Author: ನ್ಯೂಸ್ ಬ್ಯೂರೋ

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಸ್ಥಾನಗಳಿಗೆ ಚಿನ್ನವನ್ನು ಅರ್ಪಿಸುವುದಕ್ಕಿಂತ ವಿದ್ಯಾಲಯಗಳಿಗೆ ಕೊಡುಗೆ ನೀಡಿದರೇ ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವು ನೀಡಿದಂತಾಗುತ್ತದೆ ತನ್ಮೂಲಕ ದೇಶದ ಅಭ್ಯುದಯಕ್ಕೆ ವರವಾಗಬಲ್ಲಂತಹ ವ್ಯಕ್ತಿಗಳು ನಿರ್ಮಾಣಗೊಂಡು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುವರು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ಅವರು ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಡಾ. ಎಚ್. ಶಾಂತಾರಾಮ್ ಬಯಲು ರಂಗ ಮಂದಿರದಲ್ಲಿ ಕಾಲೇಜಿನ ಎನ್.ಸಿ.ಸಿ ಆರ್ಮಿ ಮತ್ತು ನೇವಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ಗುರುರಾಜ್ ಮತ್ತು ಸನಾ ಅವರಿಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡಿ ಮಡಿದ ಯೋಧರ ಸೇವೆ ಅನನ್ಯವಾದುದು. ಅವರ ಕಾರ್ಯಕ್ಷಮತೆಗೆ ಪ್ರತಿಯೊಬ್ಬರು ಗೌರವ ಸೂಚಿಸಬೇಕಾದುದು ನಮ್ಮ ಆದ್ಯ ಕರ್ತವ್ಯವು ಆಗಿದೆ. ಭಂಡಾರ್‌ಕಾರ್ಸ್ಕಾಲೇಜಿನ ಹಳೆ ವಿದ್ಯಾರ್ಥಿಗಳು ಮೇಜರ್ ಸಂದೀಪ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಕೂಸಳ್ಳಿ ಫಾಲ್ಸ್‌ಗೆ ಟ್ರಕ್ಕಿಂಗ್‌ಗೆಂದು ತೆರಳಿದ್ದ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಕಾಲೇಜಿನ ಅಂತಿಮ ಬಿಸಿಎ ಪ್ರಸಾದ್ ಅಮೀನ್ (22) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಉಡುಪಿಯ ಎಂಜಿಎಂ ಕಾಲೇಜಿನ ಸುಮಾರು 110 ಮಂದಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ತಂಡ ಪ್ರತಿವರ್ಷದಂತೆ ಈ ವರ್ಷವೂ ಬೈಂದೂರು ಸಮೀಪದ ತೂದಳ್ಳಿಯಲ್ಲಿರುವ ಕೂಸಳ್ಳಿ ಫಾಲ್ಸ್‌ಗೆ ತೆರಳಿದ್ದರು. ಈ ಸಂದರ್ಭ ಜಲಪಾತದ ಮೊದಲ ಸ್ಥರದಲ್ಲಿ ಈಜುತ್ತಿದ್ದ ವಿದ್ಯಾರ್ಥಿಗಳ ಪೈಕಿ ಪ್ರಸಾದ್ ಇದ್ದಕ್ಕಿದ್ದಂತೆ  ನೀರಿನಲ್ಲಿ ಮುಳುಗಲಾರಂಭಿಸಿದ. ಆತನನ್ನು ರಕ್ಷಿಸಲು ಗೆಳೆಯರು ಹರಸಾಹಸ ಪಟ್ಟರೂ ಕೊನೆಗೂ ಹಿಡಿತ ತಪ್ಪಿ ಪ್ರಸಾದ್ ನೀರಿನಲ್ಲಿ ಬಂಡೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟನೆನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಆತನನ್ನು ರಕ್ಷಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ನಡೆಸಿದರೂ ಬಂಡೆಯ ನಡುವೆ ಕಂದಕವಿದ್ದುದರಿಂದ ಸಾಧ್ಯವಾಗಲಿಲ್ಲ. ಮುಳಗುತ್ತಿದ್ದ ಇನ್ನೊರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ.ದಾಪ್ರ ಡಾಟ್ ಕಾಂ ಸುದ್ದಿ. ಟ್ರಕ್ಕಿಂಗ್‌ಗೆ ಬಂದಿದ್ದ ಇತರ ವಿದ್ಯಾರ್ಥಿಗಳನ್ನು ಉಡುಪಿಗೆ ಮರಳಿ ಕಳುಹಿಸಲಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಸಮಾರಂಭವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಎ.16ರ ಶನಿವಾರ ಕಳವಾಡಿಯಲ್ಲಿ ವೈಭವದಿಂದ ಜರುಗಲಿದೆ. ಪ್ರತಿಭಾ ಪುರಸ್ಕಾರ, ನೃತ್ಯ, ಸಂಗೀತ, ನಾಟಕ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಜರುಗಲಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಸಭಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಲಿದ್ದಾರೆ. ಈ ಸಂದರ್ಭದಲ್ಲಿ ಊರಿನ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳು ಹಾಗೂ ಸುರಭಿ ಬೈಂದೂರು ತಂಡದಿಂದ ನೃತ್ಯ, ಹೇನಬೇರ್ ರಾಮಚಂದ್ರ ಹಾಗೂ ಯದುರಾಜ್ ಅವರಿಂದ ಸಂಗೀತ ಕಾರ್ಯಕ್ರಮ, ಭೂಮಿಕಾ ಹಾರಾಡಿ ಇವರಿಂದ ಅರಗಿನ ಬೆಟ್ಟ ನಾಟಕ ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಚಿನ್ನ ಕಳವು ಪ್ರಕರಣದಲ್ಲಿ ಕೊಲ್ಲೂರು ದೇವಸ್ಥಾನ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಎಲ್.ಎಸ್. ಮಾರುತಿಯನ್ನು (61) ಬಂಧಿಸಲಾಗಿದೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೆ. ತಿಳಿಸಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕರ್ತವ್ಯ ಲೋಪ, ಘಟನೆಯಲ್ಲಿ ಪರೋಕ್ಷ ಶಾಮೀಲು ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು 409 ಐಪಿಸಿ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ ಎಂದರು. ಎಲ್.ಎಸ್ ಮಾರುತಿ ಅವರನ್ನು ಸಂಜೆ ಕುಂದಾಪುರ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಲಾಗಿದ್ದು, ಹಿರಿಯಡ್ಕ ಜೈಲಿಗೆ ರವಾನಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಘಟನೆಯಲ್ಲಿ ಈಗಾಗಲೇ ಪ್ರಮುಖ ಆರೋಪಿ ಶಿವರಾಮ್ ಮಡಿವಾಳ, ಗಂಗಾಧರ ಹೆಗ್ಡೆ, ಪ್ರಸಾದ್ ಕುಮಾರ್, ನಾಗರಾಜ ಶೇರಿಗಾರ್ ಮತ್ತು ಗಣೇಶ್ ಪೂಜಾರಿ ಎಂಬವರನ್ನು ಬಂಧಿಸಿದ್ದು, ಶಿವರಾಮ ಮಡಿವಾಳ ಹೊರತು ಪಡಿಸಿ ಉಳಿದವರು ಬೇಲ್ ಮೇಲೆ ಹೊರಗೆ ಬಂದಿದ್ದಾರೆ ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಎಲ್.ಎಸ್.ಮಾರುತಿ 2012 ರಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಡ-ಹೆಂಡಿರ ಜಗಳ ತಾರಕಕ್ಕೇರಿ ಪ್ರೀತಿಸಿ ಮದುವೆಯಾದ ಮಡದಿಗೆ ಚೂರಿಯಿಂದ ಇರಿದುದ್ದಲ್ಲದೇ, ತಾನೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಬಳಿಕ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ ತಾಲೂಕಿನ ಬಿದ್ಕಲ್‌ಕಟ್ಟೆಯಲ್ಲಿ ನಡೆದಿದೆ. ಮಡಿಕೇರಿ ಮೂಲದ, ರಿಕ್ಷಾ ಚಾಲಕ ಸುರೇಶ್ (33) ಚೂರಿಯಿಂದ ಇರಿದು ಬಂಧಿತನಾದ ಅಸಾಮಿ. ರೇಣುಕಾ (25) ಗಂಡನಿಂದ ಹಲ್ಲೆಗೊಳಗಾದಾಕೆ. ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ಬಿದ್ಕಲ್‌ಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿರುವ ಈ ಗಂಡ ಹೆಂಡಿರ ನಡುವೆ ಸಂಜೆಯ ವೇಳೆಗೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಸುರೇಶ್,  ತರಕಾರಿ ಹೆಚ್ಚುತ್ತಿದ್ದ ಚೂರಿಯಿಂದ ರೇಣುಕಾಳ ಕುತ್ತಿಗೆಗೆ ಇರಿದಿದ್ದಾನೆ. ಆಕೆಯ ಅರಚಾಟ ಕೇಳಿ ತನ್ನ ತಪ್ಪಿನ ಅರಿವಾಗಿ ಕೂಡಲೇ ಆಕೆಯನ್ನು ರಕ್ಷಿಸಲೂ ಮುಂದಾಗಿದ್ದಾನೆ. ಆದರೆ ಮತ್ತೆ ಇರಿಯುವನೆಂಬ ಭಯದಿಂದ ಓಡುತ್ತಿದ್ದ ಮಡದಿ ಹಿಡಿದುಕೊಳ್ಳುವ ಬರದಲ್ಲಿಆಕೆ ಹೊಟ್ಟೆಗೂ ಚೂರಿ ತಾಕಿ ಗಂಭೀರ ಗಾಯಗೊಂಡಿದ್ದಳು. ಕುಂದಾಪ್ರ ಡಾಟ್ ಕಾಂ ಸುದ್ದಿ ಕೂಗಾಟ ಕೇಳಿ ಅಲ್ಲಿಗೆ ಬಂದ ನೆರಮನೆಯವರ ಸಹಾಯದೊಂದಿಗೆ ಪತ್ನಿಯನ್ನು ತನ್ನದೇ ರಿಕ್ಷಾದಲ್ಲಿ ಕೂರಿಸಿಕೊಂಡು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿಂದ ಸೀದಾ ಕುಂದಾಪುರದ ಠಾಣೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜ್ಞಾನವನ್ನು ಪಡೆಯಲು ಶಿಕ್ಷಣ ಇರಬೇಕೇ ಹೊರತು ಉದ್ಯೋಗಕ್ಕಾಗಿ ಅಲ್ಲ. ಶಿಕ್ಷಣದಿಂದ ಪಡೆದ ಜ್ಞಾನದ ಮೂಲಕ ಸ್ವಂತ ಕಾಲಮೇಲೆ ನಿಲ್ಲುವ ಉದ್ಯೋಗ ಸೃಷ್ಟಿಸಿಕೊಳ್ಳಬೇಕು ಎಂದು ಕೋಟ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಭಂಡಾರ್‌ಕಾರ‍್ಸ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘ ವಾರ್ಷಿಕೋತ್ಸವ ಮತ್ತು ಗುರುವಂದನೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಭಂಡಾರ್‌ಕಾರ್ಸ್ ಕಾಲೇಜ್ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಾಯಕ ನಟ ನಿರ್ದೇಶಕ ರವಿ ಬಸ್ರೂರು, ಹಳೆ ವಿದ್ಯಾರ್ಥಿ ಸಂಘ ಕಾರ‍್ಯದರ್ಶಿ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ಇದ್ದರು.ಹಳೆ ವಿದ್ಯಾರ್ಥಿ ಸಂಘ ವಾರ್ಷಿಕೋತ್ಸವದಲ್ಲಿ ಭಂಡಾರ್‌ಕಾರ್ಸ್ ಕಾಲೇಜ್ ರಂಗಅಧ್ಯಯನ ಕೇಂದ್ರ ನಿರ್ದೇಶಕ ವಸಂತ ಬನ್ನಾಡಿ, ಕನ್ನಡ ವಿಭಾಗದ ನಿವೃತ್ತ ಉಪನ್ಯಾಸಕ ಗೋವಿಂದಪ್ಪ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಕೆ.ಕಾರ್ತಿಕೇಯ ಮಧ್ಯಸ್ಥೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನ್ಯಾಯವಾದಿ ರಾಘವೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ.ಎ.9: ಇಲ್ಲಿನ ರಾಮಕ್ಷತ್ರಿಯ ಯುವಕ ಮಂಡಳಿ ಸಾರಥ್ಯದಲ್ಲಿ ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿರುವ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಅಂಗವಾಗಿ ಸೀತಾರಾಮಚಂದ್ರ ಉತ್ಸವ ಮೂರ್ತಿಯನ್ನು ಕುಂದಾಪುರ ಶಾಸ್ತ್ರೀ ವೃತ್ತದಿಂದ ದೇವಸ್ಥಾನದವರೆಗೆ ರಾಮಕ್ಷತ್ರೀಯ ಸಮಾಜದವರಿಂದ ಪುರಮೆರವಣಿಗೆಯಲ್ಲಿ ಕೊಂಡೊಯ್ದರು. ಸಂಜೆ ೫:೩೦ರಿಂದ ಸೀತಾಕಲ್ಯಾಣೋತ್ಸವ ಜರುಗಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಹೆತ್ತವರು ಗಮನಿಸುತ್ತ ಇರಬೇಕು. ಶಿಕ್ಷಣ ಸಂಸ್ಥೆಯ ಜೊತೆ ಪೋಷಕರು ನಿಕಟ ಸಂಬಂಧ ಇಟ್ಟುಕೊಳ್ಳಬೇಕು. ಶಿಕ್ಷಕರು ಕೂಡಾ ಸೇವಾಧರ್ಮದಿಂದ ಕೆಲಸ ನಿರ್ವಹಿಸಿದಾಗ ಉತ್ತಮ ಪ್ರಜೆಗಳ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ವಂಡ್ಸೆ ಗ್ರಾಮದ ಆತ್ರಾಡಿಯಲ್ಲಿ ನಡೆದ ವಿಜಯ ಮಕ್ಕಳ ಕೂಟ ದೇವಲ್ಕುಂದ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯರಾದ ಉದಯ ಜಿ.