Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿಎ / ಸಿಎಸ್ ಕಾರ್ಯಾಗಾರ ನಡೆಯಿತು.  ಸಂಪನ್ಮೂಲ ವ್ಯಕ್ತಿಗಳಾಗಿ ತ್ರಿಷಾ ಕಾಲೇಜಿನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಆಗಿರುವ CA ಗೋಪಾಲ ಕೃಷ್ಣ ಭಟ್ ವಿದ್ಯಾರ್ಥಿಗಳಿಗೆ CA/CS ಕೋರ್ಸ್‌ನ ಹಂತಗಳು, ಅವಧಿ ಮತ್ತು ಅವಕಾಶಗಳನ್ನು ಕುರಿತು ಸಂಪೂರ್ಣ ಮಾಹಿತಿ ನೀಡಿ, CA / CS ಹೊರತುಪಡಿಸಿ ಪಿಯುಸಿ ನಂತರದ ವಿವಿಧ ಕೋರ್ಸ್ ಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ಶಿವರಂಜನಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿಯರಾದ ನಿಧಿ ವಂದಿಸಿ, ವಿನಯಾ ಪರಿಚಯಿಸಿ, ವಾಣಿಜ್ಯ ಉಪನ್ಯಾಸಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸೇವೆಯಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳಿವೆ. ಅದರಲ್ಲಿ ಪ್ರಕೃತಿಯನ್ನು ಆರಾಧಿಸುವ ಪರಿಸರ ಸಂರಕ್ಷಿಸುವ ಸೇವೆ ಭಗವಂತನಿಗೆ ಸಲ್ಲಿಸುವ ಪೂಜೆಯಷ್ಟೆ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಇದು ಪ್ರಸ್ತುತ ಪಂಚವರ್ಣ ಸಂಘಟನೆಗಳಿಂದಾಗುತ್ತಿರುವುದು ಶ್ಲಾಘನೀಯ ಎಂದು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ವಿಜಯ ಮಂಜರ್ ಹೇಳಿದರು. ಅವರು ಭಾನುವಾರ ಪಾಂಡೇಶ್ವರ ಹಾಲು ಉತ್ಪಾದಕರ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 310ನೇ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಗೀತಾನಂದ ಫೌಂಡೇಶನ್ ಮಣೂರು ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದೊಂದಿಗೆ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ನಡೆದ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸಿರು ಉಳಿಸಿ ಬೆಳೆಸಿದರೆ ಮನುಕುಲ ಸಂಕಷ್ಟದಿಂದ ಪಾರಾಗಬಹುದು ಇಲ್ಲವಾದಲ್ಲಿ ಹಣ ಕೊಟ್ಟು ಆಕ್ಸಿಜನ್ ಕೊಳ್ಳುವ ಕಾಲ ದೂರಿಲ್ಲ ಅದಕ್ಕಾಗಿ ಪ್ರತಿಯೊರ್ವರು ಗಿಡ ನೆಟ್ಟು ಪೋಷಿಸುವ ಕಾರ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ವತಿಯಿಂದ ಕಟ್ ಬೆಲ್ತೂರು ಹೊಲಿಗೆ ತರಬೇತಿ ಕೇಂದ್ರದಲ್ಲಿ ಸ್ವದ್ಯೋಗ ಮಾಡಲು ಬ್ಯಾಂಕಿಂಗ್ ಸೌಲಭ್ಯ ಬಗ್ಗೆ ಕರ್ನಾಟಕ ಗ್ರಾಮೀಣ  ವಿಕಾಸ ಹೆಮ್ಮಾಡಿಯ ಶಾಖಾಧಿಕಾರಿಯಾದ ನಾಗರತ್ನಾ ನಾಯಕ್ ಅವರು ಮಾಹಿತಿಯನ್ನು ಹಂಚಿಕೊಂಡರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್ ಇದರ ಅಧ್ಯಕ್ಷ ಸದಾನಂದ ಬಳ್ಕೂರು ಅವರು ಮಾತನಾಡಿ, ಮಹಿಳೆಯರು ಶಿಕ್ಷಣ, ಕೌಶಲ್ಯ, ಆರ್ಥಿಕ ಸ್ವಾವಲಂಬಿಗಳಾಗಿ ಆತ್ಮ ವಿಶ್ವಾಸದ ಮೂಲಕ ಸಬಲರಾದರೆ ಒಂದು ಕುಟುಂಬ ಅಭಿವೃದ್ಧಿ ಹೊಂದಿದಂತೆ.  