ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇವತ್ತಿನ ರಾಜಕಾರಣ ವ್ಯವಸ್ಥೆ ಮೂಲಬೇರು ಶಿಕ್ಷಣ ಸಂಸ್ಥೆಗಳಲ್ಲಿನ ವಿಧ್ಯಾರ್ಥಿ ಸಂಘಗಳು, ಇಂದಿನ ಪ್ರತಿಯೊಬ್ಬರಾಜಕೀಯ ನಾಯಕರ ಯಶಸ್ಸಿನ ಹಿಂದೆ ವಿಧ್ಯಾರ್ಥಿ ಸಂಘಗಳ ಕೊಡುಗೆ ಅಪಾರ ಎಂದು ಕುಂದಾಪುರ ಪುರಸs ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿದರು. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ರೋಟರಿ ಲಕ್ಷ್ಮೀವೆಂಕಟರಮಣ ಕಲಾಮಂದಿದಲ್ಲಿ ನಡೆದ ವಿವಿಧ ವಿದ್ಯಾರ್ಥಿ ಸಂಘನೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘ, ಗ್ರಾಹಕ ಸಂಘ, ಕ್ರಷಿ ಸಂಘ, ಇಕೋ ಕ್ಲಬ್, ಆಪ್ತ ಸಮಾಲೋಚನೆ, ಮುಂತಾದ ಸಂಘಗಳ ಕಾರ್ಯ ಚೆಟುವಟಿಕೆ ಕ್ರಮವಾಗಿ ಶಿಕ್ಷಕರಾದ ಪ್ರದೀಪ್ ಶೆಟ್ಟಿ, ಯಶ್‌ವಂತ ಹುಲಸ್ವಾರ್, ಶ್ಯಾಮ ಶ್ಯಾನುಬಾಗ್, ಗಾಯಿತ್ರಿ ಅಡಿಗ, ನಾಗರತ್ನ ಪರಿಚಯಿಸಿದರು. ಉಪನಿರ್ದೇಶಕರ ಕಚೇರಿ ಸಮಾಜ ವಿಷಯ ಪರಿವೀಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ಉಪಪ್ರಾಂಶುಪಾಲ ಅರುಣ್‌ಕುಮಾರ ಶೆಟ್ಟಿ ವಿದ್ಯಾಥಿ ಸಂಸತ್‌ರ ನಾಯಕ ಸುಬ್ರಮಣ್ಯ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು ಅಧ್ಯಾಪಕರಾದ ಪ್ರದೀಪ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಮನೋಜ್ ನಿರ್ವಹಿಸಿದರು. ಶಿಕ್ಷಕ ಮಾಧವ ಅಡಿಗ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯತ ಹಾಜಿ ಮಾಸ್ಟರ್ ಮೆಹಮೂದ್‌ರವರ ಅಧ್ಯಕ್ಷತೆಯಲ್ಲಿ, ಮುಖ್ಯ ಅಥಿತಿಯಾಗಿ ಆಗಮಿಸಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಯತ ಉದಯ ಗಾಂವಕರ್‌ರವರು ಇಕೋ ಕ್ಲಬ್ ಉದ್ಘಾಟಿಸಿ ಪರಿಸರ ಸಂರಕ್ಷಣೆಯಲ್ಲಿ ಇಕೋ ಕ್ಷಬ್‌ನ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯಿನಿ ಶ್ರೀಮತಿ ರೇಷ್ಮ ಡಿ ಸೋಜಾ, ಇಕೋ ಕ್ಲಬ್‌ನ ಅಧ್ಯಕ್ಷೆ ವಿದ್ಯಾರ್ಥಿನಿ ಮುಫಿದಾ ಉಪಸ್ಥಿತರಿದ್ದರು. ಕುಮಾರಿ ರಕ್ಷಿತಾ ಸ್ವಾಗತಿಸಿ, ಕುಮಾರಿ ರಿಧಾ ವಂದಿಸಿದರು. ಕುಮಾರಿ ರಿಕಿತಾ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಾಮಾಜಿಕ ಕೆಲಸಗಳಲ್ಲಿ ಗುರಿ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಅತಿ ಮುಖ್ಯ. ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕೊಡುಗೆಳನ್ನು ನೀಡುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಜವಾಬ್ದಾರಿ ಹೆಚ್ಚಾಗಿದ್ದು, ಸಂಸ್ಥೆಯ ಪ್ರತಿಯೊಬ್ಬರು ತಾವು ಇಡುವ ಪ್ರತಿಯೊಂದು ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡಬೇಕು ಎಂದು ನಟ, ಜಾದೂಗಾರ ಓಂಗಣೇಶ ಉಪ್ಪುಂದ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಗಂಗೊಳ್ಳಿ ರೋಟರಿ ಕ್ಲಬ್‌ನ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲೆ ೩೧೮೨ರ ವಲಯ ೧ರ ಸಹಾಯಕ ಗವರ್ನರ್ ಮಧುಕರ ಹೆಗ್ಡೆ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು. ವಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದು ಜಾಗರಣ ವೇದಿಕೆ ಕೋಟೇಶ್ವರ ವಲಯದ ಪುನರಾರಂಭದ ಬೈಠಕ್ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ಕೋಟೇಶ್ವರ ವಲಯದ ಸಂಚಾಲಕರಾಗಿ ಆದರ್ಶ ಅರಸರಬೆಟ್ಟು, ವಲಯ ಸಹ ಸಂಚಾಲಕರಾಗಿ ಉಮೇಶ್ ಕಳ್ಳಿಗುಡ್ಡೆ, ಸಂತೋಷ್ ಅರಾಲ್‌ಗುಡ್ಡೆ, ನಾಗೇಶ್ ಮಾರ್ಕೋಡು ಆಯ್ಕೆಯಾದರು. ಕಾರ್ಯದರ್ಶಿ- ಶ್ರೀನಿವಾಸ ಆಚಾರ್ಯ, ನಿಧಿಪ್ರಮುಖ- ವಿನೇಶ್ ಮಾರ್ಕೋಡು ಆಯ್ಕೆಯಾಗಿದ್ದು, ಹಿಂಜಾವೇ ಉಡುಪಿ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಜವಬ್ದಾರಿ ಘೋಷಣೆ ಮಾಡಿದರು. ಉಡುಪಿ ಜಿಲ್ಲಾ ನಿಧಿಪ್ರಮುಖ್ ಅಶೋಕ ಕಾಗೇರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೃಷಿಕ ಸಂಘ, ಅರಣ್ಯ ಇಕೋ ಕ್ಲಬ್ ಸಹಭಾಗಿತ್ವದೊಂದಿಗೆ ಶಾಲಾ ವಠಾರದಲ್ಲಿ ವನಮಹೋತ್ಸವ ಆಚರಿಸಲಾಯಿತು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಭಾರ ಮುಖ್ಯೋಪಧ್ಯಾಯರಾದ ವಿ. ಶ್ರೀಕಾಂತ್, ಉಡುಪಿಯ ಭಾರತೀಯ ವಿಕಾಸ ಟ್ರಸ್ಟ್ ಅನಂತ ಶೆಣೈ, ಬಸ್ರೂರು ಶಾರದ ಕಾಲೇಜ್ ಉಪನ್ಯಾಸಕ ದಿನಕರ ಶೆಟ್ಟಿ, ರೋಟರಿ ಜೋನಲ್ ಲೆಪ್ಟಿನೆಂಟ್ ಅಬುಶೇಖ್ ಸಾಹೇಬ್, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ನಿಕಟ ಪೂರ್ವಾಧ್ಯಕ್ಷ ಕೆ. ನರಸಿಂಹ ಹೊಳ್ಳ, ಸದಸ್ಯರಾದ ಬಿ. ಎಮ್. ಚಂದ್ರಶೇಖರ, ಜಗದೀಶ ಚಂದ್ರನ್, ರಾಜು ಪೂಜಾರಿ,ಮನೋಹರ, ಡುಂಡಿರಾಜ್ ಶಿಕ್ಷಕರಾದ ಪ್ರಕಾಶ್, ಪಿಯುಸ್ ಡಿಸೋಜಾ, ಕುಸುಮ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಯೋರ್ವರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಡಿವೈಎಸ್‌ಪಿ ಗಣಪತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಬೈಂದೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ಆದೇಶಿಸಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾದವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಬೈಂದೂರು ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನಾ ಜಾಥಾ ನಡೆಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೇ ಯುವ ಜನತೆಗೆ ಈಗಿನಿಂದಲೇ ಆ ಬಗೆಗೆ ಒಲುವು ಮೂಡಿಸುವುದಲ್ಲದೇ ಕಲೆಯ ಮೂಲ ಸ್ವರೂಪವನ್ನು ಹಾಗೇಯೇ ಉಳಿಸಿಕೊಳ್ಳಬೇಕಾದರೇ ಕಲಾವಿದರು ಅನುಭವ ಹಾಗೂ ಕಲಾ ಪ್ರಕಾರಗಳನ್ನು ದಾಖಲೀಕರಣಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಎಂ. ರವಿಕುಮಾರ್ ಹೇಳಿದರು. ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ರಂಗತಂಡ ’ಸಮ್ಮಿಲನ(ರಿ) ಯಳಜಿತ’ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಳಜಿತದ ನಾಟ್ಯ ಗಣೇಶ ರಂಗಮಂದಿರದಲ್ಲಿ ಆಯೋಜಿಸಲಾದ ವನಸಿರಿಯಲ್ಲೊಂದು ರಂಗತರಂಗ-2016 ಎರಡನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅವರು ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲೆ, ಸಾಹಿತ್ಯ, ಜನಪದ ಮುಂದಾದವುಗಳ ಮೂಲಕ ಜೀವಂತವಾಗಿರಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘಟನೆಗಳಿಗೆ, ಕಲಾವಿದರುಗಳಿಗೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುತ್ತಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಕಾರ್ಯ ಮಾತ್ರ ನಡೆಯಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಧನ ಸಂಗಮ ಟ್ರಸ್ಟ್ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ನಾವಡರ ಕೆರಿ ಶ್ರೀ ಪ್ರಸನ್ನ ಗಣಪತಿ ಸಭಾಭವನದಲ್ಲಿ ದಾಸರ ಪದಗಳು ಗಾಯನ ನಡೆಯಿತು. ಸಾಧನ ಸಂಗಮ ಕಿರು ಹೊತ್ತಿಗೆ ಅಕ್ಷಯ ಉದ್ಯಮಿ ಎ. ಎನ್ ಗೋಪಾಲ್ ಅಂಪಾರು ಬಿಡುಗಡೆ ಮಾಡಿ, ಭಾರತೀಯ ಪರಂಪರಾಗತ ಜ್ಞಾನದ ಸದ್ಭಳಕೆಯಿಂದ ಆರೋಗ್ಯ ಪೂರ್ಣ ಸಮಾಜ ಸಾಧ್ಯ. ಈ ಪುಸ್ತಕ ಆಕ್ಷಯ ಇದಕ್ಕೆ ಪೂರಕ ಮಾಹಿತಿ ಒದಗಿಸುವಲ್ಲಿ ಸಫಲವಾಗಿದೆ ಎಂದರು. ಕುಂದಾಪುರ ಸಾಧನ ಸಂಗಮ ಟ್ರಸ್ಟ್ ಅಧ್ಯಕ್ಷ ನಾರಾಯಣ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ಐತಾಳ್ ಹಾಗೂ ಸುಧೀಂದ್ರ ಉಪಸ್ಥಿತರಿದ್ದರು, ಕಲಾಚವಿದ ಮಂಜುನಾಥ ಮಯ್ಯ ವಂದಿಸಿದರು. ದಾಸರಪದಗಳ ಕಾರ್ಯಕ್ರಮ ಗಜಾನನ ಹೆಬ್ಬಾರ ಹಾಗೂ ಬಳಗದವರು ನಡೆಸಿಕೊಟ್ಟರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವರ್ಷಪೂರ್ತಿ ಕೃಷಿ-ಕೂಲಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜನರಿಗೆ ಕಲಾಸಕ್ತಿ ವಿಶಿಷ್ಟವಾಗಿದ್ದು, ಸೂಕ್ತ ವೇದಿಕೆ ದೊರೆತರೆ ಅವರ ಪ್ರತಿಭೆ ಅನಾವರಣಗೊಳ್ಳುವುದಲ್ಲದೇ ಅಂತಹ ಅವಕಾಶಗಳನ್ನು ಒದಗಿಸಿಕೊಡುವ ಮೂಲಕ ಸಾಂಸ್ಕೃತಿಕ ಆಸಕ್ತಿಯನ್ನು ಪ್ರೋತ್ಸಾಹಿಸಿದಂತಾಗುವುದು ಎಂದು ಯಳಜಿತ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮಂಗೇಶ್ ಶೆಣೈ ಹೇಳಿದರು. ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ರಂಗತಂಡ ‘ಸಮ್ಮಿಲನ(ರಿ) ಯಳಜಿತ’ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಳಜಿತದ ನಾಟ್ಯ ಗಣೇಶ ರಂಗಮಂದಿರದಲ್ಲಿ ಆಯೋಜಿಸಲಾದ ವನಸಿರಿಯಲ್ಲೊಂದು ರಂಗತರಂಗ-2016 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶುಭಶಂಸನೆಗೈದರು. ಗೊಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಯಳಜಿತ ಸ.ಹಿ.ಪ್ರಾ ಶಾಲೆ ಎಡಿಎಂಸಿ ಅಧ್ಯಕ್ಷ ಸುಬ್ಬಣ್ಣ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಶಿವರಾಜ ನಾಯ್ಕ್, ಯಳಜಿತ ಸಹಿಪ್ರಾ ಶಾಲೆಯ ಮುಖ್ಯೋಪಧ್ಯಾಯ ನಾರಾಯಣ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಮ ಮರಾಠಿ, ಅಧ್ಯಾಪಕ ಕೆ.ಎಂ. ಹೊಸೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಗಂಗೊಳ್ಳಿಯ ಪ್ರಸಿದ್ಧ ಉದ್ಯಮಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಆಯ್ಕೆಯಾಗಿದ್ದಾರೆ. ಪ್ರದೀಪ ಡಿ.ಕೆ. (ಐಪಿಪಿ), ದುರ್ಗಾರಾಜ್ ಪೂಜಾರಿ, ಉದಯಶಂಕರ ರಾವ್, ಲಕ್ಷ್ಮೀಕಾಂತ ಮಡಿವಾಳ (ಉಪಾಧ್ಯಕ್ಷರು), ನಾರಾಯಣ ಇ.ನಾಯ್ಕ್ (ಕಾರ್ಯದರ್ಶಿ), ಜನಾರ್ದನ ಪೂಜಾರಿ ಪೆರಾಜೆ, ಪ್ರಕಾಶ ಪೂಜಾರಿ (ಜತೆ ಕಾರ್ಯದರ್ಶಿಗಳು), ಉಮೇಶ ಮೇಸ್ತ (ಕ್ಲಬ್ ಸರ್ವಿಸ್ ನಿರ್ದೇಶಕ), ವಾಸುದೇವ ಶೇರುಗಾರ್ (ಕಮ್ಯುನಿಟಿ ಸರ್ವಿಸ್ ನಿರ್ದೇಶಕ), ಡಾ.ಕಾಶೀನಾಥ ಪೈ (ವೊಕೇಶನಲ್ ಸರ್ವಿಸ್ ನಿರ್ದೇಶಕ), ಎಚ್. ಗಣೇಶ ಕಾಮತ್ (ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕ), ಶಿವಾನಂದ ಪೂಜಾರಿ (ನ್ಯೂ ಜನರೇಶನ್ ನಿರ್ದೇಶಕ), ಲಿಪ್ಟನ್ ಒಲಿವೇರಾ (), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಥೋಮಸ್ ಪಿ.ಎ. (ಬುಲೆಟಿನ್ ಎಡಿಟರ್), ಎಚ್.ಗಣೇಶ್ ಕಾಮತ್, ಜನಾರ್ದನ ಪೂಜಾರಿ, ಉಮೇಶ ಮೇಸ್ತ (ಸಲಹೆಗಾರರು) ಆಯ್ಕೆಯಾಗಿದ್ದಾರೆ.
