ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಜಿಲ್ಲಾ ಸಮಿತಿ ಉಡುಪಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಬೈಂದೂರು, ಡಾ. ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ತಾಲೂಕು ಸಮಿತಿ ಬೈಂದೂರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗ್ರಾಮ ಸಮಿತಿ ಉಪ್ಪುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ವಿರೋಧಿ ಉಪ್ಪುಂದ ಗ್ರಾಪಂ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಗ್ರಾಪಂ ಎದುರು ಶುಕ್ರವಾರ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಲಿತ ದೌರ್ಜನ್ಯ ಜಾಗೃತಿ ಸಮಿತಿ ಉಡುಪಿ ಜಿಲ್ಲಾ ಸದಸ್ಯ ವಾಸುದೇವ ಮುದೂರು ಮಾತನಾಡಿ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಜಾತಿವಾದಿ ಮನಸ್ಥಿತಿ ನಿವಾರಣೆಯಾಗದಿರುವುದು ಸಮಾಜಕ್ಕೆ ಕಳಂಕ. ಸಂವಿಧಾನಬದ್ಧ ವ್ಯವಸ್ಥೆಯಡಿ ಆಯ್ಕೆಯಾದ ಜನಪ್ರತಿನಿಧಿಗಳು ಜನ ಹಾಗೂ ದೀನದಲಿತರ ಪರ ವಾಗಿ ಕೆಲಸ ಮಾಡಬೇಕೆ ಹೊರತು ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಹೇಳಿದ್ದಾರೆ. ಜನರಲ್ಲಿ ಸಂವಿಧಾನದ ಆಶಯ, ಹಕ್ಕೊತ್ತಾಯದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚಿಗೆ ಮುಂಬೈಯಲ್ಲಿ ಜರುಗಿದ 7ನೇ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ಶಿಪ್ 2024ರಲ್ಲಿ 11ರ ವಯೋಮಾನದ ವಿಭಾಗದ ಕುಮಿಟಿ ಹಾಗೂ ಕಟಾ ಎರಡೂ ವಿಭಾಗದಲ್ಲಿಯೂ ಖಾರ್ವಿಕೇರಿಯ ಸಾನಿಧ್ಯ ಸಂತೋಷ್ ನಾಯ್ಕ್ ಚಿನ್ನದ ಪದಕ ಪಡೆದಿದ್ದಾಳೆ. ಸಾನಿಧ್ಯ ಕೋಟೇಶ್ವರದ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. 7ರ ವಯೋಮಾನದ ವಿಭಾಗದಲ್ಲಿ ಖಾರ್ವಿಕೇರಿಯ ಸಂಕಲ್ಪ್ ಸಂತೋಷ್ ನಾಯ್ಕ್ ಕುಮಿಟಿಯಲ್ಲಿ ಚಿನ್ನ ಮತ್ತು ಕಟಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈತ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ 2ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದಾನೆ. ಕುಂದಾಪುರ ಖಾರ್ವಿಕೇರಿ ನಿವಾಸಿ ಸಂತೋಷ್ ನಾಯ್ಕ್ ಹಾಗೂ ಶ್ಯಾಮಲಾ ನಾಯ್ಕ್ ದಂಪತಿಗಳ ಮಕ್ಕಳಾದ ಈರ್ವರೂ, ಕುಂದಾಪುರದ ಕೆಡಿಎಫ್ ಕರಾಟೆ ಸ್ಕೂಲಿನ ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸಾರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು. ಈ ಯೋಜನೆಗೆ ಸಾರ್ವಜನಿಕರು, ಪುಸ್ತಕ ಪ್ರಿಯರಿಂದ ರೂ. 