ಕೋಟ: ಇಲ್ಲಿನ ಶ್ರೀ ಮುರಳೀದರ ಕೃಷ್ಣ ದೇವಸ್ಥಾನದಲ್ಲಿ ಮುಂಜಾನೆ ವಿಶೇಷ ಪಂಚಾಮೃತ,ಸಿಯಾಳ ಅಭಿಷೇಕ ನಡೆಯಿತು. ಮಧ್ಯಾಹ್ನ ಶ್ರೀ ಶ್ರೀ ಸುಧೀಂದ್ರ ತೀರ್ಥ ಪಾದುಕೆಗೆ ಪಾದ ಪೂಜೆ, ಸುಧೀಂದ್ರ ಅಷ್ಟೋತ್ತರ, ಪುರ್ಪಾರ್ಚನೆ ಜರಗಿತು. ಸಂಜೆ ಭಜನೆ, ಸ್ತೋತ್ರಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ, ಪಾದುಕೆ ಸಹಿತ ಉತ್ಸವ ನಡೆಯಿತು.
Author: ನ್ಯೂಸ್ ಬ್ಯೂರೋ
ಬೈಂದೂರು: ಬಿಜೂರು ಗ್ರಾಮದ ಬವಳಾಡಿಯ ವಿವಾಹಿತ ಮಹಿಳೆ ವಿದ್ಯಾಶ್ರೀ (22) ಶುಕ್ರವಾದಿಂದ ನಾಪತ್ತೆಯಾದ ಘಟನೆ ಕುರಿತು ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಬೆಳಗ್ಗೆ 9:30ಕ್ಕೆ ಅಲ್ಬಾಡಿ ಗ್ರಾಮದ ಆರ್ಡಿಯಲ್ಲಿರುವ ತನ್ಮ ಗಂಡನ ಮನೆಗೆ ಹೋಗುವುದಾಗಿ ತನ್ನ ತವರಿನಲ್ಲಿ ತಿಳಿಸಿ ಹೋಗಿದ್ದರು. ಆದರೆ ರಾತ್ರಿಯಾದರೂ ತಮ್ಮ ಮನೆಗೆ ಬಾರದ ಪತ್ನಿಯನ್ನು ಗಂಡ ಸಂತೋಷ್ ಶೆಟ್ಟಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಕಾರ್ಯವ್ಯಾಪ್ತಿಯಿಂದ ಹೊರಗಿತ್ತು. ಬವಲಾಡಿ ಆಕೆಯ ತವರುಮನೆಯಲ್ಲಿ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗದ ಹಿನ್ನೆಯಲ್ಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಕಪ್ಪು ಪ್ಯಾಂಟ್ ಕೆಂಪು ಚೂಡಿದಾರ ಧರಿಸಿರುವ ಇವರು ಗೋಧಿ ಮೈಬಣ್ಣ ಹೊಂದಿದ್ದಾರೆ. ಚಿನ್ನದ ಕರಿಮಣಿ, ಕೈಬಳೆ ಹಾಗೂ ಓಲೆ ಧರಿಸುವ ವಿದ್ಯಾಶ್ರೀಯವರನ್ನು ಯಾರಾದರೂ ಗುರುತಿಸಿದಲ್ಲಿ ಬೈಂದೂರು ಠಾಣೆಗೆ (08254-251033) ತಿಳಿಸುವಂತೆ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ಪಂಚಾಯತ್‌ನ ಬೈಂದೂರು ತಾಪಂ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ವನಜ ಭಾಸ್ಕರ್ ಸ್ಪರ್ಧಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ತಗ್ಗರ್ಸೆಯಲ್ಲಿ ನೆಲೆಸಿರುವ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರಿಗೆ ಸಾಮಾಜಿಕ ಬದುಕಿನ ಅನುಭವಿದೆ. ನವೋದಯ ಸ್ವ ಸಹಕಾಯ ಗುಂಪಿನ ಅಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಲೇಖನ| ಫೆ. 5, 2016 ಬೈಂದೂರು: ಎಸ್ ರಾಜು ಪೂಜಾರಿ. ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ಕಳೆದ 27 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡ ಅನುಭವಿ ರಾಜಕಾರಣಿ, ಸಹಕಾಾರಿ ಧುರೀಣ. ರಾಜಕೀಯ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ತನ್ನದೇ ಆದ ಹೆಸರು ಗಳಿಸಿರುವ ರಾಜು ಪೂಜಾರಿ ಅವರು ಬೈಂದೂರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ದೂರಗಾಮಿ ಯೋಚನೆಯ ನಾಯಕ. ನೇರ-ನಿಷ್ಠುರ ವ್ಯಕ್ತಿತ್ವ, ಹಗಲಿರುಳೆನ್ನದೇ ಜನಸೇವೆ ಹಾಗೂ ಸಂಘಟನಾ ಚಾತುರ್ಯದಿಂದ ಬೈಂದೂರಿನ ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ತಂದೆ ದಿ. ರಾಮ ಪೂಜಾರಿ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಸೇವೆಸಲ್ಲಿಸುತ್ತಾ ಬಂದಿದ್ದರಿಂದ ಪ್ರಭಾವಿತರಾಗಿದ್ದ ರಾಜು ಪೂಜಾರಿ ಅವರ, ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ತುಡಿತಕ್ಕೆ ಅಂದಿನ ಶಾಸಕ ದಿ. ಜಿ. ಎಸ್. ಆಚಾರ್ಯ ಅವರೊಂದಿಗಿನ ಒಡನಾಟದಿಂದ ಪ್ರೇರಣೆಯಾಯಿತು. ಬಿಕಾಂ ಪದವಿ ಪಡೆದ ಬಳಿಕ ಸಾಮಾಜಿಕ ರಂಗದಲ್ಲಿ ನೇರವಾಗಿ ಧುಮುಕಿ ಜನಸೇವೆಗಿಳಿದಿದ್ದರು. ತನ್ನ ನಾಯಕತ್ವ ಗುಣ ಹಾಗೂ ಸಂಘಟನಾ ಚಾತುರ್ಯದಿಂದಲೇ…
ಕುಂದಾಪುರ: ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿ ಹುತಾತ್ಮರಾದವರನ್ನು ಸ್ಮರಿಸಿ ಗೌರವ ಸಲ್ಲಿಸುವುದು ದೇಶದ ಪ್ರತಿ ಪ್ರಜೆಯ ಕರ್ತವ್ಯ. ಅವರ ತ್ಯಾಗ ಬಲಿದಾನಗಳಿಂದಾಗಿ ಇಂದು ನಾವು ದೇಶದಲ್ಲಿ ನೆಮ್ಮದಿಯಿಂದ ಬದುಕುವಂತಾಗಿದೆ. ಅದರ ಪ್ರತಿಯೊಬ್ಬರಿಗೂ ನೆನಪಿಸುವಂತಾಗಬೇಕು ಎಂದು ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ ಹೇಳಿದರು. ಕುಂದಾಪುರದ ಗಾಂಧಿ ಪಾರ್ಕ್‌ನಲ್ಲಿ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ, ಪೊಲೀಸ್ ಠಾಣೆ ಕುಂದಾಪುರ, ಲಯನ್ಸ್ ಕ್ಲಬ್ ಹಂಗಳೂರು ಹಾಗೂ ಬಂಡಿಕಡು ಬೊಬ್ಬರ್ಯ ಸೇವಾ ಸಂಘ ಕೋಟೇಶ್ವರದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು. ಉದ್ಯಮಿ ಕೆ.ಆರ್. ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನಿರೀಕ್ಷಕ ನಾಸೀರ್ ಹುಸೇನ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬಂಡಿಕಟು ಬೊಬ್ಬರ್ಯ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ನೆಹರು ಯುವಕೇಂದ್ರದ ಜಿಲ್ಲಾ ಸಲಹೆಗಾರ ನರಸಿಂಹ ಗಾಣಿಗ ಸ್ವಾಗತಿಸಿ, ವಕೀಲ ರಾಘವೇಂದ್ರ ಚರಣ ನಾವಡ ನಿರೂಪಿಸಿದರು.
ಬೈಂದೂರು: ಕಾರ್ನಾಟಕ ಪ್ರೌಢ ಶಿಕ್ಷಣ ಪರಿಕ್ಷಾಮಂಡಳಿ ಬೆಂಗಳೂರು ಇತ್ತೀಚಿಗೆ ನಡೆಸಿದ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಚಾರಾ ಜವಹಾರ್ ನವೋದಯ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ಎಂ. ವಿ. ತೇಜಸ್ವಿನಿ 518 ಅಂಕ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಇವರು ಯೋಗ ಶಿಕ್ಷಕ ಮಂಜುನಾಥ ಎಸ್. ಬಿಜೂರು ಹಾಗೂ ಭಾರತಿ ಎಂ ಬಿಜೂರು ಇವರ ಪುತ್ರಿಯಾಗಿದ್ದು, ಕೋಟೇಶ್ವರದ ಚಿತ್ರ ಕಲಾ ಶಿಕ್ಷಕ ಬೋಜು ಹಾಂಡ ಇವರು ಪರೀಕ್ಷಾ ಪೂರ್ವ ಚಿತ್ರ ಕಲಾ ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅದು ಕಾಂಗ್ರೆಸ್ ಕಾರ್ಯಕರ್ತರ ಸಭೆ. ಸಭೆ ಆರಂಭಕ್ಕೂ ಮೊದಲೇ ಸ್ವಇಚ್ಛೆಯಿಂದ ಅಲ್ಲಿಗೆ ಯಡ್ತರೆ ಗ್ರಾಪಂ ಸದಸ್ಯೆ ಆಶಾ ಕಿಶೋರ್ ಬಂದಿದ್ದರು. ನೆರದಿದ್ದ ಸಭಿಕರಿಗೂ ಇವರ ಆಗಮನ ಆಶ್ಚರ್ಯ ತಂದಿತ್ತು. ಸಭೆ ಆರಂಭಗೊಳ್ಳುತ್ತಿದ್ದಂತೆ ಅವರ ಬಂದ ಕಾರಣವೂ ತಿಳಿದು ಹೋಯಿತು. ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಇರಾದೆ ತೋರಿರುವುದು ಸ್ಪಷ್ಟವಾಗಿತ್ತು. ಮೊದಲ ಸುತ್ತಿನ ಮಾತುಕತೆ ನಡೆದಿದ್ದರಿಂದ ಕಾಂಗ್ರೆಸ್ ನಾಯಕರುಗಳು ಮೊದಲಿಗೆ ವೇದಿಕೆಗೆ ಆಹ್ವಾನಿಸಿ ಅವರನ್ನು ಕುರಿಸಿ ಬಳಿಕ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರೇ ಕಾಂಗ್ರೆಸ್ ಶಾಲು ಹಾಕಿ, ಹೂ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಕಾರ್ಯಕ್ರಮ ಮುಗಿದು ಒಂದು ಗಂಟೆಯೂ ಆಗಿಲ್ಲ. ಆಗಲೇ ಬಿಜೆಪಿ ವಯಲದಲ್ಲಿ ದೊಡ್ಡ ಚರ್ಚೆ ಆರಂಭಗೊಂಡಿತ್ತು. ಬಿಜೆಪಿ ಬೆಂಬಲಿತ ಹಾಲಿ ಗ್ರಾಪಂ ಸದಸ್ಯೆಯ ಈ ದಿಢಿರ್ ನಿರ್ಣಯ ಪಕ್ಷದ ಮುಖಂಡರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ಮತ್ತೆ ಆಪರೇಷನ್ ಕಮಲ ಶುರು. ಆಶಾ ಕಿಶೋರ್ ಅವರ ಮನೆಗೆ ದೌಡಾಯಿಸಿದ ಬೈಂದೂರು ಬಿಜೆಪಿ ಮುಖಂಡರು ಸ್ವಪಕ್ಷಕ್ಕೆ ಮರಳುವಂತೆ…
ಕುಂದಾಪುರ: ಇತ್ತೀಚಿಗೆ ಜಿಮ್ಸಸೆಟ್ ಪೂರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಡೆಟ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಜಾಕ್ಸನ್ ಡಿ ಸೋಜಾ ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆ ಯಾಗಿರುತ್ತಾರೆ. ಇವರು ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್‌ನ ಸದಸ್ಯ ಹಾಗೂ ಸತೀಶ ಖಾರ್ವಿ ಶಿಷ್ಯರಾಗಿರುತ್ತಾರೆ.
ಬೈಂದೂರು: ಈ ಭಾರಿಯ ಜಿಪಂ, ತಾಪಂ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಸೀಟುಗಳನ್ನು ಗೆದ್ದು ಮತ್ತೆ ಪಂಚಾಯತ್ ಅಧಿಕಾರವನ್ನು ತನ್ನ ತೆಕ್ಕೆಗೆ ತಂದುಕೊಳ್ಳಲಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ತೊಂಡೆಮಕ್ಕಿಯಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸಿದ್ದೇನೆ. ಬೈಂದೂರು ಭಾಗದಲ್ಲಿ ಹಿಂದೆಂದೂ ಆಗದ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಭಾಗದಲ್ಲಿ ಕಾಂಗ್ರೆಸ್ ಜನರಿಗಾಗಿ ಮಾಡಿದ ಕೆಲಸವನ್ನು ನೆನಪಿನಲ್ಲಿಟ್ಟುಕೊಂಡು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು. ಹಾಲಿ ತಾಪಂ ಸದಸ್ಯ ರಾಜು ಪೂಜಾರಿ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಂತ್ರಿಯಾದ ಬಳಿಕ ಬೈಂದೂರು ಭಾಗದಲ್ಲಿ ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಿವೆ. ಕಾಂಗ್ರೆಸ್ ಸರಕಾರ ಬಡವರಿಗೆ ಬಿಪಿಎಲ್ ಕಾರ್ಡ್, ರೈತರ ಸಾಲಮನ್ನ, ಉದ್ಯೋಗ ಖಾತ್ರಿ, ಆಶ್ರಯ ಮನೆ, ಆಶ್ರಯ ಜಾಗ, ಮಕ್ಕಳಿಗೆ, ಬಟ್ಟೆ, ಊಟ,…
ಬೈಂದೂರು: ಇಲ್ಲಿಗೆ ಸಮೀಪದ ಕಿರಿಮಂಜೇಶ್ವರ ಪ್ರವಾಸಿ ತಾಣ ಎದುರಿನ ಮನೆಯೊಂದಕ್ಕೆ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಿರಿಮಂಜೇಶ್ವರದ ಕಮಲಾ ದೇವಾಡಿಗ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೆಂಕಿ ತಗಲು ಈ ಅವಘಡ ಸಂಭವಿಸಿದೆ. ಪಕ್ಕದ ಮನೆಯಲ್ಲಿಯೂ ಯಾರೂ ಇಲ್ಲದ ಕಾರಣ ಬೆಂಕಿ ಹೊತ್ತಿ ಉರಿಯುತ್ತಿದ್ದುದು ತಡವಾಗಿ ತಿಳಿದಿದೆ. ಬೆಂಕಿ ಊರಿಯುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕುಂದಾಪುರದಿಂದ ಅಗ್ನಿಶಾಮಕದಳದ ಸಿಬ್ಬಂಧಿಗಳು ಬಂದು ಬೆಂಕಿ ನಂದಿಸಿದ್ದಾರೆ. ಹೊಸ ಮನೆಯನ್ನು ಕಟ್ಟುತ್ತಿದ್ದರಿಂದ ಅಲ್ಲೇ ಸಮೀಪದಲ್ಲಿ ಗುಡಿಸಲೊಂದನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಇಂದು ಯಾವುದೋ ಕಾರ್ಯದ ನಿಮಿತ್ತ ಕಮಲಾ ದೇವಾಡಿಗ ಹಾಗೂ ಅವರ ಪತಿ ವೆಂಕಟೇಶ್ ಹೊರಗಡೆ ಹೋಗಿದ್ದರೇ, ಅವರ ಮಗಳು ಕಾಲೇಜಿಗೆ ತೆರಳಿದ್ದಳು. ಹೊಸ ಮನೆಯ ಸ್ಲ್ಯಾಪ್ ಹಾಕಲು ಇಟ್ಟದ್ದ ಒಂದೂವರೆ ಲಕ್ಷ ರೂ. ನಗದು, ಚಿನ್ನಾಭರಣ, ಅಂಕಪಟ್ಟಿ ಎಲ್ಲವೂ ಬೆಂಕಿಗೆ ತುತ್ತಾಗಿದೆ. ಸುಮಾರು 7 ಲಕ್ಷ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಬೈಂದೂರು ವಿಶೇಷ ತಹಶೀಲ್ದಾರ್…
