ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಹಬ್ಬ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಅಂತಾರಾಷ್ಟ್ರೀಯ ಎಫ್‌ಎಸ್‌ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೂವಸ್ತ್ ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ►ಇದನ್ನೂ ಓದಿ: ಕೊಂಕಣಿ ಖಾರ್ವಿ ಜನಾಂಗದ ವೈಶಿಷ್ಟ್ಯಪೂರ್ಣ ಆಚರಣೆ ಹೋಳಿ – http://kundapraa.com/?p=12447 ►ಮತ್ತಷ್ಟು ಚಿತ್ರಗಳು – ಇಲ್ಲಿ ಕ್ಲಿಕ್ಮಾಡಿ…
Author: ನ್ಯೂಸ್ ಬ್ಯೂರೋ
◦ ಕುಂದಾಪ್ರ ಡಾಟ್ ಕಾಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಆರಂಭವಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿ, ಬೌಲರ್ ಹಾರ್ದಿಕ್ ಪಾಂಡ್ಯನ ಪ್ರತಿ ಎಸೆತವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಎರಡೂ ವಿಕೆಟ್ ಪಡೆದರೂ ಒಂದು ಹಂತಕ್ಕೆ ಪಂದ್ಯ ಸೋತಿತೆಂದು ನಿರಾಶರಾಗಿದ್ದರೂ ಕೊನೆಯ ಎಸೆತದಲ್ಲಿ ಭಾರತ ಗೆಲುವಿನ ನಗೆ ಬೀರಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ಕೊನೆಯ ಓವರ್‌ನಲ್ಲಿ ಕುಂದಗನ್ನಡ ಮಾತನಾಡುವ ಕ್ರಿಕೆಟ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸಿರಬಹುದು ಎಂಬುದನ್ನು ಯುವ ಬರಹಗಾರ ನಾಗರಾಜ ಶೆಟ್ಟಿ ನೈಕಂಬ್ಳಿ ನಿರೂಪಿಸಿದ್ದಾರೆ. ಓದಿ ಸುಮ್ನೆ ತಮಾಷೆಗೆ… || ಕುಂದಾಪ್ರ ಡಾಟ್ ಕಾಂ 20ನೇ ಓವರ್ ಶುರು ಆತಿತ್ … ದೇವ್ರೆ ದೇವ್ರೆ ನೀನೇ ಕಾಪಾಡ್. ಇವತ್ತೊಂದ್ ಮರ್ಯಾದಿ ಉಳ್ಸ್ ಮರಾಯ ಹಾರ್ದೀಕ… 19.1 ದಿಡ್ ದಿಡ್ ದಿಮಿಗುಟ್ಕಂಡ್ ಓಡ್ ಬಂದ ಬೋಲ್ ಹಾಕ್ದ ಸಿಂಗಲ್ ರನ್, ಸೂಪರ್ ಬೋಲಿಂಗ್, ಅಬ್ಬಾ ಹಿಂಗೆ ಹಾಕ್ ಮರಾಯ. 19.2 ಸತ್ತ್ ಹ್ವಾಪ್ಕೆ .…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಎಸು ಕ್ರಿಸ್ತರು ಪವಿತ್ರ ಗುರುವಾರದಂದು ಪರಮ ಪ್ರಸಾದದ ಸಂಸ್ಕಾರ, ಗುರು ದೀಕ್ಷೆ ಸಂಸ್ಕಾರದ ಆಚರಣೆ ಮಾಡಿ, ಯೇಸು ತನ್ನಂತೆ ನೀವೂ ಕೂಡ ಬೇರೆಯವರ ಸೇವೆ, ಪ್ರೀತಿ ಮಾಡುವುದು ಮುಖ್ಯ ಎಂದು ಮನದಟ್ಟು ಮಾಡಲು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದರು, ಈ ಸಲ ಪ್ರಥಮ ಭಾರೀ ಪೋಪ್ ಫ್ರಾನ್ಸಿಸರ ಅತಿಕ್ರತತ ಘೋಷಣೆಯೊಂದಿಗೆ, ಪುರುಷರ ಜೊತೆ ಮಹಿಳೆ, ಮಕ್ಕಳ ಪಾದಗಳನ್ನು ತೊಳೆಯುವ ಈ ಸಂಸ್ಕಾರದ ಅಚರಣೆ ಕುಂದಾಪುರ ಹೋಲಿ ರೊಜಾರಿ ಚರ್ಚಿನಲ್ಲಿ ಪ್ರಧಾನ ಗುರುಗಳಾದ ವ|ಅನೀಲ್ ಡಿಸೋಜಾರ ನೇತ್ರತ್ವದಲ್ಲಿ ನೆಡೆಯಿತು.
