ಎ.30ಕ್ಕೆ ಧ್ವನಿಪರೀಕ್ಷೆ. ಮೇ.15ಕ್ಕೆ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸುತ್ತಮುತ್ತಲಿನ ಯುವ ಗಾಯಕರಿಗೆ ಉತ್ತಮ ವೇದಿಕೆ ಕಲ್ಪಿಸಿದ ದೂರದರ್ಶನದ ಹಳೆಯ ಚಿತ್ರಗೀತೆಗಳ ವಿಶೇಷ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮವು ಮೇ.15ರಂದು ಸತತ ಮೂರನೇ ಬಾರಿಗೆ ಕುಂದಾಪುರ ಕೊಟೆಶ್ವರದ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್ ನಲ್ಲಿ ದೂರದರ್ಶನ ಬೆಂಗಳೂರು ಚಂದನ ವಾಹಿನಿ , ಬೈಲೂರು ಎಜುಕೇಶನ್ ಟ್ರಸ್ಟ್ , ಎನ್.ಸಿ.ಆರ್ ಎಜುಕೇಶನ್ ಟ್ರಸ್ಟ್ ಹಾಗೂ ಯುವ ಇನ್ಪ್ರಾಸ್ಟ್ರಕ್ಚರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಡುಗಾರರು, ನೃತ್ಯ ತಂಡಗಳು ತಮ್ಮ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರ ಅರ್ಜಿಯೊಂದಿಗೆ ಎಪ್ರಿಲ್ 30ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿರುವ ಯುವ ಮೆರಿಡಿಯನ್ ಕನ್ವೆನ್ಶನ್ ಸೆಂಟರ್‌ಗೆ ಇಲ್ಲಿ ಧ್ವನಿ ಪರೀಕ್ಷೆಗೆ ಹಾಜರಾಗಲು ಸಂಘಟಕರು ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ಕುಂದಗನ್ನಡವನ್ನು ಮತ್ತಷ್ಟು ಸಮೃದ್ಧಗೊಳಿಸುವ, ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಪುಸ್ತಕ, ಸಾಹಿತ್ಯ, ಹಾಡು, ಸಿನೆಮಾ ಹೀಗೆ ಹತ್ತಾರು ಬಗೆಯಲ್ಲಿ ಕೆಲಸ ಮಾಡಿದವರು ಹತ್ತಾರು ಮಂದಿ. ಪ್ರತಿಭಾರಿಯೂ ಹೀಗೆ ನಡೆಯುವ ಹೊಸ ಹೊಸ ಪ್ರಯತ್ನಗಳನ್ನು ಮೆಚ್ಚುತ್ತಾ, ಪ್ರೋತ್ಸಾಹಿಸುತ್ತಾ ಬಂದವರು ಕುಂದನಾಡಿಗರು. ಅಂತಹದ್ದೇ ಒಂದು ಭಾಷಾಭಿಮಾನದಿಂದ ಮೊದಲ ಭಾರಿಗೆ ಪಣ್ಕ್ ಮಕ್ಕಳ್ ತಂಡದ ಆಲ್ಬಂ ಬಿಡುಗಡೆಯಾದಾಗ, ಮೊಲದ ಭಾರಿಗೆ ಗರ್‌ಗರ್‌ಮಂಡ್ಲ ಎಂಬ ಕಮರ್ಶಿಯಲ್ ಸಿನೆಮಾ ಜನರ ಮುಂದೆ ಬಂದಾಗ ಮನತುಂಬಿ ಸ್ವಾಗತಿಸಿದ್ದ ಪ್ರೇಕ್ಷಕ ಸಮೂಹ ಈಗ ಬಿಡುಗಡೆಗೊಂಡಿರುವ ಕುಂದಾಪ್ರ ಕನ್ನಡದ ’ಬಿಲಿಂಡರ್’ ಸಿನೆಮಾವನ್ನೂ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಸಿನೆಮಾ ಚನ್ನಾಗಿದೆ ಎಂದು ಜನರು ಸುಮ್ಮನೆ ಮೆಚ್ಚಿಕೊಂಡಿಲ್ಲ. ಒಂದು ಪ್ರಾದೇಶಿಕ ಭಾಷೆಯ ಸಿನೆಮಾ ಸ್ಯಾಂಡಲ್‌ವುಡ್‌ನ ಕಮರ್ಶಿಯಲ್ ಸಿನೆಮಾಗಳಿಗೆ ಸರಿಸಾಟಿಯಾಗಿ ನಿಲ್ಲಬಹುದು ಎಂಬ ಭರವಸೆಯನ್ನು ಹುಟ್ಟಿಹಾಕಿರುವುದು ಇದಕ್ಕೆ ಪ್ರಮುಖ ಕಾರಣ. ಒಟ್ಟಾರೆ ಕುಂದಾಪುರದಂತಹ ಪ್ರದೇಶವನ್ನು ಕೇಂದ್ರವನ್ನಾಗಿಟ್ಟುಕೊಂಡು ದೊಡ್ಡ ಮಟ್ಟದ ಸಿನೆಮಾ ತಯಾರಾಗುತ್ತದೆ, ಜನ ಸಿನೆಮಾ ಥಿಯೇಟರ್‌ನತ್ತ ಮುಖ ಮಾಡುತ್ತಾರೆ ಎಂದರೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿಯ ತ್ರಾಸಿ ಬೀಚ್ ಕ್ರಿಕೆಟರ್ಸ್ ಆಶ್ರಯದಲ್ಲಿ ಇಲ್ಲಿನ ಬೀಚ್ ಪರಿಸರದಲ್ಲಿ ನಡೆದ ೩೦ ಗಜಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಲಿಷ್ಠ ಡೆಕ್ಕನ್ ಕ್ರಿಕೆಟರ‍್ಸ್ ಬೆಂಗಳೂರು ತಂಡವು ಅಂತಿಮ ಪಂದ್ಯದಲ್ಲಿ ಪ್ರತಿಸ್ಪರ್ಧಿ ಬೀಚ್ ಬಾಯ್ಸ್ ನಾವುಂದ ತಂಡವನ್ನು ಮಣಿಸಿ ದಿ. ರಿಚರ್ಡ್ ಡಿ ಅಲ್ಮೇಡಾ ಅವರ ಸ್ಮರಣಾರ್ಥ ತ್ರಾಸಿ ಬೀಚ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಗೆದ್ದುಕೊಂಡಿದೆ. ಸಂಜೆ ಜರಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಯುವಕರು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರದ ಕ್ರೀಡಾ ಪ್ರತಿಭೆಗಳನ್ನು ಹೊರತರುವ ಕಾರ್ಯ ಸಂಘಸಂಸ್ಥೆಗಳಿಂದ ಆಗಬೇಕು ಎಂದರು. ಮುಖ್ಯ ಅತಿಥಿ ತ್ರಾಸಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಖಾರ್ವಿ, ದಿ. ರಿಚರ್ಡ್ ಡಿ ಅಲ್ಮೇಡಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಟ್ರೀಜಾ ಡಿಸಿಲ್ವ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಮೈಮರೆತಿರುವುದರಿಂದ ಬಲಿಷ್ಠ ಹಿಂದು ಸಮಾಜದ ಮೇಲೆ ವ್ಯವಸ್ಥಿತ ರೀತಿಯಲ್ಲಿ ಷಡ್ಯಂತ್ರಗಳು ನಡೆಯುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಮೊದಲಾದವುಗಳು ನಿರಂತರವಾಗಿ ನಮ್ಮ ಸಮಾಜದ ಬುಡಕ್ಕೆ ಕೈಹಾಕಿದೆ. ಸಮಸ್ತ ಹಿಂದುಗಳು ಜಾಗೃತರಾದರೆ ಮಾತ್ರ ಇಂತಹ ಸವಾಲುಗಳಿಗೆ ಉತ್ತರ ನೀಡಲು ಸಾಧ್ಯವಿದೆ. ಹಿಂದು ಸಮಾಜದ ಮೇಲೆ ಆಕ್ರಮಣಗಳು ನಡೆದಾಗ ಸಮಸ್ತ ಹಿಂದು ಸಮಾಜ ಜಾತಿ ಮತ ಬೇಧವಿಲ್ಲದೆ ಎಚ್ಚೆತ್ತುಕೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕೇಂದ್ರ ಕಾರ್ಯಕಾರಿಣಿ ಚೈತ್ರಾ ಕುಂದಾಪುರ ಹೇಳಿದರು. ಅವರು ಪರಶುರಾಮ ಘಟಕ ಮಲ್ಯರಬೆಟ್ಟು ಗಂಗೊಳ್ಳಿ ಇವರ ಆಶ್ರಯದಲ್ಲಿ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭಾರತ ಮಾತಾ ಪೂಜನ ಮತ್ತು ರಾಷ್ಟ್ರ ಚಿಂತನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತ ಮಾತೆಯ ಸೇವೆಗೆ, ದೇಶದ ರಕ್ಷಣೆಗೆ ಸಿದ್ಧರಾಗಿರುವ ಯುವ ಜನರು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಿರೂರು: ಮಾದರಿ ಗ್ರಾಮವಾಗಿ ರೂಪುಗೊಳ್ಳುತ್ತಿರುವ ಶಿರೂರಿಗೆ ಸುಸಜ್ಜಿತ ಮೀನು ಮಾರುಕಟ್ಟೆ ರಾಜ್ಯ ಸರಕಾರದ ಮಹತ್ವದ ಕೊಡುಗೆ. ಮಾದರಿ ಗ್ರಾಮ ಯೋಜನೆಯನ್ವಯ ಶಿರೂರು ಸಮಗ್ರ ಅಭಿವೃದ್ಧಿ ಸಾಧಿಸಲಿದೆ. ಅಳ್ವೆಗದ್ದೆ ಮೀನುಗಾರಿಕಾ ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದ ತಕ್ಷಣ ಎರಡನೆ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು. ಎಲ್ಲ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ಆಸ್ಪತ್ರೆ ನಿರ‍್ಮಾಣ ಶೀಘ್ರ ಆಗಲಿವೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಶಿರೂರಿನ ಮಾರುಕಟ್ಟೆ ಪ್ರದೇಶದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ 90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸುಸಜ್ಜಿತ ಮೀನು ಮಾರುಕಟ್ಟೆ ಸಂಕೀರ್ಣಕ್ಕೆ ಮಂಗಳವಾರ ಅವರು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಿರೂರು ಗ್ರಾಪಂ ಅಧ್ಯಕ್ಷೆ ಜಿ.ಯು. ದಿಲ್‌ಶಾದ್ ಬೇಗಂ ಅಧ್ಯಕ್ಷತೆವಹಿಸಿದ್ದರು. ಶಿರೂರಿಗೆ ಹೈ-ಟೆಕ್ ಮಾರ್ಕೇಟ್ ನಿರ್ಮಾಕ್ಕೆ ರೂ. ೯೦ ಲಕ್ಷ ಅನುದಾನ ನೀಡಿದ ನೀಡಿದ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವರಿಗೆ ಂಚಾಯತ್ ವತಿಯಿಂದ ಪೌರಸನ್ಮಾನ ನೀಡಲಾಯಿತು. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪ್ರ ಭಾಷಿ ಉಳ್ಸಕ್ ಬೆಳ್ಸಕ್ ಅಂದೇಳಿ ಮಾಡದ್ ಪ್ರಯತ್ನು ಖುಷಿ ಕೊಟ್ಟಿತ್. ಚಿತ್ರ ಹೌಸ್‌ಪುಲ್ ಪ್ರದರ್ಶನು ಕಾಣ್ತ್‌ಇತ್. ಜನ್ರ್ ಭಾಷಾಭಿಮಾನಕ್ಕೆ ತಲಿಬಾಗ್ತೆ. ದುಡ್ಡ್ ಮಾಡುಕ್ ಚಿತ್ರು ಮಾಡ್ಲ. ಚಟಕ್ಕಾಯಿ ಮಾಡದ್ ಚಿತ್ರಕ್ಕೆ ಜನ್ರ್ ಕೊಟ್ಟ್ ಬೆಂಬ್ಲು ಮಾತ್ರ ಬಾರಿ ದೊಡ್ಡದ್. ನಮ್ದೇನಾರೂ ತಪ್ಪ್ ಇದ್ರೇ ಹೇಳಿ ತಿದ್ದಕಂತು. ಆರೆ ದುಯ್ವಿಟ್ ಕಾಲ್ ಎಳಿಬೇಡಿ. ಕುಂದಾಪುರದ ಶರೋನ್ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಬಿಲಿಂಡರ್ ಚಿತ್ರದ ನಿರ್ದೇಶಕ ರವಿ ಬಸ್ರೂರ್ ಭಾವುಕರಾಗಿ ಆಡಿದ ಮಾತುಗಳಿವು. ಎ.22ರಂದು ಕುಂದಾಪುರದ ವಿನಾಯಕ ಹಾಗೂ ಉಡುಪಿ ಕಲ್ಪನಾ ಚಿತ್ರಮಂದಿರಗಳಲ್ಲಿ ತೆರೆಕಂಡ ಕುಂದಾಪುರ ಕನ್ನಡದ ಸಿನೆಮಾ ’ಬಿಲಿಂಡರ್’ಗೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಅಭಿನಂದಿಸಿದ ಅವರು, ನಮ್ಮ ಹೊಸ ಪ್ರಯತ್ನಗಳನ್ನು ಮೆಚ್ಚಿ ಸಿನೆಮಾ ಮಂದಿರಗಳಿಗೆ ಬರುತ್ತಿರುವುದು ಸಂತೋಷ ನೀಡುತ್ತಿದೆ. ಥಿಯೇಟರ್‌ಗಳಿಗೆ ಪ್ರೇಕ್ಷಕರು ಬರುವುದಿಲ್ಲ ಎನ್ನುವ ಅಪವಾದದ ನಡುವೆ ನಮ್ಮ ಚಿತ್ರ ಹೌಸ್‌ಪುಲ್ ಪ್ರದರ್ಶನ ಕಾಣುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗೋ ಸಂತತಿ ರಕ್ಷಣೆಯಿಂದ ದೇಶದಲ್ಲಿ ಸುಭಿಕ್ಷೆ ಉಂಟಾಗಿ ಸಮೃದ್ಧಿ ನೆಲೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಗೋವುಗಳು ಸಹಕಾರಿಯಾಗಲಿದ್ದು, ರೈತರ ಬಂಜರು ಭೂಮಿಯನ್ನು ಹಸನಾಗಿಸಲು ಗೋವುಗಳು ಅತ್ಯವಶ್ಯಕ. ಗೋವಿನ ಉತ್ಪನ್ನಗಳು ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ವಾರಣಾಸಿಯ ಪ್ರಸಿದ್ಧ ಗೋ ಕಥಾ ನಿರೂಪಕ ಫೈಜ್ ಖಾನ್ ಹೇಳಿದರು. ಅವರು ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಬಸ್ ನಿಲ್ದಾಣದ ವಠಾರದಲ್ಲಿ ಆಯೋಜಿಸಲಾಗಿದ್ದ ಗೋವಿನ ಮಹತ್ವವನ್ನು ಸಾರುವ ’ಅಂಬೆಯ ಕೂಗು’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋವಿಗೆ ಕೊಡುವುದು ಮಾತ್ರ ತಿಳಿದಿದೆಯೇ ವಿನಹ ಪಡೆಯುವುದು ಗೊತ್ತಿಲ್ಲ. ಗೋವಿನ ಗೊಬ್ಬರ ರೈತರ ಭೂಮಿಯನ್ನು ಫಲವತ್ತತೆ ಗೊಳಿಸಿದರೆ, ಗೋಮೂತ್ರವನ್ನು ಔಷಧವನ್ನಾಗಿ ಉಪಯೋಗಿಸುತ್ತಿದ್ದಾರೆ. ಪಂಚಗವ್ಯವನ್ನು ಹಿಂದು ಸಂಸ್ಕೃತಿಯ ಶುಭ ಕಾರ್ಯಗಳಲ್ಲಿ ಅತಿ ಶ್ರೇಷ್ಠ ಎಂದು ಬಳಸಲಾಗುತ್ತಿದೆ. ಒಂದು ಗೋವಿನಿಂದ ಸುಮಾರು ೩೦೦ ಎಕ್ರೆ ಭೂಮಿಯನ್ನು ಕೃಷಿಗೆ ಪೂರಕವಾಗುವಂತೆ ಪರಿವರ್ತಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಂಚಾಯತ್ ರಾಜ್ ವ್ಯವಸ್ಥೆಗೆ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಹಳ ಒತ್ತು ನೀಡುತ್ತಿವೆ. ಹೆಚ್ಚು ಅಧಿಕಾರ, ಸಂಪನ್ಮೂಲ ಬರುತ್ತಿದೆ. ಅದರೊಂದಿಗೆ ಗ್ರಾಮದ ಜನರೇ ತಮ್ಮ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಳ್ಳಲು ಸಾಧ್ಯವಾಗುವ ’ನಮ್ಮ ಗ್ರಾಮ ನಮ್ಮ ಯೋಜನೆ’ ಚಾಲ್ತಿಗೆ ಬಂದಿದೆ. ಜನ ಪ್ರತಿನಿಧಿಗಳು, ಜನರು ಸೇರಿಕೊಂಡು ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಿಸಿದರೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ಪಂಚಾಯತ್, ವಿವಿಧ ಸರಕಾರಿ ಇಲಾಖೆಗಳು ಮತ್ತು ತ್ರಾಸಿ, ಹೊಸಾಡು ಗ್ರಾಮ ಪಂಚಾಯತ್ ಸಂಯುಕ್ತವಾಗಿ ತ್ರಾಸಿಯ ಅಂಬೇಡ್ಕರ್ ಭವನದ ಎದುರು ಆಯೋಜಿಸಿದ್ದ ’ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನ’ ಹಾಗೂ ’ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’ ಆಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಗ್ರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಪ್ಪುಂದ ಜೇಸಿಐ ಘಟಕದ ಸ್ಥಾಪನಾ ದಿನದ ಅಂಗವಾಗಿ ಜೇಸಿ ವತಿಯಿಂದ ಸಾಯಂಕಾಲ ಹಳಗೇರಿಯಲ್ಲಿ ’ಸಿಂಹ ಘರ್ಜನೆ’ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಹೆಚ್ಚು ಯುವಜನರನ್ನು ಹೊಂದಿದ ನಮ್ಮ ದೇಶದಲ್ಲಿ ಸೇವಾ ಮನೋಭಾವನೆಯಿರುವ ಯುವಕರನ್ನು ಜೇಸಿಐನಂತಹ ಸಂಸ್ಥೆಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದ್ದು, ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು ಎಂದರು. ಜೇಸಿಐ ಅಧ್ಯಕ್ಷ ನರಸಿಂಹ ಹಳಗೇರಿ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಈ ಸಂದರ್ಭ ಕೃಷಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ವ್ಯವಹಾರ ಕ್ಷೇತ್ರದ ಸಾಧಕ ಸಹೋದರರಾದ ರಾಮ-ಲಕ್ಷ್ಮಣ ಪೂಜಾರಿ ತೆಂಕಬೆಟ್ಟು, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಭೆ ಹಿಬಾ ಶಾಹೀನ್ ಇವರಿಗೆ ಸನ್ಮಾನಿಸಲಾಯಿತು. ಉಪ್ಪುಂದ ಜೇಸಿಐ ಪೂರ್ವಾಧ್ಯಕ್ಷ ಗಿರೀಶ್ ಶ್ಯಾನುಭಾಗ್ ಇವರಿಗೆ ಜೇಸಿ ಸ್ವರ್ಣ ಕಮಲ ಪ್ರಶಸ್ತಿ ಪ್ರದಾನಿಸಲಾಯಿತು. ಜೇಸಿಐ ವಲಯ ೧೫ರ ವಲಯಾಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಿಕೋದ್ಯಮ ಹಾಗೂ ಸಾಮಾಜಿಕ ರಂಗದ ಸೇವೆಯನ್ನು ಗುರುತಿಸಿ ಕುಂದಾಪುರ ಸುದ್ದಿಮನೆ ವಾರಪತ್ರಿಕೆ ಸಂಪಾದಕ ಸಂತೋಷ ಕೋಣಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಚಿನ್ನಪ್ಪ ಗೌಡ, ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪುರಸ್ಕೃತ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ್ ಹಂದೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಿನಿಯರ್ ಮ್ಯಾನೆಜರ್ ಬಾಬುರಾಯ್ ಶೆಣೈ, ಕುಂದಾಪುರದ ಚಾರ್ಟೆಟ್ ಅಕೌಂಟೆಂಟ್ ಪಿ. ಪ್ರಭಾಕರ ಮಯ್ಯ, ಹಿರಿಯ ಪತ್ರಕರ್ತ ಎಸ್. ಜನಾರ್ಧನ, ಉದ್ಯಮಿ ನಾರಾಯಣ ಮೇಲಾಡ್, ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
