Author: ನ್ಯೂಸ್ ಬ್ಯೂರೋ

ಕುಂದಾಪು ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ಜುಲೈ 1 ರಂದು ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ  ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ಅವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಂಡಿರುವ ಪುಸ್ತಕಗಳೆಂದರೆ ನರೇಂದ್ರ ಪೈ ಆಯ್ದ ವಿಮರ್ಶೆಗಳನ್ನು ಒಳಗೊಂಡ ಸಾವಿರದ ಒಂದು ಪುಸ್ತಕ, ಯಶೋದಾ ಮೋಹನ್ ಅವರ ಇಳಿ ಹಗಲಿನ ತೇವಗಳು ಎಂಬ ಕಥಾಸಂಕಲನ, ಸುಧಾ ನಾಗೇಶ್‌ ಅವರ ಹೊಂಬೆಳಕು ಎಂಬ ಚಿಂತನ ಬರಹಗಳು, ವಾಣಿ ರಾಜ್ ಅವರ ಕಥಾಸಂಕಲನ ಸವಿ ನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ ಕುಂದೂರು ಅವರ ಮಲೆನಾಡಿನ ಕಥನವಾದ ಜೀವನ ಯಾನ, ರಾಜೇಂದ್ರ ಭಟ್ ಅವರ ರಾಜ ಪಥ ಎಂಬ ಲೇಖನಗಳ ಪುಸ್ತಕ, ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ ಎಂಬ ಲೇಖನಗಳು, ದಿಗಂತ್ ಬಿಂಬೈಲ್ ಅವರ ಕೊಂದು ಪಾಪ ತಿಂದ್ ಪರಿಹಾರ ಎಂಬ ಕಥಾ ಪ್ರಸಂಗಗಳು, ರಾಜಶೇಖರ ಹಳೆ ಮನೆ ಅವರ…

Read More

ಕುಂದಾಪು ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ  ತಾಲೂಕಿನ ಕಂಡ್ಲೂರು ಸಮೀಪದ ಕಾವ್ರಾಡಿ ನಿವಾಸಿಯಾದ  ದೇವೇಂದ್ರ ಶೇಟ್  ಅವರ  ಅನಾರೋಗ್ಯ ನಿಮಿತ್ತ ವೈದ್ಯಕೀಯ ಚಿಕಿತ್ಸೆಗಾಗಿ ಸಂಘದ ವತಿಯಿಂದ 10,000 ರೂಪಾಯಿಯನ್ನು  ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಚಕ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಸುಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸಂಘದ ಸದಸ್ಯರಾದ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ನಿತಿನ್ ಜೈರಾಂ ಗಡ್ಕರಿ ಅವರನ್ನು ಅವರ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಮನವಿ ಮಾಡಿದ್ದಾರೆ. 1) ಆಗುಂಬೆ ಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ 2) ಕುಂದಾಪರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗೂ ಭಾರಿ ಸೇತುವೆ ನಿರ್ಮಾಣ 3) ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ 4) ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಬಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ 5) ರಾ.…

