Author: ನ್ಯೂಸ್ ಬ್ಯೂರೋ

ಆರೋಪ ಮಾಡಲು ಹೋಗಿ ಪೇಚಿಗೆ ಸಿಲುಕಿದ ರಾಜಕೀಯ ನಾಯಕರು. ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಮಹಿಳೆಯರೇ ನೀವು ಸೀರೆ ಕೊಳ್ಳಲು ಹೋಗುತ್ತಿದ್ದೀರಾ? ಸ್ವಲ್ಪ ಹುಷಾರಾಗಿ ಕೊಂಡು ಬನ್ನಿ. ಯಾಕಂದ್ರೆ ಬೈಂದೂರಿನಲ್ಲಿ ಸೀರೆ ಕೊಂಡರೂ ಅದೂ ರಾಜಕೀಯ ಪಕ್ಷದವರೇ ಕೊಟ್ಟದ್ದು ಎಂದು ಆರೋಪಿಸುವ ಕೀಳು ರಾಜಕೀಯ ಶುರುವಾಗಿದೆ! ಹೌದು. ಇಂತದ್ದೊಂದು ಪ್ರಕರಣವೂ ನಡೆದು ಹೋಗಿದೆ. ನವೋದಯ ಸ್ವಸಹಾಯ ಗುಂಪಿನ ಮಹಿಳೆಯರಿಗೆ ವಿತರಿಸಲು ಸಂಘದ ಬ್ಯಾಂಕಿನಲ್ಲಿಟ್ಟಿದ್ದ ಸೀರೆಯನ್ನು ವೋಟು ಕೇಳಲು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಚುನಾವಣೆಯ ಸಂದರ್ಭದಲ್ಲಿ ಅನಗತ್ಯ ರಾಜಕೀಯ ಮಾಡಲು ಹೋರಟ ಪ್ರಕರಣ ಬೈಂದೂರಿನ ಇತಿಹಾಸದಲ್ಲೊಂದು ಕಪ್ಪು ಚುಕ್ಕೆಯೆಸಿಕೊಂಡಿದೆ.  (ಕುಂದಾಪ್ರ ಡಾಟ್ ಕಾಂ ವರದಿ) [quote font_size=”16″ bgcolor=”#ffffff” bcolor=”#dd9933″ arrow=”yes” align=”right”]ನನಗೆ ಸಂಬಂಧವಿಲ್ಲ. ಆಣೆಗೆ ಸಿದ್ಧ: ರಾಜು ಪೂಜಾರಿ ಬೈಂದೂರಿನ ಎಸ್‌ಸಿಡಿಸಿಸಿ ಬ್ಯಾಂಕಿನ ಶಾಖೆಯಲ್ಲಿ ಸಂಗ್ರಹಿಸಲಾದ ಸೀರೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ. ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರು ಇಂತಹ ಆರೋಪಗಳನ್ನು ಮಾಡಿ ಕೀಳು ಮಟ್ಟದ ರಾಜಕೀಯಕ್ಕಿಳಿದಿದ್ದಾರೆ. ವ್ಯಥಾ ನನ್ನ ಮೇಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕುಂದಾಪುರ ತಾಲೂಕು ಪಂಚಾಯತ್‌ನ ಕಾಲ್ತೋಡು ತಾಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾಲ್ತೋಡು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಸ್ವರ್ಧಾ ಕಣದಲ್ಲಿದ್ದಾರೆ. ರಾಜಕೀಯದೊಂದಿಗೆ ಸಹಕಾರಿ, ಸಾಮಾಜಿಕ ರಂಗದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಈ ಭಾಗದಲ್ಲಿ ಸಾಕಷ್ಟು ಹೆಸರು ಗಳಿಸಿರುವು ಬಿ.ಎಸ್. ಸುರೇಶ್ ಶೆಟ್ಟಿಯವರು ಶ್ರಮಜೀವಿ, ಸ್ನೇಹಜೀವಿ ಹಾಗೂ ನೈಜ ಕಾಳಜಿಯುಳ್ಳ ಸಮಾಜ ಸೇವಕ. ಕಾಲ್ತೋಡು ಯಡೇರಿಯ ಬಿ.ಎಸ್. ಪ್ರಭಾಕರ ಶೆಟ್ಟಿ ಅವರ ಪುತ್ರರಾದ ಸುರೇಶ್ ಶೆಟ್ಟಿ ಪದವೀಧರರಾಗಿ ತನ್ನೂರಿನಲ್ಲೇ ಉದ್ಯಮ ಆರಂಭಿಸಿ ಒಂದಿಷ್ಟು ಮಂದಿಗೆ ಬದುಕು ಕಟ್ಟಿಕೊಳ್ಳಲು ನೆರವಾದವರು. ಕುಂದಾಪ್ರ ಡಾಟ್ ಕಾಂ ಸುದ್ದಿ ಹತ್ತು ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕಾಲ್ತೂಡು ಭಾಗದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾರುವ ಅವರು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ ಮೂರು ಭಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ನಿಭಾಯಿಸಿ, ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸುವತ್ತಾ ಶ್ರಮವಹಿಸಿ ಅಹರ್ನಿಶಿ ದುಡಿದಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರದ ಅಭ್ಯರ್ಥಿಯಗಿ ಬಿಜೆಪಿ ಪಕ್ಷದಿಂದ ಮಾಲಿನಿ ಕೆ. ಸ್ವರ್ಧಿಸುತ್ತಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಸೌಮ್ಯ ಸ್ವಭಾವದ ಮಾಲಿನಿ ಅವರು ಸ್ತ್ರೀಶಕ್ತಿ ಸಂಘಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ ಸುದ್ದಿ ಸಾಮಾಜಿಕ ಬದುಕಿನಲ್ಲಿ ಒಂದಿಷ್ಟು ಸೇವೆಗೈಯುವ ಅವಕಾಶಕ್ಕಾಗಿ ಪಕ್ಷದಿಂದಲೇ ಬಂದ ಆಹ್ವಾನವನ್ನು ಸ್ವೀಕರಿಸಿ ಈ ಮೊದಲ ಭಾರಿಗೆ ರಾಜಕೀಯ ಪ್ರವೇಶಿಸುತ್ತಿದ್ದಾರೆ. ರಾಮಕ್ಷತ್ರೀಯ ಸಮುದಾಯದವರಾದ ಮಾಲಿನಿ ಅವರು ಮಯ್ಯಾಡಿಯ ಕುಳ್ಳುಗರಡಿ ಮನೆ ಸುಬ್ರಾಯ ಕೆ. ಅವರ ಧರ್ಮಪತ್ನಿ.

