ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ‘ಬೀದಿಯ ಗೂಂಡಾ’ ಎಂದು ಹೋಲಿಕೆ ಮಾಡಿದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರ ಹೇಳಿಕೆಯನ್ನು ಖಂಡಿಸಿ ಉಪ್ಪುಂದ ಪೇಟೆಯಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಂದೀಪ್ ದೀಕ್ಷಿತ್ ಭಾವಚಿತ್ರವನ್ನು ದಹಿಸಲಾಯಿತು. ಬೈಂದೂರು ಬಿಜೆಪಿ ಯುವಮೋರ್ಚಾ ಪ್ರಭಾರಿ ಬಿ.ಎಸ್ ಸುರೇಶ್ ಶೆಟ್ಟಿ ಮಾತನಾಡಿ ಭಾರತೀಯ ಸೇನೆಯ ಬಗೆಗೆ ದೇಶವಾಸಿಗಳಲ್ಲಿ ಅಪಾರ ಗೌರವವಿದೆ. ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಅವರನ್ನು ಪಾಕಿಸ್ಥಾನ ಸೇನೆಗೆ ಹೋಲಿಸಿದ್ದಲ್ಲದೇ ಗೂಂಡಾ ಎಂದು ಜರಿದಿರುವುದು ಖಂಡನೀಯ. ಕಾಂಗ್ರೆಸ್ ನಾಯಕರುಗಳ ಇಂತಹ ಹೇಳಿಕೆ ನಮ್ಮ ಸೇನೆಗೆ ಅಗೌರವ ತೋರುವಂತದ್ದು ಎಂದರು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಹಿಂದುಳಿದ ಮೂರ್ಚಾ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಉಪ್ಪುಂದ ಗ್ರಾಪಂ ಮಾಜಿ ಸದಸ್ಯ ಜಗನ್ನಾಥ ಖಾರ್ವಿ, ಬೈಂದೂರು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೀವಜಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳದೇ ಇರುವುದರಿಂದ ಉಡುಪಿ ಜಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಿದೆ. ಭೂಮಿಯನ್ನು ತಂಪಾಗಿರಿಸುತ್ತಿದ್ದ ಅರಣ್ಯ ಸಂಪತ್ತು ವರ್ಷದಿಂದ ವರ್ಷಕ್ಕೆ ನಾಶವಾಗುತ್ತಿರುವುದು ನೀರಿಗೆ ಕೊರೆತೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಬಾಂಡ್ಯ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಇಂಗುಗುಂಡಿ ನೋಡಬನ್ನಿ ಜಲಸಂರಕ್ಷಣಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಳ್ಳಿ ನೀರಿನ ವ್ಯವಸ್ಥೆ ಹೆಚ್ಚಾದಂತೆ ಅದರ ದುರುಪಯೋಗವೂ ಹೆಚ್ಚಾಗಿದೆ. ಕೊಳವೆ ಬಾವಿಯಿಂದಾಗಿ ನೀರಿನ ಮಟ್ಟ ಕುಸಿದಿದೆ. ಮಳೆ ನೀರಿನ ಕೊಯ್ಲು, ಇಂಗು ಗುಂಡಿ, ಇಂಗು ಬಾವಿಯಂತಹ ನೀರಿಂಗಿಸುವ ವಿಧಾನವನ್ನು ಒಳಗೊಂಡು ನೀರು ಉಳಿಸುವ ಕಾರ್ಯಕ್ಕೆ ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಬಿಡಬೇಕಾದ ಸಂದರ್ಭ ಬಂದೊದಗಲಿದೆ ಎಂದರು. ಜಲ ತಜ್ಞ ಶ್ರೀಪಡ್ರೆ ಮಾತನಾಡಿ ಕೃತಕವಾಗಿ ನೀರು ಇಂಗಿಸುವ ಕ್ರಮ ಅಳವಡಿಸಿಕೊಳ್ಳುವುದು ಅನಿವಾರ್ಯ. ಕಾಡು ನಾಶ ಮಾಡಿದ್ದಕ್ಕೆ ಇದೊಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾದ ವಿದ್ಯಾಮಂದಿರಗಳಲ್ಲಿ ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ಶಾಲೆಯಲ್ಲಿನ ಕ್ರೀಯಾಶೀಲ ಶಿಕ್ಷಕರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅರಳುತ್ತದೆ. ಇಂತಹ ಪರಿಸರದಲ್ಲಿ ಕಲಿಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯುತ್ತಾರೆ ಎಂದು ತಾಪಂ ಸದಸ್ಯೆ ಗ್ರೀಷ್ಮಾ ಭಿಡೆ ಹೇಳಿದರು. ಕೊಲ್ಲೂರು ಧರ್ಮಪೀಠ ಆಶ್ರಮದ ವತಿಯಿಂದ ಅತ್ಯಂತ ಹಿಂದುಳಿದ ಪ್ರದೇಶದ ಸಲಗೇರಿ, ಹಳ್ಳಬೇರು, ಮಾವಿನಕಾರು ಹಾಗೂ ಕೊಲ್ಲೂರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ೧೧ನೇ ವರ್ಷದ ಶೈಕ್ಷಣಿಕ ಸವಲತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಗ್ರಾಪಂ ಅಧ್ಯಕ್ಷ ಮಾವಿನಕಾರು ಜಯಪ್ರಕಾಶ ಶೆಟ್ಟಿ ಮಾತನಾಡಿ, ಕೊಲ್ಲೂರಿನ ಈ ಪುಣ್ಯಭೂಮಿಯಲ್ಲಿ ಧರ್ಮಪೀಠ ಆಶ್ರಮದ ವತಿಯಿಂದ ಮಠದ ಸ್ವಾಮೀಜಿಯವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗದ ಜನರಿಗೆ ಸಹಾಯಹಸ್ತ ನೀಡುವ ಮೂಲಕ ಧರ್ಮಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು. ಕಳೆದ ಹನ್ನೊಂದು ವರ್ಷದಿಂದ ಮಕ್ಕಳಿಗೆ ಪುಸ್ತಕ ಮತ್ತು ಕೊಡೆಗಳನ್ನು ನೀಡುತ್ತಿದ್ದು, ಮಕ್ಕಳು ಇದರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಲ್ಲೂರಿನಿಂದ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಆಗುತ್ತಿರುವ ಅವಘಡಗಳು ಹಾಗೂ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೀವ್ರ ಸ್ವರೂಪದ ತೊಂದರೆಗಳಿಗೆ ಈ ಭಾಗದ ಸಂಸದರ ನಿರ್ಲಕ್ಷವೇ ಕಾರಣ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಚತುಷ್ಪಥ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಐಆರ್ಬಿ ಕಂಪೆನಿಯು ಕೆಲಸದ ಗುಣಮಟ್ಟ ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ ಯು ಟರ್ನ್, ಅಂಡರ್ ಪಾಸ್ ನಿರ್ಮಿಸುತ್ತಿಲ್ಲ. ಚರಂಡಿ ನಿರ್ಮಿಸದೇ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು, ಎಲ್ಲೆಂದರಲ್ಲಿ ಮಣ್ಣು ಸುರಿದಿರುವುದು ಮಳೆಗಾಲದಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಒತ್ತಿನೆಣೆ ಉಂಟಾಗಿರುವ ಗುಡ್ಡ ಕುಸಿತ ಮತ್ತು ಮಾರಸ್ವಾಮಿಯಲ್ಲಿ ಹಾಗೂ ಇತರೆಡೆಗಳಲ್ಲಾದ ರಸ್ತೆ ಜರಿತ ಗಂಭೀರ ಸ್ವರೂಪದ ಅಪಾಯ ಮತ್ತು ಆತಂಕ ಉಂಟುಮಾಡಿದೆ. ಮಳೆಗಾಲ ಅವಾಂತರದ ಬಗೆಗೆ ಹಲವು ಭಾರಿ ಎಚ್ಚರಿಸಿದ್ದರೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಲ್ಲ. ಇದು ರಾಷ್ಟ್ರೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಜೂ. 18ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕೊಲ್ಲೂರು ಕ್ಷೇತ್ರಕ್ಕೆ ಸಂದರ್ಶನ ಮಾಡಲಿರುವುದರಿಂದ ವಿಶೇಷ ಭದ್ರತೆ ಒದಗಿಸುವ ಸಲುವಾಗಿ ಪೊಲೀಸ್ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು, ದೇಗುಲದ ಪರಿಸರದ ಪರಿಶೀಲನೆ ನಡೆಸಲಾಗಿದೆ. ರಾಷ್ಟ್ರಪತಿ ಕೊಲ್ಲೂರಿಗೆ ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಈ ದಿಸೆಯಲ್ಲಿ ಅರೆಶಿರೂರಿನಲ್ಲಿ ಪ್ರಸ್ತುತ ಇರುವ ಹೆಲಿಪ್ಯಾಡ್ ಅಲ್ಲದೇ ಪ್ರತ್ಯೇಕ 2 ಹೆಲಿಪ್ಯಾಡ್ ನಿರ್ಮಿಸುವ ಸಲುವಾಗಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಚಂದ್ರಶೇಖರ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ದಿಲ್ಲಿ ವಿಶೇಷ ಪೊಲೀಸ್ ತಂಡ ಕೊಲ್ಲೂರಿಗೆ ಆಗಮಿಸಿದ್ದು, ಇಲ್ಲಿನ ಪರಿಸರದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಎನ್ಎಸ್ಜಿ ಕಮಾಂಡೋಗಳು ಕೊಡಚಾದ್ರಿ ಬೆಟ್ಟ ಸಮೇತ ಈ ಭಾಗದ ಬಗ್ಗೆ ವಿವರಣೆ ಕೇಳಿದ್ದು, ಅದಕ್ಕೆ ಪೂರಕವಾಗಿ ವಿಶೇಷ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ದೇಗುಲದ ಅರ್ಚಕರು ಹಾಗೂ ಸಿಬಂದಿ ಸಹಿತ ಪ್ರತಿಯೋರ್ವರ ವಿವರಣೆ ಕೇಳಿರುವ ವಿಶೇಷ ಪೊಲೀಸ್ ಪಡೆ, ಪೂರ್ಣ ಮಾಹಿತಿ ಸಂಗ್ರಹಿಸುತ್ತಿದೆ. ಜೂ. 18ರಂದು ಮಧ್ಯಾಹ್ನದ ಅನಂತರ ಕೊಲ್ಲೂರಿಗೆ ಆಗಮಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋವುಗಳನ್ನು ಪ್ರೀತಿಸಿ ಮನುಷ್ಯರನ್ನು ಕೊಲ್ಲುವ ಗೋ ಭಯೋತ್ಪಾದಕ ಪಡೆ ಇಂದು ಹುಟ್ಟಿಕೊಂಡಿದೆ. ಅವರುಗಳ ದಬ್ಬಾಳಿಕೆಗೆ ಹೆದರದೇ ಐಕ್ಯತೆಯಿಂದ ಮುನ್ನಡೆಯುವ ನಮ್ಮ ನಡೆಯಿಂದ ಅಮಾಯಕರ ಮೇಲೆ ಹಲ್ಲೆ ನಡೆಸಿದವರ ಎದೆ ನಡುಗಬೇಕು. ಈ ದೇಶದ ಮೂಲ ನಿವಾಸಿ ಜನಾಂಗದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವವರನ್ನು ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಎಲ್. ಅಶೋಕ್ ಹೇಳಿದರು. ಅವರು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ಕರ್ನಾಟಕ ದಲಿತ ಹಿಂದುಳಿತ ಮತ್ತು ಅಲ್ಪಸಂತ್ಯಾತ ಸಂಘಟನೆಗಳ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೊವಾಡಿ ಚಲೋ ಜಾಥಾ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರಾವಳಿಯಲ್ಲಿ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಬದುಕಬಾರದು ಎಂದು ಬ್ರಾಹ್ಮಣ್ಯವನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರ ನಿರ್ಧರಿಸಿವೆ. ಆಹಾರ ಕ್ರಮದಲ್ಲಿ ಶ್ರೇಷ್ಠ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮೊವಾಡಿ ಗೋಹತ್ಯೆ ಪ್ರಕರಣದಲ್ಲಿ ಕೊರಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಹಾಗೂ ಹಲ್ಲೆ ಖಂಡನೀಯ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಪೈಶಾಶಿಕ ಕೃತ್ಯ ನಡೆಸಲಾಗುತ್ತಿದೆ. ಮೊವಾಡಿ ಘಟನೆಯನ್ನು ಬಳಸಿಕೊಂಡು ಸಮಾಜದ ಶಾಂತಿಯನ್ನು ಕೆಡಿಸುವ ಹಾಗೂ ಪರಿಸರದಲ್ಲಿ ಅನಗತ್ಯವಾಗಿ ಭಯಭೀತಿ ಸೃಷ್ಟಿ ಮಾಡುತ್ತಿರುವ ಕ್ರೂರ, ಕ್ರೌರ್ಯ ಮನಸ್ಸಿನ ಸಮಾಜಘಾತುಕ ಶಕ್ತಿಗಳ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕ ಮತ್ತು ದಲಿತ ಸಂಘರ್ಷ ಸಮಿತಿಯ ಹೋರಾಟಗಾರ ಜಯನ್ ಮಲ್ಪೆ ಹೇಳಿದರು. ಅವರು ಮೊವಾಡಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೊವಾಡಿ ಗ್ರಾಮ ಶಾಖೆ ಆಶ್ರಯದಲ್ಲಿ ಜರಗಿದ ಮೊವಾಡಿ ಸ್ವಾಭಿಮಾನಿ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಾಂತಿ ಮತ್ತು ಸೌಹಾರ್ದತೆಯ ನೆಲೆಬೀಡಾಗಿದ್ದ ಮೊವಾಡಿಯಲ್ಲಿ ಜನರು ಜಾತಿ ಮತ ಭೇದ ಮರೆತು ಸಹಬಾಳ್ವೆಯ ಜೀವನ ನಡೆಸುತ್ತಿದ್ದರು. ಅಂಬೇಡ್ಕರ್ ಅವರ ಚಿಂತನೆ ಸ್ವಾಭಿಮಾನದ ಬಗ್ಗೆ ತಿಳುವಳಿಕೆ ಇಲ್ಲದ ಜನರು ತಮ್ಮ ಬೇಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೃಷಿ ಕೆಲಸ ಮುಗಿಸಿ ಮನೆಗೆ ಹಿಂದಿರುತ್ತಿದ್ದ ಯುವಕ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿ ನಾಪತ್ತೆಯಾದ ಘಟನೆ ಭಾನುವಾರ ಕಾಲ್ತೋಡಿನಲ್ಲಿ ನಡೆದಿದೆ. ಇಲ್ಲಿನ ಯಡೇರಿ ಹೊಸಮನೆ ನಿವಾಸಿ ಹರೀಶ ದೇವಾಡಿಗ (೩೪) ಕಲ್ಸಂಕ ಹಳ್ಳವನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ನೀರಿನ ರಭಸಕ್ಕೆ ಕಾಲು ಜಾರಿ ಸೆಳೆದೊಯ್ಯಲ್ಪಟ್ಟರು. ಸೋಮವಾರವೂ ಸ್ಥಳೀಯರು ಮತ್ತು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಗಾಗಿ ಶೋಧ ನಡೆಸಿದರು. ಸಂಜೆಯ ತನಕ ಅವರು ಪತ್ತೆಯಾಗಿಲ್ಲ. ಘಟನೆ ಬಗ್ಗೆ ಅವರ ಭಾವ ರಘುರಾಮ ದೇವಾಡಿಗ ಬೈಂದೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಯುವಕನಿಗೆ ಪತ್ನಿ, ಶಾಲೆಗೆ ಹೋಗುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ. ಶಾಸಕರ ಭೇಟಿ: ಸುದ್ದಿ ತಿಳಿದ ಶಾಸಕ ಕೆ. ಗೋಪಾಲ ಪೂಜಾರಿ ಸೋಮವಾರ ಹುಡುಕಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿನೀಡಿ ಬಂಧುಗಳು ಮತ್ತು ಸ್ಥಳೀಯರಿಂದ ಘಟನೆ ಮತ್ತು ಹುಡುಕಾಟದ ವಿವರ ಪಡೆದು ಅವರಲ್ಲಿ ಧೈರ್ಯ ತುಂಬಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿಯಲ್ಲಿ ಆರಂಭಗೊಂಡಿರುವ ಮುಂಗಾರು ಮಳೆಗೆ ಹೆದ್ದಾರಿ ಕಾಮಗಾರಿಗಾಗಿ ಅವ್ಶೆಜ್ಞಾನಿಕವಾಗಿ ಕೊರೆದಿರುವ ಒತ್ತಿನೆಣೆ ಗುಡ್ಡವು ಸತತವಾಗಿ ಕುಸಿಯುತ್ತಿದೆ. ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ದಿನವೂ ವ್ಯತ್ಯಯಗೊಳ್ಳುತ್ತಿದೆ. ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕುಂಟುಮಾಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ಒತ್ತಿನೆಣೆ ಗುಡ್ಡ ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ್ ಮೇರಿ ಪ್ರಾನ್ಸಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚತುಷ್ಪತ ಹೆದ್ದಾರಿಯ ಅಸಮರ್ಪಕ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವ ಬಗ್ಗೆ ಗುತ್ತಿಗೆದಾರ ಕಂಪನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡ ಇಬ್ಬಾಗ ಮಾಡುವಾಗ ಸಂಬಂಧಿತ ಗುತ್ತಿಗೆದಾರ ಕಂಪೆನೆ ಮುಂಜಾಗೃತ ಕ್ರಮ ಕೈಗೊಳ್ಳದ ಹಿನ್ನೆಯಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತೊಡಕ್ಕಾಗಿದೆ, ಈ ಬಗ್ಗೆ ಈಗಾಗಲೇ ಸಂಬಂಧಿತ ಕಂಪೆನಿಯ ವಿರುದ್ಧ ಕ್ರಿಮಿನಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶಿಕ್ಷಣ ಕ್ಷೇತ್ರ ವಿಶಾಲವಾಗಿದ್ದು ಶಿಕ್ಷಣದ ಅರ್ಥವನ್ನು ಇಂದಿನ ಮಕ್ಕಳು ತಿಳಿದುಕೊಂಡು ತಮ್ಮ ಗುರಿಯನ್ನು ಅರಿತುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮುಖ್ಯವಲ್ಲ. ಎಳೆಯ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಿಕೊಂಡು ತಮ್ಮ ಮುಂದಿನ ಸಾಧನೆಗಳ ಬಗ್ಗೆ ಸಿದ್ಧತೆ ನಡೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನ ಬೆಳೆದು ಬರಬೇಕು. ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ಹೊರಹೊಮ್ಮಬೇಕು. ಸೀಮಿತ ಪರೀಕ್ಷೆಗಳಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಎಸ್ವಿಎಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರಗಿದ ಸರಸ್ವತಿ ವಿದ್ಯಾಲಯ ಸಮೂಹ ವಿದ್ಯಾಸಂಸ್ಥೆಗಳ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳ ಹವ್ಯಾಸ ಆಸಕ್ತಿಯನ್ನು ಗಮನಿಸದೆ ಪೋಷಕರು ಆರ್ಥಿಕ ವ್ಯಾಮೋಹದಿಂದ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಾಕುವ ಒತ್ತಾಯ ಒತ್ತಡದಿಂದ ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಗಳಿವೆ. ಆದ್ದರಿಂದ…
