ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಎಲ್ಲಾ ಉದ್ಯಮದಾರರ 2026-27 ನೇ ಸಾಲಿನ ಉದ್ಯಮ ಪರವಾನಿಗೆ ನವೀಕರಣ ಅವಧಿಯು ಏಪ್ರಿಲ್ 2026ರಿಂದ ಪ್ರಾರಂಭವಾಗಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಉದ್ಯಮದಾರರು ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ನಿಗದಿತ ದಾಖಲೆ ಸಹಿತ ಆನ್ಲೈನ್ ಮೂಲಕ ಅಥವಾ ಪಟ್ಟಣ ಪಂಚಾಯತ್ಗೆ ಅರ್ಜಿ ನಮೂನೆ ಹಾಗೂ ದಾಖಲೆ ಸಹಿತ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆ ನವೀಕರಿಸಿಕೊಳ್ಳಬಹುದಾಗಿದೆ. ನಿಗದಿತ ಅವಧಿಯಲ್ಲಿ ಉದ್ಯಮ ಪರವಾನಿಗೆ ನವೀಕರಿಸದಿದ್ದಲ್ಲಿ ಅಧಿಸೂಚನೆಯಂತೆ ದಂಡ ಸಹಿತ ಬಾಕಿ ಶುಲ್ಕವನ್ನು ಪಾವತಿಸಬೇಕು. ಈಗಾಗಲೇ ಉದ್ಯಮ ಸ್ಥಗಿತಗೊಳಿಸಿದ್ದಲ್ಲಿ ಮಾರ್ಚ್ ಅಂತ್ಯದೊಳಗೆ ಪಟ್ಟಣ ಪಂಚಾಯತ್ಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ, ದಂಡ ಸಹಿತ ಬಾಕಿ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆಯನ್ನು ರದ್ದುಪಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಸದ್ರಿ ಉದ್ಯಮದಾರರನ್ನು ಪ್ರತಿವರ್ಷ ಬಾಕಿದಾರರೆಂದು ಪರಿಗಣಿಸಿ ಕಾನೂನು ರೀತ್ಯಾ ದಂಡಸಹಿತ ಬಾಕಿ ಶುಲ್ಕ ವಸೂಲಿ ಮಾಡಲು ಕ್ರಮವಹಿಸಲಾಗುವುದು. ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ನಿಗದಿತ ದಾಖಲೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: 2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯ ಗ್ರೂಪ್-01 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 13.96 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 08 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.44 ಫಲಿತಾಂಶ ಬಂದಿದ್ದು, ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.54 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 06 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 60 ಫಲಿತಾಂಶ ಬಂದಿದ್ದು ಹಾಗೂ ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 9.39 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜಿನ ಒಟ್ಟು 06 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 22 ಫಲಿತಾಂಶ ದಾಖಲಿಸಿದ್ದಾರೆ.2026 ಜನವರಿಯಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ತನ್ವಿ ಬಿ. ಪೂಜಾರಿ, ರೆಹೆನಾಜ್, ಮೇಘನಾ ಪಿ. ದೇವಾಡಿಗ ಹಾಗೂ ವೈಶ್ಣವಿ ಯು.ಕೆ. ಇವರು ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಕಿರಿಮಂಜೇಶ್ವರ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪಂಚ ಗ್ಯಾರೆಂಟಿ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮವು ಇತ್ತೀಚಿಗೆ ನಾಗೂರಿನಲ್ಲಿ ಜರುಗಿತು. ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮೋಹನ್ ಪೂಜಾರಿ ಉಪ್ಪುಂದ ಮಾತನಾಡಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಮತ್ತು 5 ಗ್ಯಾರೆಂಟಿ ಯೋಜನೆಯಿಂದ ಬೈಂದೂರು ತಾಲೂಕಿನ ಮತ್ತು ಕಿರಿಮಂಜೇಶ್ವರ ಗ್ರಾಮದ ಮಹಿಳೆಯರು ಪಡೆದುಕೊಂಡ ಒಟ್ಟು ಮೊತ್ತದ ವಿವರ ಹಾಗೂ ಮುಂದೆ ಗೃಹಲಕ್ಷ್ಮಿ ಯೋಜನೆಯ ಫಲನುಭವಿಗಳ ಸ್ವ ಸಹಾಯ ಗುಂಪುಗಳ ರಚನೆಯ ಬಗ್ಗೆ ಪ್ತಾಸ್ತವಿಕ ಮಾತುಗಳನ್ನಾಡಿದರು. ಮಹಿಳೆಯರ ಸಬಲೀಕರಣ ಮತ್ತು ಸರಕಾರದ ಪಂಚ ಗ್ಯಾರೆಂಟಿ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣದ ಮೇಲೆ ಬೀರಿದ ಪರಿಣಾಮದ ವಿವರವಾದ ಮಾಹಿತಿಯನ್ನು ಉದಾಹರಣೆ ಸಹಿತ ವಿವರಿಸಿದ ಖ್ಯಾತ ಆಯುರ್ವೇದ ತಜ್ಞೆ ಡಾl ಸೋನಿ ಡಿ. ಕಾಸ್ಟ ಗ್ರಾಮೀಣ ಭಾಗದ ಮಹಿಳೆಯರು 5 ಯೋಜನೆಯನ್ನು ಸ್ವಾವಲಂಬನೆ ಮತ್ತು ಸದೃಢ ಜೀವನ ನೆಡೆಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ 198ರಂತೆ ಅರಣ್ಯ ದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಮಲೈಕುಡಿಯ ಸಮುದಾಯದವರಿಗೆ “ಮುಖ್ಯಮಂತ್ರಿಗಳ ಆದಿವಾಸಿ ಗೃಹ ಭಾಗ್ಯ ಯೋಜನೆ”ಯಡಿ ಮನೆಗಳನ್ನು ನಿರ್ಮಾಣ ಮಾಡಲು ಜಿಲ್ಲೆಯ ವಸತಿ ರಹಿತ ಮಲೈಕುಡಿ ಸಮುದಾಯದವರಿಂದ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ್ ಅಥವಾ ಐ.ಟಿ.ಡಿ.ಪಿ ಕಚೇರಿ ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574814 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಾಲಾಡಿ ಜೆಸಿಐ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲೇಡಿ ಜೆಸಿ ಪ್ರೆಸಿಡೆಂಟ್ ಅವಶ್ಯ ಶೆಟ್ಟಿ ಮಹಿಳಾ ಶೋಷಣೆಯ ಬಗ್ಗೆ ಮಾತನಾಡಿ, ಮಹಿಳೆಯರ ಮೇಲಾಗುವ ಶೋಷಣೆಯನ್ನು ಎದುರಿಸಲು ನಾವು ಮಾನಸಿಕ ಮತ್ತು ದೈಹಿಕವಾಗಿ ಶಕ್ತರಾಗಬೇಕು ಎಂದು ಅಭಿಪ್ರಾಯಪಟ್ಟರು. ಹೈನುಗಾರಿಕೆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಗೀತಾ ನಾಯ್ಕ್ ಮುದೂರಿ ಮತ್ತು ಪೌರ ಕಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಾಗಿ ಹಾಲಾಡಿ ಅವರನ್ನು ಜೆಸಿಐ ಅಧ್ಯಕ್ಷರಾದ ಪ್ರದೀಪ್ ಹಾಲಾಡಿ ಅವರು ಗೌರವಿಸಿ, ಲಿಂಗ ಸಮಾನತೆ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ದೀಪಾ ಅವರು ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ,ರಾಘವೇಂದ್ರ ಕುದ್ರುಬೆಟ್ಟು, ಸಹಕಾರ್ಯದರ್ಶಿ ಮಂಜುಳಾ ಶೆಟ್ಟಿ, ಜೇಸಿಐ ಸಂಯೋಜಕಿ ಆಶಾ ರಾಜೀವ ಕುಲಾಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯಶೋಧ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ವಿಶ್ವ ಮಹಿಳಾ ದಿನಾಚರಣೆ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ದೀಪ, ಗಾಯತ್ರಿ, ಸುಮಂಗಲ, ಶಿಲ್ಪ ಶಾಲಿನಿ, ಸುವರ್ಣ ಪೊಲೀಸ್ ಇಲಾಖೆಯಿಂದ ಕವಿತಾ ಮತ್ತು ರೂಪ ಭಾಗವಹಿಸಿದ್ದರು. ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ದೀಪ ಅವರು ಭಾಗವಹಿಸಿದ ಎಲ್ಲಾ ಮಹಿಳಾ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ. ಮಂಗಳೂರು, ಬೈಂದೂರು ಕ್ಷೇತ್ರ ಸಮಿತಿ, ನಗರ ಸಮಿತಿ ಬೈಂದೂರು, ವಲಯ ಸಮಿತಿ ಉಪ್ಪುಂದ, ನಾವುಂದ, ವಂಡೈ ಕೊಲ್ಲೂರು ಮತ್ತು ಗುಜ್ಜಾಡಿ ಇವರ ವತಿಯಿಂದ ಟೈಲರ್ಸ್ ಡೇ ಕಾರ್ಯಕ್ರಮವು ಇತ್ತೀಚಿಗೆ ಈಶ್ವರ ಮಾರಿಕಾಂಬ ದೇವಸ್ಥಾನ ಕಳವಾಡಿಯಲ್ಲಿ ನಡೆಯಿತು. ಇದರ ಅಂಗವಾಗಿ ಬೆಳಿಗ್ಗೆ ಗಂಟೆ 