Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ’ಶಿಖರ’, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2014-15ನೇ ಸಾಲಿನ ಅಂತರ್‌ಕಾಲೇಜು ವಾರ್ಷಿಕ ಸಂಚಿಕೆ ಸ್ವರ್ಧೆಯ ವರ್ಗ-1ರಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಗ್ರಾಮೀಣ ಸೊಗಡು, ವಿಶಿಷ್ಟ ಸಮುದಾಯಗಳ ಪರಿಚಯ, ಬಹುಭಾಷಾ ವೈವಿಧ್ಯ, ಕಥೆ, ಕವನ ಸೇರಿದಂತೆ ಹತ್ತಾರು ವಿಭಾಗಗಳನ್ನೊಳಗೊಂಡ ೫೦೦ ಪುಟಗಳ ಸಂಚಿಕೆ ಶಿಖರ ಅಂದದ ಮುಖಪುಟದೊಂದಿಗೆ ಮೂಡಿಬಂದಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ ವಾರ್ಷಿಕ ಸಂಚಿಕೆಯ ಗೌರವ ಸಂಪಾದಕರಾಗಿದ್ದರೇ, ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ ನಿರ್ವಾಹಕ ಸಂಪಾದಕರಾಗಿದ್ದಾರೆ. ಕಳೆದ ಸಾಲಿನಲ್ಲಿ ನಿರ್ಗಮಿಸಿ ಪ್ರಾಂಶುಪಾಲೆ ಸೀಮಾ ಶೆಟ್ಟಿ ಸಂಚಿಕೆಯ ಗೌರವ ಸಂಪಾಕದರಾಗಿದ್ದಾಗ ’ಶಿಖರ’ ದ್ವಿತೀಯ ಸ್ಥಾನ ಪಡೆದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾರ್ಷಿಕ ಸಂಚಿಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣೀಕರ್ತರಾದ ಸಂಪಾದಕೀಯ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಕುಂದಾಪುರ ಎಜುಕೇಶನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಊಳುವವನೇ ಹೊಲದೊಡೆಯ ಎಂಬುದನ್ನು ಪ್ರತಿಪಾದನೆ ಮಾಡಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಕೃಷಿ ಕಾಯಕದ ಮೂಲಕ ಈ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದರು. ಹಿಂದುಳಿದ ವರ್ಗದವರಲ್ಲೂ ಕೃಷಿಯಲ್ಲಿ ಆಸಕ್ತಿ ಮೂಡಿಸಿದ್ದ ಅವರು ಅಪರೂಪದ ನಾಯಕತ್ವ ಗುಣ ಬೆಳೆಸಿಕೊಂಡಿದ್ದರು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಕುಂದಾಪುರ ತಾಲೂಕ್ ಪಂಚಾಯತ್, ಕಂದಾಯ ಇಲಾಖೆ, ಕುಂದಾಪುರ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಂದಾಪುರ ತಾಪಂ ಸಭಾಂಗಣದಲ್ಲಿ ನಡೆದ ಬಾಬು ಜಗಜೀವನ್ ರಾಮ್ ಅವರ ೧೦೯ನೇ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಬು ಜಗಜೀವನ್ ರಾಮ್ ಅವರು ಸಾಗಬಂದ ದಾರಿಯಲ್ಲಿ ನಾವು ಸಾಗುವ ಮೂಲಕ ಅವರಿಗೆ ಗೌರವ ಸಲ್ಲಿಸುವುದಲ್ಲದೇ ಅವರ ಕನಸು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆ ವಹಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಸ್ರೂರು ಶ್ರೀ ಶಾರದಾ ಕಾಲೇಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ನಾಗೂರು ಎಂಬಲ್ಲಿ ಬೈಕೊಂದಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಯರುಕೋಣೆಯ ನಿವಾಸಿ ಕಾರ್ತಿಕ್ ಶೆಟ್ಟಿ (23) ಮೃತ ದುರ್ದೈವಿ. ಮಂಗಳವಾರ ಮುಂಜಾನೆ ಯಕ್ಷಗಾನವನ್ನು ನೋಡಿಕೊಂಡು ಉಪ್ಪುಂದ ಕಡೆಯಿಂದ ಯರುಕೋಣೆಯ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಗಾಯಾಳು ಬಹಳ ಹೊತ್ತಿನವರೆಗೂ ರಸ್ತೆಯಲ್ಲಿ ಬಿದ್ದು ಒದ್ದಾಡಿ ಅಲ್ಲಿಯೇ ಅಸುನೀಗಿದರೆನ್ನಾಗಿದೆ. ಟೆಂಪೋ ಟ್ರಾವೆಲರ್ ಚಾಲಕ ಅಪಘಾತವಾದ ಬಳಿಕ ವಾಹನ ಸಹಿತ ಅಲ್ಲಿಂದ ಪರಾರಿಯಾಗಿದ್ದ.ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧಾ-16, ವ್ಯವಹಾರ ಅಧ್ಯಯನ ಉತ್ಸವದಲ್ಲಿ ಮಂಗಳೂರು ಬೆಸೆಂಟ್ ಸಂಜೆ ಕಾಲೇಜಿನ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದರೇ, ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿದ್ದಾರೆ. ಸ್ಪರ್ಧಾ – 16 ರಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಐಸ್ ಬ್ರೇಕರ್ ಸ್ಫರ್ಧೆಯಲ್ಲಿ ಪ್ರಥಮ- ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು, ದ್ವಿತೀಯ -ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು , ಉಡುಪಿ ಪಡೆಯಿತು. ಮಾರ್ಕೇಂಟಿಗ್ ಸ್ಫರ್ಧೆಯಲ್ಲಿ ಪ್ರಥಮ- ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು, ದ್ವಿತೀಯ – ಕೆನರಾ ಕಾಲೇಜು, ಮಂಗಳೂರು ಪಡೆಯಿತು.ಫೈನಾನ್ಸ ಸ್ಫರ್ಧೆಯಲ್ಲಿ ಪ್ರಥಮ- ಕೆನರಾ ಕಾಲೇಜು, ಮಗಳೂರು, ದ್ವಿತೀಯ -ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು ಪಡೆಯಿತು. ಉತ್ತಮ ಸಿ.ಇ ಒ- ಪ್ರಥಮ ಪ್ರಣವ್ ಗಣೇಶ್, -ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು ಪಡೆಯಿತು. ಶೃಂಗೇರಿ ಜೆಸಿಬಿಎಂ ಕಾಲೇಜಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹತ್ತೊಂಬತ್ತನೆಯ ಶತಮಾನದ ಕೊನೆಯಭಾಗ ಮತ್ತು ಇಪ್ಪತ್ತನೆಯ ಶತಮಾನದ ಆರಂಭಿಕ ವರ್ಷಗಳಲ್ಲಿ ಕರಾವಳಿಯಲ್ಲಿ ಸಣ್ಣಪುಟ್ಟ ಉದ್ಯಮಗಳು ತಲೆ ಎತ್ತಿದರೂ ಹೆಚ್ಚುತ್ತಿರುವ ಜನಸಂಖ್ಯೆಗೆ ಅದು ತೀರಾ ತೀರಾ ಕಡಿಮೆಯೇ ಆಗಿತ್ತು. ಕೃಷಿಯನ್ನೇ ನೆಚ್ಚಿಕೊಂಡಿರುವ ಜನರ ಕಡುಬಡತನದ, ಕುಲಕಸುಬುಗಳ ಅವಸಾನ ಮತ್ತು ವಿಸ್ತ್ರತಗೊಳ್ಳುತ್ತಿರುವ ಆಸೆಗಳ ವಲಯ ಜನತೆ ನಗರಗಳತ್ತ ಮುಖ ಮಾಡುವಂತೆ ಮಾಡಿತು. ಮುಖ್ಯವಾಗಿ ಆವತ್ತಿನ ಕಾಲದಲ್ಲಿ ಕರಾವಳಿಯ ಬಹುತೇಕ ಜನ ಮುಂಬೈಗೆ ತೆರಳಿದರು. ಲಭ್ಯವಿದ್ದ ಹಡಗು ಹಾಗೂ ಬಸ್ಸಿನ ಸೌಕರ್ಯಗಳು ಇಂತಹ ವಲಸೆಯನ್ನು ಹೆಚ್ಚಿಸಿದೆ. ಹೀಗೆ ವಲಸೆ ಹೋದವರು ಹೋಟೇಲು, ಗಿರಣಿ, ಕಾರ್ಖಾನೆ ಮುಂತಾದೆಡೆ ದುಡಿಯುತ್ತಾ ರಾತ್ರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರೇಖಾ ಬನ್ನಾಡಿ ಹೇಳಿದರು. ಅವ್ರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ರಾತ್ರಿ ಶಾಲೆ ಕಲಿತು ಶಿಕ್ಷಣ ಗಳಿಸಿದ ವಲಸಿಗರು ಅತ್ಯಂತ ಪರಿಶ್ರಮದಿಂದ ತಮ್ಮ ಉದ್ಯೋಗ ಮತ್ತು ಉದ್ಯಮಗಳನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಅಭಿವೃದ್ಧಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ.ಹೆಚ್. ಶಾಂತಾರಾಮ್ ಅವರು ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿಗಳು. ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ಉಳ್ಳವರು. ಜೊತೆಗೆ ಕ್ರಿಯಾಶೀಲ ವ್ಯಕ್ತಿಗಳನ್ನು, ಸೃಜನಶೀಲ ಮನಸ್ಸುಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದವರು. ಉಡುಪಿ – ಮಣಿಪಾಲ – ಕುಂದಾಪುರ ಪರಿಸರವನ್ನು ಸಾಹಿತ್ಯಿಕ ಚಟುವಟಿಕೆ, ನಾಟಕ, ಯಕ್ಷಗಾನ ಪ್ರಯೋಗ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕವಾಗಿ ಗಟ್ಟಿಗೊಳ್ಳುವಂತೆ ಮಾಡುವಲ್ಲಿ ಅವರ ಕೊಡುಗೆ ಅನಾದೃಶ್ಯವಾದುದು. ಅವರ ಹೆಸರಿನಲ್ಲಿ ಭಂಡಾರ್ಕಾರ್ಸ್ ಕಾಲೇಜು ಪ್ರತಿವರ್ಷ ಅತ್ಯುತ್ತಮ ಕೃತಿಯೊಂದಕ್ಕೆ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ೨೦೧೪ ಮತ್ತು ೨೦೧೫ ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಯನ್ನು ಆಹ್ವಾನಿಸಲಾಗಿದೆ. ಕಾದಂಬರಿಯ ನಾಲ್ಕು ಪ್ರತಿಗಳನ್ನು ಎಪ್ರಿಲ್ ೩೦ರ ಒಳಗೆ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ೫೭೬೨೦೧, ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಪ್ರಶಸ್ತಿಯ ಮೊತ್ತ ಹದಿನೈದು ಸಾವಿರ ರೂಪಾಯಿಗಳು ಮತ್ತು ಬೆಳ್ಳಿಯ ಫಲಕ. ಆಗಸ್ಟ್ ಹದಿಮೂರರಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವಿಶ್ವ ವಿನಾಯಕ ಸಿಬಿಎಸ್ ಇ ಸ್ಕೂಲ್ ಆಶ್ರಯದಲ್ಲಿ ನಡೆದ ಆಹ್ವಾನಿತ ಶಾಲಾ ತಂಡಗಳ ಟಿ-೨೦ ಮಾದರಿಯ ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಸೈಲಾಸ್ ಆಂಗ್ಲ ಮಾಧಮ ಶಾಲೆ ವಿದ್ಯಾರ್ಥಿಗಳ ತಂಡ ಪ್ರಥಮ, ತೆಕ್ಕಟ್ಟೆ ವಿಶ್ವ ವಿನಾಯಕ ವಿದ್ಯಾರ್ಥಿ ತಂಡ ಉತ್ತಮ ದ್ವಿತೀಯ ಸ್ಥಾನ ಪಡೆಯಿತು. ಪಂದ್ಯ ಶ್ರೇಷ ಸೈಲಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಶ್ವಾನ್ , ತೆಕ್ಕಟ್ಟೆ ವಿಶ್ವ ವಿನಾಯಕ ವಿದ್ಯಾರ್ಥಿ ಶ್ರೇಷ್ಠ ಆಟಗಾರನಾಗಿ ಭವನೇಶ್ ಕೆ.