ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.12: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ ಸಾಹೇಬ್ ಹೈಕಾಡಿ (71) ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಆವರ್ಸೆ ಗ್ರಾಮ ಪಂಚಾಯತ್ ಮಾಜಿ ಸದ್ಯಸರಾಗಿ, ಉಡುಪಿ ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರಾಗಿ ಹೈಕಾಡಿ ಮಸೀದಿಯ ಮಾಜಿ ಅಧ್ಯಕ್ಷರುರಾಗಿ, ಹೈಕಾಡಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಇಬ್ರಾಹಿಂ ಸಾಹೇಬ್ ಅವರು ಸೇವೆ ಸಲ್ಲಿಸಿದ್ದರು. ಮೃತರು ಐದು ಗಂಡು, ಮೂರು ಹೆಣ್ಣು ಮಕ್ಕಳುನ್ನು ಅಗಲಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಬೈಂದೂರಿನ ಪ್ರಸಿದ್ಧ ಮೊಬೈಲ್ ಮಾರಾಟ ಸಂಸ್ಥೆ ‘ಪ್ರೀತಿ ಮೊಬೈಲ್ಸ್’ನಲ್ಲಿ (Preethi Mobiles Byndoor) ಮೊಬೈಲ್ ಪೋನ್ ಖರೀದಿಯ ಮೇಲೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಆಯ್ದ ಬ್ಯಾಂಡಿನ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಇನ್ನೊಂದು ಮೊಬೈಲ್ ಫೋನ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಪ್ರತೀ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬ್ಲೂಟೂತ್ ನೆಕ್ ಬ್ಯಾಂಡ್, ಪವರ್ ಬ್ಯಾಂಕ್, ಸ್ಮಾರ್ಟ್ ವಾಚ್ ಉಚಿತವಾಗಿ ಪಡೆಯಿರಿ. ಜೊತೆಗೆ FIRE BOLT SMART WATCH, MI SMART SPEAKER ಗಳ ಮೇಲೆ ಭರ್ಜರಿ ರಿಯಾಯಿತಿ. ಸ್ಮಾರ್ಟ್ ಫೋನ್’ಗಳನ್ನು ಸುಲಭ ಕಂತುಗಳಲ್ಲಿಯೂ ಖರೀದಿಸಬಹುದಾಗಿದೆ. ಈ ಆಫರ್ ಆಗಸ್ಟ್ 11 ರಿಂದ ಸಪ್ಟೆಂಬರ್ 30 ವರೆಗೆ ಮಾತ್ರ ಈ ಎಲ್ಲಾ ಆಫರ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಪ್ರೀತಿ ಮೊಬೈಲ್ಸ್ ಬೈಂದೂರುಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರುಮೊಬೈಲ್ – 8861087889
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾವುಂದದ ಹಿಂದೂ ಅಭ್ಯುದಯ ಸಂಘದ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಸಂಧ್ಯಾ ಕಾರ್ಯಕ್ರಮ ನಡೆಯಿತು. ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಪ್ರಾರಂಭದಲ್ಲಿ ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ಮಕ್ಕಳು ಚಂಡಿಕಾ ಪಾರಾಯಣದಲ್ಲಿ ಬರುವ ದೇವಿ ಸ್ತುತಿಗಳನ್ನು, ಸ್ಫುಟವಾಗಿ ಪಠಿಸಿದರು. ನಂತರ ಕಮಲಶಿಲೆಯ ಪೂರ್ಣಿಮಾ ಎನ್. ಭಟ್ ಅವರು ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಅವುಗಳ ಮಹತ್ವ ದ ಬಗ್ಗೆ ಸಂಪ್ರದಾಯಿಕ ಹಾಡುಗಳನ್ನು ಹೇಳುತ್ತಾ ಸವಿವರವಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ವಿದ್ಯಾರ್ಥಿಗಳಿಂದ ಸುಮಧುರವಾದ ಭಕ್ತಿ ರಸಮಂಜರಿ ಕಾರ್ಯಕ್ರಮ, ಆಗಮಿಸಿದ ಎಲ್ಲರನ್ನು ಮಂತ್ರ ಮುಗ್ಧಗೊಳಿಸಿತು, ರೋಮಾಂಚನಗೊಳಿಸಿತು. ಕುಟುಂಬ ಸಮೇತ ಭಾಗವಹಿಸಿದ್ದ ಸಾರ್ವಜನಿಕರಲ್ಲಿ ಮೂರು ಕುಟುಂಬಗಳನ್ನು, ಅದೃಷ್ಟ ಚೀಟಿ ಎತ್ತುವುದರ ಮೂಲಕ ಆಯ್ಕೆಮಾಡಿ, ಅಭಿನಂದಿಸಲಾಯಿತು. ವಾಸುದೇವ ಗಾಣಿಗ, ಸುಬ್ಬಯ್ಯ ದೇವಾಡಿಗ ಮತ್ತು ಪ್ರಶಾಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಜೆಪಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕುಂದಾಪುರ ಪೊಲೀಸ್ ಉಪ ನಿರೀಕ್ಷಕ ಸದಾಶಿವ ಗವರೋಜಿ ಹಾಗೂ ಠಾಣಾ ಸಿಬ್ಬಂದಿ ವರ್ಗದವರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ, ಜಯಲಕ್ಷ್ಮೀ ಗಾಣಿಗ, ಉಪಾಧ್ಯಕ್ಷೆ ಶ್ವೇತಾ, ನೇತ್ರಾವತಿ ಮಡಿವಾಳ, ಕಾರ್ಯದರ್ಶಿ ರೋಹಿಣಿ ಪೈ, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಆಶಾಲತಾ ನಾಯಕ್, ಪುರಸಭೆ ಅಧ್ಯಕ್ಷರಾದ ವೀಣಾ ಭಾಸ್ಕರ್, ಸದಸ್ಯರಾದ ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಪುಷ್ಪಾ ಶೇಟ್, ದಿವಾಕರ್ ಕಡ್ಗಿ, ಹಾಲಾಡಿ ಮಹಾಶಕ್ತಿ ಕೇಂದ್ರ ಮ.ಮೋ ಅಧ್ಯಕ್ಷೆ ದೀಪಿಕಾ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಆ.10: ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಸರಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ. ರೈತರು ಹಾಗೂ ಫಲಾನುಭವಿಗಳು ಸಕಾಲದಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಬೈಂದೂರು ಕೃಷಿ ಅಧಿಕಾರಿ ಗಾಯತ್ರಿ ಹೇಳಿದರು. ಅವರು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಇದರ ವತಿಯಿಂದ ಕೃಷಿ ಇಲಾಖೆ ಸಹಯೋಗದೊಂದಿಗೆ ಸಂಘದ ಹೇರೂರು ಶಾಖೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರೈತ ಸಂಪರ್ಕ ಕೇಂದ್ರದಲ್ಲಿ ಸಸ್ಯ ಸಂರಕ್ಷಣಾ ಯೋಜನೆಯಲ್ಲಿ ಕೀಟನಾಶಕಗಳು, ಮಣ್ಣಿನ ಸಂರಕ್ಷಣೆಗೆ ಬೇಕಾದ ಸುಣ್ಣ, ವಿವಿಧ ತಳಿತ ಭತ್ತದ ಬೀಜಗಳು, ರಸಗೊಬ್ಬರ ಪೂರೈಕೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ಕನಿಷ್ಠ ಒಂದು ಎಕರೆ ಆರ್ಟಿಸಿ ಹೊಂದಿರುವವರು ಇದರ ಪ್ರಯೋಜನ ಪಡೆಯಬಹುದು. ರೈತನ ಆಕಸ್ಮಿಕ ಸಾವಿಗೆ 2 ಲಕ್ಷದ ತನಕ ಪರಿಹಾರ ನೀಡುವ ಅವಕಾಶವಿದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಸಿಎಸ್ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನದ ಹಬ್ಬವನ್ನು ಆಚರಿಸಲಾಯಿತು. ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ, ಬೈಂದೂರು ಆರಕ್ಷಕ ಠಾಣೆಯ ಸಿಬ್ಬಂದಿಗಳಿಗೆ,ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ರಾಖಿ ಕಟ್ಟುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತಿ ಖಾರ್ವಿ ಹಾಗೂ ದೀಪ ಶೆಟ್ಟಿ, ಮಹಿಳಾ ಮೋರ್ಚಾ ಉಪಾಧ್ಯಕ್ಷರ ಸರಸ್ವತಿ ನಾಯರ್ ಹಾಗೂ ಕಚೇರಿ ನಿರ್ವಾಹಕಿ ನಾಗಶ್ರೀ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.10: ಕಾಲುಸಂಕ ದಾಟುತ್ತಿದ್ದ ವೇಳೆ ಆಯತಪ್ಪಿ ಹಳ್ಳಕ್ಕೆ ಬಿದ್ದು ನೀರುಪಾಲಾದ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ 48 ಗಂಟೆ ಬಳಿಕ ಪತ್ತೆಯಾಗಿದೆ. ಅಗಸ್ಟ್ 8ರ ಸೋಮವಾರ ಸಂಜೆ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಈ ಘಟನೆ ನಡೆದಿದ್ದು ನಿರಂತರವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಬುಧವಾರ ಸಂಜೆ ಆಕೆ ಮೃತದೇಹ ಕಾಲುಸಂಕದಿಂದ 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ ಮುಂದಾಳತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿ ನೂರಕ್ಕೂ ಅಧಿಕ ಮಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಾಚರಣೆಗೆ ಎರಡು ದೋಣಿಗಳನ್ನು ಬಳಿಸಿಕೊಳ್ಳಲಾಗುತ್ತಿದೆ. ಈ ವೇಳೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಮಾರ್ಗದರ್ಶನದಲ್ಲಿ ಬಾಲಕಿ ಮೃತದೇಹ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಬೈಂದೂರು ತಹಶಿಲ್ದಾರ್ ಕಿರಣ್ ಗೌರಯ್ಯ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಎನ್., ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಭೇಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.9: ಕಾಲುಸಂಕದಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕಿ ಸನ್ನಿಧಿ ಮನೆಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಲೆಗಾಡಿಗೆ ಹೊಂದಿಕೊಂಡಿರು ಪ್ರದೇಶಗಳಲ್ಲಿ ಹೆಚ್ಚು ಹಳ್ಳಗಳಿವೆ. ನಗೇಗಾ ಯೋಜನೆಯಡಿ ಕಾಲುಸೇತುವೆಗಳು ಅಗತ್ಯವಿರುವಲ್ಲಿ ನಿರ್ಮಿಸುವ ಕಾರ್ಯವನ್ನು ಮಾಡಲಾಗುವುದು ಎಂದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಕಾಲ್ತೋಡು ಭಾಗದಲ್ಲಿ ಅತ್ಯಧಿಕ ಕಾಲುಸಂಕವಿದ್ದು, ಹಂತ ಹಂತವಾಗಿ ಕಾಲು ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅವಘಡ ನಡೆದ ಕಾಲುಸಂಕಕ್ಕೂ ಅನುದಾನ ಮೀಸಲಿರಿಸಿದ್ದರೂ ಲೋಕೋಪಯೋಗಿ ಇಲಾಖೆಯ ವಿಳಂಬದಿಂದ ಕಾಮಗಾರಿ ನಡೆದಿರಲಿಲ್ಲ. ಅವರು ಸನ್ನಿಧಿ ಸಹೋದರಿಯನ್ನುಯನ್ನು ದತ್ತು ತೆಗೆದುಕೊಂಡು ಮುಂದಿನ ಶಿಕ್ಷಣದ ಹೊಣೆ ತಾನು ವಹಿಸಿಕೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಬೈಂದೂರು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು. ಮುಂದುವರಿದ ಶೋಧ ಕಾರ್ಯ:ಬಾಲಕಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳೆದ 75 ವರ್ಷಗಳಲ್ಲಿ ಬಡವರು, ದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಕಾಂಗ್ರೆಸ್ ಎಂದರೆ ಈ ದೇಶದ ಇತಿಹಾಸವೇ ಆಗಿದೆ. ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳೇ ಕೊರತೆ ಇದ್ದ, ಬಡವರೇ ಇದ್ದ ದೇಶದಲ್ಲಿ ಎಲ್ಲರ ಬದುಕು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂಬುದನ್ನು 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಟೀಕಿಸುವವರು ಅರಿತುಕೊಳ್ಳಬೇಕಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಬುಧವಾರ ಬೈಂದೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ, ಬಳಿಕ ಬೈಂದೂರು ಅಂಬೇಡ್ಕರ್ ಭವನದಲ್ಲಿ ಜರುಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅನೇಕ ಮಹಾನ್ ಪುರುಷರುಗಳು ಕುಟುಂಬವನ್ನು ತ್ಯಾಗ ಮಾಡಿ, ಬ್ರಿಟೀಷರ ಬಂದೂಕಿಗೆ ಎದೆಯನ್ನು ಕೊಟ್ಟು, ಜೈಲುವಾಸ ಮಾಡಿ ಹೋರಾಟ ಮಾಡಿ ದಕ್ಕಿಸಿಕೊಂಡದ್ದು ಭಾರತ ಸ್ವಾತಂತ್ರ್ಯ. ವಿವಿಧ ಧರ್ಮ, ಜಾತಿ, ಭಾಷೆಯನ್ನು ಒಳಗೊಂಡು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಟ್ಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾದ ನಾಡದೋಣಿಗಳಿರುವ ಕಳುಹಿತ್ಲು ಪ್ರದೇಶಕ್ಕೆ ಬುಧವಾರ ರಾಜ್ಯ ಮೀನುಗಾರಿಕೆ ಸಚಿವ ಎಸ್. ಅಂಗಾರ ಭೇಟಿ ನೀಡಿದರು. ಈ ವೇಳ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಶಿರೂರು ಭಾಗದಲ್ಲಿ ಅಧಿಕ ಮಳೆಯಾಗಿರುವುದರಿಂದ ಸಾಕಷ್ಟು ಅವಘಡ ಸಂಭವಿಸಿದೆ. ಕಳುಹಿತ್ಲು ಪ್ರದೇಶದಲ್ಲಿ ದೋಣಿ ಹಾಗೂ ಮೀನುಗಾರಿಕಾ ಸ್ವತ್ತುಗಳು ಸಮುದ್ರಪಾಲಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಸಮಗ್ರ ವರದಿ ಪಡೆದಿದ್ದೇನೆ. ಪ್ರಾಕೃತಿಕ ವಿಕೋಪ ಪರಿಹಾರದಿಂದ ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲದ ಕಾರಣ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಬೈಂದೂರು ತಾಲೂಕಿನ ಕೊಡೇರಿ ಬಂದರು ವಿಸ್ತರಣಾ ಕಾಮಗಾರಿ ಶೀಘ್ರ ಆರಂಭ, ಸೀಮೆಎಣ್ಣೆ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿ.ಪಂ ಸಿಇಓ ಪ್ರಸನ್ನ, ಕುಂದಾಪುರ ಸಹಾಯಕ ಕಮಿಷನರ್ ರಾಜು, ಮೀನುಗಾರಿಕ ಸಹಾಯಕ ನಿರ್ದೇಶಕ ಶಿವಕುಮಾರ್, ಮೀನುಗಾರಿಕ ಸಹಾಯಕ…