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಟೇಶ್ವರ, ಧಾರ್ಮಿಕ ಕ್ಷೇತ್ರ ಹಾಗೂ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ಪ್ರದೇಶ. ನಗರ ಹಾಗೂ ಗ್ರಾಮೀಣ ಪ್ರದೇಶಗಳೇರಡನ್ನೂ ಒಳಗೊಳ್ಳುವ ಕೋಟೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿಗೆ ತಾಕಿಕೊಂಡಿದೆ. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಅವಳಿ ಜಿಲ್ಲೆಗಳ ಬಹುದೊಡ್ಡ ಜಾತ್ರೆಗಳಲ್ಲೊಂದಾಗಿದೆ. ಈ ಭಾರಿ ಕ್ಷೇತ್ರ ಮರುವಿಂಗಡನೆಯ ಬಳಿಕ ಬಸ್ರೂರು ಜಿಲ್ಲಾ ಪಂಚಾಯತ್(ಜಿಪಂ) ಕ್ಷೇತ್ರದ ಹೆಚ್ಚಿನ ಪಂಚಾಯತಿಗಳು ಕೋಟೇಶ್ವರ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಬಸ್ರೂರು ಕ್ಷೇತ್ರ ಇಲ್ಲವಾದರೇ, ಕೋಟೇಶ್ವರ ಕ್ಷೇತ್ರದ ಬಹುಪಾಲು ಗ್ರಾಮಗಳು ಹೊಸದಾಗಿ ಬೀಜಾಡಿ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದೆ. ಈ ಭಾರಿ ಜಿಪಂ. ಮಹಿಳಾ ಮೀಸಲು ಬಂದಿದ್ದರಿಂದ ಕಾಂಗ್ರೆಸ್ ನಿಂದ ಗೀತಾ ಶಂಭು ಪೂಜಾರಿ, ಬಿಜೆಪಿಯಿಂದ ಲಕ್ಷ್ಮಿ ಮಂಜು ಬಿಲ್ಲವ ಹಾಗೂ ಸಿಪಿಎಂ ಪಕ್ಷದಿಂದ ಜ್ಯೋತಿ ಉಪಧ್ಯಾಯ ಕಣದಲ್ಲಿದ್ದಾರೆ. ಬಿಜೆಪಿಯ ಸಕ್ರಿಯೆ ಕಲ್ಪನಾ ಭಾಸ್ಕರ್ ಅವರಿಗೆ ಟಿಕೇಟ್ ನೀಡುವುದು ಬಹುತೇಕ ಪಕ್ಷದಿಂದಲೇ ಖಚಿತವಾಗಿದ್ದರೂ ಕೊನೆ ಕ್ಷಣದಲ್ಲಿ ಹಾಲಾಡಿ ಬಣ…

