ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಾರದೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಹಾಯಹಸ್ತ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಕಿ ಎಸ್. ಮಯ್ಯ ಹೇಳಿದರು. ಅವರು ಸೋಮವಾರ ಗುಂಡ್ಮಿಯಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಹಾಗೂ ಜನಸ್ಪಂದನ ಮಿತ್ರ ಬಳಗ ಗುಂಡ್ಮಿ ಇವರ ಆಶ್ರಯದಲ್ಲಿ 16ನೇ ವರ್ಷದ ಶಾರದೋತ್ಸವ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಬದ್ಧತೆಯ ಮೂಲಕ ಸಾಂಸ್ಕೃತಿಕ ವೇದಿಕೆ ಕಲ್ಪಿಸಿ ಧಾರ್ಮಿಕ ಕಾರ್ಯಕ್ಕೆ ಒತ್ತು ನೀಡಿ ಗ್ರಾಮ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಶಾರದೋತ್ಸವ ತೊರಿಸಿಕೊಟ್ಟಿವೆ, ವಿದ್ಯೆ ಮತ್ತು ಅನ್ನದಾನ ಶ್ರೇಷ್ಠದಾನಗಳಾಗಿದ್ದು ಉತ್ಸವಗಳು ಅರ್ಥಪೂರ್ಣ ವ್ಯವಸ್ಥೆಗೆ ಮುನ್ನುಡಿ ಬರೆದಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಗುಂಡ್ಮಿ ಪ್ರಾಥಮಿಕ ಶಾಲೆ ಎರಡು ಕಂಪ್ಯೂಟರ್ ಹಾಗೂ ಸ್ಥಳೀಯ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಕೋಟ ಸಿಎ ಬ್ಯಾಂಕ್ ನಿರ್ದೇಶಕ ರಘು ಮಧ್ಯಸ್ಥ, ಉದ್ಯಮಿ ನಾಗರಾಜ್ ಪಡುಕರೆ, ನಿವೃತ್ತ ಬ್ಯಾಂಕ್ ಉದ್ಯೋಗಿ ಭೋಜರಾಜ್ ದೇವಾಡಿಗ, ಸಾಂಸ್ಕೃತಿಕ ಚಿಂತಕಿ ಮಂಜುಳಾ ಮುರುಲೀಧರ್ ರಾವ್,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ತಾರಿಕಟ್ಟೆ ಕ್ರಾಸ್ ಹತ್ತಿರ ನಡೆದಿದೆ. ಮೃತರನ್ನು ಕುಯಿರ ನಾಯ್ಕ (61) ಎಂದು ಗುರುತಿಸಲಾಗಿದೆ ಬೈಕೊಂದು ಬೆಳ್ವೆ ಕಡೆಯಿಂದ ಗೊಳಿಯಂಗಡಿ ಕಡೆಗೆ ಹೋಗುತ್ತಿದ್ದ ಬೈಕ್, ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತಿದ್ದ ಕುಯಿರ ನಾಯ್ಕಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಕುಯಿರ ನಾಯ್ಕ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.21ರಂದು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಅಪಘಾತದಿಂದ ಬೈಕ್ ಸವಾರ ಕೃಷ್ಣ ಎಂಬವರು ಕೂಡ ಗಾಯಗೊಂಡರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್, ಕೋಸ್ಟಾ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಸುಜ್ಞಾನ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ಮತ್ತು ಬೈಂದೂರು ತಾಲೂಕು ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಬಾಲಕರ ವಿಭಾಗದಲ್ಲಿ ಶಮಂತ್ ಜೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಮಾನ್ಯ ಪೂಜಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಶಮಂತ್ ಜೆ. ಅವರು ಶಯನ್ ಶೆಟ್ಟಿ ವಿರುದ್ಧ 18-16, 15-13 ಅಂತರದ ನೇರ ಗೇಮ್ಗಳ ಜಯ ದಾಖಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಚಾಂಪಿಯನ್ ಶಮಂತ್ ಅವರಿಗೆ ₹5,000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್ಅಪ್ ಸ್ಥಾನ ಪಡೆದ ಶಯನ್ ಶೆಟ್ಟಿ ₹3,000 ನಗದು ಬಹುಮಾನ ಹಾಗೂ ಟ್ರೋಫಿ ಪಡೆದರು. ಬಾಲಕರ ವಿಭಾಗದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗಂಗೊಳ್ಳಿಯ ಆರ್ಯನ್ ಅವರು ಕುಂದಾಪುರದ ಮೆಲ್ರಾನ್ ಕೋಥಾ ಅವರನ್ನು ಮಣಿಸಿ ಮೂರನೇ ಸ್ಥಾನ ಗಳಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಧವಳಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ಕಾಲೇಜು ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಆಳ್ವಾಸ್ ಕಾಲೇಜು ಸತತ 23ನೇ ಬಾರಿ ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವಿಶ್ವವಿದ್ಯಾನಿಲಯ ಮಟ್ಟದ ವೇಟ್ಲಿಫ್ಟಿಂಗ್ನಲ್ಲಿ ತನ್ನ ಕ್ರೀಡಾ ಸಾಧನೆಯನ್ನು ಮುಂದುವರಿಸಿದೆ. ಮಹಿಳಾ ವಿಭಾಗದಲ್ಲಿ ಶ್ರಾವ್ಯ, ಸೀಮಾ, ಕಾಂಚನಾ, ಮಾನಸ ಹಾಗೂ ವಿತಶ್ರಿ ಚಿನ್ನದ ಪದಕಗಳನ್ನು ಗೆದ್ದರೆ, ನೀಲಾಂಬಿಕೆ ಮತ್ತು ಪಲ್ಲವಿ ಬೆಳ್ಳಿ ಪದಕಗಳನ್ನು ಪಡೆದರು. ಪುರುಷರ ವಿಭಾಗದಲ್ಲಿ ವೀರೇಶ್, ಗುಲ್ಸನ್ ಕುಮಾರ್, ಗಣೇಶ್, ಶುಭಮ್ ಹಾಗೂ ಗಣೇಶ್ ಗೌಡ ಚಿನ್ನದ ಪದಕಗಳನ್ನು ಗೆದ್ದರು. ಅಶ್ವಿನ್, ಸಂಗಮ್ ಮತ್ತು ತೇಜಸ್ ಬೆಳ್ಳಿ ಪದಕಗಳನ್ನು ಪಡೆದು ತಂಡದ ಸಾಧನೆಗೆ ಕೊಡುಗೆ ನೀಡಿದರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ತಾಲೂಕಿನ ಪಾರಂಪಳ್ಳಿ ಗ್ರಾಮದ ಮಸೀದಿ ಬಳಿಯ ಬೀಚ್ ಹತ್ತಿರದ ಪತ್ನಿ ಮನೆಯಲ್ಲಿ ವಾಸವಿದ್ದ ಮೊಹಮ್ಮದ್ ಇಕ್ಬಾಲ್ (47) ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದು ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕೋಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೋಟತಟ್ಟು ಗ್ರಾಮದ ನಿವಾಸಿ ಆಟೋ ಹಾಗೂ ಲ್ಯಾಂಡ್ ಲಿಂಕ್ ಕೆಲಸ ನಿರ್ವಹಿಸುತ್ತಿದ್ದ ಮೊಹಮ್ಮದ್ ಇಕ್ಸಾಲ್ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ಅ.19ರಂದು ಬೆಳಗಿನ ಜಾವ ಇಟ್ಬಾಲ್ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ ಅವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಇಕ್ಬಾಲ್ ಮತ್ತು ಪತ್ನಿ ಸಫ್ರಾಭಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿರುವುದಾಗಿ ಇನ್ಸಾಲ್ ಮನೆಗೆ ಬಂದಾಗ ಹೇಳಿಕೊಳ್ಳುತ್ತಿದ್ದರು. ಅದೇ ರೀತಿ ಅವರ ಪತ್ನಿ ಹಾಗೂ ಪತ್ನಿಯ ಮನೆಯವರು ಹಿಂದಿನಂತೆ ಗಲಾಟೆ ಮಾಡಿರುವ ಸಾಧ್ಯತೆಯಿದ್ದು, ಅವರ ಸಾವಿನಲ್ಲಿ ಸಂಶಯವಿದೆ ಎಂದು ಇಕ್ಸಾಲ್ ಅವರ ಸಹೋದರಿ ಬಲ್ಕಿಸ್ ಅವರು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಗಣದಲ್ಲಿರುವ ಸರಸ್ವತಿ ದೇವರ ಮೂರ್ತಿಗೆ ನವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾಲೇಜಿನ ಗ್ರಂಥಾಲಯದಲ್ಲಿ ಶಾರದಾ ಪೂಜಾ ಕಾರ್ಯಕ್ರಮವನ್ನು ಭಜನಾ ಕೀರ್ತನೆಯೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಗಿರಿರಾಜ್ ಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಮುಖ್ಯ ಗ್ರಂಥಪಾಲಕರಾದ ಮಹೇಶ್ ನಾಯ್ಕ್, ಗ್ರಂಥಾಲಯ ಸಹಾಯಕಿ ಪ್ರತೀಕಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇದರ ಸಹಕಾರದೊಂದಿಗೆ ಶಂಕರನಾರಾಯಣದಲ್ಲಿ ನಡೆದ ’ಯುವ ಸೌರಭ’ 2026-27ನೇ ಸಾಲಿನ ಯುವ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಕೊಳಲು ವಾದಕ ಶಾಮ್ ಜಿ. ಎನ್. ಪೂಜಾರಿ ಗಂಗೊಳ್ಳಿ ಇವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಧುನಿಕ ವೈದ್ಯಕೀಯ ತಂತ್ರಜ್ಞಾನ, ಪರಿಣತ ವೈದ್ಯಕೀಯ ಸೇವೆ ಮತ್ತು ಕೈಗೆಟುಕುವ ದರದ ಚಿಕಿತ್ಸೆಯ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ ಮೂಡುಬಿದಿರೆಯ ಆಳ್ವಾಸ್ ಆರೋಗ್ಯ ಕೇಂದ್ರವು ಶಸ್ತçಚಿಕಿತ್ಸಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಒಂದು ದಶಕದಲ್ಲಿ ಕೇಂದ್ರದಲ್ಲಿ 5,000ಕ್ಕೂ ಅಧಿಕ ಲ್ಯಾಪ್ರೊಸ್ಕೋಪಿಕ್ ಶಸ್ತçಚಿಕಿತ್ಸೆಗಳು ಮತ್ತು ಎಂಡೋಸ್ಕೋಪಿಕ್ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಆಧುನಿಕ ಶಸ್ತçಚಿಕಿತ್ಸಾ ವಿಧಾನಗಳನ್ನು ಸ್ಥಳೀಯವಾಗಿಯೇ ಲಭ್ಯವಾಗಿಸುವ ಮೂಲಕ ರೋಗಿಗಳಿಗೆ ಸುಧಾರಿತ ಚಿಕಿತ್ಸಾ ಸೇವೆ ಒದಗಿಸುವಲ್ಲಿ ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. 1986ರ ಮೇ.31 ರಂದು ಡಾ. ಎಂ. ಮೋಹನ್ ಆಳ್ವರಿಂದ ಸ್ಥಾಪನೆಯಾದ ಆಳ್ವಾಸ್ ಆರೋಗ್ಯ ಕೇಂದ್ರವು ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ವಿವಿಧ ವೈದ್ಯಕೀಯ ಮತ್ತು ಶಸ್ತçಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದೆ. ಸಾಮಾನ್ಯ ಶಸ್ತçಚಿಕಿತ್ಸೆ, ಲ್ಯಾಪ್ರೊಸ್ಕೋಪಿಕ್ ಶಸ್ತçಚಿಕಿತ್ಸೆ ಮತ್ತು