ಬೈಂದೂರು: ಗ್ರಾಮದ ಶೈಕ್ಷಣಿಕ ಸ್ಥಿತಿಗತಿ ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ದಿಗಳು ಊರಿನ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಅಭಿಪ್ರಾಯಪಟ್ಟರು. ಖಂಬದಕೋಣೆ ಹೊನ್ನೆಕಳಿ ಜಟ್ಟಿಗೇಶ್ವರ ದೈವಸ್ಥಾನದ ಹಾಲುಹಬ್ಬ, ಗೆಂಡಸೇವೆ, ಮಂಡಲಸೇವೆ ಹಾಗೂ ಸ್ಥಳೀಯ ಕದಂಬ ಯುವಕ ಮಂಡಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ಪ್ರಗತಿಯ ಹಿಂದೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುವುದನ್ನು ಯೋಚಿಸಬೇಕಾಗಿದೆ. ಕಾಲದ ಗೋಜಿನಲ್ಲಿ ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಅನಿವಾರ್ಯತೆಯಿದೆ ಎಂದರು. ಯುವಕ ಮಂಡಲದ ಗೌರವಾಧ್ಯಕ್ಷ ಸಂತೋಷ್ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಉದ್ಯಮಿ ಶಶಿಧರ ಶೆಣೈ, ಶಿಕ್ಷಕಿ ಕೃಷ್ಣಾಬಾಯಿ ಟೀಚರ್, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಲತಾ, ರಾಷ್ಟ್ರೀಯ ಯೋಗ ಹಾಗೂ ಕ್ರೀಡಾ ಪ್ರತಿಭೆಗಳಾದ ದಿವ್ಯಾ ಮತ್ತು ಅಕ್ಷತಾ ಇವರನ್ನು ಸನ್ಮಾನಿಸಲಾಯಿತು. ದೈವಸ್ಥಾನ ಅಭಿವೃದ್ದಿಗೆ, ಧಾರ್ಮಿಕ ಕಾರ್ಯಗಳಿಗೆ ಸಹಕರಿಸಿದ ದಾನಿಗಳನ್ನು…
Author: ನ್ಯೂಸ್ ಬ್ಯೂರೋ
ಕುಂದಾಪುರ: ಕೊಂಕಣ ಖಾರ್ವಿ ಸಮಾಜ ಶ್ರಮಜೀವಿಗಳಾಗಿದ್ದು, ತಮ್ಮ ಸ್ನೇಹ ಪರ ಗುಣಗಳಿಂದ ಎಲ್ಲರಿಗೂ ಆತ್ಮೀಯರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿ ಪ್ರಶಾಂತ್ ತೋಳಾರ್ ಹೇಳಿದರು. ಅವರು ಕೊಂಕಣ ಖಾರ್ವಿ ಪ್ರಗತಿಪರ ಸಂಘ(ರಿ) ಮದ್ದುಗುಡ್ಡೆ ಇದರ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾಟ ಕೆ.ಕೆ.ಪಿ.ಎಸ್ ಮದ್ದುಗುಡ್ಡೆ ಟ್ರೋಫಿ ಉದ್ಘಾಟಿಸಿ ಮಾತನಾಡಿದರು. ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾನಸ ಇಂಜಿನಿಯರಿಂಗ್ & ವೆಲ್ಡಿಂಗ್ ವರ್ಕ್ಸ್ನ ನಿತ್ಯಾನಂದ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕೆ.ಕೆ.ಫಿಶರೀಸ್ನ ಸಂದೀಪ್ ಖಾರ್ವಿ, ಮದ್ದುಗುಡ್ಡೆ ನಾಗ ಜಟ್ಟಿಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ವಸಂತ ಮೇಸ್ತ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುರೇಂದ್ರ ಖಾರ್ವಿ, ಸಂಸ್ಥೆಯ ಅಧ್ಯಕ್ಷರಾದ ಸಂಜೀವ ಖಾರ್ವಿ, ಉಪಾಧ್ಯಕ್ಷರಾದ ನಾರಾಯಣ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ಹಾಲಿ ತಾಪಂ ಸದಸ್ಯ ಎಸ್. ರಾಜು ಪೂಜಾರಿ ತಮ್ಮ ಬೆಂಬಲಿಗರೊಂದಿಗೆ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಜನರ ನಡುವೆಯೇ ಇದ್ದು ಜನಸೇವೆ ಮಾಡುತ್ತಾ ಬಂದಿರುವ ತನಗೆ ಬೈಂದೂರಿನ ಮತದಾರರು ಈ ಭಾರಿಯೂ ಬಹುಮತದಿಂದ ಆಯ್ಕೆಮಾಡುವರೆಂಬ ವಿಶ್ವಾಸವಿದೆ. ಹಲವು ಚುನಾವಣೆಯನ್ನು ಎದುರಿಸಿರುವುದರಿಂದ ಸ್ವರ್ಧಿಸುವ ಬಗ್ಗೆ ಭಯವಿಲ್ಲ. ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವುದರಿಂದ ಪ್ರತಿ ಮತದಾರರನ್ನೂ ಭೇಟಿ ಸುಲಭವಾಗುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾರ್ಯದರ್ಶಿ ನಾಗರಾಜ ಗಾಣಿಗ, ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ಬಟ್ಟೆ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು ಅಂಗಡಿಯಲ್ಲಿದ್ದ ಮಾಲಿಕನೂ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ತಲ್ಲೂರಿನ ಕೋಟಿ ಪೂಜಾರಿ(75) ಮೃತ ದುರ್ದೈವಿ. ತಲ್ಲೂರಿನ ನಗರ ಭಾಗದಲ್ಲಿ ಕಳೆದ 25 ವರ್ಷಗಳಿಂದ ಗಣೇಶ ಡ್ರೆಸ್ ಸೆಂಟರ್ ಹೆಸರಿನ ಬಟ್ಟೆ ಅಂಗಡಿ ನಡೆಸುತ್ತಿದ್ದ ತಲ್ಲೂರು ಗರಡಿ ನಿವಾಸಿ ಕೋಟಿ ಪೂಜಾರಿ (75) ಇಂದು ಮುಂಜಾನೆ ವಾಕಿಂಗ್ ತೆರಳುವ ಸಂದರ್ಭದಲ್ಲಿ ಬಟ್ಟೆಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಶಟರ್ ಮುಚ್ಚಿದ್ದ ಅಂಗಡಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು, ಶಟರ್ ತೆರೆದಾಗ ಅಂಗಡಿಗೆ ಬೆಂಕಿ ಬಿದ್ದಿರುವುದು ತಿಳಿದುಬಂದಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರಾದರೂ ಅಂಗಂಡಿಯಲ್ಲಿ ಕೋಟಿ ಪೂಜಾರಿ ಬಟ್ಟೆಯೊಂದಿಗೆ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅಂಗಡಿಗೆ ಆಕಸ್ಮಾತ್ ಬೆಂಕಿ ತಗಲಿದ್ದೂ ಇಲ್ಲವೇ ಆತ್ಮಹತ್ಯೆಯೋ ಎಂಬ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಬೈಂದೂರು: ಕುಂದಾಪುರ ತಾಲೂಕಿನ ತುತ್ತ ತುದಿಯ ಊರು ಶಿರೂರು. ಶಿರಭಾಗದ ಊರಾದ ಕಾರಣ ಶಿರೂರು ಎಂಬ ಹೆಸರು ಬಂತು ಎಂದು ಕೆಲವರು ಹೇಳಿದರೆ ಒಂದು ಕಾಲದಲ್ಲಿ ಸಿರಿ ತುಂಬಿದ ಊರಾಗಿದ್ದ ಕಾರಣ ಶಿರೂರು ಎಂದು ಕರೆಯಲಾಯಿತು ಎನ್ನತ್ತಾರೆ. ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಇಷ್ಟು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೂ ಗುರುತಿಸಬಹುದಾದ ಕೆಲವು ಅಭಿವೃದ್ಧಿ ಕಾಮಗಾರಿಗಳು ಒಂದಿರಡು ವರ್ಷಗಳ ಈಚೆಗೆ ನಡೆದಿವೆ. (ಕುಂದಾಪ್ರ ಡಾಟ್ ಕಾಂ ವರದಿ) ಈ ಭಾರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ಬಂದಿರುವುದರಿಂದ ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ತಾಪಂ ಸದಸ್ಯ ಮದನಕುಮಾರ್ ಸ್ಪರ್ಧಿಸುತ್ತಿದ್ದರೇ, ಬಿಜೆಪಿಯಿಂದ ಪಡುವರಿ ಗ್ರಾಪಂ ಹಾಲಿ ಸದಸ್ಯ ಸುರೇಶ್ ಬಟ್ವಾಡಿ ಸ್ವರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಹಾಲಿ ತಾಪಂ ಸದಸ್ಯ ರಾಮ ಕೆ. ಪಕ್ಷದಿಂದ ಟಿಕೇಟ್ ವಂಚಿತರಾಗಿದ್ದರಿಂದ ಶಿರೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ವರ್ಧಿಸುತ್ತಿದ್ದಾರೆ. ಒಂದು ನೋಟ: ಗ್ರಾಮೀಣ ಪ್ರದೇಶವೇ ಹೆಚ್ಚಿರುವ ಶಿರೂರು…
ಕುಂದಾಪುರ: ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರ ಹಾಗೂ ಯಡ್ತರೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಮಾಲಿನಿ ಕೆ. ನಾಮಪತ್ರ ಸಲ್ಲಿಸಿದರೆ, ಯಡ್ತರೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಸುಜಾತ ದೇವಾಡಿಗ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಷ್ಮೀ ನಾರಾಯಣ, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ಕೃಷ್ಣಯ್ಯ ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ನ ವಾರ್ಷಿಕ ಉತ್ಸವ ತೆರಾಲಿಗೆ ಪೂರ್ವಭಾವಿಯಾಗಿ ನಡೆಯುವ ಕೋಂಪ್ರಿ ಪೆಸ್ತ್ ಸಡಗರದಿಂದ ಆಚರಿಸಲಾಯಿತು. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಗಂಗೊಳ್ಳಿ ಚರ್ಚ್ನ ಧರ್ಮಗುರು ರೆ. ಫಾ. ಆಲ್ಬರ್ಟ್ ಕ್ರಾಸ್ತಾ, ಎಲ್ಲವರನ್ನು ನಮ್ಮವರೆಂದು ತಿಳಿದು ದೀನ-ದಲಿತರ, ಬಡವರ, ರೋಗಿಗಳ, ಖೈದಿಗಳ ಹಾಗೂ ನಮ್ಮ ನೆರೆಹೊರೆಯವರ ಸುಖ-ಕಷ್ಟಗಳಗೆ ಸ್ಪಂದಿಸುವ ಮೂಲಕ ಮಾನವೀಯತೆ ತೋರಬೇಕು. ಮಾನವೀಯ ಧರ್ಮದ ಮೂಲಕ ಸಾಮರಸ್ಯ ಕಾಪಾಡಿಕೊಂಡು ಪರಸ್ಪರ ಪ್ರೀತಿಯಿಂದ ಬದುಕುವುದೇ ನಿಜವಾದ ಜೀವನ ಎಂದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಚರ್ಚ್ನಿಂದ ಹೊರಟು ಯಡ್ತರೆವರೆಗೆ ಸಾಗಿದ ಪುರಮೆರವಣಿಗೆಯಲ್ಲಿ ಪರಮಪ್ರಸಾದವನ್ನು ಸ್ಥಬ್ದಚಿತ್ರ ವಾದ್ಯಘೋಷಗಳೊಂದಿಗೆ ಕೊಂಡೊಯ್ದರು. ಲಿಯೋ ನಜ್ರತ್ ಮತ್ತು ತಂಡದವರ ಗಾಯನ ಕಾರ್ಯಕ್ರಮ ಮೆರವಣಿಗೆಗೆ ಮೆರುಗು ನೀಡಿತ್ತು. ಬೈಂದೂರು ಚರ್ಚ್ ಧರ್ಮಗುರು ರೆ. ಫಾ. ರೊನಾಲ್ಡ್ ಮಿರಾಂದ, ಕಾರ್ಯದರ್ಶಿ ಸಿಸಿಲಿಯಾ ರೆಬೆರೊ, ಉಪಾಧ್ಯಕ್ಷ ರಾಬಟ್ ರೆಬೆಲ್ಲೊ ಉತ್ಸವದ ನೇತೃತ್ವವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕಾಂಗ್ರೆಸ್ ಪಕ್ಷದ ಮುಂದಾಳು, ಗೋಳಿಹೊಳೆ ಗ್ರಾಪಂ ಮಾಜಿ ಅದ್ಯಕ್ಷ ಮಂಜಯ್ಯ ಪೂಜಾರಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬೈಂದೂರು ಜಿಪಂ ಬಿಜೆಪಿ ಅಭ್ಯರ್ಥಿ ಶಂಕರ ಪೂಜಾರಿ, ರಾಜ್ಯ ಬಿಜೆಪಿ ರೈತಮೋರ್ಚಾದ ಉಪಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಕಾಲ್ತೋಡು ತಾಪಂ ಅಭ್ಯರ್ಥಿ ಬಿ.ಎಸ್. ಸುರೇಶ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು: ಕರ್ನಾಟಕ ಫ್ರೌಡ ಶಿಕ್ಷಣಾ ಪರೀಕ್ಷಾ ಮಂಡಳಿ 2015-16ರ ಅವಧಿಗೆ ನಡೆಸಿದ ಹಿಂದುಸ್ಥಾನಿ ಸಂಗೀತದ ಜ್ಯೂನಿಯರ್ ವಿಭಾಗದಲ್ಲಿ ಉಪ್ಪುಂದದ ಅಕ್ಷತಾ ದೇವಾಡಿಗ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಈಕೆ ಉಪ್ಪುಂದದ ವಿಜಯಾ ಓಂಗಣೇಶ್ ಕಾಮತ್ ಅವರ ಶಿಷ್ಯೆ. ಹಾಗೂ ಸ್ಯಾಕ್ಸೋಫೊನ್ ವಾದಕ ಮಂಜುನಾಥ ದೇವಾಡಿಗ ಹಾಗೂ ವಿನೋದ ದೇವಾಡಿಗರ ಪುತ್ರಿ.
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಜಿಲ್ಲಾ ಪಂಚಾಯಿತ್ ಕ್ಷೇತ್ರವಾದ ವಂಡ್ಸೆ ಕುಂದಾಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವೂ ಹೌದು. ಧಾರ್ಮಿಕ, ರಾಜಕೀಯ ಹಾಗೂ ತಾಲೂಕು ಹೋರಾಟ ಮುಂತಾದ ಕಾರಣದಿಂದಾಗಿ ಆಗಾಗ ಸುದ್ದಿ ಮಾಡುತ್ತಲೇ ಬಂದಿರುವ ಕ್ಷೇತ್ರವಿದು. ಮಾರಣಕಟ್ಟೆ ದೇವಸ್ಥಾನಕ್ಕೆ ತೆರಳುವ ಭಕ್ತರು ಚಕ್ರ ನದಿಯಲ್ಲಿ ಮಿಂದು ಬಟ್ಟೆ ಒಣಗಿಸಿ ಶುದ್ದ ಬಟ್ಟೆ ತೊಟ್ಟು ಹೋಗುತ್ತಿದ್ದ ಪ್ರದೇಶಕ್ಕೆ ಹಿಂದೆ ವಣಸೆ ಎಂಬ ಹೆಸರಿತ್ತು. ಕಾಲಕ್ರಮೇಣ ಆಡುಭಾಷೆಯಲ್ಲಿ ವಂಡ್ಸೆ ಎಂಬ ಹೆಸರು ಶಾಶ್ವತವಾಯಿತು ಎಂಬುದು ಊರಿನ ಹೆಸರಿನ ಹಿಂದಿನ ಕಥೆ. ಕಳೆದ ಭಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರ ಪರ ಬಂದಿದ್ದ ಮೀಸಲಾತಿ, ಈ ಭಾರಿ ಸಾಮಾನ್ಯ ಮೀಸಲು ಬಂದಿದ್ದರಿಂದ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸ್ಪರ್ಧಿಸುವ ಸಮಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಮೂರು ಪಕ್ಷಗಳಿಂದ ಪುರುಷ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಹಾಲಿ ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಕಣದಲ್ಲಿದ್ದರೇ, ಕಾಂಗ್ರೆಸ್ ಹಾಲಿ ತಾಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ…
