ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಮದೂರು ಸಮೀಪದ ಬೆಳ್ಕಲ್ ಗೋವಿಂದ ತೀರ್ಥಕ್ಷೇತ್ರದಲ್ಲಿ ಎಳ್ಳುಅಮಾವಾಸ್ಯೆಯ ಪ್ರಯುಕ್ತ ಸಾವಿರಾರು ಭಕ್ತರಿಂದ ಪವಿತ್ರ ತೀರ್ಥಸ್ನಾನ ನಡೆಯಿತು. ವಿಶೇಷವಾಗಿ ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ತೀರ್ಥ ಸ್ನಾನದಲ್ಲಿ ಭಕ್ತರೊಂದಿಗೆ ಭಾಗವಹಿಸಿ ಭಾಗವಹಿಸಿದ್ದರು. ವರ್ಷಕ್ಕೊಮ್ಮೆ ಸಾವಿರಾರು ಭಕ್ತರು ಕಠಿಣ ಹಾದಿಯನ್ನು ಕ್ರಮಿಸಿ ಎತ್ತರದಿಂದ ಬೀಳುವ ನೀರಿಗೆ ತಲೆಯೊಡ್ಡಿ ಗೋವಿಂದನ ನಾಮಸ್ಮರಣೆಗೈಯುತ್ತಾ ಸ್ನಾನ ಮುಗಿಸಿ ಬಳಿಕ ಗುಡ್ಡದ ಕೆಳಗಿರುವ ಗಣಪತಿ ಗೋವಿಂದ ದೇವರಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸುತ್ತಾರೆ. ಸುಮಾರು ಎರಡೂವರೆ ಸಾವಿರ ಫೀಟ್ ಎತ್ತರದಿಂದ ಹರಿದು ಬರುವ ನೀರು ಗೋವಿಂದ ತೀರ್ಥವಾಗಿ ಧರೆಗಿಳಿಯುವಲ್ಲಿ ನೆರೆದ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡತ್ತಾರೆ. ಕೊಡಚಾದ್ರಿಯ ತಪ್ಪಲಿನಲ್ಲಿರುವ ಗೋವಿಂದ ತೀರ್ಥಕ್ಕೆ ನಡೆದೇ ಸಾಗಬೇಕಾದುದರಿಂದ ಎಳ್ಳಾಮವಾಸ್ಯೆ ದಿನ ಕಾಡು ದಾರಿಯಲ್ಲಿ ಗುಡ್ಡ ಹತ್ತಿ ಸಾಗುವವರಿಗೆ ಮಜ್ಜಿಗೆ ವ್ಯವಸ್ಥೆ, ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕ್ಷೇತ್ರದ ಅಭಿವೃದ್ಧಿಗಾಗಿ ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರು ಸ್ಥಳಿಯರ…
Author: ನ್ಯೂಸ್ ಬ್ಯೂರೋ
ಕೊಲ್ಲೂರು: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ. ಕೆ.ಜೆ.ಜೇಸುದಾಸ್ ತಮ್ಮ 76ನೇ ಹುಟ್ಟುಹಬ್ಬದ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ, ಚಂಡಿಕಾ ಹೋಮ ನೆರವೇರಿಸಿದರು. ಪತ್ನಿ ಪ್ರಭಾ ದಾಸ್ ಅವರೊಂದಿಗೆ ಭಾನುವಾರ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಕ್ಷೇತ್ರದ ಹಿರಿಯ ಅರ್ಚಕರಾದ ಎನ್.ಗೋವಿಂದ ಅಡಿಗ ಹಾಗೂ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿ, ಬಳಿಕ ಶ್ರೀದೇವಿಯ ದರ್ಶನ ಪಡೆದರು. ತಮ್ಮ ನೆಚ್ಚಿನ ಗಾಯಕ ಜೇಸುದಾಸ್ ಅವರ ಹುಟ್ಟು ಹಬ್ಬದ ಆಚರಣೆಗಾಗಿ ಕೇರಳ ಹಾಗೂ ವಿವಿಧೆಡೆಗಳಿಂದ ಸಾವಿರಾರು ಅಭಿಮಾನಿಗಳು ಕೊಲ್ಲೂರಿಗೆ ಬಂದಿದ್ದರು. 