Author: ನ್ಯೂಸ್ ಬ್ಯೂರೋ

ಗಂಗೊಳ್ಳಿ : ಕರಾವಳಿ ವಾರಿಯರ್ಸ್ಬೇಲಿಕೇರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಇತ್ತೀಚಿಗೆ ಗಂಗೊಳ್ಳಿಯ ಕೆಎಫ್‌ಡಿಸಿ ವಠಾರದಲ್ಲಿ ನಡೆದ ೩೦ ಗಜಗಳ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ನ್ಯೂ ವೀರಕೇಸರಿ ತಂಡ ಪ್ರಥಮ ಸ್ಥಾನಿಯಾಗಿ ಕರಾವಳಿ ವಾರಿಯರ್ಸ್ ಟ್ರೋಫಿ ಹಾಗೂ ನಗದ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಗುರುಜ್ಯೋತಿ ಗಂಗೊಳ್ಳಿ ತಂಡ ದ್ವಿತೀಯ ಸ್ಥಾನಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯ ದುರ್ಗರಾಜ್ ಪೂಜಾರಿ ವಹಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ತ್ರಾಸಿ ಜಿಪಂ ಸದಸ್ಯೆ ಶೋಭಾ ಪುತ್ರನ್, ಗಂಗೊಳ್ಳಿ ಗ್ರಾಪಂ ಸದಸ್ಯ ಮುಜಾಹಿದ್ ಅಲಿ ನಾಕುದಾ, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ ಖಾರ್ವಿ, ಸಂಘದ ಅಧ್ಯಕ್ಷ ರಾಘವೇಂದ್ರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸುಮಂತ್ ಖಾರ್ವಿ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶ ಖಾರ್ವಿ ವಂದಿಸಿದರು. ತಾಲೂಕಿನ…

Read More

ಕುಂದಾಪುರ: ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಆಶ್ರಯದಲ್ಲಿ ಕಾರವಾರದ ಕೋಡಿಭಾಗನ ಸಾಗರ ದರ್ಶನ ಸಭಾಭವನದಲ್ಲಿ ಇತ್ತೀಚಿಗೆ ಜರಗಿದ 56ನೇ ಮಹಾಸಭೆಯಲ್ಲಿ ಅಪೂರ್ವ ಪ್ರಾಚ್ಯ ವಸ್ತು ಸಂಗ್ರಾಹಕ, ವ್ಯಂಗ್ಯಚಿತ್ರಗಾರ, ಚುಟುಕು ಕವಿ ಹಾಗೂ ಜಿ.ಬಿ.ಕಲೈಕಾರ್ ಗಂಗೊಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಕೆ.ಬಿ.ಖಾರ್ವಿ ಅವರು ಜಿ.ಬಿ.ಕಲೈಕಾರ್ ಅವರನ್ನು ಸನ್ಮಾನಿಸಿ ಮಾತನಾಡಿ ಬಹುಮುಖ ಪ್ರತಿಭೆಯಾಗಿರುವ ಕಲೈಕಾರ್ ಅವರು ವಿಶಿಷ್ಟ ಸಾಧನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸರಕಾರದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಎಸ್.ಎಮ್.ಎಸ್. ಕಲಾ ವೈಭವ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು ಪುರಸ್ಕೃತರಾಗಿದ್ದಾರೆ ಎಂದರು. ಮಹಾಜನ ಸಭಾದ ಹಿರಿಯ ಉಪಾಧ್ಯಕ್ಷ ಮೋಹನ ಬಾನವಾಳಿಕರ್, ಉಪಾಧ್ಯಕ್ಷರುಗಳಾದ ರವಿ ಟಿ.ನಾಯ್ಕ್ ಮುಂಬೈ, ದೇವಪ್ಪ ತಾಂಡೇಲ ಗೋವಾ, ತಿಮ್ಮಪ್ಪ ಎಂ.ಖಾರ್ವಿ ಭಟ್ಕಳ, ಸೂರ್ಯಕಾಂತ ಖಾರ್ವಿ ಹೊನ್ನಾವರ, ಗಣಪತಿ ಎಂ.ಬಾನವಾಳಿಕರ್ ಬೇಲಿಕೇರಿ, ಬಿ.ಎ.ಖಾರ್ವಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ, ಕೋಶಾಧಿಕಾರಿ…

