ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ಅಮೃತೇಶ್ವರಿ ಜೋಗಿ ಮಹಿಳಾ ವೇದಿಕೆ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಶ್ರೀ ಅಮೃತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ. ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಥಪಂಥ ಅಲೆಮಾರಿ ಜೋಗಿ ಮಹಿಳಾ ಸಂಘದ ಅಧ್ಯಕ್ಷೆ ಅನುಪಮ ಜೋಗಿ ಶುಭ ಹಾರೈಸಿದರು. ಈವೇಳೆ ಅಮೃತೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಿಕೆಯ ಗೌರವಾಧ್ಯಕ್ಷ ಸುಬ್ರಾಯ ಜೋಗಿ , ದೇವಸ್ಥಾನದ ಅರ್ಚಕ ಉದಯ್ ಜೋಗಿ ,ಮಹಿಳಾ ವೇದಿಕೆಯ ಅಧ್ಯಕ್ಷೆ ಭವಾನಿ ಕೆ, ಕಾರ್ಯದರ್ಶಿ ರೇಖಾ ಕೆ., ಕೋಶಾಧಿಕಾರಿ ಗೀತಾ ಜೋಗಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ಅಮೃತೇಶ್ವರೀ ದೇವಸ್ಥಾನದಲ್ಲಿ ಜೋಗಿ ಮಹಿಳಾ ವೇದಿಕೆಯ ಸದಸ್ಯರಿಂದ ಭಗವದ್ಗೀತೆ ಪಾರಾಯಣ ಗೈದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ ಎರಡು ದಿನಗಳ RC (ರಿಮೋಟ್ ಕಂಟ್ರೋಲ್) ವಿಮಾನ ನಿರ್ಮಾಣ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. 15ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಏರೋನಾಟಿಕಲ್ ಎಂಜಿನಿಯರಿಂಗ್ನ ಮೂಲಭೂತ ತತ್ವಗಳು ಹಾಗೂ ವಿಮಾನ ನಿರ್ಮಾಣದ ಪರಿಚಯ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಮದರ್ ತೆರೆಸಾ ಪಿಯು ಕಾಲೇಜು ಮತ್ತು ಬುಕ್ ಟೆಕ್ ಸೊಲ್ಯೂಷನ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಎಂಐಟಿ, ಮಾಹೆ ಮಣಿಪಾಲದ ವಿಮಾನ ವಸ್ತುಶಾಸ್ತ್ರ ತಜ್ಞರಾದ ಮಧುಸೂಧನ್ ಬಿ ಅವರು ತಮ್ಮ ಮಾತುಗಳಲ್ಲಿ, ಇಂತಹ ತಾಂತ್ರಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಿರಿಯ ವಯಸ್ಸಿನಲ್ಲಿ ಪರಿಚಯಿಸುವುದು ಬಹಳ ಉಪಯುಕ್ತವಾಗಿದ್ದು, ಇದರಿಂದ ಅವರಲ್ಲಿ ಹೊಸ ಆಸಕ್ತಿ ಮೂಡಿ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು. ಕಾರ್ಯಾಗಾರವನ್ನು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಯುವ ಏರೋಸ್ಪೇಸ್ ಎಂಜಿನಿಯರ್ಗಳಾದ ಕಾರ್ತಿಕ್ ಆರ್. ಪಿ., ಯಶ್ ಆರ್ಯನ್ ಮತ್ತು ನವನೀತ್ ಅರಸು ನಡೆಸಿಕೊಟ್ಟರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಎಂ.