Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ೨೦೧೭-೧೮ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಅಜಿತ್ ಕೆ. ಆಯ್ಕೆಯಾಗಿದ್ದಾರೆ. ಕುಂದಾಪುರ ರಾಮಕ್ಷತ್ರೀಯ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ರಾಣುಮಕ್ಕಿ ನಾಗಬನ ಸಮಿತಿಯ ಅಧ್ಯಕ್ಷರಾಗಿ, ರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾಗಿ, ರೋಯಲ್ ಕ್ಲಬ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸನ್‌ರೈಸ್‌ನ ಕಾರ್ಯದರ್ಶಿಯಾಗಿ ಗಣೇಶ್ ಸಿ.ಎಚ್. ಆಯ್ಕೆಯಾದರು. ಜು.02 ಪದಪ್ರದಾನ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪದಪ್ರದಾನ ಸಮಾರಂಭ ಜುಲೈ 02ರಂದು ಸಂಜೆ 7 ಗಂಟೆಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ. ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಮದ್ದೋಡಿ ಪದಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ. ಕಾಂಚನ್, ಜೋನಲ್ ಲೆಫ್ಟಿನೆಂಟ್ ಜಯಪ್ರಕಾಶ್ ಶೆಟ್ಟಿ ವೈ. ಭಾಗವಹಿಸಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಕಡಲ ಕಿನಾರೆಯಲ್ಲಿ ಕಡಲಾಮೆಯೊಂದು ಪತ್ತೆಯಾಗಿದ್ದು, ಸ್ಥಳೀಯರು ಕಡಲಾಮೆಯನ್ನು ಸಂರಕ್ಷಿಸಿ ಕಡಲಿಗೆ ಬಿಟ್ಟಿದ್ದಾರೆ. ಬುಧವಾರ ಸಂಜೆ ಗಂಗೊಳ್ಳಿಯ ಬ್ಯಾಲಿಕೊಡೇರಿ ಸಮೀಪದ ಕಡಲ ತೀರದಲ್ಲಿ ಮೂರು ಕಾಲಿನ ಅಪರೂಪದ ಕಡಲಾಮೆಯೊಂದು ಕಂಡು ಬಂದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಕಡಲ ತೀರದ ಕಲ್ಲಿಗೆ ಬಡಿಯುತ್ತಿತ್ತು. ಇದನ್ನು ಗಮನಿಸಿದ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಪೂಜಾರಿ ಅವರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ತೆರಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದ ಕಡಲಾಮೆಯನ್ನು ಸ್ಥಳೀಯರ ಯುವಕರ ಸಹಾಯದಿಂದ ಈ ಸಂರಕ್ಷಿಸಿ ಸ್ವಲ್ಪ ಸಮಯದ ಬಳಿಕ ಇದನ್ನು ಸಮುದ್ರಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Read More

ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಿಂದ ಬದುಕು ಉಜ್ವಲ: ದೀಪಕ್‌ಕುಮಾರ್ ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರೋಟರಿ ಭವನದಲ್ಲಿ ಭಾರತ್ ಗ್ಯಾಸ್ ವಿತರಣ ಸಂಸ್ಥೆ ಶ್ರೀ ಶಾಂತೇರಿ ಕಾಮಾಕ್ಷಿ ಎಂಟರ್‌ಪ್ರೈಸೆಸ್ ಬೈಂದೂರು ಇವರ ಸಹಯೋಗದಲ್ಲಿ ಪ್ರಧಾನಮಂತ್ರಿ ಉಜ್ವಲಾ ಹೊಸ ಅನಿಲ ಸಂಪರ್ಕ ಮೇಳ ಹಾಗೂ ಸುರಕ್ಷಿತಾ ಶಿಬಿರ ಜರುಗಿತು. ಶಿಬಿರವನ್ನು ಉದ್ಘಾಟಿಸಿದ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಮಾತನಾಡಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಮಹತ್ವಾಕಾಂಕ್ಷಿ ಇದು ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ ದೂರದೃಷ್ಠಿತ್ವದ ಚಿಂತನೆಗಳಿಂದ ಸ್ವಚ್ಛ ಇಂದನ-ಉತ್ತಮ ಜೀವನ ಎಂಬ ಯೋಜನೆ ಯಶಸ್ವಿಯಾಗಿ ಜಾರಿಗೊಳ್ಳುತ್ತಿದೆ. ದೇಶದ ಶ್ರೀಮಂತರು ಮೋದಿಯವರ ಮನವಿ ಮೇರೆಗೆ ಅಡುಗೆ ಅನಿಲದ ಸಬ್ಸಿಡಿಯನ್ನು ಹಿಂತಿರುಗಿಸಿವುದರಿಂದ ಬಡವರಿಗೆ ಉಚಿತವಾಗಿ ಸಂಪರ್ಕ ನೀಡಲು ಅನುಕೂಲವಾಗಿದೆ ಎಂದು ಹೇಳಿದರು. ಕಳೆದ ಐವತ್ತು ವರ್ಷಗಳಿಂದಾಗದ ಕೆಲಸಗಳು ಈ ಮೂರು ವರ್ಷಗಳಿಂದಾಗುತ್ತಿದೆ. ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ನಾಗನಾಯ್ಕರ ಮನೆ ನಿವಾಸಿ ವಿಜಯ್ ಮೊಗವೀರ (26) ಅವರು ಕಿಡ್ನಿ ವೈಫಲ್ಯ, ನ್ಯೂಮೋನಿಯಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮಾನವೀಯ ನೆರವಿನ ಅಗತ್ಯವಿದೆ. ಅಸ್ವಸ್ಥಗೊಂಡಿರುವ ವಿಜಯ್ ಅವರನ್ನು ಜೂ.23ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ನೀಡಬೇಕಾಗಿದ್ದು ವೈದ್ಯಕೀಯ ವೆಚ್ಚ ಸುಮಾರು 3ಲಕ್ಷ ರೂ. ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಕುಟುಂಬದವರಿಗೆ ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದ್ದು ಸಹೃದಯಿಗಳ ಉದಾರ ನೆರವನ್ನು ಅವರು ಕೋರಿದ್ದಾರೆ. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ವಿಜಯ್ s/o ಸೀನ ಮೊಗವೀರ ನಾಗನಾಯ್ಕರ ಮನೆ, ಮೋವಾಡಿ, ತ್ರಾಸಿ ಗ್ರಾಮ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಬ್ಯಾಂಕ್: ಕರ್ಣಾಟಕ ಬ್ಯಾಂಕ್ ಅಕೌಂಟ್ ನಂ: 7552500100756101 ಐಎಪ್‌ಎಸ್‌ಸಿ: KARB0000755 ಮಾಹಿತಿಗೆ ಸಂಪರ್ಕ: +91 9731040168

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ತಾಲೂಕು ವ್ಯಾಪ್ತಿಯ ಗಂಗೊಳ್ಳಿ, ಮರವಂತೆ, ಶಿರೂರು ಮುಂತಾದೆಡೆ ಕಡಲ ತೀರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕಡಲ್ಕೊರೆತ ಉಗ್ರ ಸ್ವರೂಪ ತಾಳಿದ್ದು, ತೀರ ಪ್ರದೇಶದ ಜನರು ಆತಂಕದಲ್ಲಿ ದಿನದೂಡುವಂತಾಗಿದೆ. ಶಿರೂರು ಕರಾವಳಿ, ಮರವಂತೆ ಹಾಗೂ ಗಂಗೊಳ್ಳಿಯ ಲೈಟ್‌ಹೌಸ್, ಸಾಂತಯ್ಯನಕೇರಿ ಸಮೀಪದ ಬ್ಯಾಲಿಕೊಡೇರಿ ಮನೆ ವಠಾರ, ಖಾರ್ವಿಕೇರಿ ಪರಿಸರ ಮತ್ತು ಬಂದರು ಬೇಲಿಕೇರಿ ಪ್ರದೇಶದಲ್ಲಿ ಕಡಲ್ಕೊರೆತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೆಂಗಿನ ಮರ ಸೇರಿದಂತೆ ಬೃಹತ್ ಗಾತ್ರದ ಮರಗಳು ಕಡಲ ಒಡಲು ಸೇರಿದ್ದು ಇನ್ನೂ ಅನೇಕ ಮರಗಳು ಉರುಳಿ ಬೀಳುವ ಸಾಧ್ಯತೆಗಳಿವೆ. ಕಡಲ್ಕೊರೆತ ಇದೇ ಸ್ವರೂಪದಲ್ಲಿ ಮುಂದುವರಿದರೆ ಅನೇಕ ವಾಸ್ತವ್ಯದ ಮನೆಗಳಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ದಡದ ಮೇಲೆ ನಿಲ್ಲಿಸುವ ಮೀನುಗಾರಿಕಾ ದೋಣಿಗಳೂ ಕೂಡ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿದ್ದು, ಮೀನುಗಾರರು ದೋಣಿಗಳ ಸಂರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಖಾರ್ವಿಕೇರಿ ಪ್ರದೇಶದಲ್ಲಿ ಕಳೆದ ಸಾಲಿನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ತಡೆಗೋಡೆಗೆ ಸಮುದ್ರದ ರಕ್ಕಸ ಗಾತ್ರದ ಅಲೆಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ 2017-18ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಐತಾಳ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮೊಹಮ್ಮದ್ ಅಶ್ಫಕ್, ಉಪಾಧ್ಯಕ್ಷರಾಗಿ ಸತೀಶ್ ಕೊತ್ವಾಲ್, ವೆಂಕಟೇಶ್ ಪ್ರಭು, ಜತೆ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಶ್ರೀನಿವಾಸ ಶೇಟ್, ನಿಕಟಪೂರ್ವಾಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ, ನಿರ್ದೇಶಕರಾಗಿ ಪ್ರವೀಣ್‌ಕುಮಾರ್ ಟಿ.(ಕ್ಲಬ್), ಕೆ.ಸಿ.ಶೆಟ್ಟಿ(ಕಮ್ಯೂನಿಟಿ ಸರ್ವಿಸ್), ಕೆ. ಆರ್. ನಾಯ್ಕ್(ಇಂಟರ್‌ನ್ಯಾಶನಲ್), ರಾಘವೇಂದ್ರ ಚರಣ ನಾವಡ(ಯೂತ್), ಕೆ.ಸುಭಾಶ್ಚಂದ್ರ ಶೆಟ್ಟಿ(ಟಿಆರ್‌ಎಫ್), ರಾಜೀವ ಶೆಟ್ಟಿ(ಪೋಲಿಯೋ ಪ್ಲಸ್), ಎಸ್. ಶಶಿಧರ ಶೆಟ್ಟಿ(ಲಿಟ್ರಸಿ), ಡಾ. ರಾಜಾರಾಮ್ ಶೆಟ್ಟಿ(ವಿನ್ಸ್), ಸಂತೋಷ್ ಕುಮಾರ್(ಸಾರ್ಜೆಂಟ್), ಪರಮೇಶ್ವರ ಹೆಗ್ಡೆ(ಬುಲೆಟಿನ್ ಎಡಿಟರ್) ಆಯ್ಕೆಯಾದರು. ಜು.07 ಪದಪ್ರದಾನ : ರೋಟರಿ ಕ್ಲಬ್ ಕುಂದಾಪುರ ಪದಪ್ರದಾನ ಸಮಾರಂಭ ಜುಲೈ 07ರಂದು ಸಂಜೆ 7.15ಗಂಟೆಗೆ ಕುಂದಾಪುರದ ಬಸ್ರೂರು ರಸ್ತೆಯ ಈಸ್ಟ್ ವೆಸ್ಟ್ ಕಂಟ್ರಿ ಕ್ಲಬ್‌ನಲ್ಲಿ ನಡೆಯಲಿದೆ. ರೋಟರಿ ಜಿಲ್ಲಾ ಪೂರ್ವಾ ಗವರ್ನರ್ ಕೃಷ್ಣ ಶೆಟ್ಟಿ ಪದಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ. ಕಾಂಚನ್, ಜೋನಲ್ ಲೆಫ್ಟಿನೆಂಟ್ ಮನೋಜ್ ನಾಯರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 100ಕಿಲೋವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕವನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ ನಾರಾಯಣ ಶೆಟ್ಟಿ, ಅಧೀಕ್ಷಕಿ ಶೋಭಾ, ಮಂಗಳೂರು ವಿದ್ಯುಚ್ಛಕ್ತಿ ನಿಗಮ ಕುಂದಾಪುರದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅಶೋಕ್ ಪೂಜಾರಿ, ಟಾಟಾ ಸೋಲಾರ್ ಚಾನೆಲ್ ಪಾಲುದಾರರಾದ ವಿಜಯಚಂದ್ರ ರಾವ್, ಉಮೇಶ್ ರಾವ್, ಸೂರ್ಯನಾರಾಯಣ ರಾವ್ ಹಾಗೂ ಸಚಿನ್ ಶಿರೂರು ಉಪಸ್ಥಿತರಿದ್ದರು. ಸೌರಶಕ್ತಿ ಉತ್ಪಾದನಾ ಘಟಕದವು ದಿನವೊಂದಕ್ಕೆ ಸರಾಸರಿ 400ರಿಂದ 450ಯುನಿಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಕಾಲೇಜಿನಗೆ ಅಗತ್ಯವಿರುವ ವಿದ್ಯುತ್ತನ್ನು ಪೂರ್ಣಪ್ರಮಾಣದಲ್ಲಿ ಪೂರೈಸುತ್ತದೆ. ಇದರಿಂದಾಗಿ ಕಾಲೇಜು ವಿದ್ಯುತ್ ಸ್ವಾವಲಂಬಿಯಾಗಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಹೋಲಿ ರೋಜರಿ ಶಾಲೆಯ ೨೦೧೭-೧೮ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಶುಕ್ರವಾರ ಶಾಲೆಯ ಸಭಾಭವನದಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಜಾದೂಗಾರ ಓಂಗಣೇಶ ಉಪ್ಪುಂದ ಅವರು ವಿದ್ಯಾರ್ಥಿ ಸಂಸತ್ತಿನ ಮಹತ್ವದ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಮಾಣವಚನ ಬೋಧಿಸಿದರು. ಕುಂದಾಪುರ ವಲಯದ ಧರ್ಮಗುರು ರೆ.ಫಾ.ಅನಿಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋಯ್ಸಲಿನ್ ಎ.ಸಿ. ಶುಭಾಶಂಸನೆಗೈದರು. ಸಹಶಿಕ್ಷಕಿಯರಾದ ರೇಣುಕಾ ಐತಾಳ್ ಮತ್ತು ನೀತಾ ಡಿ’ಸೋಜ ಕಾರ್ಯಕ್ರಮವನ್ನು ಸಂಘಟಿಸಿದ್ದರು. ವಿದ್ಯಾರ್ಥಿ ಮುಖಂಡ ಶೋನ್ ಪಾವ್ಲ ಸ್ವಾಗತಿಸಿದರು. ವಿದ್ಯಾರ್ಥಿನಿ ರಿಶಿಕಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ಉಪಮುಖಂಡ ಸುಪ್ರೀತಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ರಾಧಿಕಾ ಪೈ ಅವರನ್ನು ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ವತಿಯಿಂದ ಲ್ಯಾಪ್‌ಟಾಪ್ ಕೊಡುಗೆಯಾಗಿ ನೀಡಿ ಗೌರವಿಸಲಾಯಿತು. ಗುರುವಾರ ರಾಧಿಕಾ ಪೈ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ ಹೆಗ್ಡೆ ಕೋಟತ್ತು ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಅವರು ರಾಧಿಕಾ ಪೈ ಅವರಿಗೆ ಲ್ಯಾಪ್‌ಟಾಪ್‌ನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಪ್ರಮುಖರಾದ ರಾಜಾರಾಮ ಪಡಿಯಾರ್ ಉಪ್ಪುಂದ, ಪ್ರಶಾಂತ ನಾಯಕ್ ಕೋಟ, ಕೆ.ರಾಮನಾಥ ನಾಯಕ್, ಎನ್.ಅಶ್ವಿನ್ ನಾಯಕ್, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಸ್ಥಳೀಯರಾದ ಕೆ.ಶಾಂತಾರಾಮ ನಾಯಕ್, ಎಂ.ಜಿ.ಸುರೇಶ ಭಂಡಾರ್‌ಕಾರ್, ಎಂ.ಮಾಧವ ಪೈ, ಮಾಯಾ ಎಂ.ಪೈ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ನಿತ್ಯನಿಧಿ(ಪಿಗ್ಮಿ) ಸಂಗ್ರಹಕಾರರ ಸಂಘದ ಪದಾಧಿಕಾರಿಗಳ ಆಯ್ಕೆ ಭಾನುವಾರ ಕುಂದಾಪುರದ ಸೈಂಟ್ ಮೇರಿಸ್ ಶಾಲೆಯಲ್ಲಿ ಜರುಗಿತು ನೂತನ ಅಧ್ಯಕ್ಷರಾಗಿ ಜಿ.ಆರ್. ಗೋಪಾಲ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಅಂತೋನಿ ಡಿ. ಅಲ್ಮೇಡಾ, ಉಪಾಧ್ಯಕ್ಷರಾಗಿ ಜಿ.ಕುಮಾರಸ್ವಾಮಿ, ಆನಂದ ಮಡಿವಾಳ, ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ ಹಂಗಳೂರು, ಜೊತೆ ಕಾರ್ಯದರ್ಶಿ ಚಂದ್ರ ಕೆ. ಕೋಶಾಧಿಕಾರಿ ಸುಬ್ರಹ್ಮಣ್ಯ ಕಾರಂತ, ಜೊತೆ ಕೋಶಾಧಿಕಾರಿ ದತ್ತಾನಂದ, ಸಂಘಟನಾ ಕಾರ್ಯದಶಿ ಗಣೇಶ ಸೇರೆಗಾರ್, ಗೌರವ ಸಲಹೆಗಾರರಾಗಿ ನಜೀರ್ ಅಹ್ಮದ್, ಶಂಕರ ಬಿಲ್ಲವ, ಗೋಪಾಲ ಜಿ.ವಿಷ್ಣು ಆಯ್ಕೆಯಾಗಿರುತ್ತಾರೆ.

Read More