ಕುಡಿದ ಮತ್ತಿನಲ್ಲಿದ್ದ ನೇಪಾಳಿ ಮೂಲಕ ಯುವಕನೋರ್ವ ಕಂಠಪೂರ್ತಿ ಕುಡಿದಿದ್ದ ತಮ್ಮ ಸಂಬಂಧಿಗೆ ಜಾಕಿಚಾನ್ ಶೈಲಿಯಲ್ಲಿ ಹೊಡೆಯುತ್ತಿದ್ದ. ಗಂಟೆಗಳ ಕಾಲ ನಡೆದ ಈ ಯುವಕರುಗಳ ಹೊಡೆದಾಟ ಸಾರ್ವಜನಿಕರಿಗೆ ಬಿಟ್ಟಿ ಮನೋರಂಜನೆ ದೊರೆತಿತ್ತು. ಕುಡಿದ ಅಮಲಿನಲ್ಲಿ ತೇಲುತ್ತಿದ್ದ ಅಸಾಮಿ ಕೊನೆಗೆ ಪೊಲೀಸರ ಟೊಪ್ಪಿಗೂ ಕೈಯಿಟ್ಟಿದ್ದ. ಕೆಳಗಿನ ವಿಡೀಯೋ ನೋಡಿ….
ಕುಂದಾಪ್ರ ಡಾಟ್ ಕಾಂ. ಟಿಕ್ ಟಿಕ್ ಗಡಿಯಾರ… ಮನೆಗೊಂಡು ಅಲಂಕಾರ… ನೋಡಿ ಇದು ತಯಾರಾಗೋದು ಎಷ್ಟೊಂದು ಸುಂದರ… ಕೆಳಗಿನ ವಿಡಿಯೋ ನೋಡಿ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪದವಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಹಲವಾರು ಲೋಪಗಳಿದ್ದು, ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಮಾಡಬೇಕೆಂದು ಆಗ್ರಹಿಸಿ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಮಿನಿ ಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಮಾತನಾಡಿ ೧, ೩ ಮತ್ತು ೫ನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹಲವಾರು ತಪ್ಪುಗಳು ಕಂಡುಬಂದಿದೆ. ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ಇದ್ದರೂ ಕೊನೆಯಲ್ಲಿ ಅನುತ್ತೀರ್ಣವೆಂದು ಹಾಕಲಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಪರಿಗಣಿಸಲಾಗಿದ್ದು, ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಉತ್ತೀರ್ಣವೆಂಬ ಫಲಿತಾಂಶ ಬಂದಿದೆ. ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹೀಗೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಮಂಗಳೂರು ವಿವಿ ಆಟವಾಡುತ್ತಿರುವುದು ಸರಿಯಲ್ಲ. ಈ ಗೊಂದಲಮಯ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ನ್ಯಾಯಕ್ಕಾಗಿ ತೀವೃ ಸ್ವರೂಪದ ಹೋರಾಟಕ್ಕೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮುಂದಾಗಲಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಭಂಡಾರ್‌ಕಾರ್ಸ್ ಕಾಲೇಜಿನಿಂದ ಹೊರಟ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮಿನಿ ವಿಧಾನಸೌಧ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರಾಚೀನ ಕಲದಿಂದಲೂ ನಮ್ಮ ಜನರಿಗೆ ಮೌಲ್ಯಗಳನ್ನುಗಳಿಸಿಕೊಡುವಲ್ಲಿ ಯಕ್ಷಗಾನದ ಪಾತ್ರ ಹಿರಿದು