ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗೆ ಅನೇಕ ನೆರವು ನೀಡಲಾಗಿದೆ. ತ್ರಾಸಿಯಲ್ಲಿ ಕೊಂಕಣಿ ಖಾರ್ವಿ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ವತಿಯಿಂದ ಕಟ್‌ಬೇಲ್ತೂರಿನ ತಮ್ಮ ಸ್ವಗೃಹದಲ್ಲಿ ಭಾನುವಾರ ನಡೆದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಗಂಗೊಳ್ಳಿಯಲ್ಲಿ ಸೀಮೆಎಣ್ಣೆ ಬಂಕ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ ಅವರು ಈ ಸನ್ಮಾನಕ್ಕಿಂತ ಕ್ಷೇತ್ರದಲ್ಲಿ ಜನಸೇವಕನಾಗಿ ಸೇವೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂತಾನ ಸತ್ಸಂಪತ್ತಿನ ಜೊತೆಗೆ ಸಂಮೃದ್ಧಿಯು ನಾಗಮಂಡಲ ಸೇವೆಯಿಂದ ದೊರೆಯುತ್ತದೆ. ನಾಡಿಗೂ ಮಂಗಲವಾಗಲಿದೆ. ಯುವಕರು ನಾಗರಾಧನೆಯಂತಹ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ದೇವಸೇನಾನಿ ಸ್ವಾಮಿ ಸುಬ್ರಹ್ಮಣ್ಯನಂತೆ ರಾಷ್ಟ್ರಸೇನಾನಿಗಳಾಬೇಕಿದೆ ಎಂದು ಒಡೆಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಹಕ್ಲಾಡಿ ಗ್ರಾಮದ ಬಾಳೆಮನೆ ಕುಟುಂಬಸ್ಥರ ಮೂಲನಾಗಬನದಲ್ಲಿ ಜರುಗಿದ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು. ಧರ್ಮವೆಂಬುದು ನಮ್ಮ ಬದುಕಿನ ಸಂವಿಧಾನದಂತೆ. ಧರ್ಮ ಮತ್ತು ಸಂಸ್ಕೃತಿ, ನಡೆ ಮತ್ತು ನುಡಿ ಒಂದು ಧರ್ಮದ ಎರಡು ಮುಖವಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ದೇಶದ ಸಂವಿಧಾನವನ್ನು ಪಾಲಿಸಿದಂತೆ ಧರ್ಮವೆಂಬ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಪಾಲಿಸಿದಾಗ ಬದುಕು ಪರಿಪೂರ್ಣವಾಗುತ್ತದೆ ಎಂದರು. ಕೃಷಿ ಹಾಗೂ ನಾಗದೇವರಿಗೂ ಹತ್ತಿರದ ಸಂಬಂಧವಿದೆ. ನಾಗ ಕೃಷಿಸ್ನೇಹಿ. ಕೃಷಿ ಕಾರ್ಯವನ್ನು ಹೆಚ್ಚಿಸುವುದರಿಂದ ನಾಗದೇವರ ಕೃಪೆಗೆ ಪಾತ್ರರಾಗುತ್ತೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೃಷಿ ಸಂಸ್ಕೃತಿಯನ್ನು ಬೆಳೆಸಬೇಕಿದೆ. ದೇಶ ಬಲಿಷ್ಠವಾಗಲು ಕೃಷಿ ಮತ್ತು ಋಷಿ ಇಬ್ಬರೂ ಬೇಕು. ಕೃಷಿಯಿಂದ ಹಸಿವು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಬಂಧು ಬಾಂಧ್ಯವ್ಯದ ಹಬ್ಬ ಕೊಂಪ್ರಿಪೆಸ್ಟ್ ಉಡುಪಿಯ ಧರ್ಮಗುರುಗಳಾದ ರೆ.ಪಾ.ವಿಲಿಯಂ ಮಾರ್ಟಿಸ್ ಮತ್ತು ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಪಾ.ರೋನಾಲ್ಡ್ ಮಿರಾಂದ ಅವರ ನೇತೃತ್ವದಲ್ಲಿ ಜರಗಿತು. ಹೋಲಿಕ್ರಾಸ್ ಚರ್ಚ್‌ನಿಂದ ಗಾಂಧಿ ಮೈದಾನದ ವರೆಗೆ ಯೇಸುಕ್ರಿಸ್ತ್‌ನ ಪರಮಪ್ರಸಾದವನ್ನು ಪುರ ಮೆರವಣಿಗೆ ಜರುಗಿತು. ಬೈಂದೂರು ಭಾಗದ ನೂರಾರು ಕ್ರೈಸ್ತ ಭಾಂದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಟ್ಯಾಬ್ಲೊಗಳ ಗಮನ ನೋಡುಗರ ಗಮನ ಸೆಳೆದವು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮತ್ತು ಶ್ರೀ ಚಿಕ್ಕು ಯುವ ಸಂಘಟನೆ ಹಿಜಾಣ ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ಉಡುಪಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜ.೨೯ರಂದು ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಶಿಬಿರವನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ ಕಣ್ಣಿನ ದೃಷ್ಠಿ ಸರಿಯಾಗಿದ್ದರೆ ಬದುಕಿನ ದೃಷ್ಠಿ ಚನ್ನಾಗಿರಲು ಸಾಧ್ಯ ಆದುದರಿಂದ ಮಾನವನ ಅಮೂಲ್ಯ ಆಸ್ತಿಗಳಾಗಿರುವ ಕಣ್ಣಿನ ದೋಷವನ್ನು ಸರಿಪಡಿಸಿಕೊಂಡು ಜೋಪಾನವಾಗಿ ನೋಡಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಮೋಹಿನಿ ಬಾ ವಹಿಸಿದ್ದರು. ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಜಿ.ಎಸ್.ಬಿ ಸಭಾ ಆಶ್ರಯದಲ್ಲಿ ಹಾಗೂ ಚಿತ್ತಾರ ಕ್ಯಾಶ್ಯೂ ವಂಡಾರ ಇವರ ಪ್ರಾಯೋಜಕತ್ವದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರಿಗೆ ಸೀಮಿತ ಓವರುಗಳ 30 ಗಜಗಳ ಕ್ರಿಕೆಟ್ ಪಂದ್ಯಾಟ ಆಮ್ಗೆಲೆ ಟ್ರೋಫಿ-2017 ಬಸ್ರೂರಿನ ಸರಕಾರಿ ಪ್ರೌಡಶಾಲೆಯ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬಸ್ರೂರು ಬಿ.ನರಸಿಂಹ ಪ್ರಭು ನೇರವೇರಿಸಿದರು. ನಂತರ ಮಾತನಾಡಿದ ಅವರು ಸಮಾಜದ ಸರ್ವರೂ ಪಂದ್ಯಾಟದಲ್ಲಿ ಪಾಲ್ಗೊಂಡು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಂತಹ ಪಂದ್ಯಾಟಗಳು ನಿರಂತರ ಆಯೋಜಿಸಲು ಕರೆನೀಡಿದರು. ಅಲ್ಲದೇ ಸಮಾಜದ ಉದಯೋನ್ಮುಕ ಆಟಗಾರರಿಗೆ ಇಂತಹ ಪಂದ್ಯಾಟಗಳು ವೇದಿಕೆಯಾಗಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸ್ರೂರು ಜಿ.ಎಸ್.ಬಿ. ಸಭಾದ ಆದ್ಯಕ್ಷರಾದ ಬಿ.ರಘುವೀರ ಆಚಾರ್ಯ ವಹಿಸಿ ಪ್ರಾಸ್ತಾವಿಕ ಮಾತನಾಡುತ್ತಾ ಪಂದ್ಯಾಟದ ಸಮಗ್ರ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಕಿಣಿ ಜಪ್ತಿ, ಬಿ.