ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಬಂಧುಗಳು ವಿಶ್ವದ ಸೇವೆಯ ಕೈಂಕರ್ಯವನ್ನು ನಡೆಸುತ್ತಿರುವುದು, ಸ್ವಂತ ದುಡಿಮೆಯ ಒಂದು ಭಾಗವನ್ನು ಸೇವೆಯ ರೂಪದಲ್ಲಿ ವಿನಿಯೋಗಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಮಾಜಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಬಿ ಹೇಳಿದರು. ಅವರು ಯಡ್ತರೆ ಬಂಟರ ಭವನದಲ್ಲಿ ಮಂಗಳವಾರ ಕ್ಲಬ್ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಪ್ರಸಾದ್ ಪ್ರಭು ಅವರಿಗೆ ರೋಟರ್ ಕಾಲರ್ ಹಸ್ತಾಂತರಿಸಿ ಮಾತನಾಡಿದರು. ರೋಟರಿ ಮೂಲಕ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳಲ್ಲಿ ಸದಸ್ಯರು ಸಕ್ರೀಯವಾಗಿ ಭಾಗವಹಿಸುವುದು ಮುಖ್ಯ. ಆ ನೆಲೆಯಲ್ಲಿ ರೋಟರಿ ಘನತೆಯನ್ನು ಪ್ರತಿ ಸದಸ್ಯರೂ ಅರಿತು ನಡೆಯಬೇಕು ಎಂದರು. ರೋಟರಿ ಝೋನ್ 1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ, ವಲಯ ಸೇನಾನಿ ಕೆ. ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬೈಂದೂರು ರೋಟರಿ ಕ್ಲಬ್ ನೂತನ ಅಧ್ಯಕ್ಷ ಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಐವರು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.೦5: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 06ರಂದು ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಜುಲೈ 5ರಂದು ರಜೆ ಘೋಷಿಸಲಾಗಿದ್ದು, ರೆಡ್ ಅಲರ್ಟ್ ಹಾಗೂ ಮಳೆ ಪ್ರಮಾಣ ಹೆಚ್ಚಿರುವುದರಿಂದ ಜುಲೈ 6ರಂದು ರಜೆ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಮತ್ತು ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಕುಂದಾಪುರದ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ವಿನಾರ್ಡ್ ಡಿ’ಕೋಸ್ಟಾ ( 232), ಸಚಿನ್ ಮೊಗವೀರ (216), ಸಾತ್ವಿಕ್ ಶೆಟ್ಟಿ (206) ಸಿಎ ಅಂತಿಮ ಪರೀಕ್ಷೆಯ ದ್ವಿತೀಯ ಗ್ರೂಪ್ ಅನ್ನು ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಯಾದ ಸೃಜನ್ ಎಸ್ 514 ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದುವುದರ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಜೆಸ್ವಿಟಾ(262), ಸುಪ್ರೀತಾ(248), ಭೂಮಿಕಾ ಹತ್ವಾರ್ (238), ರಾಮನಾಥ್ ಶೆಣೈ (234), ಅಖಿಲಾ ಹೆಬ್ಬಾರ್(233), ಅರ್ಪಣ್ ಪೂಜಾರಿ(225), ಸ್ನೇಹಾ ದೇವಾಡಿಗ (220), ನಿಶಾ ಆಚಾರ್ಯ(220), ಕೇದಾರ್ ಭಟ್ (217), ಸುದರ್ಶನ್ ಅಡಿಗ(213), ಅಕ್ಷಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಐ.ಸಿ.ಎ.ಐ ಇನ್ಸ್ಟಿಟ್ಯೂಟ್ ಓಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಉಡುಪಿಯ ತ್ರಿಶಾ ಕ್ಲಾಸಸ್ ವಿದ್ಯಾರ್ಥಿನಿ ವೃಂದಾ ವಿ. ಕಿಣಿ ಉತ್ತೀರ್ಣರಾಗಿದ್ದಾರೆ. ಸಿ.ಎ ಗಿರಿಧರ್ ಕಾಮತ್ ಅವರ ‘ಗಣೇಶ್ ಆಂಡ್ ಸುಧೀರ್ ಕೋ ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು 2021 ರಲ್ಲಿ ಮುಗಿಸಿದ್ದರು. ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ಹಾಗೂ ಫೈನಲ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ. ವೃಂದಾ ಕಿಣಿ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ ಹಾಗೂ ನಯನಾ ವಿ. ಕಿಣಿ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.05: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದೆ. ಈ ನಡುವೆ ಮಂಗಳವಾರ ತಡರಾತ್ರಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮಲ್ಯಾಡಿ ಎಂಬಲ್ಲಿ ನಡೆದಿದೆ. ಕೆದೂರು ಗ್ರಾಮದ ಮಲ್ಯಾಡಿ ನಿವಾಸಿ ದಿವಾಕರ್ ಶೆಟ್ಟಿ (53) ಮೃತ ದುರ್ದೈವಿ. ರಾತ್ರಿ ಕೆಲಸ ಮುಗಿಸಿ ತನ್ನ ಮ್ಯಾಸ್ಟ್ರೋ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಮನೆಯ ಸಮೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದಿದ್ದಾರೆ. ರಾತ್ರಿ ಸುಮಾರು 11:30ರ ವೇಳೆಗೆ ಘಟನೆ ನಡೆದಿದ್ದು, ಅಂದಾಜು 15 ಅಡಿ ಆಳದ ಕೆರೆಗೆ ತಡೆಗೋಡೆ ಇಲ್ಲದಿರುವುದು ಹಾಗೂ ಕೆರೆ ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದ ಕಾರಣ ದಿವಾಕರ ಶೆಟ್ಟಿ ಅವರು ಆಯತಪ್ಪಿ ತನ್ನ ದ್ವಿಚಕ್ರ ವಾಹನ ಮ್ಯಾಸ್ಟ್ರೋ ಸಹಿತ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಕೋಟ ಮಣೂರು ಸಮೀಪದ ಹೋಟೆಲೊಂದರಲ್ಲಿ ಕ್ಯಾಶಿಯರ್ ಆಗಿರುವ ದಿವಾಕರ್ ಅವರು ಸಮಯಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.೦4: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 05ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಳೆದೆರಡು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ರೆಡ್ ಹಾಗೂ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಮಳೆಯ ಪ್ರಮಾಣ ಹಾಗೂ ವಿಪತ್ತು ಪರಿಸ್ಥಿತಿಯನ್ನು ಆಧರಿಸಿ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ತಹಶಿಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳು ರಾತ್ರಿ 9:45ರ ಬಳಿಕ ರಜೆ ಘೋಷಿಸಿದ್ದು, ರಾತ್ರಿ 12:20ಕ್ಕೆ ಆದೇಶ ಪ್ರತಿ ಹೊರಡಿಸಿದ್ದರು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದ್ದು, ಪದವಿ ಕಾಲೇಜುಗಳಲ್ಲಿ ರಜೆ ಘೋಷಣೆ ಮಾಡಲಾಗಿಲ್ಲ. ಆದರೆ ಪದವಿ ಶಿಕ್ಷಣ ಸಂಸ್ಥೆಗಳು ಮಳೆ ವಿಪತ್ತು ಸಂದರ್ಭ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ವಿದ್ಯಾರ್ಥಿಗಳು ತೋಡು ಹಳ್ಳ ದಾಟಿ ಬರುವುದಿದ್ದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದೆರಡು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ರೆಡ್ ಹಾಗೂ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಮಳೆಯ ಪ್ರಮಾಣ ಹಾಗೂ ವಿಪತ್ತು ಪರಿಸ್ಥಿತಿಯನ್ನು ಆಧರಿಸಿ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ತಹಶಿಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ► ಉಡುಪಿ ಜಿಲ್ಲೆ: ಜುಲೈ 05ರಂದು ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ – https://kundapraa.com/?p=67482 . ಶಿಕ್ಷಣ ಸಂಸ್ಥೆಗಳು ಮಳೆ ವಿಪತ್ತು ಸಂದರ್ಭ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ವಿದ್ಯಾರ್ಥಿಗಳು ತೋಡು ಹಳ್ಳ ದಾಟಿ ಬರುವುದಿದ್ದರೆ ಮನೆಯಲ್ಲಿಯೇ ಉಳಿಯಲು ಸೂಚಿಸುವುದು, ಶಿಥಿಲ ಕಟ್ಟಡವನ್ನು ತರಗತಿ ನಡೆಸಲು ಬಳಸದಿರುವುದು, ನೆರೆ ಪೀಡಿತ ಪ್ರದೇಶದಲ್ಲಿ ಸ್ಥಳೀಯ ರಜೆ ಘೋಷಿಸುವುದು ಹಾಗೂ ರಜೆ ಅವಧಿಯನ್ನು ಶನಿವಾರ ಅಥವಾ ಭಾನುವಾರ ಹೆಚ್ಚುವರಿ ತರಗತಿ ನೀಡಿ ಸರಿದೂಗಿಸುವುದು ಮೊದಲಾದ ಸೂಚನೆಯನ್ನು ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ ಆದೇಶದಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜ.04: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನೂ 5 ದಿನಗಳ ಕಾಲ ನಿರಂತರ ಮಳೆಯಾಗಲಿದೆ. ಜು.5ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ► ಉಡುಪಿ ಜಿಲ್ಲೆ: ಜುಲೈ 05ರಂದು ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ – https://kundapraa.com/?p=67482 . ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದೆ. ಇಂದು ಭಾರಿ ಮಳೆ ಸುರಿಯಲಿದ್ದು, ಜು.5ರಿಂದ 9ರ ತನಕವೂ ಭಾರಿ ಗಾಳಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಜು.3ರಂದು ಜಿಲ್ಲೆಯಲ್ಲಿ ಒಟ್ಟು 70ಮಿ.ಮೀ ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ 64 ಮಿ.ಮೀ, ಬೈಂದೂರು ತಾಲೂಕಿನಲ್ಲಿ 91.6 ಮಿ.ಮೀ, ಬ್ರಹ್ಮಾವರದಲ್ಲಿ 61.8, ಹೆಬ್ರಿ 63ಮಿ.ಮೀ ಮಳೆಯಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ವಿದ್ಯಾರ್ಥಿನಿ ಪೂರ್ವಿಕಾ, ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ. ಭರತನಾಟ್ಯ ಕಲಾವಿದೆ ಪೂರ್ವಿಕಾ, ಖ್ಯಾತ ಭರತನಾಟ್ಯ ಕಲಾವಿದೆ, ವಿದೂಷಿ ಪ್ರವಿತ ಮತ್ತು ಅಶೋಕ್ ಕುಮಾರ್ ಅವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಕಾಲೇಜಿನ ಸಂಚಾಲಕರಾದ ಬಿ.ಎಮ್. ಸುಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಹಾಗೂ ಭೋಧಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಇದನ್ನೂ ಓದಿ: ► ಸಂಗೀತದಿಂದ ಸಂಸ್ಕಾರ ಪ್ರಾಪ್ತಿ – ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಡಾ. ಗೋಪಾಲಕೃಷ್ಣ ಭಟ್ – https://kundapraa.com/?p=67464 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಇದೆ. ಭಾರತೀಯ ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಅವರ ಹೃದಯ ಸಂಸ್ಕಾರಗೊಳ್ಳುತ್ತದೆ ಎಂದು ಕೊಲ್ಲೂರಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಭಟ್ ಹೇಳಿದರು. ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಭಾನುವಾರ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ. ಅವರು ಗೌರವ ಅತಿಥಿಯಾಗಿದ್ದರು. ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾದುವುಗಳು. ಅವುಗಳನ್ನು ವೇದಗಳೊಂದಿಗೆ ಸಮೀಕರಿಸಲಾಗುತ್ತದೆ. ಅವುಗಳ ಅಧ್ಯಯನಕ್ಕೆ ಶಿಸ್ತು, ಸಂಯಮ, ಸಮರ್ಪಣಾಭಾವ ಮತ್ತು ತನ್ಮಯತೆ ಅಗತ್ಯ. ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಅವರು ಹೇಳಿದರು. ನೇಹಾ ಹೊಳ್ಳ ಸ್ವಾಗತಿಸಿದರು. ಸಾತ್ಯಕಿ ವಂದಿಸಿದರು. ಸಭ್ಯಾ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಗೋವಿಂದ ಅಡಿಗ, ಕೋಟದ…
