ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರವಾನಿಗೆ ದೊರೆತರೂ ಬಸ್ ಓಡಲಿಲ್ಲ, ವಾರಾಹಿ ಗೊಂದಲವೂ ಬಗೆಹರಿಯಲಿಲ್ಲ. ಅಧಿಕಾರಿಗಳನ್ನೂ ಸಾಮಾನ್ಯ ಸಭೆಗೆ ಕರೆಸಲಾಗಿಲ್ಲ. ಗೂಡಂಗಡಿಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಧ್ಯ ಮಾರಾಟ ನಿಲ್ಲಲಿಲ್ಲ. ಹೊಸ್ಕೋಟೆ ಶಾಲೆ ಹೆಸರಿಗೆ ಜಾಗ ಸಿಕ್ಕರೂ ಇನ್ನೂ ಅಳತೆ ಮಾಡಿಲ್ಲ. ಕಸ್ತೂರಿ ರಂಗನ್ ವರದಿಯಿಂದ ಬೇಸತ್ತ ಸದಸ್ಯರು ನೀಡಿದ ರಾಜಿನಾಮೆಯೂ ಅಂಗೀಕಾರವಾಗಿಲ್ಲ! ಕುಂದಾಪುರ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊನೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ವಿಷಯ ಪ್ರಸ್ತಾಪಿಸುತ್ತಾ ತಮ್ಮ ವಿಷಾದ ವ್ಯಕ್ತಪಡಿಸಿದ ಪರಿಯಿದು. ತಾಲೂಕು ಪಂಚಾಯತ್ ನಲ್ಲಿ ಐದು ವರ್ಷದ 32 ಸಾಮಾನ್ಯ ಸಭೆಗಳಲ್ಲಿ ಬಹುಪಾಲು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ದೊರೆತಿದೆಯೇ ಹೊರತು ಈವರೆಗೆ ಪರಿಹಾರ ಕಂಡಿಲ್ಲ. ಪ್ರಶ್ನೋತ್ತರ ಕಲಾಪದಿಂದ ಸಾಧಿಸಿದ್ದೇನು ಇಲ್ಲ ಎಂದು ಕೆಲವರು ಅವಲತ್ತುಕೊಳ್ಳುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಸಾರಿಗೆ ವಾಹನ ಸಂಚಾರಕ್ಕೆ ಪರವಾನಿಗೆ ಸಿಕ್ಕಿದ್ದು, ಟೈಮಿಂಗ್ ಸಿಗದೆ ಬಸ್ ಸಂಚಾರ ಇಲ್ಲ. ಕೊನೆ ಸಾಮಾನ್ಯ ಸಭೆಯಲ್ಲಿ ಬಸ್ ಸಂಚಾರಕ್ಕೆ ಒತ್ತು ಕೊಡುವಂತೆ ನಿರ್ಣಯ ಮಾಡಿ…
Author: ನ್ಯೂಸ್ ಬ್ಯೂರೋ
ಕುಂದಾಪುರ: ನಾಡ-ಸೇನಾಪುರ ರಸ್ತೆ ಮರುಡಾಂಬರೀಕರಣ ಕಾಮಗಾರಿಯು ಕಳಪೆಯಾಗಿದ್ದು, ಶಾಸಕರ ನಿಧಿ ಹಣ ದುರುಪಯೋಗಪಡಿಸಲಾಗಿದೆ ಎಂದು ಸಿಪಿಎಂ ಬೈಂದೂರು ವಲಯ ಸಮಿತಿ ಆರೋಪಿಸಿದೆ. ಕಳೆದ ಹಲವಾರು ಸಮಯದಿಂದ ನಾಡ-ಸೇನಾಪುರ ರಸ್ತೆ ದುರಸ್ತಿಯಲ್ಲಿದ್ದು ಗ್ರಾಮದ ಜನರು ಪ್ರಯಾಣ ಮಾಡಲು ಚಿತ್ರಹಿಂಸೆ ಅನುಭವಿಸುತ್ತಿದ್ದರು. ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ ಸಿಪಿಎಂ ಹೋರಾಟ ನಡೆಸಿ ಮನವಿ ನೀಡಿದ ನಂತರ ಶಾಸಕರ ನಿಧಿಯಿಂದ ಮರುಡಾಂಬರೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಗೆ 20 ಎಂಎಂ, 10 ಎಂಎಂ. ಹಾಗೂ 06 ಎಂಎಂ ಜೆಲ್ಲಿ ಮಿಶ್ರಣ ಮಾಡಿ ಮಾಡಬೇಕಾದ ರಸ್ತೆ ಕಾಮಗಾರಿಯನ್ನು ಕೇವಲ 10 ಎಂಎಂ ಮತ್ತು 06 ಎಂಎಂ ಮಾತ್ರ ಮಿಶ್ರಣ ಮಾಡಿ ಕಳಪೆ ಕಾಮಗಾರಿ ಮಾಡಿ ಜನರ ಹಣ ಲೂಟಿ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆಯು ನಿಧಿ ದುರ್ಬಳಕೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸಿಪಿಎಂ ಒತ್ತಾಯಿಸಿದೆ. ಇಲ್ಲವಾದಲ್ಲಿ ಸಿಪಿಎಂ ಪಕ್ಷ ಹೋರಾಟ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದೆ.
