Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ weight lifting ಚಾಂಪಿಯನ್‌ಶಿಪ್‌ನಲ್ಲಿ ತೆಕ್ಕೆಟ್ಟೆಯ ವಿಶ್ವ ವಿನಾಯಕ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶಮಂತ್ ಅವರು 71 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ. ಈ ಸಾಧನೆ ಕಾಲೇಜಿಗೆ ಕೀರ್ತಿ ತಂದಿದ್ದು, ವಿದ್ಯಾರ್ಥಿಯ ಈ ಕ್ರೀಡಾ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜ ನೇತೃತ್ವದಲ್ಲಿ ಅಕ್ಟೋಬರ್‌ 17ರಿಂದ 20ರ ತನಕ 40ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭವು ಅದ್ದೂರಿಯಾಗಿ ಜರುಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಇತ್ತೀಚಿಗೆ ಜರುಗಿತು. ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಗುರುದತ್ತ ಹೆಬ್ಬಾಗಿಲುಮನೆ ತಗ್ಗರ್ಸೆ ಮತ್ತು ಶ್ರೀ ರಾಮ ವಿವಿಧೊದ್ದೇಶ ಟ್ರಸ್ಟ್‌ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ವೇಳೆ ಸಮಾಜದ ಪ್ರಮುಖರಾದ ಸುಬ್ರಾಯ ಸೋಡಿತಾರ್, ಜಯಾನಂದ ಹೋಬಳಿದಾರ್, ಸದಾಶಿವ ಡಿ. ಪಡುವರಿ, ಕೃಷ್ಣಯ್ಯ ಮದ್ದೋಡಿ ವೆಂಕಟರಮಣ ಬಿಜೂರು, ಶಿವಾನಂದ ಮುದ್ದೋಡಿ, ದಿನಕರ ಹೋಬಳಿದಾರ್,‌ ಆನಂದ ಮುದ್ದೋಡಿ, ಸೀತಾರಾಮ ಎಸ್., ವಾಸುದೇವ ಕೆ. ಹಾಗೂ ಯುವಕ ಸಮಾಜದ, ಗೌರವಾಧ್ಯಕ್ಷ ರಾಜಶೇಖರ್ ರೊಕ್ಕನ್‌, ಅಧ್ಯಕ್ಷ ರಾಜೇಶ್‌ ಕಲ್ಲುಕಂಟ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ದಡ್ಡು, ಕಾರ್ಯದರ್ಶಿ ಶಿವಾನಂದ ದುಬಾರಿ, ಮಾತೃ ಮಂಡಳಿ ಅಧ್ಯಕ್ಷರಾದ ಸೀತಾ ಭಾಸ್ಕರ,, ವಸಂತಿ ಮದ್ದೋಡಿ ಇನ್ನಿತರರು ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಕಾಲೇಜಿನ ಎ.ವಿ ಹಾಲ್‌ನಲ್ಲಿ ನಡೆಯಿತು. ವ್ಯವವಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ, ಹವ್ಯಾಸಿ ಯಕ್ಷಗಾನ ಕಲಾವಿದ ರವಿನಂದನ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಸಾಂಪ್ರದಾಯಿಕ ಯಕ್ಷಗಾನ, ಹೆಜ್ಜೆಗಳು, ಯಕ್ಷಗಾನದ ಪೂರ್ವರಂಗ, ತಾಳ ಹಾಗೂ ವಿವಿಧ ಮಟ್ಟುಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ಅವರು ಕಾಲೇಜಿನ ಯಕ್ಷಗಾನ ಸಂಘದ ಆಶ್ರಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಹಮ್ಮಿಕೊಳ್ಳಲಾಗುವ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಹಾಗೂ ಯಕ್ಷಗಾನ ಸಂಘದ ಸಂಯೋಜಕ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ವಿದ್ಯಾರ್ಥಿಗಳಾದ ಶಿಲ್ಪ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಮೇಘನಾ ಸ್ವಾಗತಿಸಿ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವರು ನಡೆಸಿದ 21ನೇ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ 2026ರ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ  ಆತೀಶ್ ಎಸ್. ಪೂಜಾರಿ (5ನೇ ತರಗತಿ) ಪ್ರಥಮ ಸ್ಥಾನ,  ಅಮಯ್ ಪಿ. ಶ್ರೀಯಾನ್ (6ನೇ ತರಗತಿ) ತೃತೀಯ ಸ್ಥಾನ ಹಾಗೂ ಚಾರ್ವಿಕಾ ಜಿ. ಖಾರ್ವಿ (6ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ಅಂತರರಾಷ್ಟ್ರೀಯ ಓಝೋನ್ ದಿನಾಚರಣೆ” ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಆಗಮಿಸಿ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್. ವಹಿಸಿದ್ದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್  ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ಧತಿಯ ಸಂರಕ್ಷಣೆ, ಔಷಧ ಸಂಶೋಧನೆ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿರುವ ತಾಲೂಕಿನ ಜನಪ್ರಿಯ ಆಯುರ್ವೇದ ವೈದ್ಯ, ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರು ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ನೀಡುವ ಪ್ರತಿಷ್ಠಿತ ಆಯುರ್ಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅವರು ಕುಂದಾಪುರದ ಆಲೂರಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಕಳಿಯಲ್ಲಿ ಆಯುರ್ವೇದ ಚಿಕಿತ್ಸಾಲಯ ಆರಂಭಿಸುತ್ತೇನೆ ಎಂದಾಗ ಆರಂಭದಲ್ಲಿ ಹಲವರು ಅಪಹಾಸ್ಯ ಮಾಡಿದ್ದರು. ಆದರೆ ಹಿರಿಯರು, ಪರಂಪರೆ ಮತ್ತು ಪ್ರಕೃತಿಗೆ ಗೌರವ ನೀಡುವ ಮನೋಭಾವದ ಡಾ. ರಾಜೇಶ್ ಬಾಯರಿಯವರ ಇಚ್ಛಾಶಕ್ತಿ ಅಚಲವಾಗಿತ್ತು. 2008ರ ಜೂನ್ 5ರಂದು ಗಿಡ ನೆಟ್ಟು ಸಂಕಲ್ಪ ಮಾಡಿ, ತಂದೆ ಮಹಾಬಲ ಬಾಯರಿ ಹಾಗೂ ತಾಯಿ ಕಲಾವತಿ ಅವರ ಆಶೀರ್ವಾದದೊಂದಿಗೆ 2010ರಲ್ಲಿ ತಮ್ಮ ಜಮೀನಿನಲ್ಲೇ ಕೆಲವೇ ಸಾವಿರ ರೂಪಾಯಿ ಬಂಡವಾಳದಲ್ಲಿ ಒಂದು ಕೋಣೆಯ ಚಿಕಿತ್ಸಾಲಯಕ್ಕೆ ನಾಂದಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಮರವಂತೆ ವತಿಯಿಂದ ವಿಶ್ವಕರ್ಮ ಮಹೋತ್ಸವದ ಅಂಗವಾಗಿ “ವಿಶ್ವಕರ್ಮ” ಕುರಿತಾಗಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಕೋಮಲ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಮರವಂತೆ ಗೌರವ ಸಲಹೆಗಾರ ಹಾಗೂ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮಾಗಣಿ ಮೊಕ್ತೇಸರ ಕೃಷ್ಣಯ್ಯ ಆಚಾರ್ಯ ಮರವಂತೆ ಮಾತನಾಡಿ, ಪ್ರಬಂಧ ಸ್ಪರ್ಧೆ ಎಂದರೆ ಕೇವಲ ಬಹುಮಾನ ಗೆಲ್ಲುವ ಸ್ಪರ್ಧೆಯಲ್ಲ. ಅದು ನಮ್ಮ ಚಿಂತನೆ, ಜ್ಞಾನ, ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವ ಒಂದು ಉತ್ತಮ ವೇದಿಕೆ. ವಿಶ್ವಕರ್ಮ ಸಮುದಾಯದ ಇತಿಹಾಸ, ಪರಂಪರೆ, ಕಲೆ, ಕೌಶಲ್ಯ ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ವಿಚಾರಗಳನ್ನು ಬರಹದ ಮೂಲಕ ವ್ಯಕ್ತಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮೂರನೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗೋಕರ್ಣ: ಪೂರ್ಣಾರೋಗ್ಯ ಹಾಗೂ ಆತ್ಮಜ್ಞಾನ ಎರಡೂ ಬೇರೆಬೇರೆಯಲ್ಲ. ಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ ಬೇರೆ ಹಾಗೂ ಆತ್ಮಜ್ಞಾನಕ್ಕೆ ಬೇರೆ ಎಂದು ಬೇರೆಬೇರೆಯಾಗಿ ಹೇಳಿಲ್ಲ. ಯಾವುದು ಆರೋಗ್ಯಕ್ಕೆ ಹಿತವೋ ಅದು ಆತ್ಮಜ್ಞಾನಕ್ಕೆ ಪೂರಕವೂ ಹೌದು. ತುಪ್ಪ ಆರೋಗ್ಯ ಕಾರಕವೂ ಹೌದು ಆತ್ಮಜ್ಞಾನಕ್ಕೆ ಪೂರಕವೂ ಹೌದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹಠಯೋಗಪ್ರದೀಪಿಕೆಯಲ್ಲಿ ಆತ್ಮಸಾಧನೆಯನ್ನು ಆರಂಭಿಸುವಾಗ ಹಾಲು ಮತ್ತು ತುಪ್ಪವನ್ನು ಸೇವಿಸಲು ಸೂಚಿಸಿದ್ದು, ಇದು ಯೋಗಸಾಧನೆಯ ಅಭ್ಯಾಸದ ಸಮಯದಲ್ಲಿ ಬೇಕಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಸತ್ವ, ರಜಸ್ಸು ಹಾಗೂ ತಮೋಗುಣಗಳು ಪೂರ್ತಿಯಾಗಿ ಒಂದಾದಾಗ ಮಾತ್ರ ಸಮಾಧಿ ಸ್ಥಿತಿಯನ್ನು ಹೊಂದಲು ಸಾಧ್ಯ. ತ್ರಿಗುಣಗಳು ಸಮಗೊಳ್ಳುವುದೇ ಆರೋಗ್ಯವಾಗಿದ್ದು, ಅದೇ ಆತ್ಮಜ್ಞಾನವೂ ಆಗಿದೆ. ತುಪ್ಪದ ಸೇವನೆಯಿಂದ ಸತ್ವ ವೃದ್ಧಿಯಾಗುತ್ತದೆ. ಸತ್ವಗುಣದ ವೃದ್ಧಿಯಿಂದ ಏಕಾಗ್ರತೆ, ಏಕಾಗ್ರತೆಯಿಂದ ಧ್ಯಾನ,ಧ್ಯಾನದಿಂದ ಮೋಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಂದಿನ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಯಿಂದ  ಬಳಲುತ್ತಿದ್ದೇವೆ. ಧಾವಂತದ ಬದುಕಿನಲ್ಲಿ ಆಹಾರ ಆರೋಗ್ಯದ ಕಡೆ ಗಮನ  ಕಡಿಮೆಯಾಗಿದೆ. ಆಯುರ್ವೇದದಲ್ಲಿ ತಿಳಿಸಿದ ದಿನಚರ್ಯೆ, ಋತುಚರ್ಯೆ, ಆಹಾರ ವಿಹಾರಗಳನ್ನ ಅನುಸರಿಸುವುದರಿಂದ ನಾವು ಆರೋಗ್ಯವಂತರಾಗಿರಬಹುದು ಅಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಕಾರ್ಯದರ್ಶಿ ಆನಂದ ಬಿಲ್ಲವ ನುಡಿದರು. ಅವರು ಆಯುಷ್ ಇಲಾಖೆ ಉಡುಪಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು ಇವರು ಆಯೋಜಿಸಿರುವ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಉಪನ್ಯಾಸ ಹಾಗೂ ಚಿಕಿತ್ಸಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಆಯೋಜಕರು ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು ಇದರ ವೈದ್ಯಾಧಿಕಾರಿಗಳಾದ ಡಾಕ್ಟರ್ ವೀಣಾ ಕಾರಂತರವರು 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಘೋಷ ವಾಕ್ಯ “ಆರೋಗ್ಯಕರ ನಾಳೆಗಾಗಿ ಆಯುರ್ವೇದ” ಬಗ್ಗೆ ತಿಳಿಸುತ್ತಾ ನಾವು ನಾಳೆ ಆರೋಗ್ಯವಂತರಾಗಿರಬೇಕು ಅಂತಂದ್ರೆ ಆಯುರ್ವೇದದ ಮೂಲ ಸಿದ್ಧಾಂತಗಳನ್ನ ನಮ್ಮ ಜೀವನದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ “ಪಿ.ಸಿ.ಓ.ಡಿ ಸಮಸ್ಯೆ -ಪರಿಹಾರ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ವೈದ್ಯರಾದ ಡಾ. ಮಯೂರ ಎಮ್.ಡಿ. ಮಾತನಾಡಿ, ಪಿಸಿಓಡಿ ಸಮಸ್ಯೆಯು ಪ್ರತಿ ಐದು ಜನ ಮಹಿಳೆಯರಲ್ಲಿ ಒಬ್ಬರಿಗೆ ಇರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಈಗ  12ಮೇ 2026ರಿಂದ ಇದನ್ನು ಪಿ.ಎಮ್.ಓ.ಎಸ್. ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಉಂಟಾಗಲು ಕಾರಣ ಮುಖ್ಯವಾಗಿ ಅತಿಯಾದ ಬೇಕರಿ ಪದಾರ್ಥಗಳು ಸೇವನೆ. ಅಹಿತಕರ ಜೀವನಶೈಲಿ, ಅತಿಯಾದ ಒತ್ತಡ, ದಡೂತಿತನ ಮೈದಾ ಹಿಟ್ಟಿನ ಆಹಾರ ಪದಾರ್ಥ ಸಕ್ಕರೆ, ಫಾರ್ಮ್ ಗಳಲ್ಲಿ ಸಾಕಿದ ಕೋಳಿ ಮೀನು ಮಾಂಸಗಳನ್ನು ಅತಿಯಾಗಿ ತಿನ್ನುವುದು ಹೀಗೆ ಹಲವು ಕಾರಣಗಳಿವೆ. ಪರಿಣಾಮವಾಗಿ ಹಾರ್ಮೋನ್ ಏರಿಳಿತ, ದಡೂತಿತನ, ಸುಸ್ತು, ಚರ್ಮದಲ್ಲಿ ಸಮಸ್ಯೆ ಕೂದಲು ಉದುರುವಿಕೆ, ಬಂಜೆತನ, ಋತುಚಕ್ರದಲ್ಲಿ ಏರಿಳಿತ ಹೀಗೆ ಹಲವು ಸಮಸ್ಯೆಗಳು…

Read More