ಪೂಜಾರಿ, ನಿವೃತ್ತ ಶಿಕ್ಷಕರಾದ ರಾಜೀವ ಶೆಟ್ಟಿ ಬಗ್ವಾಡಿ, ಗ್ರಾಮ ಸೇವಾ ಸಂಗಮದ ಅಧ್ಯಕ್ಷೆ ಅನಿತಾ ರಾಘವೇಂದ್ರ ಹೆಬ್ಬಾರ್, ಗ್ರಾಮ ಸೇವಾ ಸಂಗಮದ ಸದಸ್ಯ ಪಿ.ರಾಜಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಿಗೆ ಆಯೋಜಿಸದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಶ್ ಶೆಟ್ಟಿ…

Read More

ಕುಂದಾಪುರ: ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮತ್ತು ಅಮಾಸೆಬೈಲು ಗ್ರಾಮ ಅಂಗವಿಕಲರ ಸಂಘದ ಅಧ್ಯಕ್ಷ- ಅಂಧ ಅಂಗವಿಕಲ ಗಣಪತಿ ಪೂಜಾರಿ ಎಂಬುವವರು ಮಾಹಿತಿ ಹಕ್ಕಿನ ಕಾಯಿದೆಯಡಿ ಅಂಗವಿಕಲರಿಗೆ ವಿವಿಧ ಸೌಲಭ್ಯ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ಕೇಳಲು ಅಮಾಸೆಬೈಲು ಗ್ರಾಮ ಪಂಚಾಯತ್ ಕಛೇರಿಗೆ ತೆರಳಿದ್ದಾಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಇತರ ಇಬ್ಬರು ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಮಿಲಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿ ತಳ್ಳಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರು ಏಪ್ರಿಲ್ 12ರಂದು ಕುಂದಾಪುರ ತಾಲೂಕು ಪಂಚಾಯತ್ ಕಛೇರಿ ಎದುರು ಅಂಗವಿಕಲರು ಭೃಹತ್ ಧರಣಿ ಸತ್ಯಾಗ್ರಹ ಹೋರಾಟ ಹಮ್ಮಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ ಡಾ.ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ಕುಂದಾಪುರದಲ್ಲಿ ನಡೆದ ಕಸಾಪ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಬೈಂದೂರು ಹೋಬಳಿ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ.ಸುಬ್ರಹ್ಮಣ್ಯ ಭಟ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಬೈಂದೂರಿನ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕತೆ, ಕವನ, ಲೇಖನ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರ ಹಲವು ಪುಸ್ತಕಗಳು ಪ್ರಕಟಗೊಂಡಿವೆ. ಇವರು ಬರೆದ ಕತೆ ‘ವಿಷದ ಮಳೆ’ ತುಳುಭಾಷೆಯಲ್ಲಿ ಚಲನಚಿತ್ರವಾಗಿದ್ದು, 2005ರ ಸಾಲಿನ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನವಾಚನಗೈದಿರುವ ಇವರು ಹಲವು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಉಡುಪಿ ಜಿಲ್ಲಾ ಆರ್ಟಿಐ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಜನಸ್ಪಂದನ…

Read More