ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನಡೆದ ಕುಟುಂಬ ಮಿಲನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯೋಗ ಶಿಕ್ಷಕಿ ಆಶಾ ಶಿವರಾಮ್ ಶೆಟ್ಟಿ ಅವರನ್ನು ಆನ್ಸ್ ಕ್ಲಬ್ ಹಿರಿಯ ಸದಸ್ಯರಾದ ಸಾವಿತ್ರಿ ಕನ್ನಂತ, ರತ್ನಾ ಹೊಳ್ಳ ಅವರು ಸನ್ಮಾನಿಸಿದರು. ಮುಖ್ಯ ಅತಿಥಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸುಂದರ ಕುಂದಾಪುರ ಕುರಿತು ವಿಶೇಷ ಉಪನ್ಯಾಸ ನೀಡಿ, ದಿನೇ ದಿನೇ ಬೆಳೆಯುತ್ತಿರುವ ಕುಂದಾಪುರದ ಸೌಂದರ್ಯವನ್ನು ವೃದ್ಧಿಸುವ ಮತ್ತು ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂಗೀತ ವ್ಯಕ್ತಪಡಿಸಿ ಎಲ್ಲರ ಸಹಕಾರ ಕೋರಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ರೋಟರಿ ಕ್ಲಬ್ ಪೂವಾಧ್ಯಕ್ಷ ಡಾ. ಬಿ. ಆರ್. ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ರೋಟರಿ ಸದಸ್ಯ ನಾಗರಾಜ ಮಯ್ಯ ಅತಿಥಿಗಳನ್ನು ಪರಿಚಯಿಸಿದರು. ಆನ್ಸ್ ಕ್ಲಬ್ ಕಾರ್ಯದರ್ಶಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಲೈಟ್ಹೌಸ್ನ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್ನ ಬೆಳ್ಳಿ ಹಬ್ಬ ಸಮಾರಂಭದ ಸಮಾರೋಪ ಇತ್ತೀಚಿಗೆ ಲೈಟ್ಹೌಸ್ ವಠಾರದ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಸಮೀಪ ಜರಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಮೋದ ಮಧ್ವರಾಜ್ ಮಾತನಾಡಿ, ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ. ಸಂಘ ಸಂಸ್ಥೆಗಳು ಸಕ್ರೀಯವಾಗಿ ಗ್ರಾಮದ ವಿವಿಧ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಸಾಧಕರನ್ನು, ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಶುಭ ಹಾರೈಸಿದರು. ಗೋವಾದ ಉದ್ಯಮಿ ಎಂ.ಎಂ.ಇಬ್ರಾಹಿಂ ವಿದ್ಯಾರ್ಥಿ ವೇತನ ವಿತರಿಸಿದರು. ಗಂಗೊಳ್ಳಿ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಸಾಹಿತಿ ಕೋ.ಶಿವಾನಂದ ಕಾರಂತ್, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ ಶುಭ ಹಾರೈಸಿದರು. ಇದೇ ಸಂದರ್ಭ ಭಾರತೀಯ ಗಡಿ ರಕ್ಷಣಾ…
ಬೈಂದೂರು: ಯಾರೂ ಇಲ್ಲದ ಸಮಯದಲ್ಲಿ ಹಾಡುಹಗಲೇ ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಘಟನೆ ಶಿರೂರು ಗ್ರಾಪಂ ವ್ಯಾಪ್ತಿಯ ನೀರ್ಗದ್ದೆಯಲ್ಲಿ ಮಂಗಳವಾರ ನಡೆದಿದೆ. ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಯ್ಯಾಡಿ ಶಾಖೆಯ ಉದ್ಯೋಗಿ ಚಂದ್ರ ಮೊಗವೀರ ಎಂಬುವರ ಮನೆಗೆ ಮಧ್ಯಾಹ್ನ ನುಗ್ಗಿದ ಕಳ್ಳರು ಪಿಕಾಸಿನಿಂದ ಪ್ರಧಾನ ದ್ವಾರ ಹಾಗೂ ಎರಡು ಕಪಾಟುಗಳ ಬೀಗ ಮುರಿದು ಸಮಾರು 12 ಪವಾನ್ ಚಿನ್ನಾಭರಣ ಹಾಗೂ ರೂ.8 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಚಂದ್ರ ಮೊಗವೀರ ಅವರ ಪತ್ನಿಯೂ ಕೂಡಾ ಶಿಕ್ಷಕಿಯಾಗಿದ್ದು, ಇಬ್ಬರೂ ಕೆಲಸಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಎಂದಿನಂತೆ ಮಧ್ಯಾಹ್ನ ಶಿಕ್ಷಕಿ ಊಟಕ್ಕೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆಯಲ್ಲಿನ ವಸ್ತುಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದ್ದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಭೇಟಿನೀಡಿದ್ದು, ಬೈಂದೂರು ವೃತ್ತ ನೀರಿಕ್ಷಕ ಸುದರ್ಶನ್ ಮುದ್ರಾಡಿ, ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಸ್ಥಳ ಪರೀಶೀಲನೆ ನಡೆಸಿದರು. ಉಡುಪಿಯಿಂದ ಆಗಮಿಸಿದ ಶ್ವಾನದಳ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವದ ಅಂಗವಾಗಿ ಜಿಎಎಸ್ಬಿ ಸಮಾಜ ಬಾಂಧವರು ಬಣ್ಣ ಹಚ್ಚಿಕೊಂಡು ಓಕುಳಿ ಆಡಿದರು. ಈ ಸಂದರ್ಭ ಶ್ರೀ ದೇವರ ಅವಭೃತ ಉತ್ಸವ ಹಾಗೂ ಪಂಚಗಂಗಾವಳಿ ನದಿಯಲ್ಲಿ ಶ್ರೀದೇವರ ಅವಭೃತ ಸ್ನಾನ ನಡೆಯಿತು. ನೂರಾರು ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯ ನಾಗರಿಕರ ಬೇಡಿಕೆಗೆ ಸ್ಪಂದಿಸಿರುವ ಸರಕಾರ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ೧೦೮ ಅಂಬುಲೆನ್ಸ್ ಮಂಜೂರು ಮಾಡಿದೆ. ಗಂಗೊಳ್ಳಿಗೆ ೧೦೮ ಅಂಬುಲೆನ್ಸ್ ಸೇವೆ ಒದಗಿಸುವಂತೆ ಸ್ಥಳೀಯ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಹಾಗೂ ಶ್ರೀ ಬಬ್ಬುಸ್ವಾಮಿ ಸ್ವಯಂಸೇವಾ ಸಂಘ ಬಾವಿಕಟ್ಟೆ ಇವರ ನಿರಂತರ ಒತ್ತಡ ಹಾಗೂ ಪ್ರಯತ್ನದ ಫಲವಾಗಿ ಸರಕಾರ ಈ ಕೊಡುಗೆಯನ್ನು ನಾಗರಿಕರಿಗೆ ನೀಡಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಗಂಗೊಳ್ಳಿಗೆ ಮಂಜೂರಾದ ೧೦೮ ಅಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ ಮಾತನಾಡಿ, ನಾಗರಿಕರು ಅಪಘಾತ ಮೊದಲಾದ ತುರ್ತು ಸಂದರ್ಭದಲ್ಲಿ ಈ ಉಚಿತ ಅಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಬಹುದು. ವಿಶೇಷವಾಗಿ ಗರ್ಭಿಣಿಯರು ಹೆರಿಗೆ ಸಂದರ್ಭ ಆಸ್ಪತ್ರೆಗೆ ದಾಖಲಾಗಲು ೧೦೮ ವಾಹನದ ಪ್ರಯೋಜನ ಪಡೆದುಕೊಳ್ಳಬೇಕು. ಗಂಗೊಳ್ಳಿ ಗ್ರಾಮ ಪಂಚಾಯತ್…
ಅಧ್ಯಕ್ಷರಾಗಿ ವಸಂತಿ ಮೋಹನ ಸಾರಂಗ, ಉಪಾಧ್ಯಕ್ಷರಾಗಿ ರಾಜೇಶ್ ಕಾವೇರಿ ಆಯ್ಕೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆ ದ್ವಿತೀಯ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ವಸಂತಿ ಮೋಹನ ಸಾರಂಗ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜೇಶ್ ಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶಾಕುಂತಲಾ ಪ್ರಕಾಶ್ ಗುಲ್ವಾಡಿ, ವಸಂತಿ ಮೋಹನ ಸಾರಂಗ್ ಹಾಗೂ ರವಿಕಲಾ ಗಣೇಶ್ ಶೇರಿಗಾರ್ ನಾಮಪತ್ರ ಸಲ್ಲಿಸಿದ್ದರೇ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೇಶ್ ಕಾವೇರಿ ಹಾಗೂ ರವಿರಾಜ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಶಾಕುಂತಲಾ ಪ್ರಕಾಶ್ ಗುಲ್ವಾಡಿ ಹಾಗೂ ರವಿಕಲಾ ಗಣೇಶ್ ಶೇರಿಗಾರ್ ಹಾಗೂ ರವಿರಾಜ ಖಾರ್ವಿ ನಾಮಪತ್ರ ಹಿಂಡೆದುದರಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮತ್ತಷ್ಟು ಮಾಹಿತಿಗಳು ಅಪ್ಡೇಟ್ ಆಗಲಿದೆ ನಿರೀಕ್ಷಿಸಿ: ಕಾಂಗ್ರೆಸ್ನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ ಎಂಬುವವರನ್ನು ಕಡಿದು ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಧವ ಪೂಜಾರಿ ಅವರ ಸಂಬಂಧಿ ನರಸಿಂಹ ನಾಯ್ಕ್ (45) ಕೊಲೆಗೈದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಯ ವಿವರ: ನಾವುಂದ ಪಡುವಾಯಿನ ಮನೆ ಎಂಬಲ್ಲಿ ಕಳೆದ ೩ ವರ್ಷಗಳಿಂದ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ ಎಂಬುವವರು ಮೈಸೂರಿನಿಂದ ಮಗಳು ಬರುವ ವೇಳೆಗೆ ಮನೆಯಲ್ಲಿಯೇ ಕೊಲೆಯಾಗಿ ಬಿದ್ದಿದ್ದರು. ಈ ಆಘಾತಕಾರಿ ಪ್ರಕರಣದಿಂದಾಗಿ ಜನತೆಗೆ ನಡುಕ ಹುಟ್ಟಿಸಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಮೂರು ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏನಾಗಿತ್ತು? ಅಂದುರಾತ್ರಿ ೯:೩೦ರ ಸುಮಾರಿಗೆ ಮಾಧವ ಪೂಜಾರಿ ಮನೆಗೆ ತೆರಳಿದ್ದ ಆರೋಪಿ ಹಣಕ್ಕಾಗಿ ಅವರ ಹಲ್ಲೆ ನಡೆಸಿದ್ದಾರೆ. ಹೊಡೆತದಿಂದ ನೆಲಕ್ಕುರುಳಿತ ಅವರನ್ನು ಕತ್ತಿಯಿಂದ ಕಡಿದು ಬಳಿಕ ಹಣ, ಒಡವೆಗಾಗಿ ಮನೆಯನ್ನು ತಡಕಾಡಿದ್ದಾನೆ. ಕೊನೆಗೆ ಏನೂ ಸಿಗದಿದ್ದಾಗ, ಅವರ ಕುತ್ತಿಗೆಯಲ್ಲಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನಿವೃತ್ತ ಪೋಸ್ಟ್ ಮಾಸ್ಟರ್ ಹಾಗೂ ರಂಗ ಕಲಾವಿದ ಹೊಸಾಡಿನ ಜಯರಾಮ ನಾವಡ (೭೪) ಅಲ್ಪ ಕಾಲದ ಅಸೌಖ್ಯದಿಂದಾಗಿ ಕೊನೆಯುಸಿರೆಳೆದರು. ರೂಪರಂಗ ನಾಟಕ ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿ ಅಪಾರ ಜನಮನ್ನಣೆ ಗಳಿಸಿದ್ದ ಜಯರಾಮ ನಾವಡ ಕುಂದೇಶ್ವರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇರಿದಂತೆ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಇವರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಸರಳೀಕೃತ ಮರಳು ನೀತಿ ಜಾರಿಯಾಗಲಿ. ಕೊಲ್ಲೂರು ದೇವಳದ ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೇಂದ್ರದಲ್ಲಿ ಬಿಜೆಪಿ ಪಕ್ಷವೊಂದೇ ಬಹುಮತದಿಂದ ಅಧಿಕಾರಕ್ಕೇರಿ ಉತ್ತಮ ಆಡಳಿತ ನಡೆಸುತ್ತಿರುವುದು ಕಳೆದು ಹೋದ ವ್ಯವಸ್ಥೆಗೊಂದು ಗೌರವ ತಂದಿರುವುದಲ್ಲದೇ, ಕುಸಿದುಹೋದ ಆಡಳಿತ ಯಂತ್ರಕ್ಕೊಂದು ನವಚೈತನ್ಯ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು. ಅವರು ಕೊಲ್ಲೂರು, ಹಟ್ಟಿಯಂಗಡಿ ದೇವಳಕ್ಕೆ ಭೇಟಿ ನೀಡಿದ ಬಳಿ ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರ ನೇತೃತ್ವ ಸರಕಾರ ಅಧಿಕಾರಕ್ಕೆ ಬಂದು 21 ತಿಂಗಳುಗಳಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದೇ ಕೆಲಸ ಮಾಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದು, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಯುವಕರ ಕೌಶಲ್ಯಾಭಿವೃದ್ಧಿ, ರೈತರ ಬೆಳೆಗೆ ಪ್ರೀಮಿಯಂ ಭರಿಸುವುದು, ಕೇಂದ್ರ ರಾಜ್ಯ ಸರಕಾರಗಳ ಸೌವಲತ್ತು ನೇರವಾಗಿ ವ್ಯಕ್ತಿಯ ಬ್ಯಾಂಕ್ ಅಕೌಂಟಿಗೆ ತಲುಪುವ ವ್ಯವಸ್ಥೆ, ಜೀವವಿಮೆ, ಶಿಕ್ಷಣ ಸೇರಿದಂತೆ ಹತ್ತಾರು ಜನಪರ ಯೋಜನೆಗಳಿಗೆ ಕೇಂದ್ರ ಸರಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಾವು ಕಚ್ಚಿದ್ದಕ್ಕೆ ಮದ್ದಿಲ್ಲ. ನಾಯಿಕಡಿತಕ್ಕೂ ಚುಚ್ಚು ಮದ್ದಿಲ್ಲ. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರದಲ್ಲಿ ಔಷಧವಿಲ್ಲ. ಇಲಾಖೆಗೆ ಔಷಧ ಕೊರತೆಯಿದೆಯಾ. ಹಾಗಿದ್ದರೆ ನನ್ನ ಗಮನಕ್ಕೆ ಏಕೆ ತಂದಿಲ್ಲ. ಬಡವರಿಗೆ ಸಿಗೋ ಸೌಲಭ್ಯ ವಂಚನೆಯಾದರೆ ಕ್ಷಮಿಸೋದಿಲ್ಲ. ಹೀಗೆ ಖಡಕ್ಕಾಗಿ ಎಚ್ಚರಿಸಿದವರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ. ಕುಂದಾಪುರ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗಂಗೊಳ್ಳಿ ಆರೋಗ್ಯ ಕೇಂದ್ರದಲ್ಲಿ ಹಾವು ಕಚ್ಚಿದಕ್ಕೆ ಔಷಧ ಸಿಗುತ್ತಿಲ್ಲ ಎಂದು ಜನ ಕಂಪ್ಲೇಂಟ್ ಮಾಡುತ್ತಿದ್ದಾರೆ. ಏಕೀಗೆ ಎಂದು ಪ್ರಶ್ನಿಸಿದರು. ಎಲ್ಲಾ ಆಸ್ಪತ್ರೆಗಳಲ್ಲೂ ಸಮಿತಿ ರಚಿಸಿ, ಕ್ರಮಬದ್ಧವಾಗಿ ಸಭೆ ನಡೆಸಿದ್ದೀರಾ. ಏನಾದರೂ ಕೊರತೆಯಿದ್ದರೆ ಗಮನಕ್ಕೆ ತನ್ನಿ. ಬಡವರ ವಿಷಯದಲ್ಲಿ ರಾಜಿಯಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡಿ, ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಮನೆಗೆ ಹೋಗಿ ಎಂದವರು ವಾರ್ನಿಂಗ್ ಮಾಡಿದರು. ಹಿಂದೆ ಆರೋಗ್ಯ ಇಲಾಖೆ ೨.೫ಲಕ್ಷ ರೂ. ಔಷಧಿ ವಿಕ್ರಯಕ್ಕೆ ಲಿಮಿಟ್ ಹಾಕಿದ್ದು, ಈಗ ೫…