ಯಕ್ಷಗಾನ ಅಭಿರುಚಿ ಉಳ್ಳವನು ಆರ್ಥಿಕವಾಗಿ ಪ್ರಾಭಲ್ಯರಾಗುವುದಿಲ್ಲ. ಅದರೆ ಮೌಲ್ಯಯುತನಾಗುತ್ತಾನೆ. ಕಲಾಭಿರುಚಿಯೇ ಹಾಗೆ. ಬದುಕನ್ನು ಗಟ್ಟಿಗೊಳಿಸುವ ಮಾಧ್ಯಮ. ಕೋಟೆಶ್ವರದ ಜನರಿಗೆ ಈ ಹಬ್ಬದ ವಾತಾವರಣ ನಿಜಕ್ಕೂ ಪ್ರಶಂಸನೀಯ ಎಂದು ಖ್ಯಾತ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಹೇಳಿದರು. ಕೋಟೇಶ್ವರ ರಥಬೀದಿಯಲ್ಲಿ ನಮ್ಮ ಕಲಾಕೇಂದ್ರದವರು ಆಯೋಜಿಸಿದ ಯಕ್ಷಹಬ್ಬ ೨೦೧೬ ರ ಎರಡನೇದಿನದ ಯಕ್ಷನುಡಿ ವೇದಿಕೆಯ ಗೌರವ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಕಲಾಕೇಂದ್ರದ ಅದ್ಯಕ್ಷ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಕೆ.ರವಿರಾಜ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾರ್ಕೋಡು ಗೋಪಾಲ ಕೃಷ್ಣ ಶೆಟ್ಟಿ ವಂದಿಸಿದರು ಶ್ರೀರಾಜ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಪ್ರಖ್ಯಾತ ಹವ್ಯಾಸಿ ಮತ್ತು ವೃತ್ತಿ ಕಲಾವಿದರ ಕೂಡುವಿಕೆಯಿಂದ ಶ್ರೀ ರಾಮ ಪಟ್ಟಾಭಿಷೇಕ ಎಂಬ ಯಕ್ಷಗಾನ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪದವಿ ಶಿಕ್ಷಣದ ಅನಂತರ ಉದ್ಯೋಗವನ್ನು ಅರಸಿ, ಅದನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ತೀವ್ರವಾದ ಪೈಪೋಟಿ ಇರುವುದರಿಂದ ಉದ್ಯೋಗಾಕಾಂಕ್ಷಿ ವಿಶಿಷ್ಟವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ತನ್ನಲ್ಲಿರುವ ಪ್ರತಿಭೆ, ಅರ್ಹತೆಯನ್ನು ತೋರಿಸಿಕೊಳ್ಳಲು ಉತ್ತಮ ರೆಸ್ಯೂಂ (ಸ್ವವಿವರ) ರಚಿಸಿಕೊಳ್ಳುವುದು ಅತೀ ಅಗತ್ಯ ಎಂದು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರತಾಪಚಂದ್ರ ನುಡಿದರು. ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಉದ್ಯೋಗ ಮಾಹಿತಿ ಹಾಗೂ ರೆಸ್ಯೂಂ ರಚನಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಕಡಿಮೆ ಆಗುತ್ತಿದೆ. ರೆಸ್ಯೂಂ ರಚಿಸುವುದು ಸೇರಿದಂತೆ ತೀರಾ ವೈಯಕ್ತಿಕ ವಿಷಯಕ್ಕೂ ಅಂತರ್ಜಾಲದ ಮೊರೆ ಹೋಗುತ್ತಿರುವುದು ಬೇಸರದ ಸಂಗತಿ. ಅಭ್ಯರ್ಥಿಯ ಸಂಪೂರ್ಣ ವಿವರವನ್ನು ಸ್ಪಷ್ಟ ಹಾಗೂ ಆಕರ್ಷಕವಾದ ರೀತಿಯಲ್ಲಿ ಪ್ರಸ್ತುತಪಡಿಸಿದಾಗ ಅದು ಸಂದರ್ಶಕರ ಮನಗೆಲ್ಲುತ್ತದೆ. ತನ್ನ ಸಾಮರ್ಥ್ಯವೇನು ಎಂಬುದನ್ನು ಪ್ರಸ್ತುತಪಡಿಸುವ ಕೌಶಲ್ಯತೆ ಯಾರಿಗಿರುತ್ತದೋ ಅವರು ಸುಲಭವಾಗಿ ಸಂದರ್ಶನವನ್ನು ಎದುರಿಸುತ್ತಾರೆ ಹಾಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಯಕ್ಷಗಾನ ಸರ್ವ ಸುಂದರ ಕಲೆ. ಈ ಕ್ಷೇತ್ರಕ್ಕೆ ಇಂದಿನ ತಲೆಮಾರನ್ನು ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಆಕರ್ಶಿಸುವ ಕೆಲಸಗಳು ಇನ್ನೂ ಆಗಬೇಕಾಗಿದೆ. ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕವಾದ ಭೂಮಿಕೆಯೊಂದು ಕೆಲಸಮಾಡುವಂತಾದುದು ಈ ಭಾಗಕ್ಕೆ ಒಂದು ಗರಿಮೆಯ ಸಂಕೇತ. ಈ ಕಾರಣಕ್ಕೆ ನಮ್ಮ ಕಲಾಕೇಂದ್ರದ ಚಟುವಟಿಕೆ ಮಾದರಿಯಾದುದು ಎಂದು ಭಂಡಾರ್ಕಾರ‍್ಸ್ ಕಲೇಜಿನ ಪಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಹೇಳಿದರು. ಕೋಟೆಶ್ವರ ರಥಬೀದಿಯಲ್ಲಿ ನಮ್ಮ ಕಲಾಕೇಂದ್ರದ ಆಶ್ರಯದಲ್ಲಿ ಒಂದು ವಾರದವರೆಗೆ ನಡೆಯಲಿರುವ ಯಕ್ಷಹಬ್ಬ-2016 ಉದ್ಘಾಟನೆ ಮಾಡಿ ಮಾತನಾಡಿದರು. ಬಸ್ರೂರು ದೇವಳದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಸಿ, ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳೇ ಪ್ರಾದೇಶಿಕ ಕಲೆಗಳಿಗೆ ಆಶ್ರಯ ತಾಣಗಳಾಗಿದ್ದವು. ಇಂದು ಯಕ್ಷಗಾನ ದಂತಹ ಕಲೆಗಳು ದೇವಸ್ಥಾನದ ಪೋಷಣೆಯಿಂಲೇ ಬೆಳಗಬೇಕು ಎಂದರು. ಹಿರಿಯ ಪತ್ರಕರ್ತರಾದ ಡಾ.ಸುಧಾಕರ ನಂಬಿಯಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷೀ ಮಂಜು ಬಿಲ್ಲವ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರಿಗಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಡಾ.ಬಿ.ಬಿ. ಹೆಗ್ಡೆ ಕಾಲೇಜ್ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಟ್ರಾಫಿಕ್ ಅರಿವು ಕಾರ್ಯಕ್ರಮ ಕಾಲೇಜ್ ವೇದಿಕೆಯಲ್ಲಿ ನಡೆಯಿತು. ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ. ಎಮ್. ಸಂಚಾರಿ ಜಾಗೃತಿಯ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಅಂತರಾಷ್ಟೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಸಂಚಾರಿ ಜಾಗೃತಿಗೆ ಸಂಬಂಧಪಟ್ಟ ವ್ಯಂಗ್ಯಚಿತ್ರಗಳನ್ನು ಬಿಡಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸಂಚಾರಿ ಠಾಣಾಧಿಕಾರಿ ಜಯ ಕೆ., ಕಾಲೇಜ್ ಪ್ರಾಂಶುಪಾಲ ದೋಮ ಚಂದ್ರಶೇಖರ, ಯುವ ರೆಡ್‌ಕ್ರಾಸ್ ಘಟಕ ಸಹಸಂಯೋಜಕ ಹರೀಶ್ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಸತೀಶ್ ಶೆಟ್ಟಿ ಹೆಸ್ಕತ್ತೂರು ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು.