Read More

ಬೈಂದೂರು: ರಾಷ್ಟ್ರೀಯ ಆವಿಷ್ಕಾರ ಅಭಿಯಾನವು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾದ ಒಂದು ಭಾಗವಾಗಿದ್ದು, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಕಲಿಕಾ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಮಾಡಿದೆ ಎಂದು ಜಿಪಂ ಸದಸ್ಯ ಸುರೇಶ ಬಟವಾಡಿ ಹೇಳಿದರು. ಇಲ್ಲಿನ ಮೇಲ್ಪಂಗ್ತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಸರ್ವ ಶಿಕ್ಷಣ ಅಭಿಯಾನದ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ-2016 ಯೋಜನೆಯ ಶಿರೂರು ಕ್ಲಸ್ಟರ್ ವಿಭಾಗದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಹೊಸ ಆವಿಷ್ಕಾರ ಮತ್ತು ಪ್ರಯೋಗಗಳ ಮೂಲಕ ಪ್ರಾಥಮಿಕ ಹಂತದಿಂದಲೇ ಉತ್ಕೃತ ಮಟ್ಟದ ಶಿಕ್ಷಣ ಎಲ್ಲಾ ಮಕ್ಕಳಿಗೂ ನೀಡಬೇಕೆನ್ನುವ ಹಾಗೂ ವೈಜ್ಞಾನಿಕವಾಗಿ ಮಕ್ಕಳು ಬೆಳೆಯಬೇಕೆಂಬ ಪ್ರಧಾನಿ ಮೋದಿಯವರ ಕನಸು ಈ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂದರು. ವೈಜ್ಞಾನಿಕ ಮನೋಭಾವನೆ, ಹೊಸ ಚಿಂತನೆಗಳನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು. ಒಂದು ಶಾಲೆ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಾದ ಯುವಕರು ಲಾರಿಯನ್ನು ಅಡ್ಡಗಟ್ಟಿದ ಘಟನೆ ತಲ್ಲೂರಿನ ಸಮೀಪದ ರಾಜಾಡಿ ಸೇತುವೆಯ ಬಳಿ ನಡೆದಿದೆ. ಪುಣೆಯಿಂದ ಮಂಗಳೂರು ಸಮೀಪದ ನೇರಳಕಟ್ಟೆಯ ಗೋಶಾಲೆ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಚಾಲಕ ಹಾಗೂ ಗೋಶಾಲೆಯ ಮ್ಯಾನೆಜರ್ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಪುಣೆಯಿಂದ ಮಂಗಳೂರು ಕಡೆಗೆ ಹೊರಟ್ಟಿದ್ದ 13 ಗೀರ್ ತಳಿಯ ದನಗಳನ್ನು ಲಾರಿಯು ತಲ್ಲೂರು ರಾಜಾಡಿ ಸೇತುವೆ ಬಳಿ ಬರುತ್ತಿದ್ದಂತೆಯೇ ಸುಮಾರು ನೂರು ಜನರ ಗುಂಪೊಂದು ಲಾರಿಯನ್ನು ಅಡ್ಡಗಟ್ಟಿ ಲಾರಿ ಚಾಲಕ ರಾಘು ಹಾಗೂ ಮ್ಯಾನೆಜರ್ ಅನಂತ ಕಾಮತ್ ಅವರೊಂದಿಗೆ ವಾದಕ್ಕಿಳಿದಿತ್ತು. ದನಗಳನ್ನು ಗೋಶಾಲೆಗೆ ಸಾಗಿಸಲಾಗುತ್ತಿದೆ ಎಂದು ದಾಖಲೆಗಳನ್ನು ತೋರಿಸಿದರೂ ನಂಬದ ಗುಂಪು, ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಲಘು ಲಾಠಿ ಪ್ರಹಾರ ಮಾಡಿದರು. ಘಟನೆಯ ವೇಳೆ ಏಳು ಮಂದಿಯನ್ನು…

Read More

ಗಂಗೊಳ್ಳಿ : ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ಪ್ರಾಯೋಜಿತ ಓಂ ಶ್ರೀ ಮಾತೃ ಮಂಡಳಿ ನೇತೃತ್ವದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ಗೋಧೂಳಿ ಲಗ್ನ ಸುಮೂರ್ಹತದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿತು. ಶಿವ ಪಾರ್ವತಿಯ ವಿಗ್ರಹವನ್ನು ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಬಳಿಯಿಂದ ವೈಭವೋಪಿತ ಪುರಮೆರವಣಿಗೆಯಲ್ಲಿ ತರಲಾಯಿತು. ವೇದಮೂರ್ತಿ ಶ್ರೀಪತಿ ಭಟ್ ಮಂಕಿ ನೇತೃತ್ವದಲ್ಲಿ ಪುರೋಹಿತರು ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಧು ನಿರೀಕ್ಷಣೆ, ಅರಶಿನ ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶಿವನಿಗೆ ಮಧುಪರ್ಕ ಸಮರ್ಪಣೆ, ಮಾಲಾಧಾರಣೆ, ಕನ್ಯಾದಾನ, ಕಂಕಣ ಮಾಂಗಲ್ಯ ಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ ಕಾಣಿಕೆಗಳ ಸಮರ್ಪಣೆ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಭಕ್ತಿ ಶ್ರದ್ಧಾಪೂರ್ವಕ ನೆರವೇರಿಸಲಾಯಿತು. ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ಪ್ರಧಾನ ಕಾರ್ಯದರ್ಶಿ ಜ್ಯೋತಿ, ಕಾರ್ಯದರ್ಶಿ ಶಾಂತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ., ಜಿಪಂ ಸದಸ್ಯೆ ಶೋಭಾ ಪುತ್ರನ್,…

Read More

ಬೈಂದೂರು: ಸೃಷ್ಠಿಯ ದೃಷ್ಠಿಯಲ್ಲಿ ನಾವೆಲ್ಲರೂ ಪ್ರಕೃತಿಯ ಮಕ್ಕಳು. ಹಾಗೆಯೇ ಸಸ್ಯ ಸಂಕುಲಗಳು ಆಯಾಯ ಪ್ರಾಂತ್ಯ, ಪ್ರದೇಶಗಳಲ್ಲಿ ಬೆಳೆಯುತ್ತಿದ್ದರೂ ಅವುಗಳು ಸಿಹಿಯನ್ನು ನೀಡುತ್ತವೆ. ಆದರೆ ಇಂದು ಸಮಾಜದಲ್ಲಿ ಹಿರಿಯರು ವಿಕೃತ ವಿಚಾರಗಳು ಹೆಚ್ಚು ಪ್ರಕಟಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಮಗುವಿನ ಮಗ್ಧ ಮನಸುಗಳು ಇಂತಹ ಕೃತ್ಯಗಳಿಂದ ಆಕರ್ಷಿತರಾಗಿ ಮುಂದೆ ತಪ್ಪುದಾರಿಯಲ್ಲಿ ಸಾಗುವುದರ ಮೂಲಕ ರಾಷ್ಟ್ರವಿರೋಧಿಯಾಗಿ ಬಿಂಬಿಸಲ್ಪಡುತ್ತಾನೆ ಎಂದು ನಂದಗೋಕುಲ ಶಿಶುಮಂದಿರದ ವ್ಯವಸ್ಥಾಪಕ ಪ್ರೇಮಾನಂದ ಶೆಟ್ಟಿ ಕಟ್ಗೇರಿ ಹೇಳಿದರು. ಅರಮಕೋಡಿ ಶ್ರೀ ಈಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ ಉಪ್ಪುಂದೋತ್ಸವದಲ್ಲಿ ಮಗು ಮತ್ತು ಸಂಸ್ಕಾರಯುಕ್ತ ಶಿಕ್ಷಣ ಹಾಗೂ ರಾಷ್ಟ್ರ ದೇವೋಭವದ ಕುರಿತು ಉಪನ್ಯಾಸ ನೀಡಿದರು. ಸಂಸ್ಕಾರದ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುವುದರಿಂದ ಮೊದಲು ತಾಯಂದಿರಿಗೆ ತಯಾರು ಮಾಡಬೇಕು. ಬಾಲ್ಯದಲ್ಲಿ ಮಕ್ಕಳ ಮನಸ್ಸಿನೊಳಗೆ ಪ್ರಜ್ಞೆ ಮೂಡಿಸುವ ವಿವೇಕವನ್ನು ತುಂಬುವುದನ್ನು ಬಿಟ್ಟು, ಸ್ವಾಭಾವಿಕ ಕಲಿಕೆಯ ಅವಕಾಶ ಕೊಡದೇ ಅವರ ಭಾವನೆಗಳಗೆ ವಿರೋಧವಾಗಿ ಬೆಳೆಸುವುದರಿಂದ ರಾಷ್ಟ್ರದ್ರೋಹಿಯಾಗಲು ಪರೋಕ್ಷವಾಗಿ ಆಸ್ಪದ ನೀಡಿದಂತಾಗುತ್ತದೆ. ಜಾತಿ, ಧರ್ಮದ ವಿಷಬೀಜ ಬಿತ್ತಿ ಮುಗ್ಧ…