ನರಸಿಂಹರಾಜ ಪ್ರಭು ಹಾಗೂ ರಾಘವೇಂದ್ರ ಪ್ರಭು ಉಪಸ್ಥಿತರಿದ್ದರು. ಬಸ್ರೂರು ಜಿ.ಎಸ್.ಬಿ ಸಭಾದ ಕಾರ್ಯದರ್ಶಿ ರಂಗನಾಥ ಪಡಿಯಾರ ಆಮ್ಗೆಲೆ ಟ್ರೋಫಿ-೨೦೧೭ನ್ನು ಅನಾವರಣಗೊಳಿಸಿದರು. ಗಣೇಶ ಕಾಮತ್ ಸ್ವಾಗತಿಸಿ ಸತೀಶ ಆಚಾರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ನಾವುಂದದ ಬೊಬ್ಬರ್ಯನ ಹಿತ್ಲು ಪದ್ಮಾವತಿ ಅಮ್ಮನವರ ಪುಷ್ಕರಿಣಿಯನ್ನು ಸಣ್ಣ ನೀರಾವರಿ ಇಲಾಖೆಯ ರೂ. ೪೫ ಲಕ್ಷ ಅನುದಾನದಲ್ಲಿ ಪುನರುತ್ಥಾನಗೊಳಿಸುವ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಮಾತನಾಡಿದ ಅವರು ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಪಡೆದಿದ್ದ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ನಾಲ್ಕು ಶಾಸಕತ್ವ ಅವಧಿಗಳಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಪ್ರಸಕ್ತ ಅವಧಿಯ ಉಳಿದೊಂದು ವರ್ಷಾವಧಿಯಲ್ಲೂ ಅದರ ವೇಗ ಇನ್ನಷ್ಟು ಹೆಚ್ಚಲಿದೆ. ಈ ದೇವಸ್ಥಾನದ ಅನ್ಯ ಕೆಲಸಗಳಿಗೂ ಅನುದಾನ ಒದಗಿಸಲಾಗುವುದು. ಮುಂದಿನ ತಿಂಗಳಿನಲ್ಲಿ ನಡೆಯುವ ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಬೈಂದೂರು ತಾಲೂಕು ಆರಂಭದ ಘೋಷಣೆ ಮಾಡುವಂತೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತರಲಾಗಿದೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ, ಗ್ರಾ.ಪಂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಯುವಜನತೆ ದೇಶದ ಬೆನ್ನೆಲುಬು. ದೇಶ ಕಟ್ಟುವ ಕಾಯಕದಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯ. ಕಬ್ಬಡಿಯು ನಮ್ಮ ದೇಶದ ಕ್ರೀಡೆಯಾಗಿರುವುದರಿಂದ ನಾವು ಈ ಕ್ರೀಡೆಯನ್ನು ಗೌರವಿಸಬೇಕಿದೆ. ಕಠಿಣ ಪರಿಶ್ರಮದಿಂದ ಕ್ರೀಡಾ ತರಬೇತಿಯನ್ನು ಪಡೆದುಕೊಂಡು ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಕಂಚುಗೋಡು ನವಸಂಘದ ೨೫ನೇ ವಾರ್ಷಿಕೋತ್ಸವದ ಪ್ರಯುಕ್ತ ಕೊಂಕಣಿ ಖಾರ್ವಿ ಸಮಾಜಬಾಂಧವರಿಗಾಗಿ ಹಮ್ಮಿಕೊಂಡ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ’ನವ ಚೈತನ್ಯ ಟ್ರೋಫಿ’ ನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಗ್ರಾಪಂ ಉಪಾಧ್ಯಕ್ಷೆ ವಂದನಾ ಜೆ.ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಚೌಕಿ ಶಂಕರ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಗಂಗೊಳ್ಳಿ ಗ್ರಾಪಂ ಸದಸ್ಯ ವೈ.ಶ್ರೀನಿವಾಸ ಖಾರ್ವಿ, ಶೇಖರ ಖಾರ್ವಿ ಕುಂದಾಪುರ, ಸದಾನಂದ ಖಾರ್ವಿ ಮದ್ದುಗುಡ್ಡೆ, ಸುಧಾಕರ ಖಾರ್ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಳತೆ, ತಾಳ್ಮೆ ಹಾಗೂ ಜೀವನ ಪ್ರೀತಿಯ ನಡೆನುಡಿಯಿಂದಾಗಿ ಎಲ್ಲರೊಂದಿಗೂ ಉತ್ತಮ ಒಡನಾಟವಿಟ್ಟುಕೊಂಡಿದ್ದ ಕಲಾವಿದ ಭೋಜು ಹಾಂಡರು ಭೌದ್ಧಿಕವಾಗಿ ನಮ್ಮನ್ನಗಲಿದ್ದರೂ ಅವರು ತೋರಿದ ದಾರಿಯಲ್ಲಿಯೇ ನಡೆಯುವ ಮೂಲಕ ಅವರ ಕನಸುಗಳನ್ನು ಜೀವಂತವಾಗಿರಿಸಬೇಕಿದೆ ಎಂದು ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ಕೆ. ಕೆ. ಕಾಂಚನ್ ಹೇಳಿದರು. ಅವರು ವಡೇರಹೋಬಳಿ ಹೈಸ್ಕೂಲು ಸಭಾಂಗಣದಲ್ಲಿ ಸಮುದಾಯ ಕುಂದಾಪುರ ಸಂಘಟನೆಯ ಆಶ್ರಯದಲ್ಲಿ ದಿ. ಭೋಜು ಹಾಂಡರ ನೆನಪಿಗಾಗಿ ಜರುಗಿದ ವರ್ಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಚಿತ್ರಕಲೆಯ ಅರಿವೂ ಇಲ್ಲದವರಿಗೂ ಕಲೆಯ ಬಗೆಗೆ ಸೆಳವು ಮೂಡಿಸಿ ಉತ್ಸುಕತೆಯಿಂದ ಕಲಿಸುವ ಪ್ರವೃತ್ತಿ ಭೋಜು ಹಾಂಡರಲ್ಲಿತ್ತು. ಹುಟ್ಟು ಸಾವಿನ ನಡುವಿನ ಸಾರ್ಥಕ್ಯ ಜೀವನವನ್ನು ಜೀವಿಸಿದ್ದ ಅವರ ನೆನಪನ್ನು ತಮ್ಮ ವ್ಯಕ್ತಿತ್ವದ ಮೂಲಕ ಚಿರಸ್ಥಾಯಿಯಾಗಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಮಾಡನಾಡಿ ಭೋಜು ಹಾಂಡರು ಉಸಿರಾಡುವ ಮೂಲಕ ಮಾತ್ರ ಜೀವಂತಿಕೆಯನ್ನಿಟ್ಟುಕೊಂಡವರಲ್ಲ. ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ಬದಲಾವಣೆಯನ್ನು ಬಯಸಿದ್ದವರಾಗಿದ್ದರು. ಎಷ್ಟೋ ಮಕ್ಕಳಿಗೆ ಕಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕವಿ ಅಡಿಗರ ಜನ್ಮಶತಾಬ್ಧಿಯು ಇಂದಿನಿಂದ ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದ್ದು, ಇಡೀ ವರ್ಷ ಅಡಿಗರ ಸಾಹಿತ್ಯ ಹಾಗೂ ವಿಚಾರಧಾರೆಗಳ ಕುರಿತು ಪುನರವಲೋಕನಕ್ಕೆ ಅವಕಾಶ ಸಿಕ್ಕಿದೆ. ಅಡಗರನ್ನು ‘ಯುಗದ ಕವಿ’ ಎನ್ನುವುದಿದೆ. ಅಡಿಗರು ಹುಟ್ಟಿ-ಬೆಳೆದ ಈ ಭಾಗದ ಜನ ಈ ವಿಚಾರ ಮಂಥನದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ತಮ್ಮ ಅಭಿಮಾನವನ್ನು ತೋರ್ಪಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪೂರ್ವಧ್ಯಕ್ಷ ಉಪ್ಪುಂದ ಚಂದ್ರ ಶೇಖರ ಹೊಳ್ಳ ಹೇಳಿದರು. ಅವರು ಸುವಿಚಾರ ಬಳಗ ಹಮ್ಮಿಕೊಂಡ ಜನ್ಮಶತಮಾನೋತ್ಸವ ಆಚರಣೆಯನ್ನು ಅಡಿಗರ ಸಮಗ್ರ ಕೃತಿಗಳನ್ನು ಅಲಂಕಾರವಾಗಿ ಜೋಡಿಸಿದ ಫಲಕದೆದುರು ದೀಪ ಬೆಳಗಿಸಿ ಕಾರ್ಯಕ್ರಮದಕ್ಕೆ ಚಾಲನೆ ನೀಡಿ ಮಾತನಾಡಿ ಅಡಿಗರನ್ನು ‘ನವ್ಯಕವಿ’, ‘ಬಂಡಾಯಕವಿ’, ‘ಪ್ರಗತಿಶೀಲಕವಿ’, ಎಂದೆಲ್ಲ ಗುರುತಿಸಿದರೂ ಅವರ ಪರೆಂಪರೆಯ ಶೀಲ- ಶುದ್ದಿ, ಸತ್ಯ ನಿಷ್ಠೆ, ಸ್ವಾಭಿಮಾನದಿಂದ ವಿಚಲಿತರಾಗಿರದೆ ಆರ್ಷ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ಆಗಿದ್ದರು. ಅವರು ಆಂತರ್ಯದಲ್ಲಿ ಆಧ್ಯಾತ್ಮಿಕ ಹುಡುಕಾಟದಲ್ಲಿ ಚಕಮಕಿ ಕಲ್ಲು ತಿಕ್ಕಿ ಬೆಳಕು ಹೊತ್ತಿಸುವಲ್ಲಿ ಅಪರಂಜಿ ವಿದ್ಯೆಯನ್ನು ಕರಗತಮಾಡಿಕೊಳ್ಳುವಲ್ಲಿ ಸದಾ ನಿಷ್ಣಾರಾಗಿದ್ದರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ದೇವಾಲಯಗಳು ನವೀಕರಣಗೊಳ್ಳುತ್ತಿವೆ. ಶ್ರೀಸಾಮಾನ್ಯರು ತಾವು ಉತ್ತಮ ಬದುಕು ರೂಪಿಸಿಕೊಂಡ ಮೇಲೆ ಸಮಾಜದ ಸೇವೆ ಮಾಡಬೇಕು ಎಂದು ಮುಂದೆ ಬರುವಂತಾಗಿದೆ. ಸ್ವಾತಂತ್ರ್ಯ ಬಳಿಕ ಸಮಾಜದಲ್ಲಾದ ಸಾಮಾಜಿಕ ಪರಿವರ್ತನೆಯಿಂದಾಗಿ ಎಲ್ಲರಲ್ಲಿಯೂ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಬರುವಂತಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು. ಅವರು ಇತ್ತಿಚಿಗೆ ನವೀಕರಣಗೊಂಡ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಶಿಲಾಮಯ ದೇವಸ್ಥಾನಕ್ಕೆ ಭೇಟಿನೀಡಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ದೇಹವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಅಲ್ಲಿ ದೇವರಿದ್ದಾನೆ ಎಂದು ತಿಳಿಯಬೇಕು. ಧಾರ್ಮಿಕ ನಂಬಿಕೆ ಇಲ್ಲದಿದ್ದರೆ ಮನುಷ್ಯನಲ್ಲಿ ಶಿಸ್ತು ರೂಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಹವನ್ನೂ ದೇವಾಲಯ ಎಂದು ಗುರುತಿಸಿಕೊಳ್ಳಬೇಕಾದ ಅಗತ್ಯವಿದೆ. ದೇವಸ್ಥಾನದಂತೆ ಆರೋಗ್ಯಕ್ಕಾಗಿ ದೇಹವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೇ ರೋಗ ಬ್ಲಂದು ಆಯಸ್ಸು ಮುಗಿಯಬಹುದು. ಇದನ್ನು ವೈಜ್ಞಾನಿಕವಾಗಿ ಹೇಳಿದಿದ್ದರೇ ಜನರು ಹೆದರದಿರಬಹುದು. ಆದರೆ ಅದನ್ನೇ ಧಾರ್ಮಿಕವಾಗಿ ಹೇಳಿದರೇ ಎಲ್ಲರೂ ಒಪ್ಪುತ್ತಾರೆ ಎಂದರು. ನಮ್ಮಿಂದ ಆದಷ್ಟು…
