Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2024 ರ ಸಾಲಿನ ನೀಟ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿ.ಯು ಕಾಲೇಜಿನ ಹಲವು ವಿದ್ಯಾರ್ಥಿಗಳು ದೇಶದಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಪೈಕಿ  ಈಶಾ ಶೆಟ್ಟಿ 671 ಅಂಕಗಳನ್ನು ಪಡೆದು ಕಾಲೇಜಿಗೆ ಅತ್ಯಧಿಕ ಅಂಕಗಳಿಸಿ ಕೀರ್ತಿಯನ್ನು ತಂದಿರುತ್ತಾಳೆ. ನಾಗರಾಜ ಉಪ್ಪಾರ 635, ವಿನುತಾ 612, ಅನನ್ಯ ಉಡುಪ 608, ಎಮ್ ಸೃಜನ್ 592, ಸನ್ನಿಧಿ ಕುಲಾಲ್ 590,  ವರುಣ್ ಕೆ.ಪಿ 585, ಶಶಾಂಕ್ ಶೆಟ್ಟಿ 585, ಆಶಿತಾ ಪಿ. 584, ನಿರ್ಮಿತಾ ಎನ್.ಡಿ 583, ರಿತಿಕಾ ಶೆಟ್ಟಿ 563, ರುಮೇಝ್ ಶೇಖ್ 560, ರಕ್ಷಾ ಆರ್. ಪೂಜಾರಿ 557, ನಿಶಾ 536, ಆಕಾಶ್ ಕೆ ಶೆಟ್ಟಿ 520, ಸಂಜನ್ ಕೆ 514 ಮತ್ತು ಸಮೃದ್ಧಿ 513 ಆಂಕಗಳನ್ನು ಪಡೆದು ಕುಂದಾಪುರ ತಾಲೂಕಿನಲ್ಲಿ ಎಕ್ಸಲೆಂಟ್  ಪಿ.ಯು ಕಾಲೇಜು ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ► 2024ರ ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅರಣ್ಯಭೂಮಿಯ ಒತ್ತುವರಿ, ಅನಿಯಂತ್ರಿತ ವಾಹನ ಬಳಕೆ, ಪ್ಲಾಸ್ಟಿಕ್ ಮತ್ತು ರಾಸಾಯನಿಕ ತ್ಯಾಜ್ಯ ವಸ್ತುಗಳಿಂದ ಪರಿಸರವನ್ನು ಮಲೀನಗೊಳಿಸುವ ಕಾರ್ಯ ನಿತ್ಯ ನಿರಾತಂಕ ಎಲ್ಲೆಡೆಯೂ ನಡೆಯುತ್ತಿದೆ. ಅಪರಿಮಿತ ತ್ಯಾಜ್ಯಗಳಿಂದ ನಮ್ಮ ಪರಿಸರ ಕೆಟ್ಟು ಹೋಗುತ್ತಿದ್ದರೂ ನಾವು ಮಾತ್ರ ಇನ್ನೂ ಅಪೇಕ್ಷಿತ ಮಟ್ಟದಲ್ಲಿ ಈ ಕುರಿತು ಜಾಗರೂಕರಾಗಿಲ್ಲ ಜತೆಗೆ ಸಮಸ್ಯೆಯ ಗಂಭೀರತೆಯನ್ನೂ ಅರಿತಿಲ್ಲ ಎಂದು ಯುವ ಉದ್ಯಮಿ ಅನುದೀಪ್ ಹೆಗ್ದೆ ಹೇಳಿದರು. ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪರಿಸರದ ಕುರಿತು ಉಪನ್ಯಾಸ ನೀಡಿದರು. ಕ್ಷೇತ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದ ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ತರುವುದೇ ಶಿಕ್ಷಣ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಶಿಕ್ಷಣದ ಉದ್ದೇಶ ಬಹುಮುಖ ವ್ಯಕ್ತಿತ್ವದ ವಿಕಸನ. ಉತ್ತಮ ಶಿಕ್ಷಣ ದೊರೆತಾಗ ಮಾತ್ರ ವ್ಯಕ್ತಿ ಉತ್ತಮ ನಾಗರಿಕನಾಗಿ ಬದುಕಬಲ್ಲ. ಸ್ವತಂತ್ರವಾಗಿ ಯೋಚಿಸಬಲ್ಲ. ದೇಶ,…

Read More

ಕುಂದಾಪುರ ಡಾಟ್ ಕಾಂ ಸುದ್ದಿ.ಕುಂದಾಪುರ: 2024ರ ಸಾಲಿನ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್‍ಗಳನ್ನು ಪಡೆದು ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈಶಾ ಶೆಟ್ಟಿ 224, ನಿಶಾ 245, ಚಿರಾಗ್ 296, ಅನನ್ಯ ಉಡುಪ 530, ನಾಗರಾಜ ಉಪ್ಪಾರ್ 572, ಅನಿರುದ್ದ್ ಎಸ್ ಹತ್ವಾರ್ 787, ವರುಣ್ ಕೆ ಪಿ 1536, ಸನ್ನಿಧಿ ಕುಲಾಲ್ 1692, ಆಕಾಶ್ ಕೆ ಶೆಟ್ಟಿ 1935, ಸನ್ಮಾನ್ 1998 , ತಸ್ಯಾ ಶೆಟ್ಟಿ 2382, ರಿತಿಕಾ ಶೆಟ್ಟಿ 2413, ಎಮ್ ಸ್ರಜನ್ 2939, ಆಶಿತಾ 3008, ಸಾಕ್ಷಿ ಗಣಪತಿ ಹೆಗ್ಡೆ 3597, ಧನುಷ್ 3702, ಶರಣ್ಯ 3829, ರುಮೇಝ್ ಶೇಖ್ 2953, ಪ್ರೀತಮ್ ಶೆಟ್ಟಿ 3976, ಸಂಜನ್ ಕೆ 4091, ನಿರ್ಮಿತಾ ಎನ್ ಡಿ 4181 ಮತ್ತು ವಿನುತಾ 4468 ರ್ಯಾಂಕ್‍ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಧ್ಯಾರ್ಥಿಗಳ ಈ ಸಾಧನೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ)   ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ 63,750 ರೂ. ಗಳಂತೆ ವಿಮಾ ಕಂತಿನ ದರವನ್ನು ಪ್ರತಿ ಹೆಕ್ಟೇರ್‌ಗೆ 1275 ರೂ. ಗಳಂತೆ ನಿಗಧಿಪಡಿಸಿದ್ದು, ನೋಂದಣಿಗಾಗಿ ಅಧಿಸೂಚಿಸಲಾಗಿರುತ್ತದೆ. ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆ ದಿನವಾಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಖಾತೆ ಪಾಸ್ ಪುಸ್ತಕ/ಬ್ಯಾಂಕ್ ಪಾಸ್ ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ್ ಸಂಖ್ಯೆಗಳನ್ನು ಒದಗಿಸಿ ವಾಣಿಜ್ಯ ಬ್ಯಾಂಕ್‌ಗಳು ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್ ಮತ್ತು ವಿಮಾ ಸಂಸ್ಥೆಗಳನ್ನು ಸಂಪರ್ಕಿಸಿ, ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಅಧಿಸೂಚಿತ ಘಟಕದಲ್ಲಿ ಬೆಳೆ ವಿಮಾ ಯೋಜನೆಯಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮೂಡುಬಿದರೆಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖಂಬದಕೋಣೆ ರೈತರ ಸೇವಾ  ಸಹಕಾರಿ ಸಂಘ ನಿ., ಉಪ್ಪುಂದ  ಇದರ ಅಧ್ಯಕ್ಷರಾದ  ಎಸ್ ಪ್ರಕಾಶ್ಚಂದ್ರ ಶೆಟ್ಟಿ ಅವರು ಶಿಬಿರಾರ್ಥಿಗಳಿಗೆ ಸಹಕಾರ ತತ್ವ ಹಾಗೂ ಸಹಕಾರಿ ಕ್ಷೇತ್ರದ ವ್ಯವಸ್ಥಾಪನೆ ಮತ್ತು ಸಿಬ್ಬಂದಿಗಳ ಪಾತ್ರದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ವಿಶ್ವೇಶ್ವರಯ್ಯ, ಉಪನ್ಯಾಸಕರಾದ ಬಿಂದು ನಾಯರ್, ಹರೀಶ ಎಂ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಘದ ಸಿಇಓ ವಿಷ್ಣು ಆರ್ ಪೈ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೇಚರ್ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ತಗ್ಗೆರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಾರಿಕಾ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳು ತಮ್ಮಿಂದ ಪರಿಸರಕ್ಕೆ ಕೊಡಬಹುದಾದ ಕೊಡುಗೆಗಳ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ಪ್ರಾಧ್ಯಾಪಕ ಸತೀಶ್ ಕಾಂಚನ್ ಉಪಸ್ಥಿತರಿದ್ದರು. ವಾಣಿಜ್ಯ ಪ್ರಾಧ್ಯಾಪಕರಾದ ಸುಧೀರ್ ಕುಮಾರ್ ಸ್ವಾಗತಿಸಿ, ಶ್ವೇತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸ್ನೇಹಾ ಪ್ರಾರ್ಥಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.7: ಕರ್ನಾಟಕ ರಾಜ್ಯ ಕ್ರೀಡಾ ಅಸೋಸಿಯೇಷನ್ ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ  ಕ್ರೀಡಾಂಗಣದಲ್ಲಿ ನಡೆಸಿದ ಕರ್ನಾಟಕ ರಾಜ್ಯ ಸೀನಿಯರ್ ಮತ್ತು 18 ವರ್ಷದೊಳಗಿನವರ ಕ್ರೀಡಾಕೂಟದಲ್ಲಿ ಸಿನನ್ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಪಡೆದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಹೆಮ್ಮಾಡಿ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 05 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಹೆಮ್ಮಾಡಿಯ ಜನತಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಜಿ. 