ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಕ್ಟೋಬರ್ 23 ರಿಂದ 27 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ 41ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್ನ 11 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ:ನಿತಿನ್ ಎಲ್ ಜಿ – ಚಕ್ರ ಎಸೆತ, ಆರಂಭಮ್ ರಾಜು – 60ಮೀ ಸಮರ್ಥ್ ಸಂಜೀವ್ ಕುಮಾರ್ – 1000ಮೀ, ಸಾಹಿಲ್ – 100 ಮೀ, ಕೃಷ್ಣ – ಜಾವೆಲಿನ್ ಎಸೆತ, ಧನುಷ್ಚಂದ್ರ – ಚಕ್ರ ಎಸೆತ. ಬಾಲಕಿಯರ ವಿಭಾಗದಲ್ಲಿ :ಬಾನವಿ ಪಿ ಎಸ್ – 400ಮೀ, ಭಗೀರಥಿ – 3ಕಿಮೀ ನಡಿಗೆ, ಚರೀಷ್ಮಾ – 3000ಮೀ, ಪ್ರಿಯಾಂಕ – 1000ಮೀ, ನಿರ್ಮಲಾ – 400ಮೀ ಹರ್ಡಲ್ಸ್. ಆಯ್ಕೆಯಾದ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಏಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ಈ ವರ್ಷದ ಶರನ್ನವರಾತ್ರಿಯ ಎಲ್ಲಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಕೂಡಿ ಯಶಸ್ವಿಯಾಗಿ ಜರುಗಿದವು. ಮಹಾಲಯ ಅಮಾವಾಸ್ಯೆಯಂದು ಮಹಾವಿಷ್ಣು ಪ್ರೀತ್ಯರ್ಥವಾಗಿ ಸಾಮೂಹಿಕವಾಗಿ ಸಂಪೂರ್ಣ ಭಗವದ್ಗೀತಾ ಹಾಗೂ ವಿಷ್ಣು ಸಹಸ್ರನಾಮ ಪಟಿಸಿ ಪರಮಾತ್ಮನನ್ನು ವೇದಮಂತ್ರಗಳಿಂದ ಸ್ತುತಿಸಿ, ಭಜಿಸಿ, ಪೂಜಿಸಿ ಅನ್ನಪ್ರಸಾದ ವಿತರಿಸಲಾಯಿತು. ಪ್ರಥಮ ನವರಾತ್ರಿಯಂದು ಗಣ ಹವನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ನವರಾತ್ರಿಯ ಪ್ರತೀ ದಿನವೂ ಪ್ರಾಥಕಾಲ 5 ಘಂಟೆಯಿಂದ ಸಪ್ತಶತಿಯ ಪಾರಾಯಣ ಮಾಡಿ 6:30 ರಿಂದ 7:15 ರ ತನಕ ಪ್ರಾಥ ಪೂಜೆಯನ್ನು ಮಾಡಲಾಯಿತು. ನಂತರ 8:30 ರಿಂದ ವಿದ್ಯಾರ್ಥಿಗಳು ಲಲಿತ ಸಹಸ್ರನಾಮ ಪಟಿಸಿ ಚಂಡಿಕಾ ಪಾರಾಯಣ ಮಾಡಿ 11ಘಂಟೆಯಿಂದ ಆಯಾ ದಿನದ ದೇವಿಯ ರೂಪವನ್ನು ಸ್ತುತಿಸಿ, ಭಜಿಸುತ್ತಿದ್ದರು. 12 ಘಂಟೆಗೆ ಮಹಾಪೂಜೆ ಆರಂಭಿಸಿ 1 ಘಂಟೆಗೆ ಅನ್ನಪ್ರಸಾದ ವಿತರಿಸಲಾಯಿತು. ರಾತ್ರಿ 7 ಘಂಟೆಗೆ ಮಹಾ ಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಆ ದಿನದ ಕಾರ್ಯಕ್ರಮ ಸಂಪನ್ನಗೊಳಿತು. ಪ್ರತೀ ದಿನವೂ ಮಾತೆಯರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಳಗೇರಿಯ ಶ್ರೀ ಕೊಕ್ಕೇಶ್ವರ ಹಾಗೂ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಹಳಗೇರಿ ಶ್ರೀ ಕೋಕ್ಕೆಶ್ವರ ಹಾಗೂ ವನದುರ್ಗಾ ದೇವಿ ದೇವಸ್ಥಾನದ ಆಡಳಿತ ಮೊಕ್ತೇಶ್ವರರಾದ ವಾಸುದೇವ್ ಕಾರಂತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನವರಾತ್ರಿಯ ಪರ್ವ ಕಾಲದಲ್ಲಿ ದೇವಿಯನ್ನು ಆರಾಧಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ನಮ್ಮ ದೇಗುಲದಲ್ಲಿ ಊರವರ ಸಹಕಾರದೊಂದಿಗೆ ಶರನ್ನವರಾತ್ರಿ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸಂತಸದ ವಿಚಾರವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪ್ರ ಡಾಟ್ ಕಾಂನ ಸಂಪಾದಕರಾದ ಸುನಿಲ್ ಎಚ್.ಜಿ. ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಒದಗಿಸುವಲ್ಲಿ ಟೀಮ್ ಗೆಳಯರ ಬಳಗ ಹಳಗೇರಿ ಯಶಸ್ವಿಯಾಗಿದೆ. ಯುವಕರ ಸಂಘಟನಾ ಶಕ್ತಿ ಪರಸ್ಪರ ಸೌಹಾರ್ದ ಮನೋಭಾವ ಊರಿನ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ನಳಿನ್ಕುಮಾರ್ ಶೆಟ್ಟಿ, ಹಳಗೇರಿ ಶ್ರೀ ಕೋಕ್ಕೆಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸೆಪ್ಟೆಂಬರ್ 2026ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ. ರಕ್ಷಾ ರಾಮಚಂದ್ರ ನಾಯ್ಕ್ ಎರಡೂ ಗ್ರೂಪ್ಗಳಲ್ಲಿ ಮೊದಲ ಪ್ರಯತ್ನದಲ್ಲೇ 435 ಅಂಕಗಳೊಂದಿಗೆ ಉತ್ತೀರ್ಣಳಾಗಿ, ರಾಷ್ಟ್ರೀಯ ಮಟ್ಟದಲ್ಲಿ 49ನೇ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಒಟ್ಟು ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಎ ಇಂಟರ್ಮೀಡಿಯೇಟ್ ಗ್ರೂಪ್-1 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ತೀರ್ಣತಾ ಪ್ರಮಾಣ ಶೇ.23.14ರಷ್ಟಿದ್ದರೆ, ಆಳ್ವಾಸ್ ಪದವಿ ಕಾಲೇಜಿನ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 54.54ರ ಫಲಿತಾಂಶ ದಾಖಲಿಸಿದ್ದಾರೆ. ಗ್ರೂಪ್-2ರಲ್ಲಿ ರಾಷ್ಟ್ರೀಯ ಉತ್ತೀರ್ಣತಾ ಪ್ರಮಾಣ ಶೇ.18.92ರಷ್ಟಿದ್ದರೆ, ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.31.03ರ ಫಲಿತಾಂಶ ಸಾಧಿಸಿದ್ದಾರೆ. ಎರಡೂ ಗ್ರೂಪ್ಗಳ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ತೀರ್ಣತಾ ಪ್ರಮಾಣ ಶೇ.13.21ರಷ್ಟಿದ್ದರೆ, ಆಳ್ವಾಸ್ನ ಆರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.23.08ರ ಫಲಿತಾಂಶ ದಾಖಲಿಸಿದ್ದಾರೆ.ಎರಡೂ ಗ್ರೂಪ್ಗಳಲ್ಲಿ ಗಮನಾರ್ಹ ಸಾಧನೆ:ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನಾ ಸಮಾರಂಭ ಇತ್ತೀಚಿಗೆ ಬೈಂದೂರಿನ ಜೆಎನ್ಆರ್ ಕಲಾಮಂದಿರದಲ್ಲಿ ಅದ್ಧೂರಿಯಾಗಿ ಜರುಗಿತು. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಒಕ್ಕೂಟವನ್ನು ಉದ್ಘಾಟಿಸಿ, ಸಮುದಾಯ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದರು. ಯುವ ಪೀಳಿಗೆಯನ್ನು ಅಭಿವೃದ್ಧಿ ಮತ್ತು ಕಲ್ಯಾಣದತ್ತ ಕೊಂಡೊಯ್ಯಲು ವೈಚಾರಿಕ ಬದಲಾವಣೆ ಅಗತ್ಯ ಎಂದು ಅವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್, ವೈದ್ಯಕೀಯ ನಿರ್ದೇಶಕರು, ಪ್ರಸಾದ್ ನೇತ್ರಾಲಯ ಮಾತನಾಡಿ, ಕೋಟೆಗಾರ ಎಂದರೆ ಸತ್ಯ, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಇನ್ನೊಂದು ಹೆಸರು ಎಂದು ಅವರು ಬಣ್ಣಿಸಿದರು. ಯುವಕರು ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳನ್ನು ಅರಿತು ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು. ನೂತನ ಅಧ್ಯಕ್ಷ ಕೊತ್ತಾಲ್ ಪದ್ಮನಾಭ ಶೇರುಗಾರ್ ಗಂಗೊಳ್ಳಿ ಅವರು ಸ್ವೀಕಾರ ಭಾಷಣದಲ್ಲಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯತಂತ್ರದ ಯೋಜನೆಗಳನ್ನು ತಂಡವಾಗಿ ರೂಪಿಸುವುದಾಗಿ ತಿಳಿಸಿದರು. ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರೇಗಾರ್ ಹೆಬ್ರಿ ಸ್ವಾಗತಿಸಿದರು. ಡಾ. ರಾಜೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ದೇವಿಯನ್ನು ಪ್ರೀತಿಯಿಂದ ಆರಾಧಿಸಬೇಕು ಹೊರತು ಭೀತಿಯಿಂದಲ್ಲ. ಪ್ರೀತಿಯಿಂದ ಮಾಡಿದಾಗ ಆಚರಣೆಗೆ ಅರ್ಥ ಬರುತ್ತದೆ. ಭೀತಿಯಿಂದ ಮಾಡಿದಾಗ ಯಾವುದೇ ಅರ್ಥವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ನಡೆದ ‘ನವರಾತ್ರ ನಮಸ್ಯಾ’ ಮಹಾ ಸಮಾರೋಪದ ಧರ್ಮ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮ್ಮೊಳಗೇ ದೇವಿಯ ಸಾನ್ನಿಧ್ಯವಿದ್ದು, ನಮ್ಮ ಹೃದಯ ಮಂದಿರದಲ್ಲಿರುವ ದೇವಿಯನ್ನು ಅಂತರ್ಮುಖಿಗಳಾಗಿ ನೋಡಲು ಸೂಕ್ತ ಕಾಲ ಈ ನವರಾತ್ರಿ. ಹೋಮ, ಪಾರಾಯಣ, ದೀಪ ನಮಸ್ಕಾರ ಎಲ್ಲವೂ ನಮ್ಮೊಳಗಿರುವ ದೇವಿಯ ಸಾನ್ನಿಧ್ಯವನ್ನು ಕಾಣಲು ಇರುವ ಉಪಕರಣಗಳು. ಸತ್ತ್ವ – ರಜೋ – ತಮೋಗುಣಗಳಿಂದಲೇ ಪ್ರಪಂಚ ನಿರ್ಮಿತವಾಗಿದೆ. ಆ ಮೂರು ಗುಣಗಳೇ ತ್ರಿಗುಣಾತ್ಮಿಕಾ ದೇವಿಯಾಗಿದ್ದು, ಆ ಮೂರು ಗುಣಗಳ ಸಮತೋಲನವನ್ನು ಕಲಿತರೆ ನಾವು ಜೀವನವನ್ನು ಗೆಲ್ಲಬಹುದು ಎಂದರು. ನವರಾತ್ರಿಯಲ್ಲಿ ಉಪವಾಸದ ಆಚರಣೆಯು ವಿಶೇಷವಾಗಿದೆ. ಸರಿಯಾದ ಉಪವಾಸದ ಆಚರಣೆಯಿಂದ ಆರೋಗ್ಯ ವೃದ್ಧಿಯನ್ನು ಕಾಣಬಹುದಾಗಿದ್ದು, ಇದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಗುರುವಾರ ರೋಟರಾಕ್ಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿಯ ಜಿಲ್ಲಾ ಸಲಹೆಗಾರರಾದ ಅಭಿನಂದನ್ ಎ. ಶೆಟ್ಟಿ ಅವರು ಕ್ಲಬ್ ಅನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ರೋಟರಾಕ್ಟ್ ಕ್ಲಬ್ನ ಮಹತ್ವ, ಉದ್ದೇಶ ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ಅಮೂಲ್ಯ ಸಂದೇಶ ನೀಡಿದರು. ಕೋಟೇಶ್ವರ ರೋಟರಿ ಕ್ಲಬ್ನ ಅಧ್ಯಕ್ಷರಾದ ಅಕ್ಷತಾ ಗಿರೀಶ್ ಐತಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಕೋಟೇಶ್ವರ ರೋಟರಿ ಕ್ಲಬ್ನ ಕಾರ್ಯದರ್ಶಿ ಅರುಣ್ ದೇವಾಡಿಗ, ವಿಜಯ ನಾಯಕ್, ಗಣೇಶ್ ಶೆಟ್ಟಿ ಮೊಳಹಳ್ಳಿ, ಸುಧಾಕರ ಶೆಟ್ಟಿ ತೆಕ್ಕಟ್ಟೆ, ಕಾಲೇಜಿನ ರೋಟರಾಕ್ಟ್ ಕ್ಲಬ್ನ ಸಂಯೋಜಕಿ ಸುನಿತಾ ಹಾಗೂ ವಿದ್ಯಾರ್ಥಿ ಸಂಯೋಜಕಿ, ತೃತೀಯ ಬಿ.ಬಿ.ಎ. ವಿದ್ಯಾರ್ಥಿನಿ ಸುಹಾನಿ ಬಿ. ನಾಯಕ್ ಉಪಸ್ಥಿತರಿದ್ದರು. ಪ್ರಥಮ ಬಿ.ಬಿ.ಎ. ವಿದ್ಯಾರ್ಥಿನಿ ಸ್ಮೃತಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ವರ್ಷದ ಬಿ.ಬಿ.ಎ. ವಿದ್ಯಾರ್ಥಿನಿ ಸುಹಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಗದಗದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿ ಸಮಿತ್ ಶೆಟ್ಟಿ 17ರ ವಯೋಮಾನದ 110 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ನಿರಂತರ ಅಭ್ಯಾಸ, ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದ ಮೂಲಕ ರಾಜ್ಯಮಟ್ಟದಲ್ಲಿ ಈ ಗಮನಾರ್ಹ ಸಾಧನೆ ಮಾಡಿರುವ ಸಮಿತ್ ಶೆಟ್ಟಿ ಗ್ರಾಮೀಣ ಪ್ರತಿಭೆಗಳು ರಾಜ್ಯಮಟ್ಟದಲ್ಲಿಯೂ ಮಿಂಚಬಲ್ಲವು ಎಂಬುದನ್ನು ಸಾಬೀತುಪಡಿಸಿದ್ದಾನೆ. ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಅವರ ಮಾರ್ಗದರ್ಶನ, ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ಸಮಿತ್ನ ಈ ಸಾಧನೆಗೆ ಮಹತ್ವದ ಕೊಡುಗೆ ನೀಡಿವೆ. ವಿದ್ಯಾರ್ಥಿಯ ಈ ಯಶಸ್ಸು ಶಾಲೆಯ ಕ್ರೀಡಾ ಕ್ಷೇತ್ರಕ್ಕೆ ಮತ್ತೊಂದು ಗರಿಮೆಯನ್ನು ತಂದುಕೊಟ್ಟಿದೆ. ಸಮಿತ್ನ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಾರದೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಹಾಯಹಸ್ತ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಕಿ ಎಸ್. ಮಯ್ಯ ಹೇಳಿದರು. ಅವರು ಸೋಮವಾರ ಗುಂಡ್ಮಿಯಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಹಾಗೂ ಜನಸ್ಪಂದನ ಮಿತ್ರ ಬಳಗ ಗುಂಡ್ಮಿ ಇವರ ಆಶ್ರಯದಲ್ಲಿ 16ನೇ ವರ್ಷದ ಶಾರದೋತ್ಸವ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಬದ್ಧತೆಯ ಮೂಲಕ ಸಾಂಸ್ಕೃತಿಕ ವೇದಿಕೆ ಕಲ್ಪಿಸಿ ಧಾರ್ಮಿಕ ಕಾರ್ಯಕ್ಕೆ ಒತ್ತು ನೀಡಿ ಗ್ರಾಮ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಶಾರದೋತ್ಸವ ತೊರಿಸಿಕೊಟ್ಟಿವೆ, ವಿದ್ಯೆ ಮತ್ತು ಅನ್ನದಾನ ಶ್ರೇಷ್ಠದಾನಗಳಾಗಿದ್ದು ಉತ್ಸವಗಳು ಅರ್ಥಪೂರ್ಣ ವ್ಯವಸ್ಥೆಗೆ ಮುನ್ನುಡಿ ಬರೆದಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಗುಂಡ್ಮಿ ಪ್ರಾಥಮಿಕ ಶಾಲೆ ಎರಡು ಕಂಪ್ಯೂಟರ್ ಹಾಗೂ ಸ್ಥಳೀಯ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಕೋಟ ಸಿಎ ಬ್ಯಾಂಕ್ ನಿರ್ದೇಶಕ ರಘು ಮಧ್ಯಸ್ಥ, ಉದ್ಯಮಿ ನಾಗರಾಜ್ ಪಡುಕರೆ, ನಿವೃತ್ತ ಬ್ಯಾಂಕ್ ಉದ್ಯೋಗಿ ಭೋಜರಾಜ್ ದೇವಾಡಿಗ, ಸಾಂಸ್ಕೃತಿಕ ಚಿಂತಕಿ ಮಂಜುಳಾ ಮುರುಲೀಧರ್ ರಾವ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ತಾರಿಕಟ್ಟೆ ಕ್ರಾಸ್ ಹತ್ತಿರ ನಡೆದಿದೆ. ಮೃತರನ್ನು ಕುಯಿರ ನಾಯ್ಕ (61) ಎಂದು ಗುರುತಿಸಲಾಗಿದೆ ಬೈಕೊಂದು ಬೆಳ್ವೆ ಕಡೆಯಿಂದ ಗೊಳಿಯಂಗಡಿ ಕಡೆಗೆ ಹೋಗುತ್ತಿದ್ದ ಬೈಕ್, ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತಿದ್ದ ಕುಯಿರ ನಾಯ್ಕಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಕುಯಿರ ನಾಯ್ಕ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.21ರಂದು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಅಪಘಾತದಿಂದ ಬೈಕ್ ಸವಾರ ಕೃಷ್ಣ ಎಂಬವರು ಕೂಡ ಗಾಯಗೊಂಡರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