ಈ ನಿಟ್ಟಿನಲ್ಲಿ ಮಹಿಳೆಯರು ಹೋಲಿಗೆಯನ್ನು ಕಲಿತು ಸ್ವ ಉದ್ಯೋಗವನ್ನು ಆರಂಭಿಸಬಹುದು. ಗಾರ್ಮೆಂಟ್ ಅಥವಾ ಬಟ್ಟೆ ತಯಾರಿಕಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದು .ಇದರಿಂದ ಕುಟುಂಬದ ಆದಾಯ ಹೆಚ್ಚುವುದರ ಜೊತೆಗೆ ಆತ್ಮ ವಿಶ್ವಾಸವು ವೃದ್ಧಿಯಾಗುತ್ತದೆ ಎಂದು  ಹೇಳಿದರು. ವೇದಿಕೆಯಲ್ಲಿ ಶಿಬಿರದ ತರಬೇತುದಾರರಾದ ಯಾಸ್ಮಿನ್ ಮತ್ತು ಯಶೋಧ ಇವರು ಉಪಸ್ಥಿತರಿದ್ದರು. ನರಸಿಂಹ ಗಾಣಿಗ ಹರೆಗೋಡು ಪ್ರಾಸ್ತವಿಕ ನುಡಿಗಳನ್ನಾಡಿದರು. ಮಾಜಿ ಅಧ್ಯಕ್ಷ ರಾಜು ಪೂಜಾರಿ ರೋಟರಿ ಮಾಹಿತಿಗಳನ್ನು ನೀಡಿದರು. ಮಾಜಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾಹಿತ್ಯ, ಓದು, ಯುವ ಮನಸುಗಳನ್ನು ಪುಸ್ತಕದೆಡೆಗೆ ಸೆಳೆಯಬೇಕೆನ್ನುವ ಸದುದ್ದೇಶದಿಂದ ಕ್ರಿಯೇಟಿವ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪುಸ್ತಕ ಮನೆ ವತಿಯಿಂದ ಕ್ರಿಯೇಟಿವ್ ಪುಸ್ತಕ ಧಾರೆ – 2026 ಮೂರನೆಯ ಆವೃತ್ತಿಯ ಕಾರ್ಯಕ್ರಮ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಸಂಪನ್ನಗೊಂಡಿತ್ತು. ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ವಿ.ಸುನಿಲ್ ಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪುಸ್ತಕ ಬೆಳೆಸುವ ಕಾರ್ಯವನ್ನು ಪುಸ್ತಕ ಮನೆ ಮಾಡುತ್ತಿದ್ದು, ಗೂಗಲ್ ವಾಟ್ಸಪ್ ಗಳು ಜ್ಞಾನವನ್ನು ನೀಡಿದರೆ ವಿಶೇಷ ಅನುಭವವನ್ನು ಕೊಡುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ. ಪುಸ್ತಕಗಳು ಒಬ್ಬ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪುಸ್ತಕವನ್ನು ಓದುವ ಅಭ್ಯಾಸವನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ, ಕಿರಿಯ ಬರಹಗಾರರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿ ಕೊಡುವುದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಮಹಾಪೋಷಕರಾದ ದಿವಂಗತ ಡಾ| ಬಿ.ಬಿ. ಹೆಗ್ಡೆ ಅವರ ಧರ್ಮಪತ್ನಿ ದಿವಂಗತ ವಿಶಾಲಾಕ್ಷಿ ಬಿ. ಹೆಗ್ಡೆ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಆಶ್ರಯದಲ್ಲಿ ಗ್ರಂಥಾಲಯದಲ್ಲಿ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು, ಸಂಸ್ಥೆಯ ಏಳಿಗೆಗೆ ಕಾರಣರಾದ ಮಾತೃ ಹೃದಯಿ ವಿಶಾಲಾಕ್ಷಿ ಬಿ. ಹೆಗ್ಡೆ ಅವರ ಸಹಕಾರವನ್ನು ಸ್ಮರಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುರೇಖಾ ಆಚಾರ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಪುಷ್ಪಾರ್ಚನೆ ಸಲ್ಲಿಸಿದರು.  

