ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಭವಿಷ್ಯದ ಉದ್ಯಮಿಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಎಂಟರ್ ಪ್ರೆನುರ್ ಶಿಪ್ ಡೆವಲಪ್ ಮೆಂಟ್ ಇನ್ಸ್ಟಿಟೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಆಳ್ವ ಹಾಗೂ ಇಡಿಐಐ ದಕ್ಷಿಣ ರಾಜ್ಯಗಳ ಪ್ರಾಂತೀಯ ಮುಖ್ಯಸ್ಥ ರಮಣ್ ಗುಜ್ರಾಲ್ ಸಹಿ ಹಾಕಿದರು. ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಯೋಜನೆಯ ಸಂಯೋಜಕರಾದ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ದತ್ತಾತ್ರೇಯ, ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೀಶ್ ರಾವ್ ಉಪಸ್ಥಿತರಿದ್ದರು. ಇಂದಿನ ಯುವ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಮಹತ್ವ ಮತ್ತು ಅಗತ್ಯತೆಯನ್ನು ತಿಳಿಸುವುದು. ಉದ್ದಿಮೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡುವುದು. ಹೊಸ ಆವಿಷ್ಕಾರಗಳನ್ನೊಳಗೊಂಡ ನವೀನ ರೀತಿಯ ಉದ್ದಿಮೆಗಳನ್ನು ಪ್ರಾರಂಭಿಸಲು ಪೆÇ್ರೀತ್ಸಾಹಿಸುವುದು. ಉದ್ದಿಮೆಯಲ್ಲಿ ಯಶಸ್ಸುಗಳಿಸಲು ಬೇಕಾಗುವ ಸಾಮಥ್ರ್ಯಗಳ ಬಗ್ಗೆ ತಜ್ಞರ ಮೂಲಕ ತರಬೇತಿ ನೀಡುವುದು. ಉದ್ಯಮವನ್ನು ಪ್ರಾರಂಭಿಸಲು ಸರ್ಕಾರಗಳು, ಬ್ಯಾಂಕ್ ಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಲಿತ-ಬ್ರಾಹ್ಮಣ, ಮೇಲು-ಕೀಳು, ಬಡವ-ಶ್ರೀಮಂತರೆಂಬ ಭೇದವಿಲ್ಲದೇ ಎಲ್ಲರಲ್ಲೂ ಭಗವಂತನನ್ನು ಕಂಡು ಜಗತ್ತಿಗೆ ಮಾರ್ಗದರ್ಶನ ನೀಡಿದ ಶಂಕರರ ಜೀವನದ ತತ್ವಗಳು ನಮ್ಮೆಲ್ಲರನ್ನು ಪ್ರೀತಿ, ವಿಶ್ವಾಸದ ತಳಹದಿಯ ಮೇಲೆ ಉನ್ನತಿಯೆಡೆಗೆ ಕೊಂಡೊಯ್ಯುವ ದಾರಿದೀಪವಾಗಿದೆ. ಶಂಕರರು ತೋರಿದ ದಾರಿಯಲ್ಲಿ ನಡೆದಾಗ ಮನುಷ್ಯ ಮಹಾತ್ಮನಾಗಲು ಸಾಧ್ಯ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದಲ್ಲಿ ನೃಸಿಂಹಾಶ್ರಮ ಸ್ವಾಮೀಜಿ ಅವರ ಪೂರ್ಣಾನುಗ್ರಹದಲ್ಲಿ ನಡೆದ ಶಂಕರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು. ವಿಶ್ವದಲ್ಲಿ ಭಾರತ ಶ್ರೇಷ್ಠ ಸ್ಥಾನವನ್ನು ಅಲಂಕರಿಸಲು ಸಾಧು ಸಂತರು, ಮಹಾತ್ಮರ ಕೊಡುಗೆ ಅಪಾರವಾಗಿದೆ. ಅವರ ಅವಿರತ ಪರಿಶ್ರಮದ ಫಲದಿಂದ ಜಗತ್ತು ಭಾರತವನ್ನು ಗಮನಿಸುವಂತಾಗಿದೆ ಇಂತಹ ಕಾಲಘಟ್ಟದಲ್ಲಿ ಜಾತಿ ಮತ ಪಂಥಗಳ ಭೇಧವನ್ನು ತೊಡೆದು ಹಾಕಿ ವಿಶ್ವಮಾನವತೆಯನ್ನು ಸಾರುವ ಕಾರ್ಯ ನಾವುಗಳು ಮಾಡಿದಾಗ ಸಾರ್ಥಕತೆ ಕಂಡುಕೊಳ್ಳುವ ಜೊತೆಗೆ ಶಾಂತಿ, ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಚಕ್ರವರ್ತಿ ಸೂಲಿಬಲೆ ಹೇಳಿದರು. ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಈ ವಿದ್ಯಾರ್ಥಿಗಳು ಜೆಇಇ ಮೈನ್ಸ್ – 2017 ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಪಡೆದಿರುತ್ತಾರೆ. ವಿದ್ಯಾರ್ಥಿಗಳಾದ ಪೌರ್ಣಮಿ, ಶ್ರೇಯಸ್, ಪದ್ಮನಾಭ ಪೈ, ಶ್ರೇಯಸ್ ಎಂ. ಶೆಟ್ಟ, ಅನಿಲ್ ಕುಮಾರ್, ಲಿಖಿತಾ, ರೇಷ್ಮಾ, ಪೂಜಿತ್ ಶೆಟ್ಟಿ, ಪೂಜಶ್ರಿ, ದೀಕ್ಷಲ್ ಯು, ಕಾರ್ತಿಕ್ ತೇರ್ಗಡೆ ಹೊಂದಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಯನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ರಿ. ಇದರ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಹಾಗೂ ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕನ್ನಡ ಚಿತ್ರರಂಗದ ಡೈಮಂಡ್ ಸ್ಟಾರ್ ಖ್ಯಾತಿಯ ಖ್ಯಾತ ಚಿತ್ರ ನಟ ಶ್ರೀನಗರ ಕಿಟ್ಟಿ ಮೇ ೨ರಂದು ತನ್ನ ಗೆಳೆಯರೊಂದಿಗೆ ಪಡುಮುಂಡು ಕಲ್ಲುಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಕಲ್ಲುಗಣಪತಿ ದೇವರಿಗೆ ಪೂಜೆ ಸಲ್ಲಿಸಿದರು. ಅನಂತರ ಇಲ್ಲಿನ ಸುಂದರ ಪ್ರಕೃತಿ ಸೌಂದರ‍್ಯಕ್ಕೆ ಮನಸೋತು ಕೆಲಹೊತ್ತು ಅಲ್ಲಿಯೇ ವಿಶ್ರಾಂತಿ ಪಡೆದರು ಹಾಗೂ ಅಭಿಮಾನಿಗಳ ಜತೆ ಪೊಟೋಗೆ ಪೋಸ್ ನೀಡಿದರು. ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಕಿಟ್ಟಿ, ಗ್ರಾಮೀಣ ಪ್ರದೇಶದಲ್ಲಿ ಕಾಲ ಕಳೆಯುವುದು ನನಗೆ ತುಂಬ ಖುಷಿ ಎನಿಸುತ್ತದೆ ಹಾಗೂ ಇಲ್ಲಿನ ವಾತವರಣ ಕೂಡ ಉತ್ತಮವಾಗಿದೆ. ನಾನು ಇದುವರೆಗೆ ಈ ಭಾಗದಲ್ಲಿ ಇಂತಹ ಪ್ರೇಕ್ಷಣಿಯ ಸ್ಥಳವನ್ನು ನೋಡಿರಲಿಲ್ಲ. ಇಲ್ಲಿನ ಗುಹಾ ದೇವಾಲಯ ತುಂಬಾ ಪ್ರಶಾಂತವಾಗಿದೆ ಎಂದರು. ಈ ಸಂದರ್ಭ ಸ್ಥಳೀಯ ಅಚ್ಲಾಡಿಯ ಸನ್‌ಶೈನ್ ಗೆಳೆಯರ ಬಳಗದ ವತಿಯಿಂದ ಕಿಟ್ಟಿ ಹಾಗೂ ಖ್ಯಾತ ಖಳನಟ ವಿಶ್ವ ಹಾಗೂ ಸಂಗಡಿಗರನ್ನು ಗೌರವಿಸಲಾಯಿತು. ಸನ್‌ಶೈನ್ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಕುಮಾರ್, ಗೌರವ ಸಲಹೆಗಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನಿಗೆ ಮಂಗಳವಾರ ಮಂಗಳಕರವಾಗಿತ್ತು. ಪ್ರೇಮಿಗಳು ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿ ಸತಿ-ಪತಿಗಳಾದರು. ಮಹಿಳಾ ಸಾಂತ್ವಾನ ಕೇಂದ್ರ ಅಂತರ್ ಧರ್ಮೀಯ ವಿವಾಹಕ್ಕೆ ಕಲ್ಯಾಣ ಮಂಟಪವಾದರೆ, ಸಾಂತಾನ್ವ ಕೇಂದ್ರದ ಅಧ್ಯಕ್ಷರದ್ದೇ ಪೌರೋಹಿತ್ಯ! ತಾಲೂಕಿನ ಕುಂಭಾಶಿ ವಿನಾಯಕ ನಗರ ಜನತಾ ಕಾಲನಿ ನಿವಾಸಿ ವಿವೇಕ ಹಾಗೂ ಅದೇ ಕಾಲನಿ ನಿವಾಸಿ ಸಲ್ಮಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು. ಅವರಿಬ್ಬರೂ ಅಕ್ಕಪಕ್ಕದ ಮನೆಯವರು. ಎರಡು ವರ್ಷದ ಹಿಂದೆ ಮದುವೆಯಲ್ಲಿ ಹುಟ್ಟಿದ ಪ್ರೇಮಾ ಮದುವೆಯಲ್ಲಿ ಮುಕ್ತಾಯಗೊಂಡಿದೆ. ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ರಾಧಾದಾಸ್ ಪೌರೋಹಿತ್ಯದಲ್ಲಿ ಹುಡುಗನ ತಂದೆ ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹಾರ ಬದಲಾಯಿಸಿ, ತಾಳಿಕಟ್ಟಿ ಸರಳ ವಿವಾಹ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕುಂಭಾಸಿ ವಿನಾಯಕ ನಗರದ ನಿವಾಸಿ ಬಾಬು ಮತ್ತು ಶಾರದಾ ಮೂವರು ಮಕ್ಕಳಲ್ಲಿ ವಿವೇಕ್ ಕುಂದಾಪುರ ವುಡ್‌ಶ್ಯಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಬ್ದುಲ್ ಖಲೀಲ್ ಮತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾತಾ ಮಾಂಟೆಸ್ಸೊರಿಯ ಸಪ್ತ ವಾರ್ಷಿಕ ಸಂಭ್ರಮ ಮತ್ತು ಎಂಡಿಆರ್‌ಟಿ ಸತತ ೪ನೇ ಬಾರಿ ಸದಸ್ಯತ್ವದ ಸಂತಸದೊಂದಿಗೆ ಬಾಲ ಕಲಾವಿದ ಪ್ರಭಾವ್ ಶೆಟ್ಟಿಯ ಏಕವ್ಯಕ್ತಿ ’ಪ್ರಕೃತಿ’ ಚಿತ್ರಕಲಾಕೃತಿ ಪ್ರದರ್ಶನವನ್ನು ಅಂಪಾರಿನ ಹಿಲ್ಕೋಡಿನಲ್ಲಿ ನೂತನವಾಗಿ ನಿರ್ಮಿಸಿರುವ ಗೃಹ ’ಶ್ರೀ’ಯಲ್ಲಿ ನೆರವೇರಿತು. ಬೆಂಗಳೂರಿನ ಎನ್ಸೈನ್ ಇಕ್ಯುಪ್‌ಮೆಂಟ್ಸ್ ಪ್ರೈ. ಲಿ.