Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಉತ್ಸವವನ್ನು ಸರಕಾರಿ ಪ್ರೌಢಶಾಲೆ ಬೇಳೂರು ಇಲ್ಲಿನ ವಿಜ್ಞಾನ ಶಿಕ್ಷಕರಾದ ಉದಯ ಗಾಂವಕಾರ  ಶುಕ್ರವಾರದಂದು ಉದ್ಘಾಟಿಸಿ, ವಿಜ್ಞಾನ ಯೋಚಿಸುವ ವಿಧಾನವನ್ನು ಬದಲಾಯಿಸುತ್ತದೆ. ವಿಜ್ಞಾನ ಅಂದರೆ ಪ್ರಶ್ನೆ ಮಾಡುವುದು, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪ್ರಶ್ನೆ ಮಾಡುವುದರ ಮೂಲಕ ಹೊಸತನವನ್ನು ಕಂಡುಕೊಳ್ಳಬೇಕು ಎಂದು  ಸಲಹೆ ನೀಡಿದರು.    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್‌ನ ಕಾರ್ಯದರ್ಶಿ  ಕೆ. ರಾಧಾಕೃಷ್ಣ ಶೆಣೈ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಹಮ್ಮಿಕೊಂಡಿರುವ  ವಿಜ್ಞಾನ ಉತ್ಸವದ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೆಮ್ಮಾಡಿಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ರಾಘವೇಂದ್ರ ಕುಲಾಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ  ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ  ಸುಜಯ್ ಕೋಟೆಗಾರ್, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕ ರಮಾಕಾಂತ್ ರೇವಣಕರ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಸ್ವಾಗತಿಸಿದರು, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಶುಕ್ತಿಜಾ, ವೈಷ್ಣವಿ ಆರ್.ಕೆ ಅತಿಥಿಗಳನ್ನು ಪರಿಚಯಿಸಿದರು. ಅದಿತಿ …

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಹಳೆ ವಿದ್ಯಾರ್ಥಿ ಸಂಘ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಇದರ ರಜತ ಮಹೋತ್ಸವದ ಪ್ರಯುಕ್ತ ನಿರ್ಮಿಸಲಾಗುವ ನೂತನ ತರಗತಿ ಕೊಠಡಿಗಳ ಶಂಕು ಸ್ಥಾಪನೆ ಕಾರ್ಯಕ್ರಮ ಗುರುವಾರ ನಡೆಯಿತು. ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಎರಡು ತರಗತಿ ಕೊಠಡಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಸಂಘದ ರಜತ ಮಹೋತ್ಸವದ ಪ್ರಯುಕ್ತ ಶಾಲೆಗೆ ಅಗತ್ಯವಿರುವ ತರಗತಿ ಕೊಠಡಿ, ಆವರಣ ಗೋಡೆ, ಕಂಪ್ಯೂಟರ್ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಾವಶ್ಯಕ ಈ ಕಾರ್ಯಗಳಿಗೆ ದಾನಿಗಳು, ಹಳೆ ವಿದ್ಯಾರ್ಥಿಗಳು ಸಹಕಾರ ನೀಡಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಪುರೋಹಿತರಾದ ಜಿ. ವಿಠಲದಾಸ ಭಟ್ ಮತ್ತು ಜಿ. ವಸಂತ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಎಲ್.