Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.25: ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಜುಲೈ 26ರ ಬುಧವಾರ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ. ಜುಲೈ 24ರಿಂದ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಜುಲೈ 26ಕ್ಕೂ ಮುಂದುವರಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್‌ ಮತ್ತು ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿಲ್ಲ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.25: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ತೀವ್ರತೆ ಮುಂದುವರಿದ ಪರಿಣಾಮ ನದಿಗಳು ತಂಬಿ ಹರಿಯುತ್ತಿದೆ, ಸಮುದ್ರ ಪ್ರಕ್ಷುಬ್ದಗೊಂಡು ಅಬ್ಬರಿಸುತ್ತಿದೆ. ಅಲ್ಲಲ್ಲಿ ತಗ್ಗು ಪ್ರದೇಶ ಜಲಾವೃತ, ಪ್ರವಾಹ ಪರಿಸ್ಥಿತಿ ಸೇರಿದಂತೆ ಸಾಕಷ್ಟು ಮಳೆಹಾನಿಯೂ ಸಂಭವಿಸುತ್ತಿದೆ. ಕರಾವಳಿಯಲ್ಲಿ ಜೂ.24ರಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನಿರಂತರ ಮಳೆ ಸುರಿಯುತ್ತಲೇ ಇದೆ. ಕುಂದಾಪುರದ ಪಂಚ ನದಿಗಳಾದ ಸೌರ್ಪಣಿಕ, ಖೇಟ, ಚಕ್ರ, ಕುಬ್ಜ, ವಾರಾಹಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಶಿರೂರು ಕರಾವಳಿಯ ಕೆಲ ಭಾಗಗಳಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಬೈಂದೂರು ಕುಂದಾಪುರ ಬ್ರಹ್ಮಾವರ ಹೆಬ್ರಿ ತಾಲೂಕುಗಳಲ್ಲಿ ಗಾಳಿ ಮಳೆ ಹಾಗೂ ಮರ ಬಿದ್ದು ಮನೆ, ಕೊಟ್ಟಿಗೆ ಹಾಗೂ ತೋಟಗಳಿಗೆ ಹಾನಿಯಾಗಿದೆ. ವಿದ್ಯುತ್ಕಂಬಗಳ ಮೇಲೆ ಮರ ಬಿದ್ದ ಪರಿಣಾಮ ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಕರಾವಳಿಯಿಂದ ಮಲೆನಾಡಿಗೆ ಸಂಪರ್ಕಿಸುವ ರಸ್ತೆಯಲ್ಲಿ ಅಲ್ಲಲ್ಲಿ ಮರಗಳು, ಕೆಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ನೆರೆ ನೆರೆ ನೆರೆ:ಸೌಪರ್ಣಿಕಾ ನದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.25: ಕುಂದನಾಡು ರೈತ ಉತ್ಪಾದಕರ ಕಂಪೆನಿ ನೇತೃತ್ವದಲ್ಲಿ ಉಡುಪಿ ಜಿ.ಪಂ., ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ ಉಡುಪಿ, ಕುಂದಾಪುರ ತಾ.ಪಂ., ಅಂಪಾರು ಗ್ರಾ.ಪಂ., ರೋಟರಿ ಕ್ಲಬ್ ಅಂಪಾರು ಹಾಗೂ ವನಶ್ರೀ ಸಂಜೀವಿನಿ ಒಕ್ಕೂಟ ಅಂಪಾರಿನ ಸಂಯುಕ್ತ ಆಶ್ರಯದಲ್ಲಿ ಅಂಪಾರು ಗ್ರಾಮದ ಹಡಾಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ಜಿ.ಪಂ. ಸಿಇಒ ಪ್ರಸನ್ನ ಎಚ್. ಚಾಲನೆ ನೀಡಿದರು. ಈ ವೇಳೆ ಸಿಇಒ ಪ್ರಸನ್ನ ಅವರು ಕೋಣಗಳನ್ನು ಕಟ್ಟಿ ಗದ್ದೆಯನ್ನು ಉಳುಮೆ ಮಾಡಿದ್ದಲ್ಲದೆ, ನೇಜಿ ನೆಟ್ಟು ಖುಷಿಪಟ್ಟರು. ಬಳಿಕ ಅವರು ಮಾತನಾಡಿ, ಜಿಲ್ಲೆಯ 155ಗ್ರಾ.