Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಾರಂತ ಪ್ರತಿಷ್ಠಾನ ರಿ. ಕೋಟ, ಕೋಟತಟ್ಟು ಗ್ರಾಮ ಪಂಚಾಯತ್‌, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮತ್ತು ಉಸಿರು ಕೋಟ ಸಹಯೋಗದೊಂದಿಗೆ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್‌ 15 ರಂದು ಅಪರಾಹ್ನ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ 4ನೇ ಮಹಿಳಾ ಕಾಲಮಿತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸವಿತಾ ಮಾಧವ ಶಾಸ್ತ್ರಿಯನ್ನು ಆಯ್ಕೆ ಮಾಡಲಾಗಿದೆ. ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಆನಂದ ಸಿ. ಕು೦ದ‌ರ್, ಕಾರ್ಯದರ್ಶಿ ನರೇಂದ್ರ ಕುಮಾ‌ರ್ ಕೋಟ, ಪಂಚಾಯತ್ ಪಿಡಿಓ ರವೀ೦ದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಕಾರ್ಯಕ್ರಮ ನಿರ್ದೇಶಕಿ ಸುಶೀಲಾ ಸೋಮಶೇಖ‌ರ್ ತಿಳಿಸಿದ್ದಾರೆ. ಸವಿತಾ ಮಾಧವ ಶಾಸ್ತಿ ಅವರು ಈ ತನಕ ಮೂರು ಕಥಾ ಸಂಕಲನ ಪ್ರಕಟಗೊಂಡಿವೆ. ಅವರು ಬರೆದಿರುವ ನೂರಾರು ಕಥೆಗಳು, ಹಾಸ್ಯ ಬರಹಗಳು ನಾಡಿನ ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಹಲವಾರು ರಾಜ್ಯ ಮಟ್ಟದ ಸಾಹಿತ್ಯಕ ಸ್ಪರ್ಧೆಯಲ್ಲಿ ಪುರಸ್ಕಾರಗಳಿಸಿದ್ದಾರೆ. ಅವರ ಕಥೆ ತೆಲುಗಿಗೆ ಅನುವಾದಗೊಂಡಿದ್ದು, ಅವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟೊಂದು ನೀರು ತುಂಬಿ ಮುಳುಗಡೆಯಾದ ಘಟನೆ ಕುಂದಾಪುರ ಹಾಗೂ ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ಸಂಭವಿಸಿದ್ದು, ಬೋಟಿನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟಿನ ಮೀನುಗಾರರು ರಕ್ಷಿಸಿದ್ದಾರೆ. ಬೋಟಿನಲ್ಲಿದ್ದ ಮೀನುಗಾರರಾದ ಕುಮಟಾ ಮೂಲದವರಾದ ಪ್ರಕಾಶ್‌, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ಪಾರಾದವರು. ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಕೆಮ್ಮಣ್ಣಿನ ನಾಗರಾಜ್ ಪುತ್ರನ್ ಅವರ ಶ್ರೀ ದುರ್ಗಾಪರಮೇಶ್ವರಿ ಬೋಟಿನ ಅಡಿಭಾಗಕ್ಕೆ ಫೆ.24ರಂದು ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಎಂಜಿನಿನ ಅಡಿ ಭಾಗದಲ್ಲಿ ನೀರು ಒಳ ಬರಲು ಆರಂಭಿಸಿತು. ನೀರು ತುಂಬಿ ಬೋಟಿನ ಎಂಜಿನ್ ಸ್ಥಗಿತಗೊಂಡಿದೆ. ಕೂಡಲೇ ಬೋಟಿನಲ್ಲಿದ್ದವರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಅನಂತರ ಸಹಾಯಕ್ಕಾಗಿ ಮಲ್ಪೆ ಬಂದರಿನಿಂದ ಶ್ರೀ ಕೃಷ್ಣ ಬೋಟಿನವರು ಹಾಗೂ ಕೋಸ್ಟ್ ಗಾರ್ಡ್ ನವರು ಬಂದು ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಬಳಿಕ ಬೋಟನ್ನು ಶ್ರೀ ಕೃಷ್ಣ ಬೋಟಿನವರು ಹಗ್ಗ ಕಟ್ಟಿ ಎಳೆದು ಗಂಗೊಳ್ಳಿ ಬಂದರಿನಿಂದ ಸುಮಾರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇದೇ ಬರುವ ಮಾಚ್೯ 1ರಂದು ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವತಿಯಿಂದ ನಡೆಯಲಿರುವ ಏಕ ಪವಿತ್ರ ನಾಗಮಂಡಲೋತ್ಸವ ಇದರ ಉಗ್ರಾಣ ಮುಹೂರ್ತ ಬುಧವಾರ ಜರಗಿತು. ವೇ.ಮೂ.ಮಧುಸೂದನ್ ಬಾಯರಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ಜರಗಿತು. ಪೂರ್ವಾಹ್ನ ದೇಗುಲದ ದೇವಿ ಅಮೃತೇಶ್ವರೀ ಹಲವು ಮಕ್ಕಳ ತಾಯಿಗೆ ಪೂಜೆ ಸಲ್ಲಿಸಿ ಸ್ಥಳ ಸಾನಿಧ್ಯದ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೋಟದ ಗಾಂಧಿ ಮೈದಾನದಲ್ಲಿರುವ ಉಗ್ರಾಣ ಚಪ್ಪರದಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೆರಿಸಲಾಯಿತು. ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಮುಖ್ಯಸ್ಥ ನಾಡೋಜ ಡಾ.ಜಿ ಶಂಕರ್ ದೇಗುಲದ ನಾಗಮಂಡಲೋತ್ಸವ ವಿಶೇಷ ಹೊರೆಕಾಣಿಕೆಯನ್ನು ಸಹೋದರ ಶಿವ ಎಸ್. ಕರ್ಕೇರ ಮೂಲಕ ದೇಗುಲದ ಅಧ್ಯಕ್ಷರಿಗೆ ಸಮರ್ಪಿಸಿದರು. ಅನ್ನದಾಸೋಹಕ್ಕೆ ಚಪ್ಪರದಲ್ಲಿ ಅಗ್ನಿಸ್ಪರ್ಶ:ಕೋಟದ ಗಾಂಧಿ ಮೈದಾನದಲ್ಲಿರುವ ನಾಗಮಂಡಲದ ಅನ್ನದಾಸೋಹದ ಚಪ್ಪರದಲ್ಲಿ ಒಲೆ ಮುಹೂರ್ತ ಕೈಗೊಳ್ಳಲಾಯಿತು. ನಾಗಮಂಡಲದ ಅಡುಗೆಯ ಪಾಕತಜ್ಞ ಸುಂದರ್ ಭಟ್ ಮೂಲಕ ಅಗ್ನಿ ಸ್ಪರ್ಶಿಸಿ ದೇಗುಲದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ  ಕೃಷಿ ಉದ್ಯಮಿ ತರಬೇತಿಯ  ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರಾಣಿ ಅಂಬುಲೆನ್ಸ್ ಹುಬ್ಬಳ್ಳಿ ನಿವೃತ್ತ, ಉಪನಿರ್ದೇಶಕರು, ಪಶು ಇಲಾಖೆ ಹಾಗೂ ಜಿಲ್ಲಾ ಸಂಯೋಜಕರಾದ ಗುರುರಾಜ್ ಮನುಗೊಳಿ ಅವರು ಕೃಷಿ ಉದ್ಯಮಿ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮೊದಲಿಗೆ ಶಿಬಿರಾರ್ಥಿಗಳನ್ನು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕಾಗಿ ಶುಭಾಶಯಗಳನ್ನು ತಿಳಿಸಿದರು. ಕೃಷಿ ಉದ್ಯಮಿ ಎಂದರೆ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಗಳಲ್ಲಿ ನವೀನ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕೌಶಲ್ಯಗಳನ್ನು ಬಳಸಿ ಯಶಸ್ಸು ಗಳಿಸುವುದಾಗಿದೆ. ಕೃಷಿ ಉದ್ಯಮದಲ್ಲಿ ಸಮಗ್ರ ಕೃಷಿಕರಾಗುವವರಿಗೆ ಅತ್ಯುತ್ತಮವಾದ ಮಾಹಿತಿ ಇಲ್ಲಿ ದೊರೆಯುತ್ತದೆ. ಆಹಾರ ಸಂಸ್ಕರಣೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಕೃಷಿ ಯಂತ್ರೋಪಕರಣಗಳನ್ನು ತೊಡಗಿಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಸಾವಯವ ಕೃಷಿ ಬೆಳೆಗಾರರ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ ಮಾನಸಿಕ ನೆಮ್ಮದಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಣ್ ಎಸ್.ಜೆ. ಅವರು ಮಂಡಿಸಿದ “ವಸಾಹತುಕಾಲೀನ ಬುಡಕಟ್ಟು ಅಧ್ಯಯನಗಳ ಸ್ವರೂಪ (ವಸಾಹತುಕಾಲೀನ ದಕ್ಷಿಣ ಭಾರತದ ಆಯ್ದ ಅಧ್ಯಯನಕಾರರನ್ನು ಪರಿಗಣಿಸಿ)” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. ಅವರು ಹಂಪಿಯ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎ.ಎಸ್.ಪ್ರಭಾಕರ ಹಾಗೂ ಧಾರವಾಡ ಸ್ನಾತಕೋತ್ತರ ವಿಭಾಗದ ಆಂಗ್ಲ ಭಾಷಾ ವಿಭಾಗ ಪ್ರಾಚಾರ್ಯರು ಹಾಗೂ ವಿಭಾಗ ಮುಖ್ಯಸ್ಥರು ಆದ ಡಾ.ಗುರುನಾಧ ಬಡಿಗೇರರವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿದ್ದರು. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಡಿಕೆ ತಯಾರಿ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತೀಚೆಗೆ ಯಡಾಡಿ-ಮತ್ಯಾಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 100 ಸ್ವಯಂಸೇವಕರು ಸಾಂಪ್ರದಾಯಿಕವಾಗಿ ಮಡಿಕೆ ತಯಾರಿಕೆ ಮಾಡುವ ಬಗ್ಗೆ ತಿಳಿದುಕೊಂಡರು. ಮಡಿಕೆ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಗಂಗೆ ಕುಲಾಲ್ತಿ ಯಡಾಡಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ನಿರ್ವಹಣಾ ವಿಭಾಗದ ಸಹ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ, ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹರೀಶ್ ಕಾಂಚನ್, ಸಿಸ್ಟಮ್ ನಿರ್ವಾಹಕ ರಕ್ಷಿತ್ ಕಾಂಚನ್, ಕುಶ ಪೂಜಾರಿ, ಶಿಬಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಎಂ.ಜಿ.ಎಂ ಸಂಧ್ಯಾ ಕಾಲೇಜು ಮತ್ತು ಐಸಿಎಐ ಉಡುಪಿ ಶಾಖೆ (SIRC) ಅವರ ಸಂಯುಕ್ತ ಆಶ್ರಯದಲ್ಲಿ “ಕೇಂದ್ರ ಬಜೆಟ್ ವಿಶ್ಲೇಷಣೆ” ಕುರಿತು ವಿದ್ಯಾರ್ಥಿ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಸಿಎ ವೆಂಕಟರಮಣ ಕಾಮತ್ ಅವರು ಭಾಗವಹಿಸಿ ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು, ಆರ್ಥಿಕ ಪರಿಣಾಮಗಳು ಹಾಗೂ ವಿದ್ಯಾರ್ಥಿಗಳಿಗೆ ಅದರ ಮಹತ್ವದ ಕುರಿತು ಸಮಗ್ರವಾಗಿ ವಿವರಿಸಿದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ಅವರು ಮಾತನಾಡಿ, ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಲ್ಲಿ ಆರ್ಥಿಕ ಜ್ಞಾನವನ್ನು ವಿಸ್ತರಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟರು. ಬಿ.ಕಾಂ ಮತ್ತು ಬಿಬಿಎ ಸಂಯೋಜಕರಾದ ಡಾ. ಮಲ್ಲಿಕಾ ಎ ಶೆಟ್ಟಿ ಹಾಗೂ ಬಿಸಿಎ ಸಂಯೋಜಕರಾದ ಡಾ. ಎಂ. ವಿಶ್ವನಾಥ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್‌ಐಸಿಎಎಸ್‌ಎ ಖಜಾಂಚಿ ಅಶ್ವಥ್ ಶೆಟ್ಟಿ ಅತಿಥಿ ಪರಿಚಯ ನೀಡಿದರು. ಐಸಿಎಐ ಉಡುಪಿ ಶಾಖೆಯ ಎಸ್‌ಐಸಿಎಎಸ್‌ಎ ಅಧ್ಯಕ್ಷರಾದ ಸಿಎ ಮಾಧುರಿ ಪ್ರಭು ಅವರು ಅತಿಥಿಗಳನ್ನು ಸ್ವಾಗತಿಸಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಂಪ್ರತಿ ಜರಗುವ ಬ್ರಹ್ಮರಥೋತ್ಸವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪ್ರಾರ್ಥನೆ ಬಳಿಕ ಬಲಿಪೂಜೆ, ಮಾರ್ಗ ಬಲಿ ಜರಗಿತು. ಸಂಜೆ ರಥಾರೋಹಣ, ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ಮತ್ತು ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ನೇತೃತ್ವದಲ್ಲಿ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನುಷ್ಠಾನಗಳು ಶಾಸ್ತ್ರೋಕ್ತವಾಗಿ ನಡೆಯಿತು ನಡೆಯಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಅರ್ಚಕರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಹಾಗೂ ಊರ ಪರ ಊರಿನ ಭಜಕರು ಉತ್ಸವದಲ್ಲಿ ಪಾಲ್ಗೊಂಡು ಮೊದಲಾದವರು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾಹಿತಿ, ವಾಗ್ಮಿ, ವಿಮರ್ಶಕ, ಅಂಕಣಗಾರರಾಗಿ ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದವರು ಕೋಣಿ ಶಿವಾನಂದ ಕಾರಂತರು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು ಅವರು ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೋಣಿ ಶಿವಾನಂದ ಕಾರಂತರಿಗೆ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮದಲ್ಲಿ ಕಾರಂತರ ಸಾಧನೆ ಬಣ್ಣಿಸಿದರು. ಅಧ್ಯಯನಶೀಲರಾಗಿ ತಮ್ಮ ಪಾಂಡಿತ್ಯದಿಂದ ಯುವ ಬರಹಗಾರರಿಗೆ ಪ್ರೇರಣೆ ತುಂಬುತ್ತಿದ್ದ ಕಾರಂತರು ಹಲವಾರು ಲೇಖಕರ ಕೃತಿಗಳ ವಿಮರ್ಶೆ ಮಾಡಿ ತಿದ್ದಿ ಪ್ರೋತ್ಸಾಹಿಸುವ ಮೂಲಕ ಸ್ಫೂರ್ತಿ ತುಂಬುತ್ತಿದ್ದರು. ಅವರ ಪ್ರಕಟಿತ ಕೃತಿಗಳು ಅಮೂಲ್ಯವಾಗಿದ್ದವು. ಗಂಗೊಳ್ಳಿಯಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ “ಗಂಗಾವಳಿ” ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕೋ. ಶಿವಾನಂದ ಕಾರಂತರ ಕುರಿತು ಪುಸ್ತಕ ಪ್ರಕಟಣೆ ಮಾಡಿದ್ದೆವು. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ದೊಡ್ಡ ನಷ್ಟ. ಅವರ ಅಮೂಲ್ಯ ಮಾರ್ಗದರ್ಶನ ಸ್ಮರಿಸೋಣ ಎಂದರು. ಕಮಲಾಕರ ಚಿಕ್ಕಮಗಳೂರು ಅವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಹಳ್ಳಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳುಗೋಡು ಎಂಬಲ್ಲಿ ಜರುಗಿತು. ಕಮಲಶಿಲೆ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಸ್. ಸಚ್ಚಿದಾನಂದ ಛಾತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಡೆದ ಅನುಭವವನ್ನು ತಮ್ಮ ವ್ಯಾಸಂಗದ ನಂತರವು ಸೇವೆ, ಅನುಕಂಪದ ಸಾರ್ಥಕ ಜೀವಿಯಾಗಬೇಕು. ಆ ಮೂಲಕ ಹಳ್ಳಿಗಳ ಉದ್ಧಾರದ ನೆಲೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಎಸ್. ಅನುಪಮ ಶೆಟ್ಟಿ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ತೊಡಗಿಕೊಳ್ಳುವುದರಿಂದ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜುನಾಥ ಶೆಟ್ಟಿ, ನಾಗೇಶ್ ನಾಯ್ಕ್ ಶ್ರೀನಿವಾಸ ಆಚಾರಿ, ಕೃಷ್ಣ ಛಾತ್ರಾ,…

Read More