ಮೇಸ್ತ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ಉಪಾಧ್ಯಕ್ಷೆ ಗಾಯತ್ರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯ ಕಂದಾಯ ಸಚಿವರು ಬಗರ್ ಹುಕುಂ (ಅಕ್ರಮ-ಸಕ್ರಮ) ಕಾನೂನಿನ ಅಡಿ ಈಗಾಗಲೇ ಅರ್ಜಿ ನಮೂನೆ 50 ಹಾಗೂ 53 ರ ಅಡಿ ಬಾಕಿ ಇರುವ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಬೇಕು ಹಾಗೂ ಹೊಸದಾಗಿ ಅರ್ಜಿ ನಮೂನೆ 57 ರ ಅಡಿ ಬಂದಿರುವ ಅರ್ಜಿಗಳನ್ನು ಸಮಿತಿಯು ಆದಷ್ಟು ಬೇಗ ವಿಚಾರಣೆ ನಡೆಸಿ ಅರ್ಜಿದಾರರರಿಗೆ ಹಕ್ಕು ಪತ್ರ ನೀಡಬೇಕು ಎಂದು ಹೇಳಿದ ಆದೇಶವನ್ನು ಮುಂದೆ ಇಟ್ಟುಕೊಂಡು ಉಡುಪಿ ಜಿಲ್ಲಾಡಳಿತ ಅರ್ಜಿ ನಮೂನೆ 57 ರ ಹೆಚ್ಚಿನ ಅರ್ಜಿಗಳನ್ನು ತಿರಸ್ಕಾರ ಮಾಡಲು ಹೊರಟಿರುವ ವಿಚಾರ ತಿಳಿದು ಬಂದಿರುತ್ತದೆ. ಇದು ಜಿಲ್ಲಾಡಳಿತ ರೈತ ವಿರೋಧಿ ಕ್ರಮವಾಗಿದೆ. ಕುಮ್ಕಿ ಹಕ್ಕು ಕೂಡ ಇದು ಬ್ರಿಟಿಷರ ಕಾಲದಿಂದಲೂ ರೈತ ಅನುಭವಿಸಿಕೊಂಡು ಬಂದ ಅವಕಾಶ. ರೈತನ ಕೃಷಿಗೆ ಅಗತ್ಯವಾದ ಸೊಪ್ಪು, ತರಗೆಲೆ ಇತ್ಯಾದಿ ಇತ್ಯಾದಿ ಪಡೆಯಲು ಕುಮ್ಕಿ ಭೂಮಿ ನೀಡಲಾಗಿದೆ. ಇವತ್ತು ಅದೆಷ್ಟೋ ದಶಕಗಳಿಂದ ರೈತ ಕುಮ್ಕಿ ಭೂಮಿಯಲ್ಲೂ ಕೃಷಿ ಮಾಡಿಕೊಂಡಿದ್ದಾನೆ, ಇವತ್ತು ಕುಮ್ಕಿ ಇತ್ಯಾದಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರಂಗಕಲೆಗಳನ್ನು ಪರಿಚಯಿಸುವ ಮತ್ತು ಕಲಾ ಪ್ರಕಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯಲ್ಲಿ ತುಮರಿಯ ಕಿನ್ನರ ಮೇಳ ರಂಗತಂಡದವರಿಂದ ಇರುವೆ ಪುರಾಣ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಇದು ‘ದಿ ಸ್ಟೋರಿ ಆಫ್ ಎ ಸ್ನೇಟ್ಸ್ ಹು ಡಿಸ್ಕವರ್ ದಿ ಇಂಪಾರೆನ್ಸ್ ಆಫ್ ಬೀಯಿಂಗ್ ಸ್ಟೋ’ ಎಂಬ ಕಥೆಯಿಂದ ಸ್ಫೂರ್ತಿ ಪಡೆದು ಕಟ್ಟಿದ ನಾಟಕವಾಗಿದ್ದು, ಪುಟ್ಟ ಇರುವೆಯೊಂದು ತನ್ನ ಅಸ್ತಿತ್ವದ ಕುರಿತು ಹುಟ್ಟುವ ಪ್ರಶ್ನೆಗಳಿಗೆ ತಮ್ಮವರಿಂದ ಸೂಕ್ತ ಉತ್ತರ ದೊರಕದಿದ್ದಾಗ, ತಾನೇ ಸ್ವತಃ ಉತ್ತರ ಕಂಡುಕೊಳ್ಳಲು ಪಯಣ ಆರಂಭಿಸುತ್ತದೆ. ಮಾರ್ಗದಲ್ಲಿ ಅದು ಗೂಬೆ, ಕಪ್ಪೆ, ಬೆಕ್ಕು, ಕಾಗೆ ಮುಂತಾದ ಪ್ರಾಣಿಗಳನ್ನು ಭೇಟಿಯಾಗಿ ಅಲ್ಪ ಸ್ವಲ್ಪ ಉತ್ತರ ಕಂಡುಕೊಳ್ಳುತ್ತದೆ. ಮುಂದುವರೆದು ಒಂದು ಪಟ್ಟಣವನ್ನು ತಲುಪಿ ಅಲ್ಲಿ ಮನುಷ್ಯರು ಎಸಗುತ್ತಿರುವ ಅನಾಹುತಗಳನ್ನು ಗಮನಿಸುತ್ತದೆ. ವಾಪಸು ತನ್ನ ಗೂಡಿಗೆ ಮರಳಿ ತಮಗೊದಗುತ್ತಿರುವ ಅಪಾಯವನ್ನು ತಿಳಿಸುತ್ತದೆ. ಪ್ರಾಣಿಗಳೆಲ್ಲವೂ ಬೇರೆ ಸ್ಥಳವನ್ನು ಹುಡುಕಿಕೊಂಡು ಹೊರಡುತ್ತವೆ. ಈ ಜಗತ್ತಿನಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬಿಜೂರು ಮೂರ್ಗೋಳ್ಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಭಕ್ತರ ಸೇವಾ ಸಂಕಲ್ಪದಂತೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ನಂದಿಕೇಶ್ವರ ಸಭಾಭವನ ಇದರ ಉದ್ಘಾಟನಾ ಸಮಾರಂಭವು ನ.23ರಂದು ಬೆಳಗ್ಗೆ 9.30ಕ್ಕೆ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, 2.30ರಿಂದ ರಿಥಮ್ ನೃತ್ಯ ಮತ್ತು ಕಲಾ ಶಾಲೆ ಬೈಂದೂರು ಇವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಈ ಸಮಾರಂಭದ ಉದ್ಘಾಟನೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ನೆರವೆರಿಸಲಿದ್ದಾರೆ ಹಾಗೂ ಅಧ್ಯಕ್ಷತೆಯನ್ನು ಬಿಜೂರು ಮೂರ್ಗೋಳ್ಳಿಹಕ್ಲು ಶ್ರೀ ನಂದಿಕೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಕೆ.ದೇವಾಡಿಗ ಅವರು ವಹಿಸಲಿದ್ದಾರೆ. ದಿವ್ಯ ಉಪಸ್ಥಿತಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಇರಲಿದ್ದಾರೆ. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ಶುಭಸಂಶನೆಗೈಯಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಉಡುಪಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಉಡುಪಿ ಜಿಲ್ಲೆ ಭಾ.ಜ.ಪ ಕಾರ್ಯದರ್ಶಿಯಾದ ಪ್ರಿಯದರ್ಶಿನಿ ಕಮಲೇಶ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭತ್ತದ ಹುಲ್ಲು ಜೋಡಿಸುವ ಯಂತ್ರ ಚಿತ್ತೂರು ಪೆಟ್ರೋಲ್ ಬಂಕ್ ಸಮೀಪ ಮಗುಚಿದ ಪರಿಣಾಮ ಚಾಲಕ ಮಂಜುನಾಥ್ (37) ಸಾವನ್ನಪ್ಪಿದ್ದಾರೆ. ಅವರು ಕೆರಾಡಿಯಿಂದ ಚಿತ್ತೂರು ಕಡೆಗೆ ಬರುತ್ತಿದ್ದ ವೇಳೆ ಹತೋಟಿ ತಪ್ಪಿ ರಸ್ತೆ ಬದಿಯ ತಗ್ಗು ಜಾಗಕ್ಕೆ ಯಂತ್ರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ದೇವರಲ್ಲಿ ಭಕ್ತಿಯಿಂದ ಸಲ್ಲಿಸಿದ ಪ್ರಾರ್ಥನೆಗೆ ಖಂಡಿತವಾಗಿ ಫಲ ಸಿಗುತ್ತದೆ. ನಾವು ಸತ್ಕರ್ಮಗಳನ್ನು ನಿರಂತರವಾಗಿ ಮಾಡುತ್ತಾ ಹೋಗಬೇಕು. ಇದರಿಂದ ಯಾವುದೇ ಫಲವನ್ನು ನಿರೀಕ್ಷಿಸಬಾರದು. ನಾವು ಮಾಡುವ ಪ್ರತಿಯೊಂದು ಸತ್ಕರ್ಮಗಳಿಗೆ ದೇವರು ಸಂತುಷ್ಟಗೊಂಡು ಸಕಾಲದಲ್ಲಿ ನಮ್ಮ ಮನೋಭಿಷ್ಟಗಳನ್ನು ನೆರವೇರಿಸುತ್ತಾನೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಹೇಳಿದರು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಮೊಕ್ಕಾಂ ನಿಮಿತ್ತ ಗುರುವಾರ ಚಿತ್ತೈಸಿದ ಶ್ರೀಗಳು ಆಶೀರ್ವಚನ ನೀಡಿದರು. ಮಠಕ್ಕೆ 550 ವರ್ಷ ಪೂರ್ಣಗೊಳ್ಳುವ ಸಂದರ್ಭ ಹಮ್ಮಿಕೊಳ್ಳಲಾದ ಶ್ರೀ ರಾಮ ನಾಮ ತಾರಕ ಜಪ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಶಕ್ತ್ಯಾನುಸಾರ ಜಪವನ್ನು ಮಾಡಿ ದೇವರ ಮತ್ತು ಗುರುಗಳ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮುಂದಿನ ವರ್ಷ ಪರ್ತಗಾಳಿ ಮಠದಲ್ಲಿ ಈ ಸಂಬಂಧ ದೊಡ್ಡ ಧಾರ್ಮಿಕ ಅನುಷ್ಠಾನ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜಬಾಂಧವರು ಪಾಲ್ಗೊಂಡು ದೇವರ ಮತ್ತು ಗುರುಗಳ ಸೇವೆ ಸಲ್ಲಿಸುವಂತಾಗಬೇಕು ಎಂದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಳಗೇರಿಯಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಶ್ರೀ ಕಾಲಭೈರವಾಷ್ಠಮಿ, ಕಾರ್ತಿಕ ದೀಪೋತ್ಸವವು ನ.23 ಶನಿವಾರದಂದು ಜರುಗಲಿದೆ. ಬೆಳಿಗ್ಗೆ 7.30ರಿಂದ ಶ್ರೀ ಕಾಲಭೈರವಾಷ್ಠಮಿ ಅಂಗವಾಗಿ 108 ಸೀಯಾಳ ಸಹಿತ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ದೇವರ ಉತ್ಸವ, ರೂಟ್ ಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ 6ಗಂಟೆಯಿಂದ ದೇವಸ್ಥಾನದಲ್ಲಿ ದೇವರ ಉತ್ಸವ, ಭಜನಾ-ಕಾರ್ಯಕ್ರಮ ಹಾಗೂ ದೀಪೋತ್ಸವವು ನಡೆಯಲಿದೆ. ಈ ವೇಳೆ ಭಕ್ತಾಭಿಮಾನಿಗಳಿಗೆ ದೀಪ ಬೆಳಗಿಸುವ ಅವಕಾಶವಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕೆಲವು ದೇಶಗಳು ಆರ್ಥಿಕವಾಗಿ ಹಿಂದುಳಿಯಲು ಮಹಿಳಾ ಉದ್ಯೋಗಿಗಳ ಪ್ರಮಾಣ ಕಡಿಮೆ ಪ್ರಮುಖ ಕಾರಣವಾಗಿದೆ. ಯಾವುದೇ ದೇಶ ಅಥವಾ ಸಂಸ್ಥೆ ಉನ್ನತಿಯನ್ನು ಕಾಣಲು ಮಹಿಳೆಯರ ಪಾತ್ರ ಮುಖ್ಯ. ಮಹಿಳೆಯರು ವಿವಿಧ ವೃತ್ತಿರಂಗಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಕಾಣಿಕೆ ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮಾ’ದ ವತಿಯಿಂದ ಮಹಿಳಾ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ‘ಎಂಪವರ್‌ಹರ್’ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ವಿವಿಧ ಸ್ತರದ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿಸುವ ಸಮಾಜ ನಮ್ಮದಾಗಬೇಕು ಎಂದರು. ಆಳ್ವಾಸ್ ಸಂಸ್ಥೆಯ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಅನನ್ಯ. ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಶ್ರೇಷ್ಠತೆಯಿಂದ ನಿಭಾಯಿಸುವುದರಿಂದ ಸಂಸ್ಥೆಯ ಜೇಷ್ಠತೆ ಹೆಚ್ಚಿದೆ ಎಂದರು. ಮಹಿಳೆಯರು ವೃತ್ತಿ ಜೀವನ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಅವಶ್ಯ. ಇತ್ತೀಚಿನ ದಿನಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ರಾಜ್ಯ ಸರಕಾರದಿಂದ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅರ್ಹರಾಗಿದ್ದು ಯಾರಿಗಾದರೂ ಬಿಪಿಎಲ್ ಕಾರ್ಡ್ ತಪ್ಪಿ ಹೋಗಿದ್ದರೆ ಹೊಸದಾಗಿ ಅರ್ಜಿ ಪಡೆದುಕೊಂಡು ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದು ರಾಜ್ಯದ ಉಪಮುಖ್ಯಮಂತ್ರಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಗುರುವಾರ ಪತ್ನಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಚುನಾವಣೆ ಪೂರ್ವದಲ್ಲಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೆ. ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಹಾಗಾಗಿ ತಾಯಿ ಮೂಕಾಂಬಿಕೆಗೆ ಪೂಜೆ ಸಲ್ಲಿಸಲು ಬಂದಿರುವುದಾಗಿ ತಿಳಿಸಿದರು. ಇದೇ ವೇಳೆ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ನಬಾರ್ಡ್ ಸಾಲದ ಪೈಕಿ ಶೇ 58ನ್ನು ಕಡಿತಗೊಳಿಸಲು ತೀರ್ಮಾನಿಸಿರುವುದು ಖಂಡನೀಯ. ರಾಜ್ಯಕ್ಕೆ ಮೊದಲಿನಿಂದ ಅನ್ಯಾಯ ನಡೆಯುತ್ತಲೇ ಇದೆ. ನಂದಿನಿ ಹಾಲಿನ ಮಾರುಕಟ್ಟೆ ಬಗ್ಗೆ ದೆಹಲಿಗೆ ಹೋಗಿದ್ದು, ಇದೇ ಸಂದರ್ಭ ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ…

Read More