Read More

ಗಂಗೊಳ್ಳಿ: ಜೀವನದಲ್ಲಿ ಎನ್ನೆಸ್ಸೆಸ್‌ನಲ್ಲಿ ಕಲಿತ ಉತ್ತಮ ವಿಚಾರಗಳನ್ನು ಆಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಹಾಗಾದಾಗ ಒಂದು ಸಂಘಟನೆಯಲ್ಲಿ ನಾವು ಭಾಗವಹಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಉಳಿದವರಿಗೆ ಅದು ಸ್ಫೂರ್ತಿಯಾಗುತ್ತದೆ ಎಂದು ವಂಡ್ಸೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯಕ್ ಹೇಳಿದರು ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಸುಪಾಲ ಆರ್ ಎನ್ ರೇವಣ್‌ಕರ್ ಮಾತನಾಡಿ ಜೀವನದಲ್ಲಿ ಒಳ್ಳೆಯತನ ಮುಖ್ಯ. ನಮ್ಮಿಂದ ಬೇರೆಯವರಿಗೆ ಉಪಕಾರ ಮಾಡಲಾಗದಿದ್ದರೆ ಅಪಕಾರವನ್ನಂತೂ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಅನುಷಾ ಸ್ವಾಗತಿಸಿದರು.ಸ್ವಾತಿ ಅತಿಥಿಗಳನ್ನು ಪರಿಚಯಿಸಿದರು. ಸಂಪ್ರೀತಾ, ಸುಪ್ರೀತಾ ,ಸುಶ್ಮಿತಾ ಪ್ರಾರ್ಥಿಸಿದರು.ಸಂಜಯ್ ಖಾರ್ವಿ ಎನ್ನೆಸ್ಸೆಸ್ ಒಡನಾಟದ ಅಭಿಪ್ರಾಯ ಹಂಚಿಕೊಂಡರು.ನಿಖಿಲ್ ಖಾರ್ವಿ ಕಾರ‍್ಯಕ್ರಮ ನಿರೂಪಿಸಿದರು. ರಮೇಶ್ ಧನ್ಯವಾದ ಅರ್ಪಿಸಿದರು. ವರದಿ : ನರೇಂದ್ರ ಎಸ್ ಗಂಗೊಳ್ಳಿ.