ಪಂ.ಗಳಲ್ಲಿ ಪ್ರತೀ ಗ್ರಾ.ಪಂ.ಗೆ ತಲಾ 10 ಎಕರೆ ಹಡಿಲು ಭೂಮಿ ನಾಟಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಇದರ ಪ್ರಕಾರ ಕನಿಷ್ಠ 1,550 ಎಕರೆ ಹಡಿಲು ಭೂಮಿ ಹಸನಾಗಲಿದೆ. ಈವರೆಗೆ 1.130 ಎಕರೆ ಭೂಮಿಯನ್ನು ಗುರುತಿಸಿ, ನಾಟಿ ಮಾಡುವ ಕಾರ್ಯವಾಗುತ್ತಿದೆ ಎಂದರು. ಜಿ.ಪಂ. ಸಿಇಒ ಅವರೊಂದಿಗೆ ತಾ.ಪಂ. ಇಒ ಭಾರತಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಯೋಧ್ಯೆ ಶ್ರೀ ರಾಮ ಮಂದಿರ ಪುನರ್ ನಿಮಾ೯ಣ ಕಾಯ೯ದ ಯಶಸ್ಸಿಗಾಗಿ ಶ್ರೀರಾಮ ಮಂದಿರ ಪರಿಸರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಚತುವೇ೯ದ ಸಂಹಿತಾ ಯಾಗ, ಶ್ರೀಮದ್ ಭಾಗವತಾ – ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಯಾಗ ನಡೆಯುತ್ತಿದೆ. ವಿವಿಧ ಭಾಗಗಳಿಂದ ತೆರಳಿದ ವೇದ ಪಾರಂಗತ ಅರ್ಚಕರ ನೇತೃತದಲ್ಲಿ ಬೃಹತ್ ಯಾಗ ನಡೆಸಲಾಗುತ್ತಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಅವರಿಗೂ ಆಹ್ವಾನವಿತ್ತು. ಅವರೊಂದಿಗೆ ಉದ್ಯಮಿಗಳಾದ ಭೀಮೇಶ್ ಕುಮಾರ್, ಶಿವಾನಂದ ಮಯ್ಯಾಡಿ, ರಾಜೇಶ್ ಹೋಬಳಿದಾರ್ ಹಾಗೂ ನಾಗರಾಜ ಹೆಬ್ಬಾಗಿಲು ಪಾಲ್ಗೊಂಡಿದ್ದರು. ಈ ಸಂದರ್ಭ ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಜೀರ್ಣೋದ್ಧಾರದ ಉಸ್ತುವಾರಿ ಹೊತ್ತಿರುವ ಪ್ರಮುಖರಲ್ಲಿ ಓರ್ವರಾದ ವಿಶ್ವ ಹಿಂದೂ ಪರಿಷತ್ತಿನ ಗೋಪಾಲ್ ಜೀ ಅವರನ್ನು ಭೇಟಿಯಾಗಿ ಅವರನ್ನು ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶದಲ್ಲಿ ನಮ್ಮ ನಡುವೆ ಅಶಾಂತಿಯನ್ನುಂಟುಮಾಡುವ ಪ್ರಕ್ರಿಯೆಗಳು ಇಂದು ನಿರಂತರವಾಗಿ ನಡೆಯುತ್ತಿದೆ. ಮಣಿಪುರದಲ್ಲಿ ನಡೆದ ಘಟನೆ ದೇಶವೇ ತಲೆ ತಗ್ಗಿಸುವಂತಾಹದ್ದು. ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯದ ಮಾಹಿತಿ ಮೊದಲೇ ಇದ್ದರೂ ಸ್ಥಳೀಯ ಪೊಲೀಸ್, ಸರ್ಕಾರ ಕ್ರಮ ಕೈಗೊಳ್ಳಲು ಹಿಂದೆಟು ಹಾಕಿರುವುದು ಹಾಗೂ ಕೇಂದ್ರ ಸರ್ಕಾರ ಮೌನ ವಹಿಸಿದ್ದುದರ ಹಿಂದಿನ ಉದ್ದೇಶವೇನು ಎಂದು ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಪ್ರಶ್ನಿಸಿದರು. ಅವರು ಸೋಮವಾರ ಕುಂದಾಪುರದ ಸಹಬಾಳ್ವೆ ಕುಂದಾಪುರ, ದಸಂಸ ತಾಲೂಕು ಘಟಕ ಕುಂದಾಪುರ, ಸಮುದಾಯ ಕುಂದಾಪುರ ಹಾಗೂ ಇನ್ನಿತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಹಿಳೆಯರನ್ನು ದೇವರು ಎನ್ನುವ ಬಿಜೆಪಿ ನೇತೃತ್ವದ ಸರ್ಕಾರ, ಪರಿವಾರ ಈ ಘಟನೆಯ ಬಗ್ಗೆ ಕಠಿಣ ನಿಲುವುಗಳನ್ನು ತಳೆಯದಿರುವುದರ ಹಿಂದೆ ಆನೇಕ ಕಾರಣಗಳು ಇವೆ. ಮಣಿಪುರ ಘರ್ಷಣೆಯಲ್ಲಿ 5ಸಾವಿರಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಹಾಕಿದರು. 