ಪುತ್ರನ್ ಹಾಗೂ ಸೈಲಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಉತ್ತಮ ದಾಂಡಿಗನಾಗಿ ಶರಣ್ ಆಯ್ಕೆಯಾಗಿದ್ದಾರೆ ವಿಶ್ವ ವಿನಾಯಕ ಸ್ಕೂಲ್ ಮೆನೇಜಿಂಗ್ ಟ್ರಸ್ಟಿ ಎಮ್.ಪ್ರಭಾಕರ ಶೆಟ್ಟಿ , ಮತ್ಸೋದ್ಯಮಿ ಕೃಷ್ಣ ಪುತ್ರನ್ , ಸಂಸ್ಥೆಯ ಶೈಕ್ಷಣಿ ನಿರ್ದೇಶಕ ಡಾ.ಸುರೇಶ್ ಶೆಟ್ಟಿ ಎಕ್ಕಾರ್ , ಸಂಸ್ಥೆಯ ಪ್ರಾಂಶುಪಾಲೆ ನಾಗರತ್ನ.ಎನ್.ಪಾಲನ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ವಸಂತ್ ಕುಮಾರ್ ಹೊಸಂಗಡಿ , ರಾಝಿಕ್, ಅನೀಷ್ , ಪ್ರಕಾಶ್ ಹೊಸಂಗಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ಯುವಶಕ್ತಿಯ ಮುಂದಿರುವ ಸವಾಲುಗಳು ಜಾಗತಿಕವಾಗಿವೆ. ಬೆಳೆಯಬೇಕು ಎಂಬ ತುಡಿತ, ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ವ್ಯವಸ್ಥೆ ಜೊತೆಗೆ ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು. ಭವಿಷ್ಯವನ್ನು ಚೆನ್ನಾಗಿ ರೂಪಿಸುವತ್ತ ಗಮನ ಹರಿಸಿ ದೇಶದ ಅಪ್ರತಿಮ ಸಂಪತ್ತಾಗಬೇಕು ಎಂದು ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಇಅದರ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದಿನ ಯುವಜನತೆಯಲ್ಲಿ ಅಸಾಮಾನ್ಯ ಪ್ರತಿಭೆ, ಜ್ನಾನ , ಬುದ್ಧಿವಂತಿಕೆ ಇದೆ. ಅದಕ್ಕೆ ಪೂರಕಾವಾಗಿ ಕಲಿಯುವಿಕೆಗೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಬದುಕಿನ ಕುರಿತು ಆಲೋಚಿಸಿ, ಗಮನಿಸಿ ಸವಾಲುಗಳನ್ನು ಹೋರಾಟದ ಮನೋಭಾವನೆಯಿಂದ ಸ್ವೀಕರಿಸಿ ಬದುಕನ್ನು ಹಸನಾಗಿಸುಕೊಳ್ಳುವಂತಹ ಪ್ರಜ್ನಾವಂತಿಕೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದೊಂದಿಗೆ ಪಾಠೇತರ ಚಟುವಟಿಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಸಾಂಸ್ಕೃತಿಕ ಕಲೆ, ಆಚಾರ-ವಿಚಾರವನ್ನು ಕಲಿಯುವುದರೊಂದಿಗೆ ನಮ್ಮ ಸಾಂಸ್ಕೄತಿಕ ಶ್ರೀಮಂತಿಕೆಯನ್ನು ಸೂರ್ಯ -ಚಂದ್ರರಿರುವವರೆಗೂ ಅಜರಾಮರವಾಗಿಸಬೇಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀದೇವಿಯ ಅನುಗ್ರಹ ಕೃಪೆಯಿಂದ ಜಿಎಸ್‌ಬಿ ಸಮಾಜ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಸಮಾಜದಿಂದ ನಾವು ಗಳಿಸಿದ ದ್ರವ್ಯವನ್ನು ಭಯ ಭಕ್ತಿಯಿಂದ ಯಾವುದೇ ಅಹಂಕಾರವಿಲ್ಲದೆ ಉತ್ತಮ ಕೆಲಸಕ್ಕೆ ನೀಡುತ್ತಿರಬೇಕು. ನಾವು ನೀಡಿದ ದಾನದ ಉಪಯೋಗ ಸರಿಯಾದ ರೀತಿಯಲ್ಲಿ ಆಗುವಂತಿರಬೇಕು. ಅತಿಥಿ ಸತ್ಕಾರ ನಮ್ಮ ಸಂಸ್ಕೃತಿಯಾಗಿದ್ದು ಅತಿಥಿಗಳನ್ನು ಸತ್ಕಾರ ಮಾಡುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಅಲ್ಲದೆ ನಮ್ಮಲ್ಲಿ ಪ್ರೀತಿ ಬೆಳೆಯುತ್ತದೆ ಹಾಗೂ ಸಂಬಂಧಗಳು ವೃದ್ಧಿಯಾಗುತ್ತದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಅವರು ಕುಂದಾಪುರ ತಾಲೂಕು ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ವಠಾರದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ’ಶ್ರೀ ನಾರಾಯಣೀ ಅತಿಥಿ ಗೃಹ’ ಸಮುಚ್ಛಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಬಸ್ರೂರಿನ ಶ್ರೀ ಮಹಾಲಸಾ ನಾರಾಯಣೀ ದೇವಾಲಯದಲ್ಲಿ ಅನೇಕ ರೀತಿಯ ವಿವಿಧ ಧಾರ್ಮಿಕ ಚಟುವಟಿಕೆಗಳು, ದೇವಾಲಯದ ಅಭಿವೃದ್ಧಿ ಕಾರ್ಯಗಳು, ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಯೋಜನೆಗಳು ಯಶಸ್ವಿಯಾಗಿ ನಡೆದಿದ್ದು, ದೇವಾಲಯಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಸ್ವಚ್ಚತಾ ಆಂದೋಲನ ಕೇವಲ ಪ್ರಚಾರಕ್ಕಾಗಿ ಮಾತ್ರ ನಡೆಯುತ್ತಿದೆ. ಘನತ್ಯಾಜ್ಯಗಳ ಸಮರ್ಪಕ ವಿಲೇವಾರಿ ನಡೆದಾಗ ಮಾತ್ರ ನಗರಗಳ ನೈರ್ಮಲ್ಯ ಹೆಚ್ಚಿಸಲು ಸಾಧ್ಯವಾಗುವುದರ ಜೊತೆಗೆ ಮುಂದಿನ ಪೀಳಿಗೆಗೂ ಉತ್ತಮ ಸಮಾಜವನ್ನು ಕಟ್ಟಕೊಡಲು ಸಾಧ್ಯವಿದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಟ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ನಡೆದ “ಸ್ವಚ್ಚತಾ ಆಂದೋಲನದಲ್ಲಿ ನಾಗರಿಕರ ಪಾತ್ರ” ಕುರಿತು ಮಾತನಾಡುತ್ತಿದ್ದರು. ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೩೦,೦೦೦ ಜನವಸತಿ ಇದ್ದು, ಸುಮಾರು ೧೫ ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನು ಬಳಸಿಕೊಂಡು ಗೊಬ್ಬರ ತಯಾರಿಸುವ ಘಟಕವನ್ನು ಪುರಸಭೆ ಉತ್ತಮವಾಗಿ ನಿರ್ವಹಿಸುತ್ತಿದೆ. ಇದು ಹೀಗೆಯೇ ಮುಂದುವರಿಯಲು ಸಾರ್ವಜನಿಕರ ಸಹಕಾರ ಅತೀ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ದಕ್ಷಿಣದ ಅಧ್ಯಕ್ಷ ವಾಸುದೇವ ಕಾರಂತ ವಹಿಸಿದ್ದರು. ಪ್ರಾರ್ಥನೆಯನ್ನು ಶ್ರೀನಿವಾಸ ಶೇಟ್ ನೇರವೇರಿಸಿದರು. ಕಾರ್ಯದರ್ಶಿ ರೊ ಸುರೇಶ ಮಲ್ಯ ವಾರದ ವರದಿಯನ್ನು ಮಂಡಿಸಿದರು. ರೋಟರಿ ಮಾಹಿತಿಯನ್ನು…

Read More