8:30ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಿ ಬೈಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ರಾಜು ಪೂಜಾರಿ ಕೊಲ್ಲೂರು, ಕೋಶಾಧಿಕಾರಿ ರಾಜು ಮೊಗವೀರ ಹಾಗೂ ನಗರ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗೌಡ, ಕೊಲ್ಲೂರು ವಲಯ ಅಧ್ಯಕ್ಷರಾದ ಮಹಾಲಕ್ಷ್ಮಿ ಭಟ್, ವಂಡ್ಸೆ ವಲಯದ ಅಧ್ಯಕ್ಷರಾದ ಸವಿತಾ ಉಪ್ಪುಂದ, ಸುಶೀಲ ದೇವಾಡಿಗ ನಾವುಂದ, ಸವಿತಾ ಖಾರ್ವಿ ಗುಜ್ಜಾಡಿ, ಶಾಂತಿ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕ ಕಾರ್ಡ್ ಬಗ್ಗೆ ಮಾಹಿತಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರ ಇದರ 41ನೇ ವರ್ಷದ ವಾರ್ಷಿಕ ಸಂಭ್ರಮಕ್ಕಾಗಿ ಶಿಶು ಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜನಮನಸೂರೆಗೊಂಡಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ಪ್ರಸ್ತುತ ಭಾರತೀಯ ಹಿಂದೂ ಸನಾತನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅವಶ್ಯಕತೆಯ ಬಗ್ಗೆ ತಿಳಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್, ಚಿಣ್ಣರೆ ಸಾಂಸ್ಕೃತಿಕ ವೈವಿಧ್ಯವನ್ನು ಕಳೆದ 41 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಿಶುಮಂದಿರದಲ್ಲಿ ಕಲಿತಂತಹ ದಿ.ಸ್ಪಂದನ ಜಯಾನಂದ ಹೋಬಳಿದಾರ್ ಸವಿನೆನಪಿಗಾಗಿ ಒಂದು ಲಕ್ಷ ರೂ. ಕೊಡುಗೆಯನ್ನು ತನ್ನ ಪುತ್ರಿಯ ಸವಿನೆನಪಿಗಾಗಿ ಘೋಷಣೆ ಮಾಡಿದರು. ಜಯಾನಂದ ಹೋಬಳಿದಾರ್ ಅವರನ್ನು ಸಾಮಾಜಿಕ ಸೇವೆಗಾಗಿ ಗೌರವಸಲಾ ಯಿತು. ಬೈಂದೂರು ಸೇನೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಕುಂದಗನ್ನಡ ಸಂಘದ ಆಶ್ರಯದಲ್ಲಿ ಹೋಳಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ದೇವಿಯ ಮೂರ್ತಿಗೆ ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಕುಂದಗನ್ನಡ ಸಂಘದ ಸಂಯೋಜಕರಾದ ಮಹೇಶ್ ನಾಯ್ಕ್ ಮತ್ತು ರೇಷ್ಮಾ ಶೆಟ್ಟಿ, ಬೋಧಕ-ಬೋಧಕೇತರರು ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೋಳಿ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 117ನೇ ತಿಂಗಳ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೊಂಬೆ ಮನೆಯಲ್ಲಿ ಆಚರಿಸಲಾಯಿತು. ಉಪ್ಪಿನಕುದ್ರು ಗ್ರಾಮದಲ್ಲಿ ಸುಮಾರು 25 ವರ್ಷಗಳ ಕಾಲ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಕುಸುಮಾ ಟಿ. ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ರೇವತಿ ಉಮೇಶ್ ಸುವರ್ಣ, ಶ್ರೀಕಲಾ ವಿ. ಪ್ರಭು, ವಸಂತಿ ಆರ್. ಪಂಡಿತ್, ಸುಜಾತಾ ಕೆ. ಐತಾಳ್, ಪ್ರೆಸಿಲ್ಲಾ ಮೆನೇಜಸ್, ಜಯಶ್ರೀ ಪೈ, ಕಲ್ಪನಾ ಸುರೇಶ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು. ಯಶೋದಾ ಮತ್ತು ತಂಡದವರು ಪ್ರಾರ್ಥಿಸಿದರು. ಶೈಲಜಾ ಅವರು ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಜ್ಯೋತಿ ಪೂಜಾರಿ ಮತ್ತು ಇನ್ಫೋಸಿಸ್ ಉದ್ಯೋಗಿ ಪ್ರತೀಕ್ಷಾ ಕಾಮತ್ ಅವರು ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ಸಂಗೀತಾ ಅವರು ಧನ್ಯವಾದ ಸಮರ್ಪಿಸಿದರು. ನಂತರ ಉಪ್ಪಿನಕುದ್ರು ಗ್ರಾಮದ…