ಕುಂದಾಪುರ: ಸಮುದಾಯ ರೆಪರ್ಟರಿಯ ಮೃತ್ಯುಂಜಯ ನಾಟಕವನ್ನು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನದ ಆರಂಭದಲ್ಲಿ ಬಸ್ರೂರಿನ ಶಾರದಾ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ಸಮುದಾಯದ ಜೀವನ ಪ್ರೀತಿಯ ನಡೆಗಳನ್ನು ಶ್ಲಾಘಿಸಿ, ಪ್ರದರ್ಶನಕ್ಕೆ ಶುಭ ಹಾರೈಸಿದರು. ರೆಪರ್ಟರಿಯ ವ್ಯವಸ್ಥಾಪಕ ದೇವೇಂದ್ರ ಗೌಡ ರೆಪರ್ಟರಿಯ ಮುಂದಿನ ದಿನಗಳ ಪ್ರವಾಸದ ಪರಿಚಯ ಮಾಡಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವಕಾರ ಮಾತನಾಡಿ ಕಲೆ ಕೇವಲ ಮನರಂಜನೆಗಾಗಿ ಎಂಬ ಲೋಲುಪತೆಯಿಂದ ಹೊರಬಂದು ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಸುತ್ತಾ, ಸ್ಪಂದಿಸುತ್ತಾ ರಂಗಭೂಮಿಯನ್ನು ಸಮಕಾಲೀನಗೊಳಿಸುವ ಜವಾಬ್ಧಾರಿ ಸಮುದಾಯ ರೆಪರ್ಟರಿಯ ಮೇಲಿದೆ ಎಂದರು. ಮೃತ್ಯುಂಜಯ ನಾಟಕವನ್ನು ನಿರಂಜನರ ಮೃತ್ಯುಂಜಯ ಮತ್ತು ಚಿರಸ್ಮರಣೆ ನಾಟಕಗಳನ್ನು ಸಂಕರಗೊಳಿಸಿ ಡಾ. ಎಮ್. ಜಿ. ಹೆಗಡೆ ರಚಿಸಿದ ರಂಗಪಠ್ಯವನ್ನು ಡಾ. ಶ್ರೀಪಾದ ಭಟ್ ರೆಪರ್ಟರಿಗಾಗಿ ನಿರ್ದೇಶಿಸಿರುವರು. ಒಂದು ಚಾರಿತ್ರಿಕ ಸಂದರ್ಭದಲ್ಲಿ, ಕನ್ನಡ ರಂಗಭೂಮಿಗೆ ಹೊಸದಿಕ್ಕನ್ನೂ ಕನ್ನಡದ ಅಭಿವ್ಯಕ್ತಿಗೆ ಹೊಸ ಚಿಂತನ ಕ್ರಮಗಳನ್ನೂ ಒದಗಿಸಿದ ಸಮುದಾಯ ಸಂಘಟನೆಯು ಮತ್ತೊಂದು ಮಹತ್ವದ ಪ್ರಯತ್ನದಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿಯನ್ನು ಆರಂಭಿಸಿದೆ.
