Author: ನ್ಯೂಸ್ ಬ್ಯೂರೋ

ಕುಂದಾಪುರ: ವೃಂದಾವನಸ್ಥ ಶ್ರೀ ಗುರುವರ್ಯರ ಆರಾಧನಾ ಮಹೋತ್ಸವವನ್ನು ಬಸ್ರೂರು ಕಾಶೀ ಮಠದಲ್ಲಿ ಶ್ರೀ ವೆಂಕಟರಮಣ ದೇವರು ಹಾಗೂ ಶ್ರೀಮತ್ ಕೇಶವೇಂದ್ರ ತೀರ್ಥರು ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ವೃಂದಾವನಗಳಲ್ಲಿ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕದೊಂದಿಗೆ, ಭಜನೆ ಸಂಕೀರ್ತನೆ, ಮಹಾಪೂಜೆ ನಡೆಯಿತು. ಸಂಜೆ ಗುರುವರ್ಯರ ಭಾವ ಚಿತ್ರದ ನಗರೋತ್ಸವದೊಡನೆ ಸಂಪನ್ನಗೊಂಡಿತು. ಗೌಡ ಸಾರಸ್ವತ ಸಮಾಜದ ಬ್ರಾಹ್ಮಣ ಸಮಾಜದ ಪ್ರಾಚೀನ ಗುರು ಪೀಠವಾದ ಶ್ರೀ ಕಾಶೀ ಮಠ ಸಂಸ್ಥಾನದ ದಕ್ಷಿಣ ಭಾರತದಲ್ಲಿನ ಮೊತ್ತ ಮೊದಲ ಶಾಖಾ ಮಠವಾದ ಬಸ್ರೂರು ಶ್ರೀ ಕಾಶೀ ಮಠದಲ್ಲಿ ಪರಂಪರೆಯ ಯತಿಶ್ರೇಷ್ಟರಾದ ಹಾಗೂ ಜಿ.ಎಸ್.ಬಿ. ಸಮುದಾಯದ ಆರಾದ್ಯ ಗುರುಗಳಾಗಿ ಎಳು ದಶಕಕ್ಕೂ ಮಿಕ್ಕಿ ಇಡೀ ಸಮಾಜದ ಅಭ್ಯುದಯಕ್ಕೆ ಕಾರಣೀಕರ್ತರಾಗಿ ಸಮಾಜವನ್ನು ಧಾರ್ಮಿಕವಾಗಿ, ನೈತಿಕವಾಗಿ, ಜನ ಪರವಾಗಿ ಆಧ್ಯಾತ್ಮದ ನೆಲೆಯಲ್ಲಿ ಮುನ್ನಡೆಸಿದವರು ಶ್ರೀ ಸುಧೀಂದ್ರ ತೀರ್ಥ ಗುರುವರ್ಯರು. ವೇ.ಮೂ.ದಾಮೋದರ ಆಚಾರ್ಯರು ಗುಣಗಾನದಲ್ಲಿ ಸುಧೀಂದ್ರ ತೀರ್ಥರು ಅತಿ ಧೀರ್ಘಕಾಲ ಸಮಾಜದ ಅಭ್ಯುದಯಕ್ಕಾಗಿ ನಿರಂತರ ಶ್ರಮ ವಹಿಸುತ್ತಾ, ಯತಿ ಪರಂಪರೆಗೆ…

Read More

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ. ಎಲ್ಲಾ ಧರ್ಮಗಳ ಜನರು ಸೌಹಾರ್ದದಿಂದ ಶಾಂತಿಯುತವಾಗಿ ಜೀವನ ನಡೆಸಲು ಇಲಾಖೆ ಸರ್ವ ರೀತಿಯ ಸಹಕಾರ ನೀಡಲಿದೆ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಉತ್ತಮ ವಾತಾವರಣ ನಿರ್ಮಿಸಲು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಪೊಲೀಸ್ ಹೊರಠಾಣೆಯಲ್ಲಿ ಜರಗಿದ ಗಂಗೊಳ್ಳಿ ಗ್ರಾಮದ ಪೊಲೀಸ್ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಬ್ಯಾನರ್ ಬಂಟಿಂಗ್ಸ್ ಕಟ್ಟುವ ಸಂದರ್ಭ ಅವಘಡ ಸಂಭವಿಸಿರುವುದರಿಂದ ಸಭೆ ಸಮಾರಂಭಗಳ ಬ್ಯಾನರ್‌ಗಳನ್ನು ಸಂಜೆ ಸೂರ್ಯಾಸ್ತದೊಳಗೆ ಕಟ್ಟಬೇಕು. ಫೆ.೧ರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು. ಮುಂಬರುವ ತಾಪಂ. ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆ ಕ್ರಮಕೈಗೊಂಡಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು. ಬೈಂದೂರು ಪೊಲೀಸ್ ವೃತ್ತ…