Read More

ಗಂಗೊಳ್ಳಿ : ದೇವರಿಗೆ ಭಕ್ತಿ ಪ್ರದಾನವೇ ಹೊರತು ನಾವು ಅರ್ಪಿಸುವ ವಸ್ತುಗಳಲ್ಲ. ದೇವರನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಸ್ತುತಿಸಿ ಭಜಿಸಿದರೆ ದೇವರು ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಭಜನೆಯಿಂದ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಲು ಸಾಧ್ಯವಿದೆ. ಭಜನೆಯು ದೇವರ ಮತ್ತು ಮನುಷ್ಯರ ನಡುವಿನ ಸೇತುವೆಯಾಗಿ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಭಜನೆಯಿಂದ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸಿ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಗಂಗೊಳ್ಳಿ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿನ ಜಾತಿ ಧರ್ಮಗಳ ನಡುವಿನ ಗೊಂದಲಗಳಿಂದ ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿ ಧಾರ್ಮಿಕ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಸಂಜೆ ಹೊತ್ತು ಪ್ರತಿ ಮನೆ ಮನೆಗಳಲ್ಲಿ ಭಜನೆ ನಡೆದು ಯುವ ಜನರಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚುವಂತೆ ಮಾಡುವ ಮೂಲಕ ಸಮಾಜ ಮುನ್ನಡೆಸಬೇಕು…

Read More

ಉಪ್ಪುಂದ: ಇಲ್ಲಿನ ದೇವಾಡಿಗ ಸಂಘದ ಆಶ್ರಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗೆ ಆಯ್ಕೆಯಾದ ಸಮುದಾಯದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಬಿ.ಎ. ಮಂಜು ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಖಂಬದಕೋಣೆ ಕ್ಷೇತ್ರದಿಂದ ಜಿಪಂಗೆ ಆಯ್ಕೆಯಾದ ಗೌರಿ ದೇವಾಡಿಗ, ಹೆಮ್ಮಾಡಿ ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ರಾಜು ದೇವಾಡಿಗ ತ್ರಾಸಿ, ಉಪ್ಪುಂದ ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ಪ್ರಮೀಳಾ ದೇವಾಡಿಗ, ಬೀಜೂರು ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ಜಗದೀಶ ದೇವಾಡಿಗ, ಯಡ್ತರೆ ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ಸುಜಾತ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಅಥಿತಿಗಳಾಗಿ ಯು. ಧರ್ಮಪಾಲ ದೇವಾಡಿಗ ಮುಂಬೈ, ಮೋಹನದಾಸ ಹಿರಿಯಡಕ, ನಾಗರಾಜ ಡಿ ಪಡುಕೋಣೆ, ಅಣ್ಣಯ್ಯ ಶೇರಿಗಾರ್, ಜನಾರ್ದನ ದೇವಾಡಿಗ ಬಾರ್ಕೂರು, ಯು. ಎ. ಮಂಜು ದೇವಾಡಿಗ, ಉಪಸ್ಥಿತರಿದ್ದರು. ಚಂದ್ರ ದೇವಾಡಿಗ ಸ್ವಾಗತಿಸಿ, ಮಂಜುನಾಥ ದೇವಾಡಿಗ ವಂದಿಸಿದರು. ನಾರಾಯಣರಾಜು ಕಾರ್ಯಕ್ರಮ ನಿರೂಪಿಸಿದರು.