25ಕ್ಕೂ ಹೆಚ್ಚು ಚರ್ಚ್ಗಳಿಗೆ ಹಾನಿಯಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಜು.25: ಮನೆಯಿಂದ ಹೊರಕ್ಕೆ ಹೋಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ನಾಪತ್ತೆಯಾದ ಯುವಕ. ಜುಲೈ 23 ರಂದು ಮನೆಯಿಂದ ಹೊರಗೆ ಹೋಗಿದ್ದ ಸುರೇಶ್ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಕೊಲ್ಲೂರು ಠಾಣೆಯ ಪಿಎಸ್ಐ ಯುವಕನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸ್ಥಳೀಯರು ನೆರೆಯಲ್ಲಿ ಕೊಚ್ಚಿಹೋಗಿರುವ ಅಥವಾ ಕಾಡು ಪ್ರಾಣಿಯಿಂದ ಹಾನಿಗೊಳಗಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಶಾಸಕ ಗುರುರಾಜ ಗಂಟಿಹೊಳೆ ಅವರು ಯುವಕನ ಮನೆಗೆ ಭೇಟಿ ನೀಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ರಿ. ಆನಗಳ್ಳಿ, ಗೆಳೆಯರ ರಿ. ಆನಗಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ.ಉಡುಪಿ, ರಿಜಾಯ್ಸ್ ಇವೆಂಟ್ ಗ್ರೂಪ್ ಆನಗಳ್ಳಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಸಹಕಾರದಲ್ಲಿ ಆನಗಳ್ಳಿಯ ಗೆಳೆಯರ ಬಳಗ ಕಲಾಮಂದಿರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಭಾನುವಾರ ಜರುಗಿತು. ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ವಿ ನಾಯಕ್ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ನ್ಯಾಯಕ್ಕಾಗಿ ನಾವು ಕಾನೂನು ಹೋರಾಟ ಮಾಡಬಹುದು ಆದರೆ ರಕ್ತವನ್ನು ಯಾವುದೇ ಹೋರಾಟದ ಮೂಲಕ ಪಡೆಯಲಾಗಿದು. ಯುವ ಸಮೂಹ ಸ್ವಯಂಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಿದರೆ ಮಾತ್ರ ರೋಗಿಗಳ ಉಳಿವಿಗೆ ನ್ಯಾಯ ಸಿಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಜಯಕರ್ ಶೆಟ್ಟಿ, ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ,ಡಾ. ಸೋನಿ ಅಧ್ಯಕ್ಷರು ಜೆಸಿಐ ಕುಂದಾಪುರ ಸಿಟಿ, ಡಾ.ಆನ್ಸಿ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಉಮೇಶ್ ಕಾಂಚನ್ ಅಧ್ಯಕ್ಷರು, ಗೆಳೆಯರ…

Read More

ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಸಭೆಯಲ್ಲಿ ಸಚಿವರ ಮಾತು ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜು.24: ಹಿಂದಿನ ಸರಕಾರ ಮೀನುಗಾರರಿಗೆ ನೀಡಿದ ಎಲ್ಲಾ ಭರವಸೆಗಳು ಇಂದಿಗೂ ಭರವಸೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಸರಕಾರ ಯಾವುದೇ ಸುಳ್ಳು ಭರವಸೆ ನೀಡುವುದಿಲ್ಲ. ಆದರೆ ಏನು ಮಾಡುತ್ತೆವೆಯೂ ಅದನ್ನೇ ಗ್ಯಾರೆಂಟಿಯಾಗಿ ಹೇಳುತ್ತೆವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಮಾಂಕಾಳ ಎಸ್. ವೈದ್ಯ ಹೇಳಿದರು. ಅವರು ಸೋಮವಾರ ಉಪ್ಪುಂದದ ರಾಣಿಬಲೆ ಮೀನುಗಾರರ ಒಕ್ಕೂಟ ರಿ. ವತಿಯಿಂದ ಕೊಡೇರಿ ಕಿರುಬಂದರುವಿನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಹಿಂದಿನ ಸರಕಾರದಿಂದ ಮೀನುಗಾರರಿಗೆ ಕೆಟ್ಟ ಪರಿಸ್ಥಿತಿ ಬಂದಿತ್ತು. ನಾವು ಸುಳ್ಳು ಹೇಳುವುದಿಲ್ಲ ಮೀನುಗಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದರು. ಮೀನುಗಾರರಿಗೆ 4 ವರ್ಷದಿಂದ ಸಂಕಷ್ಟ ನಿಧಿ ಪರಿಹಾರ ಸಿಗಲಿಲ್ಲ, ಇಂಜಿನ್ ಸಬ್ಸಿಡಿಗೆ ಒಂದು ರೂಪಾಯಿನು ನೀಡಲಿಲ್ಲ. 3.60 ಕೋಟಿ ಲಕ್ಷ ಪರಿಹಾರ ಹಣವನ್ನು ಬಿಡುಗಡೆ ಮಾಡದೇ ಅನ್ಯಾಯವೆಸಗಿಗಿದೆ. ಇದೆಲ್ಲದಕ್ಕೂ ಒದಗಿಸುವ ಕ್ರಮ ಕೈಗೊಳ್ಳುವ ಜೊತೆಗೆ ಕೊಡೇರಿ ಬಂದರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವುದರಿಂದ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ನದಿಗಳು, ಹಳ್ಳ ತೋಡುಗಳು ತುಂಬಿ ಹರಿದು ಅಪಾಯದ ಮಟ್ಟ ತಲುಪಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯದ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಯಾವುದೇ ಬೀಚ್, ನದಿ ಹಾಗೂ ಜಲಪಾತಗಳ ಬಳಿ ತೆರಳುವುದನ್ನು ಮತ್ತು ಫೋಟೋ – ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ಪ್ರವಾಸಿಗರು ಭೇಟಿ ನೀಡಬಹುದಾದ ಸ್ಥಳಗಳಲ್ಲಿ ಅಪಾಯದ ಮುನ್ನೆಚ್ಚರಿಕೆ ವಹಿಸಲು ಎಚ್ಚರಿಕಾ ಫಲಕ, ಪೊಲೀಸ್ ಕಾವಲು ಮೊದಲಾದ ಕ್ರಮಗಳನ್ನು ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ► ಜುಲೈ 25ರಂದು ಉಡುಪಿ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ – https://kundapraa.com/?p=67941 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.24: ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಜುಲೈ 25ರ ಮಂಗಳವಾರ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳ ಜೊತೆಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್‌ ಮತ್ತು ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ. ಜುಲೈ 24ರಂದು ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಜುಲೈ 25ಕ್ಕೂ ಮುಂದುವರಿಸಲಾಗಿದೆ. ಮಂಗಳೂರು ವಿವಿಯಿಂದ ನಡೆಯಬೇಕಿದ್ದ ಮಂಗಳವಾರದ ಪರೀಕ್ಷೆಯನ್ನೂ ಮುಂದೂಡಲಾಗಿದೆ. ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನದಿಗಳು, ಹಳ್ಳ ತೋಡುಗಳು ತುಂಬಿ ಹರಿಯುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಬೀಚ್ ಗಳು, ನದಿಗಳು ಹಾಗು ಜಲಪಾತಗಳ ಬಳಿ ತೆರಳದಂತೆ ಹಾಗೂ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು…

Read More