Read More

ಕುಂದಾಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತ ಉಪಖಂಡದಲ್ಲಿ ವೈವಿಧ್ಯಮಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ನಮಗೆ ಭಾರತೀಯ ಸಮುದಾಯದ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಪುನರ್ ಪರಿಶೀಲನೆಗೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿಬಂದಿದೆ. ಪೂರಕವಾಗಿ ಭಾರತೀಯ ಸಾಹಿತ್ಯ ಮತ್ತು ಭಾಷೆಯ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಪ್ರಸಿದ್ಧ ಲೇಖಕ ಪ್ರೊ.ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಡಾ. ಟಿ.ಎಂ.ಎ ಪೈ ಭಾರತೀಯ ಸಾಹಿತ್ಯ ಪೀಠ ಮತ್ತು ಕಾಲೇಜಿನ ಡಾ.ಹೆಚ್. ಶಾಂತಾರಾಂ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಸಹಯೋಗದಲ್ಲಿ ಭಾರತೀಯ ಕಥನ ಸಾಹಿತ್ಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯ ಭಾರತೀಯ ಸಾಹಿತ್ಯದಲ್ಲಿ ಈ ಹಿಂದೆ ಭಾಷೆಗಳಲ್ಲಿ ಭಿನ್ನತೆ ಇರಲಿಲ್ಲ. ಕನಿಷ್ಠ ಎರಡರಿಂದ ಮೂರು ಭಾಷೆಗಳ ಜ್ನಾನ ಇರುತ್ತಿತ್ತು. ಕಾಲಕಳೆದಂತೆ ವಸಾಹತುಷಾಹಿ ಇಂಗ್ಲೀಷ್ ಭಾಷೆಯ ಪ್ರಭಾವಕ್ಕೆ ಸಿಲುಕಿ ಕೇವಲ ಇಂಗ್ಲೀಷ್ ಬಿಟ್ಟರೆ ನಮ್ಮ ಭಾಷೆ ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಭಾಷಾವಾರು ಪ್ರಾಂತ್ಯ ವಿಂಗಡಣೆಯು…

Read More

ಬೈಂದೂರು: ಯತಿ ಪರಂಪರೆಯಲ್ಲಿ ಸಮಾಜಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ ಹಾಗೂ ಏಳು ದಶಕಗಳಿಂದ ನಮ್ಮ ಮಾರ್ಗದರ್ಶಕರಾಗಿದ್ದ ಸಾಕ್ಷಾತ್ ಪರಮಾತ್ಮನ ಸ್ವರೂಪಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಪಡೆದದ್ದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪೂರ್ವಜನ್ಮದ ಸುಕೃತಫಲ ಎಂದು ಪುರೋಹಿತ ಗಣೇಶ ಭಟ್ ಹೇಳಿದರು. ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದಾನಾಮ ಆರಾಧನೋತ್ಸವದ ಅಂಗವಾಗಿ ಗುರುವಾರ ತಡರಾತ್ರಿವರೆಗೂ ನಡೆದ ಹರಿಗುರು ಸ್ಮರಣೆಯ ಮಹತ್ವ ವಿವರಿಸಿ ಮಾತನಾಡಿದರು. ಕೇವಲ ಸಕ್ಕರೆ, ಬೆಲ್ಲ ಹಾಕಿ ಮಾಡಿದ ಸಿಹಿಪದಾರ್ಥಗಳನ್ನು ತಿಂದು ಬಾಯಿ ಚಪ್ಪರಿಸುತ್ತೇವೆ ಹೊರತು, ದೈವ, ಗುರು, ತಾಯಿ-ತಂದೆ, ದೇಶಭಕ್ತಿಯಲ್ಲಿರುವ ಸಿಹಿ ನಮಗೆ ತಿಳಿಯದಿರುವುದು ದೌರ್ಭಾಗ್ಯ. ಪೀಠ, ಪೌರೋಹಿತ್ಯ, ದೈವೀಕ ಸ್ಥಳಗಳು ನಮಗೆ ಗುರು ಪರಂಪರೆ ಮಾರ್ಗದರ್ಶನದಿಂದ ದೊರಕಿದೆ. ಜೀವನ ಪರಿಪಕ್ವವಾಗಲು ಪೀಠದಲ್ಲಿರುವ ದೈವಾಂಶ ಸಂಭೂತರೂ, ಜ್ಞಾನಿಗಳೂ ಆಗಿರುವ ಗುರುಗಳನ್ನು ಹಾಗೂ ದೇವರಿಗೆ ಶರಣಾಗಲೇಬೇಕು. ನಮ್ಮ ದೇವಾಲಯಗಳಲ್ಲಿ ಸಮಾಜಭಾಂದವರು ಸಾಮೂಹಿಕ ಪ್ರಾರ್ಥನೆಯಿಂದ ಗುರುಪರಂಪರೆಯ ಸ್ಮರಣೆ ನಿತ್ಯವೂ ಸ್ಮರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು.…