ಜಿ ಕಾಲೇಜಿನ ಸೂರಿಬೆಟ್ಟು ಹೋಗುವ ರಸ್ತೆಯಲ್ಲಿದ್ದ ಬಾರಿ ಪ್ರಮಾಣದ ತ್ಯಾಜ್ಯವನ್ನು ಇಲ್ಲಿನ ಪಂಚಾಯತ್ ಮಾಜಿ ಸದಸ್ಯ ಕೋಟಿ ಪೂಜಾರಿ ತಮ್ಮ ಸ್ವಂತ ಕರ್ಚಿನೊಂದಿಗೆ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದೆ. ಎಂ.ಜಿ ಕಾಲೇಜಿನ ಸೂರಿಬೆಟ್ಟು ಭಾಗದ ಅರ್ಧ ಕಿ.ಮೀ ರಸ್ತೆಯ ಉದ್ದಕ್ಕೂ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಮನಿಸಿದ ಕೋಟಿ ಪೂಜಾರಿ ಸುಮಾರು 180 ಕ್ಕೂ ಅಧಿಕ ಚೀಲ ತ್ಯಾಜ್ಯ ಸ್ವತಃ ತಾವೇ ನಿಂತು ತೆರೆವುಗೊಳಿಸಿದರು ಈ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಇವರ ಕಾರ್ಯವನ್ನು ಪರಿಸರಪ್ರೇಮಿಗಳು ಅಭಿನಂದಿಸಿದ್ದಾರೆ. ಕಸವನ್ನು ಕಂಡಕಂಡಲ್ಲಿ ಎಸೆಯದಿರಿ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಪ್ರಸ್ತುತ ತಾಪಮಾನಕ್ಕೆ ಈ ತ್ಯಾಜ್ಯಗಳು ಮನುಕುಲದ ಆರೋಗ್ಯದ ಮೇಲೆ ಬಾರಿ ದುಸ್ಥಿತಿಯನ್ನು ತಂದಿಡಲಿದೆ ಅದಕ್ಕಾಗಿಯೇ ಸ್ವತಃ ನಾನೆ ಸ್ವಂತ ಹಣದಲ್ಲಿ ತೆರವುಗೊಳಿಸಲು ಮುಂದಾಗಿದ್ದೇನೆ ಎಂದು ಪಂಚಾಯತ್ ಮಾಜಿ ಹಿರಿಯ ಸದಸ್ಯ ಕೋಟಿ ಪೂಜಾರಿ ಹೇಳಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ ಇದು ಎಲ್ಲರಲ್ಲಿಯೂ ಇರಬೇಕು. ಆಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ. ಕಲೆ, ಪತ್ರಿಕೆ ಗಳು ನಮ್ಮಲ್ಲಿ ಸುಸಂಸ್ಕೃತ, ನಾಗರಿಕ ಪ್ರಜ್ಞೆಯನ್ನು ಬೆಳೆಸುತ್ತದೆ. ಕುಂದಾಪುರ ಮಾತ್ರವಲ್ಲದೆ ಇಡೀ ಕರಾವಳಿಯೇ ಅದ್ಭುತ ಜ್ಞಾನ ಭಂಡಾರದ ನಗರಿ ಎಂದು ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಹೇಳಿದರು. ಅವರು ರವಿವಾರ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ಕೊಡಮಾಡುವ ಕೋ.ಮ. ಕಾರಂತ ಪ್ರಶಸ್ತಿಯನ್ನು ಎಂಜಿನಿಯರ್, ಕುಂಚ ಕಲಾವಿದ, ಫೈವಿ ಟೆಕ್ನಾಲಿಜಿಸ್ನ ತಾಂತ್ರಿಕ ನಿರ್ದೇಶಕ ಬಳ್ಳೂರು ಜಯರಾಮ ಉಡುಪ ಅವರಿಗೆಪ್ರದಾನ ಮಾಡಿ ಆಶೀರ್ವಚನ ನೀಡಿದರು. ಪತ್ರಿಕೆಗಳು ಸಮಾಜವನ್ನು ಸುಧಾರಿಸುವ ಕಾವ್ಯವನ್ನು ಮಾಡುವುದರ ಜತೆಗೆ, ನಮ್ಮನ್ನು ತಿದ್ದಿ ತೀಡುವ ಕೆಲಸವನ್ನು ಮಾಡುತ್ತದೆ. ಮನಸ್ಸಿನಲ್ಲಿ ಸೃಜನಶೀಲತೆ ಇರಲಿ. ಬೇರೆ ಯವರ ಬದಲು ನಮ್ಮನ್ನು ನಾವು ವಿಮರ್ಶೆ ಮಾಡೋಣ. ಭಾಷೆ ಕಲಿಯಲು ವಯಸ್ಸಿನ ಅಡ್ಡಿಯಿಲ್ಲ ಎಂದ ಅವರು, ಪ್ರಶಸ್ತಿ ಪುರಸ್ಕೃತರಾದ ಜಯರಾಮ ಉಡುಪರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾರ್ಷಿಕೋತ್ಸವ-2026 ಅನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಸ್ಟ್ರಿಕೋಸ್ ಎಐ, ಬೆಂಗಳೂರು ಇದರ ಸಿಇಒ ಮತ್ತು ಸಂಸ್ಥಾಪಕರಾದ ಡಾ. ಚಿನ್ಮಯಿ ಹೆಗ್ಡೆ ಮಾತನಾಡಿ, “ಶಿಕ್ಷಣ ಸಂಸ್ಥೆಯು ದೊಡ್ಡದೋ ಅಥವಾ ಚಿಕ್ಕದೋ ಎನ್ನುವುದು ಮುಖ್ಯವಲ್ಲ. ಪ್ರತಿಯೊಂದು ಸಂಸ್ಥೆಯು ಸಮಾಜಕ್ಕೆ ಮಹತ್ತರವಾದ ಕೊಡುಗೆಗಳನ್ನು ಸಲ್ಲಿಸುತ್ತದೆ. ಆ ಮೂಲಕ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಸ್ಯೆಗಳು ಅಥವಾ ಕಷ್ಟಗಳು ಬಂದಾಗ ಹೆದರಬಾರದು. ಸಮಸ್ಯೆಗಳು ನಮ್ಮನ್ನು ಬೆಳೆಸುತ್ತವೆ. ಸಾಧನೆಗೆ ಸಮಸ್ಯೆಗಳು ಅಥವಾ ಕಷ್ಟಗಳೇ ದಾರಿದೀಪವಾಗುತ್ತವೆ” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್.ಎನ್. ಭಟ್ ಅವರು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವುದನ್ನು ಪ್ರಶಂಸಿದರು. ಅದರಲ್ಲೂ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದರು. “ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನವು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಮತ್ತು ಗಂಗೊಳ್ಳಿ ವಲಯ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಅಂಗನವಾಡಿ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಾಕುಹಿತ್ಲು ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು. ಡಾ. ಕಲಾಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿ 30 ಪ್ರತಿಭಾನ್ವಿತ ಅಂಗನವಾಡಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶುಭ ಹಾರೈಸಿದರು. ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಇದರ ಅಧ್ಯಕ್ಷೆ ಸುಮಿತ್ರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್, ಗಂಗೊಳ್ಳಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ, ಜಿ.ಈಶ್ವರ, ಶೋಭಾ ಎಸ್.