ಕುಂದಾಪುರ: ಇತ್ತೀಚಿಗೆ ಜಿಮ್ಸಸೆಟ್ ಪೂರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಡೆಟ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಜಾಕ್ಸನ್ ಡಿ ಸೋಜಾ ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆ ಯಾಗಿರುತ್ತಾರೆ. ಇವರು ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ನ ಸದಸ್ಯ ಹಾಗೂ ಸತೀಶ ಖಾರ್ವಿ ಶಿಷ್ಯರಾಗಿರುತ್ತಾರೆ.
Author: ನ್ಯೂಸ್ ಬ್ಯೂರೋ
ಬೈಂದೂರು: ಈ ಭಾರಿಯ ಜಿಪಂ, ತಾಪಂ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಸೀಟುಗಳನ್ನು ಗೆದ್ದು ಮತ್ತೆ ಪಂಚಾಯತ್ ಅಧಿಕಾರವನ್ನು ತನ್ನ ತೆಕ್ಕೆಗೆ ತಂದುಕೊಳ್ಳಲಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ತೊಂಡೆಮಕ್ಕಿಯಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸಿದ್ದೇನೆ. ಬೈಂದೂರು ಭಾಗದಲ್ಲಿ ಹಿಂದೆಂದೂ ಆಗದ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಭಾಗದಲ್ಲಿ ಕಾಂಗ್ರೆಸ್ ಜನರಿಗಾಗಿ ಮಾಡಿದ ಕೆಲಸವನ್ನು ನೆನಪಿನಲ್ಲಿಟ್ಟುಕೊಂಡು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು. ಹಾಲಿ ತಾಪಂ ಸದಸ್ಯ ರಾಜು ಪೂಜಾರಿ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಂತ್ರಿಯಾದ ಬಳಿಕ ಬೈಂದೂರು ಭಾಗದಲ್ಲಿ ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಿವೆ. ಕಾಂಗ್ರೆಸ್ ಸರಕಾರ ಬಡವರಿಗೆ ಬಿಪಿಎಲ್ ಕಾರ್ಡ್, ರೈತರ ಸಾಲಮನ್ನ, ಉದ್ಯೋಗ ಖಾತ್ರಿ, ಆಶ್ರಯ ಮನೆ, ಆಶ್ರಯ ಜಾಗ, ಮಕ್ಕಳಿಗೆ, ಬಟ್ಟೆ, ಊಟ,…
ಬೈಂದೂರು: ಇಲ್ಲಿಗೆ ಸಮೀಪದ ಕಿರಿಮಂಜೇಶ್ವರ ಪ್ರವಾಸಿ ತಾಣ ಎದುರಿನ ಮನೆಯೊಂದಕ್ಕೆ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಿರಿಮಂಜೇಶ್ವರದ ಕಮಲಾ ದೇವಾಡಿಗ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೆಂಕಿ ತಗಲು ಈ ಅವಘಡ ಸಂಭವಿಸಿದೆ. ಪಕ್ಕದ ಮನೆಯಲ್ಲಿಯೂ ಯಾರೂ ಇಲ್ಲದ ಕಾರಣ ಬೆಂಕಿ ಹೊತ್ತಿ ಉರಿಯುತ್ತಿದ್ದುದು ತಡವಾಗಿ ತಿಳಿದಿದೆ. ಬೆಂಕಿ ಊರಿಯುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕುಂದಾಪುರದಿಂದ ಅಗ್ನಿಶಾಮಕದಳದ ಸಿಬ್ಬಂಧಿಗಳು ಬಂದು ಬೆಂಕಿ ನಂದಿಸಿದ್ದಾರೆ. ಹೊಸ ಮನೆಯನ್ನು ಕಟ್ಟುತ್ತಿದ್ದರಿಂದ ಅಲ್ಲೇ ಸಮೀಪದಲ್ಲಿ ಗುಡಿಸಲೊಂದನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಇಂದು ಯಾವುದೋ ಕಾರ್ಯದ ನಿಮಿತ್ತ ಕಮಲಾ ದೇವಾಡಿಗ ಹಾಗೂ ಅವರ ಪತಿ ವೆಂಕಟೇಶ್ ಹೊರಗಡೆ ಹೋಗಿದ್ದರೇ, ಅವರ ಮಗಳು ಕಾಲೇಜಿಗೆ ತೆರಳಿದ್ದಳು. ಹೊಸ ಮನೆಯ ಸ್ಲ್ಯಾಪ್ ಹಾಕಲು ಇಟ್ಟದ್ದ ಒಂದೂವರೆ ಲಕ್ಷ ರೂ. ನಗದು, ಚಿನ್ನಾಭರಣ, ಅಂಕಪಟ್ಟಿ ಎಲ್ಲವೂ ಬೆಂಕಿಗೆ ತುತ್ತಾಗಿದೆ. ಸುಮಾರು 7 ಲಕ್ಷ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಬೈಂದೂರು ವಿಶೇಷ ತಹಶೀಲ್ದಾರ್…
ಕುಂದಾಪುರ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಇವರ ಆಶ್ರಯದಲ್ಲಿ ಉಡುಪಿ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಚುಟುಕು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಯುವಕವಿ ಜಗದೀಶ ದೇವಾಡಿಗ ಕುಪ್ಪುಮನೆ, ಮುಳ್ಳಿಕಟ್ಟೆ ಅವರ ೩ನೇ ಕೃತಿ ನಿರ್ಭಯಾ ಕವನ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೋ| ಮೇಟಿ ಮುದಿಯಪ್ಪ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವಕವಿ ಜಗದೀಶ ದೇವಾಡಿಗ ಕುಪ್ಪುಮನೆ, ಮುಳ್ಳಿಕಟ್ಟೆ, ತುಳು ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಧಾರವಾಡದ ಪ್ರಸರಾಂಗದ ನಿರ್ದೇಶಕ ಚನ್ನಬಸವ ಶೆಟ್ರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಘಟಕದ ಅಧ್ಯಕ್ಷ ಎಂ. ಡಿ. ಮುತಾಲಿಕ್ ದೇಸಾಯಿ, ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರೋ ಜಿ. ಯು. ನಾಯಕ್ ಅಂಕೋಲ ಇನ್ನಿತರರು ಉಪಸ್ಥಿತರಿದ್ದರು.
ಕೋಟ: ಶಿಕ್ಷಣ, ಆರೋಗ್ಯ, ರಕ್ತದಾನದಂತಹ ಕಾರ್ಯಕ್ರಮಗಳಿಂದ ಮೊಗವೀರ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ, ರಕ್ತದಾನ ಕಾರ್ಯಕ್ರಮಗಳಿಂದ ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆ ಎಂದು ನಾಮಕರಣಗೊಂಡಿದೆ. ಸಂಘಟನೆಗಳು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರು, ಅದರಿಂದ ಸಮಾಜಕ್ಕೆ ಒಂದಿಷ್ಟು ಕೊಡುಗೆಗಳು ಸಿಗುವಂತಾಗಬೇಕು ಎಂದು ಗೀತಾನಂದ ಪೌಂಡೇಶನ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು. ಅವರು ಸಂಜೆ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಘಟಕ ಸಾಲಿಗ್ರಾಮದ ದಶಮಾನೋತ್ಸವದ ಅಂಗವಾಗಿ ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ ಉಡುಪಿ, ಕರಾವಳಿ ಮಹಾಜನ ಸಂಘ (ರಿ.) ಕೋಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹೊಂಗನಸು 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಸತೀಶ್ ಮರಕಾಲ ವಹಿಸಿದ್ದರು. ಈ ಹಿಂದೆ ಸಂಘಟನೆಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶೇಖರ್ ಮರಕಾಲ, ಸುರೇಶ ಮರಕಾಲ, ಕೃಷ್ಣಮೂರ್ತಿ ಮರಕಾಲ, ಮಹಾಬಲ ಕಾಂಚನ್, ಶ್ರೀನಿವಾಸ ಅಮೀನ್ ಮತ್ತು ಮಹಿಳಾ ಘಟಕದ ಗಿರಿಜಾ, ಜಯಲಕ್ಷ್ಮಿ ಅವರನ್ನು ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಅನಾರೋಗ್ಯ…
ಬೈಂದೂರು: ಗ್ರಾಮೀಣ ಭಾಗದಲ್ಲಿ ಕಾನೂನು ಶಿಬಿರಗಳ ಮೂಲಕ ನಮ್ಮ ಕರ್ತವ್ಯ, ಹಕ್ಕು ಮತ್ತು ರಕ್ಷಣೆಯ ಕುರಿತು ಮಾಹಿತಿ ಪಡೆಯುವುದು ಅವಶ್ಯಕ. ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನವಿರಬೇಕು ಎಂದು ಎರಡನೇ ಹೆಚ್ಚುವರಿ ಕಿರಿಯ ವಿಭಾಗದ ಸಿವಿಲ್ ಮತ್ತು ನ್ಯಾಯಿಕ ದಂಡಾಧಿಕಾರಿ ಜೈಬುನ್ನಿಸಾ ಹೇಳಿದರು. ಯಡ್ತರೆ ಗ್ರಾಪಂ ಸಭಾಂಗಣದಲ್ಲಿ ಬೈಂದೂರು ವೃತ್ತ ವ್ಯಾಪ್ತಿಯಲ್ಲಿ ನ್ಯಾಯಾಂಗ ಹಾಗೂ ಪೋಲಿಸ್ ಇಲಾಖೆ ಸಹಕಾರದಲ್ಲಿ ನಡೆದ ದೂರು ಪ್ರಾಧಿಕಾರದ ಕುರಿತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೆ ಸಮಾನ ನ್ಯಾಯ ನೀಡಬೇಕಾದುದು ನ್ಯಾಯಾಂಗದ ಹೊಣೆ. ಅದಕ್ಕಾಗಿ ಹಲವು ಕಾಯಿದೆಗಳಿವೆ. ಸರಕಾರಗಳು ಮಾಡಿದ ಕಾನೂನುಗಳು ಪುಸ್ತಕದಲ್ಲಿದ್ದರೆ ಸಾಲದು. ಅಗತ್ಯವಿರುವಾಗ ಅನುಷ್ಠಾನಗೊಳ್ಳಬೇಕು. ಅಲ್ಲದೇ ಜನಸಾಮಾನ್ಯರು ಇದನ್ನು ತಿಳಿದುಕೊಳ್ಳಬೇಕು. ಹಾಗಾಗಬೇಕಾದರೆ ಎಲ್ಲರಿಗೆ ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ. ಕಾನೂನಿನ ಅರಿವಿಲ್ಲದೇ ಸಮಾಜದಲ್ಲಿ ಕೆಲವರು ತಪ್ಪುಗಳನ್ನು ಮಾಡುತ್ತಾರೆ. ಇದರ ಬಗ್ಗೆ ಇಂತಹ ಶಿಬಿರಗಳ ಮೂಲಕ ಕಾನೂನು ಕ್ರಮಗಳು, ಅಪರಾಧಗಳಿಗೆ ನೀಡುವ ಶಿಕ್ಷೆಯ ಕುರಿತಾದ ತಿಳುವಳಿಕೆ ನೀಡಬೇಕು ಎಂದರು. ಸಮಾಜದ ಕಟ್ಟಕಡೆಯ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ವತಿಯಿಂದ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್ನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಅಧ್ಯಕ್ಷ ದಿನಕರ ಪಟೇಲ್ ಅವರು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿಯವರಿಗೆ ಕಂಪ್ಯೂಟರನ್ನು ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ನ ಪೂರ್ವಾಧ್ಯಕ್ಷರಾದ ಅಜೇಯ ಹವಲ್ದಾರ್, ಶ್ರೀನಿವಾಸ್, ಕಾರ್ಯದರ್ಶಿ ಸಿ.ಹೆಚ್. ಗಣೇಶ್ ಉಪಸ್ಥಿತರಿದ್ದರು.