Read More

ಗಂಗೊಳ್ಳಿ : ಕೆಲಸದ ಮೇಲೆ ಇರುವ ಆಸಕ್ತಿ ಮತ್ತು ಶ್ರದ್ಧೆ ಎರಡೂ ಕೂಡ ವ್ಯಕ್ತಿಯನ್ನು ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುವಂತೆ ಮಾಡುತ್ತದೆ.ಒಳ್ಳೆಯತನ ಸಾವಿರಾರು ಸ್ನೇಹಿತರನ್ನು ಸೃಷ್ಟಿಸಬಲ್ಲುದು. ವ್ಯಕ್ತಿಯ ಶ್ರೇಷ್ಠ ಮೌಲ್ಯದಿಂದ ಸಂಸ್ಥೆಯ ಗೌರವ ಘನತೆಗಳು ಹೆಚ್ಚುತ್ತವೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ. ನಾಯಕ್ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸತತ ಮೂವತ್ತೆಂಟು ವರುಷಗಳ ಕಾಲ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿ, ಕಳೆದ ಎರಡು ವರುಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸೇವಾನಿವೃತ್ತರಾದ ರಮಾಕಾಂತ್ ಎನ್ ರೇವಣ್ ಕರ್ ಅವರನ್ನು ಬೀಳ್ಗೊಡುವ ಸಮಾರಂಭದಲಿ ಅವರನ್ನು ಅಭಿನಂದಿಸಿ ಮಾತನಾಡಿದರು. ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಕಾರ್ಯದರ್ಶಿ ಹೆಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯದ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಅಧ್ಯಕ್ಷರಾದ ಡಾ.ಕಾಶೀನಾಥ ಪೈ , ಕಛೇರಿ ಸಿಬ್ಬಂದಿ ವರ್ಗದವರು ಉಪನ್ಯಾಸಕ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಾಹಿತಿ ಕೋ. ಶಿವಾನಂದ ಕಾರಂತ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹತ್ತಾರು ಶಿವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆಗೆ ಭಕ್ತಿ ಭಾವದಿಂದ ಜೋರಾಗಿಯೇ ನಡೆಯುತ್ತಿದೆ. ಸಹಸ್ರಾರು ಭಕ್ತರು ಈಶ್ವರ ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶ್ರೀ ದೇವರಿಗೆ ನವಿಸಿ ಶಿವಸ್ತುತಿ, ಶಿವನಾಮ ಪಾರಾಯಣದಿಂದ ಪುನಿತರಾದರೇ, ಉಪವಾಸವನ್ನು ಆಚರಿಸಿ ಕೃತಾರ್ಥರಾದರು. ಶಿವರಾತ್ರಿಯ ಅಂಗವಾಗಿ ಬೈಂದೂರು ವಣಕೊಡ್ಲುವಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅಪೂರ್ವ ಅವಕಾಶವಿದ್ದರೇ ಗುಜ್ಜಾಡಿಯ ಗುಹೇಶ್ವರ ದೇವಾಲಯದಲ್ಲಿ ಗುಹೆಯ ಒಳಗೆ ದೇವರ ದರ್ಶನ ಪಡೆಯವ ಅವಕಾಶ ಭಕ್ತರದ್ದಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು ಐತಿಹಾಸಿಕ ಶ್ರೀ ಸೇನೇಶ್ವರ ದೇವಾಲಯ, ಪಡುವರಿಯ ಶ್ರೀ ಸೋಮೇಶ್ವರ ದೇವಾಲಯ, ಕಿರಿಮಂಜೇಶ್ವರದ ಶ್ರೀ ಅಗಸ್ತೇಶ್ವರ ದೇವಾಲಯ, ಹೆರಂಜಾಲಿನ ಶ್ರೀ ಗುಡೆಮಹಾಲಿಂಗೇಶ್ವರ ದೇವಾಲಯ, ಮರವಂತೆ ಶ್ರೀ ಗಂಗಾಧರೇಶ್ವರ ದೇವಾಲಯ, ಗಂಗೊಳ್ಳಿಯ ಶ್ರೀ ವೀರಶೈವ ದೇವಸ್ಥಾನ, ಶ್ರೀ ಇಂದುಧರ ದೇವಾಲಯ, ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಾಲಯ, ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕುಂದಾಪುರದ ಶ್ರೀ ಕುಂದೇಶ್ವರ ದೇವಾಲಯ, ಶ್ರೀ ಕೊಟೇಶ್ವರ ಕೋಟಿಲಿಂಗೇಶ್ವರ…

Read More