Read More

ಕುಂದಾಪ್ರ ಡಾಟ್‌ ಕಾಂ ಲೇಖನಯೋಗದಲ್ಲಿ ಹೇಳಲಾಗಿರುವ ಭಂಗಿಗಳು, ಉಸಿರಾಟ ಪ್ರಕ್ರಿಯೆ, ವ್ಯಾಯಾಮವು ನಮ್ಮ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಅಂಶಗಳ ತರಲು ಸಹಕಾರಿಯಾಗಿವೆ. ನೀವು ನಿರಂತರ ಯೋಗಭ್ಯಾಸದಿಂದಾಗಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬಹುದು, ಕೊಬ್ಬು ಕರಗಿಸಬಹುದು, ಇಡೀ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು. ಆದ್ರೆ ಯೋಗದಿಂದಾಗಿ ನಿಮ್ಮ ಕೂದಲು ಬೆಳವಣಿಗೆಯ ಮೇಲೆಯೂ ಅದರ ಪ್ರಭಾವ ಉಂಟುಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ? ಹೌದು ಯೋಗದಿಂದಾಗಿ ತಲೆಕೂದಲು ಉದುರುವುದು ಹಾಗೂ ಕೂದಲು ಬೆಳವಣಿಗೆಗೆ ಪೂರಕವಾಗಿದೆ ಎಂಬುದು ದೃಢವಾಗಿದೆ. ಹಾಗಾದ್ರೆ ಕೂದಲಿನ ಆರೋಗ್ಯಕ್ಕೆ ಯಾವ ಯೋಗದ ಭಂಗಿಕ ಸಹಕಾರಿಯಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಉಷ್ಟ್ರಾಸನ:ಉಷ್ಟ್ರಾಸನವು ನೆತ್ತಿಯ ಕಡೆಗೆ ರಕ್ತದ ಹರಿವನ್ನು ಪ್ರೇರೇಪಿಸುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ ಇದು ಥೈರಾಯ್ಡ್ ಗ್ರಂಥಿಯ ಅಸಹಜತೆಗಳನ್ನು ಸಮತೋಲನಗೊಳಿಸುತ್ತದೆ. ಈ ಥೈರಾಯ್ಸ್ ಗ್ರಂಥಿಯ ಅಸಹಜ ಪ್ರಭಾವವು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೆತ್ತಿಯ ಮೇಲೆ ರಕ್ತ ಪರಿಚಲನೆ ಹೆಚ್ಚಾಗುವುದರಿಂದ, ಉಷ್ಟ್ರಾಸನವು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ಸಹ ತಡೆಯುತ್ತದೆ ಎಂದು ತಿಳಿದುಬಂದಿದೆ. ಪಾದಹಸ್ತಾಸನ:ಈ ಆಸನದಲ್ಲಿ ನಿಮ್ಮ ತಲೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ, ಮನುಷ್ಯ ಆರೋಗ್ಯವಂತನಾಗಿದ್ದಾನೆ ಎಂದರೆ ಅವನಷ್ಟು ಶ್ರೀಮಂತ ಯಾರೂ ಇಲ್ಲ. ದೈಹಿಕವಾಗಿ, ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಸದೃಢರಾಗಿರಲು ಯೋಗ ಸಹಕಾರಿಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ದಿನಚರಿಯ ಅಂಗವಾಗಿ ಯೋಗಾಭ್ಯಾಸವನ್ನು ಮಾಡಬೇಕು. ದೇಹ ಮತ್ತು ಮನಸ್ಸನ್ನು ಆರೋಗ್ಯದಿಂದಿಡಲು ಯೋಗ ಉಪಯುಕ್ತವಾಗಿದ್ದು, ಆತ್ಮವನ್ನು ಪರಮಾತ್ಮನೊಂದಿಗೆ ಲೀನ ಮಾಡುವಲ್ಲಿ ಯೋಗ ಉತ್ತಮ ಔಷಧ ಎಂದು ಯೋಗ ತರಬೇತುದಾರರಾದ ಆಟಕೆರೆ ಬಾಬು ಪೈ ಕೋಟೇಶ್ವರ ಹೇಳಿದರು. ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಆಶ್ರಯದಲ್ಲಿ ಶ್ರೀ ಶಾರದೋತ್ಸವದ ಸುವರ್ಣ ಸಂಭ್ರಮ-2024ರ ಪ್ರಯುಕ್ತ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಆಯೋಜಿಸಲಾಗಿರುವ ಹತ್ತು ದಿನಗಳ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿಯ ವೈದ್ಯ ಡಾ. ಮಹೇಶ ಜಿ. ಮಾತನಾಡಿ, ಯೋಗಾಭ್ಯಾಸ ಮಾಡುವುದರಿಂದ ದೇಹದಲ್ಲಿ ಚೈತನ್ಯ ವೃದ್ಧಿಯಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ. ದಿನದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿದರೆ ಎಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದೆ. ಇಲಾಖೆಯ ಪ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2024” ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.   “ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ” ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಓ.ಟಿ.ಪಿ ಆಯ್ಕೆಯನ್ನು ಮಾಡಬೇಕು. ನಂತರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓ.ಟಿ.ಪಿಯನ್ನು ದಾಖಲಿಸಬೇಕು. ರೈತರ ಎಫ್.ಐ.ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್‌ಲೋಡ್ ಆಗುತ್ತದೆ. ಎಫ್.ಐ.ಡಿ ಸಂಖ್ಯೆಗೆ ಯಾವುದಾದರೂ ಸರ್ವೆ ನಂಬರ್‌ಗಳು ಜೋಡಣೆಯಾಗದಿದ್ದಲಿ ಸೇರಿಸಿಕೊಳ್ಳಲು ಸಹ ಮೊಬೈಲ್ ಆಪ್‌ನಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಕೋಟ: ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ಭಾನುವಾರ ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಸ್ವರ್ಣೋದ್ಯಮಿ ಮೋಹನ್ ರೇವಣ್ಕರ್ ಆಯ್ಕೆಯಾಗಿದ್ದಾರೆ. ಶಿರೂರು ನಿವಾಸಿಯಾಗಿರುವ ಮೋಹನ್‌ ರೇವಣ್ಕರ್‌ ಅವರು ತಮ್ಮ ಉದ್ಯಮದ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಾಲಿನ ಕಾರ್ಯದರ್ಶಿಯಾಗಿ ಸುನಿಲ್ ಹೆಚ್. ಜಿ. ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲೆಯಿಂದ ಬಂದ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಸಾವನಪ್ಪಿದ ಘಟನೆ ಬೆಳ್ಳಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದ್ರೋಳ್ಳಿ ಚಿಕ್ಕನಬೆಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ನಂದ್ರೋಳ್ಳಿ ನಿವಾಸಿ ಶೀಲಾ ಹಾಗೂ ಸತೀಶ್ ಮಡಿವಾಳ ಎಂಬವರ ಮಗ ಧನರಾಜ್ (13) ಹಾಗೂ ಮಗಳು ಛಾಯ (7) ಎಂದು ಗುರುತಿಸಲಾಗಿದೆ. ವಂಡ್ಸೆ ಶಾಲೆಯ ವಿದ್ಯಾರ್ಥಿಗಳಾದ ಧನರಾಜ್‌ ಹಾಗೂ ಛಾಯಾ ಶಾಲಾ ವಾಹನದಲ್ಲಿ ಮನೆಗೆ ಹಿಂದಿರುಗಿದ್ದು, ಈ ವೇಳೆ ನಿತ್ಯವೂ ಇಳಿಯುತ್ತಿದ್ದ ನಿಲ್ದಾಣದಲ್ಲಿ ಇಳಿದಿದ್ದು, ಅಲ್ಲಿಂದ ಅವರ ತಾಯಿ ಛಾಯಾ ಬಂದು ಮನೆಗೆ ಕರೆದೊಯ್ದಿದ್ದರು ಎನ್ನಲಾಗಿದೆ. ಈ ನಡುವೆ ಮಾರ್ಗಮಧ್ಯೆ ಇರುವ ಕೆರೆಯ ಬಳಿಗೆ ಮಕ್ಕಳು ಏಕೆ ತೆರಳಿದರು ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಮಕ್ಕಳ ರಕ್ಷಣೆಗೆ ಮುಂದಾದ ತಾಯಿ ಶೀಲಾ ಅಸ್ವಸ್ಥಗೊಂಡು‌, ಆಕೆಯನ್ನು ಸ್ಥಳೀಯರು ರಕ್ಷಿಸಿದ್ದು, ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಪ್ರತಿವರ್ಷದಂತೆ ಕೊಡಮಾಡಿದ ಸಮವಸ್ತ್ರ, ನೋಟ್ ಪುಸ್ತಕ, ಕಲಿಕಾ ಪರಿಕರಗಳ ವಿತರಣೆ ಕಾರ್ಯಕ್ರಮ ಹಾಗೂ ಪೋಷಕರ ಸಭೆ ನಡೆಯಿತು. ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು, ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಗಮನ ಹರಿಸಬೇಕು, ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸಲು ಶಿಕ್ಷಕರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಅಂತೆಯೇ ಪೋಷಕರು ಕೂಡಾ ತಮ್ಮ ಮೇಲಿನ ಜವಬ್ದಾರಿಯನ್ನು ಅರಿತು ಪಾಲಿಸಬೇಕು, ಮಗು ಶಿಸ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೆಪಿಸಬೇಕು. ಹಾಗೆ ಇದು ಮಳೆಗಾಲ ಮಕ್ಕಳ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು. ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಾಡಪ್ರಭು ಕೆಂಪೆಗೌಡರ ದಿನಾಚರಣೆ ಆಚರಿಸಲಾಯಿತು. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅಂಬಿಕಾ, ರೇವತಿ, ಪಲ್ಲವಿ, ಆಶಾ ಅವರನ್ನು ಸನ್ಮಾನಿಸಲಾಯಿತು.…

Read More