ಬೈಂದೂರು: ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾದರೆ ಧರ್ಮ, ಜಾತಿ, ಭಾಷೆಗಳೆಂಬ ಭೇಧಭಾವ ತೊರೆದು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಪ್ರತಿಯೊಬ್ಬರೂ ಮತಚಲಾಯಿಸಬೇಕು ಎಂದು ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು. ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಜೇಸಿಐ ಘಟಕದ ಸಹಯೋಗದಲ್ಲಿ ನಡೆದ ಮತದಾರರ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜೇಸಿಐ ಅಧ್ಯಕ್ಷ ನರಸಿಂಹ ಹಳಗೇರಿ ಮಾತನಾಡಿ, ಹಣದ ಪ್ರಭಾವದಿಂದ ಈಗಿನ ಚುನಾವಣೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ನೆಲೆಯಲ್ಲಿ ಹಣದ ಆಮಿಷಗಳಿಗೆ ಒಳಗಾಗದೇ ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜತೆಗೆ ಆತ್ಮಸಾಕ್ಷಿಯಾಗಿ ಮತಚಲಾಯಿಸಿ ಸಧೃಡ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಯು. ರಾಜಾರಾಮ ಪಡಿಯಾರ್ ಮತ್ತು ಮುಖ್ಯಶಿಕ್ಷಕ ಮಹಾಬಲ ಗೌಡ ನೂತನ ಮತದಾರರಿಗೆ ಶುಭಹಾರೈಸಿದರು. ಗ್ರಾಮ ಲೆಕ್ಕಿಗ ಮಂಜು ಬಿಲ್ಲವ, ರೂಪೇಶ್ ಮತಗಟ್ಟೆ ಅಧಿಕಾರಿ ನರಸಿಂಹ…
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ಕೆಥೋಲಿಕ್ ಸಭಾ ಘಟಕದ ಬೆಳ್ಳಿ ಹಬ್ಬದ ಸಂಭ್ರಮ ವಿಜ್ರಂಭಣೆಯಿಂದ ನಡೆಯಿತು. ಉಡುಪಿ ಬಿಷಫ್ ಜೆರಾಲ್ಡ್ ಐಸಾಕ್ ಉತ್ಸವದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ 25 ವರ್ಷಗಳ ಸುದೀರ್ಘ ಪಯಣ ಹಾಗೂ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಬೆಳ್ಳಿಹಬ್ಬದ ಸವಿನೆನಪಿನ ಪುಸ್ತಕ ಅನಾವರಣಗೊಳಿಸಲಾಯಿತು. ವಿವಿಧ ಚರ್ಚಿನ ಧರ್ಮಗುರುಗಳು ಹಾಗೂ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ಸದಸ್ಯರಿಂದ ನಾಟಕ ಪ್ರದರ್ಶನಗೊಂಡಿತು.
ಬೈಂದೂರು: ಬೈಂದೂರು ಬಂಟರಯಾನೆ ನಾಡವರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಸಮಾರಂಭ ಹಾಗೂ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬೈಂದೂರು ಬಂಟರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಐಎಫ್ಎಸ್ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಪಾಲಕರ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದ ನಿವೃತ್ತ ಮುಖ್ಯಶಿಕ್ಷಕ ವಿ. ಭಾಸ್ಕರ್ ಶೆಟ್ಟಿ ನಾವುಂದ ಇವರಿಗೆ ಬೆಲ್ತೂರು ನಾಗಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಪ್ರೌಢಶಾಲಾ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಿಶೋರ್ ಕುಮಾರ್ ಶೆಟ್ಟಿ, ಯುವ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ, ಉತ್ತಮ ಕೃಷಿಕ ಕೆರಾಡಿ ಮೂಡಗಲ್ಲಿನ ಸೂಲಿಯಣ್ಣ ಶೆಟ್ಟಿ ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ವೇಳೆ ಬೈಂದೂರು ವಲಯದ ಎಲ್ಲಾ ಪ್ರೌಢಶಾಲೆಗಳ 8, 9, 10ನೇ ತರಗತಿಯ ಆರ್ಥಿಕವಾಗಿ…