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312 ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಗಿದೆ. ಪುಸ್ತಕ ಸ್ವೀಕರಿಸಿದ ವಿದ್ಯಾರ್ಥಿಗಳೇ ಸ್ವತಃ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಫೆ.10ರ ಶನಿವಾರದಂದು ಸಾಯಂಕಾಲ ಗಂಟೆ 4.00ರಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ ಜರಗಲಿದೆ. ರಾತ್ರಿ ಗಂಟೆ 7.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ ಗಂಟೆ 8.00ರಿಂದ “ಸಂತ ಸಮಾಗಮ” ಧಾರ್ಮಿಕ ಸಭೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಗುರುಪುರ ಕ್ಷೇತ್ರ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಛಾಯಾಗ್ರಹಣ ಅನ್ನುವತ್ತದ್ದು ಒಂದು ಅದ್ಬುತ ಕಲೆ ಕಠಿಣ ಪರಶ್ರಮ ಶೃದ್ದೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾದ್ಯ ಜೀವನದಲ್ಲಿ ನಿರಾಶಾವಾದಕ್ಕೆ ಆಸ್ಪದ ನೀಡಬಾರದು ಎಂದು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ – ಉಡುಪಿ ಇದರ ಕುಂದಾಪುರ, ಬೈಂದೂರು ವಲಯದ ವತಿಯಿಂದ ಬೈಂದೂರಿನ ತಗ್ಗರ್ಸೆ ರೈತಮಿತ್ರ ಇಲ್ಲಿ ಆಯೋಜಿಸಿದ ಛಾಯಾ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಗ್ಗೆ ಹಿಂದೆ ತಿಳಿದಿದ್ದೆ ಆದರೆ ಇಂದು ಈ ಕಾರ್ಯಕ್ರಮದ ಮೂಲಕ ಅದರ ವಿರಾಟ ರೂಪ ನೋಡುವ ಸೌಭಾಗ್ಯ ಒದಗಿದೆ. ಸಂಸ್ಥೆ ಇಷ್ಟೊಂದು ದೊಟ್ಟಮಟ್ಟಕ್ಕೆ ಬೆಳೆಯಬೇಕಾದರೆ ಇದರ ಹಿಂದೇ ಸಾಕಷ್ಟು ಜನರ ಪರಿಶ್ರಮವಿದೆ ಸಂಘಟನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾದ್ಯ ಎಂದರು. ಕಾರ್ಯಕ್ರಮದ ಪದ್ಮಪ್ರಸಾದ್ ಜೈನ್ ಎಸ.ಕೆ.ಪಿ.ಎ,ದ.ಕ-ಉಡುಪಿ ಜಿಲ್ಲೆ ಇವರು ವಹಿಸಿದ್ದರು. ಕುಂದಾಪುರ ಬೈಂದೂರು ವಲಯದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡ ಸಾಹಿತ್ಯವು ದೊಡ್ಡ ಕುಟುಂಬದಿಂದ ಬೆರಳ ತುದಿ ಹಿಡಿದು ಕಿರಿಯರನ್ನು ಕರೆತಂದ, ಎಲ್ಲರೊಳಗೊಂದು ಸಾಕ್ಷಿಪ್ರಜ್ಞೆಯನ್ನು ಮೂಡಿಸಿದೆ. ನಮ್ಮ ನಡೆ, ನುಡಿ, ನೆಲ, ಜಲದ ಬಗ್ಗೆ ನಾವು ಮೈಮರೆತರೆ ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಮರೆವನ್ನು ಇನ್ನಷ್ಟು ಹೆಚ್ಚಿಸುವ ಅಪಾಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೈಂದೂರು ತಾಲೂಕು ಘಟಕ ವತಿಯಿಂದ ಹಿರಿಯರಡೆಗೆ ನಮ್ಮ ನಡಿಗೆ 