Read More

ಗಂಗೊಳ್ಳಿ: ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದಾನಾಮ ಆರಾಧನೋತ್ಸವದ ಅಂಗವಾಗಿ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಕೀರ್ತನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಂದು ಜರಗಿತು. ಮಧ್ಯಾಹ್ನ ಶ್ರೀದೇವರಿಗೆ ವಿಶೇಷ ಪೂಜೆ, ಶ್ರೀಗಳ ಭಾವಚಿತ್ರಕ್ಕೆ ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಕೀರ್ತನೆ, ಗುರು ಗುಣಗಾನ, ವಿಶೇಷ ಸಮಾರಾಧನೆಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಡಾ.ಕಾಶೀನಾಥ ಪಿ.ಪೈ, ಜಿ.ಶೇಷಗಿರಿ ನಾಯಕ್, ಬಿ.ಸದಾನಂದ ಶೆಣೈ ಮೊದಲಾದವರು ಗುರು ಗುಣಗಾನ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು ಹಾಗೂ ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More

ಸಿದ್ದಾಪುರ: ಇಲ್ಲಿನ ಪೇಟೆಯ ಹತ್ತು ಸಮಸ್ಥರು ಮತ್ತು ಶಿಷ್ಯವೃಂದದವರು ಭಕ್ತಿಪೂರ್ವಕ ಕುಸುಮಾಂಜಲಿಯನ್ನು ಶ್ರೀಗಳ ಚರಣ ಕಮಲಕ್ಕೆ ಅರ್ಪಿಸಿದರು. ಕಡ್ರಿ ವಿಶ್ವನಾಥ ಶೆಣೈ ಅವರು ಗುಣಗಾನದಲ್ಲಿ ಪಂಡರಪುರದಲ್ಲಿ ಸ್ವಾಮೀಜಿಯವರು ಪಾಂಡುರಂಗನಿಗೆ ಆರತಿ ಮಾಡುವಾಗ ಗಂಧದ ತಿಲಕ ಪ್ರಸಾದ ರೂಪವಾಗಿ ದೇವರ ಹಣೆಯಿಂದ ಉದುರಿದ್ದು ಎಲ್ಲರನ್ನು ಭಾವ ಪುಳಕಿತವಾಗಿಸಿತು ಎಂದು ತಿಳಿಸಿದರು. ಟಿ.ಜಿ. ಪಾಂಡುರಂಗ ಪೈ ಮಾತನಾಡಿದರು. ಗೋಪಾಲಕೃಷ್ಣ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ವಾಮೀಜಿಯವರ ಭಾವಚಿತ್ರಕ್ಕೆ ಆರತಿ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.

Read More

ಕೋಟ: ಇಲ್ಲಿನ ಶ್ರೀ ಮುರಳೀದರ ಕೃಷ್ಣ ದೇವಸ್ಥಾನದಲ್ಲಿ ಮುಂಜಾನೆ ವಿಶೇಷ ಪಂಚಾಮೃತ,ಸಿಯಾಳ ಅಭಿಷೇಕ ನಡೆಯಿತು. ಮಧ್ಯಾಹ್ನ ಶ್ರೀ ಶ್ರೀ ಸುಧೀಂದ್ರ ತೀರ್ಥ ಪಾದುಕೆಗೆ ಪಾದ ಪೂಜೆ, ಸುಧೀಂದ್ರ ಅಷ್ಟೋತ್ತರ, ಪುರ್ಪಾರ್ಚನೆ ಜರಗಿತು. ಸಂಜೆ ಭಜನೆ, ಸ್ತೋತ್ರಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ, ಪಾದುಕೆ ಸಹಿತ ಉತ್ಸವ ನಡೆಯಿತು.