1967 ನೇ ಇಸವಿಯಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಭಕ್ತರಾಗಿರುವ ಅವರು 1972 ರಿಂದ ಪ್ರತಿ ವರ್ಷದ ಜನವರಿ 10 ರಂದು ದೇವಳಕ್ಕೆ ಭೇಟಿ ನೀಡಿ, ಚಂಡಿಕಾಹೋಮ ನೆರವೇರಿಸಿದ ಬಳಿಕ ಸಂಗೀತ ಕಛೇರಿ ನೀಡುವ ಪರಿಪಾಠವಿಟ್ಟುಕೊಂಡಿದ್ದಾರೆ. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಡಾ.ಜೇಸುದಾಸ್ ಹಾಗೂ ಪ್ರಭಾ ಜೇಸುದಾಸ್ ಅವರನ್ನು…
ಬೈಂದೂರು: ಇಲ್ಲಿಗೆ ಸಮೀಪದ ಹೇರೂರು ವ್ಯಾಪ್ತಿಯ ಹುಂತನಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೆ ಎಳ್ಳಮಾವಾಸ್ಯೆಯಂದು ನಡೆಯಿತು. ಸೌಪರ್ಣಿಕಾ ನದಿ ತೀರದ ಪ್ರಸಿದ್ಧ ಕ್ಷೇತ್ರಕ್ಕೆ ವಿವಿಧೆಡೆಗಳಿಂದ ನಂಬಿರು ಸುಮಾರು 5 ಸಾವಿರಕ್ಕೂ ಮಿಕ್ಕಿದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಹರಕೆಯ ತುಲಾಭಾರ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು. ಬಳಿಕ ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಕುಂದಾಪುರ: ರಾಜ, ಮಹಾರಾಜರಿಲ್ಲದ ಈ ದಿನಗಳಲ್ಲಿ ಪ್ರಜೆಗಳೇ ರಾಜರು ಎನ್ನುವ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಉಡುಪಿಯ ಅಷ್ಟಮಠಗಳ ಪರ್ಯಾಯ ಮಹೋತ್ಸವದ ಯಶಸ್ಸಿಗಾಗಿ, ನಾಡಿನ ಎಲ್ಲ ಕಡೆಯಿಂದ ಭಕ್ತರು ನೀಡುತ್ತಿರುವ ಸ್ಪಂದನಗಳು ಈ ಉತ್ಸವವನ್ನು ರಾಜಸೂಯ ಯಾಗದಂತೆ ಬಿಂಬಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿಗೆ ಸಮೀಪದ ಕುಂಭಾಸಿಯ ಶ್ರೀ ಆನೆಗುಡ್ಡೆ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ತಾಲ್ಲೂಕಿನ ಅಭಿಮಾನಿಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಭೂತ ಕನ್ನಡಿಯಲ್ಲಿ ಎಲ್ಲವೂ ದೊಡ್ಡದಾಗಿ ಕಾಣಿಸುತ್ತದೆ. ಅದರಂತೆ ಭಕ್ತರು ಪ್ರೀತಿ ಕನ್ನಡಿಯಲ್ಲಿ ನನ್ನನ್ನು ಹಾಗೂ ನಾನು ಮಾಡಿದ ಕಾರ್ಯವನ್ನು ನೋಡುವುದರಿಂದಾಗಿ ಅದೂ ದೊಡ್ಡದಾಗಿ ಕಾಣಿಸುತ್ತಿದೆ. ಯತಿ ಶ್ರೇಷ್ಠರಾಗಿದ್ದ ಮಧ್ವಾಚಾರ್ಯರು ಜಗತ್ತು ಹಾಗೂ ದೇವರು ಎನ್ನುವ ಎರಡು ಸತ್ಯವನ್ನು ತಿಳಿಸಿದ್ದರು. ದೇವರಲ್ಲಿ ಭಕ್ತಿ ಹಾಗೂ ಜಗತ್ತಿನಲ್ಲಿ ಕರ್ತವ್ಯ ಎನ್ನುವ ತಾತ್ವರ್ಯಗಳು ಇದಾಗಿದ್ದವು. ಕೇವಲ ಭಕ್ತಿ, ಧ್ಯಾನ ಹಾಗೂ ಪೂಜೆಗಳಿಂದ ಮಾತ್ರ ದೇವರನ್ನು ಸಂತೃಪ್ತಗೊಳಿಸಲು ಸಾಧ್ಯವಾಗುವುದಿಲ್ಲ, ಭಕ್ತಿಯ ಜತೆ ಸಮಾಜಮುಖಿ ಸೇವಾ ಕಾರ್ಯಗಳು ಇದ್ದಾಗ ಇನ್ನಷ್ಟು ಹೆಚ್ಚಿನ ಪೂಜಾ ಫಲವನ್ನು ಪಡೆಯಲು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬೋಟಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ಊಟ ಮುಗಿಸಿ ಕೈತೊಳೆಯುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಘಟನೆ ತಾಲೂಕಿನ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ವರದಿಯಾಗಿದೆ. ನಾಗೂರಿನ ರಾಜು ಮೊಗವೀರ(50) ಮೃತ ದುರ್ದೈವಿ. ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿನ ಲಂಗರು ಪ್ರದೇಶದಲ್ಲಿ ನಿಂತಿದ್ದ ಬೋಟಿನಲ್ಲಿ ರಾತ್ರಿ ಊಟ ಮುಗಿಸಿದ ರಾಜು ಮೊಗವೀರ ಕೈ ತೊಳೆದುಕೊಳ್ಳುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಇದನ್ನು ಗಮನಿಸಿದ ಬೋಟಿನ ಸಿಬ್ಬಂಧಿಗಳು ಸಂಬಂಧಪಟ್ಟವರಿಗೆ ಕೂಡಲೇ ವಿಷಯ ಮುಟ್ಟಿಸಿದರಾದರೂ ರಾತ್ರಿ ವೇಳೆಯಾದ್ದರಿಂದ ಎಲ್ಲಿ ಬಿದ್ದದ್ದರೂ ಎಂದು ಪತ್ತೆಹಚ್ಚಲಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಶದ ಸಿಬ್ಭಂಧಿಗಳು ಸ್ಥಳೀಯರೊಂದಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆದರೆ ಈವರೆಗೆ ಮೃತರ ಶವ ಪತ್ತೆಯಾಗಿಲ್ಲ. ಗಂಗೊಳ್ಳಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಆ ಕಾಲದ ಹಾಡುಗಳ ಖದರೇ ಬೇರೆ. ಈ ಕಾಲದ ಸಂಗೀತ ಮತ್ತೆ ಮತ್ತೆ ಕೇಳಿದರೆ ಬೋರೇ. ಹೀಗೆ ರಾಗ ಎಳೆತ ಕೂರಬೇಡಿ! ಆ ಕಾಲ ಹಾಡುಗಳನ್ನು ಈ ಕಾಲದಲ್ಲಿ ಕೇಳುವ ಅವಕಾಶ ಕುಂದಾಪುರದ ಕಲಾಕ್ಷೇತ್ರ ಮಾಡಿಕೊಟ್ಟಿದೆ. ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜನವರಿ 10ರ ಭಾನುವಾರ ಸಂಜೆ 5:30ರಿಂದ ‘ಇನಿದನಿ’ ಸಂಗೀತ ಸಂಜೆ ನಡೆಯಲಿದೆ. ಇಂದಿಗೂ ಕಾಡುವ ಹಳೆಯ ಹಾಡುಗಳು ಪ್ರಸಿದ್ಧ ಸಂಗೀತಗಾರರ ಕಂಠದಿಂದ ಮೂಡಿಬರಲಿದೆ. ಇನಿದನಿ ಸಂಗೀತಪ್ರಿಯರಿಗೆ ಒಂದಿಷ್ಟು ಹೊತ್ತು ಮನೋರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ.
