ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಕನ್ನಡ ಶಾಲೆಗಳಿಗೆ ಬೀಗ ಬೀಳಲು ಪರೋಕ್ಷವಾಗಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯಲ್ಲಿನ ಲೋಪವೇ ಕಾರಣವಾಗುತ್ತಿವೆ ಎಂಬ ಅಂಶ ಗುಟ್ಟಾಗಿ ಉಳಿದಿಲ್ಲ. ಕನ್ನಡ ಶಾಲೆಗಳಿಗೆ ಮಕ್ಕಳ ಬರುವುದಿಲ್ಲ ಎಂಬ ಆತಂಕದ ನಡುವೆ, ಬರುವ ಮಕ್ಕಳಿಗೂ ಸಸೂತ್ರವಾದ ಶೈಕ್ಷಣಿಕ ವಾತಾವಣವನ್ನು ನಿರ್ಮಿಸುವಲ್ಲಿ ಶಿಕ್ಷಣ ಇಲಾಖೆ ಸೋಲುತ್ತಿವೆ ಎಂಬುದಕ್ಕೆ ಇಡುರು-ಕುಂಜ್ಞಾಡಿ ಗ್ರಾಪಂ ವ್ಯಾಪ್ತಿಯ ಕುಗ್ರಾಮವಾದ ಜನ್ನಾಲು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಾಗಿದ್ದವರು ಏಕಾಏಕಿ ವರ್ಗಾವಣೆ ಸಾಕ್ಷೀಕರಿಸಿವೆ. ಬೈಂದೂರು ವಲಯದ ಜನ್ನಾಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ೧೩ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಶಿಕ್ಷಕರೂ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸದ್ದಿಲ್ಲದೇ ವರ್ಗಾವಣೆಗೊಂಡು ಇಲ್ಲಿನ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸದ ಘಟನೆ ತಡವಾಗಿ ಬೆಳಕಿದೆ ಬಂದಿದೆ. ಶಿಕ್ಷಕರು ವರ್ಗಾವಣೆಗೊಂಡ ವಿಚಾರ ಅವರ ಜನ್ನಾಲು ಶಾಲೆಗೆ ಗೈರಾಗುವವರೆಗೂ ಶಾಲೆಯ ಮಕ್ಕಳಿಗಾಗಲಿ, ಎಸ್ಡಿಎಂಸಿ ಸದಸ್ಯರಿಗಾಗಲಿ ತಿಳಿದಿರಲಿಲ್ಲ. ಶಿಕ್ಷಕರು ಏಕೆ ಬರುತ್ತಿಲ್ಲ ಎಂದು ಗೊಂದಲಕ್ಕೆ ಬಿದ್ದ ಎಸ್ಡಿಎಂಸಿ ಸದಸ್ಯರು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಸೈಕ್ಲಿಂಗ್ ಕ್ಲಬ್ ವತಿಯಿಂದ ಜಿಲ್ಲೆಯ ಶಿರೂರಿನಿಂದ ಹೆಜಮಾಡಿವರೆಗೆ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಮಲೈ ನೇತೃತ್ವದಲ್ಲಿ ಸೈಕ್ಲಿಂಗ್ ರಾಲಿ ನಡೆಯಿತು. ಸೈಕ್ಲಿಂಗ್ ಪೂರ್ಣಗೊಳಿಸಿದ ಬಳಿಕ ಎಸ್ಪಿ ಕೆ. ಅಣ್ಣಾಮಲೈ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ, ಫಿಟ್ನೆಸ್ ಮತ್ತು ಮಾನಸಿಕ ಸಾಮರ್ಥ್ಯ ವ್ರದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ಸೈಕ್ಲಿಂಗ್ ನಡೆಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸೈಕ್ಲಿಂಗ್ ಕ್ಲಬ್ ಉಡುಪಿ ವತಿಯಿಂದ ನಡೆದ ರಾಲಿಗೆ ಅದಾನಿ ಯುಪಿಸಿಎಲ್, ಕುಂದಾಪುರ ಪಾರಿಜಾತ ಹೋಟೆಲ್, ಉಡುಪಿಯ ಜಂಕ್ಷನ್ ಬೇಕರಿ ಹಾಗೂ ಸೇಂಟ್ ಆಂಥೊನಿ ಸೈಕಲ್ ಕಂಪೆನಿ ಪ್ರಾಯೋಜಕತ್ವ ವಹಿಸಿದ್ದವು. ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ ಸೈಕ್ಲಿಂಗ್ ಕ್ಲಬ್, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು ೨೮ ಜನ ರಾಲಿಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು. ಈಜುಪಟು ಉಡುಪಿಯ ರೋನನ್…
ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ದೇಗುಲ: ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ.ಹೆಗ್ಡೆ ಪ್ರಧಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉಡುಪಿ ಪಲಿಮಾರು ಮಠ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿವಿಧ ಧರ್ಮದವರು ನೆಲೆಸಿರುವ ಭಾರತದಲ್ಲಿ ಒಂದೊಂದು ಧರ್ಮಿಯರು ಸ್ಥಳವನ್ನು ಪುಣ್ಯಕ್ಷೇತ್ರವೆಂದು ತಿಳಿದು ಸಂದರ್ಶಿಸುತ್ತಾರೆ. ಆದರೆ ಸರ್ವಧರ್ಮಿರ ಸಂದರ್ಶಿಸುವ ವಿದ್ಯಾಸಂಸ್ಥೆ ಮಾತ್ರ ಶೈಕ್ಷಣಿಕ ದೇವಾಲಯಗಳಾಗಿವೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದೇಶಗಳಲ್ಲಿ ಸರಕಾರವೇ ಮಕ್ಕಳಿಗೆ ವಿದ್ಯಾಭ್ಯಾಸ ಹೆಚ್ಚಿನ ಪ್ರೋತ್ಸಾಹ ನೀಡುತ್ತವೆ. ನಮ್ಮ ದೇಶದಲ್ಲಿ ಆ ಪ್ರಮಾಣ ಕಡಿಮೆ. ಸರಕಾರ ಅಕ್ಕಿ, ಬೇಳೆ, ಭಾಗ್ಯ ಕೊಡುವುದಕ್ಕಿಂತ ಉದ್ಯೋಗ ನೀಡುವ ವಿದ್ಯೆ ನೀಡಬೇಕು ಎಂದು ಸಲಹೆ ಮಾಡಿದ ಅವರು, ಅಧ್ಯಯನ, ದೇವರ ಅನುಗ್ರಹ ಜೊತೆ ಪ್ರಾಮಾಣಿಕ ಪ್ರಯತ್ನ ಇದ್ದರೆ ಮೇಲಕ್ಕೇರಲು ಸಾಧ್ಯ. ಕುಂದಾಪುರ ಎಜುಕೇಶನ್ ಸೊಸೈಟಿ ಶೈಕ್ಷಣಿಕ ವಲಯದಲ್ಲಿ ಉತ್ತಮ ಸಾಧನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕಲೆ ಹಾಗೂ ಇನ್ನಿತರ ಕೌಶಲ್ಯಗಳು ಹೆಚ್ಚೆಚ್ಚು ಇದ್ದಷ್ಟು ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವ್ಯವಹಾರ ಅಧ್ಯಯನ ಉತ್ಸವ ಸ್ಪರ್ಧಾ – 16 ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಭೆ ಇದ್ದರೆ ಸಾಲದು. ಅದಕ್ಕೆ ತಕ್ಕಂತೆ ತಯಾರಿ ಮತ್ತು ಅಧ್ಯಯನ ಅಗತ್ಯವಾಗಿರುತ್ತದೆ. ಕೇವಲ ಉದ್ಯೋಗಕ್ಕಾಗಿ ಅಲ್ಲದೇ ಬದುಕನ್ನು ಉತ್ತಮ ರೀತಿಯಲ್ಲಿ ನಡೆಸಲು ಮತ್ತು ಯಶಸ್ವಿಯಾಗಲು ನೀವು ನಿಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ಎನ್ನುವುದು ಬದುಕಿನ ಒಂದು ಭಾಗವಾಗಿದೆ. ನಿಮಗೆ ಕಾಲೇಜು ಉತ್ತಮ ಶಿಕ್ಷಣವನ್ನು ಕೊಡುತ್ತದೆ. ಆದರೆ ಬದುಕೆ ಒಂದು ಅನುಭವ. ಜೀವನದ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಟ್ಟಾಗ ಯಶಸ್ಸು ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲೂರು ಗ್ರಾಮದ ಮೂಡುತಾರಿಬೇರು ಶ್ರೀ ಆದಿಶಕ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು 1ಲಕ್ಷ ರೂ. ಡಿ.ಡಿ ನೀಡಿದ್ದಾರೆ. ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ ಅವರು ದೇವಸ್ಥಾನದ ಸಮಿತಿಯವರಿಗೆ ಡಿ.ಡಿಯನ್ನು ಇತ್ತೀಚೆಗೆ ಹಸ್ತಾಂತರಿಸಿದರು. ಚಿತ್ತೂರು ವಲಯದ ಮೇಲ್ವಿಚಾರಕ ಪ್ರಭಾಕರ ದೇವಸ್ಥಾನದ ಸಮಿತಿಯವರಾದ ನಾಗರಾಜ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಸಹಯೋಗದೊಂದಿಗೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳು ಅಭಿನಯಿಸಿದ ಧಾಂ ಧೂಂ ಸುಂಟರಗಾಳಿ ನಾಟಕ ಯುವ ಮೆರಿಡಿಯನ್ ಒಪೆರಾ ಪಾರ್ಕ್ನಲ್ಲಿ ಪ್ರದರ್ಶನಗೊಂಡಿತು. ಶೇಕ್ಸ್ಫಿಯರ್ನ್ ಟಿಂಪೆಸ್ಟ್ ಆಧಾರಿತ ನಾಟಕ ಧಾಂ ಧೂಂ ಸುಂಟರಗಾಳಿ ನಾಟಕವನ್ನು ಖ್ಯಾತ ಲೇಖಕಿ ವೈದೇಹಿ ರಚಿಸಿದ್ದು, ಕ್ರಿಯಾಶೀಲ ನಿರ್ದೇಶಕ ಜೀವನ್ರಾಂ ಸುಳ್ಯ ರಂಗದ ಮೇಲೆ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳ ನಟನೆ, ರಂಗವಿನ್ಯಾಸ, ಬೆಳಕಿನ ಸಂಯೋಜನೆ, ಸಂಗೀತ, ವಸ್ತ್ರ ವಿನ್ಯಾಸ, ರಂಗತಂತ್ರ, ಜಾದೂ ಸಂಯೋಜನೆ, ಪ್ರಸಾದನ ಎಲ್ಲಾ ವಿಭಾಗಗಳಲ್ಲಿಯೂ ನಾಟಕ ಉತ್ತಮವಾಗಿ ಮೂಡಿಬಂದಿದ್ದು, ಮಕ್ಕಳಿಗೆ ವಿಶೇಷ ಮನೋರಂಜನೆ ನೀಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದಿ. ಕೆ. ಶ್ರೀನಿವಾಸ ರಾವ್ ಮತ್ತು ಪದ್ಮಾವತಿ ಎಸ್. ರಾವ್ ಹೇರಂಜಾಲು ಇವರ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನ ಹಾಗೂ ರಾಮಕ್ಷತ್ರಿಯ ಸಮಾಜ ಕುಂದಾಪುರ, ಬೈಂದೂರು ಇದರ ಆಶ್ರಯದಲ್ಲಿ ಹೇರಂಜಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸದಾನಂದ ಸೇರ್ವೇಗಾರ್ ಅವರನ್ನು ಸನ್ಮಾನಿಸಲಾಯಿತು. ಹೆರಂಜಾಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ. ಪದ್ಮನಾಭ ರಾವ್, ಸುಶೀಲ ಪಾಂಡುರಂಗ ನಾಯಕ್, ವಿಷ್ಣುಮೂರ್ತಿ ಕುಂದಾಪುರ, ರಶ್ಮಿರಾಜ್ ಕುಂದಾಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನರೇಂದ್ರ ಎಸ್ ಗಂಗೊಳ್ಳಿ | ಕುಂದಾಪ್ರ ಡಾಟ್ ಕಾಂ ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗುವುದರ ಮುಖೇನ ಪಿಯುಸಿ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಹೂರಣ ಮತ್ತೆ ಬಟಾಬಯಲಾಗಿದೆ. ಅಸಲಿಗೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ.ಕಳೆದ ಹಲವಾರು ವರುಷಗಳಿಂದ ಪ್ರತೀ ಬಾರಿ ಕೂಡ ದ್ವಿತೀಯ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳು ಬಯಲಾಗುವುದು ಪರೀಕ್ಷಾ ಮಂಡಳಿ ಅದನ್ನು ಅಲ್ಲಗಳೆಯುವುದು ನಡೆದೇ ಇದೆ. ಆಗೊಮ್ಮೆ ಈಗೊಮ್ಮೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪರೀಕ್ಷೆಯನ್ನು ರದ್ದು ಮಾಡಿ ಮರುಪರೀಕ್ಷೆ ಮಾಡಿದ ಸಂದರ್ಭಗಳು ಬಹಳಷ್ಟು ನಡೆದಿವೆ. ಈ ಬಾರಿ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಕೂಡ ಲೀಕ್ ಆಗಿರುವುದು ಪಿಯುಸಿ ಮಂಡಳಿಯಲ್ಲಿ ಏನೊಂದೂ ಸರಿ ಇದ್ದ ಹಾಗೆ ಕಾಣುವುದಿಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ. ಪ್ರಾಯಶಃ ಅವತ್ತು ವಿದ್ಯಾರ್ಥಿಯೊಬ್ಬ ನಿರ್ದೇಶಕರಿಗೆ ನೇರವಾಗಿ ಪ್ರಶ್ನೆಪತ್ರಿಕೆಯನ್ನು ನೀಡಿರದಿದ್ದರೆ ರಸಾಯನಶಾಸ್ತ್ರ ಪರೀಕ್ಷೆಯೂ ಸಾಂಗವಾಗಿ ನಡೆದುಬಿಡುತಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ಹಿಂದೆಯೂ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಗೊತ್ತಿದ್ದೂ ಸಾಕ್ಷ್ಯಗಳು ಲಭ್ಯವಿದ್ದು ಪರೀಕ್ಷೆಗಳು ಮಾಮೂಲಿನಂತೆ ನಡೆದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ.ಎ2: ಇಲ್ಲಿನ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಕಾರ್ಯದರ್ಶಿಯಾಗಿ ರವಿಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರ ಎದುರು ಬನ್ನಾಡಿ ಸೋಮನಾಥ ಹೆಗ್ಡೆ 68 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು ಚಲಾವಣೆಯಾಗ 181ಮತಗಳಲ್ಲಿ ಸೋಮನಾಥ ಹೆಗ್ಡೆ128 ಮತಗಳನ್ನು ಪಡೆದಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೊರದೇಶದಲ್ಲಿದ್ದರೂ ತಾಯ್ನೆಲದ ಸಂಸ್ಕೃತಿ ಪರಂಪರೆ ಭಾಷೆ ಉಳಿಸಿ ಬೆಳೆಸುವ ಉದ್ದೇಶದಿಂದ ಕುವೈಟ್ ರಾಷ್ಟ್ರದಲ್ಲಿನ ಜಿಎಸ್ಬಿ ಸಭಾದವರು ವರ್ಷಂಪ್ರತಿ ಆಚರಿಸುವ ಕೊಂಕಣಿ ಸಾಂಸ್ಕೃತಿಕ ಉತ್ಸವದಲ್ಲಿ ಈ ಬಾರಿ ವಿಶೇಷವಾಗಿ ಸಾಹಿತಿ ಓಂ ಗಣೇಶ್ ಭಾಷಾಂತರಿಸಿದ ’ಬಾಯ್ಲ ಬ್ಹಾಡೆ ಬಾಯ’ ಕೊಂಕಣಿ ಹಾಸ್ಯ ನಾಟಕ ಪ್ರದರ್ಶಿಸಲಿದ್ದಾರೆ. ಅಲ್ಲೇ ನೆಲೆನಿಂತ ಸಮಾಜ ಭಾಂದವರು ಮೇಳೈಸಿ ಪ್ರದರ್ಶಿಸುವ ಈ ಅಕಾಡೆಮಿ ಪುರಸ್ಕೃತ ಕೊಂಕಣಿ ಪ್ರಯೋಗದ ರಂಗ ತಾಲೀಮು ಈಗಾಗಲೆ ಆರಂಭಗೊಂಡಿದ್ದು ಡಾ. ಸುರೇಂದ್ರ ನಾಯಕ್ ಕಪಾಡಿ ಹಾಗೂ ನವೀನ್ ಪ್ರಭು ಜಂಟಿಯಾಗಿ ನಟಿಸಿ ನಿರ್ದೇಶಿಸುತ್ತಿದ್ದಾರೆ. ಸ್ಪೂರ್ತಿ ಶೆಣೈ, ವಿಶ್ವನಾಥ್ ಪ್ರಭು, ಅಂಜಲಿ ಪ್ರಭು, ಶ್ರೀನಿವಾಸ ಪ್ರಭು, ಶಶೀಧರ ಪ್ರಭು, ದಿನೇಶ್ ಪೈ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಕೃತಿಕಾರ ನಟ ಓಂಗಣೇಶ್ ಸಹ ಗೌರವ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏ. 15ರ ಸಂಜೆ ನಾಲ್ಕರಿಂದ ಅಲ್ಲಿನ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ಆರಂಭಗೊಳ್ಳುವ ಈ…