Read More

ಬೈಂದೂರು: ಬಿಜೂರು ಗ್ರಾಮದ ಬವಳಾಡಿಯ ವಿವಾಹಿತ ಮಹಿಳೆ ವಿದ್ಯಾಶ್ರೀ (22) ಶುಕ್ರವಾದಿಂದ ನಾಪತ್ತೆಯಾದ ಘಟನೆ ಕುರಿತು ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಬೆಳಗ್ಗೆ 9:30ಕ್ಕೆ ಅಲ್ಬಾಡಿ ಗ್ರಾಮದ ಆರ್ಡಿಯಲ್ಲಿರುವ ತನ್ಮ ಗಂಡನ ಮನೆಗೆ ಹೋಗುವುದಾಗಿ ತನ್ನ ತವರಿನಲ್ಲಿ ತಿಳಿಸಿ ಹೋಗಿದ್ದರು. ಆದರೆ ರಾತ್ರಿಯಾದರೂ ತಮ್ಮ ಮನೆಗೆ ಬಾರದ ಪತ್ನಿಯನ್ನು ಗಂಡ ಸಂತೋಷ್ ಶೆಟ್ಟಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಕಾರ್ಯವ್ಯಾಪ್ತಿಯಿಂದ ಹೊರಗಿತ್ತು. ಬವಲಾಡಿ ಆಕೆಯ ತವರುಮನೆಯಲ್ಲಿ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗದ ಹಿನ್ನೆಯಲ್ಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಕಪ್ಪು ಪ್ಯಾಂಟ್ ಕೆಂಪು ಚೂಡಿದಾರ ಧರಿಸಿರುವ ಇವರು ಗೋಧಿ ಮೈಬಣ್ಣ ಹೊಂದಿದ್ದಾರೆ. ಚಿನ್ನದ ಕರಿಮಣಿ, ಕೈಬಳೆ ಹಾಗೂ ಓಲೆ ಧರಿಸುವ ವಿದ್ಯಾಶ್ರೀಯವರನ್ನು ಯಾರಾದರೂ ಗುರುತಿಸಿದಲ್ಲಿ ಬೈಂದೂರು ಠಾಣೆಗೆ (08254-251033) ತಿಳಿಸುವಂತೆ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ಪಂಚಾಯತ್‌ನ ಬೈಂದೂರು ತಾಪಂ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ವನಜ ಭಾಸ್ಕರ್ ಸ್ಪರ್ಧಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ತಗ್ಗರ್ಸೆಯಲ್ಲಿ ನೆಲೆಸಿರುವ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರಿಗೆ ಸಾಮಾಜಿಕ ಬದುಕಿನ ಅನುಭವಿದೆ. ನವೋದಯ ಸ್ವ ಸಹಕಾಯ ಗುಂಪಿನ ಅಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಲೇಖನ| ಫೆ. 5, 2016  ಬೈಂದೂರು: ಎಸ್ ರಾಜು ಪೂಜಾರಿ. ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ಕಳೆದ 27 ವರ್ಷಗಳಿಂದ  ಸಕ್ರಿಯವಾಗಿ ತೊಡಗಿಸಿಕೊಂಡ ಅನುಭವಿ ರಾಜಕಾರಣಿ, ಸಹಕಾಾರಿ ಧುರೀಣ. ರಾಜಕೀಯ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ತನ್ನದೇ ಆದ ಹೆಸರು ಗಳಿಸಿರುವ ರಾಜು ಪೂಜಾರಿ ಅವರು ಬೈಂದೂರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ದೂರಗಾಮಿ ಯೋಚನೆಯ ನಾಯಕ. ನೇರ-ನಿಷ್ಠುರ ವ್ಯಕ್ತಿತ್ವ, ಹಗಲಿರುಳೆನ್ನದೇ ಜನಸೇವೆ ಹಾಗೂ ಸಂಘಟನಾ ಚಾತುರ್ಯದಿಂದ ಬೈಂದೂರಿನ ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ತಂದೆ ದಿ. ರಾಮ ಪೂಜಾರಿ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಸೇವೆಸಲ್ಲಿಸುತ್ತಾ ಬಂದಿದ್ದರಿಂದ ಪ್ರಭಾವಿತರಾಗಿದ್ದ ರಾಜು ಪೂಜಾರಿ ಅವರ, ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ತುಡಿತಕ್ಕೆ ಅಂದಿನ ಶಾಸಕ ದಿ. ಜಿ. ಎಸ್. ಆಚಾರ್ಯ ಅವರೊಂದಿಗಿನ ಒಡನಾಟದಿಂದ ಪ್ರೇರಣೆಯಾಯಿತು. ಬಿಕಾಂ ಪದವಿ ಪಡೆದ ಬಳಿಕ ಸಾಮಾಜಿಕ ರಂಗದಲ್ಲಿ ನೇರವಾಗಿ ಧುಮುಕಿ ಜನಸೇವೆಗಿಳಿದಿದ್ದರು. ತನ್ನ ನಾಯಕತ್ವ ಗುಣ ಹಾಗೂ ಸಂಘಟನಾ ಚಾತುರ್ಯದಿಂದಲೇ…

Read More