553, ಆಕಾಶ್ ಹೆಬ್ಬಾರ್ 552, ಕ್ಷಮಾ ಪಡಿಯಾರ್ 496, ರಿಷಿಕಾ ಮೊಂಟೆರಿಯೊ 456, ಪವಿತ್ರಾ 444 ಅಂಕಗಳನ್ನು ಪಡೆದು ಅರ್ಹತೆ ಪಡೆದಿರುತ್ತಾರೆ. ಇದನ್ನೂ ಓದಿ ► ಕೆಸಿಇಟಿ-2024 ಫಲಿತಾಂಶ: ಹೆಮ್ಮಾಡಿ ಜನತಾ ಕಾಲೇಜು ವಿದಾರ್ಥಿಗಳಿಂದ ಉತ್ತಮ ಸಾಧನೆ – https://kundapraa.com/?p=72730 . ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಕಾಲೇಜು ಪ್ರಾರಂಭದ ದ್ವಿತೀಯ ವರ್ಷವೂ ಅತ್ತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು  ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದ ಸೋಲಿಸುವ ಮೂಲಕ ಮೇಲ್ಮನೆ ಪ್ರವೇಶಿಸಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಪ್ರಾರಂಭವಾದ ದಕ್ಷಿಣ ಶಿಕ್ಷಕ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀದರ ಚುನಾವಣೆಯ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆವರೆಗೂ ನಡೆಯಿತು. ಇದರಲ್ಲಿ ದಕ್ಷಿಣ ಹಾಗೂ ನೈರುತ್ಯ ಶಿಕ್ಷಕ ಕ್ಷೇತ್ರಗಳೆರಡರಲ್ಲೂ ಮೈತ್ರಿ ಅಭ್ಯರ್ಥಿಗಳೇ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಜಯಭೇರಿ ಬಾರಿಸಿದರು. ಇದೇ ವೇಳೆ ಬಿಜೆಪಿಯಿಂದ ಬಂಡಾಯ ಸ್ಪರ್ಧೆ ಮಾಡಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಮುಖಭಂಗವಾಗಿದೆ. ► ಇದನ್ನೂ ಓದಿ ಪರಿಷತ್‌ ಚುನಾವಣೆ: ಎಸ್.ಎಲ್.‌ ಬೋಜೇಗೌಡಗೆ ಗೆಲುವು, ಡಾ. ಧನಂಜಯ ಸರ್ಜಿಗೆ ಮುನ್ನಡೆ – https://kundapraa.com/?p=72780 . ಬಿಜೆಪಿ-ಜೆಡಿಎಸ್ ಮೈತ್ರಿ ಅಭರ್ಥಿ ಡಾ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನೈರುತ್ಯು ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದ್ದು, ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.‌ ಎಲ್.‌ ಭೋಜೇಗೌಡ 5,267 ಮತಗಳಿಂದ ಜಯ ಗಳಿಸಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಬಿಜೆಪಿ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಭೋಜೇಗೌಡ ಅವರು ಒಟ್ಟು 9,829 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಡಾ. ಕೆಕೆ ಮಂಜುನಾಥ್‌ ವಿರುದ್ಧ 5,267 ಮತಗಳ ಅಂತರದಿಂದ ಗೆದ್ದು 2ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ 4,562 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ನೈಋುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಜೆಡಿಎಸ್‌ನ ಎಸ್‌ಎಲ್‌ ಭೋಜೇಗೌಡ ಮೊದಲ ಪ್ರಾಶಸ್ತ್ಯದಲ್ಲೇ 5,267 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಸತತ 2ನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದರು. 2018ರ ಚುನಾವಣೆಯಲ್ಲಿ ಭೋಜೇಗೌಡರು ಅಂತಿಮ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಎಂಎಲ್‌ಸಿ ಗಣೇಶ್‌ ಕಾರ್ಣಿಕ್‌ ವಿರುದ್ಧ ಜಯಗಳಿಸಿದರೆ,…

Read More