Read More

ಬೈಂದೂರು: ಶಿರೂರು ಜಿಲ್ಲಾ ಹಾಗೂ ಉಪ್ಪುಂದ ತಾಲೂಕು ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಜಿಪಂ ಅಭ್ಯರ್ಥಿ ಮದನ್ ಕುಮಾರ್, ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರ ತಂಡದವರೊಂದಿಗೆ ತಾರಾಪತಿ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು. ಉಪ್ಪುಂದ ತಾಪಂ ಅಭ್ಯರ್ಥಿ ಪ್ರಮಿಳಾ ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮೋಹನ್ ಪೂಜಾರಿ, ಗ್ರಾಪಂ ಸದಸ್ಯರಾದ ವಾಸುದೇವ ಪೂಜಾರಿ, ಶಾರದಾ, ಲಲಿತಾ, ರಾಮಚಂದ್ರ ಖಾರ್ವಿ, ಹರೀಶ್ಚಂದ್ರ ಖಾರ್ವಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಖಾರ್ವಿ, ಬೂತ್ ಅಧ್ಯಕ್ಷರಾದ ಗೋವಿಂದ ಖಾರ್ವಿ, ವಾಸು ಖಾರ್ವಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಗಂಗೊಳ್ಳಿ: ಬೆಳೆದ ಮಕ್ಕಳನ್ನು ಪ್ರೀತಿಸಿ ಆದರೆ ಮುದ್ದುಮಾಡಲು ಹೋಗಬೇಡಿ. ಯಾಕೆಂದರೆ ಮುದ್ದು ಮಕ್ಕಳನ್ನು ಹಾಳುಮಾಡುತ್ತದೆ. ಆದರೆ ಪ್ರೀತಿ ಮಕ್ಕಳನ್ನು ಬೆಳೆಸುತ್ತದೆ ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ರೋಟರಿ ಸಭಾಂಗಣದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಶಿಕ್ಷಕ ರಕ್ಷಕ ಸಭೆಯ ಪೂರ್ವಭಾವಿಯಾಗಿ ನಡೆದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಕ್ಕಳು ಮತ್ತು ಪೋಷಕರ ಜವಾಬ್ದಾರಿ ಎನ್ನುವ ವಿಚಾರದ ಕುರಿತಂತೆ ಮಾತನಾಡಿದರು. ಪ್ರತಿ ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ತೆಗೆಯಲು ಸಾಧ್ಯವಿಲ್ಲ. ಅಂಕವೊಂದನ್ನೇ ಮಕ್ಕಳ ಬೆಳವಣಿಗೆಯ ಮಾನದಂಡವಾಗಿಸುವುದು ಸರಿಯಲ್ಲ. ಮಕ್ಕಳಿಗೆ ಒಳ್ಳೆಯತನವನ್ನು ಕಲಿಸಿ. ಅಂತಹ ಮಕ್ಕಳು ಉತ್ತಮ ಅಂಕಗಳನ್ನು ಖಂಡಿತಾ ಗಳಿಸಬಲ್ಲರು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಹೆತ್ತವರು ಸ್ನೇಹಿತರು ಸುತ್ತಲಿನ ಸಮಾಜ ಎಲ್ಲರ ಜವಾಬ್ದಾರಿಯೂ ಪ್ರಮುಖವಾದುದು ಎಂದು ಅವರು ಅಭಿಪ್ರಾಯಪಟ್ಟರು. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಶಾಂತಿ ಕ್ರಾಸ್ತಾ ಸ್ವಾಗತಿಸಿ ವಂದಿಸಿದರು. ಕಾರ‍್ಯಕ್ರಮದಲ್ಲಿ ಶಿಕ್ಷಕರು ಶಿಕ್ಷಕ ರಕ್ಷಕ ಸಮಿತಿಯ…

Read More

ಕುಂದಾಪ್ರ ಡಾಟ್ ಕಾಂ ಲೇಖನ ಬೈಂದೂರು: ಸಾಕಷ್ಟು ಕುತೂಹಲ ಕೆರಳಿಸಿರುವ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು ಸ್ವರ್ಧೆಗಿಳಿದಿದ್ದಾರೆ. ಕಲಿತದ್ದು ಇಂಜಿನಿಯರಿಂಗ್, ವೃತ್ತಿಯಲ್ಲಿ ಉಪನ್ಯಾಸಕಿ, ಸಂಘಟನೆಯಲ್ಲಿ ಪರಿಣತಿ, ಸಮಾಜ ಸೇವೆಯಲ್ಲಿ ಆಸಕ್ತಿ. ಸಂಘ-ಸಂಸ್ಥೆ, ಸಹಕಾರಿಗಳಲ್ಲಿ ಸಕ್ರಿಯೆ. ಇದು ಪ್ರಿಯದರ್ಶಿನಿ ಅವರ ಶಾರ್ಟ್ ಪ್ರೊಪೈಲ್. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡು ಜನಸೇವೆಗೈಯಬೇಕೆಂಬ ತುಡಿತ, (ಕುಂದಾಪ್ರ ಡಾಟ್ ಕಾಂ) ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ತಾಯಿ ಶಾರದಾ ಬಿಜೂರು ಅವರ ಪ್ರೇರಣೆ, ಬೆಸ್ಕೂರು ಕುಟುಂಬದ ಪ್ರೋತ್ಸಾಹ. ಇವೆಲ್ಲದರಿಂದ ಪ್ರಿಯದರ್ಶಿನಿ ಮೊದಲ ಭಾರಿಗೆ ರಾಜಕೀಯ ರಂಗಕ್ಕೆ ಧುಮುಕುತ್ತದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ ಸೌಪರ್ಣಿಕಾ ಮಹಿಳಾ ಸಹಕಾರಿಯ ನಿರ್ದೇಶಕಿಯಾಗಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ತ್ರಾಸಿ ಯುವತಿ ಮಂಡಲದ ಅಧ್ಯಕ್ಷೆಯಾಗಿದ್ದ ಪ್ರೀಯದರ್ಶಿನಿ ಅವರಿಗೆ ರಾಜಕೀಯದ ಹಿನ್ನೆಲೆಯೂ ಇದ್ದ ಕಾರಣ ಬಿಜೆಪಿ ಪಕ್ಷದಿಂದ ಸ್ವರ್ಧಿಸುವ ಅವಕಾಶ ದೊರೆತಿದೆ. ಸೂಕ್ತ ಸಮಯದಲ್ಲಿ ದೊರೆತ ಅವಕಾಶ, ಪಕ್ಷದಿಂದಲೂ ಸಹಕಾರ, ಕುಟುಂಬ ವರ್ಗದ ಪ್ರೋತ್ಸಾಹದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಿಯದರ್ಶಿನಿ…