ಎಂಡೋಸ್ಕೋಪಿಕ್ ಚಿಕಿತ್ಸಾ ವಿಧಾನಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಶಸ್ತçಚಿಕಿತ್ಸಾ ತಜ್ಞ ಡಾ. ವಿನಯ್ ಆಳ್ವರ ನೇತೃತ್ವದಲ್ಲಿ ವಿಭಾಗವು ಆಧುನಿಕ ಚಿಕಿತ್ಸಾ ತಂತ್ರಗಳನ್ನು ಅಳವಡಿಸಿಕೊಂಡಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಯಾಣಿಕರಾಗಿ ಬಂದಿದ್ದ ದಂಪತಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ವೊಂದನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು ಅದನ್ನು ಗಮನಿಸಿದ ಆಟೋ ರಿಕ್ಷಾ ಚಾಲಕ ಫಝಲು ರೆಹಮಾನ್ ಎಂಬುವರು ಗಂಗೊಳ್ಳಿ ಪೊಲೀಸ್ ಠಾಣೆ ಮೂಲಕ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅ.17 ರಂದು ಆಟೋ ಚಾಲಕರಾದ ಫಝಲು ರೆಹಮಾನ್ ಎನ್ನುವರ ಆಟೋದಲ್ಲಿ ಬಾಡಿಗೆ ಬಂದಿದ್ದ ಕೇಶವ ತೋಳಾರ್ ಹಾಗೂ ಅವರ ಪತ್ನಿಯು ಆಟೋ ರಿಕ್ಷಾದಲ್ಲೇ ಅಂದಾಜು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದು, ಚಾಲಕ ಫಝಲು ರೆಹಮಾನ್ ಪ್ರಾಮಾಣಿಕತೆಯಿಂದ ಈ ಬ್ಯಾಗ್ನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ತಂದು ನೀಡಿದ್ದು ಬ್ಯಾಗ್ ವಾರೀಸುದಾರರ ಪತಿ ಕೇಶವ ತೋಳಾರ್ ಅವರು ಠಾಣೆಗೆ ಅಗಮಿಸಿ ಬ್ಯಾಗ್, ಮೊಬೈಲ್ ಫೋನ್ ಹಾಗೂ ಇತರ ದಾಖಲಾತಿಗಳನ್ನು ಪರಿಶೀಲಿಸಿ ಪಡೆದುಕೊಂಡರು. ಆಟೋ ಚಾಲಕರಾದ ಫಝಲು ರೆಹಮಾನ್ ಅವರ ಪ್ರಾಮಾಣಿಕತೆಗೆ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ 2001ರಲ್ಲಿ ಆರಂಭಗೊಂಡ ಸೈಂಟ್ ಥಾಮಸ್ ಹೈಯರ್ ಪ್ರೈಮರಿ ಸ್ಕೂಲ್ ಇದೀಗ ‘ಸೈಂಟ್ ಥಾಮಸ್ ಸೆಂಟ್ರಲ್ ಸ್ಕೂಲ್’ ಎಂಬ ನೂತನ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದೆ. ಕರ್ನಾಟಕ ಸರ್ಕಾರದ ಅನುಮೋದನೆ ಹಾಗೂ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಮಾನ್ಯತೆಯ ಮೇರೆಗೆ ಶಾಲೆಯ ಮರುನಾಮಕರಣಕ್ಕೆ ಅನುಮೋದನೆ ದೊರೆತಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ. ಮಂಡಳಿಯು 18-10-2026ರಂದು ಪತ್ರ ಸಂಖ್ಯೆ CNOO 180-27 28/2027-28ರ ಮೂಲಕ ಮರುನಾಮಕರಣಕ್ಕೆ ಸಂಬಂಧಿಸಿದ ಆದೇಶ ನೀಡಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ಶಾಲೆಯ ಅಧಿಕೃತ ದಾಖಲೆಗಳು, ಪತ್ರವ್ಯವಹಾರಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ‘ಸೈಂಟ್ ಥಾಮಸ್ ಸೆಂಟ್ರಲ್ ಸ್ಕೂಲ್’ ಎಂಬ ಹೆಸರನ್ನು ಬಳಸಲಾಗುತ್ತದೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಕಲಿಕಾ ಸೌಲಭ್ಯಗಳು ದೊರೆಯಬೇಕು ಎಂಬ…