ಕೆ., ಶೇಷಮ್ಮ, ಕಮಲ, ರೇಖಾ ಖಾರ್ವಿ, ಸಂಗೀತಾ ಬಿ., ಸಹನಾ, ನಿಖಿತಾ, ಅಂಗನವಾಡಿ ಸಹಾಯಕಿಯರು ಮೊದಲಾವದರು ಉಪಸ್ಥಿತರಿದ್ದರು. ಸುಮಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ರೇಖಾ ಖಾರ್ವಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷದ ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದು ಪದವಿ ವಿಭಾಗದಲ್ಲಿ 3 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 9 ರ್ಯಾಂಕ್ಗಳೊಂದಿಗೆ ಒಟ್ಟು 12 ರ್ಯಾಂಕ್ಗಳನ್ನು ಗಳಿಸಿದ್ದಾರೆ. ಜುಲೈ 2024ರಲ್ಲಿ ನಡೆದ ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ರೋಡ್ರಿಗಸ್ ಪ್ರಣೀಲ್ ಮೆಲ್ವಿನ್ ಪ್ರಥಮ ರ್ಯಾಂಕ್ ಪಡೆದು ವಿಶ್ವವಿದ್ಯಾನಿಲಯ ಟಾಪರ್ ಆಗಿ ಹೊರಹೊಮ್ಮಿದ್ದು, ಪ್ರತಿಷ್ಠಿತ ಸೀತಾರಾಮ ಜಿಂದಾಲ್ ಗೋಲ್ಡ್ ಮೆಡಲ್ಗೆ ಭಾಜನರಾಗಿದ್ದಾರೆ. ಜೊತೆಗೆ ಅಕ್ಷತಾ ಪಿ. 7ನೇ ರ್ಯಾಂಕ್ ಮತ್ತು ದೀಕ್ಷಾ ಬಿ 10ನೇ ರ್ಯಾಂಕ್ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸ್ನಾತಕೋತ್ತರ ವಿಭಾಗದ ಎಂ.ಡಿ. ಇನ್ ಕ್ಲಿನಿಕಲ್ ನ್ಯಾಚುರೋಪಥಿಯಲ್ಲಿ ಡಾ. ಶಾಲಿನಿ ಪಿ.ವೈ ಪ್ರಥಮ ರ್ಯಾಂಕ್ ಪಡೆದಿದ್ದು, ಡಾ. ಗ್ರೀಷ್ಮಾ ವಿವೇಕ್ ಆಳ್ವ ದ್ವಿತೀಯ ರ್ಯಾಂಕ್ ಹಾಗೂ ಡಾ. ಶ್ರದ್ಧಾ ಎಂ.ಕೆ 9ನೇ ರ್ಯಾಂಕ್ ಗಳಿಸಿದ್ದಾರೆ. ಎಂ.ಡಿ. ಇನ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗಾಡಿ ಕೂಸ ಪೂಜಾರಿ ತನ್ನ ವೃತ್ತಿ ಕಾಯಕದ ಜತೆ ಅವಿಭಜಿತ ಜಿಲ್ಲೆಗಳ ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಇತ್ತೀಚಿಗೆ ಅಗಲಿದ ಕಾಯಕ ಯೋಗಿ ಗಾಡಿ ಕೂಸ ಪೂಜಾರಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ತನ್ನ ಜೀವತ ಅವಧಿಯಲ್ಲಿ ಗಾಡಿ ಕೂಸ ಪೂಜಾರಿಯವರ ಸೇವೆ ಅನನ್ಯ ,ಎತ್ತಿನ ಗಾಡಿಯಲ್ಲಿ ಪ್ರಸಿದ್ಧ ಮಾತ್ರವಲ್ಲದೆ ಎರಡು ಜಿಲ್ಲೆಗಳ ಕಂಬಳ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯ ಪುಟ ತೆರೆದಿದ್ದಾರೆ ಆ ಕಾಲಘಟ್ಟದಲ್ಲಿ ಎತ್ತಿನಗಾಡಿಯ ಮೂಲಕ ಜನಸಾಮಾನ್ಯರ ಹೃದಯದಲ್ಲಿ ಗಾಡಿ ಕೂಸಣ್ಣ ಎಂಬ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಮ್ಮ ಮತ್ತು ಅವರ ಸ್ನೇಹದ ದಿನಗಳನ್ನು ನೆನಪಿಸಿದರು. ಈ ಸಂದರ್ಭದಲ್ಲಿ ಚಿತ್ರಪಾಡಿಯ ಕಾರ್ತಟ್ಟು