Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಪದವಿ ಪ್ರದಾನ ಮಾಡಿದರು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಶ್ಮಿ ಶೆಟ್ಟಿ ಅವರು ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರ ಅನುಷ್ಠಾನ: ಕರ್ನಾಟಕದ ಗ್ರಾಮೀಣ ರಾಮನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯಗಳ ಅನುಭವಗಳ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಆಹಾರ ಭದ್ರತೆಗೆ ಸಂಬಂಧಿಸಿದ ಕಾನೂನಿನ ಅನುಷ್ಠಾನವು ಗ್ರಾಮೀಣ ಪ್ರದೇಶಗಳ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳು, ಕಾಯ್ದೆಯ ಅನುಷ್ಠಾನದ ಅನುಭವಗಳು ಹಾಗೂ ಅದರ ಸಾಮಾಜಿಕ ಆಯಾಮಗಳನ್ನು ಅಧ್ಯಯನ ಮಾಡಿರುವುದು ಈ ಸಂಶೋಧನೆಯ ಪ್ರಮುಖ ಅಂಶವಾಗಿದೆ. ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಸರಸು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ “ಹೆಚ್.ಐ.ವಿ.ಏಡ್ಸ್ ಜಾಗೃತಿ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ನಳಿನಾಕ್ಷಿ ಹೆಚ್.ಐ.ವಿ. ಏಡ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ವಿಶೇಷ ಜಾಗೃತಿ ಮೂಡಿಸಿದರು. ನಂತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜ ಎಮ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡೊಮಿನಿಕ್ ಬ್ರಿಗಾಂಝ್, ಸ್ಮಿತಾ, ವಿದ್ಯಾಧರ, ಡಾ. ಸುಮಲತಾ, ಚೈತ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಗೀತಾ ಪ್ರಭು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ (ನೆಂಪು)ಯಲ್ಲಿ ನೆಡದ 2026-27 ನೇ ಸಾಲಿನ ಬೈಂದೂರು ಶೈಕ್ಷಣಿಕ ತಾಲೂಕಿನ 17 ವಯೋಮಾನದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ 12 ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಾಲಕರ ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆಯುವುದರ ಜೊತೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತ್ತು. 17 ರ ವಯೋಮಾನದ ಬಾಲಕರ ವಿಭಾಗ ವಿಜೇತರು:1.ಪ್ರಣಮ್- 1500 ಮೀಟರ್ ಓಟ ಪ್ರಥಮ,800 ಮೀಟರ್ ಪ್ರಥಮ,4*100 ಮೀಟರ್ ರಿಲೇ ಪ್ರಥಮ.2.ನಿತೇಶ್ ಮೊಗವೀರ- 4*400 ಮೀಟರ್ ರಿಲೇ ಪ್ರಥಮ,4*100 ಮೀಟರ್ ರಿಲೇ ಪ್ರಥಮ.3.ನಿತೇಶ್ ಜೆ – 4*100 ಮೀಟರ್ ರಿಲೇ ಪ್ರಥಮ,ತ್ರಿವಿಧ ಜಿಗಿತ ದ್ವಿತೀಯ.4.ಪ್ರೀತಂ-4*400 ಮೀಟರ್ ರಿಲೇ ಪ್ರಥಮ,4*100 ಮೀಟರ್ ರಿಲೇ ಪ್ರಥಮ,ಉದ್ದಜಿಗಿತ ದ್ವಿತೀಯ.5.ರತ್ವೀಶ್ ಆಚಾರ್ಯ- 4*400 ಮೀಟರ್ ರಿಲೇ ಪ್ರಥಮ.6.ಚೇತನ್- ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ತ್ರತೀಯ 17 ರ ವಯೋಮಾನದ ಬಾಲಕಿಯರ ವಿಭಾಗ ವಿಜೇತರು:1.ಶ್ರಾವ್ಯ- 100 ಮೀಟರ್ ಹರ್ಡಲ್ಸ್ ಪ್ರಥಮ,4*100 ಮೀಟರ್ ರಿಲೇ ಪ್ರಥಮ.2.ನಿಧಿಶ್ರೀ-…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ದೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಸಂಸ್ಥೆಗಳ ಆವರಣದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೆಸರಲ್ಲೊಂದಿನ ಕಾರ್ಯಕ್ರಮವನ್ನು ತಂತ್ರಾಡಿಯ ಶ್ರೀ ಚಿಕ್ಕು ಅಮ್ಮ ದೇವಸ್ಥಾನದ ಎದುರುಗಡೆ ಇರುವ ಕೆಸರುಗದ್ದೆಯಲ್ಲಿ ನಡೆಸಲಾಯಿತು. ಎನ್. ಎಸ್. ಎಸ್ ಸ್ವಯಂ ಸೇವಕರು ವಿಶಾಲಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಗ್ರಾಮಸ್ಥರ ಮನಗೆದ್ದರು. ಮಂದಾರ್ತಿ ದೇವಾ ಸಹಕಾರಿ ಸಂಘ, ಮಂದಾರ್ತಿ ಇದರ ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಚಾವಡಿಮನೆ ಉದ್ಘಾಟಿಸಿದರು. ಶ್ರೀ ದುರ್ಗಾಪರಮೇಶ್ವರಿ ದೇವಳದ ಪದವಿಪೂರ್ವ ಕಾಲೇಜು ಮಂದಾರ್ತಿ ಇದರ ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಯುವ ಯಕ್ಷಗಾನ ಪ್ರಸಂಗಕರ್ತ ನಂದೀಶ್ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾl ಕೆ. ಉಮೇಶ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪದವಿ ಪೂರ್ವ ಕಾಲೇಜು ಮಂದಾರ್ತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಯೋಗ ತರಬೇತುದಾರರಾದ ಭಾರತಿ ಎಂ. ಬಿಜೂರು ಅವರಿಗೆ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ರಾಷ್ಟ್ರಮಟ್ಟದ ಯೋಗ ಜ್ಯೋತಿ ಅವಾರ್ಡ್ 2026 ಲಭಿಸಿದೆ. ಶಿಕ್ಷಕಿ ಭಾರತಿ ಎಂ. ಬಿಜೂರು ಅವರಿಗೆ ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಟೌನ್ ಹಾಲ್‌ನಲ್ಲಿ ಆಯೋಜಿಸಿದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ 2026 ಇದರಲ್ಲಿ ಇವರು ಶಾಲೆಯ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ನೀಡಿದ ಯೋಗ ಸಾಧನೆಯನ್ನು ಗುರುತಿಸಿ ಯೋಗ ಜ್ಯೋತಿ ಅವಾರ್ಡ್ ನೀಡಿ ಗೌರವಿಸಲಾಯಿತು. ಇದನ್ನೂ ಓದಿ – ಯೋಗ ಸಂಘಟಕ ಮಂಜುನಾಥ್ ಬಿಜೂರು ಅವರಿಗೆ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್- https://kundapraa.com/?p=103674 .

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಮಂಗಳೂರು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡವು ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪಥಿ ತಂಡವನ್ನು 34–16 ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದ ಆಳ್ವಾಸ್ ತಂಡವು ಸಂಘಟಿತ ದಾಳಿ, ಪರಿಣಾಮಕಾರಿ ರಕ್ಷಣಾ ತಂತ್ರ ಹಾಗೂ ಉತ್ತಮ ತಂಡದ ಹೊಂದಾಣಿಕೆಯ ಮೂಲಕ ಎದುರಾಳಿ ತಂಡದ ಮೇಲೆ ಮೇಲುಗೈ ಸಾಧಿಸಿತು. ವಿಜೇತ ತಂಡದ ಸದಸ್ಯರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ  ಅಭಿನಂದಿಸಿದ್ದಾರೆ. 

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನ ಹಾದಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಮಯಪರಿಪಾಲನೆಯ ಉದ್ದೇಶದಿಂದ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ PCMB ವಿಭಾಗದ ವಿದ್ಯಾರ್ಥಿಗಳ ಶಿಕ್ಷಕ- ಪಾಲಕರ ಸಭೆ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಮಾತುಗಳನ್ನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ಉನ್ನತ ಶಿಕ್ಷಣದ ಆಯ್ಕೆಗಳನ್ನು ಗುರುತಿಸಿಕೊಂಡು ತಮ್ಮ ಗುರಿ ಸಾಧನೆಯತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಸಹಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳ ಮನಸ್ಥಿತಿಯ ಬಗ್ಗೆ ನಾವು ಅರಿತುಕೊಳ್ಳದೆ ಹೋದರೆ ನಮ್ಮ ಉದ್ದೇಶ ಈಡೇರದು ಮಾತ್ರವಲ್ಲದೆ ವಿದ್ಯಾರ್ಥಿಗಳು ತಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಗುರು ಮತ್ತು ತಂದೆ ತಾಯಿಯ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಗಣನಾಥ ಶೆಟ್ಟಿ ಬಿ. ರವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯಾರ್ಥಿಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿ ಸವಾರರು ಗಾಯಗೊಂಡ ಘಟನೆ ಕುಂದಾಪುರ ನಗರದ ಸಂಗಮ್ ರಸ್ತೆಯಲ್ಲಿ ಇತ್ತೀಚಿಗೆ ಸಂಭವಿಸಿದೆ. ಘಟನೆಯಲ್ಲಿ ಬೈಕ್‌ ಸವಾರ ಗಣೇಶ್ ಪ್ರಭು ಗಭೀರ ಗಾಯಗೊಂಡಿದ್ದು, ಎದುರಿನ ಬೈಕಿನ ಅಕ್ಷಿತ್, ಸುಜನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಣೇಶ್ ಪ್ರಭು ಅವರು ಸಂಗಮ್ ಕಡೆಯಿಂದ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಕ್ಷಿತ್ ಎಂಬಾತ ಸುಜನ್ ಅವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಂಗಮ್ ಕಡೆಗೆ ತನ್ನ ಬೈಕ್ ಚಲಾಯಿಸಿಕೊಂಡು ಬಂದು ಗಣೇಶ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಣೇಶ್ ತೀವ್ರ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿವಿಕ್ರಮ ಪೈ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎದುರಿನ ಬೈಕ್‌ ಸವಾರ ಹಾಗೂ ಸಹಸವಾರ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಸಹಸವಾರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಹಳೆಯ ಪಾದರಕ್ಷೆಯನ್ನು ಎಸೆಯುವ ಮೂಲಕ ಪರಿಸರ ಮಾರಕ ಈ ದಿಸೆಯಲ್ಲಿ ಹಳೆಯ ಪಾದರಕ್ಷೆಯ ಒಗ್ಗೂಡಿಸಿ ಮರುಬಳಸುವ ಕಾರ್ಯಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕೋಟದ ಪಂಚವರ್ಣ ಕಛೇರಿಯಲ್ಲಿ  ತಾಲೂಕು ವ್ಯಾಪ್ತಿಯ ಕೋಟದ ಪಂಚವರ್ಣ ಸಂಘಟನೆಯ ಸಂಯೋಜನೆಯೊಂದಿಗೆ ರೋಟರಿ ಸಮುದಾಯದಳ ಕೋಟೇಶ್ವರ,ಹಂಗಾರಕಟ್ಟೆ ದೂಳಂಗಡಿ ಶಾಲೆ,ಚೇತನಾ ಪ್ರೌಢಶಾಲೆ ಮಾಬುಕಳ,ಮಹಿಳಾ ಮಂಡಲ ಪಾಂಡೇಶ್ವರ,ಮಿತ್ರ ಸಂಗಮ ಬೀಜಾಡಿ ಇವರ ಸಹಭಾಗಿತ್ವದಲ್ಲಿ ಉಡುಪಿ ಸಮಾಜಸೇವಕ ಅವಿನಾಶ್ ಕಾಮತ್ ಅವರ ವಿನೂತನ ಯೋಜನೆ ನಡಿಗೆ ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಹಳೆಯ ಪಾದರಕ್ಷೆ ಹಸ್ತಾಂತರಿಸಿ ಮಾತನಾಡಿದರು. ಸಮಾಜಕ್ಕೆ ತಮ್ಮನ್ನು ತಾನು ಸಮರ್ಪಿಸಿಕೊಳ್ಳುವ ಯೋಚನೆ ಹಾಗೂ ಯೋಜನೆ ಅತ್ಯಂತ ಪ್ರಶಂಸನೀಯ ಹಾಗೇ ಪರಿಸರಕ್ಕೆ ಮಾರಕವಾಗುವ ಹಳೆಯ ಪಾದರಕ್ಷೆಯನ್ನು ಸಂಬಂಧಿಸಿದ ಸಂಸ್ಥೆಯ ಮೂಲಕ ನವೀಕರಿಸಿ ಬಡ ಮಕ್ಕಳಿಗೆ ಧಾರೆ ಎರೆಯುವ ಅವಿನಾಶ್ ಕಾಮತ್ ರವರ ಕಲ್ಪನೆ ಹೊಸ ಆಯಾಮಕ್ಕೆ ಮುನ್ನುಡಿ ಬರೆದಿದೆ.ಅಂತಯೇ ಪಂಚವರ್ಣ ಸಂಘಟನೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಜ್ರ ಮಹೋತ್ಸವ ಅಂಗವಾಗಿ  ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗದಲ್ಲಿ  ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಅಂತರ್ ಕಾಲೇಜು  ಯಕ್ಷಗಾನ ಸ್ಪರ್ಧೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಸಮಗ್ರ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಕ್ಷಗಾನ ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ. ಪುರುಷ ವೇಷ – ಪ್ರಥಮ ಅನಂತಕೃಷ್ಣ ನಾವಡ – ತೃತೀಯ ಬಿ ಕಾಂ, ಸ್ತ್ರೀವೇಷ – ಅಶ್ವಿನಿ ಐತಾಳ್- ತೃತೀಯ ಬಿ ಎಸ್ಸಿ , ಹಾಸ್ಯ- ತನ್ಮಯ್- ದ್ವಿತೀಯ ಬಿ ಎಸ್ಸಿ ಬಹುಮಾನ ವಿಜೇತರಾಗಿದ್ದಾರೆ. ಕಾಲೇಜಿನ ತೃತೀಯ ಬಿ.ಎಸ್.ಸಿ ವಿದ್ಯಾರ್ಥಿ ಸಾತ್ಯಕಿ, ತೃತೀಯ ಬಿ.ಕಾಮ್ ನ ವಿದ್ಯಾರ್ಥಿಗಳಾದ ಅನೂಪ್ ಉರಾಳ ಮತ್ತು ವಿದಾತ ಉಡುಪ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಮತ್ತು ಲಲಿತಾ ಕಲಾ ಸಂಘದ ಸಂಯೋಜಕ ಶಶಾಂಕ್ ಪಟೇಲ್,ಕೆಳಮನೆ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು…

Read More