ಸಿದ್ಧಾಪುರ: ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಹೊಸಂಗಡಿ ಘಟಕ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಲೋಕ ಕಲ್ಯಾಣರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹೊಸಂಗಡಿ ಸಾರ್ವಜನಿಕ ಗಣೇಶೋತ್ಸವ ರಂಗ ಮಂದಿರದಲ್ಲಿ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಕಲಾ ಕೇಂದ್ರದ ಸಂಚಾಲಕ ಮುಂಗೆಶ್ ಶೆಣೈ ಧಾರ್ಮಿಕ ಪ್ರವಚನ ನೀಡಿದರು. ಹೊಸಂಗಡಿ ಕೃಷ್ಣ ಜ್ಯುವೆಲ್ಲರಿ ಮಾಲಿಕ ಮಂಜುನಾಥ್ ಗೊಲ್ಲ ಕಂಠಗದ್ದೆ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಹಿ.ಜಾ.ವೇ. ಉಡುಪಿಯ ಅರವಿಂದ ಕೋಟೇಶ್ವರ, ಹಿ.ಜಾ.ವೇ. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಹೆನ್ನಾಬೈಲು ಭಾಸ್ಕರ್ ಶೆಟ್ಟಿ, ಸಿದ್ದಾಪುರ ವಲಯ ಸಂಚಾಲಕರಾದ ಹರ್ಷ ಜನ್ಸಾಲೆ, ಹೊಸಂಗಡಿ ಘಟಕದ ಅಧ್ಯಕ್ಷ ರಾಘವೇಂದ್ರ ಬಾಳೆಜೆಡ್ದು ಉಪಸ್ತಿತರಿದ್ದರು. ಭುಜಂಗ ಶೆಟ್ಟಿ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ಹೊಸಂಗಡಿ ಸ್ವಾಗತಿಸಿ, ನಾಗರಾಜ್ ಬಾಳೆಜೆಡ್ದು ವರದಿ ವಾಚಿಸಿದರು. ಭಾಸ್ಕರ್ ಶೆಟ್ಟಿ ವಂದಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೇನುಬೇರಿನ ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಕ್ಷಯ್ ಗೆ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಯೋಜನಾನಗರದ ಸುನಿಲ್ ಗೆ ಸಾಕ್ಷ ನಾಶಪಡಿಸಲು ಸಹಕರಿಸಿ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಅಕ್ಷಯ ಬಂಧಿನಕ್ಕೊಳಗಾಗಿದ್ದ. ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಲಯ ಅಕ್ಷಯಗೆ ಜಾಮೀನು ನೀಡಿದೆ. ಬೈಂದೂರಿನ ಇತಿಹಾಸದಲ್ಲಿ ಕರಾಳ ದಿನ: ಬೈಂದೂರು ಕ್ಷೇತ್ರದ ಹೇನಬೇರು ಹೊಸಹಕ್ಲುವಿನ ಬಾಬು ದೇವಾಡಿಗ ಹಾಗೂ ರಾಧಾ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗಳಾದ ಅಕ್ಷತಾ ದೇವಾಡಿಗ ಕ್ರೂರಿಯ ಹೇಯ ಕೃತ್ಯಕ್ಕೆ ನಲುಗಿ ಪ್ರಾಣ ಕಳೆದುಕೊಂಡ ಪ್ರತಿಭಾವಂತ ಹೆಣ್ಣುಮಗಳು. ಬೆಟ್ಟದಷ್ಟು ಕನಸುಗಳನ್ನು ಹೊತ್ತು, ಭವಿಷ್ಯದ ಸ್ಪಷ್ಟ ಕಲ್ಪನೆಯೊಂದಿಗೆ ಸಾಗುತ್ತಿದ್ದ ಅಕ್ಷತಾಳಿಗೆ ಎದುರಾದ ಭಯಾನಕ ಸಂದರ್ಭ ಬೈಂದೂರಿನ ಜನತೆಯನ್ನು ದಿಗ್ಬ್ರಾಂತರನ್ನಾಗಿಸಿತ್ತು. ಆರೋಪಿಗಳ ಬಂಧನಕ್ಕೆ ಇಡಿ ಊರೇ ಪ್ರತಿಭಟಿಸಿತ್ತು. ಪ್ರಕರಣದ ಬೆನ್ನತ್ತಿದ ಎಸ್ಪಿ ಅಣ್ಣಾಮಲೈ ಅವರ ತಂಡ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆಯ ಎಸ್ಸಿಎಸ್ಟಿಗಳಿಗಾಗಿ ಮಾಡಲಾಗಿದ್ದ ಜೀವವಿಮಾ ನಿಧಿಯ ಪ್ರೀಮಿಯಂ ಕಟ್ಟಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೌನ್ಸಿಲರ್ ಗೆ ಅನುದಾನ ಸಾಲುತ್ತಿಲ್ಲ. ಸಂಗಮ ಸೇತುವೆಯ ಬಳಿಯ ಮರಳುಗಾರಿಕೆ, ಸಾರ್ವಜನಿಕರ ವಿರೋಧದ ನಡುವೆ ಸರಕಾರಿ ಆಸ್ಪತ್ರೆ ಎದುರಿನ ಸರಕಾರಿ ಕಟ್ಟದ ನಿಲ್ಲಲಿಲ್ಲ. ಒಳಚರಂಡಿ ವ್ಯವಸ್ಥೆಗೆ ಕೋಟಿ ಅನುದಾನ ಪಡೆಯಲು ಸಚಿವರನ್ನು ಕಾಣದೇ ವಿಧಿಯಿಲ್ಲ. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಕೊನೆಗೂ ನಡೆಯಲಿಲ್ಲ. ಬಿಜೆಪಿ ಸದಸ್ಯರ ಸಭಾತ್ಯಾಗವೂ ಸಾಧ್ಯವಾಗಲಿಲ್ಲ! [quote font_size=”15″ bgcolor=”#ffffff” bcolor=”#dd9933″ arrow=”yes” align=”right”] ಬಿಜೆಪಿ ಸಭಾ ತ್ಯಾಗ: ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪ್ರಸ್ತಾಪವಿಟ್ಟಾಗ ಸಾಮನ್ಯ ಸಭೆಯಲ್ಲಿ ಬಿಜೆಪಿ 6 ಜನ ಸದಸ್ಯರು ಹಾಜರಿದ್ದರೇ ಕಾಂಗ್ರೆಸ್ ನ 7 ಮಂದಿ ಹಾಜರಿದ್ದರು. ಕಾಂಗ್ರೆಸಿಗರು ಸ್ಥಾಯಿ ಸಮಿತಿ ಸದಸ್ಯರ ಬಹುಮತಕ್ಕಾಗಿ ಮಾಡಿದ ಪ್ರಯತ್ನ ಬಿಜೆಪಿ ಸಭಾ ತ್ಯಾಗದಿಂದ ಮಣ್ಣಾಯಿತು.ಈ ಹಿಂದೆ ಸ್ಥಾಯಿ ಸಮಿತಿಯಲ್ಲಿ ಬಿಜೆಪಿ 6 ಜನ ಮತ್ತು ಕಾಂಗ್ರೆಸಿನ 5 ಜನ ಸೇರಿ ಒಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬೆಂಗಳೂರಿನ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಸಂಯೋಜನೆಯಲ್ಲಿ ‘ಇಂದ್ರನಾಗ’ ಎನ್ನುವ ವಿನೂತನ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಗಾನದೊಳಗೆ ಸಾಮಾಜಿಕ ಪ್ರಸಂಗಗಳು ಬಂದು ಮೂಲ ಸೊಗಡಿಗೆ ಧಕ್ಕೆ ತರುತ್ತಿದೆ ಎನ್ನುವ ವಾದ ಬಲವಾಗುತ್ತಿರುವ ಈ ಹೊತ್ತಿನಲ್ಲಿ ಹೊಸ ಪ್ರಸಂಗದ ಮೂಲಕವೇ ಪಾರಂಪರಿಕ ಸೊಗಸುಗಾರಿಕೆಯನ್ನು ಅದರೆಲ್ಲಾ ವೈಭವದೊಂದಿಗೆ ಕಟ್ಟಿಕೊಡುವ ವಿನೂತನ ಪ್ರಯತ್ನದ ಇಂದ್ರನಾಗ ಪ್ರಸಂಗದ ಮೂಲಕ ಡಿಸೆಂಬರ್ 9ರ ಶನಿವಾರ ರಾತ್ರಿ 9:30ಕ್ಕೆ ಆರಂಭಗೊಳ್ಳಲಿದೆ. ವೈ. ಕರುಣಾಕರ ಶೆಟ್ಟಿ ಸಾರಥ್ಯದ ವೃತ್ತಿಪರ ಯಕ್ಷಗಾನ ತಂಡ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನ ಜರುಗಲಿದ್ದು ಬೆಂಗಳೂರಿನ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಯಕ್ಷಗಾನ ಸಂಘಟಕ ಮಣೂರು ವಾಸುದೇವ ಮಯ್ಯ ಸಾರಥ್ಯದಲ್ಲಿ ಪ್ರತಿಷ್ಠಾನದ ಸದಸ್ಯರುಗಳೇ ಇಂದ್ರನಾಗ ಪ್ರಸಂಗದ ಕಥೆ ರಚಿಸಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲೆಯಲ್ಲಿರುವ ದೇವಾಲಯವೊಂದರ ಸ್ಥಳೀಯ ಪುರಾಣವನ್ನು ಈ…