ಬೈಂದೂರು: ಬೈಂದೂರು ವಲಯ ಮಟ್ಟದ ಓದು-ಬರಹ ಅಭಿವ್ಯಕ್ತಿ ಸಾಮರ್ಥ್ಯ ಸ್ಪರ್ಧಾ ಕಾರ್ಯಕ್ರಮ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉಪ್ಪುಂದದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಇದೊಂದು ಮುಖ್ಯ ವೇದಿಕೆಯಾಗಿದೆ, ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸಲು, ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಹಾಗೂ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಲು ಇಂತಹ ಕಾರ್ಯಕ್ರಮ ನೆರವಾಗುವುದು ಎಂದು ಅಭಿಪ್ರಾಯಪಟ್ಟರು. ಶ್ರೀ ವೆಂಕಟರಮಣ ಎಜ್ಯುಕೇಶನ್ ಟ್ರಸ್ಟ್ ಉಪ್ಪುಂದ ಇದರ ಸ್ಥಾಪಕ ಅಧ್ಯಕ್ಷ ಗಣೇಶ್ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ವಲಯ ಶಿಕ್ಷಕ ಸಂಘದ ವಿವಿಧ ಪದಾಧಿಕಾರಿಗಳು, ಸಂಸ್ಥೆಯ ಕಾರ್ಯದರ್ಶಿ ರಾಜಾರಾಮ್ ಭಟ್, ಮಖ್ಯೋಪಾಧ್ಯಾಯ ರವಿದಾಸ್ ಶೆಟ್ಟಿ, ಬಿ.ಆರ್.ಪಿ ಸುಮಲತಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಜೊತೆಗೆ ಶಿಶು ಆಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದೊಂದಿಗೆ ವಿಜ್ಞಾನ…
ಕುಂದಾಪುರ: ರಾಜ್ಯ ಸರಕಾರವು ಭಾಗ್ಯಗಳ ನಡುವೆ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಜನರಿಗೆ ಅವಶ್ಯವಿರುವುದನ್ನು ಮಾಡುವುದನ್ನು ಬಿಟ್ಟು ತಾವು ಅಂದುಕೊಂಡಿದ್ದನ್ನೇ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಒಂದು ಬಜೆಟ್ ಮಂಡಿಸಿ ಮತ್ತೊಂದು ಬಜೆಟ್ ಮಂಡನೆಗೆ ಕಾಲ ಸನ್ನಿತವಾಗುತ್ತಿದ್ದರು ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲೇ ಶೇ.25 ರಷ್ಟು ಅನುದಾನ ಬಳಕೆಯಾಗಿಲ್ಲ. ಬಜೆಟ್‌ನಲ್ಲಿ ಸಂಗ್ರಹವಾದ ಹಣ, ಖರ್ಚು, ಹಾಗೂ ಕೊರೆತೆ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ ಎಂದು ಉಡುಪಿ-ಚಿಕ್ಕಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆರೋಪಿಸಿದರು ಕೋಟೇಶ್ವರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಗ್ರಾಮೀಣ ಅಭಿವೃದ್ಧಿ ದೃಷ್ಟಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ನೇರ ಅನುದಾನ ಬಿಡುಗಡೆ ಮಾಡಿದರೆ, ರಾಜ್ಯ ಸರಕಾರಕ್ಕೆ ಕೇಂದ್ರ ಬಿಡುಗಡೆ ಮಾಡಿದ ಅನುದಾನದಲ್ಲಿ ಗ್ರಾಪಂ ಬಾಕಿ ವಿದ್ಯುತ್ ಬಿಲ್ಲಿಗೆ ಬಳಸಿಕೊಳ್ಳುವಷ್ಟು ದಾರಿದ್ರ್ಯ ಬಂದೊದಗಿದೆ. ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಅನುದಾನವನ್ನು ಇಲಾಖೆ ಅಧಿಕಾರಿಗಳು ಬ್ಯಾಂಕಿನಲ್ಲಿಟ್ಟು ಬಡ್ಡಿ ಪಡೆಯುತ್ತಿದ್ದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಅವರರೇ ಪ್ರಸ್ತಾಪಿಸಿದ್ದರು. ರಾಜ್ಯದಲ್ಲಿ ಕೆಲಸ ಮಾಡದಿದ್ದರು, ಸರ್ಟಿಫಿಕೇಟ್ ನೀಡಿ, ಅನುದಾನದ ದುರುಪಯೋಗ…