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ಎಂಬಿಎ ವಿಭಾಗದ ವತಿಯಿಂದ ಮಂಗಳವಾರ ದಿಂದ ಶುಕ್ರವಾರ ದವರೆಗೆ “ವೈಬ್ರೇಷನ್ ವೀಕ್–2026” ಅನ್ನು “ಸ್ಯಾಂಡಲ್‌ವುಡ್” ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಮೊದಲ ದಿನ “ಕವಿರತ್ನ ಕಾಳಿದಾಸ ಬ್ರೇನ್ ಬ್ಯಾಟಲ್” ಕ್ವಿಜ್ ಸ್ಪರ್ಧೆ ಹಾಗೂ “ಸಿಹಿ ಕಹಿ ರುಚಿ” (ಅಗ್ನಿ ರಹಿತ ಅಡುಗೆ) ಸ್ಪರ್ಧೆ ನಡೆಯಿತು. ಎರಡನೇ ದಿನ “ಯುವರತ್ನ ಲೀಡರ್‌ಶಿಪ್ ಹಂಟ್” (ಬೆಸ್ಟ್ ಮ್ಯಾನೇಜರ್), “ಪ್ರೆಸ್ ಮೀಟ್ ಪ್ರಸಂಗ” (ಮಾಕ್ ಪ್ರೆಸ್ ಮೀಟ್) ಹಾಗೂ “ವಿಚಿತ್ರ ವೇಷ” (ಮಿಸ್‌ಮ್ಯಾಚ್ ಫ್ಯಾಷನ್ ಶೋ) ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಿದ್ದವು.ಮೂರನೇ ದಿನ “ಯಜಮಾನ ಪ್ರೆಸೆಂಟೇಶನ್ ಲೀಗ್” (ಪವರ್‌ಪಾಯಿಂಟ್ ಪ್ರಸ್ತುತಿ) ಮತ್ತು “ಕಲ್ಪನಾ ರೀಲ್ಸ್” (ರೀಲ್ಸ್ ತಯಾರಿಕೆ) ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು.ಕೊನೆಯ ದಿನ “ಅಷ್ಟರಂಗ ಸಿನಿ ಉತ್ಸವ” ಎಂಬ ತಂಡ ಸ್ಪರ್ಧೆಯಲ್ಲಿ ಗುಂಪು ಗಾಯನ, ಗುಂಪು ನೃತ್ಯ, ಕಿರಿಕ್ ಮಿಮಿಕ್ರಿ ಹಾಗೂ ರೆಟ್ರೋ ಫ್ಯಾಷನ್ ಶೋ ಸ್ಪರ್ಧೆಗಳು ನಡೆದವು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರಕ್ಕೆ ವೈದ್ಯರಾದ ಡಾ. ಪ್ರವೀಣ್‌ ಶೆಟ್ಟಿ ಅವರು ರೋಟರಿ ಕ್ಲಬ್ ಬೈಂದೂರು ಮೂಲಕ ಕೊಡಮಾಡಿದ ಮಕ್ಕಳಿಗೆ ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು. ಬೈಂದೂರು ರೋಟರಿ ಕ್ಲಬ್‌ ಅಧ್ಯಕ್ಷ ಅರುಣ್ ಕುಮಾ‌ರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಅವರು ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು. ಮಾಜಿ ಸಹಾಯಕ ಗವರ್ನರ್ ಐ. ನಾರಾಯಣ, ಕಾರ್ಯದರ್ಶಿ ಮಣಿಕಂಠ ಬೈಂದೂರು, ಸದಸ್ಯ ನಾರಾಯಣ ದೇವಾಡಿಗ, ಬೈಂದೂರು ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಐತಾಳ್, ಸಂಚಾಲಕ ದಿನೇಶ್‌, ಸಮಿತಿಯ ರವೀಂದ್ರ ಶ್ಯಾನುಭಾಗ್‌, ರಾಮ ಟೈಲರ್‌, ಗುರುರಾಜ್‌ ಮಾಸ್ಟರ್‌, ನಿರ್ಮಲಾ ಕಿಣಿ, ಆಶಾ ದಿನೇಶ್‌, ಮಾತಾಜಿಯರಾದ ಸುಜಾತಾ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಅಂಗನವಾಡಿ ಕೇಂದ್ರಗಳು ಮಗುವಿನ ಮನೋವಿಕಾಸದ ಕೇಂದ್ರಗಳಾಗಬೇಕು ಆಗ ಮಾತ್ರ ಅಂಗನವಾಡಿ ಕೇಂದ್ರಗಳು ಭವಿಷ್ಯಕ್ಕೆ ಮುನ್ನುಡಿ ಬರೆಯಲು ಸಾಧ್ಯ. ಈ ದಿಸೆಯಲ್ಲಿ ಕಲ್ಮಾಡಿ ಅಂಗನವಾಡಿ ಕೇಂದ್ರ ಅಭಿವೃದ್ಧಿಯತ್ತ ದಾಪುಗಾಲು ಇರಿಸಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕಾರಂತ ಥೀಂ ಪಾಕ್೯ನಲ್ಲಿರುವ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ ಎಲ್ ಕೆಜಿ, ಯುಕೆಜಿ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಮಗುವಿಗೆ ನೈಜ ಸಂಸ್ಕಾರಭರಿತ ಶಿಕ್ಷಣ ನೀಡುವ ಜೊತೆಗೆ   ಶಿಕ್ಷಕಿಯ ನಡುವೆ ತಾಯ್ತನದ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅದೇ ರೀತಿ ಕಾರಂತ ಥೀಮ್ ಪಾಕ್೯ನಲ್ಲಿರುವ ಕಲ್ಮಾಡಿ ಅಂಗನವಾಡಿ ಕೇಂದ್ರ ಪ್ರಸಿದ್ಧ ಪಡೆದು ಸಾಕಷ್ಟು ಮಕ್ಕಳನ್ನು ತನ್ನತ್ತ ಆಕರ್ಷಿಸಿ ಮೇಲ್ದರ್ಜೆಯ ಕೇಂದ್ರವಾಗಿಸಿಕೊಂಡಿದೆ ಇದು ಶ್ಲಾಘನೀಯ ಕಾರ್ಯ ಎಂದರು. ಎಲ್ ಕೆಜಿ ,ಯುಕೆಜಿ ಕೇಂದ್ರವನ್ನು ಕಾರಂತ ಪ್ರತಿಷ್ಠಾನದ ಸದಸ್ಯ ಎಂ. ಸುಬ್ರಾಯ ಆಚಾರ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು NEET–2026 ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಒಂದೇ ಕ್ಯಾಂಪಸ್‌ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿದ 21 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿತಂದಿದ್ದಾರೆ. ಆಳ್ವಾಸ್‌ನ ಸೂರ್ಯಕಾಂತ್ ಪಾಟೀಲ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 97ನೇ ರ‍್ಯಾಂಕ್, ಚೇತನ್ ಯರನಾಳ್ 239ನೇ ರ‍್ಯಾಂಕ್, ಕ್ಲಾರೆನ್ಸ್ ಡಿ’ಸೋಜಾ 724 ರ‍್ಯಾಂಕ್ ಹಾಗೂ ದೀಕ್ಷಿತಾ ಕೆ.ಎಸ್ 951 ರ‍್ಯಾಂಕ್‌ಗಳಿಸಿ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆಳ್ವಾಸ್‌ನ 10 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು, 161 ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಒಟ್ಟು 467 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಈ ಪೈಕಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಫಲಿತಾಂಶ ಪ್ರಕಟಗೊಂಡಿದ್ದು ಗ್ರಾಮೀಣ ಭಾಗದ ಹೆಮ್ಮಾಡಿಯ ಜನತಾ ಪಿಯು ಕಾಲೇಜ್ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ವಿಶಿಷ್ಟ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಾದ ಸಾನಿಕ ಎಸ್ ದೇವಾಡಿಗ 576 (98.98)ಪರ್ಸೆಂಟೈಲ್, ಮನೀತ್ 539 (97. 64) ಪರ್ಸೆಂಟೈಲ್,ಧೀರಜ್ ಜಿ.ಡಿ 527(97.05)ಪರ್ಸೆಂಟೈಲ್, ಹಾಗೂ ಪ್ರೀತಿಕಾ ಮತ್ತು ಇಂಚರ 500ಕ್ಕೂ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋಧಕ ಭೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More