ನಂತರ ಅತ್ಯುನ್ನತ ಶ್ರೇಣಿಯಲ್ಲಿ 96 ವಿದ್ಯಾರ್ಥಿಗಳು (85% ಮೇಲ್ಪಟ್ಟು), ಪ್ರಥಮ ಶ್ರೇಣಿಯಲ್ಲಿ 32 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡದಲ್ಲಿ 14, ಹಿಂದಿ 36, ಸಂಸ್ಕøತ 5, ಗಣಿತ 4, ವಿಜ್ಞಾನ 4, ಸಮಾಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ್ ಎಂ. ನಾಯರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಅನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ಯಲಹಂಕ ನ್ಯೂಟೌನ್‍ನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಮಂಜುನಾಥ ಎನ್. ನಾಯರಿ ಹಾಗೂ ಗೀತಾ ಎಂ. ದಂಪತಿಯ ಪುತ್ರ ಆಕಾಶ್ ಎಂ. ನಾಯರಿ ಸಾಧನೆ ಮಾಡಿದ ವಿದ್ಯಾರ್ಥಿ. ಈತ ಗಣಿತ, ಇಂಗ್ಲಿಷ್, ವಿಜ್ಞಾನ ಹಾಗೂ ಸಮಾಜದಲ್ಲಿ ನೂರಕ್ಕೆ 100, ಕನ್ನಡದಲ್ಲಿ ನೂರಕ್ಕೆ 99, ಹಾಗೂ ಪ್ರಥಮ ಭಾಷೆ ಸಂಸ್ಕøತದಲ್ಲಿ 125ಕ್ಕೆ 124 ಅಂಕಗಳನ್ನು ಆಕಾಶ್ ಎಂ. ನಾಯರಿ ಪಡೆದಿದ್ದಾರೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿರಂತರ ನಿಗಾ ಆಳ್ವಾಸ್‍ನಲ್ಲಿ ದೊರಕಿದ್ದರಿಂದ ಗರಿಷ್ಠ ಅಂಕ ಸಾಧನೆ ಸಾಧ್ಯವಾಯಿತು. ವಿದ್ಯಾರ್ಥಿಗಳು ಶಿಕ್ಷಕರ ಮಾತನ್ನು ಚಾಚೂತಪ್ಪದೇ ಪಾಲಿಸಿದಲ್ಲಿ ಯಶಸ್ಸು ಪಡೆಯಬಹುದು. ಶಿಕ್ಷಕರ ಮಾತು ನಮ್ಮ ಒಳ್ಳೆಯದಕ್ಕೆಂದು ಭಾವಿಸಿದರೆ ಅದರ ಫಲ ನಮಗೆ ದೊರಕುತ್ತದೆ ಎಂದು ಆಕಾಶ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಗುರುಕುಲ ಪಿ.ಯು. ಕಾಲೇಜಿಗೆ 96% ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಉತ್ಪಲ್ ಉದಯ್ ಶೆಟ್ಟಿ (579 ) , ಆದಿತ್ಯ ಶೆಟ್ಟಿ (571) ಹಾಗೂ ವಾಣಿಜ್ಯ ವಿಭಾಗದಲ್ಲಿ ಶ್ರೀಕಲ್ಪ ಭಟ್ (560) ಅಂಕ ಪಡೆದು ಕಾಲೇಜಿನ ಟಾಪರ್ ಎನಿಸಿಕೊಂಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

Read More

2013 ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ ಪ್ರಕರಣ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡಾರು ಆರ್‌ಟಿಐ ಕಾರ್ಯಕರ್ತ ಕೊಲೆ ಆಪಾಧಿತರ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮುಕ್ತಗೊಳಿಸಿ, ಆದೇಶ ಮಾಡಿದ್ದಾರೆ. ಜ್ಯೋತಿಸಿ ರಮೇಶ್ ಬಾಯರಿ. ಬಾಯರಿ ಸಂಬಂಧಿ ಸುಬ್ರಮಣ್ಯ ಉಡುಪ. ಬೆಂಗಳೂರು ಉಮೇಶ, ಬನಶಂಕರಿ ಹೊಸಕೆರೆ ಹಳ್ಳಿ ನವೀನ್, ರಾಘವೇಂದ್ರ, ಮೋಹನ್ ಕುಮಾರ್, ರವಿಚಂದ್ರ ಹಾಗೂ ವಿಜಯ ಸಾರಥಿ ಎಂಬವರನ್ನು ಗುರುವಾರ ದೋಷಮುಕ್ತಿಗೊಳಿಸಲಾಗಿದೆ. ಆರ್.ಟಿ.ಐ. ಕಾರ್ಯಕರ್ತ ವಂಡಾರು ವಾಸುದೇವ ಅಡಿಗೆ ಕೊಲೆಯಾದ ವ್ಯಕ್ತಿ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಅಂದಿನ ಕುಂದಾಪುರ ಡಿಎಸ್ಟಿ ಯಶೋದಾ ಒಂಟಗೋಡಿ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ೯೬ ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು. ಪ್ರಮುಖ ಆರೋಪಿ ರಮೇಶ್ ಬಾಯರಿಗೆ ಎರಡು ವರ್ಷ ಜಾಮೀನು ಕೂಡ ಸಿಕ್ಕದೆ, ಜೈಲು ವಾಸ ಅನುಭವಿಸಿದ್ದರು. ಪ್ರಕರಣದ ಹಿನ್ನೆಲೆ: ಆರ್.ಟಿ.ಐ. ಕಾರ್ಯಕರ್ತ ವಾಸುದೇವ ಅಡಿಗ 2013…

Read More