ಅಘೋರೇಶ್ಚರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್ ನುಡಿನಮನ ಸಲ್ಲಿಸಿದರು. ಈ ವೇಳೆ ಹಲವು ಗಣ್ಯರು ಉಪಸ್ಥಿತರಿದ್ದು ಕೂಸ ಪೂಜಾರಿ ಭಾವಚಿತ್ರಕ್ಕೆ ಪುಷ್ಭನಮನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ “ಹ್ಯಾಕಥಾನ್” ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರಾಯೋಗಿಕ ಕಲಿಕೆಗೆ ನಮ್ಮ ಸಂಸ್ಥೆಯಲ್ಲಿ ಮನ್ನಣೆಯನ್ನು ನೀಡಲಾಗುತ್ತಿದೆ. ಹ್ಯಾಕಥಾನ್ ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡುವ ಮಹತ್ವದ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯಗಳನ್ನು ವರ್ಧಿಸಲು ಇಂತಹ ಕಾರ್ಯಕ್ರಮ ಅತ್ಯಂತ ಉಪಯುಕ್ತ ಎಂದರು. ಹ್ಯಾಕಥಾನ್ನಲ್ಲಿ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಭಜಿಸಿ, ತಂತ್ರಜ್ಞಾನವನ್ನು ಬಳಸಿಕೊಂಡು ನೈಜ ಜೀವನದ ವಿವಿಧ ತಂತ್ರಜ್ಞಾನ ಸಂಬAಧಿತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಅವಕಾಶ ಕಲ್ಪಿಸಲಾಯಿತು. 24 ಗಂಟೆಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಅವರು ಹ್ಯಾಕಥಾನ್ ಕಾರ್ಯಕ್ರಮದ ಉದ್ದೇಶಗಳು ಮತ್ತು ಅದರ ಪ್ರಾಮುಖ್ಯತೆ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಖಾಸಗಿ ಕೃಷಿ ಕಾಲೇಜುಗಳ ಸಂಯೋಜನೆಗಾಗಿ ಆಸಕ್ತಿ ಹೊಂದಿರುವ ಹಾಗೂ ರಾಜ್ಯದ ಸೊಸೈಟಿ ನೊಂದಣಿ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಮಂಡಳಿಗಳು, ಸೊಸೈಟಿಗಳು ಹಾಗೂ ಟ್ರಸ್ಟ್ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಸಂಸ್ಥೆಗಳು ಬಿ.ಎಸ್ಸಿ ಕೃಷಿ, ಬಿ.ಟೆಕ್ ಕೃಷಿ ಇಂಜಿನಿಯರಿಂಗ್, ಬಿ.ಟೆಕ್ ಕೃಷಿ ಬಯೋಟೆಕ್ನಾಲಜಿ, ಬಿ.ಟೆಕ್ ಫುಡ್ ಟೆಕ್ನಾಲಜಿ, ಬಿ.ಎಸ್ಸಿ ಅರಣ್ಯ, ಬಿ.ಎಸ್ಸಿ ಕಮ್ಯೂನಿಟಿ ವಿಜ್ಞಾನ, ಬಿ.ಎಸ್ಸಿ ಫುಡ್ ನ್ಯೂಟ್ರೀಶನ್ ಮತ್ತು ಡಯಟ್ರಿಕ್ಸ್, ಬಿ.ಎಸ್ಸಿ ತೋಟಗಾರಿಕೆ ಮತ್ತು ಬಿ.ಎಸ್ಸಿ ರೇಷ್ಮೆ ಕೃಷಿ ಪದವಿ ಪ್ರಾರಂಭಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಫಿಲಿಯೇಶನ್ಗಾಗಿ ಕನಿಷ್ಠ ಮಾನದಂಡಗಳನ್ನು www.uahs.edu.in ಜಾಲತಾಣದಲ್ಲಿ ಪ್ರಕಟಿಸಿದ್ದು, ಅಧಿಸೂಚಿಸಿದ ಮಾನದಂಡಗಳಂತೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ…