ಕುಂದಾಪುರ: ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಹಿಂಜರಿಯಬಾರದು. ಶಿಕ್ಷಣದಿಂದ ಸುಶಿಕ್ಷಿತರಾಗಿ, ಸಕ್ರಿಯ ಚಟುವಟಿಕೆಗಳಲ್ಲಿ ಸಂಘಟಿತರಾಗಿ ಸಮುದಾಯದ ಮುನ್ನಡೆಗೆ ಜನಪರ ಕೊಡುಗೆಗಳನ್ನು ನೀಡಲು ದಲಿತರು ಮುಂದೆ ಬರಬೇಕು. ಸಮುದಾಯದ ಸಹಾಯದಿಂದ ಉನ್ನತ ಸ್ಥಾನಮಾನ ಪಡೆದವರು ತಮ್ಮ ಸಮಾಜದ ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸುವ ಚಿಂತನೆ ನಡೆಸಬೇಕು. ವಧು-ವರರ ವೇದಿಕೆ ದಲಿತ ಸಮುದಾಯದ ವೈವಾಹಿಕ ಬಾಂಧವ್ಯಗಳಿಗೆ ಸೇತುವಾಗಿ ಸಮಾಜಮುಖಿ ಕಾರ್ಯ ಕೈಗೊಳ್ಳುವಂತಾದರೆ ಸಾರ್ಥಕತೆ ಸಾಧ್ಯ ಎಂದು ಕುಂದಾಪುರ ಪುರಸಭಾಧ್ಯಕ್ಷೆ ಕಲಾವತಿ ಯು. ಎಸ್. ಅವರು ಹೇಳಿದರು. ಮೇಲ್‌ಗಂಗೊಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಯುವಕ ಮಂಡಲ ಪೋಷಿತ ಪರಿಶಿಷ್ಟ ಜಾತಿ ವಧು-ವರರ ವೇದಿಕೆ ಆಶ್ರಯದಲ್ಲಿ ಕುಂದಾಪುರದ ಅಂಬೇಡ್ಕರ್ ಸಭಾಭವನದಲ್ಲಿ ರವಿವಾರ ಜರಗಿದ ಪರಿಶಿಷ್ಟ ಜಾತಿ ವಧು-ವರರ ಮುಖಾಮುಖಿ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಅನಂತ ಮೊವಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿ ಕಾರ್ಯದಲ್ಲಿ ದಲಿತ ಸಮುದಾಯ ಕೈಜೋಡಿಸಬೇಕು. ದಲಿತರ ವೈವಾಹಿಕ ಬಾಂಧವ್ಯಗಳಿಗೆ ಕೊಂಡಿಯಾಗಿ ವೇದಿಕೆ ಉತ್ತಮ ಕಾರ್ಯ ನಿರ್ವಹಿಸಲಿ ಎಂದು…
ಗಂಗೊಳ್ಳಿ : ಗಂಗೊಳ್ಳಿಯ ಚಾಲೆಂಜ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ನಡೆದ 30 ಗಜಗಳ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ 8 ಸ್ಟಾರ್ ಉಪ್ಪುಂದ ತಂಡವು ಪ್ರಥಮ ಸ್ಥಾನ ಗಳಿಸಿ ನಗದು ಮತ್ತು ಚಾಲೆಂಜ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕೆಸಿಸಿ ದೊಂಬೆ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಆದಿತ್ಯವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ವಹಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಸಮಾಜ ಸೇವಕ ಲಕ್ಷ್ಮಣ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸತೀಶ ಕಾನೋಜಿ, ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಹಿರಿಯ ಸದಸ್ಯ ವಿಜಯ ಖಾರ್ವಿ, ಸಂಘದ ಅಧ್ಯಕ್ಷ ಚಂದ್ರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಸಲಹೆಗಾರ ನಾಗರಾಜ ಖಾರ್ವಿ ಸ್ವಾಗತಿಸಿದರು. ವಿನಯ ಖಾರ್ವಿ ಸನ್ಮಾನಿತರನ್ನು ಪರಿಚಯಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು.…
ಬೈಂದೂರು: ಪ್ರತಿಯೊಬ್ಬರೂ ತಮ್ಮ ದುಡಿಮೆಯ ಒಂದು ಭಾಗವನ್ನು ಸತ್ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು. ಸಮಾಜದಲ್ಲಿ ಮಾಡಿದ ಉತ್ತಮ ಕಾರ್ಯಗಳ ಹೆಜ್ಜೆಯ ಗುರುತುಗಳು ಮಾತ್ರ ಕೊನೆಯಲ್ಲಿ ಉಳಿಯುವುದೆ ಹೊರತು ಗಳಿಸಿದ ಸಂಪತ್ತಲ್ಲ. ಅಸಹಾಯಕರಿಗೆ ಸಹಾಯ ಮಾಡುವುದು ಮಾನವೀಯ ಧರ್ಮ ಎಂದು ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಡಾಕೆರೆ ಮಂಜುನಾಥ ಆಚಾರ್ಯ ಹೇಳಿದರು. ಬೈಂದೂರು ರೋಟರಿ ಭವನದಲ್ಲಿ ನಡೆದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಈ ಶರೀರವನ್ನು ಪರೋಪಕ್ಕಾರಕ್ಕಾಗಿ ಹಾಗೂ ಸಮಾಜದ ಸೇವೆಗಾಗಿ ಭಗವಂತ ಸೃಷ್ಠಿಸಿದ್ದಾನೆ. ನಮ್ಮ ಪರಂಪರೆಯಿಂದ ಬಂದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆ ನೆಲೆಯಲ್ಲಿ ನಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬದುಕಿನ ಸಾರ್ಥಕತೆ ಕಾಣುವಂತಾಗಬೇಕು ಎಂದರು. ಬೈಂದೂರು ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಶುಭಹಾರೈಸಿದರು. ಮುಂಬೈ ಉದ್ಯಮಿ ಕೂರ್ಸಿ ಸುರೇಶ ಆಚಾರ್ಯ ಸಮಾಜದ ವಿಕಲಚೇತನರಿಗೆ…
ಕುಂದಾಪುರ: ಇತ್ತೀಚಿಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಜಡ್ಕಲ್-ಮುದೂರಿನ ರೈತ ಗಂಗಾಧರ ಅವರಿಗೆ ಕೃಷಿ ಇಲಾಖೆಯಿಂದ ರೂ. 5ಲಕ್ಷ ಪರಿಹಾರ ಮಂಜೂರಾಗಿತ್ತು. ಈ ಮೊದಲು ಮೃತರ ಕುಟುಂಬಕ್ಕೆ ರೂ.3 ಲಕ್ಷ ಪರಿಹಾರ ನೀಡಲಾಗಿದ್ದು, ಬಾಕಿ ಉಳಿದ ರೂ. 2ಲಕ್ಷ ಪರಿಹಾರನಿಧಿ ಚೆಕ್‌ನ್ನು ಮೃತರ ಧರ್ಮಪತ್ನಿ ಮರಿಯಮ್ಮನವರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಹಸ್ತಾಂತರಿಸಿದರು. ನಂತರ ರೈತ ಕುಂಜ್ಞಿ ಕೆ.ಆರ್ ಅವರಿಗೆ ಇಲಾಖೆಯಿಂದ ಕೊಡಮಾಡಿದ ರೂ.೬೪,೫೦೦ ಸಬ್ಸಿಡಿ ಸಹಿತವಾದ ಪವರ್ ಟಿಲ್ಲರನ್ನು ಶಾಸಕರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕೃಷಿ ನಿರ್ದೇಶಕದಾದ ಮೋಹನ್‌ರಾಜ್, ಪರಶುರಾಮ್, ಕೃಷಿ ಅಧಿಕಾರಿ ಗಾಯತ್ರಿ ದೇವಿ, ಜಡ್ಕಲ್-ಮುದೂರು ಗ್ರಾಪಂ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಕುಂದಾಪುರ: ಸಮಾಜ ಸೇವಾ ಸಂಘಗಳನ್ನು ಕಟ್ಟುವುದರೊಂದಿಗೆ ಸಮಾಜದ ಎಲ್ಲರನ್ನೂ ಮುಖ್ಯವಾಹಿನಿಗೆ ತರುವುದರೊಂದಿಗೆ ಶೈಕ್ಷಣಿಕ, ಸಾಮಾಜಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಉದ್ದೇಶ ಸಂಘಟನೆ ಹಿಂದಿರಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಹೇಳಿದರು. ಕೋಡಿ ಬಿಲ್ಲವ ಸಮಾಜ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿ ಸಮುದಾಯದ ಮುಖಂಡರು ತೆಗೆದುಕೊಳ್ಳುವ ನಿರ್ಣಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಪಯೋಗವಾಗುವಂತಿರಬೇಕು. ಹಿರಿಯರ ಸ್ಥಾನವನ್ನು ತುಂಬಬಲ್ಲ ನಾಯಕತ್ವನ್ನು ಯುವಜನರು ಮೈಗೂಡಿಸಿಕೊಂಡರೇ ಮಾತ್ರ ಸಮಾಜದ ಏಳ್ಗೆ ಸಾಧ್ಯ ಎಂದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಮಾತನಾಡಿ ಜಾತಿ ಸಮಾಜಗಳು ಅದರ ರಚನೆಯ ಹಿಂದಿರುವ ಉದ್ದೇಶ, ನಮ್ಮ ಯೋಚನೆ ಯೋಜನೆ ಕಲ್ಪನೆಗಳನ್ನು ಸಕಾರಗೊಳಿಸುವ ಸಹಕಾರಿ ವ್ಯವಸ್ಥೆಯಾಗಬೇಕೆಂಬುದು ನಮ್ಮ ಇಂಗಿತ. ಬಿಲ್ಲವ ಸಮಾಜದವರಿಗೆ ಶಕ್ತಿ, ಸಾಮಾಥ್ಯ, ಯೋಗ್ಯತೆ ಎಲ್ಲವೂ ಇದೆ. ಆದರೆ ಸಂಘಟನೆಗಳಿಗೆ ಬಲ ಬಂದಿಲ್ಲ. ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕಾಗಿದೆ ಎಂದರು. ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಜಿ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ…