Read More

ಮುಂಬಯಿ: ಜಾಗತಿಕ ಪ್ರೇಮಿಗಳ ದಿನಾಚರಣೆ ಬರೇ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಪಕ್ಷಿಗಳೂ ಇದನ್ನು ಪ್ರೇಮಿಗಳಾಗಿಯೇ ಸಂಭ್ರಮಿಸಿದ ಕ್ಷಣಗಳು ಅಚ್ಚರಿಯನ್ನುಂಟು ಮಾಡಿತು. ನಗರದ ಪತ್ರಕರ್ತ, ಪ್ರಾಣಿ-ಪಕ್ಷಿ ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್‌ವ್ಹೀವ್ ನಿವಾಸದ ಗ್ಯಾಲರಿಯಲ್ಲಿ ನಿರ್ಮಿಸಿರುವ ಹೂದೋಟದಲ್ಲಿ ಪಕ್ಷಿಪ್ರೇಮವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಯಿಡಿದ ಕ್ಷಣಗಳು. ಎಂದಿನಂತೆ ಸುರ್ಯೋದಯದ ಸಮಯಕ್ಕೆ ಇಂದು ಮುಂಜಾನೆ ತಂಗಾಳಿಯ ಚಳಿಯಿಂದ ಹೊರ ಬಂದ ಗುಬ್ಬಚ್ಚಿ, ಗಿಳಿಗಳು ಪಕ್ಷಿಪ್ರಿಯ ಬಂಟ್ವಾಳ್ ಹತ್ತಾರು ಹೂಗಿಡಗಳಿಂದ ಸೃಷ್ಠಿಸಿದ ಪುಷ್ಪಉದ್ಯಾನದಲ್ಲಿ ಸ್ವತಂತ್ರವಾಗಿ ಹಾರಾಡುತ್ತಿರುವ ನೂರಾರು ಪಕ್ಷಿಗಳಿಗೆ ಆಸರೆಯನ್ನೀಡಿದ್ದಾರೆ. ಹತ್ತಾರು ಕಾಗೆಗಳು, ಗುಬ್ಬಚ್ಚಿ, ಗಿಳಿ, ಪಾರಿವಾಳ ಮತ್ತಿತರ ಪಕ್ಷಿಗಳೂ ಈ ಉಪವನದಲ್ಲಿ ಪಕ್ಷಿಧಾಮದಂತೆ ಆಸರೆ ಪಡೆಯುತ್ತಿವೆ. ಪಕ್ಷಿಗಳಿಗಾಗಿಗೇ ತಯಾರಿಸಲ್ಪಟ್ಟ ಆಹಾರ, ಕ್ಯಾಲ್ಸಿಯಂ, ನೀರು ಇನ್ನಿತರ ಆಹಾರವನ್ನು ಸೇವಿಸಿ ಪುಷ್ಪಗಿಡಗಳ ಮಧ್ಯೆ ಇರಿಸಿದ ನೀರಿನ ತೊಟ್ಟಿಗಳಲ್ಲಿ ಸ್ನಾನಗೈಯುತ್ತಾ ಕಾ… ಕಾ.. ಚಿಲಿಪಿಲಿ… ಎಂದು ಮುದ್ದಾಗಿ ಅಡ್ಡಾಡಿ ನರ್ತಿಸುವ ಕ್ಷಣಗಳು ಪರಿಸರ ಪ್ರಿಯರಿಗಂತೂ ಮುದನೀಡುವಂತಿದೆ.

Read More

ಬೈಂದೂರು: ಜಾತಿ, ಮತ, ಭೇಧ ಮರೆತು ಎಲ್ಲರೂ ಒಂದಾಗಿ ನಡೆಸಿದ ಲಕ್ಷಮೋದಕ ಗಣಪತಿ ಮಹಾಯಾಗದಿಂದ ದೇವರ ಲಕ್ಷ ಭಕ್ತರ ಕಡೆಗೆ ಬೀರಿದ್ದು, ನಮ್ಮೆಲ್ಲರ ಲಕ್ಷ ಲಕ್ಷ ದೋಷಗಳು, ಪಾಪಕರ್ಮಗಳು ನಿವಾರಣೆಯಾಗಿದೆ. ತ್ಯಾಗದಿಂದ ಯಾಗ ಸಂಪನ್ನವಾಗುತ್ತದೆ ಎಂದು ಕಟಪಾಡಿ ವೇಣುಗಿರಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಹಾಗೂ ನಾಗಮಂಡಲೋತ್ಸವದ ಕೊನೆಯ ದಿನ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜೀವನದಲ್ಲಿ ಯಾವುದೇ ಘಟನೆಗಳಾಗಲಿ ಭಗವಂತನ ಪ್ರೇರಣೆಯಿಂದ ಸುಂದರವಾದ ಮುಕ್ತಾಯವನ್ನು ಕಾಣುತ್ತದೆ. ಸಂತರ ಆದರ್ಶ ಹಾಗೂ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು. ಅವರ ಮಾರ್ಗದರ್ಶನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಬರುವ ಏರಿಳಿತದ ಘಟನೆಗಳನ್ನು ಎದುರಿಸಲು ನಮ್ಮ ಮನಸ್ಸು ತಯಾರಾಗಿರಬೇಕು. ಜೀವನದಲ್ಲಿ ತೃಪ್ತಿಯಿಂದ ಬದುಕುವುದನ್ನು ರೂಢಿಸಿಕೊಂಡರೆ ಅದು ಸಾರ್ಥಕತೆ ಕಾಣುತ್ತದೆ ಎಂದರು. ಅಧ್ಯಕ್ಷತೆವಹಿಸಿದ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ಹಿಂದೆ ಅನೇಕ…

Read More