ನ ಸಂಸ್ಥಾಪಕರು, ಆಡಳಿತ ನಿರ್ದೇಶಕರಾದ ದಿನೇಶ್ ವೈದ್ಯ ಅಂಪಾರು ಉದ್ಘಾಟನೆಗೈದು ಕಲಾಕ್ಷೇತ್ರದ ಅಗಾಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಸವ ಜಯಂತಿಯಂದು ನಡೆಯುತ್ತಿರುವ ಗುರುವಂದನಾ ಕಾರ‍್ಯಕ್ರಮವು ಬಸವಣ್ಣನವರ ಅನುಭವ ಮಂಟಪದ ಸಾಕ್ಷಾಯತ್ಕಾರದಂತಿದೆ, ಗೃಹ ಪ್ರವೇಶೋತ್ಸವದಲ್ಲಿ ವಿಭಿನ್ನ ಚಿಂತನೆಯೋದಿಗೆ ಗುರುಸ್ಮರಣೆ ಮಾಡುವ, ತನ್ನ ವಿಮಾ ಗ್ರಾಹಕರನ್ನು ಸತ್ಕರಿಸುವ, ಪ್ರಕೃತಿ ಚಿತ್ರಕಲಾ ಪ್ರದರ್ಶನದೊಂದಿಗೆ ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಭೂತಪೂರ್ವ ಪೋಷಕತ್ವದ ತತ್ವ ಸಾರಿದ್ದು ಪ್ರಕಾಶ್ಚಂದ್ರ ಶೆಟ್ಟಿ ಯವರ ಅನುಭವ ಮಂಟಪವೆಂದು ಕುಂದಾಪುರದ ಖ್ಯಾತ ಪತ್ರಕರ್ತರಾದ ಜಾನ್ ಡಿ’ಸೋಜಾ ನುಡಿದರು. ಮಾತಾ ಮಾಂಟೆಸ್ಸೊರಿಯ ಸಪ್ತ ವಾರ್ಷಿಕ ಸಂಭ್ರಮ ಮತ್ತು ಎಂಡಿಆರ್‌ಟಿ ಸತತ ೪ನೇ ಬಾರಿ ಸದಸ್ಯತ್ವದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎನ್ನುವುದನ್ನು ತಿಳಿಯಲು ಕುಂದಾಪುರದ ವಿನಾಯಕ ಚಿತ್ರಮಂದಿರಕ್ಕೆ ಹೋಗುತ್ತಿದ್ದು, ಒಂದು ದಿನದ ರಜೆ ನೀಡಬೇಕು ಎಂದು ಪದವಿ ವಿದ್ಯಾರ್ಥಿಯೊಬ್ಬ ರಜೆ ಅರ್ಜಿ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗೆ ರಜೆ ಸಿಕ್ಕಿದೆಯೋ ಇಲ್ಲವೋ ಎಂಬ ಕುತೂಹಲ ಮೂಡಿತ್ತು! ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು ಗೈರು ಹಾಜರಿಗೆ ರಜೆ ಕೇಳಬೇಕೆಂದೇನೂ ಇಲ್ಲ. ಏ.12ಕ್ಕೆ ಶೈಕ್ಷ ಣಿಕ ವರ್ಷದ ವರ್ಕಿಂಗ್ ಡೇ ಕೊನೆಗೊಂಡಿದೆ. ವ್ಯಾಟ್ಸ್ಯಾಪ್ನಲ್ಲಿ ತಮಾಷೆಗೆ ಈ ಸಂದೇಶ ಹರಿಬಿಟ್ಟಿರಬಹುದು ಎಂದಿದ್ದಾರೆ. ಈ ವಿಚಾರ ನನ್ನ ಗಮನಕ್ಕೂ ಬಂದಿಲ್ಲ ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಏಕೈಕ ಗ್ಯಾಲಕ್ಸಿ ಕ್ಲಬ್ ಸದಸ್ಯರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಸತತ ೪ನೇ ಬಾರಿಗೆ ಎಂಡಿಆರ್‌ಟಿ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಶಾಖೆಯ ಗೌರವನ್ನು ವಿಭಾಗ ಮಟ್ಟದಲ್ಲಿ ಎತ್ತರಕ್ಕೇರಿಸಿದ್ದಾರೆ ಹಾಗೂ ಅಮೇರಿಕಾದ ಲಾಸ್‌ಎಂಜಲಿಸ್‌ನಲ್ಲಿ ನಡೆಯಲಿರುವ 2018ರ ಎಂಡಿಆರ್‌ಟಿ ಸಮ್ಮೇಳನದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ ಎಂದು ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೃಷ್ಣ ಕುಲಕರ್ಣಿ ಅವರು ಶಾಖೆಯಲ್ಲಿ ನಡೆದ ವಿಮಾಪ್ರತಿನಿಧಿಗಳ ಸಭೆಯಲ್ಲಿ ಅಭಿನಂದಿಸಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆ ಕೋಣಿಯ ವ್ಯವಸ್ಥಾಪಕ ನಿರ್ದೇಶಕರಾಗಿ, ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರದ ನಿಕಟಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪಶಾಖಾಧಿಕಾರಿ ಗಿರೀಶ್, ವಿಮಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಜೇಸಿಐ ಕುಂದಾಪುರ ಚರೀಷ್ಮಾ ಘಟಕಕ್ಕೆ ಭಾರತೀಯ ಜೇಸಿಸ್ ರಾಷ್ಟ್ರಾಧ್ಯಕ್ಷ ರಾಮ್‌ಕುಮಾರ್ ಮೆನನ್ ಇತ್ತೀಚಿಗೆ ಅಧೀಕೃತ ಭೇಟಿ ನೀಡಿದರು. ಜೇಸಿಐ ಕುಂದಾಪುರ ಚರೀಷ್ಮಾ ಅಧ್ಯಕ್ಷೆ ಗೀತಾಂಜಲಿ ಆರ್. ನಾಯಕ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ರಾಷ್ಟ್ರಾಧ್ಯಕ್ಷರ ಶಾಶ್ವತ ಯೋಜನೆಯಾದ ಶುದ್ಧ ಕುಡಿಯುವ ನೀರಿನ ಘಟಕ ಸುಜಲಾ ಉದ್ಘ್ಘಾಟಿಸಲಾಯಿತು. ಶಾಲೆಗೆ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು. ವಲಯಾಧ್ಯಕ್ಷ ಸಂತೋಷ್ ಜಿ., ವಿದ್ಯುತ್ ಗುತ್ತಿಗೆದಾರ ಕೆ. ಆರ್. ನಾಯಕ್, ವಲಯ ಉಪಾಧ್ಯಕ್ಷ ಮರಿಯಪ್ಪ, ಜೇಸಿಐ ಕುಂದಾಪುರದ ಅಧ್ಯಕ್ಷೆ ಅಕ್ಷತಾ ಗಿರೀಶ್, ಜ್ಯೂನಿಯರ್ ಜೇಸಿ ವಿಭಾಗದ ಪೂರ್ವಾಧ್ಯಕ್ಷ ಚೇತನ್, ಜೇಸಿಐ ಕುಂದಾಪುರ ಚರೀಷ್ಮಾ ಕೋಶಾಧಿಕಾರಿ ರೋಶನಿ, ಶರ್ಮಿಳಾ ಕಾರಂತ್, ಸರೋಜ ಉಪಸ್ಥಿತರಿದ್ದರು. ಜೇಸಿಐ ಕುಂದಾಪುರ ಚರೀಷ್ಮಾ ಕಾರ್ಯದರ್ಶಿ ಸರೋಜ ಅರುಣ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಅಶ್ರಯದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜ್ ಹಾಗೂ ಇತರ ಯುವ ಕ್ರೀಡಾಪಟುಗಳಿಗೆ ಕಾಲೇಜಿನ ಆವರಣದಲ್ಲಿ ನಡೆದ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ(ನೆಟ್‌ಬಾಲ್) ಸಮಾರೋಪ ಕಾಲೇಜ್ ಆವರಣದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರಸನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್., ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ಉಪನ್ಯಾಸಕ ಅನಂತ ಪ್ರಭು, ತರಬೇತುದಾರರಾದ ಅವಿನಾಶ್, ಅನಿಲ್ ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.