137ನೇ ಕಾರ್ಯಕ್ರಮದಲ್ಲಿ ಬೈಂದೂರು ಲಾವಣ್ಯದ ಹಿರಿಯ ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಸಾಧಕ ಪ್ರಶಸ್ತಿ ಪುರಸ್ಕೃತ ಬಿ. ಗಣೇಶ್ ಕಾರಂತ್ ಇವರನ್ನು ಸನ್ಮಾನಿಸಿ ಮಾತನಾಡಿದರು. ತಂತ್ರಜ್ಞಾನ ಪುಸ್ತಕ ಓದನ್ನು ದೂರ ಮಾಡಿದೆ. ಹಣದ ಪ್ರಾಧಾನ್ಯತೆ ಇಂಗ್ಲಿಷ್ ಭಾಷೆಯನ್ನು ಅನಿವಾರ್ಯಗೊಳಿಸಿದೆ. ಪುಸ್ತಕ ಪ್ರೇಮ ವ್ಯರ್ಥ ಕಾಲಹರಣಕ್ಕೆ, ಕೆಟ್ಟ ಹವ್ಯಾಸಕ್ಕೆ ಕಡಿವಾಣ ಹಾಕುತ್ತದೆ. ಶ್ರೇಷ್ಠ ಕೃತಿಗಳ ಓದು ಸಹನೆ, ಸಹಬಾಳ್ವೆಯಂತಹ ಬಾಳಿನ ಮೌಲ್ಯವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಗಾಂಧಿ ಮೈದಾನದಲ್ಲಿ ಜರುಗಿದ ಕುಂದಾಪುರ ಪ್ರೀಮಿಯರ್ ಲೀಗ್ (KPL) ಕ್ರಿಕೆಟ್ ಪಂದ್ಯಾಟದ ಕಾರ್ಯಕ್ರಮದಲ್ಲಿ ಉಡುಪಿಯ ಉದ್ಯಮಿ, ಕೊಡುಗೈ ದಾನಿ, ಬೋಳಾ ರಂಗನಾಥ ಕಾಮತ್ ರವರಿಗೆ ಕುಂದಾಪುರದ ಕನ್ನಡ ಶಾಲೆಯ ಮಕ್ಕಳ ವಾಟ್ಸಾಪ್ ಗ್ರೂಪ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಾನ್ಸನ್ ಕ್ರಿಕೆಟರ್ಸ್ ರವೀಂದ್ರ ಹೆಗ್ಡೆ, ಮ್ಯಾನೇರ್ ರವಿ, ಆರ್.ಎಕ್ಸ್ ಸತೀಶ್, ಗಣೇಶ್ ಸಾಲಿಗ್ರಾಮ, ವಿನಯ್ ಕುಂದಾಪುರ, ಝಹೀರ್ ಗಂಗೊಳ್ಳಿ, ಸಂದೀಪ್, ನೆಲ್ಸನ್, ಅಶೋಕ್ ಛಾಯಾ, ಮಿಥುನ್ ಕುಂದಾಪುರ, ಗೌರೀಶ್ ಉಪ್ಪುಂದ, ದೀಪಕ್ ರೆಡ್ ಕ್ರಾಸ್, ಅಜಯ್ ಹವಾಲ್ದಾರ್, ಭಾಸ್ಕರ್ ವಿಠ್ಠಲವಾಡಿ, ಶ್ರೀಕುಮಾರ ಮಂಗಳೂರು, ಬಾಬು ಬೈಂದೂರು ಹಾಗೂ ಕನ್ನಡ ಶಾಲೆಯ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೈ ಶಿವಾಜಿ ಸೇವಾ ಟ್ರಸ್ಟ್ ರಿ. ಹಟ್ಟಿಕುದ್ರು ಹಟ್ಟಿಯಂಗಡಿ, ಶ್ರೀ ಮಹಾಗಣಪತಿ ಯುವಕ ಮಂಡಲ ಹಟ್ಟಿಕುದ್ರು, ಶ್ರೀ ಕೃಷ್ಣ ಪೈಪ್ ಇಂಡಸ್ಟ್ರೀಸ್ ಹಟ್ಟಿಯಂಗಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಆಶ್ರಯದಲ್ಲಿ ಹಟ್ಟಿಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರದ ಸಭಾಪತಿಗಳಾದ ಜಯಕರ್ ಶೆಟ್ಟಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ ಗೋವಿಂದ ಬಾಬು ಪೂಜಾರಿ, ಜಯಸೂರ್ಯ ಪೂಜಾರಿ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಸಂತೋಷ್ ಹಟ್ಟಿಕುದ್ರು,ಕೃಷ್ಣಯ್ಯ ಪೂಜಾರಿ, ನರೇಂದ್ರ ಉಡುಪ ಹಟ್ಟಿಕುದ್ರು, ಸುಮಂತ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರತಿ ದಿನ ಪ್ರತಿ ಕ್ಷಣ ದಿನದ 24 ಗಂಟೆ ವರ್ಷದಲ್ಲಿ 365 ದಿನ ಉಡುಪಿ ಕುಂದಾಪುರ ಮಣಿಪಾಲ ಮಂಗಳೂರು ಭಾಗದಲ್ಲಿ ದಿನ ನಿತ್ಯ ರೋಗಿಗಳ ರಕ್ತದ ತುರ್ತು ಕರೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇತ್ತೀಚೆಗೆ ಬೈಂದೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಗೋಕಳ್ಳತನ ಹೆಚ್ಚಾಗಿ ನಡೆಯುತ್ತಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಗೋ ಪ್ರೇಮಿಗಳೊಂದಿಗೆ ಸೇರಿ ಬೀದಿಗಿಳಿದು ಹೋರಾಟಮಾಡಲಾಗುವುದು ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಇಲಾಖೆಗೆ ಬೇಕಾದ ಸಹಕಾರವನ್ನು ನೀಡಲು ಸಂಘವು ಬದ್ಧರಾಗಿದ್ದು ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಗೋಕಳ್ಳತನವನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಸುಧಾಕರ ಶೆಟ್ಟಿ ನೆಲ್ಯಾಡಿ, ಜಗದೀಶ ಕೊಲ್ಲೂರು, ಸುಕುಮಾರ ಹೆಮ್ಮಾಡಿ, ರಾಘವೇಂದ್ರ ಹೊಸಾಡು, ಗಿರೀಶ್ ಶಿರೂರು, ಸತೀಶ್ ಜೋಗಿ ಕಟ್ಬೆಲ್ತೂರು, ಕಿರಣ್ ತ್ರಾಸಿ, ಪ್ರಶಾಂತ ಪಡುವರಿ, ಗುರುರಾಜ್ ಕಲ್ಲುಕಂಠ, ಜಗದೀಶ್ ಆಲಂದೂರು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರವಾಸೋದ್ಯಮದಲ್ಲಿ ಬೈಂದೂರು ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳನ್ನು ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವ ಉದ್ದೇಶದಿಂದ ನಾವು ಗಟ್ಟಿ ಹೆಜ್ಜೆ ಇರಿಸಿದ್ದು ಅದರ ಒಂದು ಭಾಗವಾಗಿ ಎಕ್ಸ್ಪ್ಲೋರ್ ಬೈಂದೂರು ಎಂಬ ಕಾರ್ಯಕ್ರಮವನ್ನು ಪರಿಚಯಿಸಿದ್ದೇವೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಬೈಂದೂರಿನ ಪ್ರವಾಸೋದ್ಯಮ ಕ್ಷೇತ್ರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಎಕ್ಸ್ಪ್ಲೋರ್ ಬೈಂದೂರು ಎಂಬ ಕಾರ್ಯಕ್ರಮಕ್ಕೆ ಶನಿವಾರ ಸ್ಕೂಬಾ ಡೈವಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರವಾಸಿಗರು ನಮ್ಮೂರಿಗೆ ಭೇಟಿ ನೀಡಿದಷ್ಟು ಊರಿನ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರವಾಸಿಗರನ್ನು ಗೌರವದಿಂದ ಕಾಣುತ್ತಾ, ಸುಂದರ ವಾತಾವರಣವನ್ನು ಕಟ್ಟಿಕೊಡುತ್ತಾ ನಾವು ಬೆಳೆಯುವ ಕಲ್ಪನೆ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಬೈಂದೂರಿನ ಸೋಮೇಶ್ವರ ತೀರದ ನೇರಕ್ಕೆ ಸಮುದ್ರ ಮಧ್ಯದ ನಾಯ್ಕನ ಕಲ್ಲು ಪ್ರದೇಶದ ಬಳಿ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ನೀರಿನಲ್ಲಿ ತೇಲಾಡುತ್ತಾ ಎಕ್ಸ್ಪ್ಲೋರ್ ಬೈಂದೂರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮೃದ್ಧ ಬೈಂದೂರು ಎಂಬ…
