Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ “ರಾಷ್ಟ್ರೀಯ ಯುವ ದಿನ”ದಂದು ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ ಮತ್ತು ಮೂಲ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ NSS-YRC ಘಟಕವು ಪ್ರೇರಣಾದಾಯಕ ಕಾರ್ಯಕ್ರಮ ಆಯೋಜಿಸಲಾಗಿತ್ತು. “ಯುಥ್ ಫಾರ್ ಎ ಸಸ್ಟೆನೇಬಲ್ ಪ್ಯೂಚರ್” ಶೀರ್ಷಿಕೆಯ ಈ ಅಧಿವೇಶನವನ್ನು ಪ್ರಮುಖ ತಂತ್ರಜ್ಞಾನ ಉದ್ಯಮಿ, ಫೋರ್ತ್‌ಫೋಕಸ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಮಾತನಾಡಿ “ಉದ್ಯಮಶೀಲತೆ ಕೇವಲ ಯಶಸ್ಸಿನ ಬಗ್ಗೆ ಅಲ್ಲ. ವೈಫಲ್ಯಗಳನ್ನು ಸ್ವೀಕರಿಸುವುದು, ಅವುಗಳಿಂದ ಕಲಿಯುವುದು ಮತ್ತು ಮುಂದುವರಿಯುವುದರ ಬಗ್ಗೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಸಚಿನ್ ಪ್ರಭು ಕೆ ಮತ್ತು ರಘುನಾಥ್ ಅವರು ಅಲಂಕರಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಗೆ ಹೊಂದಿಕೊಂಡ ಅಪ್ಪಟ ಗ್ರಾಮೀಣ ಸೊಗಡಿನ ಹಿರಿಮೆ ಇರುವುದು ಉಪ್ಪುಂದ ಗ್ರಾಮದ್ದಾಗಿದೆ. ಕೃಷಿ ಹಾಗೂ ಮೀನುಗಾರಿಕೆ ಇಲ್ಲಿನವರ ಮುಖ್ಯ ಕುಲಕಸುಬು. ಅಕ್ಕಪಕ್ಕದ ಗ್ರಾಮಗಳಿಗಿಂತ ಉತ್ತಮ ಮಟ್ಟದಲ್ಲಿ ಅಭಿವೃದ್ದಿಯಾಗಿದೆ. ಇಲ್ಲಿನ ಗ್ರಾಮ ಪಂಚಾಯತ್, ವಿವಿಧ ಇಲಾಖೆಗಳ ಯೋಜನೆ ಅನುಷ್ಠಾನದ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಬಹಳ ಹಿಂದಿನಿಂದಲೂ ಗುರುತಿಸಿಕೊಂಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಉಪ್ಪುಂದ ಗ್ರಾಮ ಪಂಚಾಯತ್‌ನ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮದ ಸ್ಥಳಿಯಾಡಳಿತ ಸದಸ್ಯರ ದೂರದೃಷ್ಠಿತ್ವದಿಂದ ಕೂಡಿದ ಚಿಂತನೆಗಳು, ಇಚ್ಛಾಶಕ್ತಿ ಹಾಗೂ ಗ್ರಾಮದ ಮತ್ತು ಗ್ರಾಮಸ್ಥರ ಕುಂದು ಕೊರತೆಗಳನ್ನು ವ್ಯವಸ್ಥಿತವಾಗಿ ಶೀಘ್ರವಾಗಿ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡಿದ್ದಲ್ಲಿ ಅದು ನಿರೀಕ್ಷಿತಮಟ್ಟ ತಲುಪಲು ಸಾಧ್ಯ. ಗ್ರಾಮಾಭಿವೃದ್ಧಿಗೆ ಸದಸ್ಯರ ಉತ್ತಮ ಯೋಚನೆ ಹಾಗೂ ಯೋಜನೆಗಳೂ ಕೂಡ ಅತ್ಯಗತ್ಯ ಎಂದರು. ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ವಿಧಾನ ಪರಿಷತ್ ಸದಸ್ಯ ಕಿಶೋರಕುಮಾರ್ ಪುತ್ತೂರು,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿಯ ಮುಂದಾಳತ್ವದಲ್ಲಿ ದಂಪತಿಗಳ ಜಯಂತೋತ್ಸವ ಆಚರಣೆ ಇತ್ತೀಚಿಗೆ ಸಂಭ್ರಮದಿಂದ ನಡೆಯಿತು. ಉಡುಪಿ ಧರ್ಮ ಪ್ರಾಂತ್ಯದ ದಿವ್ಯ ಜ್ಯೋತಿ ನಿರ್ದೇಶಕ ಧರ್ಮ ಗುರು ಸೀರಿಲ್ ಲೋಬೊ, ಗಂಗೊಳ್ಳಿ ಚರ್ಚಿನ ಧರ್ಮ ಗುರು ಥಾಮಸ್ ರೋಶನ್ ಡಿಸೋಜ ನೇತೃತ್ವದಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. ಬಳಿಕ ಮಾತನಾಡಿದ ಸೀರಿಲ್ ಲೋಬೊ, ಸುಖದಲ್ಲಿ ದುಃಖದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಸಹಕಾರವನ್ನು ನೀಡಿ ನಿಮ್ಮ ದಾಂಪತ್ಯ ಜೀವನವನ್ನು ನಿರ್ವಹಿಸಬೇಕೆಂದು ಸಂದೇಶ ನೀಡಿದರು. ಥಾಮಸ್ ರೋಶನ್ ಡಿಸೋಜ ದಂಪತಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ದಂಪತಿಗಳು ವಿವಾಹದ ಪ್ರತಿಜ್ಞೆಯನ್ನು ಪುನಃ ಮಾಡಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಬ್ಯಾಂಡ್ ಮತ್ತು ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಗಳನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಕರೆದಯ್ಯಲಾಯಿತು. ಸಭಾಂಗಣದಲ್ಲಿ ದಂಪತಿಗಳಿಗೆ ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ನೆರವೇರಿಸಲಾಯಿತು. ಕೊಂಕಣಿ ಕ್ರೈಸ್ತ ಸಂಪ್ರದಾಯದ ಹಾಡುಗಳನ್ನು (ವೋವಿಯೋ ವೇರ್ಸ್)…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ನಿವೃತ್ತಿ ವೃತ್ತಿ ಬದುಕಿಗೆ ಹೊರತು ನಮ್ಮ ಸಾಮಾಜಿಕ ಜೀವನಕ್ಕಲ್ಲ. ವಯಸ್ಸು ಮಾನದಂಡವಾಗಿಸದೇ ಪ್ರತಿಯೊಬ್ಬರಿಗೂ ತಮ್ಮಲ್ಲಿರುವ ಸೂಪ್ತ ಪ್ರತಿಭೆ ಹೊರಹೊಮ್ಮವ ಸಕಾಲವಿದು. ನಿವೃತಿಯ ನಂತರದ ಸ್ವತಂತ್ರ ಬದುಕಿನಲ್ಲಿ ನಮ್ಮ ಪ್ರವೃತ್ತಿಯ ಮೂಲಕ ಇನ್ನಷ್ಟು ಪ್ರಕಾಶಮಾನರಾಗಿ ಜೀವನೋತ್ಸಾಹವನ್ನು ವೃದ್ಧಿಸಿಕೊಳ್ಳಬೇಕು ಎಂದು ಕುಂದಾಪುರ ಹಿರಿಯ ನ್ಯಾಯವಾದಿ ಎಎಸ್ಎನ್ ಹೆಬ್ಬಾರ್ ಅವರು ಹೇಳಿದರು. ಉಪ್ಪುಂದ ಮಾತೃಶ್ರೀ ಸಭಾಂಗಣದಲ್ಲಿ ಬೈಂದೂರು ಹಿರಿಯ ನಾಗರೀಕರ ವೇದಿಕೆಯ ಈ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸರ್ಕಾರಿ, ಅರೆ ಸರ್ಕಾರಿ ಮತ್ತು ಸಂಘಟಿತ ವಲಯದ ಉದ್ಯೋಗಸ್ಥರಿಗೆ ನಿವೃತ್ತಿಯ ನಂತರದ ಬದುಕು ಹೊಸಲೋಕದ ಪರಿಚಯ ಮೂಡಿಸುತ್ತದೆ. ಕೆಲವರಿಗೆ ಅದು ಮಧುರವಾದರೆ ಇನ್ನು ಕೆಲವರಿಗೆ ಯಮಯಾತನೆಯಾಗಬಹುದು. ಇದೆಲ್ಲವೂ ಅವರವರು ಜೀವನವನ್ನು ಕಾಣುವ ಮತ್ತು ಸ್ವೀಕರಿಸುವ ವೈಖರಿಯಿಂದ ನಿರ್ಧಾರವಾಗುತ್ತದೆ ಎಂದರು. ನಿರ್ಗಮನ ಅಧ್ಯಕ್ಷ ಕೆ. ಪುಂಡಲೀಕ ನಾಯಕ್ ನೂತನ ಅಧ್ಯಕ್ಷ ಗಿರೀಶ ಶ್ಯಾನುಭಾಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿವೃತ್ತ ಉಪನ್ಯಾಕ ಎಸ್. ಜನಾರ್ದನ ಮರವಂತೆ, ವೇದಿಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ನವದೆಹಲಿಯಲ್ಲಿ ನಡೆಯಲಿರುವ 2025ರ ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರಕ್ಕೆ (ಆರ್‌ಡಿಸಿ) ಆಳ್ವಾಸ್ ಶಿಕ್ಷಣ ಸಂಸ್ಥೆಯ ಎನ್‌ಸಿಸಿ ಘಟಕದ ಐದು ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ. ವಾಯುದಳ ವಿಭಾಗದಲ್ಲಿ ಎನ್‌ಸಿಸಿ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲಿರುವ ಹಾರ್ದಿಕ್ ಶೆಟ್ಟಿ, ನಿರೂಪ್ ಎಸ್., ಜೇವಿಟಾ ಪರ್ಲ್ ಹಾಗೂ ಪ್ರಶಸ್ತಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಪ್ರಶಸ್ತಿ ಈ ಬಾರಿಯ ಪ್ರಧಾನಮಂತ್ರಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾಳೆ. ನೌಕಾದಳ ವಿಭಾಗದಲ್ಲಿ 5ನೇ ಕರ್ನಾಟಕ ನೌಕಾ ಘಟಕವನ್ನು ಪ್ರತಿನಿಧಿಸಲಿರುವ ಅಜ್‌ರಾಜ್ ಆಯ್ಕೆಯಾಗಿದ್ದಾರೆ. ಆಳ್ವಾಸ್‌ನಿಂದ ಒಟ್ಟು 49 ಕೆಡೆಟ್‌ಗಳು ಭಾಗಿಇಲ್ಲಿಯವರೆಗೆ ಸಂಸ್ಥೆಯಿಂದ 44 ಕೆಡೆಟ್‌ಗಳು ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಬಾರಿಯ 5 ಜನರು ಸೇರಿದಂತೆ ಒಟ್ಟು 49 ವಿದ್ಯಾರ್ಥಿಗಳು ಆಳ್ವಾಸ್ ಒಂದೇ ಸಂಸ್ಥೆಯಿಂದ ಪಾಲ್ಗೊಳ್ಳುತ್ತಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ.  ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಆಳ್ವಾಸ್ ಸಂಸ್ಥೆಯಲ್ಲಿ ಇಲ್ಲಿಯವರೆಗೆ 57ಕ್ಕೂ ಅಧಿಕ ಸೇನಾ ಶಿಬಿರಗಳು ನಡೆದಿದ್ದು, ಐದು ಸೇನಾ ನೇಮಕಾತಿ ‍ ರ್ಯಾಲಿಗಳು, ಅಗ್ನಿಪಥ ನೇಮಕಾತಿ ಪರೀಕ್ಷೆ ಸೇರಿದಂತೆ ಹತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಉಡುಪಿ: ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಸಹ ಬರುತ್ತಿವೆ. ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ನಗರ ಹಾಗೂ ಗ್ರಾಮೀಣ ಮಟ್ಟದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಹಾಗೂ ಗ್ರಾಮ ಪಂಚಾಯಿತಿ ಗಳು ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕಾಗಿ ಬಜೆಟ್ ನಲ್ಲಿ ಅನುದಾನ ಮಿಸಲಿರಿಸಿ, ಅವುಗಳ ಸಂತಾನ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು. ಸ್ಥಳೀಯ ಸಂಸ್ಥೆಗಳು ಪ್ರತೀ ಮೂರು ತಿಂಗಳಿಗೊಮ್ಮೆ ಬೀದಿ ನಾಯಿಗಳ ಗಣತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್‌ಟಿಟ್ಯೂಟ್ (ಈಅI) ಮೈಸೂರು ಹಾಗೂ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (Iಊಒ) ಬೆಂಗಳೂರು ಇವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ರಾಜ್ಯಾದ್ಯಂತ 20 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ಫುಡ್ ಮತ್ತು ಬಿವರೇಜ್ ಸರ್ವೀಸ್ ಸ್ಟೀವರ್ಡ್ ತರಬೇತಿ, ರೂಮ್ ಅಟೆಂಡೆಂಟ್ ತರಬೇತಿ, ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ ಹಾಗೂ ಮಲ್ಟಿ ಕ್ಯೂಸೈನ್ ಕುಕ್ ತರಬೇತಿ ಕಾರ್ಯಕ್ರಮಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿರುತ್ತದೆ. ಮುಂದುವರೆದು ಸದರ ತರಬೇತಿ ಕಾರ್ಯಕ್ರಮಗಳಲ್ಲಿ ಮಲ್ಟಿ ಕ್ಯೂಸೈನ್ ಕುಕ್ ತರಬೇತಿಗೆ ಅಗತ್ಯಕ್ಕಿಂತ ಕಡಿಮೆ ಅರ್ಜಿಗಳು ಬಂದಿರುವುದರಿಂದ ಹಾಗೂ ಮಲ್ಟಿ ಕ್ಯೂಸೈನ್ ಕುಕ್ ತರಬೇತಿ ಪಡೆದವರಿಗೆ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಹಾಗೂ ಸ್ವ-ಉದ್ಯೋಗದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇರುವ ಹಿನ್ನೆಲೆ, ಜಿಲ್ಲೆಯಲ್ಲಿ ಮಲ್ಟಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇನ್ಸಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರಿಸ್‌ ಇನ್ ಇಂಡಿಯಾದವರು ನಡೆಸಿದ ಸಿಎಸ್ಇಇಟಿ (ಕಂಪೆನಿ ಸಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕ್ರಮವಾಗಿ ಧೀರಜ್ ಶೇಟ್, ಸುಜನ್ ಎಸ್.ಪಿ, ಅರ್ಚನ್ ಕುಮಾರ್, ಮೈತ್ರಿ, ಅಕ್ಷೋಭ್ಯ, ವಿಸ್ಮಿತಾ, ಸ್ಪಂದನ್, ಶಾಶ್ವತ್ ಶೆಟ್ಟಿ, ಕೌಶಿಕ್ ಶೆಟ್ಟಿ ಮತ್ತು ಭುವನ್. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: 12 ನೇ ಶತಮಾನವು ವಚನ ಸಾಹಿತ್ಯದಲ್ಲಿ ಬಹು ಮುಖ್ಯವಾದ ಕಾಲಘಟ್ಟವಾಗಿದ್ದು, ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಅಂದು ನಗರದ ಅಜ್ಜರಕಾಡುವಿನ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ, ಶ್ರೀ ಮಹಾಯೋಗಿ ವೇಮನ ಮತ್ತು ಶ್ರೀಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ವಚನಕಾರರು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದರೊಂದಿಗೆ ಸಮಾಜದಲ್ಲಿನ ಮೌಢ್ಯ, ಮೇಲು-ಕೀಳು, ಶ್ರೀಮಂತ-ಬಡವ, ಕಂದಾಚಾರದ ವಿರುದ್ಧ ಹೋರಾಡಿದ್ದಾರೆ. ಇಂತಹ ವಚನಕಾರರ ಜಯಂತಿಗಳನ್ನು ಆಚರಿಸುವ ಮೂಲಕ ಅವರುಗಳ ಚಿಂತನೆಗಳನ್ನು, ತತ್ವ ಆದರ್ಶಗಳನ್ನು ಜೀವನದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅವಿಭಕ್ತ ಕುಟುಂಬ ವ್ಯವಸ್ಥೆಯು ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ. ಈ ವ್ಯವಸ್ಥೆಯಲ್ಲಿ ಕುಟುಂಬದ ಸದಸ್ಯರಲ್ಲಿ ನಾವು ನಮ್ಮವರು ಎಂಬ ಭಾವನೆ ಮೂಡಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಸಹಕಾರ ಮನೋಭಾವದಿಂದ ಜೀವನ ಸಾಗಿಸುತ್ತಾರೆ. ಇದು ಉತ್ತಮ ಸಮಾಜ ಮುನ್ನಡೆಗೆ ಸಹಾಯವಾಗುತ್ತದೆ. ಇಲ್ಲಿ ಯಾರಿಗಾದರೂ ಸಮಸ್ಯೆ ಎದುರಾದರೇ ಆಡಳಿತ ಮಂಡಳಿ ಮತ್ತು ಎಲ್ಲರೂ ಜೊತೆಗೆ ನಿಂತು ಸಹಕರಿಸುತ್ತಾರೆ ಎಂದು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ರಿ. ಇದರ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಹೇಳಿದರು.  ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ತ್ರಿಷಿಕಾಳ ಹೃದಯ ಶಸ್ತ್ರ ಚಿಕಿತ್ಸೆಗೆ ಶಾಲಾ ಆಡಳಿತ ಮಂಡಳಿ, ಪೋಷಕರು, ಶಿಕ್ಷಕ – ಶಿಕ್ಷಕೇತರ ವೃಂದದವರು ನೀಡಿದ  ದೇಣಿಗೆ ಸಹಾಯಧನ ಒಟ್ಟು 3,01,465 ರೂಪಾಯಿಗಳನ್ನು ಬಾಲಕಿಯ ತಾಯಿಗೆ ಹಸ್ತಾಂತರಿಸಿ ಮಾತನಾಡಿದರು. ಶಾಲೆಯೂ ಕೂಡ ಒಂದು ತುಂಬು ಕುಟುಂಬಕ್ಕೆ ಉದಾಹರಣೆಯಾಗಿದ್ದು, ಇಲ್ಲಿ ಮಕ್ಕಳು, ಪೋಷಕರು, …

Read More